Tag: Kriti Shetty

  • ‘ಪೊನ್ನಿಯಿನ್ ಸೆಲ್ವನ್’ ಸ್ಟಾರ್ ಜಯಂರವಿ ಹೊಸ ಚಿತ್ರಕ್ಕೆ ಕೃತಿ ಶೆಟ್ಟಿ, ಕಲ್ಯಾಣಿ ಸಾಥ್

    ‘ಪೊನ್ನಿಯಿನ್ ಸೆಲ್ವನ್’ ಸ್ಟಾರ್ ಜಯಂರವಿ ಹೊಸ ಚಿತ್ರಕ್ಕೆ ಕೃತಿ ಶೆಟ್ಟಿ, ಕಲ್ಯಾಣಿ ಸಾಥ್

    ಸೌತ್ ಸಿನಿಮಾರಂಗದ ಪ್ರತಿಭಾನ್ವಿತ ನಟ ಜಯಂರವಿ (Jayamravi) ‘ಪೊನ್ನಿಯನ್ ಸೆಲ್ವನ್ 2’ ಸಿನಿಮಾದ ಸಕ್ಸಸ್ ಬಳಿಕ ಹೊಸ ಸಿನಿಮಾವೊಂದನ್ನ ಒಪ್ಪಿಕೊಂಡಿದ್ದಾರೆ. ‘ಜೀನಿ’ ಎಂಬ ಟೈಟಲ್ ಮೂಲಕ ಭಿನ್ನವಾಗಿರೋ ಕಥೆಯನ್ನ ಹೇಳಲು ಹೊರಟಿದ್ದಾರೆ. ಸದ್ಯ ಜೀನಿ ಸಿನಿಮಾದ ಮುಹೂರ್ತ ಚೆನ್ನೈನಲ್ಲಿ ಅದ್ದೂರಿಯಾಗಿ ನಡೆದಿದೆ.

    ‘ಪೊನ್ನಿಯಿನ್ ಸೆಲ್ವನ್ 2’ (Ponniyin Selvan 2) ಸ್ಟಾರ್ ಜಯಂರವಿ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚ್ತಿದ್ದಾರೆ. ಇತ್ತೀಚೆಗೆಷ್ಟೇ ‘ಇರೈವನ್’ ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿರುವ ಅವರ 32ನೇ ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡಲಾಗಿದೆ. ವೆಲ್ಸ್ ಫಿಲಂಸ್ ಇಂಟರ್‌ನ್ಯಾಶನಲ್‌ನಡಿ ಡಾ.ಇಶಾರಿ ಕೆ.ಗಣೇಶ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದು, ಚೆನ್ನೈನಲ್ಲಿಂದು ಸೆಟ್ಟೇರಿರುವ ಈ ಸಿನಿಮಾಗೆ ‘ಜೀನಿ’ ಎಂಬ ಟೈಟಲ್ ಇಡಲಾಗಿದೆ.‌ ಇದನ್ನೂ ಓದಿ:ಡೆವಿಲ್‌ ಕಥೆ ಹೇಳಲು ಸಜ್ಜಾದ ತೆಲುಗಿನ ನಟ ಕಲ್ಯಾಣ್‌ ರಾಮ್‌

    ಯುವ ನಿರ್ದೇಶಕ ಅರ್ಜುನನ್ ಜೆ.ಆರ್ ನಿರ್ದೇಶನದಲ್ಲಿ ಜಯಂ ರವಿ ನಾಯಕನಾಗಿ ನಟಿಸುತ್ತಿದ್ದು, ಕೃತಿ ಶೆಟ್ಟಿ(Kriti Shetty), ಕಲ್ಯಾಣಿ ಪ್ರಿಯದರ್ಶನ್ (Kalyani Priyadarshan), ವಾಮಿಕಾ ಗಬ್ಬಿ ಮತ್ತು ದೇವಯಾನಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಹೇಶ್ ಮುತ್ತುಸಾಮಿ ಛಾಯಾಗ್ರಹಣ, ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ, ಪ್ರದೀಪ್ ಇ ರಾಘವ್ ಸಂಕಲನ, ಹಾಲಿವುಡ್ ಮತ್ತು ಅಂತರಾಷ್ಟ್ರೀಯ ಚಿತ್ರರಂಗದ ಅತ್ಯಂತ ಪ್ರಸಿದ್ಧ ಸ್ಟಂಟ್ ಕೊರಿಯೋಗ್ರಾಫರ್‌ಗಳಲ್ಲಿ ಒಬ್ಬರಾದ ಯಾನಿಕ್ ಬೆನ್ ಈ ಚಿತ್ರಕ್ಕೆ ಆಕ್ಷನ್ ಸೀಕ್ವೆನ್ಸ್ ಖದರ್ ಚಿತ್ರದಲ್ಲಿರಲಿದೆ.

    ‘ಜೀನಿ’ ವೆಲ್ಸ್ ಫಿಲ್ಮ್ ಇಂಟರ್‌ನ್ಯಾಶನಲ್‌ನ 25ನೇ ಚಿತ್ರವಾಗಿದ್ದು, ದುಬಾರಿ ಬಜೆಟ್‌ನಲ್ಲಿ ತಯಾರಾಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿರುವ ‘ಜೀನಿ’ ಸಿನಿಮಾ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಬಾರಿಗೆ ಜಯಂರವಿ ಜೊತೆ ಕೃತಿ ಶೆಟ್ಟಿ ಕಲ್ಯಾಣಿ ಪ್ರಿಯದರ್ಶನ್ ಸಾಥ್ ನೀಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾಲಿವುಡ್ ಸ್ಟಾರ್ ಗೆ ಸಿಂಪಲ್ ಸ್ಟಾರ್ ಸಾಥ್

    ಮಾಲಿವುಡ್ ಸ್ಟಾರ್ ಗೆ ಸಿಂಪಲ್ ಸ್ಟಾರ್ ಸಾಥ್

    ಮಿನ್ನಲ್ ಮುರಳಿ ಎಂಬ ಸೂಪರ್ ಹೀರೋ ಸಿನಿಮಾ ಮೂಲಕ ಖ್ಯಾತಿ ಪಡೆದಿರುವ ಟೊವಿನೋ ಥಾಮಸ್ (Tovino Thomas) ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ಅಜಯಂತೆ ರಂದಂ ಮೋಷನಂ (ARM) ಟೀಸರ್ ರಿಲೀಸ್ ಆಗಿದೆ. ಹಿಂದಿಯಲ್ಲಿ ಹೃತಿಕ್ ರೋಷನ್, ತೆಲುಗಿನಲ್ಲಿ ನಾನಿ, ತಮಿಳಿನಲ್ಲಿ ಲೋಕೇಶ್ ಕನಕರಾಜ್ ಮತ್ತು ಆರ್ಯ, ಕನ್ನಡದಲ್ಲಿ ರಕ್ಷಿತ್ ಶೆಟ್ಟಿ (Rakshit Shetty), ಮಲಯಾಳಂ ಪೃಥ್ವಿರಾಜ್ ಸುಕುಮಾರನ್ ಸೋಷಿಯಲ್ ಮೀಡಿಯಾ ಮೂಲಕ ಟೀಸರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

    ಟೊವಿನೋ ಥಾಮಸ್ ಮಾಸ್ ಅವತಾರ ತಾಳಿದ್ದಾರೆ. ಹಳ್ಳಿಗಾಡಿನಲ್ಲಿ ನಡೆಯುವ ಘಟನೆ ಸುತ್ತ ಇಡೀ ಟೀಸರ್ ಸಾಗುತ್ತದೆ. ಟೊವಿನೋ ಥಾಮಸ್ ವೃತ್ತಿ ಜೀವನದ ಬಹುವಿಶೇಷ ಸಿನಿಮಾ ಇದಾಗಿದೆ. ಈ  ಚಿತ್ರದಲ್ಲಿ ಟೊವಿನೋ ಥಾಮಸ್ ತ್ರಿಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಮೂಲಕ ಕಲಾವಿದನಾಗಿ ಮೊದಲ ಬಾರಿ ಬಹು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದು ಪ್ಯಾನ್ ಇಂಡಿಯಾ  ಸ್ಟಾರ್ ಆಗಿ ಹೊರ ಹೊಮ್ಮುತ್ತಿದ್ದಾರೆ.  ಮಲಯಾಳಂ ಖ್ಯಾತ ನಟ ಟೊವಿನೋ ಥಾಮಸ್ ವೃತ್ತಿ ಜೀವನದ ಬಹು ವಿಶೇಷ ಸಿನಿಮಾ ಇದಾಗಿದೆ.  ಇದನ್ನೂ ಓದಿ:ಕಾಲೆಳೆದ ನಟಿಗೆ ಸ್ನೇಹದ ಹಸ್ತಚಾಚಿದ ರಶ್ಮಿಕಾ ಮಂದಣ್ಣ

