ಮಂಡ್ಯ: ಮುಂಗಾರು ಮಳೆ ಬಳಿಕ ಕಾವೇರಿ ಜಲಾನಯನ ಪ್ರದೇಶದಲ್ಲಿ ಹಿಂಗಾರು ಮಳೆಯೂ ಚುರುಕುಗೊಂಡಿದೆ. ಈ ಹಿನ್ನೆಲೆ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನ (KRS Dam) ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.
ಸದ್ಯ ಕೆಆರ್‌ಎಸ್ ಡ್ಯಾಂನ ಒಳಹರಿವಿನ ಪ್ರಮಾಣ 20,797 ಕ್ಯೂಸೆಕ್ ಇದ್ದು, 25 ಸಾವಿರ ಕ್ಯೂಸೆಕ್‌ನ್ನು ಸದ್ಯ ನದಿಗೆ ಬಿಡಲಾಗುತ್ತಿದೆ. 124.80 ಗರಿಷ್ಟ ಮಟ್ಟದ ಕೆಆರ್‌ಎಸ್ ಸಂಪೂರ್ಣ ಭರ್ತಿಯಾಗಿದ್ದು, ಡ್ಯಾಂನಲ್ಲಿ ಗರಿಷ್ಠ ಸಾಮರ್ಥ್ಯವಾದ 49.452 ಟಿಎಂಸಿಯಷ್ಟು ನೀರು ಭರ್ತಿಯಾಗಿದೆ. ಇದನ್ನೂ ಓದಿ: ಏಷ್ಯಾಕಪ್ ವಿವಾದದ ಬೆನ್ನಲ್ಲೇ ನವೆಂಬರ್‌ನಲ್ಲಿ ಪಾಕ್ ವಿರುದ್ಧ ಆಡಲಿದೆ ಭಾರತ
ಮಂಡ್ಯ: ಕೆಆರ್‌ಎಸ್ ಜಲಾಶಯದಲ್ಲಿ (KRS Dam) ರೈತರ ವಿರೋಧದ ನಡುವೆಯೂ ಇಂದಿನಿಂದ 5 ದಿನಗಳ ಕಾಲ ನಡೆಯಲಿರುವ ಕಾವೇರಿ ಆರತಿಗೆ (Cauvery Aarti) ಚಾಲನೆ ಸಿಕ್ಕಿದೆ. ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಗಂಗಾರತಿ ಮಾದರಿಯಲ್ಲಿ ತರಬೇತಿ ಪಡೆದ ಸ್ಥಳೀಯ ಪುರೋಹಿತರು ಕಾವೇರಿ ಆರತಿ ನೆರವೇರಿಸಿದರು. ಬಣ್ಣಬಣ್ಣದ ವಿದ್ಯುತ್ ದೀಪಾಲಂಕಾರದಿಂದಲೂ ಕನ್ನಂಬಾಡಿ ಕಟ್ಟೆ ಮಿಂಚುತ್ತಿದ್ದು, ದಸರಾ ನೋಡಲು ಬರುವ ರಾಜ್ಯ, ಹೊರರಾಜ್ಯಗಳ ಜನರಿಗೆ ಕಾವೇರಿ ಆರತಿಯೂ ಈ ಬಾರಿ ಆಕರ್ಷಣೆಯಾಗಿದೆ. ಇದನ್ನೂ ಓದಿ: ಇಂದಿನಿಂದ 5 ದಿನ ಕಾವೇರಿ ಆರತಿ – ಮದುವಣಗಿತ್ತಿಯಂತೆ ಸಿಂಗಾರಗೊಂಡ ಕೆಆರ್‌ಎಸ್
ಕೆಆರ್‌ಎಸ್ ಬೃಂದಾವನಕ್ಕೆ ಬರುವ ಪ್ರವಾಸಿಗರಿಗೆ 5 ದಿನ ಉಚಿತ ಪ್ರವೇಶ ಇದ್ದು, ಟೋಲ್ ಕೂಡ ಇರುವುದಿಲ್ಲ.
ಬೆಂಗಳೂರು/ಮಂಡ್ಯ: ಸೆ.26ರಿಂದ ಕೆಆರ್‌ಎಸ್‌ನಲ್ಲಿ (KRS) ಕನ್ನಡ ನಾಡಿನ ಜೀವನದಿ “ಕಾವೇರಿ ಆರತಿ” ಎಂಬ ಐದು ದಿನಗಳ ಭವ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ (N. Chaluvaraya Swamy) ಮಾಹಿತಿ ನೀಡಿದ್ದಾರೆ.
ಮಾಧ್ಯಮ ಹೇಳಿಕೆ ನೀಡಿರುವ ಅವರು, ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ವೀರ ಸಿಂಹಾಸನ ಮಹಾ ಸಂಸ್ಥಾನ ಮಠಾಧ್ಯಕ್ಷರಾದ ಶ್ರೀ ಡಾ. ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ, ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದಿದ್ದಾರೆ.
ಈ ಬಾರಿಯ ದಸರಾದಲ್ಲಿ ಸಾಂಕೇತಿಕವಾಗಿ 5 ದಿನಗಳ ಕಾಲ ಕೆಆರ್‌ಎಸ್‌ನಲ್ಲಿ ಕಾವೇರಿ ತಾಯಿಗೆ ಆರತಿ ಮಾಡಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಮಳೆ, ಬೆಳೆ ಒಳ್ಳೆಯದಾಗಲಿ, ರಾಜ್ಯಕ್ಕೆ ಸನ್ಮಂಗಳವಾಗಲಿ ಎಂದು ತಾಯಿ ಕಾವೇರಿಯಲ್ಲಿ ಪೂಜೆ ಮಾಡಿ ಪ್ರಾರ್ಥಿಸಲಾಗುವುದು ಎಂದು ವಿವರಿಸಿದ್ದಾರೆ.
ಕಾವೇರಿ ಆರತಿಯ ವಿಧಿ ವಿಧಾನಗಳು:
* 13 ಜನರಿಂದ ಆರತಿ. ಅವರಿಗೆ ತಲಾ ಇಬ್ಬರು ಸಹಾಯಕರು ಸೇರಿ ಒಟ್ಟು 40 ಜನರ ತಂಡ ಪೂಜೆಯಲ್ಲಿ ಭಾಗಿ.
* ಮೊದಲು “ವಾತಾಪಿ ಗಣಪತಿಂ ಭಜೆ” ಮಂಗಳವಾದ್ಯದಿಂದ ಪೂಜೆ ಪ್ರಾರಂಭ.
* ಕಾವೇರಿ ಪ್ರಾರ್ಥನೆ, ಗಣಪತಿ ಪ್ರಾರ್ಥನೆ, ಗುರು ಪ್ರಾರ್ಥನೆ, ಸಂಕಲ್ಪ.
* ಕಾವೇರಿ ಸ್ತ್ರೋತ್ರದ ಮೂಲಕ ತೀರ್ಥಕ್ಕೆ ಪೂಜೆ, ಬಾಗಿನ ಅರ್ಪಣೆ.
* ಬ್ರಹ್ಮ, ವಿಷ್ಣು, ಮಹೇಶ್ವರರ ಪ್ರಾರ್ಥನೆ, ಚಾಮರ ಸೇವೆ.
* ಮೂರು ದಿಕ್ಕಿಗೂ ಶಂಖನಾದ, ದೂಪದ ಆರತಿ ಹಾಗೂ ಮಂತ್ರ ಪುಷ್ಪ ಪಠಣ
* ಕೊನೆಯಲ್ಲಿ ಕುಂಭಾರತಿ, ನಾಗಾರತಿ, ಕಾವೇರಿ ಆರತಿಯೊಂದಿಗೆ ಪೂಜಾ ಕೈಂಕರ್ಯ ಸಂಪನ್ನ.ಇದನ್ನೂ ಓದಿ: ಅಕ್ರಮ ಬೆಟ್ಟಿಂಗ್ ಆ್ಯಪ್ ಕೇಸ್ – ಇಡಿ ವಿಚಾರಣೆಗೆ ಹಾಜರಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ (Cauvery River’s Catchment Area) ಭಾರೀ ಮಳೆ ಬೀಳುತ್ತಿರುವ ಕಾರಣ ಕೃಷ್ಣರಾಜಸಾಗರ ಜಲಾಶಯದಿಂದ (KRS Dam) 91 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಭಾರೀ ಪ್ರಮಾಣದಲ್ಲಿ ನೀರು ಹೊರ ಬಿಡುತ್ತಿರುವ ಕಾರಣ ಜಲಾಶಯದ ಕೆಳ ಭಾಗದಲ್ಲಿರುವ ಜನರು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದ್ದು ಶ್ರೀರಂಗಪಟ್ಟಣದಲ್ಲಿರುವ 221 ವರ್ಷ ಹಳೆಯದಾದ ಬ್ರಿಟಿಷರ ಕಾಲದ ವೆಲ್ಲೆಸ್ಲಿ ಸೇತುವೆ (Wellesley Bridge) ಯಾವುದೇ ಕ್ಷಣದಲ್ಲಿ ಮುಳುಗಡೆಯಾಗುವ ಸಾಧ್ಯತೆಯಿದೆ.
ಸದ್ಯ ಭಾರೀ ಪ್ರಮಾಣ ನೀರು ಬಿಟ್ಟಿರುವ ಕಾರಣ ಸೇತುವೆ ಮೇಲೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಈ ಹಿಂದೆ ಈ ಸೇತುವೆ ಮೈಸೂರು- ಬೆಂಗಳೂರು ರಸ್ತೆಗೆ ಸಂಪರ್ಕ ಕಲ್ಪಿಸುತ್ತಿತ್ತು.
ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು Cubic feet per Secondನ ಹ್ರಸ್ವರೂಪ ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ವರುಣನ ಆರ್ಭಟ ಮುಂದಿವರಿದಿರುವ ಹಿನ್ನೆಲೆ ಹಳೇ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಡ್ಯಾಂನ (KRS Dam) ಒಳಹರಿವು ಏರಿಕೆ ಕಂಡಿದೆ.
ಹಲವು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ (Cauvery Basin) ಮಳೆಯ ಪ್ರಮಾಣ ಕಡಿಮೆ ಇದ್ದ ಪರಿಣಾಮ ಹೆಚ್ಚು ನೀರು ಬರುತ್ತಿರಲಿಲ್ಲ. ನಿನ್ನೆಯಿಂದ ಮಳೆಯ ಪ್ರಮಾಣ ಹೆಚ್ಚಿರುವ ಹಿನ್ನೆಲೆ 33,052 ಕ್ಯೂಸೆಕ್‌ಗೂ ಅಧಿಕ ನೀರು ಒಳಹರಿವು ಬರುತ್ತಿದೆ. ಜೂನ್ ಅಂತ್ಯದಲ್ಲಿಯೇ ಕೆಆರ್‌ಎಸ್ ಜಲಾಶಯ ಭರ್ತಿಯಾಗಿರುವ ಹಿನ್ನೆಲೆ ಡ್ಯಾಂನಿಂದ ಬೆಳಗ್ಗೆ 10 ವರೆಗೆ 31,550 ಕ್ಯೂಸೆಕ್ ನೀರನ್ನ ನದಿಗೆ ಹರಿಸಲಾಗುತ್ತಿತ್ತು. 10 ಗಂಟೆಯ ನಂತರ 80,000 ಕ್ಯೂಸೆಕ್ ನೀರನ್ನ ನದಿಗೆ ಹರಿಸಲಾಗುತ್ತಿದೆ.
ಕೆಆರ್ಎಸ್ ಡ್ಯಾಂನಿಂದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆ ಡ್ಯಾಂ ಮುಂಭಾಗ ಹಾಲ್ನೊರೆಯಂತೆ ಕಾವೇರಿ ನದಿಯ ಸೌಂದರ್ಯ ಕಂಗೊಳಿಸುತ್ತಿದೆ. ಸದ್ಯ 124.80 ಅಡಿಗಳ ಗರಿಷ್ಠ ಮಟ್ಟದ ಕೆಆರ್‌ಎಸ್ ಡ್ಯಾಂ 124.54 ಅಡಿಗಳಷ್ಟು ಭರ್ತಿಯಾಗಿದ್ರೆ, 49.452 ಟಿಎಂಸಿ ಗರಿಷ್ಠ ಸಾಮರ್ಥ್ಯವಿರುವ ಡ್ಯಾಂನಲ್ಲಿ 49.089 ಟಿಎಂಸಿಯಷ್ಟು ನೀರು ಭರ್ತಿಯಾಗಿದೆ. ಇದನ್ನೂ ಓದಿ: ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಮುಕ್ತಿ – 700 ಮೀಟರ್ ಉದ್ದದ ಹೆಬ್ಬಾಳ ಮೇಲ್ಸೇತುವೆ ಇಂದು ಉದ್ಘಾಟನೆ
ಬೆಂಗಳೂರು: ಕನ್ನಂಬಾಡಿ ಅಣೆಕಟ್ಟೆಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ (Tippu Sultan) ಎಂದಿದ್ದ ಸಚಿವ ಮಹದೇವಪ್ಪ (HC Mahadevappa) ವ್ಯಾಪಕ ಟೀಕೆ ಬಳಿಕ ಯೂಟರ್ನ್ ಹೊಡೆದಿದ್ದಾರೆ. ಕೆಆರ್‌ಎಸ್ ಡ್ಯಾಂ (KRS Dam) ಕಟ್ಟಿದ್ದು ಟಿಪ್ಪು ಅಂತ ನಾನು ಹೇಳಿಲ್ಲ, ಹೇಳೋದಕ್ಕೂ ಬರೋದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
1911ರಲ್ಲಿ ಕೆಆರ್‌ಎಸ್ ಕಟ್ಟೋದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅಡಿಗಲ್ಲು ಹಾಕಿದರು. ಅವರು ಡ್ಯಾಂ ಕಟ್ಟಲು ಪ್ರಾರಂಭಿಸಿದಾಗ ಅಲ್ಲೊಂದು ಶಿಲಾ ಶಾಸನ ಸಿಕ್ಕಿದೆ. 1794ರಲ್ಲಿ ಟಿಪ್ಪು ಕಾಲದಲ್ಲಿ ಬರೆದ ಪರ್ಷಿಯನ್ ಭಾಷೆಯ ಶಿಲಾ ಶಾಸನ. ಅದರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಬೇಕು ಎಂಬ ಪ್ರಸ್ತಾಪ ಇದೆ. ಅದನ್ನೂ ಕೂಡ ಕೆಆರ್‌ಎಸ್‌ನಲ್ಲಿಯೇ ಇಡಲಾಗಿದೆ. ನಾನು ಎಲ್ಲಿಯೂ ಕೂಡ ಟಿಪ್ಪು ಡ್ಯಾಂ ಕಟ್ಟಿದ್ದ ಅಂತ ಹೇಳಿಯೇ ಇಲ್ಲ ಎಂದರು. ಇದನ್ನೂ ಓದಿ: ಮಚ್ಚಿನಿಂದ ಕೊಲೆಗೈದ ಕೇಸ್‌ಗೆ ಟ್ವಿಸ್ಟ್ – ಪ್ರಿಯತಮೆಗಾಗಿ ಮಾಜಿ ಲವ್ವರ್‌ನನ್ನೇ ಕೊಂದ ಪ್ರಿಯಕರ
ಟಿಪ್ಪು ಕಟ್ಟಿದ್ದು ಅಲ್ಲವೇ ಅಲ್ಲ, ಆದರೆ ಟಿಪ್ಪುಗೂ ಕೂಡ ಅದೇ ಥರದ ಕನಸು ಇತ್ತು ಎಂಬುದಷ್ಟೇ ಹೇಳಿದ್ದು. ಇದರ ನೈಜತೆಯ ಬಗ್ಗೆ ಇತಿಹಾಸಕಾರರು ಹೇಳಬೇಕು. ಕೆಆರ್‌ಎಸ್ ಡ್ಯಾಂ ಕಟ್ಟಿದ್ದು ನಮ್ಮ ಇಂಜಿನಿಯರ್‌ಗಳು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ಡ್ಯಾಂನ ಎಸ್ಟಿಮೇಟ್ ಹಾಕಿ ಎಷ್ಟು ಜಮೀನು ಬೇಕು ಎಂದು ತೀರ್ಮಾನಿಸಿ ಕಟ್ಟಿದ್ದು. ಆದರೆ ನಾನು ಅಲ್ಲಿ ಇಟ್ಟಿರುವ ಶಿಲಾ ಶಾಸನದ ಬಗ್ಗೆ ಮಾತ್ರ ಹೇಳಿದ್ದೇನೆ. ಬಿಜೆಪಿಯವರು ಏನು ಬೇಕಾದರೂ ಟೀಕೆ ಮಾಡಿಕೊಳ್ಳಲಿ. ನಾನು ಅನಗತ್ಯ ಗೊಂದಲ ಇರಬಾರದು ಎಂದು ಮಾತ್ರ ಹೇಳಿದ್ದೇನೆ. ಯಾರನ್ನೋ ಓಲೈಸಲು ಸಮಾಧಾನಪಡಿಸಲು ಹೇಳಿಲ್ಲ ಎಂದು ಬಿಜೆಪಿಗರು, ರಾಜವಂಶಸ್ಥ ಯದುವೀರ್‌ಗೆ ಮಹದೇವಪ್ಪ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ದಾಳಿ ಮಾಡಿದ್ದು ಪಾಕಿಸ್ತಾನ ಉಗ್ರರು: ಭದ್ರತಾ ಸಂಸ್ಥೆ ಸ್ಪಷ್ಟನೆ
– ತುಷ್ಟೀಕರಣ-ಓಲೈಕೆ ರಾಜಕಾರಣ ನಿರತ ಕಾಂಗ್ರೆಸ್ ಎಂದು ಆಕ್ರೋಶ
ನವದೆಹಲಿ: ದೇಶ ಮತ್ತು ಕರುನಾಡಿಗೆ ಮೈಸೂರು (Mysuru) ಮಹಾಸಂಸ್ಥಾನದ ಕೊಡುಗೆ ಅನನ್ಯವಾಗಿದೆ. ಆದರೆ, ರಾಜ್ಯ ಕಾಂಗ್ರೆಸ್ ನಾಯಕರು ಅದನ್ನು ಮರೆತು ತುಷ್ಟೀಕರಣ ಮತ್ತು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ (Prahlad Joshi) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಪುತ್ರ ಯತೀಂದ್ರ ಮತ್ತು ಸಚಿವ ಹೆಚ್‌ಸಿ ಮಹದೇವಪ್ಪ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಸಚಿವರು, ತುಷ್ಟೀಕರಣ ಹಾಗೂ ಓಲೈಕೆ ರಾಜಕಾರಣದಲ್ಲಿ ಮುಳುಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ದೇಶದ ಹೆಮ್ಮೆ ಮೈಸೂರು ಮಹಾಸಂಸ್ಥಾನದ ಕೊಡುಗೆಗಳ ಬಗ್ಗೆ ವಿರೋಧಾಭಾಸವಾಗಿ ಮಾತನಾಡುತ್ತಿರುವುದು ನಿಜಕ್ಕೂ ಅಸಹ್ಯದ ಪರಮಾವಧಿ. ಇತ್ತೀಚಿಗಷ್ಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತ್ರೀಂದ್ರ `ಮೈಸೂರು ಸಂಸ್ಥಾನಕ್ಕಿಂತಲೂ ಹೆಚ್ಚಿನ ಕೆಲಸವನ್ನು ನಮ್ಮಪ್ಪ ಮಾಡಿದ್ದಾರೆ’ ಎಂದರು. ನಿನ್ನೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ `ಕೆಆರ್‌ಎಸ್ ಡ್ಯಾಂ ಕಟ್ಟಲು ಬುನಾದಿ ಹಾಕಿದ್ದು ಟಿಪ್ಪು ಸುಲ್ತಾನ್’ ಎಂಬ ಹೇಳಿಕೆ ನೀಡಿರುವುದು ನಿಜಕ್ಕೂ ಕನ್ನಡ ನಾಡಿನ ದುರಂತ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ದಾಳಿ ಮಾಡಿದ್ದು ಪಾಕಿಸ್ತಾನ ಉಗ್ರರು: ಭದ್ರತಾ ಸಂಸ್ಥೆ ಸ್ಪಷ್ಟನೆ
ಸಚಿವ ಮಹಾದೇವಪ್ಪ ಅವರು ಮೊದಲು ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಲಿ. ಟಿಪ್ಪು ಸುಲ್ತಾನ್ ಯುಗಾಂತ್ಯವಾಗಿದ್ದು 1799. ಆದರೆ, ರಾಜ್ಯದ ಸುಭಿಕ್ಷೆಗಾಗಿ ನೀರಾವರಿ, ಕುಡಿಯುವ ನೀರು ಮತ್ತು ಜಲ ವಿದ್ಯುತ್ ಶಕ್ತಿಗಾಗಿ ಕಾವೇರಿ ನದಿಗೆ ಅಡ್ಡಲಾಗಿ ಕೆಆರ್‌ಎಸ್ ಅಣೆಕಟ್ಟು ನಿರ್ಮಿಸಿದ್ದು 1911ರಲ್ಲಿ. ಆಗಿನ ಮೈಸೂರು ರಾಜ ಶ್ರೀ ಕೃಷ್ಣರಾಜ ಒಡೆಯರ್ ಬಹದ್ದೂರ್ ಆಳ್ವಿಕೆಯಲ್ಲಿ ಇದಕ್ಕೆ ಅಡಿಪಾಯ ಹಾಕಲಾಯಿತು. ವಿಶ್ವಪ್ರಸಿದ್ಧ ಸಿವಿಲ್ ಎಂಜಿನಿಯರ್ ಮತ್ತು ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರು ಈ ಅಣೆಕಟ್ಟು ನಿರ್ಮಿಸಿದರು ಎಂದು ತಿರುಗೇಟು ನೀಡಿದ್ದಾರೆ.
ಇಂದಿಗೂ ಮೈಸೂರು ಮಹಾರಾಜರ ಮಹತ್ಕಾರ್ಯ ನೆನೆದು, ಪೂಜೆ ಸಲ್ಲಿಸುವ ಮೂಲಕ ಜನ ದೈನಂದಿನ ಜೀವನ ಆರಂಭಿಸುತ್ತಿದ್ದಾರೆ. ಆದರೆ, ಇತಿಹಾಸದ ಕುರಿತು ಮನಸೋ ಇಚ್ಛೆ ಮಾತನಾಡುವ ಕಾಂಗ್ರೆಸ್ಸಿಗರ ಈ ಕುತಂತ್ರದ ಬುದ್ಧಿಗೆ ಏನು ಹೇಳಬೇಕು? ಮೈಸೂರು ಒಡೆಯರ ತ್ಯಾಗ, ಕರುನಾಡಿನ ಅಭಿವೃದ್ಧಿಗೆ ಕೊಡುಗೆಯನ್ನು ಕೊಂಡಾಡದೆ ಕಾಂಗ್ರೆಸ್ ಪಕ್ಷ ಎಲ್ಲಕ್ಕಿಂತ ತಾನೇ ಹೆಚ್ಚೆಂದು ಬೀಗುವಂತೆ ಹೇಳಿಕೆ ನೀಡುತ್ತಿರುವುದು ಅವರ ಹತಾಶೆಯನ್ನು ತೋರ್ಪಡಿಸುತ್ತದೆ ಎಂದು ಚಾಟಿ ಬೀಸಿದ್ದಾರೆ.
ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮರೆತು, ಬರೀ ತುಷ್ಟೀಕರಣ ರಾಜಕಾರಣದಲ್ಲಿ ಮುಳುಗಿದೆ. ರಾಜ್ಯದ ಸಂಪತ್ತನ್ನು ಬರಿದು ಮಾಡುತ್ತ ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ನೂಕಿದೆ. ಅದೂ ಸಾಲದೆಂಬಂತೆ ಕರುನಾಡಿನ ರಾಜ, ಮಹಾರಾಜರ ಬಗ್ಗೆ ಅಪಸ್ವರ ಎತ್ತಿ ಮಾತನಾಡುತ್ತಿರುವುದು ನಾಡಿನ ದುರಂತವಾಗಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.ಇದನ್ನೂ ಓದಿ: ಮಚ್ಚಿನಿಂದ ಕೊಲೆಗೈದ ಕೇಸ್‌ಗೆ ಟ್ವಿಸ್ಟ್ – ಪ್ರಿಯತಮೆಗಾಗಿ ಮಾಜಿ ಲವ್ವರ್‌ನನ್ನೇ ಕೊಂದ ಪ್ರಿಯಕರ
ಮಂಡ್ಯ: ಕೆಆರ್‌ಎಸ್ ಡ್ಯಾಂಗೆ (KRS Dam) ರಾಜ್ಯ ಕಾಂಗ್ರೆಸ್ ಸರ್ಕಾರ ಟಿಪ್ಪು ಸುಲ್ತಾನ್ ಸಾಗರ ಎಂದು ಮರುನಾಮಕರಣ ಮಾಡಲು ಹುನ್ನಾರ ನಡೆಸುತ್ತಿದೆ ಎಂದು ವಿರೋಧ ಪಕ್ಷ ನಾಯಕ ಆರ್.ಅಶೋಕ್ (R Ashok) ಕಿಡಿಕಾರಿದ್ದಾರೆ.
ಮಂಡ್ಯದಲ್ಲಿ (Mandya) ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಮೈಸೂರು ರಾಜ ಮನೆತನಕ್ಕೆ ಕಳಂಕ ತರುವಂತಹ ಹೇಳಿಕೆಗಳನ್ನು ನೀಡುತ್ತಿದ್ದು, ಈಗ ಕೆಆರ್‌ಎಸ್ ಇತಿಹಾಸಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ರಾಯರ 354ನೇ ಆರಾಧನಾ ಮಹೋತ್ಸವ ಆಗಸ್ಟ್ 8ರಿಂದ ಆರಂಭ: ಮಂತ್ರಾಲಯ ಶ್ರೀ
ಪದೇ ಪದೇ ಟಿಪ್ಪು ಸುಲ್ತಾನರ (Tippu Sultan) ಹೆಸರು ತಂದು ಕಳಂಕಿತ ಹೇಳಿಕೆಗಳನ್ನು ನೀಡುತ್ತಿದ್ದು, ಇದೇ ಹಾದಿಯಲ್ಲಿ ನಡೆದಿರುವ ಸಚಿವ ಹೆಚ್.ಸಿ.ಮಹದೇವಪ್ಪ ಅವರು ಯಾವುದೋ ಇದುವರೆಗೂ ಕಾಣದ ಶಿಲಾನ್ಯಾಸವನ್ನು ಇಟ್ಟುಕೊಂಡು ಕೆಆರ್‌ಎಸ್‌ನ ಹೆಸರು ಬದಲಿಸಲು ಪೀಠಿಕೆ ಹಾಕಿದ್ದಾರೆ. ಕೆಆರ್‌ಎಸ್ ಹೆಸರು ಬದಲಿಸಲು ಯಾರದೋ ಕೈವಾಡವಿದ್ದು, ಹುನ್ನಾರವೆಸಗುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮತಗಳ್ಳತನದ ಬಗ್ಗೆ ದಾಖಲಾತಿ ಇವೆ, ರಾಹುಲ್ ಗಾಂಧಿ ಬಿಡುಗಡೆ ಮಾಡ್ತಾರೆ – ಪ್ರಿಯಾಂಕ್ ಖರ್ಗೆ
ಟಿಪ್ಪು ಸುಲ್ತಾನ್ ಕಾಂಗ್ರೆಸ್ ಪಕ್ಷ ಎಂದು ಹೆಸರಿಡಲಿ:
ಟಿಪ್ಪು ಎಂದರೆ ಸಿಎಂ ಸಿದ್ದರಾಮಯ್ಯಗೆ (Siddaramaiah) ಹೆಚ್ಚು ಪ್ರೀತಿ, ಟಿಪ್ಪುವಿನ ಮೇಲೆ ಅಷ್ಟು ಪ್ರೀತಿಯಿದ್ದರೆ, ತಮ್ಮ ಪಕ್ಷಕ್ಕೆ ಟಿಪ್ಪು ಸುಲ್ತಾನ್ ಕಾಂಗ್ರೆಸ್ ಪಕ್ಷ ಎಂದು ಹೆಸರಿಡಲಿ. ಟಿಪ್ಪು ಓರ್ವ ನಾಡದ್ರೋಹಿ, ಲಕ್ಷಾಂತರ ಹಿಂದುಗಳ ಹತ್ಯೆಗೈದ ಟಿಪ್ಪು, ಪರ್ಷಿಯಾ ದೇಶದವನಾಗಿದ್ದು, ಟಿಪ್ಪು ಸತ್ತ 112 ವರ್ಷಗಳ ನಂತರ 1911ರಲ್ಲಿ ಕೆಆರ್‌ಎಸ್ ಅಣೆಕಟ್ಟು ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಶಿಲಾನ್ಯಾಸ ಹೇಗೆ ಬಂತೆAದು ಪ್ರಶ್ನಿಸಿದ್ದಾರೆ.
