Tag: Krishna Janmashtam

  • ಕೃಷ್ಣ ಜನ್ಮಾಷ್ಟಮಿಗೆ ಸ್ಪೆಷಲ್ ಎಳ್ಳುಂಡೆ

    ಕೃಷ್ಣ ಜನ್ಮಾಷ್ಟಮಿಗೆ ಸ್ಪೆಷಲ್ ಎಳ್ಳುಂಡೆ

    ನಾಳೆ ಅಂದರೆ ಆ. 16. ಎಲ್ಲೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಕೃಷ್ಣ ಜನ್ಮಾಷ್ಟಮಿ ಎಂದಾಕ್ಷಣ ನೆನಪಾಗುವುದೇ ಮೊಸರು ಕುಡಿಕೆ, ಕೃಷ್ಣ, ರುಕ್ಮಿಣಿಯ ವೇಷ ಧರಿಸಿದ ಪುಟಾಣಿಗಳು. ಅಂದು ಕೃಷ್ಣನ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಸಡಗರ ಮನೆ ಮಾಡಿರುತ್ತದೆ. ಈ ಬಾರಿಯ ಕೃಷ್ಣ ಜನ್ಮಾಷ್ಟಮಿಗೆ ಏನಾದರೂ ಸಿಹಿ ತಿಂಡಿ ಮಾಡಬೇಕು ಅಂತ ಯೋಚಿಸ್ತಿದಿರಾ? ಹಾಗಿದ್ರೆ ಮನೆಯಲ್ಲೇ ಸುಲಭವಾಗಿ ಎಳ್ಳು ಉಂಡೆ ತಯಾರು ಮಾಡೋದು ಹೇಗೆ ಅಂತ ನಾವು ತಿಳಿಸಿಕೊಡ್ತೀವಿ..

    ಬೇಕಾಗಿರುವ ಸಾಮಾಗ್ರಿಗಳು:
    1/2 ಕಪ್ ಎಳ್ಳು
    1/4 ಕಪ್ ಒಣ ತೆಂಗಿನಕಾಯಿ ತುರಿ
    1/2 ಕಪ್ ಬೆಲ್ಲ
    1 ಏಲಕ್ಕಿ

    ಮಾಡುವ ವಿಧಾನ:
    *ಒಂದು ಪ್ಯಾನ್ ಗೆ ಎಳ್ಳನ್ನು ಹಾಕಿ ಮಧ್ಯಮ ಉರಿಯಲ್ಲಿ ಹುರಿಯಬೇಕು.
    * ಎಳ್ಳು ಊದಿಕೊಂಡು ಸಿಡಿಯಲು ಪ್ರಾರಂಭಿಸಿದಾಗ, ಒಣ ತೆಂಗಿನ ತುರಿ ಮತ್ತು ಏಲಕ್ಕಿ ಸೇರಿಸಿ.
    * ತೆಂಗಿನಕಾಯಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿಯಬೇಕು.
    * ನಂತರ ಹುರಿದ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ ಸ್ವಲ್ಪ ಹೊತ್ತು ರುಬ್ಬಿಕೊಳ್ಳಬೇಕು.
    * ಹೆಚ್ಚು ರುಬ್ಬಬೇಡಿ. ತರಿತರಿ ಆಗೋವರೆಗೆ ರುಬ್ಬಿದರೆ ಸಾಕು.
    * ಈಗ ಪುಡಿ ಮಾಡಿದ ಬೆಲ್ಲವನ್ನು ಸೇರಿಸಿ ಮತ್ತೆ ರುಬ್ಬಿಕೊಳ್ಳಬೇಕು.
    * ಅದನ್ನು ಒಂದು ಪಾತ್ರೆಗೆ ವರ್ಗಾಯಿಸಿ. ಚೆನ್ನಾಗಿ ಮಿಕ್ಸ್ ಮಾಡಬೇಕು.
    * ನಂತರ ಸ್ವಲ್ಪ ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಉಂಡೆ ಮಾಡಬೇಕು.
    * ಬಳಿಕ ಎಲ್ಲಾ ಲಡ್ಡುಗಳನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿಡಬೇಕು.