Tag: Krithi Shetty

  • ‘ಡ್ರ್ಯಾಗನ್’ ಹೀರೋಗೆ ಜೊತೆಯಾದ ಕೃತಿ ಶೆಟ್ಟಿ- ಸಿನಿಮಾ ಬಗ್ಗೆ ಹೊರಬಿತ್ತು ಬಿಗ್ ಅಪ್‌ಡೇಟ್

    ‘ಡ್ರ್ಯಾಗನ್’ ಹೀರೋಗೆ ಜೊತೆಯಾದ ಕೃತಿ ಶೆಟ್ಟಿ- ಸಿನಿಮಾ ಬಗ್ಗೆ ಹೊರಬಿತ್ತು ಬಿಗ್ ಅಪ್‌ಡೇಟ್

    ‘ಡ್ರ್ಯಾಗನ್’ ಖ್ಯಾತಿಯ ಪ್ರದೀಪ್ ರಂಗನಾಥನ್ ಜೊತೆ ಕೃತಿ ಶೆಟ್ಟಿ (Krithi Shetty) ರೊಮ್ಯಾನ್ಸ್ ಮಾಡಿದ್ದಾರೆ. ಈ ಸಿನಿಮಾ ರಿಲೀಸ್ ಆಗೋದು ಯಾವಾಗ ಎಂಬ ಪ್ರೇಕ್ಷಕರ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಈ ವರ್ಷ ಸೆಪ್ಟೆಂಬರ್ 18ಕ್ಕೆ ರಿಲೀಸ್ ಮಾಡೋದಾಗಿ ಚಿತ್ರತಂಡ ಬಿಗ್ ಅಪ್‌ಡೇಟ್ ಹಂಚಿಕೊಂಡಿದೆ. ಇದನ್ನೂ ಓದಿ:ಶಾರುಖ್ ಖಾನ್ ‘ಕಿಂಗ್’ ಸಿನಿಮಾದಲ್ಲಿ ಅನಿಲ್ ಕಪೂರ್

    ಕೃತಿ ಶೆಟ್ಟಿ ಸಾಲು ಸಾಲು ಸೋಲುಗಳನ್ನೇ ಕಂಡಿರುವ ನಟಿ. ಇದೀಗ ವಿಘ್ನೇಶ್ ಶಿವನ್ ನಿರ್ದೇಶನದ ‘ಲವ್ ಇನ್ಶೂರೆನ್ಸ್ ಕಂಪನಿ’ (Love Insurance Kompany) ಚಿತ್ರದ ಮೂಲಕ ಕುಡ್ಲದ ನಟಿ ಕೃತಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ನಯನತಾರಾ (Nayanthara) ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಪ್ರದೀಪ್ ಮತ್ತು ಕೃತಿ ಜೋಡಿಯ ಮೂಲಕ ವಿಭಿನ್ನ ಪ್ರೇಮಕಥೆಯನ್ನು ಹೇಳಲು ರೆಡಿಯಾಗಿದ್ದಾರೆ.

     

    View this post on Instagram

     

    A post shared by Seven Screen Studio (@7_screenstudio)

    ಸ್ಕ್ರಿಪ್ಟ್ ಕೆಲಸ, ವರ್ಕ್ ಶಾರ್ಪ್ ಅಂತ ತೆರೆಮರೆಯಲ್ಲಿ ಸಾಕಷ್ಟು ತಯಾರಿ ಮಾಡಿಕೊಂಡೇ ಈ ಚಿತ್ರವನ್ನು ವಿಘ್ನೇಶ್ ಶಿವನ್ ಕಂಪ್ಲೀಟ್ ಮಾಡಿದ್ದಾರೆ. ಹೀಗಾಗಿ ಕಾರಣಾಂತರಗಳಿಂದ ರಿಲೀಸ್‌ಗೆ ತಡವಾಗಿತ್ತು. ಈಗ ‘ಲವ್ ಇನ್ಶೂರೆನ್ಸ್ ಕಂಪನಿ’ ಸೆ.18ರಂದು ರಿಲೀಸ್‌ಗೆ ಸಜ್ಜಾಗಿದೆ. ಇದನ್ನೂ ಓದಿ:‘ಕಾಂತಾರ ಚಾಪ್ಟರ್ 1’ರಲ್ಲಿ ನಿನ್ನ ಪಾತ್ರ ಎಂದೆಂದಿಗೂ ಶಾಶ್ವತ: ರಾಕೇಶ್ ನಿಧನಕ್ಕೆ ರಿಷಬ್ ಶೆಟ್ಟಿ ಸಂತಾಪ

    ‌’ಡ್ರ್ಯಾಗನ್’ ಮೂಲಕ ಸಕ್ಸಸ್ ಕಂಡಿರುವ ಪ್ರದೀಪ್‌ಗೆ ಕೃತಿ ಜೊತೆಯಾಗಿರೋದ್ರಿಂದ ಈ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಹೊಸ ಜೋಡಿಯನ್ನು ಸಿನಿಮಾದಲ್ಲಿ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾಯ್ತಿದ್ದಾರೆ.

  • ಕೃತಿ ಶೆಟ್ಟಿಗೆ ಬಿಗ್ ಆಫರ್- ಬಾಲಿವುಡ್‌ನತ್ತ ‘ಉಪ್ಪೇನ’ ನಟಿ

    ಕೃತಿ ಶೆಟ್ಟಿಗೆ ಬಿಗ್ ಆಫರ್- ಬಾಲಿವುಡ್‌ನತ್ತ ‘ಉಪ್ಪೇನ’ ನಟಿ

    ಕುಡ್ಲದ ಸುಂದರಿ ಕೃತಿ ಶೆಟ್ಟಿ (Krithi Shetty) ತೆಲುಗು, ತಮಿಳು, ಮಲಯಾಳಂ ಬಳಿಕ ಬಾಲಿವುಡ್‌ನತ್ತ (Bollywood) ಮುಖ ಮಾಡಿದ್ದಾರೆ. ಸ್ಟಾರ್ ನಟ ವರುಣ್ ಧವನ್‌ಗೆ ಕೃತಿ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ‘ಉಪ್ಪೇನ’ (Uppena) ಸಿನಿಮಾ ಮೂಲಕ ಸಕ್ಸಸ್ ಕಂಡಿದ್ದ ನಟಿ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ವರುಣ್ ಧವನ್ (Varun Dhawan) ಹೊಸ ಚಿತ್ರದಲ್ಲಿ ಕೃತಿ ನಾಯಕಿ ಎಂಬ ಸುದ್ದಿ ಬಿಟೌನ್‌ನಲ್ಲಿ ಹರಿದಾಡುತ್ತಿದೆ. ಅದಕ್ಕೆ ಪೂರಕವೆಂಬಂತೆ ಮುಂಬೈನಲ್ಲಿ ನಟಿ ಕಾಣಿಸಿಕೊಂಡಿರೋದು ವರುಣ್ ಜೊತೆಗಿನ ಸಿನಿಮಾ ಸುದ್ದಿಗೆ ಪುಷ್ಠಿ ನೀಡಿದಂತೆ ಆಗಿದೆ.

    ಶ್ರೀಲೀಲಾ ಬದಲು ಕೃತಿಗೆ ಚಿತ್ರತಂಡ ಮಣೆ ಹಾಕಿದೆ ಎನ್ನಲಾಗಿದೆ. ಡೇವಿಡ್ ಧವನ್ ನಿರ್ದೇಶನದ ಸಿನಿಮಾಗೆ ಕೃತಿ ನಾಯಕಿನಾ? ಎಂಬ ಸುದ್ದಿ ಚಿತ್ರತಂಡದ ಕಡೆಯಿಂದ ಸ್ಪಷ್ಟನೆ ಸಿಗುವವರೆಗೂ ಕಾಯಬೇಕಿದೆ. ಇದನ್ನೂ ಓದಿ:ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಕಿತ್ತೆಸೆಯಬೇಕು- ಕಾಸ್ಟಿಂಗ್ ಕೌಚ್ ಬಗ್ಗೆ ಚೇತನ್ ಗರಂ

    ಇನ್ನೂ ‘ಉಪ್ಪೇನ’ ಬೆಡಗಿಗೆ ಹಿಂದಿ ಸಿನಿಮಾ ಹೊಸದಲ್ಲ. ಈ ಹಿಂದೆ ಹೃತಿಕ್ ರೋಷನ್ ನಟನೆಯ ‘ಸೂಪರ್ 30’ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿ ಕಾಣಿಸಿಕೊಂಡಿದ್ದರು. ಆದಾದ ನಂತರ ಪೂರ್ಣ ಪ್ರಮಾಣದ ನಾಯಕಿಯಾಗಿ ‘ಉಪ್ಪೇನ’ ಚಿತ್ರದಲ್ಲಿ ಕೃತಿ ಲಾಂಚ್ ಆದರು.

  • ನನ್ನ ಸೋಲಿಗಾಗಿ ಒಂದು ವರ್ಗ ಕಾಯುತ್ತಿದೆ: ಕೃತಿ ಶೆಟ್ಟಿ

    ನನ್ನ ಸೋಲಿಗಾಗಿ ಒಂದು ವರ್ಗ ಕಾಯುತ್ತಿದೆ: ಕೃತಿ ಶೆಟ್ಟಿ

    ಮಂಗಳೂರಿನ ಬೆಡಗಿ ಕೃತಿ ಶೆಟ್ಟಿ (Krithi Shetty) ಸೌತ್ ಸಿನಿಮಾಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಈ ನಡುವೆ ನಟಿ ನೀಡಿರುವ ಹೇಳಿಕೆಯೊಂದು ಭಾರೀ ಸದ್ದು ಮಾಡುತ್ತಿದೆ. ನನ್ನ ಸಿನಿಮಾಗಳು ಸೋಲಬೇಕೆಂದು ಅನೇಕರು ಕಾಯುತ್ತಿದ್ದಾರೆ ಎಂದು ಸಂದರ್ಶನವೊಂದರಲ್ಲಿ ನಟಿ ಮಾತನಾಡಿದ್ದಾರೆ.

    ಕೃತಿ ಶೆಟ್ಟಿ ಮಾತನಾಡಿ, ನಾನು ನಟಿಸಿದ ಮೊದಲ ಸಿನಿಮಾ ‘ಉಪ್ಪೇನ’ (Uppena) ಸೂಪರ್ ಹಿಟ್ ಆಯಿತು. ಆದರೆ ಕೆಲವರು ನಾನು ಸೋಲುತ್ತೇನೆ ಎಂದು ನಿರೀಕ್ಷಿಸಿದ್ದರು. ಮೊದಲ ಸಿನಿಮಾ ಫ್ಲಾಪ್ ಆಗಿದ್ದರೆ, ಒಂದು ವರ್ಗದ ಜನ ನನ್ನನ್ನು ತುಳಿಯಲು ಎದುರು ನೋಡುತ್ತಿದ್ದರು. ನಾನು ಗೆಲುವು ಮತ್ತು ಸೋಲನ್ನು ಸಮಾನವಾಗಿ ಸ್ವೀಕರಿಸುತ್ತೇನೆ. ನನ್ನ ಮೊದಲ ಸಿನಿಮಾ ಯಶಸ್ವಿಯಾದಾಗ ಅದರ ಸಂಪೂರ್ಣ ಕ್ರೆಡಿಟ್ ಅನ್ನು ನಾನು ತೆಗೆದುಕೊಳ್ಳಲಿಲ್ಲ. ಅದೇ ರೀತಿ ಸಿನಿಮಾ ಫ್ಲಾಪ್ ಆದಾಗಲೂ ಅದರ ಕ್ರೆಡಿಟ್ ಅನ್ನು ನಾನು ತೆಗೆದುಕೊಳ್ಳುವುದಿಲ್ಲ ಎಂದು ಮಾತನಾಡಿದ್ದಾರೆ.

    ನನ್ನ ಕೆರಿಯರ್‌ನಲ್ಲಿ ಎಲ್ಲಿ ತಪ್ಪಾಯಿತು ಅನ್ನೋದನ್ನು ಅರಿತುಕೊಂಡಿದ್ದೇನೆ. ಗೆಲುವಿಗಿಂತ ಸೋಲಿನಿಂದಲೇ ಹೆಚ್ಚು ಪಾಠ ಕಲಿತಿದ್ದೇನೆ. ಸಿನಿಮಾ ಸೋಲು ಮತ್ತಷ್ಟು ನನ್ನನ್ನು ಗಟ್ಟಿಯಾಗಿ ನಿಲ್ಲುವಂತೆ ಮಾಡಿದೆ ಎಂದಿದ್ದಾರೆ. ನಟಿಯ ಸೋಲನ್ನು ನೋಡಲು ಯಾರು ಕಾಯ್ತಿದ್ದಾರೆ ಎಂಬುದನ್ನು ನಟಿ ಬಿಟ್ಟು ಕೊಟ್ಟಿಲ್ಲ. ಆದರೆ ಟೀಕೆ ಮಾಡುವವರಿಗೆ ಕೃತಿ ತಕ್ಕ ಉತ್ತರ ನೀಡಿದ್ದಾರೆ.

    ಅಂದಹಾಗೆ, ಮಲಯಾಳಂ (Malyalam) ಪ್ರಾಜೆಕ್ಟ್‌ವೊಂದರಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ನಯನತಾರಾ (Nayanathara) ನಿರ್ಮಾಣದ ತಮಿಳು ಸಿನಿಮಾದಲ್ಲಿ ಕೃತಿ ಶೆಟ್ಟಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಈ ಚಿತ್ರಕ್ಕೆ ವಿಘ್ನೇಶ್ ಶಿವನ್ ನಿರ್ದೇಶನ ಮಾಡಲಿದ್ದಾರೆ.

  • ಸತತ ಸಿನಿಮಾಗಳ ಸೋಲಿನ ಬೆನ್ನಲ್ಲೇ ಬಿಗ್ ಚಾನ್ಸ್ ಬಾಚಿಕೊಂಡ ಕೃತಿ ಶೆಟ್ಟಿ

    ಸತತ ಸಿನಿಮಾಗಳ ಸೋಲಿನ ಬೆನ್ನಲ್ಲೇ ಬಿಗ್ ಚಾನ್ಸ್ ಬಾಚಿಕೊಂಡ ಕೃತಿ ಶೆಟ್ಟಿ

    ಕುಡ್ಲದ ಬೆಡಗಿ ಕೃತಿ ಶೆಟ್ಟಿಗೆ (Krithi Shetty) ಸಾಲು ಸಾಲು ಸಿನಿಮಾಗಳು ಸೋಲು ಕಂಡರೂ ಅದೃಷ್ಟ ಅವರ ಕೈ ಹಿಡಿದಿದೆ. ಲೇಡಿ ಸೂಪರ್ ಸ್ಟಾರ್ ನಯನತಾರಾ ನಿರ್ಮಾಣದ ಸಿನಿಮಾದಲ್ಲಿ ನಟಿಸುವ ಚಾನ್ಸ್  ಕೃತಿ ಶೆಟ್ಟಿಗೆ ಸಿಕ್ಕಿದೆ.

    ಸತತ ಸಿನಿಮಾಗಳ ಸೋಲಿನ ನಡುವೆ ‘ಲವ್ ಇನ್ಶೂರೆನ್ಸ್ ಕಂಪನಿ’ (Love Insurance Kompany) ಎಂಬ ಚಿತ್ರಕ್ಕೆ ಕೃತಿ ಶೆಟ್ಟಿ ನಾಯಕಿಯಾಗಿದ್ದಾರೆ. ಸದ್ಯ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದ್ದು, ಕೃತಿ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ.

    ಕೃತಿ ಶೆಟ್ಟಿ ಜೊತೆ ಎಸ್ ಜೆ ಸೂರ್ಯ ಪ್ರದೀಪ್ ಮತ್ತು ಯೋಗಿ ಬಾಬು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ವಿಘ್ನೇಶ್ ಶಿವನ್ ನಿರ್ದೇಶನ ಮಾಡುತ್ತಿದ್ದು, ಖ್ಯಾತ ನಟಿ ನಯನತಾರಾ (Nayanathara) ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ.‌ ಇದನ್ನೂ ಓದಿ:ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ಮರುದಿನವೇ ತಾಯಿಯಾಗ್ತಿರುವ ಸುದ್ದಿ ಹಂಚಿಕೊಂಡ ರ‍್ಯಾಪರ್

    ನಯನತಾರಾ ದಂಪತಿಯ ಸಿನಿಮಾದಲ್ಲಿ ಕೃತಿ ನಟಿಸುತ್ತಿರುವ ಕಾರಣ, ಕುಡ್ಲದ ನಟಿಗೆ ಯಶಸ್ಸು ಸಿಗುತ್ತಾ? ಎಂದು ಕಾಯಬೇಕಿದೆ. ಈ ಸಿನಿಮಾದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

  • ರಶ್ಮಿಕಾ, ಶ್ರೀಲೀಲಾ ಅಬ್ಬರದ ನಡುವೆ ಕಾಣೆಯಾದ ಕೃತಿ ಶೆಟ್ಟಿ

    ರಶ್ಮಿಕಾ, ಶ್ರೀಲೀಲಾ ಅಬ್ಬರದ ನಡುವೆ ಕಾಣೆಯಾದ ಕೃತಿ ಶೆಟ್ಟಿ

    ಮಂಗಳೂರಿನ ಬೆಡಗಿ ಕೃತಿ ಶೆಟ್ಟಿಗೆ (Krithi Shetty) ಅದ್ಯಾಕೋ ಅದೃಷ್ಟ ಕೈ ಕೊಟ್ಟಂತಿದೆ. ‘ಉಪ್ಪೇನ’ ಸಿನಿಮಾ ರಿಲೀಸ್ ಬಳಿಕ ಡಿಮ್ಯಾಂಡ್‌ನಲ್ಲಿದ್ದ ನಟಿ ಈಗ ಸಕ್ಸಸ್ ರೇಸ್‌ನಲ್ಲಿ ಹಿಂದೆ ಬಿದ್ದಿದ್ದಾರೆ. ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾ ಹವಾ ನಡುವೆ ಕೃತಿ ಶೆಟ್ಟಿ ಮರೆಯಾಗ್ತಿದ್ದಾರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ.

