Tag: kriti kharabanda

  • ‘ಗೂಗ್ಲಿ’ ನಟಿ ಕೃತಿ ಕರಬಂಧ ಮದುವೆ ಯಾವಾಗ, ಎಲ್ಲಿ?

    ‘ಗೂಗ್ಲಿ’ ನಟಿ ಕೃತಿ ಕರಬಂಧ ಮದುವೆ ಯಾವಾಗ, ಎಲ್ಲಿ?

    ನ್ನಡದ ನಟಿ, ಬಾಲಿವುಡ್ ಬೆಡಗಿ ಕೃತಿ ಕರಬಂಧ (Kriti Kharbanda) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಬಹುಕಾಲದ ಗೆಳೆಯ ಪುಲ್ಕಿತ್ ಸಾಮ್ರಾಟ್ (Pulkit Samrat) ಜೊತೆ ಕೃತಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಹಾಗಾದ್ರೆ ಕೃತಿ ಯಾವಾಗ, ಎಲ್ಲಿ? ಇಲ್ಲಿದೆ ಮಾಹಿತಿ.

    ‘ಗೂಗ್ಲಿ’ ಬೆಡಗಿ ಕೃತಿ ಜೊತೆ ಪುಲ್ಕಿತ್ ಇದೇ ಮಾರ್ಚ್ 15ರಂದು ದೆಹಲಿಯಲ್ಲಿ ಗ್ರ‍್ಯಾಂಡ್ ಆಗಿ ಮದುವೆ (Wedding) ಆಗುತ್ತಿದ್ದಾರೆ. ಈ ಜೋಡಿ ತಮ್ಮ ಆಪ್ತರಿಗೆ, ಬಾಲಿವುಡ್‌ನ ನಟ-ನಟಿಯರಿಗೆ ಆಮಂತ್ರಣ ನೀಡಿದ್ದಾರೆ.

    ಈಗ ಈ ಜೋಡಿ ಮದುವೆ ಆಗುತ್ತಿರುವ ಸ್ಥಳದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಸುಮಾರು 300 ಎಕರೆಯಲ್ಲಿ ನಿರ್ಮಾಣಗೊಂಡಿರುವ ರೆಸಾರ್ಟ್‌ನಲ್ಲಿ ಕೃತಿ ಮದುವೆಯಾಗುತ್ತಿದ್ದಾರೆ. ಮಾರ್ಚ್ 13ರಿಂದ ಮಾರ್ಚ್ 16ರವರೆಗೆ ಮದುವೆ ಶಾಸ್ತ್ರಗಳು ನಡೆಯಲಿದೆ. ಮಾರ್ಚ್‌ 15ರಂದು ಹೊಸ ಬಾಳಿಗೆ ಕಾಲಿಡಲಿದ್ದಾರೆ. ಇದನ್ನೂ ಓದಿ:Bigg Boss: ತೆಲುಗು ನಿರ್ದೇಶಕ ಸೂರ್ಯ ಕಿರಣ್ ನಿಧನ

    ‘ಗೂಗ್ಲಿ’ ಬ್ಯೂಟಿ ಕೃತಿ ಕರಬಂಧ ಹಾಗೂ ಪುಲ್ಕಿತ್ ಸಮರ್ಥ್ ದೆಹಲಿಯಲ್ಲಿರುವ ಐಟಿಸಿ ಗ್ರ‍್ಯಾಂಡ್ ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆ ಆಗುತ್ತಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಈ ರೆಸಾರ್ಟ್ 300 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದೆ. ಪ್ರಾಚೀನ ಶೈಲಿಯಲ್ಲಿ ಸುಂದರವಾದ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ.

    ಗ್ರ‍್ಯಾಂಡ್ ಭಾರತ್ ರೆಸಾರ್ಟ್‌ನಲ್ಲಿ ಸುಮಾರು 4 ಪ್ರೆಸಿಡೆಂನ್ಸಿಯಲ್ ವಿಲ್ಲಾವಿದೆ. ಐಷಾರಾಮಿ ಸ್ಪಾಗಳು ಸೇರಿದಂತೆ ಅನೇಕ ಸೌಲಭ್ಯಗಳಿವೆ. ಇನ್ನೂ ಕೃತಿ, ಪುಲ್ಕಿತ್ ಇಬ್ಬರೂ ದೆಹಲಿಯಲ್ಲೇ ಹುಟ್ಟಿ ಬೆಳೆದಿದ್ದಾರೆ. ಇವರ ಕುಟುಂಬ ದೆಹಲಿಯಲ್ಲಿಯೇ ನೆಲೆಸಿರುವುದರಿಂದ ಇದೇ ಸೂಕ್ತ ಆಯ್ಕೆ ಎಂದು ಜೋಡಿ ನಿರ್ಧರಿಸಿದೆ.

    2019ರಲ್ಲಿ ತೆರೆಕಂಡ ‘ಪಾಗಲ್‌ಪಂತಿ’ ಸಿನಿಮಾದಲ್ಲಿ ಪುಲ್ಕಿತ್ ಸಾಮ್ರಾಟ್, ಕೃತಿ ಜೋಡಿಯಾಗಿ ನಟಿಸಿದ್ದರು. ಈ ವೇಳೆ, ಇಬ್ಬರ ಪರಿಚಯವಾಗಿತ್ತು. ಈ ಪರಿಚಯ ಪ್ರೀತಿಗೆ ತಿರುಗಿದೆ. ಹಲವು ವರ್ಷಗಳ ಡೇಟಿಂಗ್ ನಂತರ ಇದೀಗ ಗುರುಹಿರಿಯರ ಸಮ್ಮತಿಯ ಮೇರೆಗೆ ಈ ಜೋಡಿ ಮದುವೆಯಾಗುತ್ತಿದ್ದಾರೆ.

  • ವಿಡಿಯೋ ಲೀಕ್ ಬಗ್ಗೆ ಭಯಾನಕ ಸತ್ಯ ಬಿಚ್ಚಿಟ್ಟ ಕೃತಿ ಕರಬಂಧ

    ವಿಡಿಯೋ ಲೀಕ್ ಬಗ್ಗೆ ಭಯಾನಕ ಸತ್ಯ ಬಿಚ್ಚಿಟ್ಟ ಕೃತಿ ಕರಬಂಧ

    ನ್ನಡದ ‘ಗೂಗ್ಲಿ’ (Googly) ಬ್ಯೂಟಿ ಕೃತಿ ಕರಬಂಧ (Kriti Kharbanda) ಈಗಬಾಲಿವುಡ್‌ನಲ್ಲಿ (Bollywood) ಗುರುತಿಸಿಕೊಳ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಶಾಕಿಂಗ್ ವಿಚಾರವೊಂದನ್ನ ಬಿಚ್ಚಿಟ್ಟಿದ್ದಾರೆ. ಕನ್ನಡ ಸಿನಿಮಾವೊಂದರ ಶೂಟಿಂಗ್‌ಗಾಗಿ ಹೋಟೆಲ್‌ವೊಂದರಲ್ಲಿ ತಂಗಿದ್ದಾಗ ತಾವು ಎದುರಿಸಿದ ಘಟನೆ ಬಗ್ಗೆ ಬಾಯ್ಬಿಟ್ಟಿದ್ದಾರೆ. ವಿಡಿಯೋ ಲೀಕ್ ಬಗ್ಗೆ ನಟಿ ಮಾತನಾಡಿದ್ದಾರೆ.

    ಮಹಿಳೆಯರು ಹೊಸ ಸ್ಥಳಕ್ಕೆ ಹೋದಾಗ ಎಚ್ಚರ ವಹಿಸಬೇಕು ಎಂಬುದರ ಬಗ್ಗೆ ನಟಿ ಮಾತನಾಡಿದ್ದಾರೆ. ಹೋಟೆಲ್‌ಗಳಲ್ಲಿ ತಂಗಿದ್ದಾಗ ಸಾಕಷ್ಟು ಎಚ್ಚರಿಕೆ ಬೇಕು. ಕೆಲವರು ಕದ್ದು ಶೂಟ್ ಮಾಡಲು ಕ್ಯಾಮೆರಾ ಇಟ್ಟಿರುತ್ತಾರೆ. ಕೃತಿಗೆ ಆದ ಅನುಭವ ಕೂಡ ಇಂಥದ್ದೇ. ಕನ್ನಡ ಸಿನಿಮಾವೊಂದರ ಶೂಟಿಂಗ್ ವೇಳೆ ಅವರು ಹೇಗೆ ಕ್ಯಾಮೆರಾ ಪತ್ತೆ ಹಚ್ಚಿದ್ದರು ಎಂಬುದನ್ನು  ವಿವರಿಸಿದ್ದಾರೆ. ಇದನ್ನೂ ಓದಿ:ಈ ಬಾರಿ ಟಿವಿ ಬಿಗ್ ಬಾಸ್ ಜೊತೆ ಓಟಿಟಿ ಸೀಸನ್ ಕೂಡ ಇರುತ್ತಾ?

    ಹೋಟೆಲ್ ಬಾಯ್ ನನ್ನ ರೂಮ್‌ನಲ್ಲಿ ಕ್ಯಾಮೆರಾ ಇಟ್ಟಿದ್ದ. ನಾನು ಮತ್ತು ನನ್ನ ಸ್ಟಾಫ್‌ಗಳು ಹೋಟೆಲ್‌ಗೆ ಹೋದ ತಕ್ಷಣ ಒಮ್ಮೆ ಎಲ್ಲವನ್ನೂ ಪರೀಕ್ಷೆ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದೇವೆ. ಅದು ಅಪ್‌ಡೇಟೆಡ್‌ ಹೊಸ ತಂತ್ರಜ್ಞಾನದ ಕ್ಯಾಮೆರಾ ಆಗಿರಲಿಲ್ಲ. ಹೀಗಾಗಿ, ನನಗೆ ಆ ಕ್ಯಾಮೆರಾ ಸುಲಭದಲ್ಲಿ ಕಂಡಿತು. ಸೆಟ್‌ಟಾಪ್ ಬಾಕ್ಸ್ ಹಿಂಭಾಗದಲ್ಲಿ ಆತ ಕ್ಯಾಮೆರಾ ಇಟ್ಟಿದ್ದ. ಇದು ಭಯಾನಕ ಅನುಭವ ಆಗಿತ್ತು ಎಂದು ಕೃತಿ ಕರಬಂಧ ಹೇಳಿದ್ದಾರೆ.

    ‘ಚಿರು’ (Chiru) ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೃತಿ ಕರಬಂಧ, ಯಶ್ (Yash) ಜೊತೆಗಿನ ‘ಗೂಗ್ಲಿ’ ಚಿತ್ರದ ಮೂಲಕ ಯಶಸ್ಸು ಕಂಡರು. ಈಗ ಸೌತ್- ಹಿಂದಿ ಸಿನಿಮಾಗಳಲ್ಲಿ ಕೃತಿ ಮಿಂಚ್ತಿದ್ದಾರೆ. ಪುಲ್ಕಿತ್ ಸಾಮ್ರಾಟ್ ಜೊತೆ ಕೃತಿ ಎಂಗೇಜ್ ಆಗಿದ್ದಾರೆ. ಸದ್ಯದಲ್ಲೇ ಮದುವೆಯ ಗುಡ್ ನ್ಯೂಸ್ ಕೊಡುತ್ತಾರಾ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶೀಘ್ರದಲ್ಲೇ ನಡೆಯಲಿದೆ ಪುಲ್ಕಿತ್ ಜೊತೆ `ಗೂಗ್ಲಿ’ ನಟಿ ಕೃತಿ ಮದುವೆ

    ಶೀಘ್ರದಲ್ಲೇ ನಡೆಯಲಿದೆ ಪುಲ್ಕಿತ್ ಜೊತೆ `ಗೂಗ್ಲಿ’ ನಟಿ ಕೃತಿ ಮದುವೆ

    ಚಿತ್ರರಂಗದಲ್ಲಿ ಒಬ್ಬರ ಹಿಂದೆ ಒಬ್ಬರು ಹಸೆಮಣೆ ಏರುತ್ತಿದ್ದಾರೆ. ಅಥಿಯಾ ಶೆಟ್ಟಿ- ಕೆ.ಎಲ್ ರಾಹುಲ್, ಸಿದ್ ಮತ್ತು ಕಿಯಾರಾ ಇತ್ತೀಚಿಗೆ ಮದುವೆಯಾದರು. ಈ ಬೆನ್ನಲ್ಲೇ ಕನ್ನಡದ ಗೂಗ್ಲಿ ನಟಿ ಕೃತಿ ಮದುವೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಇದೀಗ ಪುಲ್ಕಿತ್ ಸಾಮ್ರಾಟ್  (Pulkit Samrat) ಜೊತೆ ಕೃತಿ ಕರಬಂದ (Kriti Kharbanda) ಮದುವೆ (Wedding) ಮಾತು ಚಾಲ್ತಿಯಲ್ಲಿದೆ.

    ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ `ಗೂಗ್ಲಿ’ (Googly) ಚಿತ್ರದಲ್ಲಿ ಯಶ್‌ಗೆ (Yash) ನಾಯಕಿಯಾಗಿ ಕೃತಿ ಮೋಡಿ ಮಾಡಿದ್ದರು. ಇದೀಗ ಬಾಲಿವುಡ್ (Bollywood) ಸಿನಿಮಾದಲ್ಲಿ ನಟಿಸುತ್ತ ಅಲ್ಲಿಯೇ ಸೆಟಲ್ ಆಗಿದ್ದಾರೆ. ಇನ್ನೂ ಪುಲ್ಕಿತ್ ಸಾಮ್ರಾಟ್ ಜೊತೆಗಿನ ಕೃತಿ ಡೇಟಿಂಗ್ ವಿಚಾರವೇನು ಇದೀಗ ಗುಟ್ಟಾಗಿ ಉಳಿದಿಲ್ಲ. ಬಾಲಿವುಡ್‌ನಲ್ಲಿ ಸದ್ಯದಲ್ಲಿಯೇ ಈ ಜೋಡಿ ಮದುವೆಯಾಗುತ್ತಿದ್ದಾರೆ ಎಂದು ಹರಿದಾಡುತ್ತಿದೆ. ಇದನ್ನೂ ಓದಿ: ವರುಣ್ ತೇಜ್ ಜೊತೆ ಲಾವಣ್ಯ ಮದುವೆ? ಸ್ಪಷ್ಟನೆ ನೀಡಿದ ನಟಿ

    ಪುಲ್ಕಿತ್ ಮತ್ತು ಕೃತಿ ಈ ವರ್ಷದ ಅಂತ್ಯದೊಳಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಸದ್ಯದಲ್ಲಿಯೇ ಈ ಕುರಿತು ಅಧಿಕೃತ ಅಪ್‌ಡೇಟ್ ಕೂಡ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಮದುವೆ ಅದೆಷ್ಟರ ಮಟ್ಟಿಗೆ ನಿಜಾ ಎಂದು ಈ ಜೋಡಿಯೇ ತಿಳಿಸಬೇಕಿದೆ.

    ಇನ್ನೂ ಎಲ್ಲರ ಮದುವೆಯಾಯ್ತು ಮುಂದಿನ ಮದುವೆ ಜೋಡಿ ನೀವೇ.. ಬೇಗ ಮದುವೆಯ ಗುಡ್ ನ್ಯೂಸ್ ಕೊಡಿ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡ್ತಿದ್ದಾರೆ.