    ಚಿತ್ರದಲ್ಲಿ ಟೊವಿನೋ ಥಾಮಸ್ ತ್ರಿಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಮೂಲಕ ಕಲಾವಿದನಾಗಿ ಮೊದಲ ಬಾರಿ ಬಹು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮುತ್ತಿದ್ದಾರೆ. ಸೌತ್ ಸಿನಿರಂಗದ ಸೆನ್ಸೇಷನಲ್ ನಟಿ ಕೃತಿ ಶೆಟ್ಟಿಗೂ (Kriti Shetty) ಸ್ಪೆಷಲ್ ಆಗಿದ್ದು ತೆಲುಗು, ತಮಿಳಿನಲ್ಲಿ ಮಿಂಚಿದ್ದ ಕೃತಿ ಶೆಟ್ಟಿ ಈಗ ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ನೀಡುತ್ತಿದ್ದಾರೆ. ಟೊವಿನೋ ಥಾಮಸ್ ಜೋಡಿಯಾಗಿ ಕೃತಿ ನಟಿಸುತ್ತಿದ್ದು, ಉಳಿದಂತೆ ನಟಿಯರಾದ ಐಶ್ವರ್ಯ ರಾಜೇಶ್, ಸುರಭಿ ಲಕ್ಷಿ ಕೂಡ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

    ‘ಅಜಯಂತೆ ರಂದಂ ಮೋಷನಂ’ ನಿರ್ದೇಶಕ ಜಿತಿನ್ ಲಾಲ್ ನಿರ್ದೇಶಿಸುತ್ತಿದ್ದು ಇದು ಇವರ ಮೊದಲ ಸಿನಿಮಾ. ಸುಜಿತ್ ನಂಬಿಯಾರ್ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದು, ಬಾಸಿಲ್ ಜೋಸೆಫ್, ಕಿಶೋರ್, ಹರೀಶ್ ಉತ್ತಮನ್, ಹರೀಶ್ ಪೆರಾಡಿ, ಜಗದೀಶ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ನಿರ್ಮಾಣವಾಗುತ್ತಿರುವ 3ಡಿಯಲ್ಲಿ ತೆರೆ ಕಾಣುವ ‘ಅಜಯಂತೆ ರಂದಂ ಮೋಷನಂ’ ಚಿತ್ರವನ್ನು ಯುಜಿಎಂ ಪ್ರೊಡಕ್ಷನ್ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದು, ಮ್ಯಾಜಿಕ್ ಫ್ರೇಮ್ಸ್ ಸಹ ನಿರ್ಮಾಣ ಮಾಡುತ್ತಿದೆ.

