Tag: krishna janmastami

  • ವಜ್ರಕವಚ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ಕೊಟ್ಟ ಉಡುಪಿ ಕೃಷ್ಣ

    ವಜ್ರಕವಚ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ಕೊಟ್ಟ ಉಡುಪಿ ಕೃಷ್ಣ

    ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಟಮಿಯ (Krishna Janmastami) ಹಿನ್ನೆಲೆಯಲ್ಲಿ ಮುಂಜಾನೆಯಿಂದ ಭಕ್ತರ ದಂಡು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಹರಿದು ಬರುತ್ತಿದೆ.

    ಕಳೆದ ರಾತ್ರಿ ಅರ್ಘ್ಯ ಪ್ರಧಾನದ ನಂತರ ಭಕ್ತರು ಉಪವಾಸ ತ್ಯಜಿಸಿದ್ದಾರೆ. ಇಂದು ಶ್ರೀ ಕೃಷ್ಣ ಲೀಲೋತ್ಸವ ನಡೆಯುತ್ತದೆ. ಉಡುಪಿ ಕೃಷ್ಣನಿಗೆ ವಜ್ರಕವಚದ ಅಲಂಕಾರ ಮಾಡಲಾಗಿದೆ. ದೇವರು ಹುಟ್ಟಿದ ಸಂಭ್ರಮದಲ್ಲಿ ಭಕ್ತ ಸಾಗರ ಮಿಂದೆದ್ದಿದೆ. ಇದನ್ನೂ ಓದಿ: ಉಡುಪಿಯಲ್ಲಿ ಧರೆಗಿಳಿದು ಬಂದ ಶ್ರೀಕೃಷ್ಣ- ರಾತ್ರಿ 11.42ಕ್ಕೆ ಅರ್ಘ್ಯ ಅರ್ಪಣೆ

     

    ಮುಂಜಾನೆ ಆರು ಗಂಟೆಯಿಂದ ಜನ ನಿರಂತರವಾಗಿ ದೇವರ ದರ್ಶನ ಮಾಡುತ್ತಿದ್ದಾರೆ. ಕೃಷ್ಣ ಮಠದ ಗರ್ಭಗುಡಿ, ಅಷ್ಟಮಠವನ್ನು ವಿಶೇಷ ಹೂವುಗಳಿಂದ ಸಿಂಗಾರ ಮಾಡಲಾಗಿದೆ. ರಾತ್ರಿ ಯತನಕ ನಿರಂತರವಾಗಿ ಭಕ್ತರಿಗೆ ದೇವರ ದರ್ಶನ ಮಾಡುವ ಅವಕಾಶ ಇದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉಡುಪಿಯಲ್ಲಿ ಧರೆಗಿಳಿದು ಬಂದ ಶ್ರೀಕೃಷ್ಣ- ರಾತ್ರಿ 11.42ಕ್ಕೆ ಅರ್ಘ್ಯ ಅರ್ಪಣೆ

    ಉಡುಪಿಯಲ್ಲಿ ಧರೆಗಿಳಿದು ಬಂದ ಶ್ರೀಕೃಷ್ಣ- ರಾತ್ರಿ 11.42ಕ್ಕೆ ಅರ್ಘ್ಯ ಅರ್ಪಣೆ

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ (Krishna Janmastami) ಸಡಗರ. ಅರ್ಘ್ಯ ಪ್ರಧಾನ ಎಂಬ ಧಾರ್ಮಿಕ ವಿಧಿಯ ಮೂಲಕ ಶ್ರೀಕೃಷ್ಣ ಪರಮಾತ್ಮನನ್ನು ಭೂಮಿಗೆ ಬರಮಾಡಿಕೊಳ್ಳಲಾಗಿದೆ. ಉಡುಪಿ ಕೃಷ್ಣ ಮಠದಲ್ಲಿ ರಾತ್ರಿ 11.42ಕ್ಕೆ ಅರ್ಘ್ಯ ಪ್ರಧಾನ ಮಾಡಲಾಯ್ತು. ಮಠದ ಗರ್ಭಗುಡಿಯಲ್ಲಿ ಅರ್ಘ್ಯ ಪ್ರಧಾನ ಮಾಡುವ ಮೂಲಕ ಶ್ರೀ ಕೃಷ್ಣನನ್ನು ಬರಮಾಡಿಕೊಳ್ಳುವ ಸಂಪ್ರದಾಯ ಕಳೆದ 800 ವರ್ಷದಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ.

    ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹಾಲು ಮತ್ತು ನೀರಿನಲ್ಲಿ ಶ್ರೀಕೃಷ್ಣನಿಗೆ ಅರ್ಘ್ಯ ನೀಡುವ ಮೂಲಕ ಶ್ರೀ ಕೃಷ್ಣನ ಜನನವಾಗುತ್ತದೆ ಎಂಬ ನಂಬಿಕೆ ಇದೆ. ಅಷ್ಟಮಠದ ಸ್ವಾಮೀಜಿಗಳು 8 ಮಠದ ಭಕ್ತರು ಕೃಷ್ಣಾಪುರ ಮಠಕ್ಕೆ ಸಂಬಂಧಪಟ್ಟ ಆಪ್ತ ವಲಯ, ಕೃಷ್ಣನ ಭಕ್ತರು ಅರ್ಘ್ಯ ಪ್ರಧಾನ ಕಾರ್ಯಕ್ರಮದಲ್ಲಿ ಭಕ್ತಿ ಭಾವದಿಂದ ಭಾಗಿಯಾಗಿದ್ದರು.

