Tag: kriti sanon

  • ಪ್ರಭಾಸ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ`ಆದಿಪುರುಷ್’ ಟೀಮ್

    ಪ್ರಭಾಸ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ`ಆದಿಪುರುಷ್’ ಟೀಮ್

    `ಬಾಹುಬಲಿ’ ಸೂಪರ್ ಸ್ಟಾರ್ ಪ್ರಭಾಸ್ (Prabhas), ಕೃತಿ ಸನೂನ್‌  (Kriti Sanon) ನಟನೆಯ `ಆದಿಪುರುಷ್’ ಸಿನಿಮಾದ ರಿಲೀಸ್‌ ಡೇಟ್ ಫಿಕ್ಸ್‌ ಆಗಿದೆ. ಈ ಕುರಿತು ಅಧಿಕೃತವಾಗಿ ನಿರ್ದೇಶಕ ಓಂ ರೌತ್‌ ತಿಳಿಸಿದ್ದಾರೆ. ಈ ಮೂಲಕ ಪ್ರಭಾಸ್‌ ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

    ನಟ ಪ್ರಭಾಸ್‌ಗೆ ದೇಶಾದ್ಯಂತ ಫ್ಯಾನ್ಸ್ ಇದ್ದಾರೆ. ನೆಚ್ಚಿನ ನಟನ ಸಿನಿಮಾಗಾಗಿ ಕಾದು ನೋಡುವ ಬಹುದೊಡ್ಡ ವರ್ಗವೇ ಇದೆ. `ಆದಿಪುರುಷ್’ (Adipurush) ಚಿತ್ರಕ್ಕಾಗಿ ಕಾಯ್ತಿರುವ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಈ ವರ್ಷವೇ ವಾರಿಸು, ತುನಿವು ಜೊತೆ `ಆದಿಪುರುಷ್’ ಚಿತ್ರ ತೆರೆಕಾಣಬೇಕಿತ್ತು. ಚಿತ್ರದ ಟೀಸರ್‌ಗೆ ಕಳಪೆ ಎಂದು ನೆಟ್ಟಿಗರಿಂದ ಉತ್ತರ ಬಂದ್ಮೇಲೆ ರಿಲೀಸ್ ಡೇಟ್ ಮುಂದಕ್ಕೆ ಹಾಕಲಾಗಿತ್ತು. ಈಗ ರಿಲೀಸ್‌ ಬಗ್ಗೆ ಹೊಸ ಅಪ್‌ಡೇಟ್‌ ಸಿಕ್ಕಿದೆ.

    `ಆದಿಪುರುಷ್’ ಸಿನಿಮಾದ ಟೀಸರ್‌ಗೆ ಕಳಪೆ ಗ್ರಾಫಿಕ್ಸ್ ವರ್ಕ್ ನೋಡಿ, ನೆಟ್ಟಿಗರಿಂದ ಚಿತ್ರತಂಡಕ್ಕೆ ಭಾರಿ ಟೀಕೆ ಎದುರಿಸಿತ್ತು. ಹಾಗಾಗಿ ಒಂದಿಷ್ಟು ಬದಲಾವಣೆಯೊಂದಿಗೆ ಬರುತ್ತೇವೆ ಎಂದು ತಿಳಿಸಿದ್ದರು. ಅದರಂತೆಯೇ ಈಗ ಜೂನ್‌ 16, 2023ರಲ್ಲಿ ಸಿನಿಮಾ ರಿಲೀಸ್‌ ಆಗಲಿದೆ ಎಂದು ನಿರ್ದೇಶಕ ಓಂ ರೌತ್‌ ತಿಳಿಸಿದ್ದಾರೆ. ಇದನ್ನೂ ಓದಿ: ಕೆ.ಎಲ್ ರಾಹುಲ್- ಅಥಿಯಾ ಶೆಟ್ಟಿ ಮನೆಯಲ್ಲಿ ಮದುವೆ ಸಂಭ್ರಮ

    ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಓಂ ರೌತ್ ಚಿತ್ರ ಜೂನ್ 16ರಂದೇ ಬಿಡುಗಡೆಯಾಗಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಜ.17ರಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಓಂ ರೌತ್ `ಆದಿಪುರುಷ್’ ರಿಲೀಸ್‌ಗೆ ಇನ್ನು 150 ದಿನಗಳು ಬಾಕಿ ಇದೆ ಎಂದು ಪೋಸ್ಟರ್ ಹಂಚಿಕೊಳ್ಳುವ ಮೂಲಕ ಚಿತ್ರ ಜೂನ್ 16ಕ್ಕೆ ತೆರೆ ಕಾಣಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ. 3ಡಿ ರೂಪದಲ್ಲಿ ಸಿನಿಮಾ ತೆರೆಗೆ ಬರಲಿದೆ. ಈ ಅಪ್‌ಡೇಟ್‌ ಕೇಳಿ ಫ್ಯಾನ್ಸ್‌ ಖುಷಿಪಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಲಯ್ಯ ಮುಂದೆ ತನ್ನ ಮದುವೆ ಬಗ್ಗೆ ಬಾಯ್ಬಿಟ್ಟ ಪ್ರಭಾಸ್

    ಬಾಲಯ್ಯ ಮುಂದೆ ತನ್ನ ಮದುವೆ ಬಗ್ಗೆ ಬಾಯ್ಬಿಟ್ಟ ಪ್ರಭಾಸ್

    ಟಾಲಿವುಡ್ (Tollywood) ನಟ ಬಾಲಯ್ಯ (Balayya) ಸಿನಿಮಾ ಜೊತೆಗೆ ʻಅನ್‌ಸ್ಟಾಪಬಲ್ʼ ಎಂಬ ಶೋ ಕೂಡ ನಡೆಸಿಕೊಡುತ್ತಾರೆ. ಸ್ಟಾರ್ ತಾರೆಯರ ಸಂದರ್ಶನ ಮಾಡಿ, ಅವರ ಕುರಿತು ಅಚ್ಚರಿಯ ಮಾಹಿತಿಯನ್ನ ರಿವೀಲ್ ಮಾಡುತ್ತಾರೆ. ಈ ಶೋಗೆ (Actor Prabhas) ಪ್ರಭಾಸ್‌ ಕೂಡ ಸಾಥ್‌ ನೀಡಿದ್ದು, ತಮ್ಮ ಮದುವೆಯ ಬಗ್ಗೆ ನಟ ಬಾಯ್ಬಿಟ್ಟಿದ್ದಾರೆ.

    ತೆಲುಗು ಚಿತ್ರರಂಗದ ಲೆಜೆಂಡ್ ಬಾಲಕೃಷ್ಣ ‌ʻಅಖಂಡʼ ಸಕ್ಸಸ್ ನಂತರ ಸಿನಿಮಾ ಶೂಟಿಂಗ್‌,  ತಾರೆಯರ ಸಂದರ್ಶನ ಅಂತಾ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಪ್ರಭಾಸ್ ಜೊತೆಗಿನ ಸಂದರ್ಶನದ ತುಣುಕು ಸಖತ್ ಸದ್ದು ಮಾಡುತ್ತಿದೆ. ಬಾಲಯ್ಯ ನಿರೂಪಣೆಯ ಅನ್‌ಸ್ಟಾಪಬಲ್ ಶೋಗೆ ಅತಿಥಿಯಾಗಿ ಬಾಹುಬಲಿ ನಟ ಪ್ರಭಾಸ್ ಭಾಗವಹಿಸಿದ್ದಾರೆ. ಅವರ ವಯಸ್ಸು 43 ಆದ್ರೂ ಎಲ್ಲರೂ ಕೇಳೋ ಪ್ರಶ್ನೆ ಮದುವೆ ಯಾವಾಗ ಅಂತಾ? ಹಾಗಾಗಿ ಈ ಬಗ್ಗೆ ಬಾಲಯ್ಯ, ಪ್ರಭಾಸ್‌ ಅವರನ್ನ ನೇರವಾಗಿ ಮದುವೆ ಯಾವಾಗ ಎಂದಿದ್ದಾರೆ.

    ಈ ಹಿಂದಿನ ಶೋನಲ್ಲಿ ನಟ ಶರ್ವಾನಂದ್‌ಗೆ ಮದುವೆ ಯಾವಾಗ ಅಂತಾ ಕೇಳಲಾಗಿತ್ತು. ಆಗ ಪ್ರಭಾಸ್ ಮದುವೆ ಆದ ಮೇಲೆ ಎಂಬ ಉತ್ತರ ನೀಡಿದ್ದರು. ಇದೀಗ ಇದೇ ಪ್ರಶ್ನೆಯನ್ನು ನಿಮಗೆ ಕೇಳುತ್ತೇನೆ. ನಿಮ್ಮ ಮದುವೆ ಯಾವಾಗ ಎಂದು, ಅದಕ್ಕೆ ಸಲ್ಮಾನ್ ಖಾನ್ ಮದುವೆ ಆದ್ಮೇಲೆ ನನ್ನ ಮದುವೆ ಎಂದು ಪ್ರಭಾಸ್ ಉತ್ತರ ನೀಡಿದ್ದಾರೆ. ಈ ಮಾತು ಕೇಳಿ ಅಲ್ಲಿರುವ ಅಭಿಮಾನಿಗಳು ನಕ್ಕಿದ್ದಾರೆ. ಇದನ್ನೂ ಓದಿ: `ಕಾಂತಾರ’ ಎಫೆಕ್ಟ್, ಭೂತಕೋಲ ನೋಡಲು ಧರ್ಮಸ್ಥಳಕ್ಕೆ ಬರಲಿದ್ದಾರೆ ನಟ ವಿಶಾಲ್

    ಸದ್ಯ ಪ್ರಭಾಸ್ (Prabhas) ಹೆಸರು ನಟಿ ಕೃತಿ ಸನೂನ್ (Kriti Sanon) ಜೊತೆ ಕೇಳಿ ಬರುತ್ತಿದೆ. ಇಬ್ಬರು ಡೇಟಿಂಗ್ (Dating) ಮಾಡ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಿಬ್ಬರ ಮದುವೆಯ ಗುಡ್ ನ್ಯೂಸ್ ಸಿಗಲಿ ಅಂತಾ ಫ್ಯಾನ್ಸ್ ಕೂಡ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರಭಾಸ್ ಜೊತೆಗಿನ ಡೇಟಿಂಗ್ ವಿಚಾರಕ್ಕೆ ಮೌನ ಮುರಿದ ಕೃತಿ ಸನೂನ್

    ಪ್ರಭಾಸ್ ಜೊತೆಗಿನ ಡೇಟಿಂಗ್ ವಿಚಾರಕ್ಕೆ ಮೌನ ಮುರಿದ ಕೃತಿ ಸನೂನ್

    ಚಿತ್ರರಂಗ ಅಂದ ಮೇಲೆ ಇಲ್ಲಿ ಲವ್ ಸ್ಟೋರಿ ಎಲ್ಲಾ ಕಾಮನ್, ಒಂದಲ್ಲಾ ಒಂದು ಗಾಸಿಪ್ ವಿಷ್ಯವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಪ್ರಭಾಸ್ (Darling Prabhas) ಜೊತೆಗಿನ ಡೇಟಿಂಗ್ ವದಂತಿಗೆ ಕೃತಿ ಸನೂನ್ (Kriti Sanon) ಇದೀಗ ಬ್ರೇಕ್ ಹಾಕಿದ್ದಾರೆ.

    ಟಿಟೌನ್ ಅಡ್ಡಾದಲ್ಲಿ ಸದ್ಯ ಸೌಂಡ್ ಮಾಡುತ್ತಿರುವ ವಿಷ್ಯಾ ಅಂದ್ರೆ ಪ್ರಭಾಸ್, ಕೃತಿ ಸನೂನ್ ಡೇಟಿಂಗ್ ವಿಚಾರ. ಇದೀಗ ಅದಕ್ಕೆಲ್ಲಾ ನಟಿ ಕೃತಿ ಅವರೇ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ರಿಯಾಲಿಟಿ ಶೋನಲ್ಲಿ ವರುಣ್ ಧವನ್ (Varun Dhawan) ಸ್ವಲ್ಪ ವೈಲ್ಡ್ ಆಗಿ ನಡೆದುಕೊಂಡರು ಅಷ್ಟೇ. ತಮಾಷೆಗೆ ಆಡಿದ ಮಾತಿನಿಂದ ಸಾಕಷ್ಟು ವದಂತಿಗಳು ಹುಟ್ಟಿಕೊಂಡಿವೆ. ಬೇರೆ ಯಾವುದೋ ಮಾಧ್ಯಮದವರು ನನ್ನ ಮದುವೆ ಡೇಟ್ ಅನೌನ್ಸ್ ಮಾಡುವ ಮುನ್ನ ನಾನೇ ಆ ಭ್ರಮೆಯನ್ನು ಹೊಡೆದುಹಾಕುತ್ತೇನೆ. ಎಲ್ಲ ವದಂತಿಗಳು ಆಧಾರರಹಿತವಾಗಿವೆ ಎಂದು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೃತಿ ಸನೋನ್ ಬರೆದುಕೊಂಡಿದ್ದಾರೆ.

