Tag: kriti Kharbanda

  • ‘ಗೂಗ್ಲಿ’ ಬೆಡಗಿ ಕೃತಿ ಕರಬಂಧ ಮದುವೆ ಆಲ್ಬಂ

    ‘ಗೂಗ್ಲಿ’ ಬೆಡಗಿ ಕೃತಿ ಕರಬಂಧ ಮದುವೆ ಆಲ್ಬಂ

    ನ್ನಡದ ‘ಗೂಗ್ಲಿ’ ನಟಿ ಕೃತಿ ಕರಬಂಧ (Kriri Kharbanda) ಅವರು ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ (Pulkit Samrat) ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಮಾರ್ಚ್ 15ರಂದು ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮದುವೆಯ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್ ಹೊಸ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿ

    ಇದೀಗ ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಪಿಂಕ್ ಬಣ್ಣದ ಲೆಹೆಂಗಾದಲ್ಲಿ ಕೃತಿ ಕಂಗೊಳಿಸಿದ್ರೆ, ಉಸಿರು ಬಣ್ಣದ ಉಡುಗೆಯಲ್ಲಿ ಪುಲ್ಕಿತ್ ಹೈಲೆಟ್ ಆಗಿದ್ದಾರೆ. ನವಜೋಡಿಗೆ ಬಾಲಿವುಡ್ ಸೆಲೆಬ್ರಿಟಿಗಳು, ಅಭಿಮಾನಿಗಳು ಶುಭಕೋರುತ್ತಿದ್ದಾರೆ.

    ಮಾರ್ಚ್ 13ರಂದು ಮೆಹಂದಿ ಕಾರ್ಯಕ್ರಮ ನಡೆದಿದ್ದು, ಮಾರ್ಚ್ 14ರಂದು ಹಳದಿ ಶಾಸ್ತ್ರ ಮತ್ತು ಕಾಕ್‌ಟೈಲ್ ಪಾರ್ಟಿ ಆಯೋಜನೆ ಮಾಡಲಾಗಿತ್ತು.

    ನಿನ್ನೆ ಸುಮಾರು 300 ಎಕರೆಯಲ್ಲಿ ನಿರ್ಮಾಣಗೊಂಡಿರುವ ರೆಸಾರ್ಟ್‌ನಲ್ಲಿ ಈ ಜೋಡಿ ಹಸಮಣೆ ತುಳಿದಿದೆ. ದೆಹಲಿಯಲ್ಲಿರುವ ಐಟಿಸಿ ಗ್ರ‍್ಯಾಂಡ್ ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆ ನಡೆದಿದೆ.

    ಗ್ರ‍್ಯಾಂಡ್ ಭಾರತ್ ರೆಸಾರ್ಟ್‌ನಲ್ಲಿ ಸುಮಾರು 4 ಪ್ರೆಸಿಡೆಂನ್ಸಿಯಲ್ ವಿಲ್ಲಾವಿದೆ. ಐಷಾರಾಮಿ ಸ್ಪಾಗಳು ಸೇರಿದಂತೆ ಅನೇಕ ಸೌಲಭ್ಯಗಳಿವೆ. ಇನ್ನೂ ಕೃತಿ, ಪುಲ್ಕಿತ್ ಇಬ್ಬರೂ ದೆಹಲಿಯಲ್ಲೇ ಹುಟ್ಟಿ ಬೆಳೆದಿದ್ದಾರೆ. ಇವರ ಕುಟುಂಬ ದೆಹಲಿಯಲ್ಲಿಯೇ ನೆಲೆಸಿರುವುದರಿಂದ ಇದೇ ಸೂಕ್ತ ಆಯ್ಕೆ ಎಂದು ಜೋಡಿ ನಿರ್ಧರಿಸಿತ್ತು.

  • ಮಾರ್ಚ್‌ 13ಕ್ಕೆ ‘ಗೂಗ್ಲಿ’ ನಟಿ ಕೃತಿ ಕರಬಂಧ ಮದುವೆ

    ಮಾರ್ಚ್‌ 13ಕ್ಕೆ ‘ಗೂಗ್ಲಿ’ ನಟಿ ಕೃತಿ ಕರಬಂಧ ಮದುವೆ

    ನ್ನಡದ ನಟಿ ಕೃತಿ ಕರಬಂಧ (Kriti Kharbanda) ಅವರು ಬಹುಕಾಲದ ಗೆಳೆಯ ಪುಲ್ಕಿತ್ ಸಾಮ್ರಾಟ್ (Pulkit Samrat) ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದೇ ಮಾರ್ಚ್ 13ಕ್ಕೆ ದಾಂಪತ್ಯ ಜೀವನಕ್ಕೆ ಕೃತಿ ಕಾಲಿಡಲಿದ್ದಾರೆ. ಮದುವೆ (Wedding) ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

    ಇತ್ತೀಚೆಗೆ ನಟಿ ಕೃತಿ ಅವರು ಗುಟ್ಟಾಗಿ ಎಂಗೇಜ್‌ಮೆಂಟ್ ಆಗಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಬೆನ್ನಲ್ಲೇ ಮದುವೆ ಬಗ್ಗೆ ನಟಿ ಅಧಿಕೃತ ಅಪ್‌ಡೇಟ್ ನೀಡಿದ್ದಾರೆ. ಕನ್ನಡ ಸಿನಿಮಾಗಳ ನಂತರ ಕೃತಿ ಬಾಲಿವುಡ್‌ಗೆ ಕಾಲಿಟ್ಟ ಮೇಲೆ ಪುಲ್ಕಿತ್ ಪರಿಚಯವಾಯ್ತು. ಆ ಪರಿಚಯ ಪ್ರೀತಿಗೆ ತಿರುಗಿ ಪುಲ್ಕಿತ್‌ ಜೊತೆ 5 ವರ್ಷಗಳ ಕಾಲ ಕೃತಿ ಡೇಟಿಂಗ್ ಮಾಡಿದ್ದಾರೆ. ಬಳಿಕ ಇದೀಗ ಹೊಸ ಬಾಳಿಗೆ ಬೆಂಗಳೂರಿನ ಬೆಡಗಿ ಕಾಲಿಡುತ್ತಿದ್ದಾರೆ. ಇದನ್ನೂ ಓದಿ:ಹೃದಯ ಸ್ತಂಭನದಿಂದ ಕಿರುತೆರೆ ನಟ ರಿತುರಾಜ್ ಸಿಂಗ್ ನಿಧನ

    ಇತ್ತೀಚೆಗೆ ಗೂಗ್ಲಿ ಬೆಡಗಿ ಕೃತಿ ಅವರು ಪುಲ್ಕಿಟ್ ಸಾಮ್ರಾಟ್ ಜೊತೆ ಇರುವ ಫೋಟೋ ಹಂಚಿಕೊಂಡು, ‘ಕೈಜೋಡಿಸಿ ಒಟ್ಟಾಗಿ ಸಾಗೋಣ’ ಎಂದು ಅಡಿಬರಹ ನೀಡಿದ್ದರು. ಅವರು ಬೇಕಂತಲೇ ‘ಮಾರ್ಚ್’ ಎಂಬ ಪದವನ್ನು ಬಳಸಿದ್ದರು. ಈಗಾಗಲೇ ಮದುವೆಗೆ ಸಕಲ ತಯಾರಿ ನಡೆಯುತ್ತಿದೆ ಎಂದು ಎನ್ನಲಾಗುತ್ತಿದೆ. ಆದರೆ ಮದುವೆ ನಡೆಯುವ ಸ್ಥಳದ ಬಗ್ಗೆ ಮಾಹಿತಿ ಸಿಗುವುದು ಬಾಕಿ ಇದೆ.


    ಯಶ್‌ಗೆ (Yash) ನಾಯಕಿಯಾಗಿ ‘ಗೂಗ್ಲಿ’ ಸಿನಿಮಾ ಮೂಲಕ ಕೃತಿ ಕರಬಂಧ (Kriti Kharbanda) ಸೌಂಡ್ ಮಾಡಿದ್ದರು. ದಳಪತಿ, ಪ್ರೇಮ್ ಅಡ್ಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  • ಸೀಕ್ರೆಟ್ ಆಗಿ ಎಂಗೇಜ್‌ಮೆಂಟ್ ಮಾಡಿಕೊಂಡ್ರಾ ‘ಗೂಗ್ಲಿ’ ನಟಿ

    ಸೀಕ್ರೆಟ್ ಆಗಿ ಎಂಗೇಜ್‌ಮೆಂಟ್ ಮಾಡಿಕೊಂಡ್ರಾ ‘ಗೂಗ್ಲಿ’ ನಟಿ

    ನ್ನಡದ ‘ಗೂಗ್ಲಿ’ (Googly) ನಟಿ ಕೃತಿ ಕರಬಂಧ(Kriti Kharabanda), ಬಹುಕಾಲದ ಗೆಳೆಯ ಪುಲ್ಕಿತ್ ಸಾಮ್ರಾಟ್ ಜೊತೆ ಸೀಕ್ರೆಟ್ ಆಗಿ ಎಂಗೇಜ್‌ಮೆಂಟ್ (Engagement) ಮಾಡಿಕೊಂಡ್ರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡ್ತಿದೆ. ನಿಶ್ಚಿತಾರ್ಥ ಆಗಿದೆ ಎನ್ನಲಾದ ಫೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

    ಯಶ್ (Yash) ನಾಯಕಿ ‘ಗೂಗ್ಲಿ’ ಬೆಡಗಿ ಇದೀಗ ಬಾಲಿವುಡ್‌ನಲ್ಲಿ ನಾಯಕಿಯಾಗಿ ಮಿಂಚ್ತಿದ್ದಾರೆ. ಇದರ ನಡುವೆ ನಟಿಯ ಎಂಗೇಜ್‌ಮೆಂಟ್ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಕಳೆದ ಹಲವು ವರ್ಷಗಳಿಂದ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ. ಈ ಹಿಂದೆಯೇ ನಿಶ್ಚಿತಾರ್ಥ ಆಗಿದ್ರೂ ಕೂಡ ಎಲ್ಲೂ ಸೀಕ್ರೆಟ್ ರಿವೀಲ್ ಮಾಡದೇ ಸುಮ್ಮನೆ ಇದ್ರಾ ಎಂಬ ಅನುಮಾನ ನೆಟ್ಟಿಗರಲ್ಲಿದ್ದು, ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ, ಈ ವರ್ಷವೇ ಪುಲ್ಕಿತ್ ಸಾಮ್ರಾಟ್- ಕೃತಿ ಜೋಡಿ ಮದುವೆಯಾಲಿದ್ದಾರೆ ಎನ್ನಲಾಗುತ್ತಿದೆ.

    ಕನ್ನಡದ ಗೂಗ್ಲಿ, ಸೂಪರ್ ರಂಗಾ, ಬೆಳ್ಳಿ, ಗಲಾಟೆ, ಮಾಸ್ತಿಗುಡಿ, ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೃತಿ ನಟಿಸಿದ್ದಾರೆ. ಇದೀಗ ತೆಲುಗು ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:Bigg Boss: ಫಿನಾಲೆಯಲ್ಲಿ ಅಪ್ಪ, ಮಗಳ ಸ್ಪೆಷಲ್‌ ಫೋಟೋಶೂಟ್‌

    ಹಿಂದಿ ‘ರಿಸ್ಕಿ ರೊಮಿಯೋ’ ಸೇರಿದಂತೆ ಹಲವು ಸಿನಿಮಾಗಳು ಕೃತಿ ಕೈಯಲ್ಲಿದೆ. ಪುಲ್ಕಿತ್ (Pulkit Samrat) ಕೂಡ ಹಿಂದಿಯಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ.

  • ‘ಈಗ ಮೂಡ್ ಇಲ್ಲ, ನೆಕ್ಸ್ಟ್ ಟೈಮ್ ಸಿಕ್ಕಾಗ ಹೇಳ್ತೀನಿ’ – ರಾಕಿಭಾಯ್ ಗೂಗ್ಲಿಗೆ ಪವನ್ ಒಡೆಯರ್ ಬೌಲ್ಡ್

    ‘ಈಗ ಮೂಡ್ ಇಲ್ಲ, ನೆಕ್ಸ್ಟ್ ಟೈಮ್ ಸಿಕ್ಕಾಗ ಹೇಳ್ತೀನಿ’ – ರಾಕಿಭಾಯ್ ಗೂಗ್ಲಿಗೆ ಪವನ್ ಒಡೆಯರ್ ಬೌಲ್ಡ್

    ಬೆಂಗಳೂರು: ಪವನ್ ಒಡೆಯರ್ ನಿರ್ದೇಶನ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಗೂಗ್ಲಿ ಸಿನಿಮಾ ತೆರೆಕಂಡ ನಿನ್ನೆಗೆ 7 ವರ್ಷವಾಗಿದೆ. ಈ ಸಮಯದಲ್ಲಿ ಚಿತ್ರತಂಡ ಸಿನಿಮಾದ ಯಶಸ್ಸನ್ನು ನೆನಪಿಸಿಕೊಂಡಿದೆ.

    2013ರ ಜುಲೈ 19ರಂದು ಗೂಗ್ಲಿ ಸಿನಿಮಾ ತೆರೆಕಂಡಿತ್ತು. ಯಶ್ ನಾಯಕನಾಗಿ, ಕೃತಿ ಕರಬಂಧ ನಾಯಕಿಯಾಗಿ ಮಿಂಚಿದ್ದರು. ಲವ್, ಕಾಲೇಜ್ ಲೈಫ್, ಸಕ್ಸಸ್ ಹೀಗೆ ಎಲ್ಲ ಅಂಶಗಳನ್ನು ಒಳಗೊಂಡಿದ್ದ ಸಿನಿಮಾ ಅಂದು ಕಾಲೇಜು ಯುವಕ-ಯುವತಿಯರಿಗೆ ಬಹಳ ಇಷ್ಟ ಆಗಿತ್ತು. ಈ ಮೂರು ಕಥೆ ಹಂದರವನ್ನು ಇಟ್ಟುಕೊಂಡು ಸ್ಟೋರಿ ಹೇಳುವಲ್ಲಿ ನಿರ್ದೇಶಕ ಪವನ್ ಒಡೆಯರ್ ಗೆದ್ದು ಬೀಗಿದ್ದರು. ಈ ಸಿನಿಮಾ ಹಿಟ್ ಆಗಿ ಯಶ್ ಅವರಿಗೆ ಒಳ್ಳೆಯ ನೇಮ್ ತಂದುಕೊಟ್ಟಿತ್ತು. ಜೊತೆಗೆ ಗಲ್ಲಾ ಪೆಟ್ಟಿಗೆಯಲ್ಲೂ ಸದ್ದು ಮಾಡಿತ್ತು.

    ಈಗ ಈ ಸಿನಿಮಾಗೆ 7 ವರ್ಷ ತುಂಬಿದ ನೆನಪಿನಲ್ಲಿ ಚಿತ್ರದ ನಾಯಕ ರಾಂಕಿಗ್ ಸ್ಟಾರ್ ಯಶ್ ಅವರು ಟ್ವೀಟ್ ಮಾಡಿದ್ದು, ಸಿನಿಮಾರಂಗಕ್ಕೆ ಬಂದು 12 ವರ್ಷ ತುಂಬಿದ ದಿನವನ್ನು ಸ್ಪೆಶಲ್ ಆಗಿ ಆಚರಣೆ ಮಾಡಿದ ಎಲ್ಲರಿಗೂ ಧನ್ಯವಾದ. ಇದರ ಜೊತೆಗೆ ಗೂಗ್ಲಿ ಸಿನಿಮಾ ತೆರೆಕಂಡು ಇಂದಿಗೆ 7 ವರ್ಷ ತುಂಬಿದೆ. ಹೀಗಾಗಿ ಗೂಗ್ಲಿ ಸಿನಿಮಾ ತಂಡಕ್ಕೆ ಧನ್ಯವಾದ. ಜಯಣ್ಣ ಫಿಲಮ್ಸ್, ಪವನ್ ಒಡೆಯರ್, ಕೃತಿ ಕರಬಂಧ ಸೇರಿದಂತೆ ಸಿನಿಮಾ ನಿರ್ಮಾಣದಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.

    ಯಶ್ ಅವರ ಟ್ವೀಟ್‍ಗೆ ರೀಟ್ವೀಟ್ ಮಾಡಿರುವ ಪವನ್ ಒಡೆಯರ್ ಅವರು ಧನ್ಯವಾದಗಳು, ಗೂಗ್ಲಿ ಎಂದರೆ ಇದು ಎಂದು ಹೇಳಿದ್ದರು. ಇದಕ್ಕೆ ಮತ್ತೆ ರೀಟ್ವೀಟ್ ಮಾಡಿರುವ ಯಶ್ ಅವರು, ನೀನು ಮತ್ತೊಮ್ಮೆ ಗೂಗ್ಲಿ ಎಂದರೆ. ಈಗ ಆದ್ರೂ ಬಗ್ಗೆ ಹೇಳುವ ಮೂಡ್ ಇಲ್ಲ. ನೆಕ್ಸ್ಟ್ ಟೈಮ್ ಸಿಕ್ಕಾಗ ಹೇಳುತ್ತೇನೆ ಎಂದು ಒಡೆಯರ್ ಅವರ ಕಾಲೆಳೆದಿದ್ದಾರೆ. ಈಗ ಹೇಳುವ ಮೂಡ್ ಇಲ್ಲ. ನೆಕ್ಸ್ಟ್ ಟೈಮ್ ಸಿಕ್ಕಾಗ ಹೇಳುತ್ತೇನೆ ಎನ್ನುವ ಡೈಲಾಗ್ ಗೂಗ್ಲಿ ಮೂವಿಯಲ್ಲಿದ್ದು, ಆ ಕಾಲಕ್ಕೆ ಬಹಳ ಜನಪ್ರಿಯವಾಗಿತ್ತು.

    ತಾನೂ ಅಭಿನಯಿಸಿದ ಚಿತ್ರ ತೆರೆಕಂಡು ಏಳು ವರ್ಷವಾದ ಸಂಭ್ರಮದಲ್ಲಿ ಟ್ವೀಟ್ ಮಾಡಿರುವ ನಾಯಕ ನಟಿ ಕೃತಿ ಕರಬಂಧ, ಡಾಕ್ಟ್ರೇ ಎಂಬುದು ನನ್ನ ನೆಚ್ಚಿನ ನಿಕ್‍ನೇಮ್ ಆಗಿದೆ. ನನಗೆ ಈ ಮೂವಿ ಬಗ್ಗೆ ಹೆಮ್ಮೆ ಇದೆ. ಪವನ್ ಒಡೆಯರ್, ಜಯಣ್ಣ ಫಿಲಮ್ಸ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಧನ್ಯವಾದಗಳು ಮತ್ತು ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ರೀಟ್ವೀಟ್ ಮಾಡಿರುವ ಪವನ್ ನಿಮಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

  • ಪೋಲ್ ಹಿಡಿದು ಬೇಸರ ವ್ಯಕ್ತಪಡಿಸಿದ ಗೂಗ್ಲಿ ಹುಡುಗಿ ಕೃತಿ

    ಪೋಲ್ ಹಿಡಿದು ಬೇಸರ ವ್ಯಕ್ತಪಡಿಸಿದ ಗೂಗ್ಲಿ ಹುಡುಗಿ ಕೃತಿ

    ಮುಂಬೈ: ಗೂಗ್ಲಿ ಬೆಡಗಿ ಕೃತಿ ಕರಬಂಧ ತಾವು ಪೋಲ್ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.

