Tag: kriti sanon

  • ಕ್ರೂ ಪಾರ್ಟ್-2 ನಲ್ಲಿ ಕರೀನಾ ನಟಿಸೋದು ಪಕ್ಕಾ

    ಕ್ರೂ ಪಾರ್ಟ್-2 ನಲ್ಲಿ ಕರೀನಾ ನಟಿಸೋದು ಪಕ್ಕಾ

    2024ರಲ್ಲಿ ತೆರೆಕಂಡು ಥಿಯೇಟ್ರಿಕಲ್ ಹಿಟ್ ಕಂಡ ಕ್ರೂ ಸಿನಿಮಾದ ಪಾರ್ಟ್-2 (Crew 2 Movie) ತೆರೆಮರೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸದ್ಯ ಕ್ರೂ ಸಿನಿಮಾದ ಪಾರ್ಟ್-2ನಲ್ಲಿ ನಟಿ ಕರೀನಾ ಕಪೂರ್ (Kareena Kapoor) ನಟಿಸುವುದು ಪಕ್ಕಾ ಆಗಿದೆ.

    ಈ ಸಿನಿಮಾದಲ್ಲಿ ನಟಿಸೋದಕ್ಕೆ ಸದ್ಯ ಕರೀನಾ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗ್ತಿದೆ. ಆದ್ರೆ ಇನ್ನೆರಡು ಪಾತ್ರಗಳಲ್ಲಿ ಕಮಾಲ್ ಮಾಡಿದ್ದ ಟಬು ಹಾಗೂ ಕೃತಿ ಸನೋನ್ ನಟಿಸುವ ಬಗ್ಗೆ ಯಾವುದೇ ಮಾಹಿತಿ ಹೊರಹಾಕಿಲ್ಲ ಚಿತ್ರತಂಡ. ಇದನ್ನೂ ಓದಿ: ಮ್ಯಾಕ್ಸ್ ಡೈರೆಕ್ಟರ್‌ಗೆ ಕಾರ್ ಗಿಫ್ಟ್ ಕೊಟ್ಟ ಕಿಚ್ಚ ಸುದೀಪ್

    ಕಳೆದ ವರ್ಷ ಬಾಕ್ಸಾಫೀಸ್‌ನಲ್ಲಿ ಸೂಪರ್‌ಹಿಟ್ ಆದ ಕ್ರೂ ಸಿನಿಮಾ ಬಾಲಿವುಡ್‌ನಲ್ಲಿ ಭಾರಿ ಸೌಂಡ್ ಮಾಡಿದೆ. ಏಕ್ತಾ ಕಪೂರ್, ರೀಯಾ ಕಪೂರ್, ಅನಿಲ್ ಕಪೂರ್ ನಿರ್ಮಾಣದಲ್ಲಿ ಮೂಡಿಬಂದ ಈ ಸಿನಿಮಾ ಒಳ್ಳೆಯ ಲಾಭವನ್ನೇ ಮಾಡಿಕೊಟ್ಟಿದೆ. ಹೀಗಾಗಿ, ಈ ಸಿನಿಮಾದ ಪಾರ್ಟ್-2 ನಿರ್ಮಾಣ ಮಾಡಲು ಈ ತಂಡ ಮತ್ತೆ ಮನಸ್ಸು ಮಾಡಿದೆ. ಈ ಸಿನಿಮಾದ ಪಾರ್ಟ್-2ಗೆ ಸದ್ಯ ಕರೀನಾ ಒಬ್ಬರು ಒಪ್ಪಿಗೆ ಹಾಕಿದ್ದಾರೆ.

    ಕ್ರೂ ಸಿನಿಮಾದ ಪಾರ್ಟ್-1 ಚಿತ್ರದಲ್ಲಿ ಕರೀನಾ ಜೊತೆ ಕೃತಿ ಸನೋನ್ ಹಾಗೂ ಟಬು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಿನಿಮಾದಲ್ಲಿ ಮತ್ತಿನ್ಯಾರು ನಟಿಸಲಿದ್ದಾರೆ ಕಾದು ನೋಡಬೇಕು. ಕಳೆದ ವರ್ಷ ಕರೀನಾ ಕಪೂರ್ ಅಭಿನಯದ ಕ್ರೂ ಹಾಗೂ ಸಿಂಗಂ ಅಗೈನ್ ಸಿನಿಮಾ ತೆರೆಕಂಡಿದ್ದವು. ಈ ವರ್ಷ ಪಾಟ್-2 ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಬಿಹಾರ ಮೂಲದ ವ್ಯಕ್ತಿಗಳಿಂದ ಪ್ರಿಯಾಂಕಾ ಉಪೇಂದ್ರ ಮೊಬೈಲ್‌ ಹ್ಯಾಕ್‌!

  • ಕೃತಿ ಸನೋನ್‌ಗೆ ಬಂಪರ್ ಆಫರ್- ಸ್ಟಾರ್ ನಟನ ಜೊತೆ ರೊಮ್ಯಾನ್ಸ್

    ಕೃತಿ ಸನೋನ್‌ಗೆ ಬಂಪರ್ ಆಫರ್- ಸ್ಟಾರ್ ನಟನ ಜೊತೆ ರೊಮ್ಯಾನ್ಸ್

    ಬಾಲಿವುಡ್ ಬೆಡಗಿ ಕೃತಿ ಸನೋನ್‌ಗೆ (Kriti Sanon) ಬಾಲಿವುಡ್‌ನಲ್ಲಿ ಬಂಪರ್ ಅವಕಾಶಗಳು ಬರುತ್ತಿವೆ. ಕಮ್ಮಿ ಸಿನಿಮಾ ಮಾಡಿದ್ರೂ ಕಥೆ ಹಾಗೂ ಪಾತ್ರಕ್ಕೆ ಪ್ರಾಮುಖ್ಯತೆ ಇರೋ ಸಿನಿಮಾದಲ್ಲಿ ಅವರು ನಟಿಸುತ್ತಾರೆ. ಸದ್ಯ ‘ಡಾನ್ 3’ (Don 3) ಸಿನಿಮಾದಲ್ಲಿ ಕೃತಿ ನಟಿಸಲಿದ್ದಾರೆ. ಇದನ್ನೂ ಓದಿ:ಕೇರಳದಲ್ಲಿ ತಲೈವಾ- ನೆಚ್ಚಿನ ನಟನನ್ನು ನೋಡಿ ಫ್ಯಾನ್ಸ್ ಜೈಕಾರ

    ‘ಡಾನ್ 3’ ಸಿನಿಮಾದಲ್ಲಿ ರಣವೀರ್ ಸಿಂಗ್ (Ranveer Singh) ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಅವರಿಗೆ ಜೋಡಿಯಾಗಿ ಈ ಹಿಂದೆ ಕಿಯಾರಾ ಅಡ್ವಾಣಿ ಆಯ್ಕೆ ಆಗಿದ್ದರು. ಆದರೆ ಅವರು ಪ್ರೆಗ್ನೆಂಟ್ ಆಗಿರುವ ಹಿನ್ನೆಲೆ ಈ ಚಿತ್ರವನ್ನು ಕೈಬಿಟ್ಟರು. ಅವರ ಜಾಗಕ್ಕೆ ನಟಿ ಶಾರ್ವರಿ ಆಯ್ಕೆಯಾಗಿದ್ದಾರೆ ಎನ್ನಲಾಗಿತ್ತು. ಆದರೀಗ ಕೃತಿ ಸನೋನ್ ನಾಯಕಿ ಎನ್ನಲಾದ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:‘ನಾಗ್‌ಜಿಲ್ಲಾ’ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್- ಪೋಸ್ಟರ್ ಔಟ್

    ಈಗಾಗಲೇ ಚಿತ್ರತಂಡ ಕೃತಿ ಅವರನ್ನು ‘ಡಾನ್ 3’ ಚಿತ್ರತಂಡ ಸಂಪರ್ಕಿಸಿದೆ ಎನ್ನಲಾಗಿದೆ. ಆದರೆ ಈ ಚಿತ್ರಕ್ಕೆ ಅವರು ಓಕೆ ಎಂದ್ರಾ ಎಂಬುದು ಖಾತ್ರಿಯಾಗಿಲ್ಲ. ಈ ಬಗ್ಗೆ ಚಿತ್ರತಂಡ ಕಡೆಯಿಂದ ಅಧಿಕೃತ ಅಪ್‌ಡೇಟ್‌ ಸಿಗುವವರೆಗೂ ಕಾಯಬೇಕಿದೆ. ಸದ್ಯ ಈ ವಿಚಾರ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

    ಅಂದಹಾಗೆ, ಕ್ರೀವ್, ದೋ ಪಾಟಿ ಸಿನಿಮಾ ಬಳಿಕ ಅವರು ತೇರೆ ಇಷ್ಕ್ ಮೈನ್, ಕಾಕ್‌ಟೈಲ್ 2 ಸಿನಿಮಾಗಳಲ್ಲಿ ಕೃತಿ ತೊಡಗಿಸಿಕೊಂಡಿದ್ದಾರೆ. ಕಾಕ್‌ಟೈಲ್‌ 2ನಲ್ಲಿ ಶಾಹಿದ್‌ ಕಪೂರ್‌ ಹಾಗೂ ರಶ್ಮಿಕಾ ಮಂದಣ್ಣ ಜೊತೆ ತೆರೆಹಂಚಿಕೊಳ್ಳಲಿದ್ದಾರೆ.

  • ಸಿನಿಮಾ ಸೋತ್ರೂ ಶ್ರೀವಲ್ಲಿಗೆ ಬೇಡಿಕೆ- ಶಾಹಿದ್ ಕಪೂರ್‌ಗೆ ರಶ್ಮಿಕಾ ಜೋಡಿ

    ಸಿನಿಮಾ ಸೋತ್ರೂ ಶ್ರೀವಲ್ಲಿಗೆ ಬೇಡಿಕೆ- ಶಾಹಿದ್ ಕಪೂರ್‌ಗೆ ರಶ್ಮಿಕಾ ಜೋಡಿ

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಬಾಲಿವುಡ್‌ನಲ್ಲೇ ಸೆಟಲ್ ಆಗೋ ಲಕ್ಷಣ ಕಾಣ್ತಿದೆ. ‘ಸಿಕಂದರ್’ ಸಿನಿಮಾ ಮಕಾಡೆ ಮಲಗಿದ್ರೂ ಕೂಡ ಬಾಲಿವುಡ್‌ನ ಮತ್ತೊಂದು ಸಿನಿಮಾಗೆ ಅವರು ನಾಯಕಿಯಾಗಿದ್ದಾರೆ. 2012ರಲ್ಲಿ ತೆರೆಕಂಡ ‘ಕಾಕ್‌ಟೈಲ್’ ಚಿತ್ರದ ಸೀಕ್ವೆಲ್‌ನಲ್ಲಿ ಶಾಹಿದ್ ಕಪೂರ್‌ಗೆ (Shahid Kapoor) ಹೀರೋಯಿನ್ ಆಗಿದ್ದಾರೆ. ಇದನ್ನೂ ಓದಿ:ಬೇಬಿ ಬಂಪ್ ಫೋಟೋ ಹಂಚಿಕೊಂಡ ಸಂಜನಾ ಗಲ್ರಾನಿ