    ಇತ್ತೀಚೆಗೆ ಕಾರ್ಯವೊಂದರಲ್ಲಿ ಬಾಲಿವುಡ್ ನಟ ವರುಣ್ ಅವರು ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಕೃತಿ ಸನೂನ್ ಕೂಡ ಇದ್ದರು. ಕರಣ್ ಜೋಹರ್ ಕೇಳಿದ ಒಂದು ಪ್ರಶ್ನೆಗೆ ಉತ್ತರಿಸುವಾಗ ನಾಯಕಿಯರ ಪಟ್ಟಿ ಮಾಡಿದ ವರುಣ್ ಧವನ್ ಅವರು ಕೃತಿ ಹೆಸರನ್ನು ಕೈ ಬಿಟ್ಟಿದ್ದರು. ಯಾಕೆ ಎಂದು ಪ್ರಶ್ನಿಸಿದಾಗ ವರುಣ್ ಧವನ್ ಹೊಸ ವಿಷಯ ಬಾಯ್ಬಿಟ್ಟಿದ್ದರು. ಇದನ್ನೂ ಓದಿ: ಖ್ಯಾತ ಫ್ಯಾಷನ್ ಡಿಸೈನರ್ ಪುತ್ರಿ ಜೊತೆ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ

    ಈ ಲಿಸ್ಟ್‌ನಲ್ಲಿ ಕೃತಿ ಹೆಸರು ಇಲ್ಲ. ಯಾಕೆಂದರೆ ಅವರ ಹೆಸರು ಬೇರೆ ವ್ಯಕ್ತಿಯ ಹೃದಯದಲ್ಲಿದೆ. ಅವರು ಈಗ ಮುಂಬೈನಲ್ಲಿ ಇಲ್ಲ. ಈಗ ದೀಪಿಕಾ ಪಡುಕೋಣೆ ಜೊತೆ ಶೂಟಿಂಗ್ ಮಾಡುತ್ತಿದ್ದಾರೆ ಎಂದು ವರುಣ್ ಧವನ್ ಹೇಳಿದ್ದ ವಿಡಿಯೋ ವೈರಲ್ ಆಗಿದೆ. `ಪ್ರಾಜೆಕ್ಟ್ ಕೆ’ ಚಿತ್ರಕ್ಕಾಗಿ ಪ್ರಭಾಸ್ ಅವರು ದೀಪಿಕಾ ಜೊತೆ ಶೂಟಿಂಗ್ ಮಾಡುತ್ತಿದ್ದಾರೆ. ಹಾಗಾಗಿ ವರುಣ್ ಹೇಳಿದ್ದು ಪ್ರಭಾಸ್ ಬಗ್ಗೆಯೇ ಎಂದು ಎಲ್ಲರೂ ಊಹಿಸುತ್ತಿದ್ದಾರೆ. ವದಂತಿ ಹೆಚ್ಚಾಗುವುದಕ್ಕೂ ಮುನ್ನವೇ ಕೃತಿ ಸನೂನ್ ಅವರು ಸ್ಪಷ್ಟನೆ ನೀಡಿ, ಎಲ್ಲಾ ವದಂತಿಗೂ ನಟಿ ಬ್ರೇಕ್ ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರಭಾಸ್ ಲವ್ ಲೈಫ್ ಬಗ್ಗೆ ಸುಳಿವು ಕೊಟ್ಟ ವರುಣ್ ಧವನ್

    ಪ್ರಭಾಸ್ ಲವ್ ಲೈಫ್ ಬಗ್ಗೆ ಸುಳಿವು ಕೊಟ್ಟ ವರುಣ್ ಧವನ್

    ಡಾರ್ಲಿಂಗ್ ಪ್ರಭಾಸ್ (Darling Prabhas) ಮದುವೆ ಯಾವಾಗ ಅನ್ನೋದು ಅಭಿಮಾನಿಗಳಿಗೆ ಕಾಡುತ್ತಿರುವ ಪ್ರಶ್ನೆ. 45ರ ಆಸುಪಾಸಿನಲ್ಲಿ ಪ್ರಭಾಸ್ ಮದುವೆ ನೋಡಲು ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ. ಹೀಗಿರುವಾಗ ಪ್ರಭಾಸ್ ಲವ್ ಲೈಫ್ ಬಗ್ಗೆ ವರುಣ್ ಧವನ್ (Varun Dhawan) ಸುಳಿವು ನೀಡಿದ್ದಾರೆ.

    ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್, ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇಷ್ಟು ಬ್ಯುಸಿ ಶೆಡ್ಯೂಲ್ ನಡುವೆ ಮದುವೆಗೆ ಗ್ರೀನ್ ಸಿಗ್ನಲ್ ಕೊಡುತ್ತಾರಾ ಎಂಬುದು ಅಭಿಮಾನಿಗಳಲ್ಲಿ ಅನುಮಾನ ಉಂಟಾಗಿದೆ. ಇದರ ಮಧ್ಯೆ ಬಾಲಿವುಡ್ ನಟ ವರುಣ್ ಡಾರ್ಲಿಂಗ್ ಪ್ರಭಾಸ್ ಲವ್ ಲೈಫ್ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಮತ್ತೆ ಕನ್ನಡಕ್ಕೆ ಬರಲಿದ್ದಾರೆ ಶಿಲ್ಪಾ ಶೆಟ್ಟಿ: ʻಕೆಡಿ’ಯಲ್ಲಿ ಲೇಡಿ ಪವರ್

    ಇತ್ತೀಚೆಗೆ ಪ್ರಭಾಸ್ ಲವ್‌ನಲ್ಲಿ ಬಿದ್ದಿರೋ ಬಗ್ಗೆ ಗಾಳಿಸುದ್ದಿ ಹರಿದಾಡುತ್ತಿತ್ತು. ಆದಿಪುರುಷ್ ಸಿನಿಮಾದ ನಟಿ ಕೃತಿ (Kriti Sanon) ಮೇಲೆ ಪ್ರಭಾಸ್‌ಗೆ ಲೈಟ್ ಆಗಿ ಲವ್ ಆಗಿದೆ ಅನ್ನೋ ಸುದ್ದಿ ಹರಿದಾಡಿತ್ತು. ಇದೇ ವೇಳೆ ನಟ ವರುಣ್ ಧವನ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಲವ್ ಲೈಫ್ ಬಗ್ಗೆ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.

    ಪ್ರಭಾಸ್ ಲವ್ ಲೈಫ್ ಮೇಲೆ ಎಲ್ಲರಿಗೂ ಕಣ್ಣು. ಈ ಮಧ್ಯೆ ಪ್ರಭಾಸ್ ಜೊತೆ ಬಾಲಿವುಡ್ ನಟಿ ಕೃತಿ ಸನೂನ್ ಹೆಸರು ಕೂಡ ತಳುಕು ಹಾಕೊಂಡಿದೆ. ಈಗ ಬಾಲಿವುಡ್ ಸ್ಟಾರ್ ವರುಣ್ ಧವನ್ ಕೂಡ ಪ್ರಭಾಸ್ ಲವ್ ಲೈಫ್ ಬಗ್ಗೆ ಸುಳಿವು ನೀಡಿದ್ದಾರೆ. ಪ್ರಭಾಸ್ ಲೈಫ್‌ನಲ್ಲಿ ಒಬ್ಬ ಡಾರ್ಲಿಂಗ್ ಇದ್ದಾಳೆ. ಅವಳು ಇದಕ್ಕಿಂತ ಖುಷಿಯಾಗಿರಲು ಸಾಧ್ಯವೇ ಇಲ್ಲ ಎಂದು ನಟ ವರುಣ್ ಧವನ್ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ಪ್ರಭಾಸ್‌, ಕೃತಿ ಲವ್‌ ಮ್ಯಾಟರ್‌ ನಿಜಾನಾ, ಪ್ರಭಾಸ್‌ಗೆ ಮದುವೆ ಆಲೋಚನೆ ಇದ್ಯಾ ಈ ಎಲ್ಲಾ ಉತ್ತರಕ್ಕೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್‌ ಬಾಸ್‌ ವೇದಿಕೆಯಲ್ಲಿ ಸಿಹಿ ಸುದ್ದಿ ಕೊಟ್ರು ವರುಣ್‌ ಧವನ್‌

    ಬಿಗ್‌ ಬಾಸ್‌ ವೇದಿಕೆಯಲ್ಲಿ ಸಿಹಿ ಸುದ್ದಿ ಕೊಟ್ರು ವರುಣ್‌ ಧವನ್‌

    ಬಾಲಿವುಡ್‌ನಲ್ಲಿ(Bollywood) ಸದ್ಯ ಆಲಿಯಾ ಭಟ್, ಬಿಪಾಶಾ ಬಸು ದಂಪತಿಯ ನಂತರ ವರುಣ್ ಧವನ್ (Varun Dhawan) ಕೂಡ ಗುಡ್ ನ್ಯೂಸ್ ಕೊಡಲಿದ್ದಾರಾ ಎಂಬ ಸುದ್ದಿ ಸಖತ್ ಟಾಕ್ ಆಗುತ್ತಿದೆ. ಇತ್ತೀಚೆಗೆ ಬಿಗ್ ಬಾಸ್ ವೇದಿಕೆಯಲ್ಲಿ ವರುಣ್ ದಂಪತಿ ಪೋಷಕರಾಗುತ್ತಿರುವ ಬಗ್ಗೆ ಸಲ್ಮಾನ್ ಖಾನ್(Salman Khan) ಹಿಂಟ್ ಕೊಟ್ಟಿದ್ದಾರೆ.

    ಬಿಟೌನ್ ಸ್ಟಾರ್ ವರುಣ್ ಧವನ್, ಕೃತಿ ಸನೂನ್ ನಟನೆಯ `ಭೇದಿಯ’ (Bhediya) ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಪ್ರಮೋಷನ್‌ಗಾಗಿ ಹಿಂದಿ ಬಿಗ್ ಬಾಸ್‌ಗೆ ಈ ಜೋಡಿ ಕಾಲಿಟ್ಟಿದೆ. ಸಲ್ಮಾನ್ ಖಾನ್ ಜೊತೆ ಮಸ್ತ್ ಆಗಿ, ಚಿತ್ರದ ಪ್ರಚಾರ ಮಾಡಿದ್ದಾರೆ. ಈ ವೇಳೆ ಸಲ್ಮಾನ್ ಖಾನ್ ವರುಣ್ ಧವನ್ ತಂದೆಯಾಗುತ್ತಿರುವುದರ ಬಗ್ಗೆ ಸುಳಿವು ನೀಡಿದ್ದಾರೆ. ಇದನ್ನೂ ಓದಿ:80ರ ದಶಕದ ನಟ-ನಟಿಯರ ಪುನರ್ಮಿಲನ

    ವೇದಿಕೆಯಲ್ಲಿ ಆಟಿಕೆ ಹಿಡಿದು ಆಡುವಾಗ ವರುಣ್‌ಗೆ ನೀಡಿ, ನಿಮ್ಮ ಮಗುವಿಗಾಗಿ ಎಂದು ಸಲ್ಲು ವರುಣ್ ಕಾಲೆಳೆದಿದ್ದಾರೆ. ಮಗು ಇನ್ನೂ ಮಗು ಆಗಿಲ್ಲ ಎಂದು ವರುಣ್ ಉತ್ತರಿಸಿದ್ದಾರೆ. ಆಟಿಕೆ ತೋರಿಸಿ, ಇದು ಬಂದಿದೆ ಅಂದ್ರೆ, ಮಗು ಕೂಡ ಬರುತ್ತೆ ಎಂದು ತಮಾಷೆ ಮಾಡಿದ್ದಾರೆ. ವರುಣ್ ಕೂಡ ನಕ್ಕಿದ್ದಾರೆ. ಈ ಸಂಭಾಷನೆ ನೋಡಿರುವ ಫ್ಯಾನ್ಸ್ ಜ್ಯೂನಿಯರ್ ವರುಣ್ ಬರಲಿದ್ದಾರೆ ಎಂದು ಖುಷಿಪಟ್ಟಿದ್ದಾರೆ.

    ಅಷ್ಟಕ್ಕೂ ವರುಣ್ ದಂಪತಿ ಪೋಷಕರಾಗುತ್ತಿರುವ ವಿಚಾರ ನಿಜಾನಾ, ಸೂಕ್ತ ಸಮಯದಲ್ಲಿ ಅನೌನ್ಸ್ ಮಾಡಲಿದ್ದಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಅನುಷ್ಕಾಗೆ ಕೈಕೊಟ್ಟು ಬಾಲಿವುಡ್ ಬೆಡಗಿಗೆ ಮನಸ್ಸು ಕೊಟ್ಟ ಪ್ರಭಾಸ್

    ಅನುಷ್ಕಾಗೆ ಕೈಕೊಟ್ಟು ಬಾಲಿವುಡ್ ಬೆಡಗಿಗೆ ಮನಸ್ಸು ಕೊಟ್ಟ ಪ್ರಭಾಸ್

    ಟಾಲಿವುಡ್‌ನ `ಬಾಹುಬಲಿ’ (Bahubali) ಪ್ರಭಾಸ್ ಇದೀಗ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ತಮ್ಮ ವೈಯಕ್ತಿಕ ವಿಷ್ಯವಾಗಿ ಟಿಟೌನ್‌ನಲ್ಲಿ ಪ್ರಭಾಸ್(Prabhas) ಸದ್ದು ಮಾಡುತ್ತಿದ್ದಾರೆ. ಬಾಲಿವುಡ್ ಸ್ಟಾರ್ ನಟಿಯ ಜೊತೆ ಪ್ರಭಾಸ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.

    `ಬಾಹುಬಲಿ’ ಸೂಪರ್ ಸ್ಟಾರ್ ಪ್ರಭಾಸ್‌ಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ತಮ್ಮ ಡೇಟಿಂಗ್ ವಿಷ್ಯವಾಗಿ ಸೌಂಡ್ ಮಾಡುತ್ತಿದ್ದಾರೆ. ಈ ಹಿಂದೆ ಅನುಷ್ಕಾ ಶೆಟ್ಟಿ ಜೊತೆ ಪ್ರಭಾಸ್ ಹೆಸರು ಕೇಳಿ ಬಂದಿತ್ತು. ಆದರೆ ನಾವಿಬ್ಬರೂ ಫ್ರೆಂಡ್ಸ್ ಎಂದು ತಿಳಿಸಿ ಗಾಸಿಪ್‌ಗೆ ಫುಲ್ ಸ್ಟಾಪ್ ಇಟ್ಟಿದ್ದರು. ಇದೀಗ ಅನುಷ್ಕಾ ಬಳಿಕ ಬಾಲಿವುಡ್ ನಟಿ ಕೃತಿ ಸನೂನ್ (Kriti Sanon) ಜೊತೆ ಪ್ರಭಾಸ್ ಹೆಸರು ಕೇಳಿ ಬಂದಿದೆ.

    ಇತ್ತೀಚೆಗೆ ಬಾಲಿವುಡ್‌ನ ಜನಪ್ರಿಯ ಶೋ ಕಾಫಿ ವಿತ್ ಕರಣ್ (Coffe With Karan) ಕಾರ್ಯಕ್ರಮದಲ್ಲಿ ನಟಿ ಕೃತಿ ಭಾಗವಹಿಸಿದ್ದರು. ಈ ಶೋನಲ್ಲಿ ಸೆಲೆಬ್ರಿಟಿ ಫ್ರೆಂಢ್ಸ್‌ಗೆ ಕರೆಸುವ ನಿಯಮವಿದೆ. ಅದರಂತೆ ಕೃತಿ ಕೂಡ ಶೋನಲ್ಲಿ ಪ್ರಭಾಸ್‌ಗೆ ಕರೆ ಮಾಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ:ಯೂಟ್ಯೂಬ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಉಪ್ಪಿ- ಕಿಚ್ಚ ನಟನೆಯ ‘ಕಬ್ಜ’ ಟೀಸರ್

    ಪ್ರಭಾಸ್‌ಗೆ ಕಾಲ್ ಮಾಡಿ ಕರಣ್‌ಗೆ ಹಾಯ್ ಹೇಳುವಂತೆ ಹೇಳಿದ್ದಾರೆ. ಅದರಂತೆ ಪ್ರಭಾಸ್ ಕೂಡ ಮಾತನಾಡಿದ್ದಾರೆ. ನೀವು ಸೂಪರ್ ಆಮೇಲೆ ಕಾಲ್ ಮಾಡುತ್ತೇನೆ ಎಂದಿದ್ದಾರೆ. ಪ್ರಭಾಸ್ ಕೂಡ ಓಕೆ ಟೇಕ್ ಕೇರ್ ಬೈ ಎಂದಿದ್ದಾರೆ. ಶೋನಲ್ಲಿ ಇವರಿಬ್ಬರ ಬಾಂಧವ್ಯ ನೋಡಿ, ಇವರಿಬ್ಬರ ಡೇಟಿಂಗ್ ವಿಚಾರ ಸಖತ್ ಸದ್ದು ಮಾಡುತ್ತಿದೆ.

    ಇನ್ನೂ ಪ್ಯಾನ್ ಇಂಡಿಯಾ ಚಿತ್ರ `ಆದಿಪುರುಷ’ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರ, ಕೃತಿ ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೂ ರೀಲ್‌ನಲ್ಲಿ ಈ ಜೋಡಿಯ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇನ್ಸ್ಟಾಗ್ರಾಂ ಖಾತೆಯಲ್ಲಿ ಕೃತಿ ಸನೂನ್‌ಗೆ 50 ಮಿಲಿಯನ್ ಫಾಲೋವರ್ಸ್

    ಇನ್ಸ್ಟಾಗ್ರಾಂ ಖಾತೆಯಲ್ಲಿ ಕೃತಿ ಸನೂನ್‌ಗೆ 50 ಮಿಲಿಯನ್ ಫಾಲೋವರ್ಸ್

    ಕ್ಷಿಣದ ಸಿನಿಮಾ ಮತ್ತು ಬಾಲಿವುಡ್ ಚಿತ್ರಗಳ ಮೂಲಕ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ನಟಿ ಕೃತಿ ಸನೂನ್ ಕೈಯಲ್ಲಿ ಸದ್ಯ ಡಜನ್‌ಗಟ್ಟಲೇ ಸಿನಿಮಾಗಳಿವೆ. ಈಗ ತಮ್ಮ ಸಾಮಾಜಿಕ ಜಾಲತಾಣ ಖಾತೆಯ ಫಾಲೋವರ್ಸ್ ವಿಚಾರವಾಗಿ ಸಖತ್ ಸದ್ದು ಮಾಡ್ತಿದ್ದಾರೆ.

    ಕಳೆದ ವರ್ಷ `ಮಿಮಿ’ ಚಿತ್ರದ ಮೂಲಕ ಪರಮ ಸುಂದರಿಯಾಗಿ ಪಡ್ಡೆಹುಡುಗರ ನಿದ್ದೆಗೆಡಿಸಿದ್ದ ಚೆಲುವೆ ಕೃತಿ ಸನೂನ್‌ಗೆ ಅಪಾರ ಅಭಿಮಾನಿಗಳ ಬಳಗವೇ ಇದೆ. ಇದಕ್ಕೆ ಪೂರಕವೆಂಬಂತೆ ಕೃತಿ ಇನ್ಸ್ಟಾಗ್ರಾಂ  ಖಾತೆಯಲ್ಲಿ 5 ಕೋಟಿ (50 ಮಿಲಿಯನ್) ಫಾಲೋವರ್ಸ್ ಹೊಂದಿದ್ದಾರೆ. ಅಭಿಮಾನಿಗಳ ಜತೆ ಕೇಕ್ ಕಟ್ ಮಾಡಿ ಖುಷಿಪಟ್ಟಿದ್ದಾರೆ. ಇನ್ನು ಫ್ಯಾನ್ಸ್‌ಗೆ ವಿಶೇಷವಾಗಿ ವಿಡಿಯೋ ಮೂಲಕ ಕೃತಿ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ:ಈ ಹಿಂದೆ ನಾಗಚೈತನ್ಯ ಬಾಲಿವುಡ್ ಚಿತ್ರಗಳಿಗೆ ನೋ ಅಂದಿದ್ಯಾಕೆ?

     

    View this post on Instagram

     

    A post shared by Kriti (@kritisanon)

    ಕೃತಿ ನಟನೆಯ `ಗಣಪತ್’, ಬಾಹುಬಲಿ ಪ್ರಭಾಸ್ ಜತೆ `ಆದಿಪುರುಷ್’, ವರುಣ್ ಧವನ್ ಜತೆ `ಬೇಡಿಯಾ’, ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾಯಕರಷ್ಟೇ ನಮಗೂ ಸಮಾನ ಅವಕಾಶ ಬೇಕು: ಕೃತಿ ಸನೋನ್

    ನಾಯಕರಷ್ಟೇ ನಮಗೂ ಸಮಾನ ಅವಕಾಶ ಬೇಕು: ಕೃತಿ ಸನೋನ್

    ಮುಂಬೈ: ಸಿನಿಮಾ ರಂಗದಲ್ಲಿ ಮಹಿಳಾ ಪಾತ್ರಗಳಿಗಿಂತ ಪುರುಷ ಪಾತ್ರಗಳೇ ತೆರೆಯ ಮೇಲೆ ಹೆಚ್ಚು ಕಾಣಿಸಿಕೊಳ್ಳುತ್ತವೆ. ನಾಯಕಿಯರಿಗೆ ಹೆಚ್ಚು ಪ್ರಾಶಸ್ತ್ಯ ಇರುವುದಿಲ್ಲ. ಸಿಕ್ಕಿರುವ ಕಡಿಮೆ ಅವಧಿಯಲ್ಲೇ ನಮ್ಮ ಪ್ರತಿಭೆಯನ್ನು ತೋರಿಸುವಂತಹ ಅನಿವಾರ್ಯತೆ ಇರುತ್ತದೆ. ನನಗೆ ಈವರೆಗೂ ಸಿಕ್ಕಿರುವ ಪಾತ್ರಗಳು ಅಂಥದ್ದೇ ಆಗಿವೆ. ಅದರಲ್ಲಿಯೇ ನಾನು ತೃಪ್ತಿ ಪಟ್ಟಿದ್ದೇನೆ ಎಂದಿದ್ದಾರೆ ‘ಬಚ್ಚನ್ ಪಾಂಡೆ’ ಚಿತ್ರದ ನಾಯಕಿ ಕೃತಿ ಸನೋನ್.

     

    View this post on Instagram

     

    A post shared by Kriti (@kritisanon)

    ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, “ಯಾವುದೇ ಸಿನಿಮಾ ರಂಗದಲ್ಲಿ ನಾಯಕ ಮತ್ತು ನಾಯಕಿಗೆ ಸಮಾನವಾಗಿ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳಲು ಅವಕಾಶ ಸಿಗುವುದು ಕಡಿಮೆ. ಕಥೆಯಲ್ಲಿ ಮಹಿಳೆಗೆ ಹೆಚ್ಚಿನ ಮಹತ್ವವಿದ್ದು ಪುರುಷನಿಗೆ ಕಡಿಮೆ ಇದ್ದರೆ, ಯಾವ ನಟನೂ ಅಂತಹ ಪಾತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಈ ಮನಸ್ಥಿತಿ ಚಿತ್ರರಂಗದಲ್ಲಿ ಬದಲಾಗಬೇಕು ಎಂದು ನಾನು ಬಯಸುತ್ತೇನೆ. ಕೆಲವರು ಇದಕ್ಕೆ ಅಪವಾದವಾಗಿಯೂ ಇರುತ್ತಾರೆ. ‘ಅತ್ರಂಗಿ ರೇ’ ಚಿತ್ರದಲ್ಲಿ ಹೆಸರಾಂತ ಸ್ಟಾರ್ ನಟ ಅಕ್ಷಯ್ ಕುಮಾರ್ ಅವರದ್ದು ಸಣ್ಣ ಪಾತ್ರ. ಆದರೂ, ಅದನ್ನು ಒಪ್ಪಿಕೊಂಡು ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿದರು. ಅದು ಅವರ ವೃತ್ತಿ ಪರತೆಯನ್ನು ತೋರಿಸುತ್ತದೆ. ಹೀಗೆ ಕಲಾವಿದರು ಎಂತಹ ಪಾತ್ರ ಸಿಕ್ಕರೂ ಮಾಡಬೇಕು’ ಎಂದಿದ್ದಾರೆ ಕೃತಿ. ಇದನ್ನೂ ಓದಿ: ಮಿಸ್ ವರ್ಲ್ಡ್ 2021: ಭಾರತೀಯ ಮೂಲದ ಶ್ರೀಸೈನಿ ರನ್ನರ್ ಅಪ್, ಕರೋಲಿನಾ ಬಿಲಾವ್ಸ್ಕಾಗೆ ‘ವಿಶ್ವ ಸುಂದರಿ’ ಕಿರೀಟ

    ಮುಂದುವರೆದು ಮಾತನಾಡಿರುವ ಕೃತಿ, “‘ಬರೇಲಿ ಕಿ ಬರ್ಫಿ’ ಚಿತ್ರದ ನಂತರ ನಾನು ಅನೇಕ ಕಥೆಗಳನ್ನು ಕೇಳಿದೆ. ನನ್ನ ಬಳಿ ಬಂದ ಸಿನಿಮಾಗಳಲ್ಲಿ ಶೇ.99ರಷ್ಟು ಸಿನಿಮಾಗಳಲ್ಲಿ ನನ್ನದು ಸಣ್ಣ ಪಾತ್ರವೇ ಆಗಿರುತ್ತಿತ್ತು. ಕೆಲವನ್ನು ಒಪ್ಪಿದೆ, ಕೆಲವನ್ನು ಬಿಟ್ಟೆ. ಮಾಡಿದ ಪಾತ್ರಗಳಿಂದಾಗಿ ಈಗ ಜನರು ನನ್ನನ್ನು ಗುರುತಿಸುತ್ತಿದ್ದಾರೆ. ಅದು ನನಗೆ ಖುಷಿ ತಂದಿದೆ” ಎಂದಿದ್ದಾರೆ.