    ಗರ್ಭಗುಡಿಯಲ್ಲಿ ಅರ್ಘ್ಯ ಪ್ರಧಾನ ಕಾರ್ಯಕ್ರಮ ಮುಗಿದ ಮೇಲೆ ಮಠದ ಚಂದ್ರ ಶಾಲೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಚಂದ್ರನಿಗೆ ಹಾಲು ಮತ್ತು ನೀರನ್ನು ಅರ್ಪಿಸುವ ಮೂಲಕ ಶ್ರೀ ಕೃಷ್ಣನನ್ನು ಸ್ವಾಗತ ಮಾಡುವ ಸಂಪ್ರದಾಯವಿದೆ. ಭಕ್ತರ ಭಕ್ತಿಗೆ ಒಲಿದ ಭಗವಂತನಿಗೆ ಹಾಲು ಮತ್ತು ನೀರಿನ ಸ್ವಾಗತ ಬಹಳ ಪವಿತ್ರದ್ದು ಎಂಬ ನಂಬಿಕೆ ಇದೆ.

    ಇಂದು ಉಡುಪಿಯಲ್ಲಿ ಶ್ರೀ ಕೃಷ್ಣ ಲೀಲೋತ್ಸವ ನಡೆಯುತ್ತದೆ. ಅಷ್ಟಮಠಗಳ ರಥ ಬೀದಿಯಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣ ಅನಂತೇಶ್ವರ ಚಂದ್ರಮೌಳೇಶ್ವರ ದೇವರ ಉತ್ಸವ ನಡೆಯಲಿದೆ. ಸಾವಿರಾರು ಮಂದಿ ಭಕ್ತರು ಮಠಾಧೀಶರುಗಳು ನೂರಾರು ತರಹದ ವೇಷಗಳು ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸವಕ್ಕೆ ಮೆರುಗು ನೀಡಲಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. 40,000 ಚಕ್ಕುಲಿ ಒಂದು ಲಕ್ಷ ಉಂಡೆ ಸಿದ್ದವಾಗಿದೆ. ಕೃಷ್ಣನ ಲೀಲೋತ್ಸವ ಕಣ್ತುಂಬಿಕೊಳ್ಳಲು ಊರ ಪರವೂರ ಭಕ್ತರ ದಂಡು ಹರಿದುಬರಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಡಿನಾದ್ಯಂತ ಅಷ್ಟಮಿ ಆಚರಣೆ- ಉಡುಪಿ ಕೃಷ್ಣನಿಗೆ ಗೋಪಾಲಕೃಷ್ಣ ಅಲಂಕಾರ

    ನಾಡಿನಾದ್ಯಂತ ಅಷ್ಟಮಿ ಆಚರಣೆ- ಉಡುಪಿ ಕೃಷ್ಣನಿಗೆ ಗೋಪಾಲಕೃಷ್ಣ ಅಲಂಕಾರ

    ಉಡುಪಿ: ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯ ಆಚರಣೆ ನಡೆಯುತ್ತಿದೆ. ಕಡೆಗೋಲು ಶ್ರೀಕೃಷ್ಣನ ಊರು ಉಡುಪಿಯಲ್ಲಿ ಈ ಬಾರಿ ಅಷ್ಟಮಿ ಆಚರಣೆ ನಡೆದಿಲ್ಲ. ಉಡುಪಿ ಮಠದಲ್ಲಿ ಸೌರಮಾನ ಪದ್ಧತಿ ಆಚರಣೆ ಮಾಡುವುದರಿಂದ, ಮುಂದಿನ ತಿಂಗಳು ಶ್ರೀಕೃಷ್ಣಜನ್ಮಾಷ್ಟಮಿ ನಡೆಯಲಿದೆ. ದೇಶದಲ್ಲಿ ಆಚರಣೆ ಇರುವುದರಿಂದ ಉಡುಪಿ ಕಡೆಗೋಲು ಕೃಷ್ಣನಿಗೆ, ವಿಶೇಷ ಅಲಂಕಾರ ಮಾಡಲಾಗಿದೆ. ಗೋಪಾಲಕೃಷ್ಣ ನಾಗಿ ಕಡೆಗೋಲು ಕೃಷ್ಣ ದರ್ಶನ ಕೊಟ್ಟಿದ್ದಾನೆ.

    ಚಾಂದ್ರಮಾನ ಪದ್ಧತಿಯಲ್ಲಿ ಹಬ್ಬಗಳನ್ನು ಆಚರಿಸುವ ಸಮುದಾಯಗಳು ಉಡುಪಿಯಲ್ಲಿದೆ. ಅವರೆಲ್ಲಾ ಅಷ್ಟಮಿ ಆಚರಣೆಯನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿ ಕೃಷ್ಣಮಠದ ಕಡೆಗೋಲು ಶ್ರೀಕೃಷ್ಣನ ವಿಗ್ರಹಕ್ಕೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಗೋಪಾಲಕೃಷ್ಣನಾಗಿ ಕಡೆಗೋಲ ಕೃಷ್ಣ ಅವತಾರ ಎತ್ತಿದ್ದ. ಪರ್ಯಾಯ ಪೀಠಾಧೀಶ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಶ್ರೀಕೃಷ್ಣನಿಗೆ ವಿಶೇಷವಾದ ಅಲಂಕಾರವನ್ನು ನೆರವೇರಿಸಿದರು. ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು.