  • 3ಡಿಯಲ್ಲಿ ಮೂಡಿ ಬರಲಿದೆ ‘ಅಜಯಂತೆ ರಂದಂ ಮೋಷನಂ’ ಪ್ಯಾನ್ ಇಂಡಿಯಾ ಸಿನಿಮಾ

    3ಡಿಯಲ್ಲಿ ಮೂಡಿ ಬರಲಿದೆ ‘ಅಜಯಂತೆ ರಂದಂ ಮೋಷನಂ’ ಪ್ಯಾನ್ ಇಂಡಿಯಾ ಸಿನಿಮಾ

    ಲಯಾಳಂ ಖ್ಯಾತ ನಟ ಟೊವಿನೋ ಥಾಮಸ್, ನಟಿ ಕೃತಿ ಶೆಟ್ಟಿ (Kriti Shetty) ಅಭಿನಯದ ನೂತನ ಪ್ಯಾನ್ ಇಂಡಿಯಾ ಸಿನಿಮಾ ‘ಅಜಯಂತೆ ರಂದಂ ಮೋಷನಂ’ (Ajayante Randam Moshanam) ಇಂದು ಸೆಟ್ಟೇರಿದೆ. ಫ್ಯಾಂಟಸಿ ಅಡ್ವೆಂಚರ್ ಸಿನಿಮಾ ಇದಾಗಿದ್ದು, 3ಡಿಯಲ್ಲಿ ತೆರೆ ಕಾಣಲಿರುವ ಬಿಗ್ ಬಜೆಟ್ ಚಿತ್ರದ ಮುಹೂರ್ತ ಇಂದು ಅದ್ದೂರಿಯಾಗಿ ನೆರವೇರಿದೆ. ಮಲಯಾಳಂ ಖ್ಯಾತ ನಟ ಟೊವಿನೋ ಥಾಮಸ್ (Tovino Thomas) ವೃತ್ತಿ ಜೀವನದ ಬಹು ವಿಶೇಷ ಸಿನಿಮಾ ಇದಾಗಿದೆ.  ಚಿತ್ರದಲ್ಲಿ ಟೊವಿನೋ ಥಾಮಸ್ ತ್ರಿಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಮೂಲಕ ಕಲಾವಿದನಾಗಿ ಮೊದಲ ಬಾರಿ ಬಹು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದು ಪ್ಯಾನ್ ಇಂಡಿಯಾ (Pan India)  ಸ್ಟಾರ್ ಆಗಿ ಹೊರ ಹೊಮ್ಮುತ್ತಿದ್ದಾರೆ.

    ಮೂರು ಯುಗಗಳನ್ನು ಸುತ್ತುವ ಕಥೆ ಚಿತ್ರದಲ್ಲಿದ್ದು ಟೊವಿನೋ ಥಾಮಸ್ ಮಣಿಯನ್, ಅಜಯನ್, ಕುಂಜಿಕೇಲು ಎಂಬ ಮೂರು ಪಾತ್ರಗಳಿಗೆ ಜೀವ ತುಂಬುತ್ತಿದ್ದಾರೆ. ಈ ಚಿತ್ರ ಸೌತ್ ಸಿನಿರಂಗದ ಸೆನ್ಸೇಷನಲ್ ನಟಿ ಕೃತಿ ಶೆಟ್ಟಿಗೂ ಸ್ಪೆಷಲ್ ಆಗಿದ್ದು ತೆಲುಗು, ತಮಿಳಿನಲ್ಲಿ ಮಿಂಚಿದ್ದ ಕೃತಿ ಈಗ ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ನೀಡುತ್ತಿದ್ದಾರೆ. ನಟಿಯರಾದ ಐಶ್ವರ್ಯ ರಾಜೇಶ್, ಸುರಭಿ ಲಕ್ಷಿ ಕೂಡ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ:`ಪುನೀತ ಪರ್ವ’ ಕಾರ್ಯಕ್ರಮಕ್ಕೆ ಸಿಎಂಗೆ ಆಹ್ವಾನ ನೀಡಿದ ಅಣ್ಣಾವ್ರ ಕುಟುಂಬ

     

    ‘ಅಜಯಂತೆ ರಂದಂ ಮೋಷನಂ’ ನಿರ್ದೇಶಕ ಜಿತಿನ್ ಲಾಲ್ ನಿರ್ದೇಶಿಸುತ್ತಿದ್ದು ಇದು ಇವರ ಮೊದಲ ಸಿನಿಮಾ. ಸುಜಿತ್ ನಂಬಿಯಾರ್ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದು, ಬಾಸಿಲ್ ಜೋಸೆಫ್, ಕಿಶೋರ್, ಹರೀಶ್ ಉತ್ತಮನ್, ಹರೀಶ್ ಪೆರಾಡಿ, ಜಗದೀಶ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ನಿರ್ಮಾಣವಾಗುತ್ತಿರುವ 3ಡಿಯಲ್ಲಿ ತೆರೆ ಕಾಣುವ ‘ಅಜಯಂಂತೆ ರಂದಂ ಮೋಷನಂ’ ಚಿತ್ರವನ್ನು ಯುಜಿಎಂ ಪ್ರೊಡಕ್ಷನ್ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದು, ಮ್ಯಾಜಿಕ್ ಫ್ರೇಮ್ಸ್ ಸಹ ನಿರ್ಮಾಣ ಮಾಡುತ್ತಿದೆ.