ಟಿಪ್ಪು ಮರಣಕ್ಕೂ ಮುನ್ನವೇ ಶಿಲಾನ್ಯಾಸ ಮಾಡಲಾಗಿತ್ತು ಎಂದಾದರೆ, 1799ರ ಮೊದಲು ಹಳೆಗನ್ನಡ ಬಳಸಲಾಗುತ್ತಿತ್ತು. ಶಿಲಾನ್ಯಾಸದಲ್ಲಿ ಬಳಸಲಾದ ಕನ್ನಡ ಹಳೆಗನ್ನಡವಲ್ಲ. ಇಷ್ಟು ವರ್ಷಗಳು ಆ ಶಿಲಾನ್ಯಾಸವನ್ನು ಇಟ್ಟುಕೊಂಡಿದ್ದ ಮುಸ್ಲಿಂ ಯಾರು? ಯಾವ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿತ್ತು ಎಂಬುದು ಬಹಿರಂಗವಾಗಬೇಕಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 1 ದಿನ ಸಾರಿಗೆ ಮುಷ್ಕರ ಮುಂದೂಡಿ: ಹೈಕೋರ್ಟ್ ಸೂಚನೆ
1911ರಲ್ಲಿ ನಾಲ್ವಡಿ ಅವರಿಗೆ ಅಣೆಕಟ್ಟು ಕಟ್ಟಲು 80 ಅಡಿಗಳಿಗೆ ಅನುಮತಿ ದೊರೆತಿತ್ತು. ಆದರೂ 124 ಅಡಿಗಳಿಗೆ ನಾಲ್ವಡಿಯವರು ಅಣೆಕಟ್ಟು ಕಟ್ಟಿದ್ದರು. ಅಣೆಕಟ್ಟು ಕಟ್ಟುವ ಆರಂಭಕ್ಕೆ 2.34 ಕೋಟಿ ರೂ. ಹಣ ವ್ಯಯಿಸಲಾಗಿತ್ತು. ಪೂರ್ಣಗೊಳಿಸಲು ಅರಮನೆಯ ಹಾಗೂ ಮಹಾರಾಣಿಯರ ಒಡವೆಗಳನ್ನು ಮುಂಬೈನಲ್ಲಿ ಮಾರಿ ಅಣೆಕಟ್ಟು ಪೂರ್ಣಗೊಳಿಸಿದ್ದನ್ನು ಹಳೆ ಮೈಸೂರು ಭಾಗದ ಜನತೆ ಮರೆತಿಲ್ಲ ಎಂದು ತಿಳಿಸಿದ್ದಾರೆ.
ಪ್ರಾರಂಭದಿಂದ ಇಲ್ಲಿಯವರೆಗೂ ದಾಖಲೆಗಳಿವೆ. ಈ ಟಿಪ್ಪು ಶಿಲಾನ್ಯಾಸಕ್ಕೆ ಇರುವ ದಾಖಲೆಯಾದರೂ ಏನು? ಉತ್ತರ ಕರ್ನಾಟಕದ ಭಾಗದಲ್ಲಿ ನಿಜಾಮರ ಆಳ್ವಿಕೆಯಿತ್ತು. ಅಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಹಳೆ ಮೈಸೂರು ಭಾಗದಲ್ಲಿ ಅಭಿವೃದ್ಧಿ ಕಾಣುವಂತಾಗಲು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣ. ರಾಜ್ಯದ ಜನತೆಯ ಮನಸ್ಸಿನಲ್ಲಿ ಉಳಿಯುವಂತಹ ಕೆಲಸ ಮಾಡಿದ್ದಾರೆ. ಆದರೆ ಕಾಂಗ್ರೆಸ್‌ನಿಂದ ಪದೇ ಪದೇ ಕೃಷ್ಣರಾಜ ಒಡೆಯರ್ ಹೆಸರಿಗೆ ಅಪಮಾನ ಮಾಡುವ ಕೆಲಸವಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸಹಮತದಿಂದ ಒಳಮೀಸಲಾತಿ ಹಂಚಿಕೆ – ಪರಮೇಶ್ವರ್ ಹೇಳಿಕೆಗೆ ಗೋವಿಂದ ಕಾರಜೋಳ ಆಕ್ರೋಶ
ಕೆಆರ್‌ಎಸ್‌ನ ಹೆಸರು ಬದಲಿಸಲು ಮುಂದಾಗಿರುವ ಮಹದೇವಪ್ಪ, ಬೆಂಗಳೂರಿಗೆ ಬಂದು ಟಿಪ್ಪು ಶಿಲಾನ್ಯಾಸಗಳನ್ನು ಹುಡುಕಿ, ನಾಡಪ್ರಭು ಕೆಂಪೇಗೌಡರ ಹೆಸರನ್ನು ಬದಲಿಸಿ. ನಾಡಪ್ರಭು ಟಿಪ್ಪು ಸುಲ್ತಾನ ಎಂದು ಹೇಳುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಚುನಾವಣೆ; ನವೆಂಬರ್ 3ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ
ಆರ್.ಅಶೋಕ್ ಒಂದು ಸಮುದಾಯದ ಮತಕ್ಕಾಗಿ ಎಷ್ಟು ಓಲೈಕೆ ಮಾಡುತ್ತೀರಿ? ಸಿದ್ದರಾಮಯ್ಯ ಅವರ ಸುಪುತ್ರ ಸಿದ್ದರಾಮಯ್ಯರನ್ನು ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಹೋಲಿಕೆ ಮಾಡಿದ್ದಾರೆ. ಕೆಆರ್‌ಎಸ್ ಅಣೆಕಟ್ಟನ್ನು ಕಟ್ಟಿದ ಒಡೆಯರು ಯಾರ ಮೇಲು ಸಾಲದ ಹೊರೆ ಹಾಕಲಿಲ್ಲ. ಆದರೆ ಸಿದ್ದರಾಮಯ್ಯ ಕಳೆದ 2 ವರ್ಷಗಳಲ್ಲಿ 2 ಲಕ್ಷ ಕೋಟಿ ರೂ. ಸಾಲದ ಹೊರೆ ಹಾಕಿದ್ದಾರೆ. 14 ನಿವೇಶನಗಳನ್ನು ಕಬಳಿಸಿದ್ದಾರೆ. ಅವರನ್ನು ಒಡೆಯರಿಗೆ ಹೋಲಿಸುವುದ ಅಕ್ಷಮ್ಯ ಎಂದಿದ್ದಾರೆ.
ಸಿದ್ದರಾಮಯ್ಯ ಅವರನ್ನು ಹೋಲಿಕೆ ಮಾಡುವುದೇ ಆದರೆ ನೆಹರು, ಇಂದಿರಾ ಗಾಂಧಿ, ಹಾಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಗೆ ಹೋಲಿಕೆ ಮಾಡಿಕೊಳ್ಳಲಿ ಎಂದು ತಾಕೀತು ಮಾಡಿದ್ದಾರೆ.
ರಾಯಚೂರು: ಕಾವೇರಿ ಪ್ರಾಂತ್ಯದ ಜನರಿಗೆ ನೀರಿನ ವ್ಯವಸ್ಥೆ ಮಾಡಬೇಕು ಎನ್ನುವ ಉದ್ದೇಶದಿಂದ ಮೈಸೂರು (Mysuru) ಸಂಸ್ಥಾನದ ಆಗಿನ ರಾಜಮಾತೆ ತಮ್ಮ ಆಭರಣಗಳನ್ನ ಮಾರಾಟ ಮಾಡಿ ಕೆಆರ್‌ಎಸ್ ಜಲಾಶಯವನ್ನು (KRS Dam) ಕಟ್ಟಿಸಿದ್ದಾರೆ ಎಂದು ಗುರುರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ (Shri Subhudendra Theertha) ತಿಳಿಸಿದ್ದಾರೆ.