     

    View this post on Instagram

     

    A post shared by Kriti (@kritisanon)

    ಕಳೆದ ವರ್ಷ ಕೃತಿ ಅವರ ‘ಹಮ್ ದೋ ಹಮಾರೆ ದೋ’ ಮತ್ತು ‘ಮಿಮಿ’ ಚಿತ್ರಗಳು ತೆರೆಕಂಡಿವೆ. ಅವರಿಗೆ ಸಾಕಷ್ಟು ಹೆಸರೂ ತಂದುಕೊಟ್ಟಿವೆ. ಎರಡೂ ಚಿತ್ರಗಳನ್ನು ಪ್ರೇಕ್ಷಕರು ಮೆಚ್ಚಿದ್ದಾರೆ. ‘ಮಿಮಿ’ಯಲ್ಲಿ ಕೃತಿ ನಾಯಕಿ ಆಗಿದ್ದರು. ಇದನ್ನೂ ಓದಿ: ಜೇಮ್ಸ್ ಸಿನಿಮಾ ನೋಡೋಕೆ 10 ಅಲ್ಲ, 100 ಕಾರಣ

    ಕೃತಿ ಸನೋನ್ ಅಭಿನಯದ ‘ಬಚ್ಚನ್ ಪಾಂಡೆ’ ಸಿನಿಮಾ ಇದೇ ಮಾ.18 ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಅವರು ಅಕ್ಷಯ್ ಕುಮಾರ್ ಜತೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ‘ಬಚ್ಚನ್ ಪಾಂಡೆ’ ಹೊರತಾಗಿ, ಕೃತಿ ಹಲವಾರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಪ್ರಭಾಸ್ ಮತ್ತು ಸೈಫ್ ಅಲಿಖಾನ್ ಅಭಿನಯದ ‘ಆದಿಪುರುಷ’, ವರುಣ್ ಧವನ್ ಜೊತೆ ಹಾರರ್-ಕಾಮಿಡಿ ‘ಭೇದಿಯಾ’ ಮತ್ತು ಟೈಗರ್ ಶ್ರಾಫ್ ಜೊತೆಗಿನ ‘ಗಣಪತ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಕೃತಿ ಚಲನಚಿತ್ರ ಹಿನ್ನೆಲೆಯಿಂದ ಬಂದವರಲ್ಲ ಮತ್ತು 2014 ರಲ್ಲಿ ಟೈಗರ್ ಶ್ರಾಫ್ ಜೊತೆಗಿನ ‘ಹೀರೋಪಂತಿ’ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದರು.

  • ಅಮಿತಾಬ್ ಬಚ್ಚನ್ ಬಂಗಲೆಗೆ ತಿಂಗಳಿಗೆ 10 ಲಕ್ಷ ಬಾಡಿಗೆ ನೀಡ್ತಾರಂತೆ ಈ ನಟಿ

    ಅಮಿತಾಬ್ ಬಚ್ಚನ್ ಬಂಗಲೆಗೆ ತಿಂಗಳಿಗೆ 10 ಲಕ್ಷ ಬಾಡಿಗೆ ನೀಡ್ತಾರಂತೆ ಈ ನಟಿ

    ಮುಂಬೈ: ಬಾಲಿವುಡ್ ಜನಪ್ರಿಯ ನಟ ಅಮಿತಾಬ್ ಬಚ್ಚನ್ ಅವರ ಬಂಗಲೆಯನ್ನು ನಟಿ ಕೃತಿ ಸನೊನ್ ಬಾಡಿಗೆಗೆ ಖರೀದಿಸಿದ್ದಾರಂತೆ. ಇನ್ಮುಂದೆ ನಟಿ ಕೃತಿ ಅದೇ ಬಂಗಲೆಯಲ್ಲಿ ವಾಸ ಮಾಡ್ತಾರಂತೆ.

    ಹೌದು, ಮುಂಬೈನಲ್ಲಿರುವ ಅಂಧೇರಿ ಬಂಗಲೆಯನ್ನು ಕೃತಿ ಸನೊನ್ ವಾಸ ಮಾಡಲು ಖರೀದಿಸಿದ್ದಾರೆ. ಈ ಬಂಗಲೆ ಅಮಿತಾಬ್ ಬಚ್ಚನ್ ಅವರ ಮಾಲೀಕತ್ವದ್ದಾಗಿದೆ. ಇದನ್ನೂ ಓದಿ: ಇಸ್ರೇಲ್ ಮಾಜಿ ಅಧ್ಯಕ್ಷನಿಗೆ ಭಗವದ್ಗೀತೆ ಗಿಫ್ಟ್ ಕೊಟ್ಟ ಐರಾವತ ನಟಿ

    ‘ಮನಿ ಕಂಟ್ರೋಲ್’ ವರದಿ ಪ್ರಕಾರ, ನಟಿ ಕೃತಿ ಸನೊನ್ 2 ವರ್ಷದ ಅವಧಿಗೆ ಬಂಗಲೆಯನ್ನು ಬಾಡಿಗೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಆ ಬಂಗಲೆಗೆ ಪ್ರತಿ ತಿಂಗಳು 10 ಲಕ್ಷ ರೂ. ಕಟ್ತಾರಂತೆ.

    2021ರ ಅಕ್ಟೋಬರ್ 16ರಿಂದ 2023ರ ಅಕ್ಟೋಬರ್ 15ರವರೆಗೆ ಅಂದರೆ 2 ವರ್ಷದ ಅವಧಿಗೆ ಬಾಡಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಬಂಗಲೆಯನ್ನು ಬಾಡಿಗೆಗೆ ಪಡೆದಿರುವುದಕ್ಕೆ ನಟಿ 60 ಲಕ್ಷ ರೂ. ಭದ್ರತಾ ಠೇವಣಿ ಕೂಡ ನೀಡಿದ್ದಾರೆ.

    ಪಶ್ಚಿಮ ಅಂಧೇರಿಯ ಲೋಖಂಡವಾಲಾ ರಸ್ತೆಯಲ್ಲಿನ ಅಟ್ಲಾಂಟಿಸ್ ಕಟ್ಟಡದ 27 ಮತ್ತು 28ನೇ ಮಹಡಿಯಲ್ಲಿ ಈ ಬಂಗಲೆ ಇದೆ. ನಾಲ್ಕು ಕಾರು ಪಾರ್ಕಿಂಗ್ ಮಾಡುವ ವ್ಯವಸ್ಥೆ ಕೂಡ ಇದೆ. ಇದನ್ನೂ ಓದಿ: ಬಿಡ್ಡನ ಅಡ್ಡಾದಲ್ಲಿ ಕಾಣಿಸಿಕೊಂಡ ವಾರ್ನರ್: ನೀನು ಚೆನ್ನಾಗಿದ್ದೀಯಾ ತಾನೇ ಎಂದು ಕಾಲೆಳೆದ ಕೊಹ್ಲಿ

    ಅಮಿತಾಬ್ ಮತ್ತು ಅಭಿಷೇಕ್ ಬಚ್ಚನ್ ಅವರು ಜುಹುವಿನಲ್ಲಿ ಮತ್ತೊಂದು ಕಟ್ಟಡವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಬಾಡಿಗೆಗೆ ನೀಡಿದ್ದಾರಂತೆ.

    ಸದ್ಯ ಅಮಿತಾಬ್ ಅವರು ಜಲ್ಸಾ ಹೆಸರಿನ ಜುಹು ನಿವಾಸದಲ್ಲಿ ವಾಸವಾಗಿದ್ದಾರೆ. ಈ ಮನೆಯನ್ನು ನಿರ್ಮಾಪಕ ಎನ್.ಸಿ.ಸಿಪ್ಪಿ ಅವರಿಂದ ಅಮಿತಾಬ್ ಖರೀದಿಸಿದ್ದರು.

  • ಆದಿಪುರುಷನಿಗೆ ಸೀತೆಯಾದ ಕ್ಯೂಟ್ ಬ್ಯೂಟಿ ಕೃತಿ ಸನನ್

    ಆದಿಪುರುಷನಿಗೆ ಸೀತೆಯಾದ ಕ್ಯೂಟ್ ಬ್ಯೂಟಿ ಕೃತಿ ಸನನ್

    ಮುಂಬೈ: ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಆದಿಪುರುಷ ಸಿನಿಮಾಗೆ ಸೀತೆಯಾಗಿ ಬಾಲಿವುಡ್ ಕ್ಯೂಟ್ ಬ್ಯೂಟಿ ಕೃತಿ ಸನನ್ ಅವರು ಆಯ್ಕೆಯಾಗಿದ್ದಾರೆ ಎಂದು ಹೇಳಲಾಗಿದೆ.

    ಬಾಹುಬಲಿ ಮತ್ತು ಸಾಹೋ ನಂತರ ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ಈಗಾಗಲೇ ಪ್ರಭಾಸ್ ಮತ್ತು ಕನ್ನಡತಿ ಪೂಜಾ ಹೆಗ್ಡೆ ಅಭಿನಯದ ರಾಧೆ ಶಾಮ್ ಮೂವಿ ಶೂಟಿಂಗ್ ನಡೆಯುತ್ತಿದೆ. ಇದರ ಜೊತೆಗೆ ಪ್ರಭಾಸ್ ಆದಿಪುರುಷ ಸಿನಿಮಾದ ತಯಾರಿ ಮಾಡುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಮಾಹಿತಿಯೊಂದು ಹೊರ ಬಿದ್ದಿದ್ದು, ಸೀತೆಯ ಪಾತ್ರದಲ್ಲಿ ಕೃತಿ ಸನನ್ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ.

    ಕೆಲ ತಿಂಗಳ ಹಿಂದೆ ಈ ಸಿನಿಮಾದಲ್ಲಿ ನಾಯಕನಾಗಿ ಪ್ರಭಾಸ್ ಮತ್ತು ಖಳನಾಯಕನಾಗಿ ಸೈಫ್ ಅಲಿಖಾನ್ ಕಾಣಿಸಿಕೊಳ್ಳಿದ್ದಾರೆ ಎಂದು ಪೋಸ್ಟರ್ ಮೂಲಕ ಘೋಷಣೆ ಮಾಡಲಾಗಿತ್ತು. ಇದಾದ ಬಳಿಕ ಈ ಸಿನಿಮಾದಲ್ಲಿ ನಾಯಕಿಯ ಪಾತ್ರಕ್ಕೆ ಬಾಹುಬಲಿಯ ದೇವಸೇನಾ ಅನುಷ್ಕಾ ಶೆಟ್ಟಿ, ಕಿಯಾರ ಅದ್ವಾನಿ, ದೀಪಿಕಾ ಪಡುಕೋಣೆ ಮತ್ತು ಕೀರ್ತಿ ಸುರೇಶ್ ಅವರ ಹೆಸರು ಕೇಳಿ ಬಂದಿತ್ತು. ಆದರೆ ಕೊನೆಯದಾಗಿ ಕೃತಿ ಸನನ್ ಅವರು ಸೀತೆಯ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ.

    ಬಾಹುಬಲಿ ಮತ್ತು ಸಹೋ ಸಿನಿಮಾ ಮಾಡಿ ಗೆದ್ದು ಬೀಗಿರುವ ಪ್ರಭಾಸ್ ಅವರ ಮೇಲೆ ಹೆಚ್ಚಿನ ನೀರಿಕ್ಷೆಯಿದ್ದು, ಅವರ ಮುಂದಿನ ಮೂವಿಗೆ ವಿಶ್ವದ್ಯಾಂತ ಯಂಗ್ ರೆಬೆಲ್ ಸ್ಟಾರ್ ಅಭಿಮಾನಿಗಳು ಕಾಯುತ್ತಿದ್ದಾರೆ. ಆದಿಪುರುಷನ ಬಿಡುಗಡೆಯ ದಿನಾಂಕ ಕೂಡ ಈಗಾಗಲೇ ಘೋಷಣೆಯಾಗಿದ್ದು, 2022ರ ಆಗಸ್ಟ್ 11ಕ್ಕೆ ಬಿಡುಗಡೆಯಾಗಲಿದೆ. ಪ್ರಭಾಸ್ ಅವರ ಈ ಸಿನಿಮಾ ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ನಿರ್ಮಾಣವಾಗಲಿದೆ.

    ಈ ಸಿನಿಮಾ ರಾಮಯಾಣದ ಕಥಾ ಹಂದರವನ್ನು ಹೊಂದಿದ್ದು, ಇದಕ್ಕೆ ಅದಿಪುರುಷ ಎಂದು ಹೆಸರಿಡಲಾಗಿದೆ. ಈ ಸಿನಿಮಾದಲ್ಲಿ ರಾಮನಾಗಿ ಪ್ರಭಾಸ್ ಕಾಣಿಸಿಕೊಳ್ಳಿದ್ದು, ಅವರಿಗೆ ನಾಯಕಿಯಾಗಿ ಮೊದಲ ಬಾರಿಗೆ ಕೃತಿ ಸನನ್ ಅವರು ಅಭಿನಯಿಸಲಿದ್ದಾರೆ. ಸಿನಿಮಾದ ಇನ್ನೊಂದು ಪ್ರಮುಖ ಅಂಶವೆಂದರೆ ಮೊದಲ ಬಾರಿಗೆ ಬಾಲಿವುಡ್‍ನ ಸ್ಟಾರ್ ನಟ ಸೈಫ್ ಅಲಿಖಾನ್ ನೆಗೆಟಿವ್ ರೋಲ್ ಅಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಓಂ ರಾವತ್ ಅವರು ನಿರ್ದೇಶನ ಮಾಡುತ್ತಿದ್ದಾರೆ.