Tag: kriti sanon

  • ಮಿಸ್ಟರಿ ಮ್ಯಾನ್ ಜೊತೆ ಕೃತಿ ಸನೋನ್ ಸೀಕ್ರೆಟ್ ಡೇಟಿಂಗ್

    ಮಿಸ್ಟರಿ ಮ್ಯಾನ್ ಜೊತೆ ಕೃತಿ ಸನೋನ್ ಸೀಕ್ರೆಟ್ ಡೇಟಿಂಗ್

    ಬಾಲಿವುಡ್ (Bollywood) ಬೆಡಗಿ ಕೃತಿ ಸನೋನ್ (Kriti Sanon) ಅವರು ಆದಿಪುರುಷ್ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿ, ಪ್ರಭಾಸ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಕೃತಿ ಬಗ್ಗೆ ಹೊಸ ವಿಚಾರವೊಂದು ಬೆಳಕಿಗೆ ಬಂದಿದೆ. ಪ್ರಭಾಸ್ (Prabhas) ಅಲ್ಲ, ವಿದೇಶದಲ್ಲಿ ಮಿಸ್ಟರಿ ಮ್ಯಾನ್ ಜೊತೆ ಕೈ ಕೈ ಹಿಡಿದು ಓಡಾಡಿದ್ದಾರೆ.

    ನಟಿ ಕೃತಿ ಸನೋನ್ ಶೂಟಿಂಗ್‌ಗೆ ಬ್ರೇಕ್ ಹಾಕಿ ಲಂಡನ್‌ಗೆ ಹಾರಿದ್ದಾರೆ. ಮಿಸ್ಟರಿ ಮ್ಯಾನ್ ಜೊತೆ ಸುಂದರ ಸಮಯ ಕಳೆಯುತ್ತಿದ್ದಾರೆ. ಲಂಡನ್ ಬೀದಿಗಳಲ್ಲಿ ನಿಗೂಢ ವ್ಯಕ್ತಿ ಜೊತೆ ಕೈ ಹಿಡಿದು ಓಡಾಡಿದ್ದಾರೆ. ಸದ್ಯ ಇಬ್ಬರು ಜೊತೆ ಇರುವ ಫೋಟೋ ವೈರಲ್ ಆಗಿದ್ದು, ಆ ಹುಡುಗ ಯಾರು ಎಂದು ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ.

    ಕಬೀರ್ ಬಹಿಯಾ ಎಂಬುವರ ಜೊತೆ ಕೃತಿ ಲಂಡನ್ ಡೇಸ್ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆ ಆಗುತ್ತಿದ್ದು, ನಟಿಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಇದನ್ನೂ ಓದಿ:‘ಬೊಂಬೆ ಹೇಳುತೈತೆ’ ಸಾಂಗ್ ಕೇಳುತ್ತಿದ್ದಂತೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಣ್ಣೀರು

    ಕಬೀರ್ ಬಹಿಯಾ ಅವರು ಲೆಜೆಂಡರಿ ಕ್ರಿಕೆಟಿಗ ಎಂಎಸ್ ಧೋನಿ ಅವರೊಂದಿಗೆ ಆಪ್ತ ಎನ್ನಲಾಗಿದೆ, ಧೋನಿ ಪತ್ನಿ ಸಾಕ್ಷಿ ಆಗಾಗ್ಗೆ ಕಬೀರ್ ಜೊತೆಗಿನ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದರು. ಕಬೀರ್ ಅವರು ಎಂಎಸ್ ಧೋನಿ ಪತ್ನಿಯ ಸಂಬಂಧಿ ಎನ್ನಲಾಗಿದೆ. ಈ ಕಬೀರ್ ಬಹಿಯಾ ಯುಕೆ ಮೂಲದ ಮಿಲಿಯನೇರ್ ಉದ್ಯಮಿ ಎಂದು ಹೇಳಲಾಗುತ್ತಿದೆ.

    ಸದ್ಯ ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಮದುವೆ ಸಂಭ್ರಮ ಮುಗಿಲು ಮುಟ್ಟಿದೆ. ಕೃತಿ ಕರಬಂಧ ಮದುವೆ ಬೆನ್ನಲ್ಲೇ ಕೃತಿ ಸನೋನ್ ಮದುವೆ ಸುದ್ದಿ ಸಿಗುತ್ತಾ ಕಾಯಬೇಕಿದೆ.

  • ಮೊದಲ ಗರ್ಲ್‌ಫ್ರೆಂಡ್‌ ಬಗ್ಗೆ ರಿವೀಲ್ ಮಾಡಿದ ಟೈಗರ್ ಶ್ರಾಫ್

    ಮೊದಲ ಗರ್ಲ್‌ಫ್ರೆಂಡ್‌ ಬಗ್ಗೆ ರಿವೀಲ್ ಮಾಡಿದ ಟೈಗರ್ ಶ್ರಾಫ್

    ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಅವರು ‘ಬಡೇ ಮಿಯಾನ್ ಚೋಟೆ ಮಿಯಾನ್’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಒಟಿಟಿ ಕಾರ್ಯಕ್ರಮವೊಂದಲ್ಲಿ ಮೊದಲ ಗರ್ಲ್‌ಫ್ರೆಂಡ್‌ ಬಗ್ಗೆ ಟೈಗರ್‌ ಶ್ರಾಫ್‌ ಬಾಯ್ಬಿಟ್ಟಿದ್ದಾರೆ. 25ನೇ ವಯಸ್ಸಿಗೆ ಎಂಗೇಂಜ್‌ ಆಗಿದ್ದರ ಬಗ್ಗೆ ನಟ ತಿಳಿಸಿದ್ದಾರೆ. ಇದನ್ನೂ ಓದಿ:ಸಾಯಿ ಪಲ್ಲವಿ ಬದಲು ಮೃಣಾಲ್‌ಗೆ ವಿಜಯ್ ಚಾನ್ಸ್ ಕೊಟ್ಟಿದ್ದೇಕೆ?

    ಇತ್ತೀಚೆಗೆ ಒಟಿಟಿ ಕಾರ್ಯಕ್ರಮವೊಂದು ಅದ್ಧೂರಿಯಾಗಿ ನಡೆದಿದೆ. ಈ ಇವೆಂಟ್‌ಗೆ ಹಲವು ಬಾಲಿವುಡ್ ನಟ-ನಟಿಯರು ಭಾಗಿಯಾಗಿದ್ದಾರೆ. ಸಿನಿಮಾ ಬಗ್ಗೆ ಮಾತನಾಡಿದ ಬಳಿಕ ಖಾಸಗಿ ವಿಚಾರವೊಂದು ಟೈಗರ್ ಶ್ರಾಫ್ ರಿವೀಲ್ ಮಾಡಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಸದಾ ದಿಶಾ ಜೊತೆಗಿನ ಲವ್‌ ರಿಲೇಷನ್‌ಶಿಪ್‌ ಬಗ್ಗೆ ಸುದ್ದಿಯಾಗ್ತಿದ್ದ ಟೈಗರ್‌ ಶ್ರಾಫ್‌ ಈಗ ಮೊದಲ ಪ್ರೇಯಸಿ ಬಗ್ಗೆ ಮಾತನಾಡಿರೋದು ಅಕ್ಷರಶಃ ಬಾಲಿವುಡ್‌ ನಟ ವರುಣ್‌ ಧವನ್‌ಗೆ ಶಾಕ್‌ ಕೊಟ್ಟಿದೆ.