ಮಂತ್ರಾಲಯದಲ್ಲಿ ಮಾತನಾಡಿದ ಶ್ರೀಗಳು ಕೆಆರ್‌ಎಸ್ ಡ್ಯಾಂಗೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದು ಎನ್ನುವ ಸಚಿವ ಮಹಾದೇವಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ರಾಜಮನೆತನದ ತ್ಯಾಗದ ಫಲವಾಗಿ ಕೆಆರ್‌ಎಸ್ ಡ್ಯಾಂ ನಿರ್ಮಾಣವಾಗಿದೆ. ಇನ್ನೂ ಬೇರೆ ಬೇರೆ ವಿಚಾರ ಬಂದರೆ, ಬೇರೆಯವರ ಹೆಸರುಗಳು ಬಂದರೆ ಅದರ ಬಗ್ಗೆ ಇತಿಹಾಸ ತಜ್ಞರೇ ಹೇಳಬೇಕು ಹೊರತು ನಾವು ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.ಇದನ್ನೂ ಓದಿ: ಬಿಬಿಎಂಪಿ ಚುನಾವಣೆ; ನವೆಂಬರ್ 3ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ
ಇದೇ ವೇಳೆ ಧರ್ಮಸ್ಥಳದ ಪ್ರಸ್ತುತ ವಿಚಾರಗಳ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ಧಾರ್ಮಿಕ ಸ್ಥಳ, ಕ್ಷೇತ್ರಗಳಲ್ಲಿ ಸಣ್ಣಪುಟ್ಟ ಲೋಪದೋಷಗಳಾದರೆ ಕ್ಷೇತ್ರದ ಪಾವಿತ್ರ್ಯತೆ ಹಾಗೂ ಕ್ಷೇತ್ರದ ಮಹತ್ವಕ್ಕೆ ಜೋಡಣೆ ಮಾಡಬಾರದು. ಅಲ್ಲಿನ ವ್ಯವಸ್ಥೆ, ಕಾನೂನು ವ್ಯವಸ್ಥೆ ಬಗ್ಗೆ ಮಾತನಾಡಬೇಕು. ಕ್ಷೇತ್ರ ಅತ್ಯಂತ ಪವಿತ್ರವಾದದ್ದು, ನಮ್ಮೆಲ್ಲರಿಗೂ ಅತ್ಯಂತ ಭಕ್ತಿ, ಶ್ರದ್ಧೆಯ ಕೇಂದ್ರವಾಗಿದೆ. ಅಲ್ಲಿ ಯಾವುದೇ ಪ್ರಕರಣ,ವಿಚಾರಗಳು ಇದ್ದರೂ ಕೂಡ ಕಾನೂನು ವಿಚಾರಣೆ ನಡೆಸುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಮಂತ್ರಾಲಯ ಭಕ್ತರಿಗೆ ತೊಂದರೆ ವಿಚಾರ ಕುರಿತು ಮಾತನಾಡಿ, ಸಾರಿಗೆ ಇಲಾಖೆಯವರು ತಮ್ಮ ಬೇಡಿಕೆ ಈಡೇರಿಕೆಗಾಗಿ ಹಲವಾರು ಬಾರಿ ಅಹವಾಲು ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಅವರ ಅಹವಾಲನ್ನ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಸಾರಿಗೆ ನೌಕರರಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸುತ್ತದೆ ಎನ್ನುವ ಅನ್ನೋ ಧೃಡ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಸಚಿವ ಹೆಚ್.ಸಿ ಮಹದೇವಪ್ಪ (HC Mahadevappa) ಅವರು ಕನ್ನಂಬಾಡಿ ಕಟ್ಟೋದಕ್ಕೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದರು. ಆದರೆ, ಈಗ ಅದನ್ನು ಹೇಳೋಕೆ ಯಾರಿಗೂ ಧೈರ್ಯ ಇಲ್ಲ. ಕೆಆರ್‌ಎಸ್ ಗೇಟ್ ಹೆಬ್ಬಾಗಿಲಿನಲ್ಲಿ ಈಗಲೂ ಅದನ್ನು ಕಾಣಬಹುದು. ಚರಿತ್ರೆ ಗೊತ್ತಿಲ್ಲದವರು ಚರಿತ್ರೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಟಿಪ್ಪು ಮಸೀದಿ ಇದೆ, ಪಕ್ಕದಲ್ಲಿ ದೇವಸ್ಥಾನ ಇದೆ. ಈ ಕಡೆ ಅಲ್ಲಾವೋ ಅಕ್ಬರ್ ಅಂತಾರೆ, ಆ ಕಡೆ ಗಂಟೆ ಟಣ್, ಟಣ್ ಅನ್ನುತ್ತೆ. ಎರಡನ್ನು ಕೇಳ್ತಿದ್ರು ಅವರು. ಸಮಚಿತ್ತರಾಗಿದ್ದವರು ಟಿಪ್ಪು ಎಂದು ಬಣ್ಣಿಸಿದ್ದರು.ಇದನ್ನೂ ಓದಿ: ಆ.5ರಂದು ಸಾರಿಗೆ ನೌಕರರ ಮುಷ್ಕರ; 40% ಖಾಸಗಿ ಬಸ್ ರಸ್ತೆಗಿಳಿಸಲು ಸರ್ಕಾರ ನಿರ್ಧಾರ
– ಸಿಎಂಗೆ ಮಹಾರಾಜರ ಮೇಲೆ ರಕ್ತಗತ ದ್ವೇಷ – ಫೇಕ್ ನ್ಯೂಸ್ ಹರಡಿದ ಮಹದೇವಪ್ಪ ಮೇಲೆ ಕೇಸ್ ಹಾಕಿ
