Tag: Kristina Moore

  • ಜೆರ್ಸಿ ದ್ವೀಪದಲ್ಲಿ ಭೀಕರ ಸ್ಫೋಟ – ಮೂವರು ಸಾವು, 12 ಮಂದಿ ನಾಪತ್ತೆ

    ಜೆರ್ಸಿ ದ್ವೀಪದಲ್ಲಿ ಭೀಕರ ಸ್ಫೋಟ – ಮೂವರು ಸಾವು, 12 ಮಂದಿ ನಾಪತ್ತೆ

    ಸೇಂಟ್ ಹೆಲಿಯರ್: ಜೆರ್ಸಿ ದ್ವೀಪದಲ್ಲಿರುವ (Jersey Island) ಅಪಾರ್ಟ್ಮೆಂಟ್‌ನಲ್ಲಿ ಸಂಭವಿಸಿದ ಭೀಕರ ಸ್ಫೋಟದಿಂದ ಮೂರು ಮಂದಿ ಸಾವನ್ನಪ್ಪಿದ್ದು, ಸುಮಾರು 12 ಮಂದಿ ನಾಪತ್ತೆಯಾಗಿದ್ದಾರೆ ಎಂದು ಜೆರ್ಸಿ ಸಿಎಂ ಕ್ರಿಸ್ಟಿನಾ ಮೂರೆ (Kristina Moore) ಹೇಳಿದ್ದಾರೆ.

    ಇಂದು ಬೆಳಗ್ಗಿನ ಜಾವ 4 ಗಂಟೆಗೆ ಪೊಲೀಸರಿಗೆ (Police) ಮಾಹಿತಿ ನೀಡಲಾಯಿತು. ನಂತರ ತುರ್ತು ಸೇವೆಗಳಿಗೆ ತಿಳಿಸಿ, ಉಳಿದವರನ್ನ ರಕ್ಷಣೆ ಮಾಡಲಾಯಿತು ಎಂದು ಜೆರ್ಸಿ ಪೊಲೀಸ್ (Jersey Police) ಮುಖ್ಯ ಅಧಿಕಾರಿ ರಾಬಿನ್ ಸ್ಮಿತ್ ತಿಳಿಸಿದ್ದಾರೆ. ಇದನ್ನೂ ಓದಿ: ಗರ್ಭಿಣಿ, ವೃದ್ಧನ ಮೇಲೆ ಕಾರು ಹರಿಸಿದ ಭಾರತೀಯ ಮೂಲದ ಚಾಲಕನಿಗೆ 16 ವರ್ಷ ಜೈಲು ಶಿಕ್ಷೆ

    ಸ್ಫೋಟದಿಂದ ಮೂರು ಅಂತಸ್ತಿನ ಕಟ್ಟಡ ಸಂಪೂರ್ಣ ಕುಸಿದಿದೆ. ಫ್ಲಾಟ್‌ನಲ್ಲಿದ್ದ 20 ರಿಂದ 30 ಮಂದಿಯನ್ನ ಸಮೀಪದ ಟೌನ್‌ಹಾಲ್‌ಗೆ ಸ್ಥಳಾಂತರಿಸಿ ಆಶ್ರಯ ನೀಡಲಾಗಿದೆ. ಇನ್ನೂ ನಾಪತ್ತೆಯಾದ 12 ಮಂದಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಅಲ್ಲದೇ ಘಟನೆಗೆ ನಿಖರ ಕಾರಣವನ್ನೂ ಪತ್ತೆಹಚ್ಚಲಾಗುತ್ತಿದೆ. ಘಟನೆಯ ಹಿಂದಿನ ರಾತ್ರಿಯೇ ಈ ಪ್ರದೇಶದಲ್ಲಿ ಅನಿಲ ಸೋರಿಕೆಯಾಗುತ್ತಿರುವ ವಾಸನೆ ಬರುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದರು ಎಂದು ರಾಬಿನ್ ಮಾಹಿತಿ ನೀಡಿದ್ದಾರೆ.

    ಜೆರ್ಸಿಯು ಫ್ರಾನ್ಸ್ನ ವಾಯುವ್ಯ ಕರಾವಳಿಯಲ್ಲಿರುವ ದ್ವೀಪ ಪ್ರದೇಶವಾಗಿದೆ. ಇದನ್ನೂ ಓದಿ: ಸರ್ಕಾರಿ ವ್ಯವಸ್ಥೆ ಸಾಂವಿಧಾನಿಕರಣಗೊಳಿಸಲು ಒತ್ತಾಯ – ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸಾಚಾರ

    Live Tv
    [brid partner=56869869 player=32851 video=960834 autoplay=true]