Tag: krishnappa

  • ನಿಖಿಲ್‍ಗೆ ಇಂದು ಡಬಲ್ ಸಂಭ್ರಮ – ಫೆ.10ಕ್ಕೆ ಜಾಗ್ವಾರ್‌ನ ನಿಶ್ಚಿತಾರ್ಥ

    ನಿಖಿಲ್‍ಗೆ ಇಂದು ಡಬಲ್ ಸಂಭ್ರಮ – ಫೆ.10ಕ್ಕೆ ಜಾಗ್ವಾರ್‌ನ ನಿಶ್ಚಿತಾರ್ಥ

    ಬೆಂಗಳೂರು: ಮಾಜಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಮದುವೆ ಸುದ್ದಿ ಈಗಾಗಲೇ ಎಲ್ಲರಿಗೂ ತಿಳಿದಿದೆ. ಇಂದು ನಿಖಿಲ್‍ಗೆ ಡಬಲ್ ಸಂಭ್ರಮದ ದಿನವಾಗಿದೆ. ಒಂದುಕಡೆ ತಮ್ಮ ನಾಲ್ಕನೇ ಸಿನಿಮಾದ ಮಹೂರ್ತ ಸಮಾರಂಭ ನೆರವೇರಿದೆ. ಮತ್ತೊಂದು ಕಡೆ ನಿಶ್ವಿತಾರ್ಥದ ದಿನ ಕೂಡ ಫಿಕ್ಸ್ ಆಗಿದೆ.

    ಹೌದು. ನಿಖಿಲ್ ಕುಮಾರಸ್ವಾಮಿ ಅವರ ನಾಲ್ಕನೇ ಸಿನಿಮಾದ ಮಹೂರ್ತ ಬಸವನಗುಡಿಯ ಕಾರಂಜಿ ಆಂಜನೇಯನ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಟಾಲಿವುಡ್‍ನ ವಿಜಯ್‍ಕುಮಾರ್ ಕೊಂಡ ನಿರ್ದೇಶನದಲ್ಲಿ ನಿಖಿಲ್ ಅಭಿನಯಿಸುತ್ತಿದ್ದು, ಲಹರಿ ಸಂಸ್ಥೆಯ ನಿರ್ಮಾಣದಲ್ಲಿ ಚಿತ್ರ ಮೂಡಿ ಬರುತ್ತಿದೆ. ಇನ್ನೂ ಹೆಸರಿಡದ ಚಿತ್ರದಲ್ಲಿ ನಿಖಿಲ್ ಜೊತೆ ಇಬ್ಬರು ನಾಯಕಿಯರು ಕಾಣಿಸಿಕೊಳ್ಳಲಿದ್ದಾರೆ.

    ಇತ್ತ ಇಂದು ನಿಖಿಲ್ ಮನೆಗೆ ರೇವತಿ ಕುಟುಂಬದವರು ಭೇಟಿ ನೀಡಿದ್ದಾರೆ. ಇತ್ತೀಚೆಗಷ್ಟೆ ರೇವತಿ ಮನೆಗೆ ನಿಖಿಲ್ ಕುಟುಂಬ ಭೇಟಿ ನೀಡಿ ಶಾಸ್ತ್ರ ಮುಗಿಸಿದ್ದರು. ಇವತ್ತು ನಿಖಿಲ್ ಮನೆಗೆ ಶಾಸಕ ಕೃಷ್ಣಪ್ಪ ಸೇರಿದಂತೆ ಕುಟುಂಬಸ್ಥರು ಭೇಟಿ ನೀಡಿ ಶಾಸ್ತ್ರವನ್ನು ಮುಗಿಸಿದ್ದಾರೆ. ಎರಡು ಕುಟುಂಬದವರು ಮಾತುಕತೆ ಮುಗಿಸಿ ಮುಂದಿನ ತಿಂಗಳು ಫೆಬ್ರುವರಿ 10ಕ್ಕೆ ನಿಖಿಲ್ ಮತ್ತು ರೇವತಿ ಅವರ ನಿಶ್ಚಿತಾರ್ಥವನ್ನು ನಿಗದಿ ಮಾಡಿದ್ದಾರೆ.

    ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಎರಡು ಕುಟುಂಬಗಳ ಆಪ್ತರು ಭಾಗಿಯಾಗಿದ್ದರು. ಫೆಬ್ರುವರಿ 10 ರಂದು ನಿಶ್ಚಿತಾರ್ಥ ನಡೆಯಲಿದೆ. ಉಳಿದಂತೆ ಮದುವೆ ಸಮಾರಂಭ ಏಪ್ರಿಲ್ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಹೇಳಿದರು.

     

    ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರ ಅಣ್ಣನ ಮೊಮ್ಮಗಳು ರೇವತಿ ಅವರನ್ನು ನಿಖಿಲ್ ವರಿಸಲಿದ್ದಾರೆ. ಹುಡುಗಿ ರೇವತಿ ಎಂಸಿಎ ಪದವೀಧರೆಯಾಗಿದ್ದಾರೆ. ಭಾನುವಾರ ಬೆಂಗಳೂರಿನ ಮಲ್ಲತಳ್ಳಿಯಲ್ಲಿರುವ ವಧುವಿನ ಮನೆಗೆ ದೇವೇಗೌಡರ ಕುಟುಂಬದವರು ಭೇಟಿ ನೀಡಿ ಹುಡುಗಿ ನೋಡುವ ಶಾಸ್ತ್ರವನ್ನು ಮುಗಿಸಿದ್ದರು. ದೇವೇಗೌಡರು, ಪತ್ನಿ ಚೆನ್ನಮ್ಮ, ಕುಮಾರಸ್ವಾಮಿ, ಅನಿತಾಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ದೇವೇಗೌಡರ ಪುತ್ರಿಯರಾದ ಅನುಸೂಯ, ಶೈಲಜಾ ವಧುವಿನ ಮನೆಗೆ ಭೇಟಿ ನೀಡಿ ಮದುವೆ ಮಾತುಕತೆ ಮುಗಿಸಿದ್ದರು.

  • ಬಿಜೆಪಿ ಕಾರ್ಪೋರೇಟರ್ ವರ್ಸಸ್ ಕಾಂಗ್ರೆಸ್ ಎಂಎಲ್‍ಎ

    ಬಿಜೆಪಿ ಕಾರ್ಪೋರೇಟರ್ ವರ್ಸಸ್ ಕಾಂಗ್ರೆಸ್ ಎಂಎಲ್‍ಎ

    -ಇಬ್ಬರ ಗಲಾಟೆಯಲ್ಲಿ ಅಭಿವೃದ್ಧಿ ಕೆಲಸಕ್ಕೆ ಫುಲ್ ಸ್ಟಾಪ್

    ಬೆಂಗಳೂರು: ಬಿಜೆಪಿ ಕಾರ್ಪೋರೇಟರ್ ಮತ್ತು ಕಾಂಗ್ರೆಸ್ ಎಂಎಲ್‍ಎ ಗಲಾಟೆಗೆ ಅಭಿವೃದ್ಧಿ ಕೆಲಸಗಳಿಗೆ ಫುಲ್ ಸ್ಟಾಪ್ ಬಿದ್ದಿದೆ. ವಿಜಯನಗರ ಹೊಸಹಳ್ಳಿ ಕಾರ್ಪೋರೇಟರ್ ಮಹಾಲಕ್ಷ್ಮಿ ಮತ್ತು ಕಾಂಗ್ರೆಸ್ ಶಾಸಕ ಕೃಷ್ಣಪ್ಪರ ಬೆಂಬಲಿಗರ ನಡುವೆ ಶೀತಲ ಸಮರ ಆರಂಭವಾಗಿದೆ.

    ಕಾರ್ಪೋರೇಟರ್ ಮಹಾಲಕ್ಷ್ಮಿ ಶನಿವಾರ ವಾರ್ಡ್ ಕಚೇರಿ ಮತ್ತು ಬೆಂಗಳೂರು ಒನ್ ಕಚೇರಿ ತೆರೆಯೋದಕ್ಕೆ ಹೊಸಹಳ್ಳಿ ಗ್ರೌಂಡ್‍ನಲ್ಲಿ ಗುದ್ದಲಿ ಪೂಜೆ ನಡೆಸಿದರು. ಆದರೆ ಕಾಮಗಾರಿ ನಡೆಯದಂತೆ ಶಾಸಕ ಕೃಷ್ಣಪ್ಪ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದಾರೆ.

