Tag: kriti sanon

  • ತಿರುಪತಿ ದೇವಸ್ಥಾನದಲ್ಲಿ ನಟಿ ಕೃತಿಗೆ ನಿರ್ದೇಶಕ ಕಿಸ್: ರೂಮ್ ಬುಕ್ ಮಾಡ್ಕೊಳ್ಳಿ ಎಂದ ಅರ್ಚಕ

    ತಿರುಪತಿ ದೇವಸ್ಥಾನದಲ್ಲಿ ನಟಿ ಕೃತಿಗೆ ನಿರ್ದೇಶಕ ಕಿಸ್: ರೂಮ್ ಬುಕ್ ಮಾಡ್ಕೊಳ್ಳಿ ಎಂದ ಅರ್ಚಕ

    ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಬಾಲಿವುಡ್ ನಟಿ ಕೃತಿ ಸನೋನ್ ಗೆ ನಿರ್ದೇಶಕ ಓಂ ರಾವತ್ ಕಿಸ್ ಕೊಟ್ಟ ಪ್ರಕರಣ ಭಾರೀ ಸಂಚಲನ ಸೃಷ್ಟಿ ಮಾಡಿದೆ. ಕಿಸ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ತಿಮ್ಮಪ್ಪನ ಭಕ್ತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತಿಮ್ಮಪ್ಪನ ಪ್ರಧಾನ ಅರ್ಚಕರು ಸಿಡಿಮಿಡಿಗೊಂಡಿದ್ದು, ಈ ರೀತಿ ಮಾಡಲು ಹೋಟೆಲ್ ರೂಮ್ ಬುಕ್ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

    ದೇವರ ಸನ್ನಿಧಾನದಲ್ಲಿ ಹೇಗಿರಬೇಕು ಎನ್ನುವ ಕಾಮನ್ ಸೆನ್ಸ್ ಇಲ್ಲ ಅವರಿಗೆ. ದೇವಸ್ಥಾನಕ್ಕೆ ಬರುವವರು ಈ ರೀತಿ ನಡೆದುಕೊಳ್ಳಬಾರದು. ಈ ಘಟನೆ ಭಕ್ತರಿಗೆ ಅಪಾರ ನೋವನ್ನುಂಟು ಮಾಡಿದೆ. ಸಿನಿಮಾದವರು ಅಂದ ಮಾತ್ರಕ್ಕೆ ಏನೂ ಬೇಕಾದರೂ ಮಾಡಬಹುದಾ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

    ಮೊನ್ನೆಯಷ್ಟೇ ಪ್ರಭಾಸ್ (Prabhas) ನಟನೆಯ ಆದಿಪುರುಷ ಸಿನಿಮಾ ಪ್ರಿ ರಿಲೀಸ್ ಇವೆಂಟ್ ತಿರುಪತಿಯಲ್ಲಿ (Tirupati)  ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಿರ್ದೇಶಕ ಓಂ ರಾವತ್ (Om Rawat), ನಾಯಕಿ ಕೃತಿ ಸನೂನ್ ಸೇರಿದಂತೆ ಹಲವರು ತಿರುಪತಿಗೆ ಆಗಮಿಸಿದ್ದರು. ಈ ವೇಳೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೂ ಸಿನಿಮಾ ಟೀಮ್ ಬಂದಿತ್ತು. ಈ ಸಂದರ್ಭದಲ್ಲಿ ನಟಿ ಕೃತಿ ಸನೂನ್ (Kriti Sanoon) ಮತ್ತು ನಿರ್ದೇಶಕ ಓಂ ರಾವತ್ ನಡೆದುಕೊಂಡ ರೀತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

    ತಿಮ್ಮಪ್ಪನ (Thimmappa) ದರ್ಶನದ ನಂತರ ಕೃತಿ ಸನೂನ್ ಕಾರಿನತ್ತ ಬರುತ್ತಾರೆ. ಆಮೇಲೆ ಬೀಳ್ಕೊಡುವುದಕ್ಕಾಗಿ ಕಾರಿನಿಂದ ಸ್ವಲ್ಪವೇ ದೂರದಲ್ಲಿದ್ದ ನಿರ್ದೇಶಕ ಓಂ ರಾವತ್ ಹತ್ತಿರಕ್ಕೆ ಬರುತ್ತಾರೆ. ಆಗ ಕೃತಿ ಸನೂನ್ ನನ್ನು ತಬ್ಬಿಕೊಳ್ಳುವ ನಿರ್ದೇಶಕ ಓಂ, ನಟಿಗೆ ಮುತ್ತಿಟ್ಟು (Kiss) ಬೀಳ್ಕೊಡುತ್ತಾರೆ. ದೇವಸ್ಥಾನದ ಆವರಣದಲ್ಲಿ ಈ ಘಟನೆ ನಡೆದದ್ದು, ವಿಡಿಯೋ ವೈರಲ್ ಆಗಿದೆ. ಇದನ್ನು ಕಂಡ ತಿಮ್ಮಪ್ಪನ ಭಕ್ತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ದೇವಸ್ಥಾನದ ಆವರಣದಲ್ಲಿ ಹೇಗೆ ನಡೆದುಕೊಳ್ಳಬೇಕು, ಹೇಗೆ ನಡೆದುಕೊಳ್ಳಬಾರದು ಎನ್ನುವ ಅರಿವು ಇರಬೇಕು. ಅಂಥವರು ಮಾತ್ರ ದೇವಸ್ಥಾನಕ್ಕೆ ಬರಬೇಕು ಎಂದು ಭಕ್ತರು ಕಾಮೆಂಟ್ ಮಾಡಿದ್ದಾರೆ. ಬಹಿರಂಗವಾಗಿ, ಅದರಲ್ಲೂ ದೇವಸ್ಥಾನದ ಆವರಣದಲ್ಲೇ ನಟಿಗೆ ಮುತ್ತಿಟ್ಟು ಬೀಳ್ಕೊಡುವುದು ಸರಿಯಾದ ಕ್ರಮವಲ್ಲ. ಇದಕ್ಕೆ ಇಬ್ಬರೂ ಕ್ಷಮೆ ಕೇಳಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.

     

    ಇದೊಂದು ಸ್ನೇಹಪೂರ್ವಕವಾದ ಕಿಸ್ ಆಗಿದ್ದರೂ, ಅದು ಸಹಜವಾಗಿದ್ದರೂ ಭಕ್ತರು ಅದನ್ನು ಹಾಗೆ ನೋಡಿಲ್ಲ. ಹಾಗಾಗಿ ವಿವಾದಕ್ಕೆ ಆ ವಿಡಿಯೋ ನಾಂದಿ ಹಾಡಿದೆ. ಅಂದಹಾಗೆ ನಿನ್ನೆ ಆದಿ ಪುರುಷ (Adi Purush) ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಅದ್ಧೂರಿಗಾಗಿ ತಿರುಪತಿಯಲ್ಲಿ ನಡೆದಿದೆ. ಲಕ್ಷಾಂತರ ಅಭಿಮಾನಿಗಳು ಈ ಕಾರ್ಯಕ್ರವನ್ನು ಕಣ್ತುಂಬಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ.

  • ‘ಆದಿಪುರುಷ್’ ಸಿನಿಮಾ ರಿಲೀಸ್‌ಗೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಭಾಸ್

    ‘ಆದಿಪುರುಷ್’ ಸಿನಿಮಾ ರಿಲೀಸ್‌ಗೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಭಾಸ್

    ಬಾಹುಬಲಿ ಪ್ರಭಾಸ್ (Prabhas) ಸದ್ಯ ಬಹುನಿರೀಕ್ಷಿತ ‘ಆದಿಪುರುಷ್’ (Adipurush) ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ತೆರೆಗೆ ಬರುವ ಮುನ್ನ ಪ್ರಭಾಸ್ ತಿರುಪತಿ ತಿಮ್ಮಪ್ಪನ (Tirupati) ದರ್ಶನ ಪಡೆದಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ನಟ ಪ್ರಭಾಸ್, ಕೃತಿ ಸನೋನ್ ನಟನೆಯ ‘ಆದಿಪುರುಷ್’ ಇದೇ ಜೂನ್ 16ಕ್ಕೆ ಬೆಳ್ಳಿಪರದೆಯಲ್ಲಿ ಅಬ್ಬರಿಸಲು ಸಿದ್ಧವಾಗಿದೆ. ಈಗಾಗಲೇ ಚಿತ್ರದ ಪೋಸ್ಟರ್, ಟ್ರೈಲರ್‌ನಿಂದ ಹವಾ ಕ್ರಿಯೇಟ್ ಮಾಡಿದೆ. ಚಿತ್ರದ ಹಾಡುಗಳು ಕೂಡ ಗಮನ ಸೆಳೆದಿದೆ. ಸಾಕಷ್ಟು ಟೀಕೆಗಳ ನಡುವೆ ಚಿತ್ರ ತೆರೆಗೆ ಸಜ್ಜಾಗಿದೆ.

    ಪ್ರಭಾಸ್ ಅವರು ‘ಬಾಹುಬಲಿ 2’ (Bahubali 2) ಸಿನಿಮಾ ನಂತರ ನಟಿಸಿದ ಯಾವ ಚಿತ್ರ ಕೂಡ ಸಕ್ಸಸ್ ಕಾಣಲಿಲ್ಲ. ಸಾಲು ಸಾಲು ಸಿನಿಮಾ ಸೋಲುಗಳನ್ನ ಕಂಡಿರುವ ನಟನಿಗೆ ಈಗ ಗೆಲುವಿನ ಅವಶ್ಯಕತೆಯಿದೆ. ಆದಿಪುರುಷ್ ಯಶಸ್ಸಿನ ಮೇಲೆ ಇಡೀ ಚಿತ್ರತಂಡ – ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದನ್ನೂ ಓದಿ:ಅಂಬಿ ಪುತ್ರನ ಮದುವೆ ಸಂಭ್ರಮದಲ್ಲಿ ಮಿಂಚಿದ ಯಶ್, ರಾಧಿಕಾ ಜೋಡಿ

    ಸದ್ಯ ‘ಆದಿಪುರುಷ್’ ಚಿತ್ರದ ಪ್ರೀ- ರಿಲೀಸ್ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ತಿರುಪತಿಯಲ್ಲಿ ಕಾರ್ಯಕ್ರಮ ಜರುಗಲು ವೇದಿಕೆ ಸಜ್ಜಾಗುತ್ತಿದೆ. ಜೂನ್ 6ರ ಸಂಜೆ ಪ್ರೀ ರಿಲೀಸ್ ಪ್ರೋಗ್ರಾಂ ನಡೆಯಲಿದೆ. ಈ ಮುನ್ನವೇ ನಟ ತಿರುಪತಿ ತಿಮ್ಮಪ್ಪನ ಸನ್ನಿಧಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

  • ‘ಆದಿಪುರುಷ್‌’ ಪೋಸ್ಟರ್‌ನಲ್ಲಿ ಮತ್ತೆ ಎಡವಟ್ಟು- ಚಿತ್ರತಂಡ ವಿರುದ್ಧ ಫ್ಯಾನ್ಸ್ ಗರಂ

    ‘ಆದಿಪುರುಷ್‌’ ಪೋಸ್ಟರ್‌ನಲ್ಲಿ ಮತ್ತೆ ಎಡವಟ್ಟು- ಚಿತ್ರತಂಡ ವಿರುದ್ಧ ಫ್ಯಾನ್ಸ್ ಗರಂ

    ಪ್ರಭಾಸ್, ಕೃತಿ ಸನೋನ್ (Kriti Sanon) ನಟನೆಯ ‘ಆದಿಪುರುಷ್’ ಸಿನಿಮಾ ಸದಾ ಒಂದಲ್ಲಾ ಒಂದು ಟೀಕೆಯ ಮೂಲಕ ಸದ್ದು ಮಾಡುತ್ತಲೇ ಇದೆ. ಪೋಸ್ಟರ್ ಅಥವಾ ಟ್ರೈಲರ್‌ನಲ್ಲಿ ಏನಾದರೂ ಎಡವಟ್ಟು ಮಾಡಿಕೊಳ್ಳುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಆದಿಪುರುಷ್ ಟೀಂ ಗುರಿಯಾಗುತ್ತಲೇ ಬಂದಿದೆ. ಪ್ರಸ್ತುತ ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ಚಿತ್ರತಂಡ ಮತ್ತೆ ಎಡವಟ್ಟ ಮಾಡಕೊಂಡಿದ್ದಾರೆ. ಇದನ್ನೂ ಓದಿ:ನಟನೆಗೆ ಗುಡ್ ಬೈ ಹೇಳ್ತಾರಾ ರಜನಿಕಾಂತ್?

    ‘ಬಾಹುಬಲಿ’ (Bahubali) ಪ್ರಭಾಸ್ ಈ ಚಿತ್ರದಲ್ಲಿ ಇರುವ ಕಾರಣ, ಆದಿಪುರುಷ್ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆಯನ್ನ ಅಭಿಮಾನಿಗಳು ಹೊಂದಿದ್ದಾರೆ. ಓಂ ರಾವತ್ ನಿರ್ದೇಶನದಲ್ಲಿ ‘ಆದಿಪುರುಷ್’ ಚಿತ್ರ ಮೂಡಿ ಬಂದಿದೆ. 400 ಕೋಟಿ ರೂಪಾಯಿ ಬಜೆಟ್‌ನಲ್ಲಿ ಚಿತ್ರ ಮೂಡಿ ಬಂದಿದೆ. ರಾಮನಾಗಿ ಪ್ರಭಾಸ್ (Prabhas), ಸೀತೆಯಾಗಿ ಕೃತಿ ಸನೋನ್, ರಾವಣನಾಗಿ ಸೈಫ್ ಅಲಿ ಖಾನ್ (Saif Ali Khan) ನಟಿಸಿದ್ದಾರೆ. ಜೂನ್ 16ಕ್ಕೆ ಚಿತ್ರ ತೆರೆಗೆ ಬರಲಿದೆ. ಶ್ರೀ ರಾಮನ ಹಾಡು ಇದೇ ಮೇ 20ಕ್ಕೆ ರಿಲೀಸ್‌ ಆಗಲಿದೆ.

    ‘ಆದಿಪುರುಷ್’ (Adipurush) ಸಿನಿಮಾ ರಿಲೀಸ್‌ಗೆ ಇನ್ನೊಂದು ತಿಂಗಳು ಬಾಕಿಯಿದೆ ಎಂದು ಹೇಳಿ ಚಿತ್ರತಂಡ ಹೊಸ ಪೋಸ್ಟರ್ ಹಂಚಿಕೊಂಡಿದೆ. ಆಗಸದಲ್ಲಿ ಹಾರುವ ಸಾಗುತ್ತಿರುವ ಹನುಮಂತನ ಬೆನ್ನೇರಿ ರಾವಣನ ಸೈನ್ಯದ ವಿರುದ್ಧ ಶ್ರೀರಾಮ ಬಾಣ ಪ್ರಯೋಗ ಮಾಡುತ್ತಿರುವ ದೃಶ್ಯ ಇದು. ಪೋಸ್ಟರ್ ಮೊದಲ ನೋಟದಲ್ಲೇ ಗಮನ ಸೆಳೆಯುತ್ತಿದೆ ಟ್ರೈಲರ್‌ನಲ್ಲಿ ಈ ಝಲಕ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದರು. ಈಗ ಪೋಸ್ಟರ್ ಕೂಡ ಸಖತ್ ಕಿಕ್ ಕೊಡ್ತಿದೆ. ಆದರೆ ಪೋಸ್ಟರ್‌ನಲ್ಲಿ ಕಟ್ಟಡ ಇರುವುದು ನೋಡಿ ಕೆಲವರು ಅಚ್ಚರಿಗೊಂಡಿದ್ದಾರೆ.

     

    View this post on Instagram

     

    A post shared by Adipurush (@adipurushmovieofficial)

    ಸಾಮಾನ್ಯವಾಗಿ ಗ್ರಾಫಿಕ್ ಡಿಸೈನರ್‌ಗಳು ಹೊಸ ಪೋಸ್ಟರ್ ಡಿಸೈನ್ ಮಾಡುವಾಗ ರೆಫರೆನ್ಸ್ಗೆ ಬೇರೆ ಯಾವುದಾದರೂ ಪೋಸ್ಟರ್ ಬಳಸುತ್ತಾರೆ. ಅದೇ ರೀತಿ ‘ಆದಿಪರುಷ್’ ಚಿತ್ರದ ಈ ಹೊಸ ಪೋಸ್ಟರ್‌ಗೂ ಯಾವುದೋ ಹಾಲಿವುಡ್ ಪೋಸ್ಟರ್ ತೆಗೆದುಕೊಂಡಿದ್ದಾರೆ. ಆದರೆ ಎಡಿಟ್ ಮಾಡುವ ವೇಳೆ ಒರಿಜಿನಲ್ ಪೋಸ್ಟರ್‌ನಲ್ಲಿದ್ದ ಕಟ್ಟಡವನ್ನು ತೆಗೆಯಲು ಮರೆತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ. ಇಷ್ಟು ದೊಡ್ಡ ಸಿನಿಮಾ ಪೋಸ್ಟರ್ ರಿಲೀಸ್ ಮಾಡುವಾಗ ಇದನ್ನೆಲ್ಲಾ ನೋಡಿಕೊಳ್ಳಬೇಕು. ರಾಮಾಯಣ ಕಾಲದಲ್ಲಿ ಆಧುನಿಕ ಕಾಲದ ಕಟ್ಟಡಗಳು ಹೇಗೆ ಬರೋಕೆ ಸಾಧ್ಯ. ಇದರಲ್ಲಿ ಏನಾದರೂ ಲಾಜಿಕ್ ಇದ್ಯಾ? ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

  • ಭದ್ರಾಚಲಂನ ಸೀತಾ ರಾಮಚಂದ್ರಸ್ವಾಮಿ ದೇವಸ್ಥಾನಕ್ಕೆ ಪ್ರಭಾಸ್ ದೇಣಿಗೆ

    ಭದ್ರಾಚಲಂನ ಸೀತಾ ರಾಮಚಂದ್ರಸ್ವಾಮಿ ದೇವಸ್ಥಾನಕ್ಕೆ ಪ್ರಭಾಸ್ ದೇಣಿಗೆ

    ‘ಬಾಹುಬಲಿ’ (Bahubali) ಸೂಪರ್ ಸ್ಟಾರ್ ಪ್ರಭಾಸ್ ಅವರು ‘ಆದಿಪುರುಷ್’ (Adipurush) ರಾಮನಾಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಕೆಲವೇ ದಿನಗಳಲ್ಲಿ ಶ್ರೀರಾಮನಾಗಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಬೆನ್ನಲ್ಲೇ ಭದ್ರಾಚಲಂನಲ್ಲಿರುವ ಸೀತಾ ರಾಮಚಂದ್ರಸ್ವಾಮಿ ದೇವಸ್ಥಾನಕ್ಕೆ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ದೇವಸ್ಥಾನದ ಮೇಲ್ವೀಚಾರಕರಿಗೆ 10 ಲಕ್ಷದ ಚೆಕ್ ಅನ್ನು ಹಸ್ತಾಂತರಿಸಿದ್ದಾರೆ.

    ಸಾಲು ಸಾಲು ಸಿನಿಮಾಗಳ ಸೋಲಿನ ನಂತರ ‘ಬಾಹುಬಲಿ’ ಪ್ರಭಾಸ್ ರಾಮನ ಅವತಾರ ತಾಳಿದ್ದಾರೆ. ‘ಆದಿಪುರುಷ್’ ಸಿನಿಮಾ ಇದೇ ಜೂನ್ 16ಕ್ಕೆ ತೆರೆಗೆ ಅಬ್ಬರಿಸಲು ರೆಡಿಯಾಗಿದ್ದಾರೆ. ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಕಷ್ಟು ಟೀಕೆಗಳ ನಡುವೆ ಪ್ರಭಾಸ್ (Prabhas) ಸಿನಿಮಾ ತೆರೆಗೆ ಅಪ್ಪಳಿಸುತ್ತಿದೆ. ಇದನ್ನೂ ಓದಿ:ಮದುವೆಯಾಗಿ 14 ಕಳೆದರೂ ಮಕ್ಕಳಾಗದ್ದಕ್ಕೆ ಮಹತ್ವದ ನಿರ್ಧಾರ ಕೈಗೊಂಡ ‘ಲಾಲಿಹಾಡು’ ನಟಿ

    ತೆಲಂಗಾಣ ರಾಜ್ಯದ ಭದ್ರಾಚಲಂನಲ್ಲಿರುವ ಶ್ರೀ ಸೀತಾ ರಾಮಚಂದ್ರ ಸ್ವಾಮಿ ದೇವಸ್ಥಾನವು ಬಹಳ ಪ್ರಸಿದ್ಧವಾಗಿದೆ. ಇಲ್ಲಿ ಪ್ರತಿ ವರ್ಷವೂ ಸೀತಾರಾಮ ಕಲ್ಯಾಣವನ್ನು ಆಚರಣೆ ಮಾಡಲಾಗುತ್ತೆ. ವಿವಿಧ ಕಡೆಗಳಿಂದ ಅನೇಕ ಭಕ್ತರು ಆಗಮಿಸುತ್ತಾರೆ. ಇದೇ ಶ್ರೀ ಸೀತಾರಾಮಚಂದ್ರಸ್ವಾಮಿ ದೇವಸ್ಥಾನಕ್ಕೆ ‘ಆದಿಪುರುಷ್’ ನಟ ಪ್ರಭಾಸ್ ಸುಮಾರು 10 ಲಕ್ಷ ರೂಪಾಯಿ ದೇಣಿಗೆಯಾಗಿ ನೀಡಿದ್ದಾರೆ. ಪ್ರಭಾಸ್ ಅವರ ತಂದೆ ಸೂರ್ಯನಾರಾಯಣ ರಾಜು ಹೆಸರಿಲ್ಲಿ ದೇಣಿಗೆ ನೀಡಿದ್ದಾರೆ. ಈ 10 ಲಕ್ಷ ರೂ. ಚೆಕ್ ಅನ್ನು ದೇವಸ್ಥಾನದ ಮೇಲ್ವೀಚಾರಕರಿಗೆ ಪ್ರಭಾಸ್‌ ಆಪ್ತ ವಿಕ್ಕಿ ಹಸ್ತಾಂತರ ಮಾಡಿದ್ದಾರೆ. ಪ್ರಭಾಸ್ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

    ಪ್ರಭಾಸ್ ಶೀಘ್ರದಲ್ಲಿಯೇ ಶ್ರೀರಾಮನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಆದಿಪುರುಷ್’ ಸಿನಿಮಾದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ರಾಘವನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಇನ್ನಿಲ್ಲದ ಕುತೂಹಲವಿದೆ. ‘ಆದಿಪುರುಷ್’ ಸಿನಿಮಾವನ್ನು ಬಾಲಿವುಡ್ ನಿರ್ದೇಶಕ ಓಂ ರಾವುತ್ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಭಾಸ್ ಜೊತೆ ಸೀತೆಯಾಗಿ ಕೃತಿ ನಟಿಸಿದ್ದರೆ, ಲಕ್ಷ್ಮಣನಾಗಿ ಸನ್ನಿ ಸಿಂಗ್, ಹನುಮಂತನಾಗಿ ದೇವದತ್ತ ನಾಗೆ, ರಾವಣನ ಪಾತ್ರದಲ್ಲಿ ಸೈಫ್ ಅಲಿಖಾನ್ ನಟಿಸಿದ್ದಾರೆ.

  • ಸೀತಾ ಮಾತೆಯಾಗಿ ಬಂದ ಕೃತಿ ಸನೋನ್- ಫಸ್ಟ್ ಲುಕ್ ಔಟ್

    ಸೀತಾ ಮಾತೆಯಾಗಿ ಬಂದ ಕೃತಿ ಸನೋನ್- ಫಸ್ಟ್ ಲುಕ್ ಔಟ್

    ಓಂ ರೌತ್‌ ನಿರ್ದೇಶನದ ‘ಆದಿಪುರುಷ್’ ಸಿನಿಮಾ ಶುರುವಾದಾಗಿನಿಂದ ಒಂದಲ್ಲಾ ಒಂದು ವಿವಾದಗಳಿಂದ ಸದ್ದು ಮಾಡುತ್ತಲೇ ಇದೆ. ಸದ್ಯ ಸೀತೆ ಆಗಿ ನಟಿಸಿರುವ ಕೃತಿ ಸನೋನ್ (Kriti Sanon) ಲುಕ್‌ನ್ನು ಆದಿಪುರುಷ್ ಟೀಂ ರಿವೀಲ್ ಮಾಡಿದ್ದಾರೆ. ಸೀತೆಯಾಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಛತ್ರಪತಿ ಶಿವಾಜಿಯ ಸೊಸೆ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಫೈನಲ್?‌

    ಪ್ರಭಾಸ್- ಕೃತಿ ಸನೋನ್ ನಟನೆಯ ‘ಆದಿಪುರುಷ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಹಿಂದೆ ಟೀಸರ್- ಪೋಸ್ಟರ್‌ಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಕಳಪೆ ಗ್ರಾಫಿಕ್ಸ್ ವರ್ಕ್ ನೋಡಿ ಚಿತ್ರದ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದರು. ಆದರೆ ಇದೀಗ ತಪ್ಪಿಲ್ಲದೇ ಸೀತಾ ಪಾತ್ರಧಾರಿ ಕೃತಿ ಸನೂನ್ ಫಸ್ಟ್ ಲುಕ್‌ನ ರಿವೀಲ್ ಮಾಡಲಾಗಿದೆ.

     

    View this post on Instagram

     

    A post shared by Kriti (@kritisanon)

    ಸೀತೆ ಬೈತಲೆಗೆ ಕುಂಕುಮ, ಕೈಯಲ್ಲಿ ಬಳೆ ಧರಿಸಿ ಸುಂದರವಾಗಿ ಸೀತೆ ಲುಕ್‌ನಲ್ಲಿ ಕೃತಿ ಸನೋನ್ ಎಂಟ್ರಿ ಕೊಟ್ಟಿದ್ದಾರೆ. ನಟಿಯ ಸೀತೆಯ ಲುಕ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೊದಲಿಗೆ ಪ್ರಭಾಸ್ ಶ್ರೀರಾಮನಾಗಿ ಬಿಲ್ಲು ಬಾಣ ಹಿಡಿದು ನಿಂತಿರುವ ಚಿತ್ರ ಕಾಣುತ್ತದೆ. ನಂತರ ನಿಧಾನವಾಗಿ ಸೀತಾ ಮಾತೆಯ ದರ್ಶನವಾಗುತ್ತದೆ. ಸೀತಾ ಮಾತೆಯ ಎರಡು ಪೋಸ್ಟರ್ ಚಿತ್ರತಂಡ ಹಂಚಿಕೊಂಡಿದೆ.

     

    View this post on Instagram

     

    A post shared by Kriti (@kritisanon)

    400 ಕೋಟಿ ರೂಪಾಯಿಗೂ ಅಧಿಕ ಬಜೆಟ್‌ನ ‌’ಆದಿಪುರುಷ್’ ಚಿತ್ರದಲ್ಲಿ ಶ್ರೀರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೋನ್, ರಾವಣನಾಗಿ ಸೈಫ್ ಅಲಿ ಖಾನ್ (Saif Ali Khan) ನಟಿಸಿದ್ದಾರೆ. ಜೂನ್ 16ರಂದು ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ‘ಆದಿಪುರುಷ್’ ಸಿನಿಮಾ ತೆರೆ ಕಾಣಲಿದೆ.

  • ವರುಣ್ ಧವನ್ ಮಾಡಿದ ಎಡವಟ್ಟಿಗೆ ಬೇಸರ ಹೊರಹಾಕಿದ ಕೃತಿ ಸೆನನ್

    ವರುಣ್ ಧವನ್ ಮಾಡಿದ ಎಡವಟ್ಟಿಗೆ ಬೇಸರ ಹೊರಹಾಕಿದ ಕೃತಿ ಸೆನನ್

    ಬಣ್ಣದ ಲೋಕದ ಅಂದಮೇಲೆ ಇಲ್ಲಿ ಡೇಟಿಂಗ್, ಗಾಸಿಪ್ ಎಲ್ಲವೂ ಕಾಮನ್. ಒಂದು ಸಿನಿಮಾ ಒಟ್ಟಿಗೆ ಮಾಡಿದ್ರೆ ಸಾಕು. ಆ ಬೆನ್ನಲ್ಲೇ ಗಾಸಿಪ್ ಕೂಡ ಹಬ್ಬಿರುತ್ತದೆ. ಇತ್ತೀಚಿಗೆ ಪ್ರಭಾಸ್- ಕೃತಿ ಸೆನನ್ (Kriti Sanon) ಹೆಸರು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಇಬ್ಬರು ಎಂಗೇಜ್‌ಮೆಂಟ್ ಮಾಡಿಕೊಳ್ತಾರೆ ಎಂದೇ ಹೇಳಲಾಗಿತ್ತು. ಇಷ್ಟೇಲ್ಲಾ ಸಮಸ್ಯೆಯಾಗುವುದಕ್ಕೆ ಕಾರಣ ವರುಣ್ ಧವನ್ (Varun Dhawan) ಆಡಿದ ಆ ಒಂದು ಮಾತು. ಇದೀಗ ಈ ಬಗ್ಗೆ ನಟಿ ಕೃತಿ ಬೇಸರ ಹೊರಹಾಕಿದ್ದಾರೆ.