    ವೇದಿಕೆಯಲ್ಲಿ ವರುಣ್ ಧವನ್ ಜೊತೆ ಮಾತನಾಡುವಾಗ ನಾನು ನಾಚಿಕೆ ಸ್ವಭಾವದ ವ್ಯಕ್ತಿ ಹಾಗಾಗಿ ನನಗೆ ಮೊದಲ ಗರ್ಲ್‌ಫ್ರೆಂಡ್‌ ಸಿಕ್ಕಿದ್ದೆ, 25 ವರ್ಷ ಆದಾಗ ಎಂದು ಟೈಗರ್ ಶ್ರಾಫ್ ಮಾತನಾಡಿದ್ದಾರೆ. ನೀನು ಸೀರಿಯಸ್‌ ಆಗಿ ಹೇಳ್ತಿದ್ದೀಯಾ? ಎಂದು ಶಾಕ್ ಆಗಿ ವರುಣ್ ಧವನ್ ಕೇಳಿದ್ದಾರೆ.

    ನಿಜ ನನಗೆ ಮೊದಲ ಗರ್ಲ್‌ಫ್ರೆಂಡ್‌ ಸಿಕ್ಕಿದ್ದು 25 ವರ್ಷ ಆದಾಗ, ನನ್ನ ಮೊದಲ ಚಿತ್ರದ ಆಡಿಷನ್ ಸಮಯದಲ್ಲಿ ಎಂದು ಟೈಗರ್ ಶ್ರಾಫ್ ವಿವರಿಸಿದ್ದಾರೆ. ತಕ್ಷಣವೇ ಕೃತಿ ಸನೋನ್ ಅಲ್ವಾ? ಎಂದು ವರುಣ್ ಧವನ್ (Varun Dhawan) ಹೇಳಿದ್ದಾರೆ. ಅವರ ಮಾತನ್ನು ಟೈಗರ್ ಶ್ರಾಫ್ ತಳ್ಳಿಹಾಕಿದ್ದಾರೆ. ನಗುತ್ತಲೇ ಅವರಲ್ಲ ಬಿಡಿ ಎಂದು ನಟ ಸ್ಟಷ್ಟನೆ ನೀಡಿದ್ದಾರೆ. ಕಡೆಗೂ ಆ ಹುಡುಗಿ ಯಾರು ಎಂಬುದನ್ನು ಟೈಗರ್ ಶ್ರಾಪ್ ಗುಟ್ಟಾಗಿಯೇ ಇಟ್ಟಿದ್ದಾರೆ. ಸದ್ಯ ಈ ನಟ ಮಾತನಾಡಿರುವ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ನಟ ಹೇಳದೇ ಇದ್ರೆ ಏನಂತೆ ದಿಶಾ ಪಟಾನಿ ಅವರ ಮೊದಲ ಗರ್ಲ್‌ಫ್ರೆಂಡ್‌ ಅಲ್ವಾ? ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

    ಅಂದಹಾಗೆ, ಟೈಗರ್ ಶ್ರಾಫ್ ಅವರು ‘ಹೀರೋಪಂತಿ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರಕ್ಕೆ ಕೃತಿ ಸನೋನ್ ನಾಯಕಿಯಾಗಿದ್ದರು. ಹಾಗಾಗಿ ಕೃತಿ ಸನೋನ್‌ ಅಥವಾ ದಿಶಾ ಇರಬಹುದಾ ಎಂದು ಫ್ಯಾನ್ಸ್‌ ಯೋಚಿಸುತ್ತಿದ್ದಾರೆ. ದಿಶಾ ಪಟಾನಿ ಜೊತೆ ಟೈಗರ್‌ ಶ್ರಾಫ್‌ ಡೇಟಿಂಗ್‌ ಮಾಡಿದ್ದರು. ಕಳೆದ ವರ್ಷ ಇಬ್ಬರ ಪ್ರೀತಿಗೆ ಬ್ರೇಕ್‌ ಬಿದ್ದಿದೆ.

  • ಹಸಿಬಿಸಿ ದೃಶ್ಯದಲ್ಲಿ ಶಾಹಿದ್, ಕೃತಿ- ಕತ್ತರಿ ಹಾಕಿದ ಸೆನ್ಸಾರ್ ಮಂಡಳಿ

    ಹಸಿಬಿಸಿ ದೃಶ್ಯದಲ್ಲಿ ಶಾಹಿದ್, ಕೃತಿ- ಕತ್ತರಿ ಹಾಕಿದ ಸೆನ್ಸಾರ್ ಮಂಡಳಿ

    ಬಾಲಿವುಡ್ ನಟ ಶಾಹಿದ್ ಕಪೂರ್, ಕೃತಿ ಸನೋನ್ (Kriti Sanon) ನಟನೆಯ ‘ತೇರಿ ಬಾತೋ ಮೇ ಐಸಾ ಉಲ್ಟಾ ಜಿಯಾ’ ಇದೇ ಫೆ.9ಕ್ಕೆ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಶಾಹಿದ್, ಕೃತಿ ಸಖತ್ ಬೋಲ್ಡ್ ಆಗಿ‌ ನಟಿಸಿದ್ದು, ಸೆನ್ಸಾರ್ ಮಂಡಳಿ ಹಸಿಬಿಸಿ ದೃಶ್ಯಗಳಿಗೆ ಕತ್ತರಿ ಹಾಕಿದ್ದಾರೆ.

    ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೃತಿ ಮತ್ತು ಶಾಹಿದ್ ಕಪೂರ್ (Shahid Kapoor) ರೊಮ್ಯಾಂಟಿಕ್ ಜೋಡಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರದ ಟ್ರೈಲರ್ ಕೂಡ ಭಾರೀ ಸದ್ದು ಮಾಡ್ತಿದೆ. ಚಿತ್ರದಲ್ಲಿ ಸಾಕಷ್ಟು ಹಸಿಬಿಸಿ ದೃಶ್ಯಗಳಿರುವ ಕಾರಣ, 25%ರಷ್ಟು ಸೀನ್ ಅನ್ನು ತೆಗೆದು ಹಾಕಲು ಸೆನ್ಸಾರ್ ಮಂಡಳಿ ಸೂಚಿಸಿದೆ. ಇದನ್ನೂ ಓದಿ:ಇಶಾಗೆ ಡಿವೋರ್ಸ್‌ ಕೊಡಲು ಬೆಂಗಳೂರು ಹುಡುಗಿ ಜೊತೆಗಿನ ಭರತ್‌ ಅಫೇರ್‌ ಕಾರಣ?