ಮೈಸೂರು: ದಸರಾ (Dasara) ಶುರು ಮಾಡಿದ್ದು ಟಿಪ್ಪು ಸುಲ್ತಾನ್ (Tipu Sultan) ಅಂತನೂ ಹೇಳಿ ಬಿಡಿ ಎಂದು ಸಚಿವ ಮಹದೇವಪ್ಪ (H.C Mahadevappa) ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಕೆಆರ್‌ಎಸ್ ಡ್ಯಾಂಗೆ (KRS Dam) ಅಡಿಗಲ್ಲು ಹಾಕಿದ್ದು ಟಿಪ್ಪು ಎಂಬ ಮಹದೇವಪ್ಪ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಜ್ಯೂನಿಯರ್ ಡಾಕ್ಟರ್ ಹೊಸ ಇತಿಹಾಸ ಬರೆಯಲು ಹೊರಟರೆ, ಸೀಯರ್ ಡಾಕ್ಟರ್ ಇತಿಹಾಸ ತಿರುಚಲು ಯತ್ನಿಸಿದ್ದಾರೆ ಎಂದು ಸಚಿವ ಡಾ.ಹೆಚ್.ಸಿ ಮಹದೇವಪ್ಪ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಜ್ಯೂನಿಯರ್ ಡಾಕ್ಟರ್ ಯತೀಂದ್ರ ನಾಲ್ವಡಿಗಿಂತ ನಮ್ಮಪ್ಪನೇ ದೊಡ್ಡ ವ್ಯಕ್ತಿ ಎಂದಿದ್ದರು. ಈಗ ಸೀನಿಯರ್ ಡಾಕ್ಟರ್ ಮಹದೇವಪ್ಪನ ಸರದಿ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್: ಸಚಿವ ಮಹದೇವಪ್ಪ
ಟಿಪ್ಪು ಸುಲ್ತಾನ್ ಕೆಆರ್‍ಎಸ್‍ಗೆ ಅಡಿಗಲ್ಲು ಇಟ್ಟಿದ್ದರೆ ಯಾರೋ ಮುಲ್ಲಾನ ಮೌಲ್ವಿನೋ ಡಿಪಿಆರ್ ಮಾಡಿರಬೇಕು ತಾನೇ? ಅವರು ಯಾರು ಅಂತ ಹೇಳಿ? ಟಿಪ್ಪು ಅಳ್ವಿಕೆ ಇದ್ದ ವೇಳೆ ವಿಶ್ವೇಶ್ವರಯ್ಯ ಅವರೇ ಹುಟ್ಟಿರಲಿಲ್ಲ. ನಾಲ್ವಡಿ ಒಡೆಯರ್, ವಿಶ್ವೇಶ್ವರಯ್ಯ ಇರದಿದ್ದರೆ ಕೆಆರ್‍ಎಸ್ ಜಲಾಶಯವೇ ನಿರ್ಮಾಣ ಆಗುತ್ತಿರಲಿಲ್ಲ. 1799ರಲ್ಲಿ ಟಿಪ್ಪು ಸತ್ತು ಹೋದ. 1911ರಲ್ಲಿ ಕೆಆರ್‍ಎಸ್ ಕಟ್ಟಲು ಶುರು ಮಾಡಿದರು. ಎಲ್ಲಿಂದ ಎಲ್ಲಿಗೆ ಲಿಂಕ್ ಇದೆ ಮಹದೇವಪ್ಪ ಅವರೇ? ಎಂದು ಪ್ರಶ್ನಿಸಿದ್ದಾರೆ.
ನಾಲ್ವಡಿ ಬಗ್ಗೆ ಯಾಕೆ ನಿಮಗೆಲ್ಲಾ ಇಷ್ಟು ಕೋಪ? ಯತೀಂದ್ರ ಅವರು ಕಳೆದ ವಾರ ಅವಹೇಳನ ಮಾಡಿದರು. ಈಗ ನೀವು ಮುಂದುವರಿಸಿದ್ದೀರಿ. ಟಿಪ್ಪು ಸುಲ್ತಾನ್ ದಸರಾ ಶುರು ಮಾಡಿದ ಅಂತನೂ ಹೇಳಿ ಬಿಡಿ. ಫೇಕ್ ನ್ಯೂಸ್ ಹರಡಿದವರ ಮೇಲೆ ಕೇಸ್ ಹಾಕೋಕೆ ಕಾಯ್ದೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಮೊದಲು ಈ ಕಾಯ್ದೆ ತರಲಿ. ಮೊದಲ ಕೇಸ್ ಮಹದೇವಪ್ಪ, ಪ್ರಿಯಾಂಕ ಖರ್ಗೆ, ಸಂತೋಷ್ ಲಾಡ್, ಯತೀಂದ್ರ ಮೇಲೆಯೆ ಹಾಕಿಸಿ. ಮಹಾರಾಜರ ಬಗ್ಗೆ ಸಿದ್ದರಾಮಯ್ಯಗೆ ರಕ್ತಗತವಾಗಿ ದ್ವೇಷ ಬಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದ, ಅದಕ್ಕೆ ತಕರಾರು ಇಲ್ಲ. ಟಿಪ್ಪು ಹೇಗೆ ಸ್ವಾತಂತ್ರ್ಯ ಹೋರಾಟಗಾರ? ಸ್ವಾತಂತ್ರ್ಯ ಹೋರಾಟಕ್ಕೆ ಟೈಂ ಲೈನ್ ಇಲ್ವಾ? ಟಿಪ್ಪು ಅಳ್ವಿಕೆ ವೇಳೆ ಸ್ವಾತಂತ್ರ್ಯ ಹೋರಾಟ ಎನ್ನುವ ಕಲ್ಪನೆ ಇರಲಿಲ್ಲ. ತಮ್ಮ ಸಂಸ್ಥಾನ ಉಳಿವಿಗೆ ಹಲವರು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದರು. ಒಂದು ಸಮುದಾಯದ ಮತಕ್ಕಾಗಿ ಇತಿಹಾಸ ತಿರುಚುವುದು ಶೋಭೆ ತರಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂಗೆ ಟಿಪ್ಪು ಅಡಿಗಲ್ಲು ಹಾಕಿಲ್ಲ ಅಂತಾರೆ ತಜ್ಞರು; ನಾಮಫಲಕದಲ್ಲಿ ಏನಿದೆ?