    `ಆದಿಪುರುಷ್’ (Adipurush) ಚಿತ್ರದದಲ್ಲಿ ಪ್ರಭಾಸ್‌ಗೆ ಸೀತೆಯಾಗಿ ಕೃತಿ ಸೆನನ್ ನಟಿಸಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ. ಇತ್ತೀಚಿಗೆ ನಟಿ ನೀಡಿದ ಸಂದರ್ಶನವೊಂದರಲ್ಲಿ ಪ್ರಭಾಸ್ (Prabhas) ಜೊತೆಗಿನ ಡೇಟಿಂಗ್ ವದಂತಿಯ ಬಗ್ಗೆ‌ ನಟಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಮೂಲಕ ವರುಣ್ ಧವನ್ ಮೇಲಿನ ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ಬಹಿರಂಗ ಪತ್ರ ಬರೆದು ಮತ್ತೆ ಗಂಭೀರ ಆರೋಪ ಮಾಡಿದ ನಟ ನವಾಜುದ್ದೀನ್ ಪತ್ನಿ

    ಕಳೆದ ವರ್ಷ ಕಾರ್ಯಕ್ರಮವೊಂದರಲ್ಲಿ, ಸಿನಿಮಾ ಪ್ರಚಾರವೊಂದಕ್ಕಾಗಿ ವರುಣ್ ಧವನ್ ಹಾಗೂ ಕೃತಿ ಸೆನನ್ ಭಾಗಿ ಆಗಿದ್ದರು. ಇದನ್ನು ಕರಣ್ ಜೋಹರ್ ನಡೆಸಿಕೊಡುತ್ತಿದ್ದರು. ನಾಯಕಿಯರ ಪಟ್ಟಿ ಮಾಡುವ ಟಾಸ್ಕ್‌ ನೀಡಲಾಗಿತ್ತು. ಈ ವೇಳೆ ವರುಣ್ ಧವನ್ ಅವರು ಹಲವು ಹೀರೋಯಿನ್‌ಗಳ ಹೆಸರು ತೆಗೆದುಕೊಂಡರು. ಆದರೆ, ಕೃತಿ ಸೆನನ್ ಹೆಸರನ್ನು ಅವರು ಕೈ ಬಿಟ್ಟಿದ್ದರು. ಈ ಬಗ್ಗೆ ಮಾತನಾಡುವಾಗ, ಈ ಪಟ್ಟಿಯಲ್ಲಿ ಕೃತಿ ಸೆನನ್ ಹೆಸರು ಇಲ್ಲ. ಯಾಕೆಂದರೆ ಅವರ ಹೆಸರು ಬೇರೆ ವ್ಯಕ್ತಿಯ ಹೃದಯದಲ್ಲಿದೆ. ಅವರು ಈಗ ಮುಂಬೈನಲ್ಲಿ ಇಲ್ಲ. ದೀಪಿಕಾ ಪಡುಕೋಣೆ (Deepika Padukone) ಜೊತೆ ಶೂಟಿಂಗ್ ಮಾಡುತ್ತಿದ್ದಾರೆ ಎಂದು ವರುಣ್ ಹೇಳಿದ್ದರು. `ಪ್ರಾಜೆಕ್ಟ್ ಕೆ’ ಸಿನಿಮಾಗಾಗಿ ಪ್ರಭಾಸ್ ಅವರು ದೀಪಿಕಾ ಜೊತೆ ಶೂಟಿಂಗ್ ಮಾಡುತ್ತಿದ್ದಾರೆ. ಹಾಗಾಗಿ ವರುಣ್ ಧವನ್ ಹೇಳಿದ್ದು ಪ್ರಭಾಸ್ ಬಗ್ಗೆಯೇ ಎಂದು ಎಲ್ಲರೂ ಊಹಿಸಿದ್ದರು. ಇದರಿಂದಲೇ ಇವರಿಬ್ಬರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

    ಇದೀಗ ಸಾಕಷ್ಟು ಸಮಯದ ನಂತರ ನಟಿ ಕೃತಿ ಮೌನ ಮುರಿದಿದ್ದಾರೆ. ವರುಣ್ ಧವನ್ ಅಂದು ಹಾಗೇ ಹೇಳಿದಾಗ ನನಗೆ ತುಂಬಾನೇ ಬೇಸರ ಆಯಿತು. ಈ ವಿಚಾರದ ಬಗ್ಗೆ ಪ್ರಭಾಸ್‌ಗೆ ಹೇಳಬೇಕು ಎನಿಸಿತು. ನಾನು ಪ್ರಭಾಸ್‌ಗೆ ಕಾಲ್ ಮಾಡಿ ವರುಣ್ ಧವನ್ ಈ ರೀತಿ ಹೇಳಿದ್ದಾರೆ ಎಂಬುದನ್ನು ಹೇಳಿದೆ. ಅವರು ಆದರೆ ಯಾಕೆ ಎಂದು ಪ್ರಶ್ನೆ ಮಾಡಿದರು. ನನಗೆ ಗೊತ್ತಿಲ್ಲ ಎಂದು ಉತ್ತರ ಕೊಟ್ಟೆ. ವರುಣ್‌ಗೆ ಹುಚ್ಚು ಹಿಡಿದಿದೆ ಎಂದು ನಾನು ಪ್ರಭಾಸ್ ಬಳಿ ಹೇಳಿದ್ದೆ ಎಂಬುದಾಗಿ ಕೃತಿ ಹೇಳಿಕೊಂಡಿದ್ದಾರೆ. ವರುಣ್ ಧವನ್ ಹೇಳಿಕೆಯಿಂದ ಕೃತಿಗೆ ಸಾಕಷ್ಟು ಬೇಸರ ಆಗಿದೆ. ಇಬ್ಬರ ಮಧ್ಯೆ ಇರುವ ಫ್ರೆಂಡ್‌ಶಿಪ್ ಮುರಿದು ಹೋಯ್ತಾ ಎನ್ನುವ ಪ್ರಶ್ನೆ ಕೂಡ ಅಭಿಮಾನಿಗಳ ಮನದಲ್ಲಿ ಮೂಡಿದೆ.

  • ಇಂದಿನಿಂದ ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್ ಧಮಾಕ – ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

    ಇಂದಿನಿಂದ ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್ ಧಮಾಕ – ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

    ಮುಂಬೈ: ಮಾರ್ಚ್ 4 ರಿಂದ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (WPL) ಆವೃತ್ತಿ ಆರಂಭವಾಗುತ್ತಿದ್ದು, ಮುಂಬೈನಲ್ಲಿ (Mumbai) ಅದ್ಧೂರಿ ಚಾಲನೆ ದೊರೆಯಲಿದೆ.

    ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಬಾಲಿವುಡ್ ತಾರೆಯರಾದ ಕಿಯಾರಾ ಅಡ್ವಾಣಿ (Kiara Advani) ಹಾಗೂ ಕೃತಿ ಸನೋನ್ (Kriti Sanon) ಅದ್ಧೂರಿ ವೇದಿಕೆಯಲ್ಲಿ ಸೊಂಟ ಬಳುಕಿಸಲಿದ್ದಾರೆ. ಇದರೊಂದಿಗೆ ಪಂಜಾಬಿ ಗಾಯಕ ಎ.ಪಿ ಧಿಲ್ಲೋನ್ ಗಾಯನ ಪ್ರಸ್ತುತಪಡಿಸಲಿದ್ದಾರೆ. ರಾತ್ರಿ 8 ಗಂಟೆಗೆ ಮೊದಲ ಪಂದ್ಯ ಆರಂಭವಾಗಲಿದೆ.

    ಮುಂಬೈನ ಬ್ರಬೋನ್ ಹಾಗೂ ಡಿವೈ ಪಾಟೀಲ ಕ್ರೀಡಾಂಗಣಗಳು ಸಜ್ಜಾಗಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಸೆಣಸಲಿವೆ. ಇದನ್ನೂ ಓದಿ: WPL ಉದ್ಘಾಟನಾ ಸಮಾರಂಭದಲ್ಲಿ ಸೊಂಟ ಬಳುಕಿಸಲಿದ್ದಾರೆ ಬಾಲಿವುಡ್ ತಾರೆಯರು

    ಟೂರ್ನಿ ಮಾದರಿ ಹೇಗೆ?
    ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಲೀಗ್ ಹಂತ ನಡೆಯಲಿದೆ. ಪ್ರತಿ ತಂಡ ಇತರ 4 ತಂಡಗಳ ವಿರುದ್ಧ ತಲಾ 2 ಬಾರಿ ಸೆಣಸಲಿವೆ. ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. 2 ಮತ್ತು 3ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ನಲ್ಲಿ ಸೆಣಸಲಿವೆ. ಇದನ್ನೂ ಓದಿ: WPL 2023ː ಮಹಿಳೆಯರು, ಹುಡ್ಗೀರಿಗೆ ಪ್ರವೇಶ ಉಚಿತ, ಯಾರೂ ಬೇಕಾದ್ರೂ ಹೋಗ್ಬೋದು

    ಯಾವ ದಿನ ಯಾವ ತಂಡ ಕಾದಾಟ?

    ಮಾರ್ಚ್ 04: ಗುಜರಾತ್ ಜೈಂಟ್ಸ್ Vs ಮುಂಬೈ ಇಂಡಿಯನ್ಸ್ – ಡಿವೈ ಪಾಟೀಲ್ ಸ್ಟೇಡಿಯಂ

    ಮಾರ್ಚ್ 05: ಆರ್‌ಸಿಬಿ Vs ಡೆಲ್ಲಿ ಕ್ಯಾಪಿಟಲ್ಸ್‌ – ಬ್ರಬೋರ್ನ್‌ ಸ್ಟೇಡಿಯಂ – ಮಧ್ಯಾಹ್ನ 3:30ಕ್ಕೆ

    ಮಾರ್ಚ್ 05: ಯುಪಿ ವಾರಿಯರ್ಝ್‌ Vs ಗುಜರಾತ್ ಜೈಂಟ್ಸ್ – ಡಿವೈ ಪಾಟೀಲ್ ಸ್ಟೇಡಿಯಂ – ಸಂಜೆ 7:30ಕ್ಕೆ

    ಮಾರ್ಚ್ 06: ಮುಂಬೈ ಇಂಡಿಯನ್ಸ್ Vs ಆರ್‌ಸಿಬಿ – ಬ್ರಬೋರ್ನ್ – ಸಂಜೆ 7:30ಕ್ಕೆ

    ಮಾರ್ಚ್ 07: ಡೆಲ್ಲಿ ಕ್ಯಾಪಿಟಲ್ಸ್‌ Vs ಯುಪಿ ವಾರಿಯರ್ಝ್‌ – ಡಿವೈ ಪಾಟೀಲ್ ಸ್ಟೇಡಿಯಂ – ಸಂಜೆ 07:30ಕ್ಕೆ

    ಮಾರ್ಚ್ 08 – ಗುಜರಾತ್ ಜೈಂಟ್ಸ್ Vs ಆರ್‌ಸಿಬಿ – ಬ್ರಬೋರ್ನ್ ಸ್ಟೇರಿಯಂ – ಸಂಜೆ 07:30ಕ್ಕೆ

    ಮಾರ್ಚ್ 09: ಡೆಲ್ಲಿ ಕ್ಯಾಪಿಟಲ್ಸ್‌ Vs ಮುಂಬೈ ಇಂಡಿಯನ್ಸ್‌ – ಡಿವೈ ಪಾಟೀಲ್ ಸ್ಟೇಡಿಯಂ – ಸಂಜೆ 7:30ಕ್ಕೆ

    ಮಾರ್ಚ್ 10: ಆರ್‌ಸಿಬಿ Vs ಯುಪಿ ವಾರಿಯರ್ಝ್‌ – ಬ್ರಬೋರ್ನ್‌ ಸ್ಟೇಡಿಯಂ – ಸಂಜೆ 07:30ಕ್ಕೆ

    ಮಾರ್ಚ್ 11: ಗುಜರಾತ್ ಜೈಂಟ್ಸ್ Vs ಡೆಲ್ಲಿ ಕ್ಯಾಪಿಟಲ್ಸ್ – ಡಿವೈ ಪಾಟೀಲ್ ಸ್ಟೇಡಿಯಂ – ಸಂಜೆ 07:30ಕ್ಕೆ

    ಮಾರ್ಚ್ 12: ಯುಪಿ ವಾರಿಯರ್ಝ್‌ Vs ಮುಂಬೈ ಇಂಡಿಯನ್ಸ್ – ಬ್ರಬೋರ್ನ್‌ ಸ್ಟೇಡಿಯಂ – ಸಂಜೆ 07:30ಕ್ಕೆ

    ಮಾರ್ಚ್ 13: ಡೆಲ್ಲಿ ಕ್ಯಾಪಿಟಲ್ಸ್‌ Vs ಆರ್‌ಸಿಬಿ – ಡಿವೈ ಪಾಟೀಲ್ ಸ್ಟೇಡಿಯಂ – ಸಂಜೆ 07:30ಕ್ಕೆ

    ಮಾರ್ಚ್ 14: ಮುಂಬೈ ಇಂಡಿಯನ್ಸ್‌ Vs ಗುಜರಾತ್‌ ಜೈಂಟ್ಸ್‌ – ಬ್ರಬೋರ್ನ್ ಸ್ಟೇಡಿಯಂ – ಸಂಜೆ 07:30ಕ್ಕೆ

    ಮಾರ್ಚ್ 15: ಯುಪಿ ವಾರಿಯರ್ಝ್‌ Vs ಆರ್‌ಸಿಬಿ – ಡಿವೈ ಪಾಟೀಲ್ ಸ್ಟೇಡಿಯಂ – ಸಂಜೆ 07:30ಕ್ಕೆ

    ಮಾರ್ಚ್ 16: ಡೆಲ್ಲಿ ಕ್ಯಾಪಿಟಲ್ಸ್‌ Vs ಗುಜರಾತ್‌ ಜೈಂಟ್ಸ್‌ – ಬ್ರಬೋರ್ನ್‌ ಸ್ಟೇಡಿಯಂ – ಸಂಜೆ 07:30ಕ್ಕೆ

    ಮಾರ್ಚ್ 18: ಮುಂಬೈ ಇಂಡಿಯನ್ಸ್ Vs ಯುಪಿ ವಾರಿಯರ್ಝ್‌ – ಡಿವೈ ಪಾಟೀಲ್ ಸ್ಟೇಡಿಯಂ – ಮಧ್ಯಾಹ್ನ 03:30ಕ್ಕೆ

    ಮಾರ್ಚ್ 18: ಆರ್‌ಸಿಬಿ Vs ಗುಜರಾತ್‌ ಜೈಂಟ್ಸ್‌ – ಬ್ರಬೋರ್ನ್‌ ಸ್ಟೇಡಿಯಂ – ಸಂಜೆ 07:30ಕ್ಕೆ

    ಮಾರ್ಚ್ 20: ಗುಜರಾತ್‌ ಜೈಂಟ್ಸ್‌ Vs ಯುಪಿ ವಾರಿಯರ್ಝ್‌ – ಬ್ರಬೋರ್ನ್‌ ಸ್ಟೇಡಿಯಂ – ಮಧ್ಯಾಹ್ನ 3:30ಕ್ಕೆ

    ಮಾರ್ಚ್ 20: ಮುಂಬೈ ಇಂಡಿಯನ್ಸ್ Vs ಡೆಲ್ಲಿ ಕ್ಯಾಪಿಟಲ್ಸ್ – ಡಿವೈ ಪಾಟೀಲ್ ಸ್ಟೇಡಿಯಂ – ಸಂಜೆ 07:30ಕ್ಕೆ

    ಮಾರ್ಚ್ 21: ಆರ್‌ಸಿಬಿ Vs ಮುಂಬೈ ಇಂಡಿಯನ್ಸ್ – ಡಿವೈ ಪಾಟೀಲ್ ಕ್ರೀಡಾಂಗಣ – ಮಧ್ಯಾಹ್ನ 03:30ಕ್ಕೆ

    ಮಾರ್ಚ್ 21: ಯುಪಿ ವಾರಿಯರ್ಝ್‌ Vs ಡೆಲ್ಲಿ ಕ್ಯಾಪಿಟಲ್ಸ್‌ – ಬ್ರಬೋರ್ನ್‌ ಸ್ಟೇಡಿಯಂ – ಸಂಜೆ 07:30ಕ್ಕೆ

    ಮಾರ್ಚ್ 24: ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಎಲಿಮಿನೇಟರ್ ಪಂದ್ಯ – ಸಂಜೆ 07:30ಕ್ಕೆ

    ಮಾರ್ಚ್ 26 – ಬ್ರಬೋರ್ನ್‌ನಲ್ಲಿ ಫೈನಲ್ – ಸಂಜೆ 07:30ಕ್ಕೆ

  • WPL ಉದ್ಘಾಟನಾ ಸಮಾರಂಭದಲ್ಲಿ ಸೊಂಟ ಬಳುಕಿಸಲಿದ್ದಾರೆ ಬಾಲಿವುಡ್ ತಾರೆಯರು

    WPL ಉದ್ಘಾಟನಾ ಸಮಾರಂಭದಲ್ಲಿ ಸೊಂಟ ಬಳುಕಿಸಲಿದ್ದಾರೆ ಬಾಲಿವುಡ್ ತಾರೆಯರು

    ಮುಂಬೈ: ಮಾರ್ಚ್ 4 ರಿಂದ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಆರಂಭವಾಗುತ್ತಿದ್ದು, ಬಿಸಿಸಿಐ (BCCI) ಸಕಲ ಸಿದ್ಧತೆ ಮಾಡಿಕೊಂಡಿದೆ.

    ಟೂರ್ನಿಯ ಮೊದಲ ಪಂದ್ಯ ಮುಂಬೈನ (Mumbai) ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದೆ. ಪಂದ್ಯ ಆರಂಭಕ್ಕೂ ಮುನ್ನ ಸಂಜೆ 5:30ಕ್ಕೆ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬಾಲಿವುಡ್ ತಾರೆಯರಾದ ಕಿಯಾರಾ ಅಡ್ವಾಣಿ (Kiara Advani) ಹಾಗೂ `ಪರಮ್ ಸುಂದರಿ’ ಹಾಡಿನ ಖ್ಯಾತಿಯ ಕೃತಿ ಸನೋನ್ (Kriti Sanon) ಭರ್ಜರಿ ನೃತ್ಯ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ಮಹಿಳಾ ತಂಡಕ್ಕೆ ಹರ್ಮನ್‌ಪ್ರೀತ್‌ ಕೌರ್​ ನಾಯಕಿ

    WPL

    ಇದರೊಂದಿಗೆ ಜನಪ್ರಿಯ ಪಂಜಾಬಿ ಗಾಯಕ ಎ.ಪಿ ಧಿಲ್ಲೋನ್ ತಮ್ಮ ಹಾಡುಗಳ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ ಎಂದು ಡಬ್ಲ್ಯೂಪಿಎಲ್ ಟ್ವೀಟ್ ಮಾಡಿ ತಿಳಿಸಿದೆ. ಇದನ್ನೂ ಓದಿ: WPL 2023ː ಮಹಿಳೆಯರು, ಹುಡ್ಗೀರಿಗೆ ಪ್ರವೇಶ ಉಚಿತ, ಯಾರೂ ಬೇಕಾದ್ರೂ ಹೋಗ್ಬೋದು

    FotoJet 7

    ಚೊಚ್ಚಲ ಡಬ್ಲ್ಯೂಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಕಣಕ್ಕಿಳಿಯುತ್ತಿವೆ. ಮಾರ್ಚ್ 4 ರಿಂದ 21ರ ವರೆಗೆ ಲೀಗ್ ಪಂದ್ಯಗಳು ನಡೆಯಲಿವೆ. ಮಾರ್ಚ್ 24 ರಂದು ಪ್ಲೆ ಆಫ್ ಹಾಗೂ ಮಾರ್ಚ್ 26ರಂದು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

  • ನಟ ಪ್ರಭಾಸ್ ಜೊತೆ ಕೃತಿ ಸನೋನ್ ಮದುವೆ: ಬ್ರೇಕಿಂಗ್ ನ್ಯೂಸ್ ಎಂದ ಉಮೈರ್

    ನಟ ಪ್ರಭಾಸ್ ಜೊತೆ ಕೃತಿ ಸನೋನ್ ಮದುವೆ: ಬ್ರೇಕಿಂಗ್ ನ್ಯೂಸ್ ಎಂದ ಉಮೈರ್

    ವಿದೇಶಿ ಸೆನ್ಸಾರ್ ಮಂಡಳಿಯ ಸದಸ್ಯ ಎಂದು ಹೇಳಿಕೊಳ್ಳುವ ಬಾಲಿವುಡ್ ಸಿನಿಮಾಗಳ ವಿಮರ್ಶೆಕ ಉಮೈರ್ ಸಂಧು (Umair Sandhu) ಬ್ರೇಕಿಂಗ್ ಸುದ್ದಿಯೊಂದನ್ನು ನೀಡಿದ್ದಾರೆ. ಸದ್ಯದಲ್ಲೇ ಬಾಹುಬಲಿ ಖ್ಯಾತಿಯ ಪ್ರಭಾಸ್ (Prabhas) ಮತ್ತು ಬಾಲಿವುಡ್ ನಟಿ ಕೃತಿ ಸನೋನ್ (Kriti Sanon) ಮಾಲ್ಡೀವ್ಸ್‍ (Maldives) ನಲ್ಲಿ ನಿರ್ಶಿತಾರ್ಥ (Engagement) ಮಾಡಿಕೊಳ್ಳಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಎಂಗೇಜ್ ಮೆಂಟ್ ನಂತರ ಬಹುಬೇಗ ಅವರು ವೈವಾಹಿಕ ಜೀವನಕ್ಕೂ ಕಾಲಿಡಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ಈ ಜೋಡಿ ಡೇಟಿಂಗ್ ಮಾಡುತ್ತಿದೆ ಎಂದು ಈ ಹಿಂದೆಯೇ ರಿಯಾಲಿಟಿ ಶೋ ವೊಂದರಲ್ಲಿ ವರುಣ್ ಧವನ್ ಸುಳಿವು ನೀಡಿದ್ದರು. ಇವರ ನಡುವೆ ರಿಲೇಷನ್ ಶಿಪ್ ಇದೆ ಎಂದು ನೇರವಾಗಿಯೇ ವರುಣ್ ಮಾತನಾಡಿದ್ದರು. ಆದರೆ, ಈ ವಿಷಯವನ್ನು ಕೃತಿ ತಳ್ಳಿಹಾಕಿದ್ದರು. ತಾವಿಬ್ಬರೂ ಸ್ನೇಹಿತರು ಎಂದಷ್ಟೇ ಹೇಳಿಕೆ ಕೊಟ್ಟಿದ್ದರು. ಇದೀಗ ಅವರ ನಿಶ್ಚಿತಾರ್ಥದ ವಿಷಯವನ್ನು ಬಹಿರಂಗ ಪಡಿಸಿದ್ದಾರೆ ಉಮೈರ್. ಇದನ್ನೂ ಓದಿ: ರಾಖಿ ಸಾವಂತ್ ಪತಿ, ಮೈಸೂರು ಹುಡುಗ ಆದಿಲ್ ಪೊಲೀಸ್ ವಶಕ್ಕೆ

    ಪ್ರಭಾಸ್ ಮತ್ತು ಕೃತಿ ‘ಆದಿಪುರಷ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ರಾಮ-ಸೀತೆಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಈ ವೇಳೆಯಲ್ಲೇ ಇಬ್ಬರೂ ಆತ್ಮೀಯರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಲವು ಪಾರ್ಟಿಗಳಲ್ಲಿ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡು ಅಚ್ಚರಿ ಕೂಡ ಮೂಡಿಸಿತ್ತು. ಈ ಎಲ್ಲದರ ಫಲಿತಾಂಶ ಎನ್ನುವಂತೆ ಈ ಜೋಡಿ ಹೊಸ ಜೀವನಕ್ಕೆ ಕಾಲಿಡಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಅವರೇ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಬೇಕಷ್ಟೇ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಾಲ್ಡೀವ್ಸ್‌ನಲ್ಲಿ ಮುಂದಿನ ವಾರ ಪ್ರಭಾಸ್- ಕೃತಿ ಸನೋನ್ ಎಂಗೇಜ್‌ಮೆಂಟ್

    ಮಾಲ್ಡೀವ್ಸ್‌ನಲ್ಲಿ ಮುಂದಿನ ವಾರ ಪ್ರಭಾಸ್- ಕೃತಿ ಸನೋನ್ ಎಂಗೇಜ್‌ಮೆಂಟ್

    ಬಾಲಿವುಡ್‌ನಲ್ಲಿ (Bollywood) ಈಗ ಮದುವೆ ವಾದ್ಯದ ಸೌಂಡ್ ಜೋರಾಗಿದೆ. ಇತ್ತೀಚಿಗೆ ಅಥಿಯಾ ಶೆಟ್ಟಿ (Athiya Shetty) ಮತ್ತು ರಾಹುಲ್ (Rahul) ಮದುವೆಯಾಗಿದ್ದರು. ಈಗ ಕಿಯಾರಾ- ಸಿದ್ಧಾರ್ಥ್ ಮದುವೆ ಸುದ್ದಿ ಬೆನ್ನಲ್ಲೇ ಮತ್ತೊಂದು ಸ್ಟಾರ್ ಜೋಡಿ ಏಂಗೇಜ್ ಆಗುವ ಸುದ್ದಿಯೊಂದು ಹರಿದಾಡುತ್ತಿದೆ.  ನಟ ಪ್ರಭಾಸ್ (Actor Prabhas) ಮತ್ತು ಕೃತಿ ಸನೋನ್ (Kriti Sanon) ನಿಶ್ಚಿತಾರ್ಥದ (Engagement) ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.

    ಸಾಕಷ್ಟು ಸಮಯದಿಂದ ಪ್ರಭಾಸ್ ಮತ್ತು ಕೃತಿ ಸನೋನ್ ಡೇಟಿಂಗ್ ಮಾಡ್ತಿದ್ದಾರೆ ಎಂದು ಹೇಳಲಾಗಿತ್ತು. `ಆದಿಪುರುಷ್’ (Adipurush) ಸಿನಿಮಾ ಶೂಟಿಂಗ್ ವೇಳೆಯಲ್ಲಿ ಇಬ್ಬರಿಗೂ ಪ್ರೇಮಾಂಕುರವಾಗಿದೆ ಎಂದೇ ಸುದ್ದಿ ಹಬ್ಬಿತ್ತು. ಬಳಿಕ ಇದೆಲ್ಲಾ ಸುಳ್ಳು ಸುದ್ದಿ ಎಂದು ಈ ಜೋಡಿ ಸ್ಪಷ್ಟನೆ ನೀಡಿದ್ದರು. ಈಗ ಮತ್ತೆ ಈ ಜೋಡಿಯ ಬಗ್ಗೆ ಹೊಸ ಸುದ್ದಿ ಸಿಕ್ಕಿದೆ. ಇದನ್ನೂ ಓದಿ: ರಾಮ್ ಚರಣ್ ಅದೃಷ್ಟವನ್ನೇ ಬದಲಿಸಿದ ಆರ್.ಆರ್.ಆರ್ ಚಿತ್ರ

    ಸಿನಿಮಾ ವಿಮರ್ಶಕ ಉಮೈರ್ ಸಂಧು `ಆದಿಪುರುಷ್’ ಜೋಡಿ ಬಗ್ಗೆ ಟ್ವೀಟ್ ಮಾಡಿರೋದು ಸೋಷಿಯಲ್ ಮೀಡಿಯಾದಲ್ಲಿ ಈಗ ಸಂಚಲನ ಸೃಷ್ಟಿಸಿದೆ. ಪ್ರಭಾಸ್ ಮತ್ತು ಕೃತಿ ಮುಂದಿನ ವಾರ ಮಾಲ್ಡೀವ್ಸ್‌ನಲ್ಲಿ (Maldives) ಎಂಗೇಜ್‌ಮೆಂಟ್ ಮಾಡಿಕೊಳ್ಳಲಿದ್ದಾರೆ ಎಂದು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಈ ನಿಶ್ಚಿತಾರ್ಥದ ಸುದ್ದಿ ಬಗ್ಗೆ ಸ್ವತಃ ಪ್ರಭಾಸ್-ಕೃತಿಗೆ ತಿಳಿದಿಲ್ಲ ಎಂದು ನೆಟ್ಟಿಗರು ಉಮೈರ್ ಸಂಧು ಅವರ ಕಾಲೆಳೆದಿದ್ದಾರೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದುನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k