    ಪ್ರೇಮಿಗಳ ದಿನಾಚರಣೆ ಇರುವ ವಾರದಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಉತ್ತಮ ಓಪನಿಂಗ್ ಪಡೆದುಕೊಳ್ಳುವ ನಿರೀಕ್ಷೆ ಇದೆ. ಬೆಡ್ ರೂಮ್ ದೃಶ್ಯಕ್ಕೆ ಕತ್ತರಿ ಹಾಕಿದ್ದು ಮಾತ್ರವಲ್ಲದೇ, ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬ ಸಂದೇಶವನ್ನು ದೊಡ್ಡ ಅಕ್ಷರಗಳಲ್ಲಿ ಪ್ರದರ್ಶಿಸುವಂತೆ ಸೂಚಿಸಲಾಗಿದೆ. ಡೈಲಾಗ್‌ನಲ್ಲಿ ಕೆಲವು ಪದಗಳನ್ನು ಬದಲಿಸಬೇಕು ಎಂದು ಆದೇಶಿಸಲಾಗಿದೆ. ಸೆನ್ಸಾರ್ ಮಂಡಳಿ ಸೂಚಿಸಿದ ಕಡೆಗಳಲ್ಲಿ ಕತ್ತರಿ ಹಾಕಿದ ಬಳಿಕ ಚಿತ್ರದ ಅವಧಿ 2 ಗಂಟೆ 23 ನಿಮಿಷ ಆಗಿದೆ.

    ‘ಮಿಮಿ’ (Mimi) ನಟಿ ಕೃತಿ ಸನೋನ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ‘ತೇರಿ ಬಾತೋ ಮೇ ಐಸಾ ಉಲ್ಟಾ ಜಿಯಾ’ ಸಿನಿಮಾದಲ್ಲಿ ರೋಬೋಟ್ ಪಾತ್ರಕ್ಕೆ ನಟಿ ಜೀವತುಂಬಿದ್ದಾರೆ. ಟ್ರೈಲರ್ ಝಲಕ್‌ನಲ್ಲಿ ರೋಬೋಟ್ ಕೃತಿ ಜೊತೆ ಶಾಹಿದ್ ರೊಮ್ಯಾನ್ಸ್ ದೃಶ್ಯಗಳನ್ನು ನೋಡಿ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

    ಅಮಿತ್ ಜೋಶಿ ಮತ್ತು ಆರಾಧನಾ ಶಾ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಶಾಹಿದ್ ಕಪೂರ್- ಕೃತಿ ಸನೋನ್ ಜೋಡಿಯಾಗಿ ನಟಿಸಿದ್ದಾರೆ. ಧರ್ಮೇಂದ್ರ, ಡಿಂಪಲ್ ಕಪಾಡಿಯಾ, ರಾಕೇಶ್ ಬೇಡಿ, ರಾಜೇಶ್ ಕುಮಾರ್ ಮುಂತಾದವರು ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

  • ನಾನಿನ್ನೂ ಸಿಂಗಲ್ ಆದರೆ ಮದುವೆಗೆ ರೆಡಿ ಎಂದ ಕೃತಿ ಸನೋನ್

    ನಾನಿನ್ನೂ ಸಿಂಗಲ್ ಆದರೆ ಮದುವೆಗೆ ರೆಡಿ ಎಂದ ಕೃತಿ ಸನೋನ್

    ಬಾಲಿವುಡ್ (Bollywood) ಬ್ಯೂಟಿ ಕೃತಿ ಸನೋನ್ (Kriti Sanon) ಇತ್ತೀಚೆಗೆ ‘ಮಿಮಿ’ (Mimi Film) ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಈಗ ಮದುವೆ ವಿಚಾರವಾಗಿ ನಟಿ ಮತ್ತೆ ಸುದ್ದಿಯಲ್ಲಿದ್ದಾರೆ. ನಾನಿನ್ನೂ ಸಿಂಗಲ್ ಆದರೆ ಮದುವೆಗೆ ರೆಡಿ ಎಂದು ಸಂದರ್ಶನವೊಂದರಲ್ಲಿ ಕೃತಿ ತಮ್ಮ ಹುಡುಗ (Partner) ಹೇಗಿರಬೇಕು ಎಂದು ರಿವೀಲ್ ಮಾಡಿದ್ದಾರೆ.

    ಕೃತಿ ಸನೋನ್ ಎಂಗೇಜ್ ಆಗಿದ್ದಾರೆ ಎನ್ನುವಂತಹ ಸುದ್ದಿಗಳು ಆಗಾಗ ಟಾಕ್ ಆಗುತ್ತಿರುತ್ತದೆ. ಈಗ ಸಂದರ್ಶನವೊಂದರಲ್ಲಿ ತನ್ನ ಬಾಳ ಸಂಗಾತಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಾನಿನ್ನೂ ಸಿಂಗಲ್ ಎಂದು ಕೃತಿ ಹೇಳಿಕೆ ನೀಡಿರೋದು ಪಡ್ಡೆಹುಡುಗರಿಗೆ ಅಚ್ಚರಿಯ ಜೊತೆ ಖುಷಿ ಕೊಟ್ಟಿದೆ. ಇದನ್ನೂ ಓದಿ: ಮಂತ್ರಿಯೊಂದಿಗೆ ನನ್ನ ಪತ್ನಿಗೆ ಅಫೇರ್ ಇತ್ತು- ಶಾಕಿಂಗ್ ಹೇಳಿಕೆ ಕೊಟ್ಟ ಸಂಜಯ್ ದತ್

    ನಾನು ಒಂಟಿ ಆದರೆ ಮದುವೆಯಾಗಲು (Wedding) ರೆಡಿ, ಆ ಹುಡುಗನಲ್ಲಿ ಕೆಲವು ಗುಣಗಳು ಇರಲೇಬೇಕು ಎಂದು ತಮ್ಮ ಮನದಾಸೆಯನ್ನ ನಟಿ ಹಂಚಿಕೊಂಡಿದ್ದಾರೆ. ಪ್ರೀತಿಯಲ್ಲಿ ಪ್ರಾಮಾಣಿಕತೆಯನ್ನು ಬಯಸುತ್ತೇನೆ. ತನಗಿಂತ ತಾನು ಮದುವೆಯಾಗುವ ಹುಡುಗ ಎತ್ತರವಿರಬೇಕು. ಒಳ್ಳೆಯ ಮನುಷ್ಯನಾಗಿರಬೇಕು ಎಂದು ನಟಿ ಹೇಳಿದ್ದಾರೆ.

    ಕೃತಿ ಸನೋನ್ ಅವರ ಹೆಸರು ಬಾಹುಬಲಿ (Bahubali) ನಟ ಪ್ರಭಾಸ್ (Prabhas) ಜೊತೆ ಸದ್ದು ಮಾಡಿತ್ತು. ಇಬ್ಬರು ಪ್ರೀತಿಯಲ್ಲಿದ್ದಾರೆ, ಸದ್ಯದಲ್ಲೇ ಮದುವೆ ಕೂಡ ಆಗುತ್ತಾರೆ ಎಂದು ಸುದ್ದಿಯಾಗಿತ್ತು.

    ಶಾಹಿದ್ ಕಪೂರ್ (Shahid Kapoor) ಜೊತೆ ಕೃತಿ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಮುಂದಿನ ವರ್ಷ ಈ ಚಿತ್ರ ತೆರೆಗೆ ಬರಲಿದೆ. ಹೊಸ ಬಗೆಯ ಪಾತ್ರಗಳತ್ತ ನಟಿ ಎದುರು ನೋಡುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮನೀಷ್ ಮಲ್ಹೋತ್ರಾ ನಿರ್ದೇಶನದಲ್ಲಿ ಮೀನಾ ಕುಮಾರಿ ಬಯೋಪಿಕ್- ಕೃತಿ ಸನೋನ್ ನಾಯಕಿ?

    ಮನೀಷ್ ಮಲ್ಹೋತ್ರಾ ನಿರ್ದೇಶನದಲ್ಲಿ ಮೀನಾ ಕುಮಾರಿ ಬಯೋಪಿಕ್- ಕೃತಿ ಸನೋನ್ ನಾಯಕಿ?

    ಬಾಲಿವುಡ್‌ನಲ್ಲಿ (Bollywood) ಸದ್ಯ ಬಯೋಪಿಕ್‌ಗಳ ಹಾವಳಿ ಜೋರಾಗಿದೆ. ಸದ್ದಿಲ್ಲದೇ ತೆರೆಮರೆಯಲ್ಲಿ ಲೆಜೆಂಡರಿ ಹೀರೋಯಿನ್ ಮೀನಾ ಕುಮಾರಿ (Meena Kumari) ಜೀವನದ ಕಥೆಯನ್ನ ಸಿನಿಮಾ ಮಾಡಲು ಪ್ಲ್ಯಾನ್ ನಡೆಯುತ್ತಿದೆ. ಬಾಲಿವುಡ್‌ನ ಖ್ಯಾತ ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ (Manish Malhotra) ಅವರು ಮೊದಲ ಬಾರಿಗೆ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ.‌

    ಹಿಂದಿ ಸಿನಿಮಾ ರಂಗದ ಲೆಜೆಂಡರಿ ನಾಯಕಿ ಮೀನಾ ಕುಮಾರಿ ಅವರು ತಮ್ಮ 38ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದರು. ಬಾಲಿವುಡ್‌ನ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಸ್ಟಾರ್ ನಟರಿಗೆ ಜೋಡಿಯಾಗಿ ಮೆರೆದಿದ್ದರು. ಮಾಡಿದ್ದು ಕೇವಲ 12 ಸಿನಿಮಾವಾಗಿದ್ರು, ಮೀನಾ ತಮ್ಮ ನಟನೆಯ ಮೂಲಕ ಮೋಡಿ ಮಾಡಿದ್ದರು. ವೈಯಕ್ತಿಕ ಬದುಕಿನಲ್ಲಿ ಸಂಸಾರ ಸಂಕಷ್ಟ ಸೇರಿದಂತೆ ಹಲವು ಕಾರಣಗಳಿಂದ ಕುಡಿತದ ಚಟ ಮೀನಾ ಕುಮಾರಿ ಅವರಿಗಿತ್ತು. ಅದರಿಂದ ದುರಂತ ಅಂತ್ಯ ಕಂಡಿದ್ದರು. ಇದನ್ನೇ ಸಿನಿಮಾ ಮಾಡಲು ಬಾಲಿವುಡ್‌ನಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ.

    ಬಾಲಿವುಡ್ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಆಗಿ ಫೇಮಸ್ ಆಗಿರುವ ಮನೀಷ್ ಮಲ್ಹೋತ್ರಾ ಅವರು ನಿರ್ದೇಶನ ಮಾಡಲು ಮನಸ್ಸು ಮಾಡಿದ್ದಾರೆ. ಅದಕ್ಕಾಗಿ ಕಥೆ ಕೂಡ ಸಿದ್ಧವಾಗುತ್ತಿದೆ. ಸ್ಕ್ರಿಪ್ಟ್ ವರ್ಕ್ ತೆರೆಮರೆಯಲ್ಲಿ ನಡೆಯುತ್ತಿದೆ. ಹಿರಿಯ ನಟಿ ರೇಖಾ(Rekha) ಅವರ ಸಲಹೆಯ ಮೇರೆಗೆ ಸಿನಿಮಾ ಮಾಡಲು ಮನೀಷ್ ಮುಂದಾಗಿದ್ದಾರೆ. ಇದನ್ನೂ ಓದಿ:ಟಾಲಿವುಡ್‌ನಲ್ಲಿ ಕನ್ನಡತಿಯರ ದರ್ಬಾರ್- ತೆಲುಗು ನಟಿಯರ ಬಗ್ಗೆ ಅಲ್ಲು ಅರ್ಜುನ್ ಬೇಸರ

    ಮೀನಾ ಕುಮಾರಿ ಅವರ ಪಾತ್ರಕ್ಕೆ ಬಾಲಿವುಡ್‌ನ ಪರಮ ಸುಂದರಿ ಕೃತಿ ಸನೋನ್ (Kriti Sanon) ಜೀವ ತುಂಬಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿಯಿಲ್ಲ. ಆದರೆ ಮನೀಷ್, ಮೀನಾ ಕುಮಾರಿ ಸಿನಿಮಾ ಮಾಡುವ ಬಗ್ಗೆ ಅಧಿಕೃತ ಮಾಹಿತಿ ಬಿಚ್ಚಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕೃತ ಅಪ್‌ಡೇಟ್‌ಗೆ ಕಾಯಬೇಕಿದೆ. ‘ಆದಿಪುರುಷ್ʼ (Adipurush) ಸಿನಿಮಾದಲ್ಲಿ ಸೀತೆಯಾಗಿ ಕೃತಿ ನಟಿಸಿದ್ದರು. ಈಗ ಮೀನಾ ಕುಮಾರಿಯಾಗಿ ನಟಿಸಲು ಓಕೆ ಎಂದು ಹೇಳ್ತಾರಾ ಕಾದುನೋಡಬೇಕಿದೆ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಮಾಯಣಕ್ಕೂ ‘ಆದಿಪುರುಷ್’ ಸಿನಿಮಾಗೂ ಸಂಬಂಧವಿಲ್ಲ- ವರಸೆ ಬದಲಿಸಿದ ಚಿತ್ರತಂಡ

    ರಾಮಾಯಣಕ್ಕೂ ‘ಆದಿಪುರುಷ್’ ಸಿನಿಮಾಗೂ ಸಂಬಂಧವಿಲ್ಲ- ವರಸೆ ಬದಲಿಸಿದ ಚಿತ್ರತಂಡ

    ಬಾಹುಬಲಿ ಪ್ರಭಾಸ್ (Bahubali Prabhas), ಕೃತಿ (Kriti Sanon) ನಟನೆಯ ‘ಆದಿಪುರುಷ್’ (Adipurush) ಜೂನ್ 16ಕ್ಕೆ ರಿಲೀಸ್ ಆಗಿದೆ. ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ಬಗ್ಗೆ ಬಗೆ ಬಗೆಯ ರೀತಿಯಲ್ಲಿ ಚರ್ಚೆ ನಡೆಯುತ್ತಿದ್ದರೆ, ಚಿತ್ರತಂಡದ ಸಂಭಾಷಣೆಕಾರ ಮನೋಜ್ ಮುಂತಶೀರ್ ಅವರು ಇದೀಗ ಸಿನಿಮಾ ಬಗ್ಗೆ ವರಸೆ ಬದಲಿಸಿದ್ದಾರೆ. ರಾಮಾಯಣಕ್ಕೂ ಆದಿಪುರುಷ್ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಅಂತಾ ಹೇಳಿಕೆ ನೀಡಿದ್ದಾರೆ.

