Tag: krishna temple

  • ಕೃಷ್ಣನ ದೇವಸ್ಥಾನ ಕಟ್ಟಿಸಿದ ಮುಸ್ಲಿಂ ಉದ್ಯಮಿ

    ಕೃಷ್ಣನ ದೇವಸ್ಥಾನ ಕಟ್ಟಿಸಿದ ಮುಸ್ಲಿಂ ಉದ್ಯಮಿ

    ರಾಂಚಿ: ಹಿಜಬ್, ಕೇಸರಿ ಶಾಲು ವಿವಾದ ಅಂತರಾಷ್ಟ್ರೀಯ ಪಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಹಿಂದೂ, ಮುಸ್ಲಿಂ ನಡುವೆ ಇರುವ ಬಾಂಧವ್ಯಕ್ಕೆ ಕುತ್ತು ತರುವಂತಾಗಿದೆ. ಆದರೆ ಜಾರ್ಖಂಡ್‍ನಲ್ಲಿ ಮುಸ್ಲಿಂ ಉದ್ಯಮಿಯೊಬ್ಬ ಕೃಷ್ಣ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದು, ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

    ಜಾರ್ಖಂಡ್‍ನ ದುಮ್ಕಾದ ಮಹೇಶ್‍ಬಥನ್ ಉದ್ಯಮಿ ನೌಶಾದ್ ಶೇಖ್ ಶ್ರೀಕೃಷ್ಣನಿಂದ ಪ್ರಭಾವಿತರಾಗಿ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ತಮ್ಮ ಸ್ವಂತ ಖರ್ಚಿನಿಂದ  ಸುಮಾರು 42 ಲಕ್ಷ ರೂ. ಖರ್ಚು ಮಾಡಿ ದೇವಸ್ಥಾನವೊಂದನ್ನು ಕಟ್ಟಿಸಿದ್ದಾರೆ. 3 ವರ್ಷಗಳಲ್ಲಿ ಈ 42 ಲಕ್ಷ ರೂ. ವೆಚ್ಚದ ಕೃಷ್ಣನ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ಮುಸ್ಲಿಂ ಉದ್ಯಮಿ ಕಟ್ಟಿಸಿದ ಈ ದೇವಸ್ಥಾನದಲ್ಲಿ ಹಿಂದೂ ಪದ್ಧತಿಯಂತೆ 150 ಬ್ರಾಹ್ಮಣರಿಂದ ಪ್ರಾಣ-ಪ್ರತಿಷ್ಠೆ ನೆರವೇರಿಸಲಾಯಿತು. ಇದನ್ನೂ ಓದಿ: ಇಂದು ಸಂಜೆಯಿಂದ ಲಘು ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈಓವರ್‌ ಮುಕ್ತ

    ಈ ಪ್ರದೇಶದಲ್ಲಿ ವಾಸಿಸುವ ಹೆಚ್ಚಿನ ಜನರು ಹಿಂದೂಗಳಾಗಿರುವುದರಿಂದ ಅವರಿಗಾಗಿ ಕೃಷ್ಣನ ದೇವಾಲಯವನ್ನು ನಿರ್ಮಿಸಲು ಶೇಖ್ ಯೋಚಿಸಿದರು. ಸೋಮವಾರ ದೇವಸ್ಥಾನದ ಪ್ರಾಣ-ಪ್ರತಿಷ್ಠೆ ನಡೆದಿದ್ದು, ಎಲ್ಲಾ ಸಮುದಾಯದ ಜನರು ಈ ದೇವಸ್ಥಾನಕ್ಕೆ ಆಗಮಿಸಿ, ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಕೃಷ್ಣ ಪರಮಾತ್ಮನೇ ನನ್ನ ಕನಸಿನಲ್ಲಿ ಬಂದು ತನಗಾಗಿ ದೇವಸ್ಥಾನವನ್ನು ನಿರ್ಮಿಸಲು ಪ್ರೇರೇಪಣೆ ನೀಡಿದ್ದಾನೆ ಎಂದು ಆ ಮುಸ್ಲಿಂ ಉದ್ಯಮಿ ಶೇಖ್ ತಿಳಿಸಿದ್ದಾರೆ. ದನ್ನೂ ಓದಿ:  ಸಚಿವ ಈಶ್ವರಪ್ಪ ನಿವಾಸಕ್ಕೆ ಯೂತ್ ಕಾಂಗ್ರೆಸ್ ಮುತ್ತಿಗೆ

    ಈ ಕುರಿತಾಗಿ ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ ಶೇಖ್, ಎಲ್ಲರಿಗೂ ದೇವರು ಒಬ್ಬನೇ. ದೇವಸ್ಥಾನ, ಮಸೀದಿ ಅಥವಾ ಚರ್ಚ್‍ನಲ್ಲಿ ಪೂಜಿಸುತ್ತಾರೆ. ನಾವು ಎಲ್ಲಿ ಪೂಜಿಸುತ್ತೇವೆ ಎಂಬುದು ಮುಖ್ಯವಲ್ಲ, ನಾವು ಎಷ್ಟು ಭಕ್ತಿಯನ್ನು ಹೊಂದಿದ್ದೇವೆ ಎಂಬುದು ಮುಖ್ಯವಾಗುತ್ತದೆ.

  • ಅಮೆರಿಕದಲ್ಲಿ ಮೊಳಗಿದ ಕೃಷ್ಣನಾದ: ನ್ಯೂಜೆರ್ಸಿಯ ಎಡಿಸನ್ ನಗರದಲ್ಲಿ ಶ್ರೀಕೃಷ್ಣನ ದೇವಸ್ಥಾನ ಸ್ಥಾಪನೆ

    ಅಮೆರಿಕದಲ್ಲಿ ಮೊಳಗಿದ ಕೃಷ್ಣನಾದ: ನ್ಯೂಜೆರ್ಸಿಯ ಎಡಿಸನ್ ನಗರದಲ್ಲಿ ಶ್ರೀಕೃಷ್ಣನ ದೇವಸ್ಥಾನ ಸ್ಥಾಪನೆ

    ಉಡುಪಿ: ದೂರದ ಅಮೆರಿಕದಲ್ಲಿ ಕೃಷ್ಣನಾದ ಮೊಳಗಿದೆ. ಡೋನಾಲ್ಡ್ ಟ್ರಂಪ್ ದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ಅವತಾರ ಪುರುಷನ ನಿತ್ಯ ದರುಶನ ಪಡೆಯಬೇಕೆಂಬ ಆಸೆ ನನಸಾಗಿದೆ.

    ಉಡುಪಿಯ ಪುತ್ತಿಗೆ ಮಠಾಧೀಶರು ನ್ಯೂಜೆರ್ಸಿಯ ಎಡಿಸನ್ ನಗರದಲ್ಲಿ ಶ್ರೀಕೃಷ್ಣನ ದೇವಸ್ಥಾನವನ್ನು ಸ್ಥಾಪಿಸಿದ್ದಾರೆ. ವಿಶೇಷ ಅಂದ್ರೆ 7 ಕೋಟಿ ರೂಪಾಯಿ ಕೊಟ್ಟು ಹಳೆಯ ಚರ್ಚ್ ಖರೀದಿಸಿ ಅದನ್ನು ಕೃಷ್ಣ ದೇವಸ್ಥಾನವನ್ನಾಗಿ ಪರಿವರ್ತಿಸಿದ್ದಾರೆ. ದೇಗುಲದಲ್ಲಿ ಸಾಲಿಗ್ರಾಮ ಕಲ್ಲಿನಿಂದ ಕೆತ್ತಲಾಗಿರುವ ಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಶ್ರೀಮುಖ್ಯಪ್ರಾಣ ದೇವರ ಗುಡಿ, ರಾಘವೇಂದ್ರ ಗುರುಸಾರ್ವಭೌಮರ ವೃಂದಾವನವೂ ಇದೆ.

    ತಜ್ಞ ಶಿಲ್ಪಿಗಳ ಸುಮಾರು ಒಂದು ವರ್ಷದ ಕೈಚಳಕದಲ್ಲಿ ವಿಶೇಷ ಕೆತ್ತನೆಗಳುಳ್ಳ ಭವ್ಯ ದೇಗುಲ ನಿರ್ಮಾಣವಾಗಿದೆ. ಭಾಗವತದಲ್ಲಿ ವರ್ಣಿಸಿದ ಕೃಷ್ಣನ ಲೀಲೆಗಳನ್ನು ಕೆತ್ತಲಾಗಿದ್ದು, ಬೇಲೂರು-ಹಳೇಬೀಡಿನಲ್ಲಿರುವ ದೇವಸ್ಥಾನದಂತೆ ಆಕರ್ಷಿಸುತ್ತಿದೆ. ಒಂದು ವಾರಗಳ ಬ್ರಹ್ಮ ಕಲಶೋತ್ಸವ ನಡೆಯುತ್ತಿದ್ದು ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರ ಮಾರ್ಗದರ್ಶನದಲ್ಲಿ ಧಾರ್ಮಿಕ ಪ್ರಕ್ರಿಯೆಗಳು ನಡೆಯುತ್ತಿವೆ.