    ಈ ಆವರಣದಲ್ಲಿ ಮೊದಲು ರಂಗಮಂದಿರವಿತ್ತು. ಅದನ್ನು ಅನೇಕ ವರ್ಷಗಳ ಹಿಂದೆ ಕೆಡವಲಾಗಿದೆ. ಅದನ್ನು ಕಟ್ಟಿ, ವಾರ್ಡ್ ಕಚೇರಿ ಈಗಾಗಲೇ ಒಂದಿದೆ ಅನ್ನೋದು ಕಾಂಗ್ರೆಸ್ ಶಾಸಕ ಕೃಷ್ಣಪ್ಪ ಬೆಂಬಲಿಗರ ವಾದ. ಕೃಷ್ಣಪ್ಪ ಬೆಂಬಲಿಗರ ವರ್ತನೆಗೆ ವಿರೋಧ ವ್ಯಕ್ತಪಡಿಸಿದ ಮಹಾಲಕ್ಷ್ಮಿ ತಮ್ಮ ತಂದೆ ರವೀಂದ್ರ ಜೊತೆಗೂಡಿ ಪ್ರತಿಭಟನೆ ನಡೆಸಿದರು. ಈ ವೇಳೆ ಕೃಷ್ಣಪ್ಪ ಬೆಂಬಲಿಗರು ಹಾಗೂ ಕಾರ್ಪೋರೇಟರ್ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದೆ.

    ಹೊಸಹಳ್ಳಿ ವಾರ್ಡ್ ನಿಂದ ಕಾರ್ಪೋರೇಟರ್ ಅಂತಾ ಆಯ್ಕೆಯಾಗಿ ಮೂರು ವರ್ಷಗಳಾಗಿದೆ. ನನ್ನ ವಾರ್ಡ್ ನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ನಡೆಸದಂತೆ ಶಾಸಕ ಕೃಷ್ಣಪ್ಪ ಮತ್ತು ಬೆಂಬಲಿಗರು ತೊಂದರೆ ಕೊಡುತ್ತಿದ್ದಾರೆ. ಯಾವುದೇ ಒಳ್ಳೆಯ ಕೆಲಸಗಳನ್ನು ಮಾಡಲು ಬಿಡುತ್ತಲೇ ಇಲ್ಲ. ಕಾಂಗ್ರೆಸ್ ಮುಖಂಡರು ಎಂದು ಹೇಳುವ ಕೆಲವರು ಪದೇ ಪದೇ ನನ್ನನ್ನು ನಿಂದಿಸುತ್ತಿದ್ದಾರೆ. ಆದ್ರೆ ವಾರ್ಡ್ ಜನರು ನನಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ನಾನೊಬ್ಬಳು ಹೆಣ್ಣು ಮಗಳು ನನ್ನ ಹಿಂದೆ ಯಾರು ಇಲ್ಲ ಅಂತಾ ಕಿರುಕುಳ ನೀಡುತ್ತಿದ್ದಾರೆ. ವಾರ್ಡ್ ಕಚೇರಿಗಾಗಿ ಈಗಾಗಲೇ 30 ಲಕ್ಷ ರೂ. ಅನುದಾನ ನೀಡಲಾಗಿದೆ. ನಾವು ಯಾವುದೇ ಕೆಲಸಗಳನ್ನು ಮಾಡುವುದು ಅವರಿಗೆ ಇಷ್ಟವಿಲ್ಲ. ನನ್ನನ್ನು ಯಾವ ರೀತಿಯಲ್ಲಿ ತುಳಿಯಲು ಸಾಧ್ಯವಾಗುತ್ತೋ ಅಷ್ಟೆಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಾರ್ಪೋರೇಟರ್ ಮಹಾಲಕ್ಷ್ಮಿ ಆರೋಪಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶತಮಾನದ ಶಾಲೆಗೆ ಹೊಸರೂಪ, ಸಾಧಕರ ಕಲಾಕೃತಿ ಜೊತೆ ಪಾಠ ಮಾಡೋ ಹಾವೇರಿಯ ಕೃಷ್ಣಪ್ಪ

    ಶತಮಾನದ ಶಾಲೆಗೆ ಹೊಸರೂಪ, ಸಾಧಕರ ಕಲಾಕೃತಿ ಜೊತೆ ಪಾಠ ಮಾಡೋ ಹಾವೇರಿಯ ಕೃಷ್ಣಪ್ಪ

    ಹಾವೇರಿ: ಸರ್ಕಾರಿ ಶಾಲೆ ಅಂದ್ರೆ ಮೂಗುಮರಿಯೋ ಜನರೇ ಹೆಚ್ಚು. ಆದ್ರೆ ಇಂಥ ಮಾತನ್ನ ಸುಳ್ಳು ಮಾಡಿರೋ ಹಲವು ಶಾಲೆಗಳು, ಶಿಕ್ಷಕರ ಬಗ್ಗೆ ಪಬ್ಲಿಕ್ ಹೀರೋ ಕಾರ್ಯಕ್ರಮದಲ್ಲಿ ತೋರಿಸಿದ್ದೀವಿ. ಇವತ್ತು ಅಂಥದ್ದೇ ಸ್ಟೋರಿ. ಮಕ್ಕಳನ್ನ ಸೆಳೆಯೋಕೆ, ಅವರಲ್ಲಿ ಹೆಚ್ಚಿನ ಜ್ಞಾನ ತುಂಬೋಕೆ ಹಾವೇರಿಯ ರಾಣೇಬೆನ್ನೂರಿನ ಅರೇಮಲ್ಲಾಪುರ ಗ್ರಾಮದ ಶಿಕ್ಷಕ ಕಾರ್ಯ ಶ್ಲಾಘನೀಯ.

    ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಈ ರೀತಿ ನಿರ್ಮಾಣಗೊಂಡಿರುವ ಸುಂದರ ಕಲಾಕೃತಿಗಳು ಮತ್ತು ಅದನ್ನ ತೋರಿಸಿ ಪಾಠ ಮಾಡುತ್ತಿರುವ ಶಿಕ್ಷಕ ಕೃಷ್ಣಪ್ಪ ದುರ್ಗದ ಅವರೇ ಇವತ್ತಿನ ನಮ್ಮ ಪಬ್ಲಿಕ್ ಹೀರೋ

    1904ರಲ್ಲಿ ಪ್ರಾರಂಭವಾದ ಶಾಲೆ ಶತಮಾನೋತ್ಸ ಕಂಡಿದೆ. ಆದ್ರೆ ಎಲ್ಲಾ ಶಾಲೆಗಳಂತಿದ್ದ ಈ ಶಾಲೆಗೆ ನಾಲ್ಕು ವರ್ಷದಿಂದ ಶಿಕ್ಷಕ ಕೃಷ್ಣಪ್ಪ ದುರ್ಗದ ಅವರ ವಿಶೇಷ ಆಸಕ್ತಿಯಿಂದ ಹೊಸರೂಪ ಬಂದಿದೆ. ಶಾಲೆಯ ಆವರಣದಲ್ಲಿ ಹೋರಾಟಗಾರರು, ದಾರ್ಶನಿಕರು, ಸಾಹಿತಿಗಳು, ಮಹಾನ್ ವ್ಯಕ್ತಿಗಳ ಕಲಾಕೃತಿಯನ್ನ ಸಿಮೆಂಟ್‍ನಲ್ಲಿ ನಿರ್ಮಿಸಿದ್ದಾರೆ.

    ಅರೇಮಲ್ಲಾಪುರ ಶಾಲೆಯಲ್ಲಿ ಮೊದಲಿಗೆ ಮಕ್ಕಳ ಕೊರತೆ ಇತ್ತು. ಆದ್ರೆ ಶಾಲೆಗೆ ಹೊಸ ಮೆರುಗು ನೀಡಿದ್ದು, ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಇರೋದ್ರಿಂದ ಈಗ 400ಕ್ಕೆ ಏರಿದೆ. ಶಿಕ್ಷಕ ಕೃಷ್ಣಪ್ಪ ಕಾರ್ಯದ ಬಗ್ಗೆ ಗ್ರಾಮಸ್ಥರು ಕೊಂಡಾಡುತ್ತಾರೆ.

    ಇದಕ್ಕಾಗಿ ಶಿಕ್ಷಕ ಕೃಷ್ಣಪ್ಪ ಮೊದಲಿಗೆ ತಾವೇ ಖರ್ಚು ಮಾಡಿದ್ದು, ನಂತರ ಗ್ರಾಮದ ದಾನಿಗಳಿಂದ ನೆರವು ಸಿಕ್ಕಿದೆ. ಕೃಷ್ಣಪ್ಪ ಅವರ ಕಾರ್ಯಕ್ಕೆ ಶಾಲೆಯ ಶಿಕ್ಷಕ ವೃಂದ ಕೂಡ ಸಾಥ್ ನೀಡಿದೆ.