    ಚಿತ್ರದ ತಾಂತ್ರಿಕ ಬಳಗ ಅನುಭವಿ ತಂತಜ್ಞರಿಂದ ಕೂಡಿದ್ದು,  ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ದೀಪು ನೈನನ್ ಥಾಮಸ್ ಸಂಗೀತ ನಿರ್ದೇಶನ, ಜೋಮನ್ ಟಿ ಜಾನ್ ಛಾಯಾಗ್ರಹಣ, ಶಮೀರ್ ಮೊಹಮ್ಮದ್ ಸಂಕಲನ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ತೆಲುಗು ಸೂಪರ್ ಸ್ಟಾರ್ ಬಾಲಯ್ಯ ಜತೆ ನಟಿಸಲ್ಲ ಅಂದ ಕನ್ನಡತಿ

    ತೆಲುಗು ಸೂಪರ್ ಸ್ಟಾರ್ ಬಾಲಯ್ಯ ಜತೆ ನಟಿಸಲ್ಲ ಅಂದ ಕನ್ನಡತಿ

    ಖಂಡ ಸಿನಿಮಾದ ನಂತರ ಮತ್ತೊಂದು ಭಾರೀ ಬಜೆಟ್ ಸಿನಿಮಾದಲ್ಲಿ ನಟಿಸುತ್ತಿರುವ ನಂದಮೂರಿ ಬಾಲಕೃಷ್ಣ ಜತೆ ಹೊಸ ಸಿನಿಮಾದಲ್ಲಿ ನಟಿಸಲಾರೆ ಎಂದಿದ್ದಾರಂತೆ ಕನ್ನಡದ ಹುಡುಗಿ, ಟಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿರುವ ಕೃತಿ ಶೆಟ್ಟಿ. ಇನ್ನೂ ಹದಿನೆಂಟರ ಆಸುಪಾಸಿನಲ್ಲಿರುವ ಈ ನಟಿಯು ಬಾಲಯ್ಯನವರ ವಯಸ್ಸಿನ ಕಾರಣಕ್ಕಾಗಿ ನಟಿಸಲು ನಿರಾಕರಿಸಿರುವುದು ಭಾರೀ ಸುದ್ದಿ ಮಾಡಿದೆ. ಇದನ್ನೂ ಓದಿ : ಮಹಾಶಿವರಾತ್ರಿಗೆ ಶಿವಾಜಿ ಸುರತ್ಕಲ್ ಪೋಸ್ಟರ್

    “ನಂದಮೂರಿ ಅವರಿಗೆ ವಯಸ್ಸಾಗಿದೆ. ನನಗಿನ್ನೂ ಹದಿನೆಂಟರ ಹರೆಯ. ವಯಸ್ಸಿನ ಭಾರೀ ಅಂತರ ಇರುವ ನಟರ ಜತೆ ಈಗಲೇ ಕೆಲಸ ಮಾಡಿದರೆ, ನನ್ನ ಕೆರಿಯರ್  ತೊಂದರೆ ಆಗುತ್ತದೆ. ಹಾಗಾಗಿ ನಾನು ಬಾಲಯ್ಯ ಅವರ ಚಿತ್ರದಲ್ಲಿ ನಟಿಸಲಾರೆ” ಎಂದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ

    ಬಾಲಯ್ಯ ಅವರ ಸಿನಿಮಾದಲ್ಲಿ ನಟಿಸಲು ಕಲಾವಿದರು ತುದಿಗಾಲಲ್ಲಿ ನಿಂತಿರುತ್ತಾರೆ. ಇಂತಹ ಸಮಯದಲ್ಲಿ ಕೃತಿ ಕೈಗೊಂಡಿದ್ದಾರೆ ಎನ್ನಲಾದ ನಿರ್ಧಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕೃತಿ ಜಾಗಕ್ಕೆ ಸದ್ಯ ಶ್ರುತಿ ಹಾಸನ್ ಬಂದಿದ್ದಾರಂತೆ. ಇದನ್ನೂ ಓದಿ : ಜೇಮ್ಸ್ ಟ್ರೇಡ್ ಮಾರ್ಕ್ ಹಾಡಿಗೆ ಪುನೀತ್ ಭರ್ಜರಿ ಸ್ಟೆಪ್: ಭಾವುಕರಾದ ಅಭಿಮಾನಿಗಳು