    ಓಂ ರಾವತ್ (Om Raut) ನಿರ್ದೇಶನದ ‘ಆದಿಪುರುಷ್’ ಸಿನಿಮಾಗೆ ಕೆಟ್ಟ ವಿಮರ್ಶೆ ವ್ಯಕ್ತವಾಗುತ್ತಿದೆ. ಈ ಸಿನಿಮಾದ ಹಲವು ಅಂಶಗಳನ್ನು ಟೀಕಿಸಲಾಗುತ್ತಿದೆ. ರಾಮಾಯಣವನ್ನು ಆಧರಿಸಿದ ಈ ಚಿತ್ರದಲ್ಲಿ ಪ್ರಭಾಸ್ ಅವರು ರಾಮನ ಪಾತ್ರ ಮಾಡಿದ್ದಾರೆ. ಸೀತೆಯಾಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ. ಆಂಜನೇಯನಾಗಿ ದೇವದತ್ತ ನಾಗೆ ಅವರು ಅಭಿನಯಿಸಿದ್ದಾರೆ. ಲಕ್ಷ್ಮಣನ ಪಾತ್ರಕ್ಕೆ ಸನ್ನಿ ಸಿಂಗ್ ಅವರು ಬಣ್ಣ ಹಚ್ಚಿದ್ದಾರೆ. ಸೈಫ್ ಅಲಿ ಖಾನ್ ಅವರು ರಾವಣನಾಗಿ ಅಬ್ಬರಿಸಿದ್ದಾರೆ. ಆದರೆ ರಾಮಾಯಣವನ್ನು ತೋರಿಸಿದ ರೀತಿ ಸರಿಯಾಗಿಲ್ಲ ಎಂದು ಪ್ರೇಕ್ಷಕರು ತಕರಾರು ತೆಗೆದಿದ್ದಾರೆ. ಸೈಫ್‌ರನ್ನ ಮಾಡ್ರನ್ ರಾವಣನಂತೆ ತೋರಿಸಿರೋದು ಟ್ರೋಲ್ ಆಗುತ್ತಿದೆ. ಸಿನಿಮಾ ನೈಜವಾಗಿ ತೋರಿಸಿಲ್ಲ ಎಂದು ಟೀಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿನಿಮಾದ ಸಂಭಾಷಣೆಕಾರ ಮನೋಜ್ ಮುಂತಶೀರ್ ಅವರು ಮಾತು ಬದಲಾಯಿಸಿದ್ದಾರೆ. ಈ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ. ಇದನ್ನೂ ಓದಿ:ಕಾಲು ಮುರಿದುಕೊಂಡು ಫೋಟೋ ಶೇರ್ ಮಾಡಿದ ನಟ ಜಗ್ಗೇಶ್

    ಸೋಶಿಯಲ್ ಮೀಡಿಯಾದಲ್ಲಿ ‘ಆದಿಪುರುಷ್’ ಸಿನಿಮಾವನ್ನು ಟ್ರೋಲ್ ಮಾಡಲಾಗುತ್ತಿದೆ. ಪಾತ್ರಗಳನ್ನು ತೋರಿಸಿದ ರೀತಿ, ಗ್ರಾಫಿಕ್ಸ್ ಗುಣಮಟ್ಟ ಸೇರಿದಂತೆ ಅನೇಕ ವಿಚಾರಗಳನ್ನು ಜನರು ಟೀಕಿಸುತ್ತಿದ್ದಾರೆ. ಈ ನಡುವೆ ಸಂಭಾಷಣಕಾರ ಮನೋಜ್ ಮುಂತಶೀರ್ ಅವರು ನೀಡಿದ ಕೇಳಿಕೆ ಸೆನ್ಸೇಷನ್ ಕ್ರಿಯೆಟ್ ಮಾಡಿದೆ. ಇದನ್ನು ನಾನು ಮೊದಲೇ ಹೇಳಿದ್ದೇ ಮತ್ತು ಈಗಲೂ ಹೇಳುತ್ತೇನೆ. ಈ ಸಿನಿಮಾದ ಹೆಸರು ಆದಿಪುರುಷ್. ನಾವು ರಾಮಾಯಣವನ್ನು ಸಿನಿಮಾ ಮಾಡಿಲ್ಲ. ರಾಮಾಯಾಣಕ್ಕೂ ಆದಿಪುರುಷ್‌ ಸಿನಿಮಾಗೂ ಸಂಬಂಧವಿಲ್ಲ. ಅದರಿಂದ ತುಂಬ ಸ್ಫೂರ್ತಿ ಪಡೆದಿದ್ದೇವೆ. ಡಿಸ್‌ಕ್ಲೈಮರ್‌ನಲ್ಲೂ ನಾವು ಅದನ್ನೇ ಹೇಳಿದ್ದೇವೆ ಎಂದು ಮನೋಜ್ ಮುಂತಶೀರ್ ಹೇಳಿದ್ದಾರೆ.

    ಚಿತ್ರತಂಡದ ನಡೆಗೆ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಸಿನಿಮಾ ಕಂಟೆಂಟ್ ವಿಷ್ಯವಾಗಿ ಸುದ್ದಿಯಾಗೋದ್ದಕ್ಕಿಂತ ಟ್ರೋಲ್ ಮಚಾರವಾಗಿಯೇ ಭಾರಿ ಸದ್ದು ಮಾಡುತ್ತಿದೆ.

  • ಆಂಜನೇಯನಿಗಾಗಿ ಮೀಸಲಿಟ್ಟ ಸೀಟ್‌ನಲ್ಲಿ ಕುಳಿತು ‘ಆದಿಪುರುಷ್‌’ ಚಿತ್ರ ನೋಡಿದ ವ್ಯಕ್ತಿಗೆ ಬಿತ್ತು ಪೆಟ್ಟು

    ಆಂಜನೇಯನಿಗಾಗಿ ಮೀಸಲಿಟ್ಟ ಸೀಟ್‌ನಲ್ಲಿ ಕುಳಿತು ‘ಆದಿಪುರುಷ್‌’ ಚಿತ್ರ ನೋಡಿದ ವ್ಯಕ್ತಿಗೆ ಬಿತ್ತು ಪೆಟ್ಟು

    ಪ್ರಭಾಸ್- ಕೃತಿ ಸನೋನ್ (Kriti Sanon) ನಟನೆಯ ‘ಆದಿಪುರುಷ್’ ಸಿನಿಮಾ ಜೂನ್ 16ರಂದು ರಿಲೀಸ್ ಆಗಿದೆ. ನೆಚ್ಚಿನ ನಟ ಪ್ರಭಾಸ್ ನಟನೆಯ ಬಿಡುಗಡೆಯ ಸಂಭ್ರಮದ ನಡುವೆ ಅಹಿತಕರ ಘಟನೆವೊಂದು ನಡೆದಿದೆ. ಚಿತ್ರಮಂದಿರದಲ್ಲಿ ಆಂಜನೇಯನಿಗಾಗಿ ಮೀಸಲಿಟ್ಟ ಸೀಟ್‌ನಲ್ಲಿ ಆದಿಪುರುಷ್ ಚಿತ್ರ ವೀಕ್ಷಣೆ ಮಾಡಿದ್ದಕ್ಕಾಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಕುರಿತ ವೀಡಿಯೋ ಎಲ್ಲೆಡೆ ಸದ್ದು ಮಾಡುತ್ತಿದೆ.‌ ಇದನ್ನೂ ಓದಿ:ನಟ ಸುದೀಪ್ ಪ್ರಚಾರಕ್ಕೆ ಬಾರದಂತೆ ತಡೆದದ್ದು ಸಿಎಂ ಸಿದ್ದು : ಪ್ರತಾಪ್ ಸಿಂಹ ಹೊಸ ಬಾಂಬ್

    ಬಾಹುಬಲಿ ಪ್ರಭಾಸ್ (Prabhas) , ಕೃತಿ ಅಭಿನಯದ ‘ಆದಿಪುರುಷ್’ (Adipurush) ಚಿತ್ರ ಕೊನೆಗೂ ತೆರೆಗೆ ಅಪ್ಪಳಿಸಿದೆ. ರಾಮಾಯಣ ಆಧಾರಿತ ಈ ಸಿನಿಮಾದಲ್ಲಿ ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೋನ್ ನಟಿಸಿದ್ದಾರೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಕಳಪೆ ವಿಎಕ್ಸ್ಎಫ್ ಎಂದು ಕಿಡಿಕಾರಿದ್ದಾರೆ. ಪ್ರತಿ ಚಿತ್ರಮಂದಿರದಲ್ಲೂ ಆಂಜನೇಯನಿಗಾಗಿ ಒಂದು ಸೀಟ್‌ನ ಮೀಸಲಿಡಲಾಗಿತ್ತು. ಅಭಿಮಾನಿಯೊಬ್ಬ ಖಾಲಿ ಬಿಟ್ಟಿದ್ದ ಸೀಟ್‌ನಲ್ಲಿ ಆದಿಪುರುಷ್ ಸಿನಿಮಾ ನೋಡಿದ್ದಾನೆ, ಇದನ್ನ ನೋಡಿದ ಇತರೆ ಅಭಿಮಾನಿಗಳು ಆ ವ್ಯಕ್ತಿಗೆ ಥಳಿಸಿದ್ದಾರೆ.

    ಪ್ರಭಾಸ್ ಸಿನಿಮಾ ಅನೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ಟೆಕೆಟ್ ಸಿಗದೆ ಪರದಾಡುತ್ತಿದ್ದಾರೆ. ಚಿತ್ರಮಂದಿರಗಳು ತುಂಬಿದ ಕಾರಣ ಆಂಜನೇಯನಿಗೆ ಮೀಸಲಿಟ್ಟ ಆಸನದ ಮೇಲೆ ಕುಳಿತಿದ್ದಿದ್ದಕ್ಕಾಗಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಲಾಗಿದೆ. ಹೈದರಾಬಾದ್‌ನ ಭ್ರಮರಾಂಬ ಥಿಯೇಟರ್‌ನಲ್ಲಿ ಈ ಘಟನೆ ನಡೆದಿದೆ. ಚಿತ್ರಮಂದಿರ ಹೌಸ್‌ಫುಲ್ ಇದ್ದಿದ್ದರಿಂದ ವ್ಯಕ್ತಿಯರ‍್ವ ಹನುಮಂತನಿಗೆ ಕಾಯ್ದಿರಿಸಿದ ಸೀಟ್ ಮೇಲೆ ಕುಳಿತಿದ್ದಾನೆ. ಇದನ್ನು ಸಹಿಸದ ಉಳಿದವರು ಆತನಮೇಲೆ ದಾಳಿ ಮಾಡಲಾಗಿದೆ. ಕೆಲವರು ಈ ಹಲ್ಲೆಯನ್ನು ತಪ್ಪಿಸಲು ಪ್ರಯತ್ನಿಸಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ.

    ರಾಮನ ಆರಾಧನೆ ನಡೆದರೆ ಆ ಸ್ಥಳದಲ್ಲಿ ಆಂಜನೇಯ (Anjaneya) ಬರುತ್ತಾನೆ ಎಂಬುದು ಭಕ್ತರ ನಂಬಿಕೆ. ಆ ನಂಬಿಕೆ ಚಿತ್ರತಂಡಕ್ಕೂ ಇತ್ತು. ಹಾಗಾಗಿ ಪ್ರತಿ ಚಿತ್ರಮಂದಿರದಲ್ಲೂ ಒಂದು ಸೀಟ್ ಖಾಲಿ ಬೀಡಲಾಗಿತ್ತು. ಈ ಬಗ್ಗೆ ಹಿಂದೆಯೇ ಚಿತ್ರದ ನಿರ್ದೇಶಕ ಓಂ ರಾವತ್ ಹೇಳಿದ್ದರು.

  • ಚಿತ್ರ ನಿರ್ಮಾಣಕ್ಕೆ ಮುಂದಾದ ಬಾಲಿವುಡ್ ನಟಿ ಕೃತಿ ಸನೋನ್

    ಚಿತ್ರ ನಿರ್ಮಾಣಕ್ಕೆ ಮುಂದಾದ ಬಾಲಿವುಡ್ ನಟಿ ಕೃತಿ ಸನೋನ್

    ದಿಪುರುಷ (Adipurush) ಚಿತ್ರದ ನಾಯಕಿ ಕೃತಿ ಸನೋನ್ (Kriti Sanon), ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಆದಿಪುರುಷ ಸಿನಿಮಾ ಬಿಡುಗಡೆಯ ಹೊತ್ತಲ್ಲಿ, ತಾವೇ ಒಂದು ಸಿನಿಮಾವನ್ನು ನಿರ್ಮಾಣ (Production) ಮಾಡುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ, ಆ ಸಿನಿಮಾದಲ್ಲಿ ತಾವೇ ನಾಯಕಿಯಾಗಿ ನಟಿಸುತ್ತೇನೆ ಎಂದೂ ಸ್ಪಷ್ಟಪಡಿಸಿದ್ದಾರೆ.

    ಸಿನಿಮಾ ಯಾರದೇ ಆಗಿರಲಿ, ಅಲ್ಲಿ ನಾಯಕಿಯರಿಗೆ ಸಿಗಬೇಕಾದ ಅವಕಾಶ ಸಿಗುವುದಿಲ್ಲ ಎಂದು ಈ ಹಿಂದೆ ಕೃತಿ ಹೇಳಿಕೊಂಡಿದ್ದರು. ನಾಯಕನಷ್ಟೇ ತಮಗೂ ನ್ಯಾಯ ಸಿಗಬೇಕು ಎಂದೂ ಅವರು ಮಾತನಾಡಿದ್ದರು. ಈ ಹೊತ್ತಿನಲ್ಲೇ ಸಿನಿಮಾ ನಿರ್ಮಾಣದ ಘೋಷಣೆ ಮಾಡಿದ್ದು, ತಮ್ಮಿಷ್ಟದಂತೆ ಚಿತ್ರವನ್ನು ಅವರು ತಯಾರಿಸಲಿದ್ದಾರೆ. ಇದನ್ನೂ ಓದಿ:ಮೊದಲ ವರ್ಷದ ವಿವಾಹ ಸಂಭ್ರಮದಲ್ಲಿ ‘ಸ್ವಯಂವಿವಾಹಿತೆ’ ಕ್ಷಮಾ ಬಿಂದು

    ಸಿನಿಮಾ ರಂಗದಲ್ಲಿ ಮಹಿಳಾ ಪಾತ್ರಗಳಿಗಿಂತ ಪುರುಷ ಪಾತ್ರಗಳೇ ತೆರೆಯ ಮೇಲೆ ಹೆಚ್ಚು ಕಾಣಿಸಿಕೊಳ್ಳುತ್ತವೆ. ನಾಯಕಿಯರಿಗೆ ಹೆಚ್ಚು ಪ್ರಾಶಸ್ತ್ಯ ಇರುವುದಿಲ್ಲ. ಸಿಕ್ಕಿರುವ ಕಡಿಮೆ ಅವಧಿಯಲ್ಲೇ ನಮ್ಮ ಪ್ರತಿಭೆಯನ್ನು ತೋರಿಸುವಂತಹ ಅನಿವಾರ್ಯತೆ ಇರುತ್ತದೆ. ನನಗೆ ಈವರೆಗೂ ಸಿಕ್ಕಿರುವ ಪಾತ್ರಗಳು ಅಂಥದ್ದೇ ಆಗಿವೆ. ಅದರಲ್ಲಿಯೇ ನಾನು ತೃಪ್ತಿ ಪಟ್ಟಿದ್ದೇನೆ ಎಂದಿದ್ದರು ಕೃತಿ ಸನೋನ್.

    ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, “ಯಾವುದೇ ಸಿನಿಮಾ ರಂಗದಲ್ಲಿ ನಾಯಕ ಮತ್ತು ನಾಯಕಿಗೆ ಸಮಾನವಾಗಿ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳಲು ಅವಕಾಶ ಸಿಗುವುದು ಕಡಿಮೆ. ಕಥೆಯಲ್ಲಿ ಮಹಿಳೆಗೆ ಹೆಚ್ಚಿನ ಮಹತ್ವವಿದ್ದು ಪುರುಷನಿಗೆ ಕಡಿಮೆ ಇದ್ದರೆ, ಯಾವ ನಟನೂ ಅಂತಹ ಪಾತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಈ ಮನಸ್ಥಿತಿ ಚಿತ್ರರಂಗದಲ್ಲಿ ಬದಲಾಗಬೇಕು ಎಂದು ನಾನು ಬಯಸುತ್ತೇನೆ. ಕೆಲವರು ಇದಕ್ಕೆ ಅಪವಾದವಾಗಿಯೂ ಇರುತ್ತಾರೆ ಎಂದು ಅವರು ಮಾತನಾಡಿದ್ದರು.

    ಮುಂದುವರೆದು ಮಾತನಾಡಿದ್ದ ಕೃತಿ, ‘ಬರೇಲಿ ಕಿ ಬರ್ಫಿ’ ಚಿತ್ರದ ನಂತರ ನಾನು ಅನೇಕ ಕಥೆಗಳನ್ನು ಕೇಳಿದೆ. ನನ್ನ ಬಳಿ ಬಂದ ಸಿನಿಮಾಗಳಲ್ಲಿ ಶೇ.99ರಷ್ಟು ಸಿನಿಮಾಗಳಲ್ಲಿ ನನ್ನದು ಸಣ್ಣ ಪಾತ್ರವೇ ಆಗಿರುತ್ತಿತ್ತು. ಕೆಲವನ್ನು ಒಪ್ಪಿದೆ, ಕೆಲವನ್ನು ಬಿಟ್ಟೆ. ಮಾಡಿದ ಪಾತ್ರಗಳಿಂದಾಗಿ ಈಗ ಜನರು ನನ್ನನ್ನು ಗುರುತಿಸುತ್ತಿದ್ದಾರೆ. ಅದು ನನಗೆ ಖುಷಿ ತಂದಿದೆ ಎಂದಿರುವ ಕೃತಿ. ಈ ಎಲ್ಲ ನೋವುಗಳನ್ನು ಮರೆಯಲು ತಾವೇ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

  • ಕೆ.ಆರ್.ಜಿ ಸ್ಟುಡಿಯೋದಿಂದ ಆದಿಪುರುಷ ರಿಲೀಸ್

    ಕೆ.ಆರ್.ಜಿ ಸ್ಟುಡಿಯೋದಿಂದ ಆದಿಪುರುಷ ರಿಲೀಸ್

    ಭಾರತೀಯ ಸಿನಿಮಾ ರಂಗದಲ್ಲಿ ದಾಖಲೆ ಬರೆದ ಕೆ.ಜಿ.ಎಫ್ 1,  ಕೆ.ಜಿ.ಎಫ್ 2, ಕಾಂತಾರ, ಚಾರ್ಲಿ 777, ಗಂಧದಗುಡಿ, ವಕೀಲ್ ಸಾಬ್ ಮತ್ತು ದಸರಾ ಮುಂತಾದ ಚಿತ್ರಗಳನ್ನು ಬಿಡುಗಡೆ ಮಾಡಿದ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆ ಇದೀಗ ಆದಿಪುರುಷ (Adipurusha) ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ.

    ಕರ್ನಾಟಕದಲ್ಲಿ ಕೆ.ಆರ್.ಜಿ ಸ್ಟುಡಿಯೋಸ್ (KRG Studios) ಸಂಸ್ಥೆ ಇದುವರೆಗೂ ಬಹಳ ಶ್ರದ್ದೆಯಿಂದ ಚಿತ್ರಗಳನ್ನು ಬಿಡುಗಡೆ ಮಾಡಿಕೊಂಡು ಬರುತ್ತಿರುವುದು ಕರ್ನಾಟಕದ ಜನತೆಗೆ ತಿಳಿದಿರುವ ವಿಷಯ. ಸದಭಿರುಚಿಯ ಚಿತ್ರಗಳನ್ನು ಸಿನಿಮಾ ಪ್ರೇಕ್ಷಕರಿಗೆ ತಲುಪಿಸುವ ಕೈಂಕರ್ಯದಲ್ಲಿ ಕೆ.ಆರ್.ಜಿ.ಸ್ಟುಡಿಯೋಸ್ ಸಂಸ್ಥೆ ತೊಡಗಿದೆ. ಈ ಸಂಸ್ಥೆಯ ಕಿರೀಟಕ್ಕೆ ಮತ್ತೊಂದು ಗರಿ ಆದಿಪುರುಷ ಆಗಲಿದೆ ಅನ್ನುವುದು ಸಂಸ್ಥೆಯ ನಂಬಿಕೆ.