    ಕಾಡಿನಲ್ಲಿ ಗೋವನ್ನು ಮೇಯಿಸುವ ಶ್ರೀಕೃಷ್ಣನಾಗಿ ಉಡುಪಿ ಕಡೆಗೋಲು ಕೃಷ್ಣ ಇಂದು ಭಕ್ತರಿಗೆ ದರ್ಶನ ಕೊಡುತ್ತಿದ್ದಾನೆ. ಶ್ರೀಕೃಷ್ಣ, ಮುಖ್ಯಪ್ರಾಣ ದೇವರುಗಳು, ಗರುಡ ದೇವರಿಗೆ ಅಲಂಕಾರಗಳನ್ನು ಮಾಡಿ ಅದಮಾರು ಮಠ ಫೋಟೋಗಳನ್ನು ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 11ರಂದು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸವ ನಡೆಯಲಿದೆ. ಕೊರೊನಾ ಲಾಕ್‍ಡೌನ್ ನಂತರ ಉಡುಪಿ ಕೃಷ್ಣಮಠ ಭಕ್ತರಿಗೆ ತೆರೆದುಕೊಂಡಿಲ್ಲ. ಮುಂದಿನ ಪರಿಸ್ಥಿತಿಗಳನ್ನು ನೋಡಿ ಶ್ರೀಕೃಷ್ಣ ಮಠವನ್ನು ತೆರೆಯುವುದು, ನಿಯಮಾವಳಿಗಳನ್ನು ರೂಪಿಸುವ ಬಗ್ಗೆ ಪರ್ಯಾಯ ಅದಮಾರು ಮಠ ತೀರ್ಮಾನ ತೆಗೆದುಕೊಳ್ಳಲಿದೆ.

  • ಕೃಷ್ಣಜನ್ಮಾಷ್ಟಮಿ- ಆನ್‍ಲೈನ್‍ನಲ್ಲಿಯೇ ದೇವರ ದರ್ಶನ, ಆರಾಧನೆ

    ಕೃಷ್ಣಜನ್ಮಾಷ್ಟಮಿ- ಆನ್‍ಲೈನ್‍ನಲ್ಲಿಯೇ ದೇವರ ದರ್ಶನ, ಆರಾಧನೆ

    ಬೆಂಗಳೂರು: ನಾಳೆ ಕೃಷ್ಣಾಜನ್ಮಾಷ್ಟಮಿ ಹಬ್ಬವಾಗಿದ್ದು, ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ಆನ್ ಲೈನ್ ಮೂಲಕವೇ ದೇವರ ದರ್ಶನ ಹಾಗೂ ಕಷ್ಣನ ಆರಾಧನೆ ನಡೆಯಲಿದೆ.

    ಈ ಸಂಬಂಧ ಇಸ್ಕಾನ್ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ನರಹರಿ ಚೈತನ್ಯದಾಸ್ ಮಾತನಾಡಿ, ಕೊರೊನಾ ಭೀತಿಯಿಂದ ಇಸ್ಕಾನ್ ಸೇರಿದಂತೆ ಅನೇಕ ಕೃಷ್ಣನ ದೇಗುಲದಲ್ಲಿ ಆನ್‍ಲೈನ್‍ನಲ್ಲಿಯೇ ಪೂಜೆಗಳ ಲೈವ್ ದರ್ಶನ ಇರಲಿದೆ. ನಾಳೆ ದೇಗುಲಗಳು ಭಕ್ತರಿಂದ ತುಂಬಿ ತುಳುಕುವ ಸಾಧ್ಯತೆ ಇರುವುದರಿಂದ ಜನರಿಗೆ ಆನ್‍ಲೈನ್ ಪೂಜೆಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

    ಮಂಗಳವಾರ ಹಾಗೂ ಬುಧವಾರ ಕೃಷ್ಣಾಷ್ಟಮಿ ಪೂಜೆ ನಡೆಯಲಿದ್ದು, 20 ಗಂಟೆಗಳ ಕಾಲ ನಿರಂತರ ಆನ್‍ಲೈನ್‍ನಲ್ಲಿ ಪೂಜೆ ವೀಕ್ಷಿಸಬಹುದು. ತೆಪ್ಪೋತ್ಸವ, ಪಂಚಗವ್ಯ ಅಭಿಷೇಕ, ಉಯ್ಯಾಲೆ ಸೇವೆಯನ್ನು ಆನ್‍ಲೈನ್‍ನಲ್ಲಿ ವೀಕ್ಷಣೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

  • ಮುದ್ದು ಕೃಷ್ಣ ಆದ ಐರಾ

    ಮುದ್ದು ಕೃಷ್ಣ ಆದ ಐರಾ

    ಬೆಂಗಳೂರು: ಸ್ಯಾಂಡಲ್‍ವುಡ್ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ತಮ್ಮ ಮುದ್ದು ಮಗಳು ‘ಐರಾ’ಗೆ ಕೃಷ್ಣನ ಉಡುಪು ಹಾಕಿ ಫೋಟೋ ಕ್ಲಿಕ್ಕಿಸಿದ್ದಾರೆ.

    ನಟಿ ರಾಧಿಕಾ ಪಂಡಿತ್ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಕೃಷ್ಣ ಉಡುಪು ಧರಿಸಿರುವ ಐರಾಳ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಆ ಪೋಸ್ಟ್ ಗೆ, “ನಮ್ಮ ಪುಟ್ಟ ಕೃಷ್ಣ. ಜನ್ಮಾಷ್ಟಮಿಯ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

    ಇನ್‍ಸ್ಟಾಗ್ರಾಂನಲ್ಲಿ ರಾಧಿಕಾ ಅವರು ಒಟ್ಟು ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಐರಾ ಫ್ಲೈಯಿಂಗ್ ಕಿಸ್ ಕೊಡುತ್ತಿದ್ದಾಳೆ. ಐರಾಳ ಈ ಫೋಟೋ ನೋಡಿ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

     

    View this post on Instagram

     

