Tag: Krishnakumar

  • ವೈದ್ಯರು ಬದುಕುವುದು ಕಷ್ಟ ಎಂದಿದ್ದರೂ ಅಭಿಮಾನಿಗಳ ಹಾರೈಕೆಯಿಂದ ಗುಣವಾಗಿದ್ರು – ಮಗ ಕೃಷ್ಣಕುಮಾರ್

    ವೈದ್ಯರು ಬದುಕುವುದು ಕಷ್ಟ ಎಂದಿದ್ದರೂ ಅಭಿಮಾನಿಗಳ ಹಾರೈಕೆಯಿಂದ ಗುಣವಾಗಿದ್ರು – ಮಗ ಕೃಷ್ಣಕುಮಾರ್

    – ಅಭಿಮಾನಿಗಳೇ ನಮ್ಮ ಕುಟುಂಬ
    – ತಾಯಿಯ ಕೊನೆ ದಿನಗಳನ್ನು ಹೇಳಿಕೊಂಡ ಪುತ್ರ

    ಬೆಂಗಳೂರು: ಕನ್ನಡದ ಹಿರಿಯ ನಟಿ ಜಯಂತಿ ಅವರು ಇಂದು ನಿಧನರಾಗಿದ್ದು, ಈ ಕುರಿತು ಅವರ ಮಗ ಕೃಷ್ಣ ಕುಮಾರ್ ತಾಯಿಯ ಕೊನೆ ದಿನಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

    ಪುತ್ರ ಹೇಳಿದ್ದು ಏನು?
    ಬೆಳಗಿನ ಜಾವ ಸುಮಾರು 3-4 ಗಂಟೆಗೆ ಅವರು ನಿಧನರಾಗಿದ್ದಾರೆ. ನಾವು ಅವರನ್ನು 1 ಗಂಟೆಗೊಮ್ಮೆ ನೋಡಿಕೊಂಡು ಬರುತ್ತಿದ್ದೆವು. ಏಕೆಂದರೆ ಅವರಿಗೆ ರಾತ್ರಿ ಕಾಫಿ ಕುಡಿಯುವ ಅಭ್ಯಾಸ ಕೂಡ ಇತ್ತು. ಅದಕ್ಕೆ ಇವತ್ತು ಅದೇ ರೀತಿ ಅವರನ್ನು ನೋಡಲು ಹೋದಾಗ ಅವರು ಮಲಗಿದ್ದಾಗಲೇ ಸಾವನ್ನಪ್ಪಿರುವುದು ಗೊತ್ತಾಗಿದೆ. ಇದನ್ನೂ ಓದಿ: ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ ಕಲಾವಿದೆ ಜಯಂತಿ: ಗಣ್ಯರ ಸಂತಾಪ

    ಈ ಸಮಯದಲ್ಲಿ ನಾನು ಊರಿನಲ್ಲಿ ಇರಲಿಲ್ಲ. ಸುದ್ದಿ ತಿಳಿದ ಕೂಡಲೇ ನಾನು ಇಲ್ಲಿಗೆ ಬಂದಿದ್ದೇನೆ. ಅವರು ಕಾಯಿಲೆಯಿಂದ ಏನು ಬಳಲುತ್ತಿರಲಿಲ್ಲ. ಕಳೆದ ವರ್ಷ ನಿಮಗೆಲ್ಲ ತಿಳಿದಿರುವಂತೆ 40 ದಿನ ಆಸ್ಪತ್ರೆಯಲ್ಲಿದ್ದರು. ಅದು ಅವರಿಗೆ ತುಂಬಾ ಕಷ್ಟದ ದಿನಗಳು. ಡಾಕ್ಟರ್‍ಗಳು ಕೂಡ ಅವರು ಬದುಕುವುದು ಕಷ್ಟ ಎಂದಿದ್ದರು. ಅದರೂ ಸಹ ಅವರ ಸುಧಾರಿಸಿಕೊಂಡು ಮನೆಗೆ ಬಂದಿದ್ದರು.

    ಡಾಕ್ಟರ್‍ಗಳು ಅವರು ಜೀವನಪೂರ್ತಿ ಆಕ್ಸಿಜನ್ ನೇರವಿನಿಂದಲೇ ಉಸಿರಾಡಬೇಕು ಎಂದಿದ್ದರು. ಆದರೆ ಅವರು 1 ತಿಂಗಳಲ್ಲೇ ಸಹಜವಾಗಿಯೇ ಉಸಿರು ತೆಗೆದುಕೊಳ್ಳುತ್ತಿದ್ದರು. ಅವರು 3-4 ವರ್ಷದಿಂದ ಆರೋಗ್ಯ ವಿಚಾರವಾಗಿ ತುಂಬಾ ಕಷ್ಟಪಡುತ್ತಿದ್ದರು. ಆದರೆ ಕೊನೆಗೆ ಇಂದು ಕೊನೆಯುಸಿರೆಳೆದಿದ್ದಾರೆ.

    ಒಂದು ಖುಷಿ ವಿಚಾರವೆಂದರೆ ಅವರು ಹೆಚ್ಚು ಕಷ್ಟ ಪಡಲಿಲ್ಲ. ಮನೆಯಲ್ಲೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಅವರು ನರಳಾಡಿ ಸಾವನ್ನಪ್ಪಿಲ್ಲವೆಂಬುವುದೇ ಒಂದು ಸಮಾಧಾನದ ವಿಚಾರ. ಪ್ರತಿಬಾರಿ ಆಸ್ಪತ್ರೆಗೆ ದಾಖಲಾಗಿದ್ದರೂ ಬರೀ ರಕ್ತ ಸಂಬಂಧಿಗಳಿಂದ ಮಾತ್ರವಲ್ಲ ಅಭಿಮಾನಿಗಳ ಮತ್ತು ಚಿತ್ರರಂಗದವರ ಹಾರೈಕೆಯಿಂದಲೇ ಅವರು ಚೇತರಿಸಿಕೊಂಡು ಮತ್ತೆ ಮನೆಗೆ ಬರುತ್ತಿದ್ದರು. ಆ ನಮ್ಮ ಕುಟುಂಬಕ್ಕೆ ನಾನು ಧನ್ಯವಾದವನ್ನು ತಿಳಿಸುತ್ತೇನೆ.

    ಅಭಿಮಾನಿಗಳಿಗೆ ಅವರ ಅಂತಿಮ ದರ್ಶನ ಪಡೆಯಲು ಅವಕಾಶವಿದೆಯಾ ಎಂಬುದಕ್ಕೆ ಉತ್ತರಿಸಿದ ಅವರು, ಅಂತಿಮ ಸಂಸ್ಕಾರದ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಅದನ್ನು ತಾರಾ ಮತ್ತೆ ಗಿರಿಜಮ್ಮ ಅವರು ನೋಡುತ್ತಾರೆ. ದರ್ಶನಕ್ಕೆ ಏರ್ಪಡು ಮಾಡಬೇಕು ಎಂದುಕೊಂಡಿದ್ದೇವೆ. ಆದರೆ ಈ ಕೊರೊನಾ ಸಮಯದಲ್ಲಿ ಅದು ಎಷ್ಟು ಸೂಕ್ತ ಎಂಬುದು ನಮಗೆ ತಿಳಿಯುತ್ತಿಲ್ಲ. ಇನ್ನೂ ಅದನ್ನು ಚರ್ಚೆ ಮಾಡಿ ತಿಳಿಸುತ್ತೇವೆ. ಏಕೆಂದರೆ ಯಾರಿಗೂ ಯಾವ ರೀತಿಯ ತೊಂದರೆಯಾಗಬಾರದು ಎಂದರು.

  • ಆಧುನಿಕ ಶ್ರವಣಕುಮಾರನಿಗೆ ಕಾರ್ ಗಿಫ್ಟ್ ಕೊಟ್ಟ ಆನಂದ್ ಮಹೀಂದ್ರಾ

    ಆಧುನಿಕ ಶ್ರವಣಕುಮಾರನಿಗೆ ಕಾರ್ ಗಿಫ್ಟ್ ಕೊಟ್ಟ ಆನಂದ್ ಮಹೀಂದ್ರಾ

    ಮೈಸೂರು: ತಾಯಿಯನ್ನು ತನ್ನ ಹಳೇ ಬೈಕಿನಲ್ಲೇ ದೇಶ ಪರ್ಯಟನೆ ಮಾಡಿಸಿದ್ದ ಶ್ರವಣಕುಮಾರನಿಗೆ ಮಹೀಂದ್ರಾ ಕಂಪನಿ ಓನರ್ ಆನಂದ್ ಮಹೀಂದ್ರಾ ಅವರು ಒಂದು ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.

    ಮೈಸೂರಿನ ಬೋಗಾದಿಯ ನಿವಾಸಿ ಕೃಷ್ಣಕುಮಾರ್ ತನ್ನ ಹೆತ್ತ ತಾಯಿಯನ್ನು ಬಜಾಜ್ ಸ್ಕೂಟರಿನಲ್ಲಿ ದೇಶ ಪರ್ಯಟನೆ ಮಾಡಿಸಿದ್ದರು. ಕೃಷ್ಣಕುಮಾರ್ ಬೇಲೂರು ಹಳೇಬೀಡನ್ನೂ ನೋಡದ ತಾಯಿಗೆ ದೇಶದ ಎಲ್ಲ ತೀರ್ಥ ಕ್ಷೇತ್ರಗಳಿಗೂ ಕರೆದುಕೊಂಡು ಹೋಗಿ ಅವರ ಇಚ್ಛೆಯನ್ನು ಪೂರೈಸಿದ್ದರು. ಮಗನ ಈ ಕಾರ್ಯಕ್ಕೆ ಆನಂದ್ ಮಹೀಂದ್ರಾ ಫಿದಾ ಆಗಿದ್ದರು.

    ಕೃಷ್ಣಕುಮಾರ್ ಅವರಿಗೆ ತನ್ನ ತಾಯಿ ಮೇಲೆ ಇರುವ ಪ್ರೀತಿಯನ್ನು ಮೆಚ್ಚಿಕೊಂಡಿದ್ದ ಆನಂದ್ ಮಹೀಂದ್ರಾ ಅವರು ಒಂದು ಕಾರನ್ನು ಗಿಫ್ಟ್ ಆಗಿ ನೀಡುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಅಂತಯೇ ಅವರು ಮೈಸೂರಿಗೆ ಬಂದ ಎರಡನೇ ದಿನದಲ್ಲಿ ಮೈಸೂರಿನ ಮಹೀಂದ್ರಾ ಶೋರೂಂಗೆ ಕರೆಸಿ ಕಾರು ನೀಡಲಾಗಿದೆ. ಮಹೀಂದ್ರಾ ಕೆಯುವಿ-100 ಕಾರನ್ನು ಕೃಷ್ಣಕುಮಾರ್ ಮತ್ತು ಅವರ ತಾಯಿಗೆ ಅಲ್ಲಿನ ಶೋರೂಂ ಸಿಬ್ಬಂದಿಗಳು ಗಿಫ್ಟ್ ಮಾಡಿದ್ದಾರೆ.

    40 ವರ್ಷ ವಯಸ್ಸಿನ ಕೃಷ್ಣಕುಮಾರ್ ಬೆಂಗಳೂರಿನ ಕಾರ್ಪೊರೇಟ್ ಸಂಸ್ಥೆಯೊಂದರ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಸುಮಾರು 5 ವರ್ಷಗಳ ಹಿಂದೆ ತಂದೆಯನ್ನ ಕಳೆದುಕೊಂಡ ಕೃಷ್ಣಕುಮಾರ್ ತಾಯಿಯ ಜವಾಬ್ದಾರಿ ಹೊತ್ತಿದ್ದರು. ಇವರು 70 ವರ್ಷದ ತಾಯಿಗೆ ದೇಶದ ತೀರ್ಥ ಕ್ಷೇತ್ರಗಳ ತೋರಿಸುವ ಸಂಕಲ್ಪ ಮಾಡಿದ್ದರು. ಅದರಂತೆಯೇ ಮಾತೃ ಸೇವಾ ಸಂಕಲ್ಪ ಯಾತ್ರೆ ಶುರು ಮಾಡಿದ್ದು, ತಂದೆ ಕೊಡಿಸಿದ ಬಜಾಜ್ ಸ್ಕೂಟರ್‍ನಲ್ಲೇ ತಾಯಿಯ ಜೊತೆ 2018ರ ಜನವರಿ 16ರಂದು ಯಾತ್ರೆ ಆರಂಭಿಸಿದ್ದರು.

    ಎರಡು 9 ತಿಂಗಳ ಕಾಲ ಯಾತ್ರೆ ನಡೆಸಿದ್ದಾರೆ. ಚಾಮುಂಡಿ ಬೆಟ್ಟದಿಂದ ಶುರುವಾದ ಯಾತ್ರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದಿದೆ. ಒಟ್ಟು 56,522 ಕಿಲೋಮೀಟರ್ ಪ್ರಯಾಣ ಮುಗಿಸಿದ ತಾಯಿ ಮಗ ಜೋಡಿ ಇಂದು ಮೈಸೂರಿಗೆ ವಾಪಸ್ ಬಂದಿದ್ದಾರೆ. ತಾಯಿ ಚೂಡಾರತ್ನ ಅವರಿಗೆ ಈಗ 70 ವರ್ಷ. 70ರ ಇಳಿ ವಯಸ್ಸಿನಲ್ಲಿ ಸ್ಕೂಟರಿನಲ್ಲಿ ಯಾತ್ರೆ ಕೈಗೊಳ್ಳುವುದು ಸುಲಭದ ಮಾತಲ್ಲ. ಆದರೆ ಮಗನ ಮೇಲೆ ಭರವಸೆ ಇಟ್ಟು ಯಾತ್ರೆ ಮಾಡಿ ದೇಶದ ಪ್ರತಿಯೊಂದು ಧಾರ್ಮಿಕ ಸ್ಥಳಗಳನ್ನೂ ನೋಡಿ ಬಂದಿದ್ದಾರೆ.