    ಕನ್ನಡತಿ ಕೃತಿ ಶೆಟ್ಟಿ ಈ ಸಿನಿಮಾದಿಂದ ಹೊರ ನಡೆದಿದ್ದರೂ, ಮತ್ತೋರ್ವ ಕನ್ನಡದ ನಟ ದುನಿಯಾ ವಿಜಯ್, ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದುನಿಯಾ ವಿಜಯ್ ಗೆ ಇದು ತೆಲುಗಿನಲ್ಲಿ ಮೊದಲ ಸಿನಿಮಾ. ಮೊನ್ನೆಯಷ್ಟೇ ಚಿತ್ರಕ್ಕೆ ಮುಹೂರ್ತವಾಗಿದ್ದು, ಸದ್ಯ ಮೊದಲ ಹಂತದ ಚಿತ್ರೀಕರಣ ಶುರುವಾಗಿದೆ.

  • ಕೃತಿ ಶೆಟ್ಟಿ ಜೊತೆ ರೊಮ್ಯಾನ್ಸ್ ಗೆ ನೋ ಅಂದ್ರು ವಿಜಯ್ ಸೇತುಪತಿ

    ಕೃತಿ ಶೆಟ್ಟಿ ಜೊತೆ ರೊಮ್ಯಾನ್ಸ್ ಗೆ ನೋ ಅಂದ್ರು ವಿಜಯ್ ಸೇತುಪತಿ

    ಚೆನ್ನೈ: ದಕ್ಷಿಣ ಭಾರತದ ಸ್ಟಾರ್ ನಟ ವಿಜಯ್ ಸೇತುಪತಿ ಕೃತಿ ಶೆಟ್ಟಿ ಜೊತೆ ನಟಿಸಲು ಅವಕಾಶ ಬಂದಿದ್ದು, ಅದಕ್ಕೆ ನೋ ಎಂದಿದ್ದಾರೆ.

    ವಿಜಯ್ ಸೇತುಪತಿ ಯಾವ ರೀತಿಯ ಪಾತ್ರವನ್ನು ಕೊಟ್ಟರೂ ಸುಲಭವಾಗಿ ಮಾಡುವ ನಟ. ಇತ್ತೀಚೆಗೆ ಕೃತಿ ಶೆಟ್ಟಿ ಜೊತೆ ಸಟಿಸಲು ಅವಕಾಶ ಬಂದಿದ್ದು, ನನ್ನ ಮಗಳು ಎಂದು  ಕೃತಿಯನ್ನು ತಿಳಿದುಕೊಂಡಿದ್ದೇನೆ. ಕೃತಿ ಜೊತೆ ರೊಮ್ಯಾನ್ಸ್ ಮಾಡಲು ನನಗೆ ಸಾಧ್ಯವಿಲ್ಲ ಎಂದು ಹೇಳಿ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ನನ್ನ ಹೃದಯ ನಿನ್ನ ಬಳಿ ಇದೆ – ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ ಕತ್ರಿನಾ ಪೋಸ್ಟ್

    ವಿಜಯ್ ನಟನೆಯ ‘ಲಾಭಂ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರವನ್ನು ಪ್ರಮೋಶನ್ ಮಾಡುತ್ತಿರುವ ವೇಳೆ ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃತಿಯನ್ನು ನಾನು ನನ್ನ ಮಗಳು ಎಂದುಕೊಂಡಿದ್ದೇನೆ. ಒಂದು ಸಾರಿ ಮಗಳು ಎಂದ ಮೇಲೆ ಆಕೆ ಜೊತೆ ಹೇಗೆ ರೊಮ್ಯಾನ್ಸ್ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ನನಗೆ ಆಫರ್ ಕೊಟ್ಟ ಚಿತ್ರತಂಡ ನಾವು ನಟಿಸಿದ ‘ಉಪ್ಪೆನಾ’ ಸಿನಿಮಾ ನೋಡಿರಲಿಲ್ಲ. ಅದಕ್ಕೆ ಆ ರೀತಿ ಕೇಳಿದ್ದಾರೆ. ಅದಕ್ಕೆ ನಾನು ಮಾಡುವುದಿಲ್ಲ ಎಂದಿದ್ದೇನೆ. ಈಗ ಮಾತ್ರವಲ್ಲ ಇಡೀ ಜೀವನದಲ್ಲಿ ಅದು ಸಾಧ್ಯವಿಲ್ಲ. ನಾನು ಕೃತಿಗೆ ‘ಉಪ್ಪೆನಾ’ ಶೂಟಿಂಗ್ ಕೊನೆಯ ದಿನ ‘ನಾನು ನಿನ್ನ ತಂದೆ ಎಂದು ತಿಳಿದುಕೋ’ ಎಂದು ಹೇಳಿದ್ದೆ. ಆ ವೇಳೆ ನನ್ನ ಮಗನಿಗೆ 15 ವರ್ಷ ಮತ್ತೆ ಕೃತಿಗೆ 16 ವರ್ಷ ಆಕೆ ನನ್ನ ಮಗಳಿದ್ದಂತೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮತ್ತೆ ಒಂದಾದ ‘ಮುಂಗಾರು ಮಳೆ’ ಚಿತ್ರತಂಡ

    ಈ ಹಿಂದೆ ವಿಜಯ್ ಸೇತುಪತಿ ಮತ್ತು ಕೃತಿ ಶೆಟ್ಟಿ ‘ಉಪ್ಪೆನಾ’ ಸಿನಿಮಾದಲ್ಲಿ ತಂದೆ-ಮಗಳ ಪಾತ್ರದಲ್ಲಿ ನಟಿಸಿದ್ದರು. ಇದಕ್ಕೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಅದಕ್ಕೆ ವಿಜಯ್ ಕೃತಿಯನ್ನು ನಾನು ಮಗಳು ಎಂದು ಭಾವಿಸಿದ್ದೇನೆ ಆಕೆ ಜೊತೆ ರೊಮ್ಯಾನ್ಸ್ ಮಾಡಲು ಆಗುವುದಿಲ್ಲ ಎಂದು ಆ ಸಿನಿಮಾ ಆಫರ್ ಅನ್ನು ಕೈಬಿಟ್ಟಿದ್ದಾರೆ.

    ಪ್ರಸ್ತುತ ವಿಜಯ್ ಕೈಯಲ್ಲಿ ಹಲವು ಸಿನಿಮಾಗಳಿದ್ದು, ಇವರು 12ಕ್ಕೂ ಹೆಚ್ಚು ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಈ ಮೂಲಕ ಅತಿ ಹೆಚ್ಚು ಬ್ಯುಸಿ ಇರುವ ನಟರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ‘ಅನಬೆಲ್ ಸೇತುಮತಿ’ ಚಿತ್ರದ ತಾಪ್ಸಿ ಪನ್ನು ಜೊತೆಯಾಗಿ ನಟಿಸಿರುವ ಇವರ ಸಿನಿಮಾ ಸೆ.17 ರಂದು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಬಿಡುಗಡೆಯಾಗುತ್ತಿದೆ. ಇದನ್ನೂ ಓದಿ: ಬಿಜೆಪಿ ಈ ದೇಶದ ಬಗ್ಗೆ ಚಿಂತನೆ ಮಾಡುವ ಏಕೈಕ ಪಕ್ಷ: ಎ.ನಾರಾಯಣಸ್ವಾಮಿ

    ‘ಲಾಬಮ್’ ಚಿತ್ರದಲ್ಲಿ ವಿಜಯ್ ಗೆ ಜೋಡಿಯಾಗಿ ಶ್ರುತಿ ಹಾಸನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರ ಸೆ.9 ರಂದು ಬಿಡುಗಡೆಯಾಗುತ್ತಿದೆ.