    ಕೃತಿ ಶೆಟ್ಟಿ ಈಗ ಆಗೊಂದು ಈಗೊಂದು ಸಿನಿಮಾ ಮಾಡ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ‘ಮನಮೇಯ್’ ಎಂಬ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ತೆಲುಗಿನಲ್ಲಿ ಕೃತಿಗೆ ಆಫರ್ಸ್‌ ಕಮ್ಮಿಯಾಗ್ತಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಇದನ್ನೂ ಓದಿ:ಧನುಷ್ ನಟನೆಯ ‘ರಾಯನ್’ ರಿಲೀಸ್‌ಗೆ ಮುಹೂರ್ತ ಫಿಕ್ಸ್

    ‘ಉಪ್ಪೇನ’ ಸಿನಿಮಾ ಸಕ್ಸಸ್ ನಂತರ ಎಲ್ಲಾ ಸಿನಿಮಾಗಳನ್ನು ಒಪ್ಪಿಕೊಂಡರು. ಕಥೆಗೆ ಮಹತ್ವ ಕೊಡೋದ್ರಲ್ಲಿ ನಟಿ ಎಡವಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ. ಸದ್ಯ ಅವರ ಕೈಯಲ್ಲಿ ಯಾವುದೇ ತೆಲುಗಿನ ಸಿನಿಮಾಗಳು ಇಲ್ಲ ಎನ್ನಲಾಗಿದೆ. ಮಲಯಾಳಂ ಚಿತ್ರ ಬಿಟ್ಟರೇ ಬೇರೆ ಚಿತ್ರಗಳಿಲ್ಲ.

    ಇನ್ನೂ ರಶ್ಮಿಕಾ ಮಂದಣ್ಣ 6ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರವಿತೇಜ ಜೊತೆಗಿನ ಸಿನಿಮಾ, ಸೈಫ್ ಅಲಿ ಖಾನ್ ಪುತ್ರನ ಜೊತೆಗಿನ ಚಿತ್ರ ಸೇರಿದಂತೆ ಕೆಲವು ಪ್ರಾಜೆಕ್ಟ್‌ಗಳಿವೆ. ಹೀಗಿರುವಾಗ ರಶ್ಮಿಕಾ, ಶ್ರೀಲೀಲಾ (Sreeleela) ಅಬ್ಬರದ ನಡುವೆ ಕೃತಿ ಶೆಟ್ಟಿಗೆ ಬೇಡಿಕೆ ಕಮ್ಮಿಯಾಗಿದೆ. ಮತ್ತೆ ಹಳೆಯ ಚಾರ್ಮ್‌ಗೆ ನಟಿ ಬರುತ್ತಾರಾ? ಇತರೆ ನಟಿಯರಿಗೆ ಕೃತಿ ಪೈಪೋಟಿ ಕೊಡ್ತಾರಾ ಕಾದುನೋಡಬೇಕಿದೆ.

  • ನಾನು ರಿಲೇಷನ್‌ಶಿಪ್‌ನಲ್ಲಿದ್ದೇನೆ ಎಂದು ಪಡ್ಡೆಹುಡುಗರಿಗೆ ಶಾಕ್ ಕೊಟ್ಟ ಕೃತಿ ಶೆಟ್ಟಿ

    ನಾನು ರಿಲೇಷನ್‌ಶಿಪ್‌ನಲ್ಲಿದ್ದೇನೆ ಎಂದು ಪಡ್ಡೆಹುಡುಗರಿಗೆ ಶಾಕ್ ಕೊಟ್ಟ ಕೃತಿ ಶೆಟ್ಟಿ

    ಕುಡ್ಲದ ಬೆಡಗಿ ಕೃತಿ ಶೆಟ್ಟಿ (Kriti Shetty) ‘ಉಪ್ಪೇನಾ’ (Uppena) ನಂತರ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಈಗ ಸಕ್ಸಸ್‌ಗಾಗಿ ಎದುರು ನೋಡ್ತಿರುವ ಕೃತಿ  ‘ಮನಮೆ’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈಗ ಸಂದರ್ಶನವೊಂದರಲ್ಲಿ ನಾನು ರಿಲೇಷನ್‌ಶಿಪ್‌ನಲ್ಲಿದ್ದೇನೆ ಅಂತ ಪಡ್ಡೆಹುಡುಗರಿಗೆ ನಟಿ ಶಾಕ್ ಕೊಟ್ಟಿದ್ದಾರೆ. ಇದನ್ನೂ ಓದಿ:ಹೆಣ್ಣು ಮಗುವಿಗೆ ಜನ್ಮ ನೀಡಿದ ವರುಣ್ ಧವನ್ ಪತ್ನಿ ನತಾಶಾ

    ಶರ್ವಾನಂದ್‌ಗೆ ಜೋಡಿಯಾಗಿ ನಟಿಸಿರುವ ಕೃತಿ ಬ್ಯಾಕ್ ಟು ಬ್ಯಾಕ್ ಸಂದರ್ಶನಗಳನ್ನು ಕೊಡ್ತಿದ್ದಾರೆ. ಸಿನಿಮಾ ಮಾತ್ರವಲ್ಲ ವೈಯಕ್ತಿಕ ಬದುಕಿನ ಬಗ್ಗೆ ನಟಿ ಓಪನ್ ಆಗಿ ಮಾತನಾಡಿದ್ದಾರೆ. ಸಿಂಗಲ್ ಆಗಿದ್ದೀರಾ? ಅಥವಾ ರಿಲೇಷನ್‌ಶಿಪ್‌ನಲ್ಲಿದ್ದೀರಾ? ಎಂದು ನಿರೂಪಕಿ ಕಡೆಯಿಂದ ಬಂದ ಪ್ರಶ್ನೆಗೆ ಅಚ್ಚರಿಯ ಉತ್ತರ ನೀಡಿದ್ದಾರೆ ಕೃತಿ. ಇದನ್ನೂ ಓದಿ:ಪ್ರಶಾಂತ್‌ ನೀಲ್‌ ಬರ್ತ್‌ಡೇಗೆ ಪ್ರಭಾಸ್‌ ಲವ್ಲಿ ವಿಶ್

    ಸಿಂಗಲ್ ಅಲ್ಲ, ನಾನು ರಿಲೇಷನ್‌ಶಿಪ್‌ನಲ್ಲಿದ್ದೇನೆ ಎಂದು ನಟಿ ಉತ್ತರಿಸಿದ್ದರು. ಬಳಿಕ ಯಾರೊಂದಿಗೆ ಎಂಗೇಜ್ ಆಗಿದ್ದೀರಾ ಎಂದು ಕೇಳಲಾದ ಪ್ರಶ್ನೆಗೆ ನಗುತ್ತಾ ನಾನು ನನ್ನ ಕೆಲಸದ ಜೊತೆ ಎಂಗೇಜ್ ಆಗಿದ್ದೇನೆ ಎಂದು ಕೃತಿ ಶೆಟ್ಟಿ ಜಾಣ್ಮೆಯ ಉತ್ತರ ನೀಡಿದ್ದರು. ಒಂದು ಕ್ಷಣ ಕೃತಿ ಉತ್ತರ ಕೇಳಿ ಅಭಿಮಾನಿಗಳು ದಂಗಾದರು. ಆ ನಂತರ ಕೆಲಸದ ಜೊತೆ ಬ್ಯುಸಿ ಇದ್ದೇನೆ ಎಂಬ ಉತ್ತರ ಬಂದ್ಮೇಲೆ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

    ಅಂದಹಾಗೆ, ಮೊದಲ ಬಾರಿಗೆ ಶರ್ವಾನಂದ್‌ಗೆ ನಾಯಕಿಯಾಗಿ ಕೃತಿ ಶೆಟ್ಟಿ ನಟಿಸಿದ್ದಾರೆ. ಚಿತ್ರಕ್ಕೆ ಶ್ರೀರಾಮ್ ಆದಿತ್ಯಾ ನಿರ್ದೇಶನ ಮಾಡಲಿದ್ದಾರೆ. ಇದೇ ಜೂನ್ 7ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

  • ಸತತ ಸೋಲುಗಳ ನಂತರ ಮತ್ತೆ ಅದೃಷ್ಟ ಪರೀಕ್ಷೆಗಿಳಿದ ಕೃತಿ ಶೆಟ್ಟಿ

    ಸತತ ಸೋಲುಗಳ ನಂತರ ಮತ್ತೆ ಅದೃಷ್ಟ ಪರೀಕ್ಷೆಗಿಳಿದ ಕೃತಿ ಶೆಟ್ಟಿ

    ರಾವಳಿ ನಟಿ ಕೃತಿ ಶೆಟ್ಟಿ (Krithi Shetty) ಸತತ ಸೋಲುಗಳ ನಂತರ ಮತ್ತೆ ತೆಲುಗಿನ ಸಿನಿಮಾಗೆ ಮರಳಿದ್ದಾರೆ. ಒಂದೊಳ್ಳೆ ಕಥೆಯ ಮೂಲಕ ಮತ್ತೆ ತೆಲುಗು ಪ್ರೇಕ್ಷಕರ ಮನ ಗೆಲ್ಲಲು ನಟಿ ಕೃತಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

    ಉಪ್ಪೇನಾ, ಬಂಗಾರರಾಜು ಸಿನಿಮಾಗಳ ನಂತರ ನಟಿಸಿದ ಸಿನಿಮಾಗಳು ಚಿತ್ರಮಂದಿರದಲ್ಲಿ ಮಕಾಡೆ ಮಲಗಿತ್ತು. ಉಪ್ಪೇನಾ (Uppena Film) ಸಿನಿಮಾದ ಸಕ್ಸಸ್‌ನಿಂದ ರಾತ್ರೋ ರಾತ್ರಿ ಸ್ಟಾರ್ ನಟಿಯಾಗಿ ಮೆರೆದವರು ಕೃತಿ ಶೆಟ್ಟಿಗೆ ಇತ್ತೀಚಿನ ದಿನಗಳಲ್ಲಿ ಲಕ್ ಕೈ ಕೊಟ್ಟಿತ್ತು. ಹಾಗಾಗಿ ಮಲಯಾಳಂ ಪ್ರಾಜೆಕ್ಟ್‌ಗಳಲ್ಲಿ ನಟಿ ಬ್ಯುಸಿಯಾಗಿದ್ದರು. ಇದನ್ನೂ ಓದಿ:ಕಿಚ್ಚನ ಕುಟುಂಬದ ಜೊತೆ ಊಟ ಸವಿದ ವಿನಯ್ ಗೌಡ

    ‘ಮನಮೆ’ (Maname Film) ಸಿನಿಮಾದ ಮೂಲಕ ಶರ್ವಾನಂದ್‌ಗೆ (Sharwanand) ನಾಯಕಿಯಾಗಿ ಕೃತಿ ಮತ್ತೆ ಮೋಡಿ ಮಾಡಿದ್ದಾರೆ. ಸಿನಿಮಾದ ಟೀಸರ್ ಕೂಡ ರಿಲೀಸ್ ಆಗಿದ್ದು, ಇಬ್ಬರ ಪ್ರೇಮ ಕಹಾನಿ ಎಲ್ಲರ ಗಮನ ಸೆಳೆಯುತ್ತಿದೆ. ಟೀಸರ್ ಕೂಡ ಅದ್ಧೂರಿಯಾಗಿ ಮೂಡಿ ಬಂದಿದೆ. ಶರ್ವಾನಂದ್- ಕೃತಿ ನಟನೆಯ ಚಿತ್ರ ಸದ್ಯದಲ್ಲೇ ರಿಲೀಸ್ ಆಗಲಿದೆ.

    ಕೃತಿ ಶೆಟ್ಟಿ ಲುಕ್ ಮತ್ತು ನಟನೆಯ ಝಲಕ್ ಟೀಸರ್‌ನಲ್ಲಿ ನೋಡಿ ಅಭಿಮಾನಿಗಳಿಗೆ ‘ಮನಮೆ’ ಸಿನಿಮಾದ ಮೇಲೆ ಭರವಸೆ ಮೂಡಿದೆ. ಶ್ರೀಲೀಲಾ (Sreeleela) ಹವಾ ಕಮ್ಮಿಯಾದ್ಮೇಲೆ ಕೃತಿ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಮತ್ತೆ ಕರಾವಳಿ ಬ್ಯೂಟಿ ಗೆಲ್ತಾರಾ? ಕಾದುನೋಡಬೇಕಿದೆ.

  • ಪೂಜಾ ಹೆಗ್ಡೆ, ಶ್ರೀಲೀಲಾ, ಕೃತಿ ಶೆಟ್ಟಿಗೆ ಠಕ್ಕರ್ ಕೊಟ್ಟ ಮೃಣಾಲ್‌ಗೆ ಭಾರೀ ಬೇಡಿಕೆ

    ಪೂಜಾ ಹೆಗ್ಡೆ, ಶ್ರೀಲೀಲಾ, ಕೃತಿ ಶೆಟ್ಟಿಗೆ ಠಕ್ಕರ್ ಕೊಟ್ಟ ಮೃಣಾಲ್‌ಗೆ ಭಾರೀ ಬೇಡಿಕೆ

    ಬಾಲಿವುಡ್ ಬೆಡಗಿ ಮೃಣಾಲ್ ಠಾಕೂರ್‌ಗೆ (Mrunal Thakur) ಸದ್ಯ ಸೌತ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿರುವ ಸೀತಾರಾಮಂ ಸುಂದರಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ರೇಸ್‌ನಲ್ಲಿದ್ದ ಪೂಜಾ ಹೆಗ್ಡೆ, ಶ್ರೀಲೀಲಾ, ಕೃತಿ ಶೆಟ್ಟಿಗೆ ಠಕ್ಕರ್ ಕೊಟ್ಟು ಮೃಣಾಲ್ ಗೆದ್ದು ಬೀಗಿದ್ದಾರೆ.

    ಟಾಲಿವುಡ್‌ನಲ್ಲಿ ಬೇಡಿಕೆಯಲ್ಲಿದ್ದ ಪೂಜಾ ಹೆಗ್ಡೆ (Pooja Hegde), ಶ್ರೀಲೀಲಾ(Sreeleela), ಕೃತಿ ಶೆಟ್ಟಿಗೆ (Krithi Shetty) ಸೆಡ್ಡು ಹೊಡೆದು ಮೃಣಾಲ್ ಠಾಕೂರ್ ಭಾರೀ ಅವಕಾಶಗಳನ್ನು ಬಾಚಿಕೊಳ್ತಿದ್ದಾರೆ. ತೆಲುಗು ಭಾಷೆ ಬರಲ್ಲ. ಸಿನಿಮಾ ಮಾಡಲ್ಲ ಅಂತಿದ್ದ ಮುಂಬೈ ಬೆಡಗಿ ಮೃಣಾಲ್ ಕಥೆ ಆಯ್ಕೆಯಲ್ಲಿಯೇ ಗೆದ್ದಿದ್ದಾರೆ.

    ‘ಸೀತಾರಾಮಂ’, ಹಾಯ್ ನಾನಾ, ಫ್ಯಾಮಿಲಿ ಸ್ಟಾರ್ ಮೂರು ಚಿತ್ರಗಳು ಕಥೆ ವಿಚಾರದಲ್ಲಿ ಗೆದ್ದಿದೆ. ಮೃಣಾಲ್ ನಟನೆ ಮತ್ತು ಪಾತ್ರ ಜನರಿಗೆ ಮನಮುಟ್ಟಿದೆ. ಬ್ಯಾಕ್ ಟು ಬ್ಯಾಕ್ 3 ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿರುವ ಕಾರಣ ಹಿಂದಿ ಮತ್ತು ತೆಲುಗಿನಲ್ಲಿ ಬೇಡಿಕೆ ಹೆಚ್ಚಾಗಿದೆ. ಪ್ರತಿಷ್ಠಿತ ಸಂಸ್ಥೆಗಳಿಂದ ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ.

    ಬೇಡಿಕೆ ಹೆಚ್ಚಾಗುತ್ತಿದ್ದಂತೆ ಎರಡೂವರೆಯಿಂದ 3 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದ ನಟಿ ಈಗ 5 ಕೋಟಿ ರೂ.ಗೆ ಹೆಚ್ಚಿಸಿಕೊಂಡಿದ್ದಾರೆ. ಇದನ್ನೂ ಓದಿ:ಗುರುವಾರ ಶ್ರೀರಂಗಪಟ್ಟಣದಲ್ಲಿ ದ್ವಾರಕೀಶ್ ಅಸ್ಥಿ ವಿಸರ್ಜನೆ

    ‘ಪೂಜಾ ಮೇರಿ ಜಾನ್’ ಸೇರಿದಂತೆ ಹಲವು ಸಿನಿಮಾಗಳು ಮೃಣಾಲ್ ಕೈಯಲ್ಲಿವೆ. ಸಂಜಯ್ ಲೀಲಾ ಬನ್ಸಾಲಿ ಸಿನಿಮಾಗೂ ನಟಿ ಸೆಲೆಕ್ಟ್ ಆಗಿದ್ದಾರೆ ಎನ್ನಲಾಗಿದೆ. ತೆಲುಗಿನ ಸ್ಟಾರ್ ನಟರಿಗೆ ನಾಯಕಿಯಾಗಲು ನಟಿಗೆ ಬುಲಾವ್ ಬಂದಿದೆ. ಕಥೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡ್ತಿದ್ದಾರೆ ನಟಿ.

  • ಬೋಲ್ಡ್ ಪಾತ್ರ ಮಾಡೋಕೆ ರೆಡಿ: ನಿರ್ಮಾಪಕರಿಗೆ ಆಫರ್ ಕೊಟ್ಟ ಕೃತಿ ಶೆಟ್ಟಿ

    ಬೋಲ್ಡ್ ಪಾತ್ರ ಮಾಡೋಕೆ ರೆಡಿ: ನಿರ್ಮಾಪಕರಿಗೆ ಆಫರ್ ಕೊಟ್ಟ ಕೃತಿ ಶೆಟ್ಟಿ

    ಶಸ್ವಿನ ಅಲೆಯಲ್ಲಿ ತೇಲುತ್ತಿದ್ದ ಕರಾವಳಿ ಬೆಡಗಿ ಕೃತಿ ಶೆಟ್ಟಿ (Krithi Shetty), ಇದೀಗ ಸಾಲು ಸಾಲು ಸೋಲುಗಳನ್ನು ಕಂಡು ಗಾಬರಿ ಬಿದ್ದಿದ್ದಾರೆ. ಕೈತುಂಬಾ ಅವಕಾಶಗಳನ್ನು ಇಟ್ಟುಕೊಂಡು ತಿರುಗಾಡುತ್ತಿದ್ದವರು, ಈಗ ಅವಕಾಶಕ್ಕಾಗಿ ಕಾಯುತ್ತಿದ್ದಾರಂತೆ. ಈ ಹಿಂದೆ ಬಿಕಿನಿ ತೊಡಲ್ಲ, ಬೋಲ್ಡ್ ಆಗಿ ಕಾಣಿಸಿಕೊಳ್ಳುವುದಿಲ್ಲ ಎನ್ನುತ್ತಿದ್ದವರು. ಈಗ ಅದಕ್ಕೆ ರೆಡಿ ಎಂದು ನಿರ್ಮಾಪಕರಿಗೆ ಆಫರ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

    10ನೇ ವಯಸ್ಸಿಗೆ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದ ಕೃತಿ ಶೆಟ್ಟಿ, 17ನೇ ವಯಸ್ಸಿಗೆ ಹೃತಿಕ್ ರೋಷನ್ (Hrithik Roshan) ನಟನೆಯ ‘ಸೂಪರ್ 30’ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದ್ದರು. ಮೊದಲ ಚಿತ್ರ ‘ಉಪ್ಪೇನ’ ಮತ್ತು ‘ಬಂಗಾರ್‌ರಾಜು’ ಸಿನಿಮಾ ಗೆಲ್ತಿದ್ದಂತೆ ತಮ್ಮ ಸಂಭಾವನೆಯನ್ನ ಏರಿಸಿದ್ದರು. ಆ ನಂತರ ನಟಿಸಿದ ಕೆಲ ಚಿತ್ರಗಳು ಗೆಲ್ಲಾಪೆಟ್ಟಿಗೆ ಕಲೆಕ್ಷನ್ ಮಾಡೋದರಲ್ಲಿ ಸೋತಿತ್ತು.

    ತಮಿಳಿನ ಸಿನಿಮಾವೊಂದರಲ್ಲಿ (Tamil Film) ಕೃತಿ ಶೆಟ್ಟಿಗೆ ಬಿಕಿನಿ ತೊಡುವಂತೆ ಸಲಹೆ ನೀಡಿದ್ದಾಗ, ಹೆಚ್ಚನ ಸಂಭಾವನೆ ಕೇಳಿದ್ದರಂತೆ. ಕೃತಿ ಶೆಟ್ಟಿ ಈವರೆಗೂ ಬಿಕಿನಿ ತೊಟ್ಟಿಲ್ಲ. ಈ ಕಾರಣಕ್ಕೆ ಕೃತಿ ಬಿಕಿನಿ ತೊಟ್ಟರೆ, ಈ ಸಿನಿಮಾ ಮತ್ತಷ್ಟು ಬೂಸ್ಟ್ ಸಿಗುತ್ತೆ ಎಂದು ಚಿತ್ರತಂಡ ಲೆಕ್ಕಾಚಾರ ಹಾಕಿಕ್ಕೊಂಡಿತ್ತು. ಆದರೆ, ಅವರು ಬಿಕಿನಿ ಧರಿಸೋಕೆ ಭಾರೀ ಮೊತ್ತವನ್ನೇ ಕೇಳಿದ್ದರಂತೆ.

     

    ಬಿಕಿನಿ ಧರಿಸಲು ಓಕೆ ಎನ್ನುತ್ತಲೇ ಬಿಕಿನಿ ಧರಿಸೋಕೆ 5 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿತ್ತು. ಚಿತ್ರತಂಡ ಕೂಡ ಕೃತಿ ಮಾತಿಗೆ ಗ್ರೀನ್ ಸಿಗ್ನಲ್ ಕೊಟ್ಟು ಹಣ ನೀಡಿತ್ತು. 2 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ನಟಿ, 5 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದು ಅಚ್ಚರಿ ತಂದಿತ್ತು.

  • ಬಾಲಿವುಡ್‌ನಲ್ಲಿ ರಿಮೇಕ್ ಆಗಲಿದೆ ‘ಉಪ್ಪೇನಾ’ ಚಿತ್ರ- ನಾಯಕಿ ಯಾರು?

    ಬಾಲಿವುಡ್‌ನಲ್ಲಿ ರಿಮೇಕ್ ಆಗಲಿದೆ ‘ಉಪ್ಪೇನಾ’ ಚಿತ್ರ- ನಾಯಕಿ ಯಾರು?

    ತೆಲುಗಿನ ಸೂಪರ್ ಹಿಟ್ ‘ಉಪ್ಪೇನಾ’ (Uppena) ಸಿನಿಮಾ ಬಾಲಿವುಡ್‌ಗೆ (Bollywood) ರಿಮೇಕ್ ಮಾಡಲು ನಿರ್ಮಾಪಕ ಬೋನಿ ಕಪೂರ್ (Boney Kapoor) ನಿರ್ಧರಿಸಿದ್ದಾರೆ. ಕೃತಿ ಶೆಟ್ಟಿ-ವೈಷ್ಣವ್ ತೇಜ್ ನಟಿಸಿದ ಈ ಚಿತ್ರವನ್ನು ಹಿಂದಿ ವರ್ಷನ್‌ನಲ್ಲಿ ತೋರಿಸಲು ಯೋಚಿಸಿದ್ದಾರೆ. ನಾಯಕಿಯಾಗಿ ಕೃತಿ ಶೆಟ್ಟಿ (Krithi Shetty) ನಟಿಸಿದ್ದ ಪಾತ್ರಕ್ಕೆ ಸ್ಟಾರ್ ನಟಿಯ ಮಗಳನ್ನೇ ಆಯ್ಕೆ ಮಾಡಿದ್ದಾರೆ.

    ಬುಚ್ಚಿಬಾಬು ಸನಾ ಅವರು ‘ಉಪ್ಪೇನಾ’ (Uppena) ಸಿನಿಮಾ ನಿರ್ದೇಶನ ಮಾಡಿ ಗೆದ್ದು ಬೀಗಿದ್ದರು. ಈ ಚಿತ್ರದಿಂದ ಕೃತಿ ಶೆಟ್ಟಿಗೆ ಬಂಪರ್ ಅವಕಾಶಗಳು ಸಿಕ್ಕಿದ್ದವು. ಈ ಕಥೆಯನ್ನು ಪ್ರೇಕ್ಷಕರು ನೋಡಿ ಗೆಲ್ಲಿಸಿದ್ದರು. ದಕ್ಷಿಣದ ಚಿತ್ರಗಳೇ ಸಿನಿಮಾರಂಗದಲ್ಲಿ ಕ್ಲಿಕ್ ಆಗುತ್ತಿರೋ ಕಾರಣ, ಇದೇ ಸಿನಿಮಾವನ್ನು ರಿಮೇಕ್ ಮಾಡಲು ನಿರ್ಮಾಪಕ ಬೋನಿ ಕಪೂರ್ ಮನಸ್ಸು ಮಾಡಿದ್ದಾರೆ.

    ಬೋನಿ ಕಪೂರ್- ಶ್ರೀದೇವಿ ಅವರ 2ನೇ ಪುತ್ರಿ ಖುಷಿ ಕಪೂರ್ (Kushi Kapoor) ಅವರನ್ನು ನಾಯಕಿಯಾಗಿ ಫೈನಲ್ ಮಾಡಿದ್ದಾರೆ. ಅವರ ಸಲುವಾಗಿಯೇ ಈ ಚಿತ್ರವನ್ನು ಬೋನಿ ಕಪೂರ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸುದ್ದಿ ಕೇಳ್ತಿದ್ದಂತೆ ಬೋನಿ ಕಪೂರ್ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ನೆಪೋಟಿಸಂ ಎಂದು ನೆಟ್ಟಿಗರು ಕುಟುಕಿದ್ದಾರೆ. ಇದನ್ನೂ ಓದಿ:ಮೊದಲ ಸಿನಿಮಾದಲ್ಲಿ ‘ಯುವ’ಗೆ ಓಡೋ ಶಾಟ್ ಇಟ್ಟಿದ್ದೇಕೆ? ಸೀಕ್ರೆಟ್‌ ಬಿಚ್ಚಿಟ್ಟ ಡೈರೆಕ್ಟರ್

    ಟ್ರೋಲ್ (Troll) ಮಾಡಲು ಕಾರಣ ಕೂಡ ಇದೆ. ಉಪ್ಪೇನಾ ಸಿನಿಮಾದ ಕಥೆ ‘ಧಡಕ್’ ಚಿತ್ರದ ಕಥೆಯ ರೀತಿಯೇ ಇದೆ. ಈ ಚಿತ್ರ ಮರಾಠಿಯ ‘ಸೈರಾಟ್’ ಚಿತ್ರದ ರಿಮೇಕ್. ಉಪ್ಪೇನಾ ಕ್ಲೈಮಾಕ್ಸ್‌ನಲ್ಲಿ ಬರುವ ಕೆಲವು ದೃಶ್ಯಗಳನ್ನು ಹೊರತುಪಡಿಸಿ ಬಹುತೇಕ ಕಥೆ ಅದೇ ರೀತಿ ಇತ್ತು. ಈಗ ಹಿಂದಿಯಲ್ಲಿ ‘ ಉಪ್ಪೇನಾ’ ರಿಮೇಕ್ ಮಾಡಿದರೆ ಹಿಂದಿ ಪ್ರೇಕ್ಷಕರು ಮತ್ತೊಮ್ಮೆ ಅದೇ ಕಥೆಯನ್ನು ನೋಡಬೇಕಾ ಎಂದು ನೆಟ್ಟಿಗರು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಈ ಬಗ್ಗೆ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಬೋನಿ ಕಪೂರ್ ಮೊದಲ ಪುತ್ರಿ ಜಾನ್ವಿ ಕಪೂರ್ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜ್ಯೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಸಿನಿಮಾಗಳಿಗೆ ಹೀರೋಯಿನ್ ಆಗಿದ್ದಾರೆ. 2ನೇ ಪುತ್ರಿ ಖುಷಿ ಕಪೂರ್ ಕೂಡ ಚಿತ್ರರಂಗದಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ಳಬೇಕು ಎಂಬ ದೃಷ್ಟಿಯಿಂದ ಶ್ರೀದೇವಿ ಪತಿ ನಿರ್ಮಾಣಕ್ಕೆ ಸಾಥ್‌ ನೀಡುತ್ತಿದ್ದಾರೆ.