    Our Lil Krishna ???? Happy Janmashtami!! #radhikapandit #nimmaRP PC: Sooraj Nitte

    A post shared by Radhika Pandit (@iamradhikapandit) on

    ಸ್ಯಾಂಡಲ್‍ವುಡ್ ಕೃಷ್ಣ ಎಂದೇ ಖ್ಯಾತರಾಗಿರುವ ಅಜಯ್ ರಾವ್ ಅವರು ತಮ್ಮ ಮಗಳು ಚರಿಷ್ಮಾಳಿಗೆ ಕೃಷ್ಣನ ಉಡುಪು ಹಾಕಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಹಬ್ಬದ ಪ್ರಯುಕ್ತ ನಟ ಅಜಯ್ ರಾವ್ ಹಾಗೂ ಅವರ ಪತ್ನಿ ಸ್ವಪ್ನ ಅವರು ತಮ್ಮ ಮಗಳು ಚರಿಷ್ಮಾಳಿಗೆ ಕೃಷ್ಣನ ಉಡುಪು ತೋಡಿಸಿ ಫೋಟೋ ಕ್ಲಿಕ್ಕಿಸಿದ್ದಾರೆ.

    ಅಜಯ್ ಹಾಗೂ ಸ್ವಪ್ನ ಅವರು ತಮ್ಮ ಚರಿಷ್ಮಾ ಕೃಷ್ಣನ ಉಡುಪಿನಲ್ಲಿ ಬೆಣ್ಣೆ ತಿನ್ನುತ್ತಿರುವ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಬಳಿಕ ತಮ್ಮ ಮಗಳ ಜೊತೆ ಅಜಯ್ ಅವರು ಕೂಡ ಕೃಷ್ಣನಂತೆ ಪೇಟ ಧರಿಸಿ ಕೊಳಲು ಹಿಡಿದುಕೊಂಡಿದ್ದಾರೆ.

     

    View this post on Instagram

     

    ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಷಯಗಳು????

    A post shared by Krishna Ajai Rao (@krishna_ajai_rao) on

  • ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ- ಮಠದತ್ತ ಭಕ್ತರ ದಂಡು

    ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ- ಮಠದತ್ತ ಭಕ್ತರ ದಂಡು

    ಉಡುಪಿ: ನಾಡಿನಾದ್ಯಂತ ಕೃಷ್ಣ ಭಕ್ತರು ಸಂಭ್ರಮದಲ್ಲಿದ್ದಾರೆ. ಯಾಕಂದ್ರೆ ಇಂದು ಕೃಷ್ಣ ಜನ್ಮಾಷ್ಟಮಿ. ಎಲ್ಲೆಡೆ ಕೃಷ್ಣ ನಾಮ ಜಪ ನಡೆಯುತ್ತಿದೆ. ಕಡೆಗೋಲು ಕೃಷ್ಣನ ನಾಡು ಉಡುಪಿಯಲ್ಲಿ ಮುರಾರಿಯ ಆರಾಧನೆ ಶುರುವಾಗಿದೆ.

    ಕೃಷ್ಣನ ನಾಡು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಶುರುವಾಗಿದೆ. ಮುಂಜಾನೆಯಿಂದಲೇ ಕೃಷ್ಣಮಠಕ್ಕೆ ಭಕ್ತರು ಭೇಟಿಕೊಟ್ಟು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಕೆ ಮಾಡುತ್ತಿದ್ದಾರೆ. ಕೃಷ್ಣಮಠವನ್ನು ಹೂವಿನಿಂದ ಅಲಂಕಾರ ಮಾಡಲಾಗಿದೆ. ಜಪ ತಪ, ಭಜನೆ ನಡೆಯುತ್ತಿದೆ. ಇಂದು ದಿನಪೂರ್ತಿ ಉಪವಾಸವಿರುವ ಕೃಷ್ಣಭಕ್ತರು, ರಾತ್ರಿ 11.45 ಕ್ಕೆ ಕೃಷ್ಣನಿಗೆ ಅಘ್ರ್ಯ ಸಲ್ಲಿಕೆ ಮಾಡುತ್ತಾರೆ. ಈ ಮೂಲಕ ಶ್ರೀಕೃಷ್ಣನ ಜನ್ಮವಾಗುತ್ತದೆ.

    ನಾಳೆ ಉಡುಪಿಯಲ್ಲಿ ಕೃಷ್ಣ ಲೀಲೋತ್ಸವ ಕಾರ್ಯಕ್ರಮ ನಡೆಯುತ್ತದೆ. ಬೆಳಗ್ಗೆಯಿಂದಲೇ ಅನ್ನದಾಸೋಹ ನಡೆಯುತ್ತದೆ. ಮಠಕ್ಕೆ ಬರುವ ಭಕ್ತರಿಗೆ ವಿತರಿಸಲು ಎರಡು ಲಕ್ಷ ಲಡ್ಡು, 1 ಲಕ್ಷ ಚಕ್ಕುಲಿ ಪಾಕಶಾಲೆಯಲ್ಲಿ ಸಿದ್ಧಗೊಂಡಿದೆ. ಉಡುಪಿಯ ಸುತ್ತಮುತ್ತಲ ಶಾಲೆಗಳಿಗೆ ವಿತರಿಸಲು ಪ್ರಸಾದ ರೆಡಿಯಾಗಿದೆ.