    ನಮ್ಮ ಹಿಂದೂ ಸಂಸ್ಕೃತಿಯ ಮಹಾಕಾವ್ಯ ಎಂದೇ ಹೇಳಲ್ಪಡುವ ಪವಿತ್ರ ಗ್ರಂಥ ರಾಮಾಯಣದ ಎಳೆಯನ್ನು ಆಧಿರಿಸಿ ತಯಾರಿಸಿರುವ ಚಿತ್ರ ಆದಿಪುರುಷ. ಟಿ. ಸೀರೀಸ್ ಮತ್ತು ರೆಟ್ರೋ ಫಿಲ್ಮಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಕಥೆ ಹೆಣೆದು ನಿರ್ದೇಶನ ಮಾಡುತ್ತಿರುವುದು ಓಂ ರಾವತ್ (Om Raut) ಅವರು. ಆದಿಪುರುಷ ಚಿತ್ರವು ಏಕಕಾಲಕ್ಕೆ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗಿದೆ. ಚಿತ್ರದ ತಾರಾಗಣದಲ್ಲಿ ಪ್ರಭಾಸ್ (Prabhas), ಕೃತಿ ಸನೋನ್ (Kriti Sanon),  ಸೈಫ್ ಅಲಿ ಖಾನ್, ಸನ್ನಿ ಸಿಂಗ್, ದೇವದತ್ತ ನಾಗೇ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ಸಿನಿಮಾ ಪ್ರಚಾರಕ್ಕಾಗಿ ಗಿಮಿಕ್‌ ಮಾಡಿದ ಕಾಜೋಲ್‌ಗೆ ನೆಟ್ಟಿಗರಿಂದ ತರಾಟೆ

    “ಆದಿಪುರುಷ ಚಿತ್ರದ ಕರ್ನಾಟಕದ ವಿತರಣೆ ನಮಗೆ ಸಿಕ್ಕಿರುವುದು ಬಹಳ ಹೆಮ್ಮೆಯ ಸಂಗತಿ” ಎಂದು ಹೊಂಬಾಳೆ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕರು ಮತ್ತು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯ ಸಂಸ್ಥಾಪಕರು ಆಗಿರುವ ಕಾರ್ತಿಕ್ ಗೌಡ ಸಂತಸ ವ್ಯಕ್ತ ಪಡಿಸಿದ್ದಾರೆ. ನಮ್ಮ ಪೌರಾಣಿಕ ಮಹಾಕಾವ್ಯವಾದ ರಾಮಾಯಣದಲ್ಲಿರುವ ಸಾರವನ್ನು ಇಂದಿನ ಕಾಲಘಟ್ಟಕ್ಕೆ ಮತ್ತು ಇಂದಿನ ಪೀಳಿಗೆಗೆ ಅನುಗುಣವಾಗಿ ಆದಿಪುರುಷ ಚಿತ್ರ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

     

    ಈ ಚಿತ್ರವು ಪ್ರಭಾಸ್ ಮತ್ತು ಯು. ವಿ ಕ್ರಿಯೇಷನ್ಸ್ ಜೊತೆಗಿನ ಕೆ.ಆರ್.ಜಿ ಸ್ಟುಡಿಯೋಸ್ ಒಡನಾಟಕ್ಕೂ ಸಾಕ್ಷಿಯಾಗಲಿದೆ.  ಆದಿಪುರುಷ ಚಿತ್ರ ಜೂನ್ 16 ರಂದು ತೆಲುಗು, ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರಪಂಚದಾದ್ಯಂತ ಬಿಡುಗಡೆ ಆಗಲಿದೆ.

  • ಬಡಮಕ್ಕಳಿಗಾಗಿ ‘ಆದಿಪುರುಷ್’ ಸಿನಿಮಾದ 10 ಸಾವಿರ ಟಿಕೆಟ್ ಖರೀದಿಸಿದ ರಣ್‌ಬೀರ್ ಕಪೂರ್

    ಬಡಮಕ್ಕಳಿಗಾಗಿ ‘ಆದಿಪುರುಷ್’ ಸಿನಿಮಾದ 10 ಸಾವಿರ ಟಿಕೆಟ್ ಖರೀದಿಸಿದ ರಣ್‌ಬೀರ್ ಕಪೂರ್

    ‘ಬಾಹುಬಲಿ’ ಪ್ರಭಾಸ್- ಕೃತಿ ಸನೋನ್ ನಟನೆಯ ‘ಆದಿಪುರುಷ್’ (Adipurush) ಸಿನಿಮಾ ಇದೇ ಜೂನ್ 16ಕ್ಕೆ ತೆರೆಗೆ ಅಬ್ಬರಿಸಲು ಸಿದ್ಧವಾಗಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಯನ್ನ ಹುಟ್ಟು ಹಾಕಿದೆ. ಈ ನಡುವೆ ಬಡಮಕ್ಕಳಿಗಾಗಿ ಬಾಲಿವುಡ್ ನಟ ರಣ್‌ಬೀರ್ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.  ಬಡಮಕ್ಕಳಿಗಾಗಿ 10 ಸಾವಿರ ಟಿಕೆಟ್‌ಗಳನ್ನ ಖರೀದಿಸಿದ್ದಾರೆ. ಬಡಮಕ್ಕಳಿಗೆ ಉಚಿತವಾಗಿ ಸಿನಿಮಾ ನೋಡಲು ರಣ್‌ಬೀರ್‌ ಕಪೂರ್ (Ranbir Kapoor) ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಶ್ರುತಿ ಹರಿಹರನ್- ಸರ್ಜಾ ಮೀಟೂ ಕೇಸ್ : ನಟಿಗೆ ಪೊಲೀಸ್ ನೋಟಿಸ್

    ಈ ಬಗ್ಗೆ ಆದಿಪುರುಷ್ ಟೀಂ ಆಗಲಿ, ರಣ್‌ಬೀರ್ ಕುಟುಂಬದವರು ಯಾವುದೇ ಅಪ್‌ಡೇಟ್ ಹಂಚಿಕೊಂಡಿಲ್ಲ. ಆದರೆ ಸಿನಿಮಾ ವಿಮರ್ಶಕ ತರುಣ್ ಆದರ್ಶ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಬಡಮಕ್ಕಳಿಗಾಗಿ ರಣ್‌ಬೀರ್ ಕಪೂರ್, ಆದಿಪುರುಷ್ ಚಿತ್ರ 10 ಸಾವಿರ ಟಿಕೆಟ್ ಖರೀದಿಸಿದ್ದಾರೆ. ಬುಕ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದೀಗ ರಣ್‌ಬೀರ್ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

    ಪ್ರಭಾಸ್ (Prabhas) ರಾಮನಾಗಿ ನಟಿಸಿದ್ರೆ, ಕೃತಿ ಸನೋನ್ (Kritisanon) ಸೀತೆಯಾಗಿ ಜೀವತುಂಬಿದ್ದಾರೆ. ಸೈಫ್ ಅಲಿ ಖಾನ್ (Saif Ali Khan) ರಾವಣನಾಗಿ ಅಬ್ಬರಿಸಿದ್ದಾರೆ. ಚಿತ್ರದ ಟೀಸರ್, ಹಾಡುಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.

    ಇದೇ ಮೊದಲ ಬಾರಿಗೆ ಪ್ರಭಾಸ್- ಕೃತಿ ಜೊತೆಯಾಗಿ ನಟಿಸಿದ್ದಾರೆ. ಹಾಗಾಗಿ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಸಾಲು ಸಾಲು ಸಿನಿಮಾಗಳ ಸೋಲು ಕಂಡಿರುವ ಪ್ರಭಾಸ್‌ಗೆ ಆದಿಪುರುಷ್ ಚಿತ್ರ ಕೈಹಿಡಿಯುತ್ತಾ ಅಂತಾ ಕಾದುನೋಡಬೇಕಿದೆ.