    ಸಿಕಂದರ್ ಸಿನಿಮಾ ಫ್ಲಾಪ್ ಆದ್ರೂ ರಶ್ಮಿಕಾಗೆ ಇರುವ ಬೇಡಿಕೆ ಕಮ್ಮಿಯಾಗಿಲ್ಲ. ಟ್ರಯಾಂಗಲ್ ಲವ್ ಸ್ಟೋರಿ ‘ಕಾಕ್‌ಟೈಲ್ 2’ಗೆ ತಯಾರಿ ನಡೆಯುತ್ತಿದೆ. ಇದರಲ್ಲಿ ಶಾಹಿದ್‌ಗೆ ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್ (Kriti Sanon) ಇಬ್ಬರು ನಾಯಕಿಯರು ಜೊತೆಯಾಗಲಿದ್ದಾರೆ. ಇದರಲ್ಲಿ ರಶ್ಮಿಕಾ ಮಂದಣ್ಣಗೆ ಪವರ್‌ಫುಲ್ ರೋಲ್ ಸಿಕ್ಕಿದೆ. ಇದನ್ನೂ ಓದಿ:‘ಸಿಕಂದರ್’ ಸೋಲಿನ ಹಿನ್ನೆಲೆ ಪ್ರಭಾಸ್ ಚಿತ್ರದಿಂದ ರಶ್ಮಿಕಾ ಮಂದಣ್ಣ ಔಟ್?

    ದಿನೇಶ್ ವಿಜ್ಞಾನ್ ನಿರ್ಮಾಣದ ‘ಕಾಕ್‌ಟೈಲ್ 2’ಗೆ (Cocktail 2) ಲವ್ ರಂಜನ್ ಕಥೆ ಬರೆದಿದ್ದಾರೆ. ಹೋಮಿ ಅಡಜಾನಿಯಾ ನಿರ್ದೇಶನ ಮಾಡಲಿದ್ದಾರೆ. ಇದೇ ಆಗಸ್ಟ್‌ನಿಂದ ಸಿನಿಮಾ ಶೂಟಿಂಗ್ ಶುರುವಾಗಲಿದೆ. ಮುಂದಿನ ವರ್ಷ ಅಂತ್ಯದೊಳಗೆ ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡಕ್ಕಿದೆ. ಸದ್ಯ ರಶ್ಮಿಕಾ ಒಪ್ಪಿಕೊಂಡಿರೋ ಸಿನಿಮಾ ಸುದ್ದಿ ಕೇಳಿ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.

    2012ರಲ್ಲಿ ‘ಕಾಕ್‌ಟೈಲ್’ ಸಿನಿಮಾ ರಿಲೀಸ್ ಆಗಿ ಸಕ್ಸಸ್ ಕಂಡಿತ್ತು. ಸೈಫ್ ಅಲಿ ಖಾನ್‌ಗೆ ದೀಪಿಕಾ ಪಡುಕೋಣೆ (Deepika Padukone) ಮತ್ತು ಡಯಾನಾ ಪೆಂಟಿ ಜೋಡಿಯಾಗಿ ನಟಿಸಿದ್ದರು.

  • ಬಾಲಿವುಡ್ ನೆಪೋಟಿಸಂ ಬಗ್ಗೆ ಕೃತಿ ಸನೋನ್ ಶಾಕಿಂಗ್ ಕಾಮೆಂಟ್

    ಬಾಲಿವುಡ್ ನೆಪೋಟಿಸಂ ಬಗ್ಗೆ ಕೃತಿ ಸನೋನ್ ಶಾಕಿಂಗ್ ಕಾಮೆಂಟ್

    ಬಾಲಿವುಡ್‌ನ (Bollywood) ಪರಮ ಸುಂದರಿ ಕೃತಿ ಸನೋನ್‌ಗೆ(Kriti Sanon) ಬೇಡಿಕೆಯಿದೆ. ಸಾಲು ಸಾಲು ಸಿನಿಮಾಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ನಟಿ ಚಿತ್ರರಂಗದ ನೆಪೋಟಿಸಂ ಬಗ್ಗೆ ಶಾಕಿಂಗ್ ಕಾಮೆಂಟ್‌ವೊಂದನ್ನು ಮಾಡಿದ್ದಾರೆ. ನೆಪೋಟಿಸಂ ಬೆಳೆಯಲು ಪ್ರೇಕ್ಷಕರೇ ಕಾರಣ ಎಂದಿದ್ದಾರೆ. ಇದನ್ನೂ ಓದಿ:ಇಬ್ಭಾಗವಾಯ್ತು ದೊಡ್ಮನೆ- ಅಧಿಕಾರಕ್ಕಾಗಿ ಯುವರಾಣಿ ಮೋಕ್ಷಿತಾ, ಮಂಜು ನಡುವೆ ಬಿಗ್‌ ಫೈಟ್‌

    ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೃತಿ ಸನೋನ್ ನೆಪೋ ಕಿಡ್ ಅಲ್ಲ. ಅವರಿಗೆ ಚಿತ್ರರಂಗದ ಹಿನ್ನೆಲೆ ಇಲ್ಲದೇ ಇದ್ದರೂ, ತಮ್ಮ ಟ್ಯಾಲೆಂಟ್‌ನಿಂದ ಸಕ್ಸಸ್ ಕಂಡಿದ್ದಾರೆ. ನೆಪೋಟಿಸಂಗೆ ಚಿತ್ರರಂಗ ಮಾತ್ರ ಜವಾಬ್ದಾರಿ ಅಲ್ಲ, ಪ್ರೇಕ್ಷಕರು ಕೂಡ ಆಗಿದ್ದಾರೆ. ಕೆಲವು ಸ್ಟಾರ್ ಕಿಡ್‌ಗಳ ಬಗ್ಗೆ ಮಾಧ್ಯಮಗಳು ಎನು ತೋರಿಸುತ್ತವೆಯೋ ಅದನ್ನು ಪ್ರೇಕ್ಷಕರು ನೋಡಲು ಬಯಸುತ್ತಾರೆ. ಅವರ ಆಸಕ್ತಿ, ಅಭಿರುಚಿಯಂತೆ ಸಿನಿಮಾ ಮಾಡಲು ಚಿತ್ರರಂಗ ಬಯಸುತ್ತದೆ ಎಂದಿದ್ದಾರೆ.

    ಪ್ರತಿಭಾವಂತರಾಗಿದ್ದರೆ ನೀವು ನಿಮ್ಮ ಕನಸಿನ ಜಾಗಕ್ಕೆ ಬರುತ್ತೀರಿ. ಪ್ರೇಕ್ಷಕರೊಂದಿಗೆ ನೀವು ಸಂಪರ್ಕ ಹೊಂದಿಲ್ಲದಿದ್ದರೆ ಕನಸು ನನಸು ಮಾಡಿಕೊಳ್ಳುವುದು ಕಷ್ಟ ಎಂದಿದ್ದಾರೆ. ಈ ಮೂಲಕ ನೆಪೋಟಿಸಂಗೆ ಪ್ರೇಕ್ಷಕರು ಕಾರಣ ಎಂದು ನಟಿ ಮುಕ್ತವಾಗಿ ಮಾತನಾಡಿದ್ದಾರೆ.

    ಇನ್ನೂ ಅಕ್ಷಯ್ ಕುಮಾರ್ ನಟನೆಯ ‘ಹೌಸ್‌ಫುಲ್ 5’ ಮತ್ತು ‘ಭೇದಿಯಾ 2’ ಸಿನಿಮಾದಲ್ಲಿ ಕೃತಿ ಬ್ಯುಸಿಯಾಗಿದ್ದಾರೆ.

  • ಉದ್ಯಮಿ ಕಬೀರ್‌ ಜೊತೆಗಿನ ಡೇಟಿಂಗ್‌ ಸುದ್ದಿ ಸುಳ್ಳು ಎಂದ ಕೃತಿ ಸನೋನ್

    ಉದ್ಯಮಿ ಕಬೀರ್‌ ಜೊತೆಗಿನ ಡೇಟಿಂಗ್‌ ಸುದ್ದಿ ಸುಳ್ಳು ಎಂದ ಕೃತಿ ಸನೋನ್

    ಬಾಲಿವುಡ್ ಬೆಡಗಿ ಕೃತಿ ಸನೋನ್ (Kriti Sanon) ಸಿನಿಮಾಗಿಂತ ಆಗಾಗ ವೈಯಕ್ತಿಕ ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಉದ್ಯಮಿ ಕಬೀರ್ ಬಹಿಯಾ (Kabir Bahia) ಜೊತೆಗಿನ ಡೇಟಿಂಗ್ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಕಬೀರ್ ಜೊತೆಗಿನ ರಿಲೇಷನ್‌ಶಿಪ್ ಸುದ್ದಿ ಸುಳ್ಳು ಎಂದು ಕೃತಿ ಸನೋನ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ದರ್ಶನ್ ನೋಡಲು ಜೈಲಿಗೆ ಬಂದ ನಟ ಅಭಿಷೇಕ್, ಧನ್ವೀರ್, ಚಿಕ್ಕಣ್ಣ

    ಸುಳ್ಳು ಸುದ್ದಿ ವೈರಲ್ ಆದಾಗ ನನಗೆ ಮಾತ್ರವಲ್ಲದೇ ನಮ್ಮ ಕುಟುಂಬಕ್ಕೂ ನೋವಾಗುತ್ತದೆ. ಒಬ್ಬರ ಬಗ್ಗೆ ಕಟ್ಟುಕಥೆ ಹರಡುವುದಕ್ಕೂ ಮುನ್ನ ನಿಜವೇನು ಎಂಬುದು ತಿಳಿದುಕೊಳ್ಳಬೇಕು. ಇಂತಹ ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಬೇಗನೆ ವೈರಲ್ ಆಗುತ್ತದೆ. ಹೀಗೆ ಸುಳ್ಳು ಸುದ್ದಿ ಪ್ರತಿ ಬಾರಿ ಹಬ್ಬಿದಾಗ ಸ್ಪಷ್ಟನೆ ನೀಡುವುದು ಕಿರಿಕಿರಿ ಆಗುತ್ತದೆ. ಅದಕ್ಕಿಂತ ದೊಡ್ಡ ತಲೆನೋವು ಬೇರೊಂದಿಲ್ಲ ಎಂದು ಸಂದರ್ಶನವೊಂದರಲ್ಲಿ ಕೃತಿ ಸನೋನ್ ಮಾತನಾಡಿದ್ದಾರೆ. ಈ ಮೂಲಕ ಕಬೀರ್ ಜೊತೆಗಿನ ಡೇಟಿಂಗ್ ವಿಚಾರ ಸುಳ್ಳು ಎಂದು ಕ್ಲ್ಯಾರಿಟಿ ಕೊಟ್ಟಿದ್ದಾರೆ.

    ಇತ್ತೀಚೆಗೆ ತನಗಿಂತ 10 ವರ್ಷ ಕಿರಿಯನಾಗಿರುವ ಕಬೀರ್ ಜೊತೆ ಕೃತಿ ಸನೋನ್ ಗ್ರೀಸ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಎನ್ನಲಾದ ಕೆಲ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇಬ್ಬರ ಸಂಬಂಧದ ಬಗ್ಗೆ ಭಾರೀ ಚರ್ಚೆ ಶುರುವಾಗಿತ್ತು. ಈ ವಿಷ್ಯ ಕೃತಿ ಕಿವಿಗೂ ಬಿದ್ದಿದೆ. ಈ ಹಿನ್ನೆಲೆ ನಟಿ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.

    ಅಂದಹಾಗೆ, ‘ಕ್ರೀವ್’ (Crew Film) ಸಿನಿಮಾದ ಸಕ್ಸಸ್ ನಂತರ ‘ಕಣ್ಣಪ್ಪ’ (Kannappa) ಸಿನಿಮಾದಲ್ಲಿ ಕೃತಿ ಸನೋನ್‌ ಕಾಣಿಸಿಕೊಳ್ತಿದ್ದಾರೆ. ಬಾಲಿವುಡ್‌ನ ಹಲವು ಪ್ರಾಜೆಕ್ಟ್‌ಗಳು ನಟಿಯ ಕೈಯಲ್ಲಿವೆ.

  • ಧನುಷ್ ನಟನೆಯ ಬಾಲಿವುಡ್ ಸಿನಿಮಾದಲ್ಲಿ ಕೃತಿ ಸನೋನ್ ನಾಯಕಿ

    ಧನುಷ್ ನಟನೆಯ ಬಾಲಿವುಡ್ ಸಿನಿಮಾದಲ್ಲಿ ಕೃತಿ ಸನೋನ್ ನಾಯಕಿ

    ಮಿಳು ನಟ ಧನುಷ್‌ಗೆ (Dhanush) ಬಾಲಿವುಡ್ ಸಿನಿಮಾ ಏನು ಹೊಸದಲ್ಲ. ರಾಂಜಾನ, ಅತ್ರಾಂಗಿ ರೆ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಬಾಲಿವುಡ್‌ನ ಹೊಸ ಚಿತ್ರಕ್ಕೆ ಧನುಷ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕೃತಿ ಸನೋನ್ (Kriti Sanon) ಜೊತೆ ನಟ ರೊಮ್ಯಾನ್ಸ್ ಮಾಡಲಿದ್ದಾರೆ.

    ಈ ಹಿಂದೆ ‘ರಾಂಜಾನ’ ಚಿತ್ರ ನಿರ್ದೇಶನ ಮಾಡಿದ್ದ ಆನಂದ್ ಎಲ್. ರೈ ಅವರ ಹೊಸ ಸಿನಿಮಾಗೆ ನಟಿಸಲು ಧನುಷ್ ಒಪ್ಪಿಗೆ ನೀಡಿದ್ದಾರೆ. ಈ ಚಿತ್ರಕ್ಕೆ ಕೃತಿ ಸನೋನ್ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ. ಈ ಜೋಡಿಯ ಹೊಸ ಪ್ರೇಮ ಕಥೆಗೆ ‘ತೇರೆ ಇಷ್ಕ್ ಮೇ’ (Tere Ishk Mein) ಎಂದು ಟೈಟಲ್ ಇಡಲಾಗಿದೆ.

    ಇದೊಂದು ಮ್ಯೂಸಿಕಲ್ ಲವ್ ಸ್ಟೋರಿಯಾಗಿದ್ದು, ಕೃತಿ ಮತ್ತು ಧನುಷ್ ಇಬ್ಬರೂ ಡಿಫರೆಂಟ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಶೂಟಿಂಗ್ ಶುರುವಾಗಲಿದೆ. ಇದನ್ನೂ ಓದಿ:ಪ್ರಭಾಸ್‌ಗೆ ತ್ರಿಷಾ ನಾಯಕಿ- ‘ಅನಿಮಲ್’ ನಿರ್ದೇಶಕ ಆ್ಯಕ್ಷನ್ ಕಟ್

    ಸದ್ಯ ಧನುಷ್ ‘ಕುಬೇರ’ (Kubera) ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ನಂತರ ಡೈರೆಕ್ಟರ್ ಆನಂದ್ ಎಲ್. ರೈ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ಧನುಷ್ ಮತ್ತು ಕೃತಿ ಸನೋನ್ ಜೋಡಿಯಾಗ್ತಿರೋದ್ರಿಂದ ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ.