    ಕೃಷ್ಣಭಕ್ತ ರಜನಿಕಾಂತ್ ತಂತ್ರಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಇಂದು ಕೃಷ್ಣನ ದರ್ಶನ ಮಾಡುವುದು ಪುಣ್ಯದ ಕೆಲಸ. ಅಷ್ಟಮಿಯ ದಿನ ತಪ್ಪದೆ ಎಲ್ಲಿದ್ದರು ಉಡುಪಿ ಮಠಕ್ಕೆ ಬಂದು ದೇವರ ದರ್ಶನದ ಮಾಡುತ್ತೇನೆ. ಈ ಬಾರಿ ಸರಳವಾಗಿ ಹಬ್ಬ ಆಚರಿಸಲು ಸ್ವಾಮೀಜಿ ಕರೆ ನೀಡಿದ್ದಾರೆ. ಇದೊಂದು ಉತ್ತಮ ನಡೆ ಎಂದು ಶ್ಲಾಘಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಡುಪಿ ಕೃಷ್ಣಜನ್ಮಾಷ್ಟಮಿಗೆ ಅದ್ಧೂರಿ ತೆರೆ-ಫೋಟೋಗಳಲ್ಲಿ ನೋಡಿ

    ಉಡುಪಿ ಕೃಷ್ಣಜನ್ಮಾಷ್ಟಮಿಗೆ ಅದ್ಧೂರಿ ತೆರೆ-ಫೋಟೋಗಳಲ್ಲಿ ನೋಡಿ

    ಉಡುಪಿ: ಕಡೆಗೋಲು ಕೃಷ್ಣನ ನಗರಿ ಅನ್ನಬ್ರಹ್ಮನ ಕ್ಷೇತ್ರ ಉಡುಪಿಯಲ್ಲಿ ಎರಡು ದಿನಗಳ ಕಾಲ ನಡೆದ ಅಷ್ಟಮಿ ಸಂಪನ್ನಗೊಂಡಿದೆ. ಮಧ್ಯಾಹ್ನ ನಡೆದ ವಿಟ್ಲಪಿಂಡಿ ಮಹೋತ್ಸವದಲ್ಲಿ ಸಾವಿರಾರು ಮಂದಿ ಕೃಷ್ಣ ಭಕ್ತರು ರಥೋತ್ಸವದಲ್ಲಿ ಭಾಗಿಯಾದರು.

    ಚಿನ್ನದ ರಥದಲ್ಲಿ ವಿರಾಜಮಾನನಾದ ಕಡೆಗೋಲು ಶ್ರೀಕೃಷ್ಣನ ರಥದಿಂದ ಭಕ್ತ ಸಾಗರದತ್ತ ಸ್ವಾಮೀಜಿಗಳು ಪ್ರಸಾದವನ್ನು ಎಸೆದರು. ಕೃಷ್ಣನ ಮೂಲ ಪ್ರಸಾದವನ್ನು ಸ್ವೀಕರಿಸಲು ಸಾವಿರಾರು ಮಂದಿ ಭಕ್ತರು ಚಿನ್ನದ ರಥ ಮುಗಿಬಿದ್ದರು.

    ಚಿನ್ನದ ರಥೋತ್ಸವಕ್ಕೆ ರಂಗು ತುಂಬಿದ್ದು ಸಾವಿರಾರು ವೇಷಗಳು. ಸಾಂಪ್ರದಾಯಿಕ ಹುಲಿ ಕುಣಿತ , ಕರಡಿ ವೇಷ, ವಿಭಿನ್ನ ರಾಕ್ಷಸರು, ಗಮನ ಸೆಳೆದರು. ಶ್ರೀಕೃಷ್ಣನ ರಥೋತ್ಸವ ಸಾಗುತ್ತಿದ್ದಂತೆ ಮುಂಭಾಗದಲ್ಲಿ ಸಾಂಪ್ರದಾಯಿಕ ಗೊಲ್ಲ ವೇಷಧಾರಿಗಳು ಮೊಸರು ಕುಡಿಕೆಯನ್ನು ನಡೆಸಿದರು. ಶ್ರೀ ಕೃಷ್ಣ ಬೆಣ್ಣೆ ಪ್ರಿಯ , ಮೊಸರು- ತುಪ್ಪ ಪ್ರಿಯ ಅನ್ನುವ ವಾಡಿಕೆ ಇದೆ. ಈ ಹಿನ್ನೆಲೆಯಲ್ಲಿ ಈ ಮೊಸರು ಕುಡಿಕೆ ಉತ್ಸವವನ್ನು ಉಡುಪಿಯಲ್ಲಿ ಮಾತ್ರ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರಲಾಗುತ್ತಿದೆ.

    ಮುಂಭಾಗದ ರತ್ನ ಖಚಿತ ರಥದಲ್ಲಿ ಚಂದ್ರಮೌಳೇಶ್ವರ ಮತ್ತು ಅನಂತೇಶ್ವರ ದೇವರನ್ನು ಹೊತ್ತು ಸಾಗಲಾಯಿತು. ಹಿಂಭಾಗದ ಚಿನ್ನದ ರಥದಲ್ಲಿ ಶ್ರೀಕೃಷ್ಣನ ಮೃಣ್ಮಯ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಎಂಟು ಮಠಗಳು ಇರುವ ರಥಬೀದಿಗೆ ಒಂದು ಸುತ್ತು ಬಂದ ನಂತರ ಶ್ರೀಕೃಷ್ಣನ ಮೃನ್ಮಯ ಮೂರ್ತಿಯನ್ನು ಮಠದ ಮಧ್ವ ಸರೋವರದಲ್ಲಿ ಜಲಸ್ತಂಭನ ಮಾಡಲಾಯಿತು. ಚಾತುರ್ಮಾಸ್ಯದ ಸಂದರ್ಭದಲ್ಲಿ ಭಗವಾನ್ ಶ್ರೀಕೃಷ್ಣ ಯೋಗ ನಿದ್ರೆಯಲ್ಲಿ ಇರುತ್ತಾರೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು.