    ಕೊರೊನಾ ಲಾಕ್‍ಡೌನ್ ನಡುವೆ ತನ್ನ ಪ್ರಿಯಕರ ಪುಲ್ಕಿತ್ ಸಾಮ್ರಾಟ್ ಜೊತೆ ಹಾಯಾಗಿ ಕಾಲಕಳೆಯುತ್ತಿರುವ ನಟಿ ಕೃತಿ ಕರಬಂಧ, ಸಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇದ್ದಾರೆ. ಸದ್ಯ ಶೂಟಿಂಗ್ ಇಲ್ಲದೇ ಮನೆಯಲ್ಲೇ ಉಳಿದಿರುವ ಕೃತಿ ತಾವು ಪೋಲ್ ಹಿಡಿದು ಸೊಂಟ ಬಳುಕಿಸಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

    https://www.instagram.com/p/B_4_H4uHmpd/

    ಈ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿಕೊಂಡಿರುವ ಕೃತಿ, ಈ ವಿಡಿಯೋ ಈ ಹಿಂದೆ ಶೂಟ್ ಮಾಡಲಾಗಿತ್ತು. ವರ್ಕೌಟ್ ಸಮಯದಲ್ಲಿ ನನಗೆ ಇದನ್ನು ಮಾಡಲು ಇಷ್ಟ. ಆದರೆ ಈ ಪೋಲ್ ನಮ್ಮ ಮನೆಯಲ್ಲಿ ಇಲ್ಲ ಎಂದು ನಿಜಕ್ಕೂ ಬೇಸರವಾಗುತ್ತಿದೆ. ಪೋಲ್ ಇದ್ದಿದ್ದರೆ ಲಾಕ್‍ಡೌನ್ ವೇಳೆ ನಾನು ಮಾಡುವ ವೇಳಾಪಟ್ಟಿಯಲ್ಲಿ ಇದನ್ನು ಸೇರಿಸಿಕೊಳ್ಳುತ್ತಿದ್ದೆ. ನಿಮ್ಮ ಲಾಕ್‍ಡೌನ್ ದಿನಚರಿ ಏನೂ, ನೀವು ಲಾಕ್‍ಡೌನ್ ಅಲ್ಲಿ ಏನು ಮಾಡುವುದನ್ನು ಮಿಸ್ ಮಾಡಿಕೊಳ್ಳುತ್ತೀದ್ದಿರಾ ಎಂದು ಬರೆದುಕೊಂಡಿದ್ದಾರೆ.

    https://www.instagram.com/p/B4pOQ8lHwl8/?utm_source=ig_embed

    ಮುಂಚೆಯಿಂದಲೂ ಪೋಲ್ ಡ್ಯಾನ್ಸ್ ಎಂದರೆ ಇಷ್ಟವಿರುವ ಕೃತಿ, ಕಳೆದ ವರ್ಷ ತಾನು ಮತ್ತು ತನ್ನ ಪ್ರಿಯಕರ ಪುಲ್ಕಿತ್ ಸಾಮ್ರಾಟ್ ಪೋಲ್ ಡ್ಯಾನ್ಸ್ ಮಾಡುತ್ತಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ಜೊತೆಗೆ ನಮ್ಮಿಬ್ಬರಲ್ಲಿ ಯಾರು ಚೆನ್ನಾಗಿ ಪೋಲ್ ಡ್ಯಾನ್ಸ್ ಮಾಡುತ್ತಾರೆ ಕಮೆಂಟ್ ಮಾಡಿ ಎಂದು ಬರೆದುಕೊಂಡಿದ್ದರು. ಅಂದು ಈ ಫೋಟೋ ಕೂಡ ಸಖತ್ ವೈರಲ್ ಆಗಿತ್ತು.

    https://www.instagram.com/p/B-_WASGnxsz/

    ಸದ್ಯ ಸಾಮ್ರಾಟ್ ಮತ್ತು ಕೃತಿ ಒಂದೇ ಮನೆಯಲ್ಲಿ ಇದ್ದಾರೆ. ಇದರ ಜೊತೆಗೆ ಕೃತಿ ಖಾಸಗಿ ವಾಹಿನಿಗಳಿಗೆ ಸಂದರ್ಶನವನ್ನು ನೀಡುತ್ತಿರುತ್ತಾರೆ. ಹೀಗೆ ಸಂದರ್ಶನ ನೀಡುವ ಸಮಯದಲ್ಲಿ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದ ಕೃತಿ, ಈಗಲೇ ನಮಗೆ ಮದುವೆಯಗಲೂ ಇಷ್ಟವಿಲ್ಲ. ಪುಲ್ಕಿತ್‍ಗೆ ಕೂಡ ಈಗ ಮದುವೆಯಾಗುವುದು ಇಷ್ಟವಿಲ್ಲ. ಅವನು ಇನ್ನು ಬಚ್ಚಾ, ಸ್ವಲ್ಪ ಸಮಯದ ಬಳಿಕ ಮದುವೆಯಾಗುವ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಹೇಳಿದ್ದರು.

    ಮೊದಲು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಕೃತಿ ಕರಬಂಧ, ಚಿರುಂಜೀವಿ ಸರ್ಜಾ ಜೊತೆ ಚಿರು, ರಾಕಿಂಗ್ ಸ್ಟಾರ್ ಯಶ್ ಜೊತೆ ಗೂಗ್ಲಿ, ದುನಿಯ್ ವಿಜಯ್ ಅವರ ಮಾಸ್ತಿಗುಡಿ ಮತ್ತು ಶಿವಣ್ಣ ಅವರ ಬೆಳ್ಳಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅವರು ಕೊನೆಯದಾಗಿ ಕನ್ನಡದಲ್ಲಿ ಮಾಸ್ತಿಗುಡಿ ಸಿನಿಮಾದಲ್ಲಿ ನಟಿಸಿದ್ದರು. ಇದಾದ ನಂತರ ಬಾಲಿವುಡ್‍ಗೆ ಹಾರಿದ ಕೃತಿ ಈಗ ಅಲ್ಲಿ ಬ್ಯುಸಿ ನಟಿಯಾಗಿ ಮಿಂಚುತ್ತಿದ್ದಾರೆ.

  • ಜೊತೆಗಿರದ ಜೋಡಿಗಳು ಲಾಕ್‍ಡೌನ್ ಹೇಗೆ ಕಳೆಯುತ್ತಿದ್ದಾರೆ ಊಹಿಸಲು ಆಗುತ್ತಿಲ್ಲ: ಕೃತಿ

    ಜೊತೆಗಿರದ ಜೋಡಿಗಳು ಲಾಕ್‍ಡೌನ್ ಹೇಗೆ ಕಳೆಯುತ್ತಿದ್ದಾರೆ ಊಹಿಸಲು ಆಗುತ್ತಿಲ್ಲ: ಕೃತಿ

    – ಅವನು ನನ್ನ ಜೊತೆ ಇರುವುದಕ್ಕೆ ಖುಷಿಯಿದೆ

    ಮುಂಬೈ: ಲಾಕ್‍ಡೌನ್ ಸಮಯದಲ್ಲಿ ಬೇರೆ ಬೇರೆ ಇರುವ ಜೋಡಿಗಳು ಹೇಗೆ ಕಾಲ ಕಳೆಯುತ್ತಿದ್ದಾರೆ ನನಗೆ ಗೊತ್ತಿಲ್ಲ ಎಂದು ಗೂಗ್ಲಿ ಬೆಡಗಿ ಕೃತಿ ಕರಬಂಧ ಹೇಳಿದ್ದಾರೆ.