  • 4500 ಕೋಟಿ ಒಡೆಯನ ಜೊತೆ ಮದುವೆಗೆ ರೆಡಿಯಾದ್ರಾ ಕೃತಿ ಸನೋನ್?

    4500 ಕೋಟಿ ಒಡೆಯನ ಜೊತೆ ಮದುವೆಗೆ ರೆಡಿಯಾದ್ರಾ ಕೃತಿ ಸನೋನ್?

    ಬಾಲಿವುಡ್ ಬೆಡಗಿ ಕೃತಿ ಸನೋನ್ (Kriti Sanon) ಪಡ್ಡೆಹುಡುಗರಿಗೆ ಬ್ಯಾಡ್ ನ್ಯೂಸ್ ಕೊಟ್ಟಿದ್ದಾರೆ. ಉದ್ಯಮಿ ಕಬೀರ್ ಜೊತೆ ಕೃತಿ ಮದುವೆ ಎಂದು ಸುದ್ದಿಯೊಂದು ಹೊರಬಿದ್ದಿದೆ. ಸದ್ಯದಲ್ಲೇ ಗೆಳೆಯನ ಜೊತೆ ದಾಂಪತ್ಯ  ಜೀವನಕ್ಕೆ (Wedding) ಕಾಲಿಡಲು ತಯಾರಿ ಮಾಡಿಕೊಳ್ತಿದ್ದಾರೆ ಎಂಬ ಸುದ್ದಿಯೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ‘ಆದಿಪುರುಷ್’ ಹೀರೋಯಿನ್ ಕೃತಿ ಇತ್ತೀಚಿನ ದಿನಗಳಲ್ಲಿ ಸಿನಿಮಾಗಿಂತ ಖಾಸಗಿ ವಿಚಾರವಾಗಿಯೇ ಭಾರೀ ಸುದ್ದಿಯಾಗ್ತಿದ್ದಾರೆ. ಸದ್ಯ ಉದ್ಯಮಿ ಕಬೀರ್ ಬಹಿಯಾ ಜೊತೆ ನಟಿ ಡೇಟಿಂಗ್ ಮಾಡುತ್ತಿದ್ದಾರೆ. ಇತ್ತೀಚೆಗೆ ಬಾಯ್‌ಫ್ರೆಂಡ್ ಜೊತೆ ಗ್ರೀಸ್‌ನಲ್ಲಿ ಕೃತಿ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಇದು ಡೇಟಿಂಗ್ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಫ್ಯಾನ್ಸ್‌ಗೆ ಸಿಹಿಸುದ್ದಿ- ಆ.5ರಂದು ಹೊರಬೀಳಲಿದೆ ‘ದೇವರ’ ಚಿತ್ರದ ಅಪ್‌ಡೇಟ್

    ಈಗ ಲೇಟೆಸ್ಟ್ ವಿಚಾರ ಏನೆಂದರೆ, 4500 ಕೋಟಿ ಒಡೆಯ ಕಬೀರ್ ಜೊತೆ ಮದುವೆಗೆ ನಟಿ ಸಜ್ಜಾಗಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಡೇಟಿಂಗ್ ವಿಷ್ಯ ಹೊರಬಿದ್ದ ಬೆನ್ನಲ್ಲೇ ಕೃತಿ ಮದುವೆ ಬಗ್ಗೆ ಗುಸು ಗುಸು ಶುರುವಾಗಿದೆ.

    ಎಂ.ಎಸ್ ಧೋನಿ ದಂಪತಿ ಜೊತೆ ಉತ್ತಮ ಒಡನಾಟ ಹೊಂದಿರುವ ಕಬೀರ್ ಬಹಿಯಾ ಅವರ ಕುಟುಂಬದ ಆಸ್ತಿಯ ಮೌಲ್ಯ 4500 ಕೋಟಿ ರೂ. ಎನ್ನಲಾಗಿದೆ. ಶ್ರೀಮಂತ ಕುಟುಂಬಗಳಲ್ಲಿ ಬಹಿಯಾ ಫ್ಯಾಮಿಲಿ ಕೂಡ ಒಂದಾಗಿದ್ದು, ಈ ಮನೆಗೆ ನಟಿ ಸೊಸೆಯಾಗ್ತಾರೆ ಎನ್ನಲಾಗಿದೆ. ಈ ಸುದ್ದಿ ನಿಜನಾ? ಎಂದು ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

    ಅಂದಹಾಗೆ, ಕಳೆದ ವರ್ಷ ‘ಬಾಹುಬಲಿ’ ಹೀರೋ ಪ್ರಭಾಸ್ (Prabhas) ಜೊತೆ ಕೃತಿ ಸನೋನ್ ಹೆಸರು ಕೇಳಿ ಬಂದಿತ್ತು. ಇನ್ನೇನು ಮದುವೆ ಆಗಿಯೇ ಬಿಡುತ್ತಾರೆ ಎಂದೇ ಹೇಳಲಾಗಿತ್ತು. ಆ ಮೇಲೆ ಈ ವಿಚಾರ ಸುಳ್ಳು ಎಂದು ಎಲ್ಲರ ಅರಿವಿಗೆ ಬಂದಿತ್ತು.

  • ಗ್ರೀಸ್‌ನಲ್ಲಿ ಸಿಗರೇಟ್ ಸೇದುತ್ತಾ ನಿಂತ ಕೃತಿ ಸನೋನ್- ನಟಿಯ ನಡೆಗೆ ನೆಟ್ಟಿಗರ ಟೀಕೆ

    ಗ್ರೀಸ್‌ನಲ್ಲಿ ಸಿಗರೇಟ್ ಸೇದುತ್ತಾ ನಿಂತ ಕೃತಿ ಸನೋನ್- ನಟಿಯ ನಡೆಗೆ ನೆಟ್ಟಿಗರ ಟೀಕೆ

    ಬಾಲಿವುಡ್ (Bollywood) ಬೆಡಗಿ ಕೃತಿ ಸನೋನ್ (Kriti Sanon) ಸಿನಿಮಾ ವಿಚಾರ ಬಿಟ್ಟು ವೈಯಕ್ತಿಕ ವಿಚಾರವಾಗಿ ಸುದ್ದಿಯಾಗಿದ್ದಾರೆ. ಬಾಯ್‌ಫ್ರೆಂಡ್ ಜೊತೆ ಗ್ರೀಸ್‌ಗೆ ತೆರಳಿದ್ದಾರೆ. ಅಲ್ಲಿ ಸಿಗರೇಟ್ ಸೇದುತ್ತಾ ನಿಂತಿರುವ ಕೃತಿಯ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಇತ್ತೀಚೆಗೆ ಗ್ರೀಸ್‌ನಲ್ಲಿ ಬಾಯ್‌ಫ್ರೆಂಡ್ ಕಬೀರ್ ಬಹಿಯಾ ಮತ್ತು ಸಹೋದರಿ ನೂಪುರ್ ಜೊತೆ ಹುಟುಹಬ್ಬವನ್ನು ಕೃತಿ ಆಚರಿಸಿಕೊಂಡಿದ್ದಾರೆ. ನಟಿ ಕೃತಿ ಎನ್ನಲಾದ ಧೂಮಪಾನ ಮಾಡುತ್ತಾ ನಿಂತಿರುವ ಫೋಟೋ ಈಗ ಸದ್ದು ಮಾಡುತ್ತಿದೆ. ಇದನ್ನು ನೋಡಿ, ಮಾದರಿ ಆಗಬೇಕಾದವರೇ ಹೀಗೆ ಆದರೆ ಹೇಗೆ? ಎಂದು ನೆಟ್ಟಿಗರು ನಟಿಯನ್ನು ಟೀಕಿಸಿದ್ದಾರೆ.

    ಕೆಲವರು ಇದು ಅವರ ಖಾಸಗಿ ವಿಚಾರ. ಅವರು ಹೊರದೇಶದಲ್ಲಿ ಏನೇ ಮಾಡಿದ್ರೂ ಅವರಿಗೆ ಬಿಟ್ಟ ವಿಚಾರ ಎಂದು ಫ್ಯಾನ್ಸ್ ನಟಿಯ ಪರ ವಹಿಸಿದ್ದಾರೆ. ಇದನ್ನೂ ನೋಡಿ:‘ದೈಜಿ’ ಸಿನಿಮಾ ಚಿತ್ರೀಕರಣಕ್ಕೂ ಮುನ್ನ ‘ಶಿವಾಜಿ ಸುರತ್ಕಲ್’ ಡೈರೆಕ್ಟರ್ ಟೆಂಪಲ್ ರನ್

    ಅಂದಹಾಗೆ, ಈ ಹಿಂದಿನ ಸಂದರ್ಶನವೊಂದರಲ್ಲಿ ನಾನು ಧೂಮಪಾನ ಮಾಡುವುದಿಲ್ಲ. ಸಿನಿಮಾದಲ್ಲಿನ ಪಾತ್ರಕ್ಕೆ ಅವಶ್ಯಕತೆ ಇದ್ದರೆ ಮಾಡುತ್ತೇನೆ ಎಂದು ಕೃತಿ ಹೇಳಿದ್ದರು. ಈಗ ವಿಡಿಯೋ ಕೂಡ ಟ್ರೋಲಿಗರ ಬಾಯಿಗೆ ಆಹಾರವಾಗಿದೆ.

  • ಕಾಶಿ ಸನ್ನಿಧಿಯಲ್ಲಿ ರಣವೀರ್ ಸಿಂಗ್, ಕೃತಿ ಸನೋನ್

    ಕಾಶಿ ಸನ್ನಿಧಿಯಲ್ಲಿ ರಣವೀರ್ ಸಿಂಗ್, ಕೃತಿ ಸನೋನ್

    ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಮತ್ತು ನಟಿ ಕೃತಿ ಸನೋನ್ (Kriti Sanon) ಕಾಶಿಗೆ ಬಂದಿಳಿದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಬಂದಿದ್ದ ಈ ಜೋಡಿ ಅದಕ್ಕೂ ಮುನ್ನ ವಿಶ್ವನಾಥನ (Kashi Vishwanatha) ದರ್ಶನ ಪಡೆದಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿವೆ.

    ವಾರಣಾಸಿಯಲ್ಲಿ ನಡೆಯುತ್ತಿರುವ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳ ಫ್ಯಾಶನ್ ಶೋನಲ್ಲಿ ರಣವೀರ್ ಮತ್ತು ಕೃತಿ ಭಾಗಿಯಾಗಲು ಬಂದಿದ್ದರು. ಮನೀಶ್ ಮಲ್ಹೋತ್ರ ನೇತೃತ್ವದಲ್ಲಿ ನಡೆಯುತ್ತಿರುವ ಈ ಫ್ಯಾಷನ್ ಶೋ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳಿಗೆ ಉತ್ತೇಜನ ನೀಡುವುದು ಆಗಿದೆಯಂತೆ.

     

    ಈ ಶೋನಲ್ಲಿ ಭಾಗಿವಹಿಸಿರುವ ರಣವೀರ್ ಮತ್ತು ಕೃತಿ ಇಂಥದ್ದೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಖುಷಿ ತಂದಿದೆ ಅಂದಿದ್ದಾರೆ. ಜೊತೆಗೆ ಕಾಶಿ ವಿಶ್ವನಾಥನ ದರ್ಶನ ಮಾಡಿದ್ದು ಮನಸ್ಸಿಗೆ ಸಾಕಷ್ಟು ಸಮಾಧಾನ ತಂದಿದೆ ಎಂದು ಮಾತನಾಡಿದ್ದಾರೆ.

  • ‘ಕ್ರೂ’ ಸಿನಿಮಾ ಸಕ್ಸಸ್ ಬೆನ್ನಲ್ಲೇ ಸೀಕ್ವೆಲ್ ಬಗ್ಗೆ ಮಾಹಿತಿ ನೀಡಿದ ನಿರ್ಮಾಪಕಿ

    ‘ಕ್ರೂ’ ಸಿನಿಮಾ ಸಕ್ಸಸ್ ಬೆನ್ನಲ್ಲೇ ಸೀಕ್ವೆಲ್ ಬಗ್ಗೆ ಮಾಹಿತಿ ನೀಡಿದ ನಿರ್ಮಾಪಕಿ

    ಬಾಲಿವುಡ್‌ನಲ್ಲಿ ಸದ್ಯ ‘ಕ್ರೂ’ (Crew Film) ಸಿನಿಮಾಗೆ ಪ್ರಶಂಸೆ ವ್ಯಕ್ತವಾಗಿದೆ. ಟಬು (Tabu), ಕರೀನಾ ಕಪೂರ್, ಕೃತಿ ಸನೋನ್ (Kriti Sanon) ನಟನೆಯ ‘ಕ್ರೂ’ ಚಿತ್ರ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇದೀಗ ಚಿತ್ರದ ‘ಕ್ರೂ’ ಸೀಕ್ವೆಲ್ ಬರೋದರ ಬಗ್ಗೆ ಸಹ-ನಿರ್ಮಾಪಕಿ ರಿಯಾ ಕಪೂರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಯುಗಾದಿ ಹಬ್ಬಕ್ಕೆ ‘ಫುಲ್ ಮಿಲ್ಸ್’ ಚಿತ್ರದ ಸ್ಪೆಷಲ್ ಪೋಸ್ಟರ್

    ಗಗನ ಸಖಿಯರ ಕಥೆಯನ್ನು ‘ಕ್ರೂ’ ಸಿನಿಮಾ ಹೊಂದಿದೆ. ಕರೀನಾ ಕಪೂರ್ ಖಾನ್ (Kareena Kapoor Khan), ಟಬು ಹಾಗೂ ಕೃತಿ ಸನೋನ್ ಅವರು ಗಗನ ಸಖಿಯರಾಗಿ ಕಾಣಿಸಿಕೊಂಡಿದ್ದಾರೆ. ಮಾ.29ರಂದು ತೆರೆಕಂಡ ಈ ಸಿನಿಮಾ ಚಿತ್ರಮಂದಿರ ಉತ್ತಮ ಗಳಿಕೆ ಕಾಣುತ್ತಿದೆ. ಈ ಖುಷಿ ಸಂದರ್ಭದಲ್ಲೇ ‘ಕ್ರೂ’ ಮುಂದುವರೆದ ಭಾಗ ಬರುವುದಾಗಿ ತಿಳಿಸಿದ್ದಾರೆ.

     

    View this post on Instagram

     

    A post shared by Kriti (@kritisanon)

    ಕ್ರೂ ಸಿನಿಮಾ 100 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿದೆ. ಹಾಗಾಗಿ ಸೀಕ್ವೇಲ್‌ಗಾಗಿ ಕಥೆ ಕೂಡ ಸಿದ್ಧವಾಗುತ್ತಿದೆ. ಉತ್ತಮ ಕಥೆಯೊಂದಿಗೆ ಮತ್ತೆ ‘ಕ್ರೂ’ ತಂಡ ಬರೋದಾಗಿ ಮಾಹಿತಿ ನೀಡಿದ್ದಾರೆ.


    ಈ ಚಿತ್ರಕ್ಕೆ ರಾಜೇಶ್ ಎ. ಕೃಷ್ಣನ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಏಕ್ತಾ ಕಪೂರ್, ರಿಯಾ ಕಪೂರ್, ಅನಿಲ್ ಕಪೂರ್, ದಿಗ್ವಿಜಯ್ ಪುರೋಹಿತ್ ಅವರು ನಿರ್ಮಾಣ ಮಾಡಿದ್ದಾರೆ. ದಿಲ್ಜಿತ್ ದೋಸಾಂಜ್, ಕಪಿಲ್ ಶರ್ಮಾ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.