    ಮೆರವಣಿಗೆ ನಂತರ ಪೇಜಾವರ ಕಿರಿಯ ಶ್ರೀಪಾದರು ಶ್ರೀಕೃಷ್ಣನ ಮಣ್ಣಿನ ಮೂರ್ತಿಯನ್ನು ಮಧ್ವ ಸರೋವರದಲ್ಲಿ ಜಲಸ್ತಂಭನ ಮಾಡಿದರು. ಕೃಷ್ಣನ ಜಲಸ್ತಂಭನದ ಮೂಲಕ ಎರಡು ದಿನಗಳ ಅಷ್ಟಮಿಗೆ ತೆರೆ ಬಿದ್ದಿದೆ. ಇದಾದ ನಂತರ ರಥಬೀದಿ ಪಾರ್ಕಿಂಗ್ ಏರಿಯಾದಲ್ಲಿ ಹತ್ತಾರು ವೇದಿಕೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

    ಪೇಜಾವರ ಶ್ರೀಗಳ ಐತಿಹಾಸಿಕ ಐದನೇ ಪರ್ಯಾಯದ ಕೊನೆಯ ಅಷ್ಟಮಿಯನ್ನು ಆಚರಿಸಲಾಯಿತು. ಪೇಜಾವರ ಶ್ರೀಗಳು ದಾಖಲೆಯ ಎಂಬತ್ತನೇ ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಪಾಲ್ಗೊಂಡರು , ತನ್ನ ಪರ್ಯಾಯದ ಹತ್ತನೇ ಅಷ್ಟಮಿಯನ್ನು ಪೂರೈಸಿದ್ದಾರೆ.

  • ಕೃಷ್ಣನೂರಿನಲ್ಲಿ ಹುಲಿ ವೇಷಧಾರಿಗಳ ರಂಗಿನಾಟ – ಗಮನ ಸೆಳಿತಿದೆ ಮಾರಿಕಾಡು ವೇಷ

    ಕೃಷ್ಣನೂರಿನಲ್ಲಿ ಹುಲಿ ವೇಷಧಾರಿಗಳ ರಂಗಿನಾಟ – ಗಮನ ಸೆಳಿತಿದೆ ಮಾರಿಕಾಡು ವೇಷ

    ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣದೇವರ ಜಯಂತಿ ಆರಂಭಗೊಂಡಿದೆ. ಅಷ್ಟಮಿ ತಿಥಿ- ರೋಹಿಣಿ ನಕ್ಷತ್ರ ಮೂಡುವ ಘಳಿಗೆಯಲ್ಲಿ ಶ್ರೀಕೃಷ್ಣನಿಗೆ ಆಘ್ರ್ಯವನ್ನು ಸಲ್ಲಿಸಲಾಯ್ತು. ನಡುರಾತ್ರಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ನಂದಗೋಕುಲದಲ್ಲಾದ ಸಂಭ್ರಮ ಉಡುಪಿಯಲ್ಲಿಯೂ ಮರುಕಳಿಸಿತು.

    ಸಿಂಹಮಾಸ-ಕೃಷ್ಣ ಪಕ್ಷದಂದು ಶ್ರೀಕೃಷ್ಣ ಜನ್ಮತಾಳಿದ್ದಾನೆ ಎಂಬುವುದಾಗಿ ಉಲ್ಲೇಖವಿದೆ. ಅದರಂತೆ ರೋಹಿಣಿ ನಕ್ಷತ್ರ ಉದಯವಾಗುವ ಕಾಲದಲ್ಲಿ ಆಘ್ರ್ಯಪ್ರದಾನ ಮಾಡಿ ಕೃಷ್ಣಪರಮಾತ್ಮನನ್ನು ಬರಮಾಡಿಕೊಳ್ಳಲಾಯ್ತು. ಮಠದ ಗರ್ಭಗುಡಿಯಲ್ಲಿ ಶ್ರೀಕೃಷ್ಣನಿಗೆ ಪೇಜಾವರ ವಿಶ್ವೇಶತೀರ್ಥ ಶ್ರೀಗಳು ಮತ್ತು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೀರಿನ ಅಘ್ರ್ಯನೀಡಿ ಸ್ವಾಗತ ಮಾಡಿದರು. ಇದಾದ ನಂತರ ಕೃಷ್ಣಾಪುರ ಸ್ವಾಮೀಜಿ ಮತ್ತು ಸೋಸೆ ಶ್ರೀಪಾದಂಗಳವರು ಅಘ್ರ್ಯಪ್ರದಾನ ಮಾಡಿದರು.

    ಚಂದ್ರಶಾಲೆಯಲ್ಲಿ ತುಳಸಿಯ ಸಾನಿಧ್ಯದಲ್ಲಿ ಚಂದ್ರನಿಗೆ ಅಘ್ರ್ಯ ಸಮರ್ಪಿಸಲಾಯ್ತು. ಕೃಷ್ಣ ಚಂದ್ರವಂಶಸ್ಥನಾಗಿರುವುದರಿಂದ ಆತನ ವಂಶಕ್ಕೂ ಇಲ್ಲಿ ಗೌರವ ಸಲ್ಲಿಸುವ ಧಾರ್ಮಿಕ ಪ್ರಕ್ರಿಯೆ ನಡೆಯಿತು. ತೆಂಗಿನ ಕಾಯಿಯ ಗಡಿಗೆ ಹಾಲನ್ನು ಶಂಖದ ಮೂಲಕ ಚಂದ್ರನಿಗೆ ಅಘ್ರ್ಯ ನೀಡುತ್ತಿದ್ದಂತೆ ಭಕ್ತರು ಪುಳಕಿತರಾದರು. ಭೂಮಿಗೆ ದೇವರ ಆಗಮನವಾಗಿದೆ ಅಂತ ಸಂಭ್ರಮಿಸಿದರು.