    ಕೊರೊನಾ ವೈರಸ್ ಭಯದಿಂದ ದೇಶವೇ ಲಾಕ್‍ಡೌನ್ ಆಗಿದೆ. ಯಾರೂ ಕೂಡ ತಮ್ಮ ಮನೆಬಿಟ್ಟು ಆಚೆಗೆ ಬರುತ್ತಿಲ್ಲ. ನಟಿ-ನಟಿಯರು ಕೂಡ ಸಿನಿಮಾ ಕೆಲಸವನ್ನು ಬಿಟ್ಟು ಗೂಡ ಸೇರಿದ್ದಾರೆ. ಈ ವೇಳೆ ಬಾಲಿವುಡ್‍ನ ಕ್ಯೂಟ್ ಕಪಲ್ಸ್ ಕೃತಿ ಕರಬಂಧ ಮತ್ತು ಪುಲ್ಕಿತ್ ಸಾಮ್ರಾಟ್ ಲಾಕ್‍ಡೌನ್ ಸಮಯವನ್ನು ಒಂದೇ ಮನೆಯಲ್ಲಿ ಉಳಿದು ಎಂಜಾಯ್ ಮಾಡುತ್ತಿದ್ದಾರೆ.

    ಈ ವಿಚಾರವಾಗಿ ಮಾಧ್ಯಮವೊಂದರ ಜೊತೆ ಮಾತನಾಡಿರುವ ಕೃತಿ, ನಾವು ಮೊದಲೇ ಟ್ರಾಫಿಕ್ಸ್ ಸಮಸ್ಯೆಯಿಂದ ಒಂದೇ ಮನೆಯಲ್ಲಿ ಇರಲು ತೀರ್ಮಾನಿಸಿದ್ದೆವು. ಈಗ ಲಾಕ್‍ಡೌನ್ ಸಮಯದಲ್ಲೂ ಒಂದೇ ಮನೆಯಲ್ಲಿ ಇರುವುದಕ್ಕೆ ನನಗೆ ಬಹಳ ಸಂತೋಷವಾಗಿದೆ. ಆದರೆ ಈ ಲಾಕ್‍ಡೌನ್ ಸಮಯದಲ್ಲಿ ಬೇರೆ ಬೇರೆ ಇರುವ ಜೋಡಿಗಳು ಹೇಗೆ ಕಾಲ ಕಳೆಯುತ್ತಿದ್ದಾರೆ ಎಂದೂ ನನಗೆ ಊಹಿಸಲು ಆಗುತ್ತಿಲ್ಲ ಎಂದು ಕೃತಿ ಹೇಳಿದ್ದಾರೆ.

    ಲಾಕ್‍ಡೌನ್ ಸಮಯದಲ್ಲಿ ಒಟ್ಟಿಗೆ ಇರುವ ಕೃತಿ ಮತ್ತು ಪುಲ್ಕಿತ್ ಬಹಳ ಎಂಜಾಯ್ ಮಾಡುತ್ತಿದ್ದಾರೆ. ಮನೆಯಲ್ಲೇ ಕುಳಿತು ವಿಡಿಯೋ ಗೇಮ್ ಆಡುತ್ತಿದ್ದಾರೆ. ಗುರುವಾರ ಪುಲ್ಕಿತ್ ಸಾಮ್ರಾಟ್ ಇಬ್ಬರು ಜೊತೆಗೆ ಪಿಯಾನೋ ನುಡಿಸುತ್ತಿರುವ ಮತ್ತು ಜೊತೆಗೆ ಹಳೆಯ ಸಾಂಗ್ ಗಳಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ನಡುವೆ ಕೃತಿ ಇನ್‍ಸ್ಟಾಗ್ರಾಮ್ ಮೂಲಕ ಮಾಧ್ಯಮಗಳಿಗೆ ಸಂದರ್ಶನವನ್ನು ನೀಡುತ್ತಿರುತ್ತಾರೆ.

    https://www.instagram.com/p/B-u3YMUhYoO/

    ಈ ಹಿಂದೆ ಮಾಧ್ಯಮವೊಂದಕ್ಕೆ ಕೃತಿ ಇನ್‍ಸ್ಟಾ ಲೈವ್‍ನಲ್ಲಿ ಸಂದರ್ಶನ ನೀಡಿದ್ದರು. ಈ ವೇಳೆ ನಟ ಪುಲ್ಕಿತ್ ಸಾಮ್ರಾಟ್ ಅವರಿಗೆ ಈಗಲೇ ಮದುವೆಯಾಗಲು ಇಷ್ಟವಿಲ್ಲ. ನಾನು ಕೂಡ ಮದುವೆಗೆ ರೆಡಿಯಾಗಿಲ್ಲ. ಆತ ಇನ್ನೂ ಬಚ್ಚಾ. ಹಾಗಾಗಿ ಮದುವೆಯಾಗಲು ನಾವು ಈಗಲೇ ರೆಡಿ ಇಲ್ಲ. ಪುಲ್ಕಿತ್ ನನ್ನನ್ನು ಕೇರ್ ಮಾಡುವಂತೆ ಇದುವರೆಗೂ ಯಾರು ಮಾಡಿಲ್ಲ. ಲಾಕ್‍ಡೌನ್ ಆಗಿದ್ದು, ನಾವಿಬ್ಬರು ಒಟ್ಟಿಗೆ ಇದ್ದೇವೆ. ಈ ವೇಳೆ ಪುಲ್ಕಿತ್ ನನಗೆ ಮನೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದಿದ್ದರು.

    ಕ್ಯೂಟ್ ಬೆಡಗಿ ಕೃತಿ `ಚಿರು’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡಿ ಗೂಗ್ಲಿ ಚಿತ್ರದ ಮೂಲಕ ಪ್ರಖ್ಯಾತಿ ಪಡೆದಿದ್ದಾರೆ. ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. `ಮಾಸ್ತಿಗುಡಿ’ ಚಿತ್ರದ ನಂತರ ಕೃತಿ ಬೇರೆ ಯಾವ ಕನ್ನಡ ಸಿನಿಮಾದಲ್ಲಿ ನಟಿಸಲಿಲ್ಲ. ಸದ್ಯ ಕೃತಿ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೇ ಬಾಲಿವುಡ್‍ನಲ್ಲಿ 2019ರಿಂದ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ.

  • ಕೃತಿ ಕರಬಂದ, ಸಾಮ್ರಾಟ್ ಲವ್- ನನಗೆ ಲಾಭವಾಯ್ತು ಎಂದ ನಿರ್ದೇಶಕ

    ಕೃತಿ ಕರಬಂದ, ಸಾಮ್ರಾಟ್ ಲವ್- ನನಗೆ ಲಾಭವಾಯ್ತು ಎಂದ ನಿರ್ದೇಶಕ

    ಮುಂಬೈ: ಚಂದನವನದ ಗೂಗ್ಲಿ ಬೆಡಗಿ ಕೃತಿ ಕರಬಂದ ಪ್ರೇಮ ವ್ಯೂಹದಲ್ಲಿ ಸಿಲುಕಿರೋದು ನನಗೆ ಲಾಭವಾಗಿದೆ ಎಂದು ನಿರ್ದೇಶಕ ಅನೀಸ್ ಬಜ್ಮೀ ಹೇಳಿದ್ದಾರೆ.

    ಬಾಲಿವುಡ್ ನಟ ಪುಲ್ಕಿಟ್ ಸಾಮ್ರಾಟ್ ಪ್ರೇಮ ಪಾಶದಲ್ಲಿ ಕೃತಿ ಸಿಲುಕಿದ್ದು, ಇಬ್ಬರು ಕಳೆದ ಆರೇಳು ತಿಂಗಳಿನಿಂದ ಡೇಟ್‍ನಲ್ಲಿದ್ದಾರೆ. ಇಬ್ಬರು ಜೊತೆಯಾಗಿ ನಟಿಸಿರುವ ಪಾಗಲ್ ಪಂತಿ ಸಿನಿಮಾ ಸಹ ಬಿಡುಗಡೆಗೆ ಸಿದ್ಧಗೊಂಡಿದ್ದು, ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಇಬ್ಬರ ಪ್ರೇಮ ವಿಚಾರವಾಗಿ ಪ್ರತಿಕ್ರಿಯಿಸಿರುವ ಪಾಗಲ್‍ಪಂತಿ ಸಿನಿಮಾ ನಿರ್ದೇಶಕ ಅನೀಸ್ ಬಜ್ಮೀ, ನನ್ನ ಚಿತ್ರದಲ್ಲಿ ಇಬ್ಬರು ಜೊತೆಯಾಗಿ ನಟಿಸುತ್ತಿದ್ದಾರೆ. ತೆರೆಯ ಹಿಂದೆಯೂ ಸಹ ಇಬ್ಬರು ಪ್ರೇಮಿಸುತ್ತಿರುವ ಕಾರಣ ನನಗೆ ಹೆಚ್ಚು ಲಾಭವಾಯ್ತು ಎಂದಿದ್ದಾರೆ.

    ಕೃತಿ ಮತ್ತು ಸಾಮ್ರಾಟ್ ಜೋಡಿಯಾಗಿ ನಟಿಸಿದ್ದು, ಸಿನಿಮಾದಲ್ಲಿ ರೊಮ್ಯಾಂಟಿಕ್ ದೃಶ್ಯಗಳಿದ್ದವು. ಇಬ್ಬರು ಪ್ರೇಮದಲ್ಲಿ ಇರೋದರಿಂದ ರೊಮ್ಯಾಂಟಿಕ್ ಮತ್ತು ಕಿಸ್ಸಿಂಗ್ ಸೀನ್ ಗಳು ನ್ಯಾಚೂರಲ್ ಆಗಿಯೇ ಮೂಡಿಬಂದಿವೆ. ತೆರೆಯ ಮೇಲೆಯೂ ಸಹ ಜೋಡಿ ನೋಡುಗರನ್ನು ಮೋಡಿ ಮಾಡಲಿದೆ ಎಂದು ಅನೀಸ್ ಬಜ್ಮೀ ಹೇಳುತ್ತಾರೆ.

    ಕಳೆದ ಎರಡು ತಿಂಗಳಿನಿಂದ ಕೃತಿ ಮತ್ತು ಸಾಮ್ರಾಟ್ ನಡುವಿನ ಸಂಬಂಧದ ಬಗ್ಗೆ ಹಲವು ಸುದ್ದಿಗಳು ಹರಿದಾಡಿದ್ದವು. ಈ ಕುರಿತು ಸ್ಪಷ್ಟನೆ ನೀಡಿರುವ ಕೃತಿ, ನೀವು ಕೇಳಿರುವ ಸುದ್ದಿಗಳು. ಕಳೆದ ಆರು ತಿಂಗಳಿನಿಂದ ಸಾಮ್ರಾಟ್ ಜೊತೆ ಡೇಟ್ ನಲ್ಲಿದ್ದೇನೆ ಎಂದಿದ್ದಾರೆ.

    ಪಾಗಲ್ ಪಂತಿ ಸಿನಿಮಾದಲ್ಲಿ ಎರಡನೇ ಬಾರಿ ಜೊತೆಯಾಗಿರುವ ಕೃತಿ ಮತ್ತು ಸಾಮ್ರಾಟ್ ಒಬ್ಬರಿಗೊಬ್ಬರು ಮೆಸೇಜ್, ಹೂಗುಚ್ಛ ಕಳುಹಿಸುವ ಮೂಲಕ ತಮ್ಮ ಪ್ರೀತಿಯ ಸುಳಿವು ನೀಡಿದ್ದರು. ಸಾಮ್ರಾಟ್ ಪ್ರತಿದಿನ ಶೂಟಿಂಗ್ ಮುನ್ನ ಕೃತಿ ಮೇಕಪ್ ಕೋಣೆಗೆ ಚಾಕೋಲೇಟ್ ಮತ್ತು ಹೂಗುಚ್ಛ ಕಳುಹಿಸುತ್ತಿದ್ದರು. 2018ರಲ್ಲಿ ಬಿಡುಗಡೆಯಾಗಿದ್ದ ‘ವೀರೇ ಕೀ ವೆಡ್ಡಿಂಗ್’ ಸಿನಿಮಾದಲ್ಲಿ ಜೋಡಿ ಮೊದಲ ಬಾರಿಗೆ ತೆರೆಯ ಮೇಲೆ ಒಂದಾಗಿತ್ತು.

    29 ವರ್ಷದ ಕೃತಿ ಕರಬಂದ ಇದೂವರೆಗೂ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ, ತೆಲಗು, ಹಿಂದಿ, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿರು ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದ ಕೃತಿ ತಮ್ಮ ಮುಗುಳ್ನಗೆ ಮೂಲಕವೇ ಕನ್ನಡಿಗರ ಹೃದಯ ಕದ್ದಿದ್ದರು. ಪ್ರೇಮ ಅಡ್ಡ, ಗಲಾಟೆ, ಸೂಪರ್ ರಂಗ, ಬೆಳ್ಳಿ, ಗೂಗ್ಲಿ, ಮಾಸ್ತಿಗುಡಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

  • ಪ್ರೇಮ ವ್ಯೂಹದಲ್ಲಿ ಕೃತಿ ಕರಬಂದ!

    ಪ್ರೇಮ ವ್ಯೂಹದಲ್ಲಿ ಕೃತಿ ಕರಬಂದ!

    ಬೆಂಗಳೂರು: ಗೂಗ್ಲಿ ಖ್ಯಾತಿಯ ನಟಿ ಕೃತಿ ಕರಬಂದ ಕನ್ನಡ ಮಾತ್ರವಲ್ಲದೇ ಬಾಲಿವುಡ್ ನಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ನಟ ಪುಲ್ಕಿಟ್ ಸಾಮ್ರಾಟ್ ಜೊತೆ ಕೃತಿ ಕಳೆದ ಆರು ತಿಂಗಳಿನಿಂದ ಡೇಟಿಂಗ್ ನಲ್ಲಿದ್ದಾರೆ ಎಂದು ವರದಿಯಾಗಿದೆ. ಪಾಗಲ್‍ಪಂತಿ ಸಿನಿಮಾ ಶೂಟಿಂಗ್ ವೇಳೆ ಇಬ್ಬರು ಹತ್ತಿರವಾಗಿದ್ದಾರೆ. ಶೂಟಿಂಗ್ ಸಮಯದಲ್ಲಿಯೂ ಇಬ್ಬರು ಹೆಚ್ಚು ಸಮಯವನ್ನು ಜೊತೆಯಾಗಿ ಕಳೆಯುತ್ತಿದ್ದಾರೆ ಎನ್ನಲಾಗಿದೆ.

    ಪಾಗಲ್ ಪಂತಿ ಸಿನಿಮಾದಲ್ಲಿ ಎರಡನೇ ಬಾರಿ ಜೊತೆಯಾಗಿರುವ ಕೃತಿ ಮತ್ತು ಸಾಮ್ರಾಟ್ ಒಬ್ಬರಿಗೊಬ್ಬರು ಮೆಸೇಜ್, ಹೂಗುಚ್ಛ ಕಳುಹಿಸುವ ಮೂಲಕ ತಮ್ಮ ಪ್ರೀತಿಯ ಸುಳಿವು ನೀಡಿದ್ದಾರೆ. ಸಾಮ್ರಾಟ್ ಪ್ರತಿದಿನ ಶೂಟಿಂಗ್ ಮುನ್ನ ಕೃತಿ ಮೇಕಪ್ ಕೋಣೆಗೆ ಚಾಕೋಲೇಟ್ ಮತ್ತು ಹೂಗುಚ್ಛ ಕಳುಹಿಸುತ್ತಿದ್ದಾರೆ. 2018ರಲ್ಲಿ ಬಿಡುಗಡೆಯಾಗಿದ್ದ ‘ವೀರೇ ಕೀ ವೆಡ್ಡಿಂಗ್’ ಸಿನಿಮಾದಲ್ಲಿ ಜೋಡಿ ಮೊದಲ ಬಾರಿಗೆ ತೆರೆಯ ಮೇಲೆ ಒಂದಾಗಿತ್ತು. ಈ ಬಗ್ಗೆ ಜೋಡಿ ಯಾವುದೇ ಹೇಳಿಕೆಗಳನ್ನು ನೀಡಿಲ್ಲ.

    29 ವರ್ಷದ ಕೃತಿ ಕರಬಂದ ಇದೂವರೆಗೂ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ, ತೆಲಗು, ಹಿಂದಿ, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿರು ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದ ಕೃತಿ ತಮ್ಮ ಮುಗುಳ್ನಗೆ ಮೂಲಕವೇ ಕನ್ನಡಿಗರ ಹೃದಯ ಕದ್ದಿದ್ದರು. ಪ್ರೇಮ ಅಡ್ಡ, ಗಲಾಟೆ, ಸೂಪರ್ ರಂಗ, ಬೆಳ್ಳಿ, ಗೂಗ್ಲಿ, ಮಾಸ್ತಿಗುಡಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

  • ಗೂಗ್ಲಿ ಬೆಡಗಿ ಕೃತಿ ಬಾತ್‍ಟಬ್ ಫೋಟೋ ವೈರಲ್- ಅಭಿಮಾನಿಗಳು ಫಿದಾ!

    ಗೂಗ್ಲಿ ಬೆಡಗಿ ಕೃತಿ ಬಾತ್‍ಟಬ್ ಫೋಟೋ ವೈರಲ್- ಅಭಿಮಾನಿಗಳು ಫಿದಾ!

    ಬೆಂಗಳೂರು: ಗೂಗ್ಲಿ ಚಿತ್ರದ ಬೆಡಗಿ ಕೃತಿ ಕರಬಂದ ಅವರ ಬಾತ್‍ಟಬ್ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇತ್ತೀಚಿಗೆ ಕೃತಿ ಬಾತ್‍ಟಬ್ ಮೇಲೆ ನಿಂತು ಮ್ಯಾಗಜೀನ್‍ಗಾಗಿ ಫೋಟೋಶೂಟ್ ನಡೆಸಿದ್ದರು. ಫೋಟೋಶೂಟ್‍ನಲ್ಲಿ ಕೃತಿ ಸ್ವಿಮ್ ಸೂಟ್ ಧರಿಸಿ, ಅದಕ್ಕೆ ಬಟ್ಟರ್ ಫ್ಲೈ ಟಾಪ್ ಧರಿಸಿದ್ದಾರೆ. ಈ ಸ್ವಿಮ್ ಸೂಟ್‍ಗೆ ಕೃತಿ ಹೈಹೀಲ್ಸ್ ಹಾಕಿ ಫೋಟೋಗೆ ಪೋಸ್ ನೀಡಿದ್ದಾರೆ.

    ಕೃತಿ ತನ್ನ ಈ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಎಲ್ಲಾ ಅಭಿಮಾನಿಗಳು ಕೃತಿ ಸೌಂದರ್ಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೃತಿ ಈ ಹಿಂದೆ ಕೂಡ ಬಾತ್‍ಟಬ್‍ನಲ್ಲಿ ತೆಗೆದುಕೊಂಡಿರುವ ಫೋಟೋ ಹಾಗೂ ಹಾಟ್ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.

    ಕೃತಿ ಚಿರು ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡಿ ಗೂಗ್ಲಿ ಚಿತ್ರದ ಮೂಲಕ ಪ್ರಖ್ಯಾತಿ ಆದರು. ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಮಾಸ್ತಿಗುಡಿ’ ಚಿತ್ರದ ನಂತರ ಕೃತಿ ಬೇರೆ ಯಾವ ಕನ್ನಡ ಸಿನಿಮಾದಲ್ಲಿ ನಟಿಸಲಿಲ್ಲ. ಸದ್ಯ ಕೃತಿ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೇ ಬಾಲಿವುಡ್‍ನಲ್ಲಿ 2019ರ ವರೆಗೂ ಬ್ಯುಸಿ ಆಗಿದ್ದಾರೆ. ಈಗ ಕೃತಿ ಕನ್ನಡದ ಯಾವ ಚಿತ್ರವನ್ನು ಒಪ್ಪಿಕೊಳ್ಳುತ್ತಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕೊನೆ ಘಳಿಗೆಯಲ್ಲಿ ಕೃತಿಗೆ ದರ್ಶನ್ ಜೊತೆ ನಟಿಸುವ ಅವಕಾಶ ಕೈ ತಪ್ತು!

    ಕೊನೆ ಘಳಿಗೆಯಲ್ಲಿ ಕೃತಿಗೆ ದರ್ಶನ್ ಜೊತೆ ನಟಿಸುವ ಅವಕಾಶ ಕೈ ತಪ್ತು!

    ಬೆಂಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಅಭಿನಯಿಸೋಕೆ ಯಾರಿಗ್ ತಾನೆ ಇಷ್ಟವಿಲ್ಲ ಹೇಳಿ. ಆದರೆ ದರ್ಶನ್‍ಗೆ ಜೋಡಿಯಾಗುವ ಅವಕಾಶ ಬಹುಭಾಷಾ ನಟಿಯೊಬ್ಬರಿಗೆ ಒದಗಿಬಂದಿದ್ದು, ಆದರೆ ಕೊನೆ ಘಳಿಗೆಯಲ್ಲಿ ಅದು ಕೈತಪ್ಪಿ ಹೋಗಿದೆ.

    ದರ್ಶನ್ ಜೊತೆ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಬಹುಭಾಷಾ ನಟಿ ಕೃತಿ ಕರಬಂಧ ತಿರಸ್ಕರಿದ್ದಾರೆ. ಕೃತಿ ಕರಬಂಧ ಈಗ ಸೌತ್ ಇಂಡಿಯಾ ಚಿತ್ರಗಳಲ್ಲಷ್ಟೆ ಅಲ್ಲದೇ ಬಾಲಿವುಡ್‍ನಲ್ಲೂ ಬಹುಬೇಡಿಕೆಯ ನಟಿಯಾಗಿದ್ದಾರೆ.

    ಸ್ಯಾಂಡಲ್‍ವುಡ್ ಕೃತಿಯ ತವರೂರು. ಹೀಗಾಗೇ ಕೃತಿಗೆ ದರ್ಶನ್ ಅಭಿನಯಿಸುತ್ತಿರುವ `ಯಜಮಾನ’ ಸಿನಿಮಾದಿಂದ ಆಫರ್ ಬಂದಿತ್ತು. ಯಜಮಾನ ನಿರ್ದೇಶಕ ಪೊನ್ ಕುಮಾರ್ ಜೊತೆ ಕೃತಿ ಈ ಹಿಂದೆ ತಿರುಪತಿ ಎಕ್ಸ್ ಪ್ರೆಸ್ ಸಿನಿಮಾ ಮಾಡಿದ್ದರು. ಆದರೆ ಯಜಮಾನ ತಂಡ ನೀಡಿದ್ದ ಡೇಟ್ ಕೃತಿಗೆ ಹೊಂದಿಕೆಯಾಗಿಲ್ಲ. ಆ ವೇಳೆ ಹಿಂದಿ ಸಿನಿಮಾದಲ್ಲಿ ಬ್ಯುಸಿ ಇದ್ದರು. ಆದ್ದರಿಂದ ಯಜಮಾನ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಆದ್ರೆ ಶೀಘ್ರದಲ್ಲೇ ಒಂದೊಳ್ಳೆ ಚಿತ್ರದ ಮೂಲಕ ವಾಪಸ್ ಬರುತ್ತೀನಿ ಅಂತ ಕೃತಿ ಭರವಸೆ ನೀಡಿದ್ದಾರೆ.

    ಯಜಮಾನ ಚಿತ್ರದಲ್ಲಿ ಕೃತಿ ಬದಲು ಇದೀಗ ಟಾಲಿವುಡ್ ನಟಿ ತಾನ್ಯ ಹೋಪ್ ಅಭಿನಯಿಸುತ್ತಿದ್ದಾರೆ. ಮತ್ತೊಬ್ಬ ನಟಿಯಾಗಿ ರಶ್ಮಿಕಾ ಮಂದಣ್ಣ ಇದ್ದಾರೆ.

     

    ಮಾಸ್ತಿಗುಡಿ ಚಿತ್ರದ ನಂತರ ಕನ್ನಡದಲ್ಲಿ ಕೃತಿ ಅಭಿನಯದ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಆದರೆ ಅದ್ಯಾವಾಗ “ರಾಜ್ ರೀಬೂಟ್” ಹಿಂದಿ ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಜೊತೆ ಕಾಣಿಸ್ಕೊಂಡ್ರೋ ಕೃತಿಯ ಅಭಿನಯಕ್ಕೆ ಬಿಟೌನ್ ಕೂಡ ಫಿದಾ ಆಗಿದೆ. ಗೆಸ್ಟ್ ಇನ್ ಲಂಡನ್, ಶಾದಿ ಮೆ ಜರೂರ್ ಆನಾ, ವೀರ್ ಕೀ ವೆಡ್ಡಿಂಗ್ ಮತ್ತು ಕಾರ್‍ವಾನ್ ಹೀಗೆ ಒಂದಲ್ಲಾ ಎರಡಲ್ಲ ಸಾಲು-ಸಾಲು ಚಿತ್ರಗಳ ಜೊತೆ ಕೃತಿ ಬಾಲಿವುಡ್‍ನಲ್ಲಿ ಬ್ಯುಸಿ ಆಗಿದ್ದಾರೆ. ಒಂದೊಮ್ಮೆ ಬಾಲಿವುಡ್‍ಗೆ ಹೋದ ಬಳಿಕ ಇದೀಗ `ದಳಪತಿ’ ಚಿತ್ರದ ಮೂಲಕ ಸ್ಯಾಂಡಲ್‍ವುಡ್ ತೆರೆಮೇಲೆ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಕೃತಿ ಎರಡು ವರ್ಷಗಳ ಹಿಂದೆ ದಳಪತಿ ಚಿತ್ರ ಒಪ್ಪಿಕೊಂಡಿದ್ದರು. ಈ ಚಿತ್ರವನ್ನು ಪ್ರಶಾಂತ್‍ರಾಜ್ ನಿರ್ದೇಶನ ಮಾಡಿದ್ದು, ಪ್ರೇಮ್ ನಾಯಕರಾಗಿದ್ದಾರೆ. ಈ ಚಿತ್ರ ಏಪ್ರಿಲ್ 13ರಂದು ರಿಲೀಸ್ ಆಗುತ್ತಿದೆ.