    ಮೊಸರುಕುಡಿಕೆ: ಶ್ರೀ ಕೃಷ್ಣನ ಜನ್ಮ ದಿನವನ್ನು ಇಂದು ನಗರದಲ್ಲಿ ಮೊಸರುಕುಡಿಕೆಯ ಮೂಲಕ ಆಚರಿಸಲಾಗುತ್ತಿದೆ. ಸಾವಿರಾರು ವೇಷಗಳ ಕುಣಿತ, ಬರುವ ಅಸಂಖ್ಯ ಭಕ್ತರಿಗೆ ಉಟೋಪಚಾರ- ಸಿಹಿ ವಿತರಣೆಯ ಮೂಲಕ ಉಡುಪಿಗೆ ಉಡುಪಿಯೇ ಕಡೆಗೋಲು ಶ್ರೀಕೃಷ್ಣನ ಜನ್ಮದಿನವನ್ನು ಆಚರಿಸುತ್ತಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಟ್ಲಪಿಂಡಿ ಮಹೋತ್ಸವ ಆರಂಭವಾಗಲಿದೆ. ದಿನಪೂರ್ತಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಬರುವ ಭಕ್ತರಿಗೆ ಅನ್ನಪ್ರಸಾದ ಸೇವೆ ಎಲ್ಲವನ್ನೂ ವಿತರಿಸಲು ಕೃಷ್ಣಮಠ ಸಜ್ಜಾಗಿದೆ.

    ರಂಗು ತುಂಬುತ್ತಿರುವ ವೇಷಗಳು: ಉಡುಪಿ ಇಂದು ಸಂಪೂರ್ಣ ನಂದಗೋಕುಲವಾಗಿದೆ. ಎಲ್ಲಿನೋಡಿದರಲ್ಲಿ ಮುದ್ದುಕೃಷ್ಣರು ಕಾಣಿಸುತ್ತಿದ್ದಾರೆ. ಎರಡು ದಿನ ಅಷ್ಟಮಿಯ ಉಪವಾಸ ಮಾಡಿದ್ದ ಭಕ್ತರು ಇಂದು ವಿಟ್ಲಪಿಂಡಿಯ ಸಂಭ್ರಮದಲ್ಲಿದ್ದಾರೆ.

    ಮಾರಿಕಾಡು ವೇಷ: ಉಡುಪಿ ನಗರದಾದ್ಯಂತ ಎಲ್ಲಿ ನೋಡಿದರಲ್ಲಿ ವೇಷಗಳು ಕಾಣಿಸುತ್ತಿದೆ. ಈ ಪೈಕಿ ಎಲ್ಲರ ಗಮನಸೆಳೆಯುತ್ತಿರೋದು ಮಾರಿಕಾಡು ವೇಷ. ಉಡುಪಿಯ ಯುವಕ ರಮಾಂಜಿ ಅವರು ಈ ವಿಭಿನ್ನ ವೇಷ ಹಾಕಿದ್ದಾರೆ. ದೈತ್ಯ ಪ್ರಾಣಿಯೊಂದು ಓಡಾಡಿದಂತೆ ಈ ವೇಷ ನಗರದಾದ್ಯಂತ ಸಂಚಾರ ಮಾಡುತ್ತಿದೆ. ಫೋಮ್ ಮತ್ತು ಬಣ್ಣವನ್ನು ಉಪಯೋಗಿಸಿ ಈ ವೇಷ ಹಾಕಿದ್ದಾರೆ ರಾಮಾಂಜಿ. ಅಲ್ಲದೇ ಅಷ್ಟಮಿ ಮತ್ತು ವಿಟ್ಲಪಿಂಡಿಯಂದು ಕಲೆಕ್ಟ್ ಆಗುವ ಹಣವನ್ನೆಲ್ಲಾ ನಮ್ಮಭೂಮಿ ಸಂಸ್ಥೆಗೆ ನೀಡಲಿದ್ದಾರೆ.

    ಉಡುಪಿ ನಗರದಾದ್ಯಂತ ಹುಲಿಗಳು ದಾಂಗುಡಿಯಿಟ್ಟಿದೆ. ಎಲ್ಲಿ ನೋಡಿದ್ರೂ ಉಡುಪಿಯಲ್ಲಿ ಹುಲಿಗಳೇ ಕಾಣಿಸುತ್ತಿದೆ. ತಲೆಯಲ್ಲಿ ಕಾಯಿ ಒಡೆಯುವುದು- ಬೆಂಕಿಯುಂಡೆ ಉಗುಳುವುದು- ವಿವಿಧ ಕಸರತ್ತುಗಳನ್ನ ಮಾಡುವುದು ಹುಲಿ ನೃತ್ಯದ ಸ್ಪೆಷಲ್ ಆಗಿದೆ.

  • ಕೃಷ್ಣಜನ್ಮಾಷ್ಟಮಿ: ಬೆಂಗ್ಳೂರಿನ ಇಸ್ಕಾನ್‍ನಲ್ಲಿ ವಿಶೇಷ ಪೂಜೆ, ಕೃಷ್ಣನೂರು ಉಡುಪಿಯಲ್ಲಿ ಜನ್ಮಾಷ್ಟಮಿ ಇಲ್ಲ ಯಾಕೆ?

    ಕೃಷ್ಣಜನ್ಮಾಷ್ಟಮಿ: ಬೆಂಗ್ಳೂರಿನ ಇಸ್ಕಾನ್‍ನಲ್ಲಿ ವಿಶೇಷ ಪೂಜೆ, ಕೃಷ್ಣನೂರು ಉಡುಪಿಯಲ್ಲಿ ಜನ್ಮಾಷ್ಟಮಿ ಇಲ್ಲ ಯಾಕೆ?

    ಬೆಂಗಳೂರು: ಇಂದು ಶ್ರೀಕೃಷ್ಣ ಜನ್ಮಾಷ್ಠಮಿ. 5 ಸಾವಿರ ವರ್ಷಗಳ ಹಿಂದೆ ಲೋಕ ಕಲ್ಯಾಣಕ್ಕಾಗಿ ಶ್ರೀಕೃಷ್ಣ ನಾನಾ ಅವತಾರಗಳನ್ನು ತಾಳಿದ್ದನಂತೆ. ಭೂಮಿಗೆ ಬಂದು ಭಕ್ತರನ್ನ ಹರಿಸಿ ಹೋಗಿದ್ನಂತೆ. ಇದೇ ನಂಬಿಕೆ ಮೇಲೆ ಇವತ್ತಿಗೂ ಶ್ರೀಕೃಷ್ಣನ ಜನ್ಮಾಷ್ಠಮಿಯನ್ನ ಮನೆ ಮನೆಯಲ್ಲೂ ಆಚರಿಸಲಾಗ್ತಿದೆ.

    ಇಂದು ಜನ್ಮಾಷ್ಠಮಿ ಆಗಿರೋದ್ರಿಂದ ಶ್ರೀಕೃಷ್ಣ ಮತ್ತೆ ಭೂಮಿಗೆ ಬರ್ತಾನೆ ಅನ್ನೋ ನಂಬಿಕೆಯಿದೆ. ಮನೆ ಮನೆಯಲ್ಲೂ ಪುಟ್ಟ ಪುಟ್ಟ ಮಕ್ಕಳಿಗೆ ಶ್ರೀಕೃಷ್ಣನ ವೇಷ ಹಾಕಿಸಿ ಪೂಜೆ ಸಲ್ಲಿಸುವ ವಾಡಿಕೆಯಿದೆ.

    ಬೆಂಗಳೂರಿನ ಇಸ್ಕಾನ್ ದೇವಸ್ಥಾನದಲ್ಲೂ ಈಗಾಗಲೇ ನಾನಾ ಬಗೆಯ ಕಾರ್ಯಕ್ರಮಗಳು, ಪೂಜೆಗಳು ಜೋರಾಗಿ ನಡೆಯುತ್ತಿದೆ. ಇಸ್ಕಾನ್‍ನಲ್ಲಿ ಭಕ್ತರಿಗೆ ನೀಡಲು 2 ಲಕ್ಷ ಲಾಡುಗಳು ತಯಾರಾಗಿವೆ. ಸಾವಿರಾರು ಭಕ್ತರು ಬರೋದ್ರಿಂದ ರಾಜಾಜಿನಗರ ಸುತ್ತಾಮುತ್ತಾ ಸಂಚಾರ ವ್ಯತ್ಯಯವಾಗಲಿದ್ದು ಪೊಲೀಸರು ಬದಲಿ ಮಾರ್ಗ ಅನುಸರಿಸಲು ಸೂಚಿಸಿದ್ದಾರೆ.

    ಆದ್ರೆ ಕೃಷ್ಣನೂರು ಉಡುಪಿಯಲ್ಲಿ ಮಾತ್ರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನ ಇಂದು ಆಚರಿಸಲಾಗುತ್ತಿಲ್ಲ. ಬದಲಾಗಿ ಸೆಪ್ಟೆಂಬರ್ 14ಕ್ಕೆ ಅಷ್ಟಮಿಯನ್ನು ಅಚರಿಸಲಾಗುತ್ತದೆ. ಆಗಸ್ಟ್ ತಿಂಗಳಲ್ಲಿ ಕರಾವಳಿಯಲ್ಲಿ ಆಷಾಢ ಇರೋದ್ರಿಂದ ಇಲ್ಲಿ ಅಷ್ಟಮಿ ಇರೋದಿಲ್ಲ. ಹೀಗಾಗಿ ಇಂದು ಅಷ್ಟಮಿಯ ಆಚರಣೆ ಕೃಷ್ಣನೂರು ಉಡುಪಿಯಲ್ಲಿ ಇಲ್ಲ. ಶ್ರೀಕೃಷ್ಣನಿಗೆ ಜನ್ಮ ಇಲ್ಲ. ಅವನು ಅವತಾರವೆತ್ತಿದ್ದು ಎಂಬುವುದು ಭಾಗವತದಲ್ಲಿ ಉಲ್ಲೇಖವಿದೆ. ಇಂದು ಹಬ್ಬ ಆಚರಿಸುವವರು ಕೃಷ್ಣ ಜಯಂತಿಯನ್ನು ಆಚರಿಸುತ್ತಿದ್ದಾರೆ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

    ಕೃಷ್ಣ ಜನ್ಮಾಷ್ಟಮಿ ಆಗಬೇಕಾದ್ರೆ ಸಿಂಹ ಮಾಸದ-ರೋಹಿಣಿ ನಕ್ಷತ್ರ ಅಷ್ಟಮಿ ತಿಥಿಯಂದು ಚಂದ್ರೋದಯವಾಗುವ ಕಾಲ ಬರಬೇಕು. ಹೀಗಾಗಿ ಈ ಘಳಿಗೆ ಮುಂದಿನ ತಿಂಗಳು ಇರುವುದರಿಂದ ಕೃಷ್ಣನೂರು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ.