Tag: Krishna Janmabhoomi

  • ಶಾಹಿ ಈದ್ಗಾ ಮಸೀದಿಯನ್ನ ʻವಿವಾದಿತ ರಚನೆʼ ಅಂತ ಉಲ್ಲೇಖಿಸುವಂತೆ ಮನವಿ – ಹಿಂದೂ ಪರ ವಕೀಲರ ಅರ್ಜಿ ವಜಾ

    ಶಾಹಿ ಈದ್ಗಾ ಮಸೀದಿಯನ್ನ ʻವಿವಾದಿತ ರಚನೆʼ ಅಂತ ಉಲ್ಲೇಖಿಸುವಂತೆ ಮನವಿ – ಹಿಂದೂ ಪರ ವಕೀಲರ ಅರ್ಜಿ ವಜಾ

    ಪ್ರಯಾಗರಾಜ್: ಕೃಷ್ಣ ಜನ್ಮಭೂಮಿ ಪ್ರಕರಣದ (Krishna Janmabhoomi case) ಮುಂದಿನ ಎಲ್ಲಾ ವಿಚಾರಣೆಗಳಲ್ಲಿ ಶಾಹಿ ಈದ್ಗಾ ಮಸೀದಿಯನ್ನು ʻವಿವಾದಿತ ರಚನೆʼ ಎಂದು ಉಲ್ಲೇಖಿಸುವಂತೆ ಹಿಂದೂ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ (Allahabad HC) ಶುಕ್ರವಾರ ವಜಾಗೊಳಿಸಿದೆ.

    ಶಾಹಿ ಈದ್ಗಾ ಮಸೀದಿಯನ್ನು (Shahi Idgah Mosque) “ವಿವಾದಿತ ರಚನೆ” ಎಂದು ಘೋಷಿಸಬೇಕೆಂಬ ಹಿಂದೂ ಕಡೆಯ ಕೋರಿಕೆಯ ಮೇರೆಗೆ ನ್ಯಾಯಾಲಯವು ತನ್ನ ನಿರ್ಧಾರ ಪ್ರಕಟಿಸಿದೆ. ಈ ವಿನಂತಿಯನ್ನು ಸಲ್ಲಿಸಿದ್ದ ಅರ್ಜಿ A-44 ಅನ್ನು ತಿರಸ್ಕರಿಸಲಾಯಿತು. ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ್ ಮಿಶ್ರಾ ನೇತೃತ್ವದ ಪೀಠವು ಅರ್ಜಿಯನ್ನು “ಈ ಹಂತದಲ್ಲಿ” ವಜಾಗೊಳಿಸಲಾಗುತ್ತಿದೆ ಎಂದು ಮೌಖಿಕವಾಗಿ ಹೇಳಿದೆ. ಇದನ್ನೂ ಓದಿ: ಪತಂಜಲಿ ಚವನ್‌ಪ್ರಾಶ್ ಉತ್ಪನ್ನದ ಜಾಹೀರಾತು ನಿಲ್ಲಿಸಲು ದೆಹಲಿ ಹೈಕೋರ್ಟ್ ಸೂಚನೆ

    Allahabad high court

    ಮೊಕದ್ದಮೆ ಸಂಖ್ಯೆ 13 ರಲ್ಲಿ, ಅರ್ಜಿದಾರರಾದ ವಕೀಲ ಮಹೇಂದ್ರ ಪ್ರತಾಪ್ ಸಿಂಗ್ ಅವರು ಶಾಹಿ ಮಸೀದಿಯನ್ನು ವಿವಾದಿತ ರಚನೆ (Disputed Structure) ಎಂದು ಘೋಷಿಸಲು ಅರ್ಜಿ ಸಲ್ಲಿಸಿದ್ದರು. ಅರ್ಜಿ A-44ರ ಮೂಲಕ, ಅರ್ಜಿದಾರರು ಮೂಲ ಪ್ರಕರಣದ ಭವಿಷ್ಯದ ಎಲ್ಲಾ ವಿಚಾರಣೆಗಳಲ್ಲಿ ʻಶಾಹಿ ಈದ್ಗಾ ಮಸೀದಿʼ ಬದಲಿಗೆ ʻವಿವಾದಿತ ರಚನೆʼ ಎಂಬ ಪದವನ್ನು ಬಳಸಲು ನ್ಯಾಯಾಲಯದ ಸ್ಟೆನೋಗ್ರಾಫರ್‌ಗೆ ಸೂಚಿಸುವಂತೆ ನ್ಯಾಯಾಲಯವನ್ನು ಕೋರಿದ್ದರು. ಇದನ್ನೂ ಓದಿ: I Love You ಅನ್ನೋದ್ರಲ್ಲಿ ಲೈಂಗಿಕ ಉದ್ದೇಶವಿಲ್ಲ – ಬಾಂಬೆ ಹೈಕೋರ್ಟ್‌

    ಆದಾಗ್ಯೂ, ಮುಸ್ಲಿಂ ಕಡೆಯವರು ಈ ಅರ್ಜಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಿದರು. ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿರುವುದು ಮುಸ್ಲಿಂ ಕಡೆಯವರಿಗೆ ದೊಡ್ಡ ಪರಿಹಾರವಾಗಿದೆ. ಈ ನಡುವೆ ಹಿಂದೂ ಕಡೆಯಿಂದ ಸಲ್ಲಿಸಲಾದ 18 ಅರ್ಜಿಗಳ ವಿಚಾರಣೆ ಇನ್ನೂ ನಡೆಯುತ್ತಿದೆ. ಈ ಪ್ರಕರಣವನ್ನು ಪ್ರಸ್ತುತ ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ್ ಮಿಶ್ರಾ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: ವಾಲ್ಮೀಕಿ ಹಗರಣ| ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ – ಎಸ್‌ಐಟಿ ರದ್ದು, ಸಿಬಿಐ ತನಿಖೆಗೆ ಆದೇಶ

  • ಮಥುರಾ ಕೃಷ್ಣ ಜನ್ಮಭೂಮಿ ವಿವಾದ; ಮಸೀದಿ ಪರ ವಕೀಲರು ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

    ಮಥುರಾ ಕೃಷ್ಣ ಜನ್ಮಭೂಮಿ ವಿವಾದ; ಮಸೀದಿ ಪರ ವಕೀಲರು ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

    ಲಕ್ನೋ: ಮಥುರಾ (Mathura) ಕೃಷ್ಣಜನ್ಮಭೂಮಿ (Krishna Janmabhoomi) ವಿವಾದ ಸಂಬಂಧ ಮಸೀದಿ ಸಮಿತಿಗೆ ಭಾರೀ ಹಿನ್ನಡೆಯಾಗಿದೆ. ಶಾಹೀ ಈದ್ಗಾ ಮಸೀದಿ ಸಮಿತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ (Allahabad High Court) ವಜಾ ಮಾಡಿದೆ.

    ಮಸೀದಿ ತೆರವು ಕೋರಿ ಹಿಂದೂಪರ ಸಂಘಟನೆಗಳು ಸಲ್ಲಿಸಿದ್ದ 15 ಅರ್ಜಿಗಳ ವಿಚಾರಣೆಗೆ ಹೈಕೋರ್ಟ್ ಒಪ್ಪಿಗೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಿದೆ. ಹಿಂದೂಗಳು ಸಲ್ಲಿಸಿರುವ ಅರ್ಜಿಗಳು ವಿಚಾರಣೆಗೆ ಯೋಗ್ಯವಾಗಿವೆ ಎಂದಿದೆ. ಈ ಮೂಲಕ ಹಿಂದೂಗಳ ವಾದಕ್ಕೆ ಹೈಕೋರ್ಟ್ ಮನ್ನಣೆ ನೀಡಿದೆ. ಇದನ್ನೂ ಓದಿ: ಬಿಜೆಪಿ ಪಾದಯಾತ್ರೆ – ಭಾಗಿಯಾಗಲು ಷರತ್ತು ವಿಧಿಸಿದ ಹೆಚ್‌ಡಿಕೆ

    Allahabad high court

    1991ರ ಕಾನೂನಿನಡಿ ಧಾರ್ಮಿಕ ಸ್ಥಳಗಳ ಸ್ವರೂಪ ಬದಲಾಯಿಸಬಾರದು ಎಂದು ಮುಸ್ಲಿಂ ಪರ ವಕೀಲರು ವಾದಿಸಿದ್ದರು. ಆದರೆ ಈ ಕಾನೂನಿನ ಅಂಶದ ವಾದವನ್ನು ಹೈಕೋರ್ಟ್‌ ತಿರಸ್ಕರಿಸಿದೆ.

    ಕೃಷ್ಣ ಜನ್ಮಭೂಮಿ ದೇವಸ್ಥಾನದ ಪಕ್ಕದಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸಲು ಹಲವಾರು ಮೊಕದ್ದಮೆಗಳನ್ನು ಹೂಡಲಾಗಿತ್ತು. ಕೃಷ್ಣ ದೇವಸ್ಥಾನವನ್ನು ಕೆಡವಿದ ನಂತರ ಔರಂಗಜೇಬ್ ಕಾಲದ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ದಾವೆ ಹೂಡಲಾಗಿತ್ತು. ಇದನ್ನೂ ಓದಿ: SC, ST ಒಳ ಮೀಸಲಾತಿ ಕಾನೂನುಬದ್ಧ- ಸುಪ್ರೀಂ ಐತಿಹಾಸಿಕ ತೀರ್ಪು

  • ಕೃಷ್ಣ ಜನ್ಮಭೂಮಿ ಬೆಂಬಲಿಗರಿಗೆ ಬಾಂಬ್ ದಾಳಿ ಬೆದರಿಕೆ

    ಕೃಷ್ಣ ಜನ್ಮಭೂಮಿ ಬೆಂಬಲಿಗರಿಗೆ ಬಾಂಬ್ ದಾಳಿ ಬೆದರಿಕೆ

    ಲಕ್ನೋ: ಉತ್ತರಪ್ರದೇಶದ ಫತೇಪುರ್‌ನಲ್ಲಿರುವ ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್‌ ಅಧ್ಯಕ್ಷರಿಗೆ ಬಾಂಬ್ ಬೆದರಿಕೆಯೊಂದು ಬಂದಿದೆ. ವಾಟ್ಸಾಪ್ ಕರೆ ಮಾಡಿದ ವ್ಯಕ್ತಿ ತನ್ನನ್ನು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಎಂದು ಹೇಳಿಕೊಂಡಿದ್ದಾನೆ.

    ಶಕುಂಭರಿ ಪೀಠಾಧೀಶ್ವರದ ಅಶುತೋಷ್ ಪಾಂಡೆ ಅವರು ಮಥುರಾದ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್‌ನ ಅಧ್ಯಕ್ಷರಾಗಿದ್ದಾರೆ. ಅವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಬಾಕಿ ಇರುವ ಶ್ರೀ ಕೃಷ್ಣ ಜನ್ಮಭೂಮಿ ವರ್ಸಸ್ ಶಾಹಿ ಮಸೀದಿ ಈದ್ಗಾದಲ್ಲಿ ಸಲ್ಲಿಸಲಾದ ಮೊಕದ್ದಮೆಗೆ ಪ್ರಮುಖ ಕಕ್ಷಿದಾರರಾಗಿದ್ದಾರೆ. ಶುಕ್ರವಾರ ಪ್ರಕರಣದ ವಿಚಾರಣೆಗಾಗಿ ಅವರು ಹೈಕೋರ್ಟ್‌ಗೆ ತೆರಳಿದ್ದರು. ಅಲ್ಲಿಂದ ಸಂಜೆ ಮಥುರಾಗೆ ಹೋಗುತ್ತಿದ್ದಾಗ 8 ಗಂಟೆ ಸುಮಾರಿಗೆ ಅವರ ಮೊಬೈಲ್‌ಗೆ ವಾಟ್ಸಾಪ್ ಕರೆ ಬಂದಿದೆ.

    ಅನಾಮಧೇಯ ನಂಬರಿನಿಂದ ಕರೆ ಬಂದಿದ್ದು ಸ್ವೀಕರಿಸಿದಾಗ, ಪ್ರಕರಣ ಹಿಂಪಡೆಯದಿದ್ದರೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಜೊತೆಗೆ ಭಾರತದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾನೆ. ಈ ಸಂಬಂಧ ಅಶುತೋಷ್‌ ಅವರು ಸದರ್ ಕೊತ್ವಾಲಿಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಎಸ್‌ಐ ಸಂತೋಷ್‌ಕುಮಾರ್‌ ತಿಳಿಸಿದ್ದಾರೆ. ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿದ ನಂತರ ನಂಬರ್ ಎಲ್ಲಿಗೆ ಸೇರಿದೆ ಎಂಬುದು ಸ್ಪಷ್ಟವಾಗುತ್ತದೆ.

    ಏನಿದು ಪ್ರಕರಣ?: 13.37 ಎಕರೆ ಜಮೀನಿನ ಪೂರ್ಣ ಮಾಲೀಕತ್ವವು ಹಿಂದೂಗಳಿಗೆ ಸೇರಿದ್ದು ಎಂದು ಮಥುರಾ ನ್ಯಾಯಾಲಯದಲ್ಲಿ ಹಿಂದೂ ಸಂಘಟನೆ ವಾದಿಸಿತ್ತು. ಮೊಘಲ್ ದೊರೆ ಔರಂಗಜೇಬನ ಆದೇಶದಂತೆ  ಕೇಶವ ದೇವ ದೇಗುಲವನ್ನು ನಾಶಪಡಿಸಿ, ಅದೇ ಜಾಗದಲ್ಲಿ ಶತಮಾನಗಳಷ್ಟು ಹಳೆಯದಾದ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಸಂಘಟನೆ ಆರೋಪಿಸಿರುವ ಹಿಂದೂ ಸಂಘಟನೆ, ಮಸೀದಿಯ ಕೆಲವು ಗೋಡೆಗಳ ಮೇಲೆ ಕಮಲದ ಕೆತ್ತನೆಗಳಿವೆ. ಜೊತೆಗೆ ಶೇಷನಾಗವನ್ನು ಹೋಲುವ ಆಕೃತಿಗಳಿರುವುದು ದೇಗುಲದ ಮೇಲೆ ಮಸೀದಿ ನಿರ್ಮಿಸಿರುವುದಕ್ಕೆ ಪುರಾವೆಗಳು ಎಂದು ಹೇಳಿತ್ತು.

  • ಮಥುರಾದಲ್ಲಿ ಕೃಷ್ಣ ದೇವಸ್ಥಾನ ಕೆಡವಿ ಮಸೀದಿ ನಿರ್ಮಾಣ – ಭಾರತೀಯ ಪುರಾತತ್ವ ಇಲಾಖೆ

    ಮಥುರಾದಲ್ಲಿ ಕೃಷ್ಣ ದೇವಸ್ಥಾನ ಕೆಡವಿ ಮಸೀದಿ ನಿರ್ಮಾಣ – ಭಾರತೀಯ ಪುರಾತತ್ವ ಇಲಾಖೆ

    ನವದೆಹಲಿ: ಮಥುರಾದಲ್ಲಿ ಕೃಷ್ಣ ದೇವಸ್ಥಾನವನ್ನು (Krishna Janmabhoomi in Mathura) ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಮಾಹಿತಿ ನೀಡಿದೆ.

    ಉತ್ತರ ಪ್ರದೇಶದ ಮೈನ್‌ಪುರಿ ನಿವಾಸಿ ಅಜಯ್ ಪ್ರತಾಪ್ ಸಿಂಗ್ ಅವರು ಮಾಹಿತಿ ಹಕ್ಕು ಕಾಯ್ದೆ (RTI) ಅಡಿ ಕೇಳಿದ ಪ್ರಶ್ನೆಗೆ ಎಎಸ್‌ಐ ಉತ್ತರ ನೀಡಿದೆ.

    ಪ್ರಶ್ನೆ ಏನಿತ್ತು?
    1670ರಲ್ಲಿ ಕೇಶವದೇವ ದೇವಸ್ಥಾನವನ್ನು ಕೆಡವಿ ಶಾಹಿ ಈದ್ಗಾ ನಿರ್ಮಾಣವಾದ ಬಗ್ಗೆ 1920ರ ನವೆಂಬರ್‌ನಲ್ಲಿ ಬ್ರಿಟಿಷರು (British) ನಡೆಸಿದ ಸರ್ವೆ ಮಾಹಿತಿ ನೀಡುವಂತೆ ಪ್ರಶ್ನೆ ಕೇಳಲಾಗಿತ್ತು.

    ಎಎಸ್‌ಐ ಉತ್ತರ ಏನಿತ್ತು?
    1920 ರಲ್ಲಿ ಅಲಹಾಬಾದ್‌ನಿಂದ ಬ್ರಿಟಿಷರು ಪ್ರಕಟಿಸಿದ ಗೆಜೆಟ್‌ನಲ್ಲಿ (ರಾಜ್ಯಪತ್ರ) ಲೋಕೋಪಯೋಗಿ ಇಲಾಖೆಯು ಉತ್ತರ ಪ್ರದೇಶದ (Uttar Pradesh) ವಿವಿಧೆಡೆ 39 ಸ್ಮಾರಕಗಳ ಪಟ್ಟಿಯನ್ನು ನೀಡಿದೆ. ಈ ಪಟ್ಟಿಯಲ್ಲಿ ಕತ್ರಾ ಕೇಶವ ದೇವ್ ಭೂಮಿಯಲ್ಲಿರುವ ಶ್ರೀ ಕೃಷ್ಣ ಭೂಮಿಯನ್ನು 37ನೇ ಸ್ಥಾನದಲ್ಲಿ ಉಲ್ಲೇಖಿಸಲಾಗಿದೆ. ಹಿಂದೆ ಕತ್ರಾ ದಿಬ್ಬದ ಮೇಲೆ ಕೇಶವದೇವ್‌ ದೇವಸ್ಥಾನವಿತ್ತು. ಅದನ್ನು ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಉತ್ತರ ನೀಡಿದೆ.

    ಕೃಷ್ಣ ಜನ್ಮಭೂಮಿ ಮುಕ್ತಿ ನ್ಯಾಸ್ ಅಧ್ಯಕ್ಷ ವಕೀಲ ಮಹೇಂದ್ರ ಪ್ರತಾಪ್ ಪ್ರತಿಕ್ರಿಯಿಸಿ, ರಾಜ್ಯಪತ್ರದಲ್ಲಿ ಉಲ್ಲೇಖವಾದ ಹಾಗೂ ಈಗ ಆರ್‌ಟಿಐ ಅಡಿ ನೀಡಿದ ಪ್ರಶ್ನೆಗೆ ಎಎಸ್‌ಐ ನೀಡಿದ ಮಾಹಿತಿಯನ್ನೇ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ಸಾಕ್ಷ್ಯವಾಗಿ ಸೇರಿಸುತ್ತೇವೆ ಎಂದು ಹೇಳಿದ್ದಾರೆ.

    ಮಥುರಾದ ಕೇಶವದೇವ ದೇವಾಲಯವನ್ನು ಸುಮಾರು 5000 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ನಂಬಲಾಗುತ್ತಿದೆ. ಮಥುರಾ ಶ್ರೀಕೃಷ್ಣನ ಜನ್ಮಸ್ಥಳ. ಶ್ರೀಕೃಷ್ಣನ ಮೊಮ್ಮಕ್ಕಳಾದ ವ್ರಜ ಮತ್ತು ವ್ರಜನಾಭ ರಾಜ ಪರೀಕ್ಷಿತನ ಸಹಾಯದಿಂದ ಮಥುರಾದಲ್ಲಿ ಕೇಶದೇವ ದೇವಾಲಯವನ್ನು ನಿರ್ಮಿಸಿದರು ಎಂಬ ಕಥೆಯಿದೆ.

    ಮೊಘಲ್ ರಾಜ ಔರಂಗಜೇಬ್‌ (Aurangzeb) 1670ರಲ್ಲಿ ಕೇಶವದೇವನ ದೇವಾಲಯವನ್ನು ಕೆಡವಲು ಆದೇಶಿಸಿದ್ದ. ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ ನಂತರ ನಿರ್ಮಿಸಲಾದ ಮಸೀದಿಯಲ್ಲಿ ಔರಂಗಜೇಬ ಸ್ವತಃ ನಮಾಜ್ ಮಾಡಿದ್ದ.

    ಏನಿದು ವಿವಾದ?
    ಮಥುರಾದ ವಿವಾದವು 13.37 ಎಕರೆ ಭೂಮಿಯ ಮಾಲೀಕತ್ವದ ಹಕ್ಕುಗಳಿಗೆ ಸಂಬಂಧಿಸಿದೆ. ಶ್ರೀ ಕೃಷ್ಣ ಜನ್ಮಭೂಮಿ 10.9 ಎಕರೆ ಜಮೀನು ಹೊಂದಿದ್ದರೆ, ಶಾಹಿ ಈದ್ಗಾ ಮಸೀದಿ ಎರಡೂವರೆ ಎಕರೆ ಜಮೀನು ಹೊಂದಿದೆ. ಪ್ರಸ್ತುತ ಈಗ ಇರುವ ಶಾಹಿ ಈದ್ಗಾ ಮಸೀದಿಯನ್ನು ಅಕ್ರಮ ಎಂದು ಘೋಷಿಸಿ ಅದನ್ನು ನೆಲಸಮಗೊಳಿಸಬೇಕು ಮತ್ತು 13.37 ಎಕರೆ ಸಂಪೂರ್ಣ ಭೂಮಿಯನ್ನು ಡಿ-ಫಾಕ್ಟೋ ಮಾಲೀಕ ಭಗವಾನ್ ಶ್ರೀಕೃಷ್ಣ ವಿರಾಜಮಾನರಿಗೆ ಹಸ್ತಾಂತರಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ.

    ವಕೀಲರಾದ ರಂಜನಾ ಅಗ್ನಿಹೋತ್ರಿ ಸೇರಿ ಇತರ ಆರು ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ ಇನ್ನೂ ಅನೇಕ ಮಂದಿ ಅರ್ಜಿ ಸಲ್ಲಿಸಿದ್ದರು. ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್, ಶಾಹಿ ಈದ್ಗಾ ಮಸೀದಿ, ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ ಮತ್ತು ಶ್ರೀಕೃಷ್ಣ ಜನ್ಮಭೂಮಿ ಸೇವಾ ಸಂಸ್ಥಾನವನ್ನು ಪ್ರಕರಣದಲ್ಲಿ ಭಾಗಿ ಮಾಡಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ತ್ತರ ಪ್ರದೇಶದ ಮಥುರಾ ನ್ಯಾಯಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸಮೀಕ್ಷೆ ನಡೆಸುವಂತೆ ಆದೇಶಿಸಿತ್ತು.

    ಅರ್ಜಿಯಲ್ಲಿ ಏನಿತ್ತು?
    ಶಾಹಿ ಈದ್ಗಾ ಮಸೀದಿಯನ್ನು ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ 1669-70ರಲ್ಲಿ ಶ್ರೀಕೃಷ್ಣನ ಜನ್ಮಸ್ಥಳದ ಸಮೀಪವಿರುವ ಕತ್ರಾ ಕೇಶವ್ ದೇವ್ ದೇವಸ್ಥಾನದ ಬಳಿ ನಿರ್ಮಿಸಲಾಗಿದೆ. 13.37 ಎಕರೆ ಜಾಗದಲ್ಲಿ ಹರಡಿರುವ ಶ್ರೀಕೃಷ್ಣ ಜನ್ಮಭೂಮಿ ದೇವಸ್ಥಾನದ ಒಂದು ಭಾಗವನ್ನು ಕೆಡವಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ. ಈ ಜಾಗದ ಸಂಪೂರ್ಣ ಹಕ್ಕು ಭಗವಾನ್ ಶ್ರೀಕೃಷ್ಣ ವಿರಾಜಮಾನರಿಗೆ ನೀಡಬೇಕು. ಹೀಗಾಗಿ ಶಾಹಿ ಈದ್ಗಾ ಮಸೀದಿಯನ್ನು ತೆರವು ಮಾಡಿ ಮಂದಿರಕ್ಕೆ ಭೂಮಿಯನ್ನು ವಾಪಸ್ ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ.

  • Mathura’s Krishna Janmabhoomi Land Disput  ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಲ್ಲ – ಸುಪ್ರೀಂ

    Mathura’s Krishna Janmabhoomi Land Disput ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಲ್ಲ – ಸುಪ್ರೀಂ

    ನವದೆಹಲಿ: ಉತ್ತರ ಪ್ರದೇಶದ ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ದೇವಸ್ಥಾನದ (Mathura’s Krishna Janmabhoomi Land Dispute) ಪಕ್ಕದಲ್ಲಿರುವ ಶಾಹಿ ಈದ್ಗಾ (Shahi Idgah) ಸಂಕೀರ್ಣದ ಪ್ರಾಥಮಿಕ ಸಮೀಕ್ಷೆಗೆ ಅನುಮತಿ ನೀಡಿದ ಅಲಹಾಬಾದ್ ಹೈಕೋರ್ಟ್ ಗುರುವಾರ ನೀಡಿದ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ (Supreme Court) ಶುಕ್ರವಾರ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ವಿಎನ್ ಭಟ್‌ ಅವರ ಪೀಠವು ಮಸೀದಿ ಸಮಿತಿಯ ಮನವಿಯನ್ನು ನಿರಾಕರಿಸಿತು.

    ಅಲಹಾಬಾದ್ ಹೈಕೋರ್ಟ್ (Allahabad High Court) ಡಿಸೆಂಬರ್ 14 ರಂದು ಈದ್ಗಾ ಸಂಕೀರ್ಣದ ಪ್ರಾಥಮಿಕ ಸಮೀಕ್ಷೆಯನ್ನು ನ್ಯಾಯಾಲಯದ ಮೇಲ್ವಿಚಾರಣೆಯ ಮೂವರು ವಕೀಲ ಕಮಿಷನರ್‌ಗಳ ತಂಡಕ್ಕೆ ಅನುಮತಿಸಿತು. ಈ ಆದೇಶವನ್ನು ಪ್ರಶ್ನಿಸಿ ಮಸೀದಿ ಸಮಿತಿಯು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.  ಇದನ್ನೂ ಓದಿ: ಇಂಧನ ಸಚಿವ ಕೆ.ಜೆ ಜಾರ್ಜ್ ಚಿಕ್ಕಮಗಳೂರು ಕಚೇರಿಯಲ್ಲಿ ಕಳ್ಳತನ

    ಭೂ ವಿವಾದಕ್ಕೆ ಸಂಬಂಧಿಸಿದ ಮೊಕದ್ದಮೆಗಳನ್ನು ಒಗ್ಗೂಡಿಸಿ ವರ್ಗಾಯಿಸುವ ಹೈಕೋರ್ಟ್‌ನ ಮೇ 2023ರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಜನವರಿ 9 ರಂದು ವಿಶೇಷ ರಜೆ ಕಾಲ ಪೀಠವು ವಿಚಾರಣೆಯ ನಡೆಸಲಿದೆ ಎಂದು ನ್ಯಾಯಲಯ ಹೇಳಿದೆ.

    ಸಮೀಕ್ಷೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ ಮತ್ತು ಅರ್ಜಿಗಳ ವರ್ಗಾವಣೆ ಆದೇಶದ ಸವಾಲಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಜನವರಿ 9 ರಂದು ವಿಚಾರಣೆ ನಡೆಸಲಿದೆ ಹೀಗಾಗಿ ಹೈಕೋರ್ಟ್ ಆದೇಶವು ಮುಂದುವರಿಯುತ್ತದೆ. ಸುಪ್ರೀಂಕೋರ್ಟ್‌ನಿಂದ ಯಾವುದೇ ತಡೆ ಇಲ್ಲ ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ.

    ಶ್ರೀಕೃಷ್ಣನ ಜನ್ಮಸ್ಥಳದ 13.37 ಎಕರೆಯಲ್ಲಿ ದೇವಾಲಯವನ್ನು ಕೆಡವಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಮಸೀದಿಯನ್ನು ನಿರ್ಮಿಸಿದನೆಂದು ಹಿಂದೂಗಳ ಪರ ಅರ್ಜಿದಾರರು ಆರೋಪಿಸಿದ್ದು, ಈದ್ಗಾ ಸಂಕೀರ್ಣಕ್ಕೆ ಸಮೀಕ್ಷೆ ನಡೆಸಲು ಅಲಹಾಬಾದ್ ಹೈಕೋರ್ಟ್‌ನಲ್ಲಿ ಹತ್ತಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಸಲಾಗಿತ್ತು.

     

  • ಶ್ರೀಕೃಷ್ಣ ಜನ್ಮಭೂಮಿ ವಿವಾದ – ಶಾಹಿ ಈದ್ಗಾ ಮಸೀದಿ ಸಮೀಕ್ಷೆಗೆ ಹೈಕೋರ್ಟ್‌ ಅನುಮತಿ

    ಶ್ರೀಕೃಷ್ಣ ಜನ್ಮಭೂಮಿ ವಿವಾದ – ಶಾಹಿ ಈದ್ಗಾ ಮಸೀದಿ ಸಮೀಕ್ಷೆಗೆ ಹೈಕೋರ್ಟ್‌ ಅನುಮತಿ

    ಲಕ್ನೋ: ಶ್ರೀಕೃಷ್ಣ ಜನ್ಮಭೂಮಿಯಲ್ಲಿ (Krishna Janmabhoomi) ನಿರ್ಮಾಣವಾಗಿದೆ ಎಂದು ಹೇಳಲಾದ ಶಾಹಿ ಈದ್ಗಾ ಮಸೀದಿಯನ್ನು (Shahi Idagh Mosque) ಸಮೀಕ್ಷೆ ನಡೆಸಲು ಅಲಹಾಬಾದ್‌ ಹೈಕೋರ್ಟ್ (Allahabad High Court) ಸಮ್ಮತಿ ನೀಡಿದೆ.

    ಮಸೀದಿ ಪರಿಶೀಲಿಸಲು ಆಯುಕ್ತರನ್ನು ನೇಮಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಪುರಸ್ಕರಿಸಿದ  ನ್ಯಾ. ಮಯಾಂಕ್‌ ಕುಮಾರ್‌ ಜೈನ್‌ ಅವರಿದ್ದ ಪೀಠ ಮೂವರು ಅಧಿಕಾರಿಗಳಿರುವ ಆಯೋಗ ರಚಿಸುವಂತೆ ಸೂಚಿಸಿದೆ.

    ಶ್ರೀ ಕೃಷ್ಣನ ಜನ್ಮಸ್ಥಳವು ಮಸೀದಿಯ ಕೆಳಗೆ ಇದೆ ಮತ್ತು ಮಸೀದಿಯು ಹಿಂದೂ ದೇವಾಲಯವಾಗಿದೆ ಎಂದು ತೋರಿಸುವ ಹಲವು ಚಿಹ್ನೆಗಳು ಇವೆ. ಹೀಗಾಗಿ ಮಸೀದಿಯನ್ನು ಪರಿಶೀಲಿಸಲು ಆಯೋಗವನ್ನು ಸ್ಥಾಪಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು.

    ಹಿಂದೂ ದೇವಾಲಯಗಳ ವಿಶಿಷ್ಟ ಲಕ್ಷಣವಾಗಿರುವ ಕಮಲದ ಆಕಾರದ ಸ್ತಂಭವು ಅಸ್ತಿತ್ವದಲ್ಲಿದೆ. ಕೃಷ್ಣ ಜನಿಸಿದ ರಾತ್ರಿ ಆತನನ್ನು ರಕ್ಷಿಸಿದ ಹಿಂದೂ ದೇವತೆಗಳಲ್ಲಿ ಒಬ್ಬನಾದ ಶೇಷನಾಗನ ಚಿತ್ರವೂ ಇದೆ. ಮಸೀದಿಯ ಕಂಬದ ತಳದಲ್ಲಿ ಹಿಂದೂ ಧಾರ್ಮಿಕ ಚಿಹ್ನೆಗಳು ಮತ್ತು ಕೆತ್ತನೆಗಳು ಸಹ ಗೋಚರಿಸುತ್ತವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

    ಶಾಹಿ ಈದ್ಗಾ ಮಸೀದಿಯನ್ನು ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ 1669-70ರಲ್ಲಿ ಶ್ರೀಕೃಷ್ಣನ ಜನ್ಮಸ್ಥಳದ ಸಮೀಪವಿರುವ ಕತ್ರಾ ಕೇಶವ್ ದೇವ್ ದೇವಸ್ಥಾನದ ಬಳಿ ನಿರ್ಮಿಸಲಾಗಿದೆ. 13.37 ಎಕರೆ ಜಾಗದಲ್ಲಿ ಹರಡಿರುವ ಶ್ರೀಕೃಷ್ಣ ಜನ್ಮಭೂಮಿ ದೇವಸ್ಥಾನದ ಒಂದು ಭಾಗವನ್ನು ಕೆಡವಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ. ಈ ಜಾಗದ ಸಂಪೂರ್ಣ ಹಕ್ಕು ಭಗವಾನ್ ಶ್ರೀಕೃಷ್ಣ ವಿರಾಜಮಾನರಿಗೆ ನೀಡಬೇಕು. ಹೀಗಾಗಿ ಶಾಹಿ ಈದ್ಗಾ ಮಸೀದಿಯನ್ನು ತೆರವು ಮಾಡಿ ಮಂದಿರಕ್ಕೆ ಭೂಮಿಯನ್ನು ವಾಪಸ್ ನೀಡುವಂತೆ ಅರ್ಜಿದಾರರು ಕೋರ್ಟ್‌ ಮೆಟ್ಟಿಲೇರಿದ್ದಾರೆ.

     

  • ಶ್ರೀಕೃಷ್ಣ ಜನ್ಮಭೂಮಿ ವಿವಾದ – ಶಾಹಿ ಈದ್ಗಾ ಮಸೀದಿ ಸಮೀಕ್ಷೆಗೆ ಮಥುರಾ ಕೋರ್ಟ್ ಆದೇಶ

    ಶ್ರೀಕೃಷ್ಣ ಜನ್ಮಭೂಮಿ ವಿವಾದ – ಶಾಹಿ ಈದ್ಗಾ ಮಸೀದಿ ಸಮೀಕ್ಷೆಗೆ ಮಥುರಾ ಕೋರ್ಟ್ ಆದೇಶ

    ಲಕ್ನೋ: ಶ್ರೀಕೃಷ್ಣ ಜನ್ಮಭೂಮಿಯಲ್ಲಿ (Krishna Janmabhoomi) ನಿರ್ಮಾಣವಾಗಿದೆ ಎಂದು ಹೇಳಲಾದ ಶಾಹಿ ಈದ್ಗಾ ಮಸೀದಿಯನ್ನು (Shahi Idgah Mosque) ಸಮೀಕ್ಷೆ ಮಾಡಲು ಉತ್ತರ ಪ್ರದೇಶದ ಮಥುರಾ ನ್ಯಾಯಾಲಯವು (Mathura Court) ಮಹತ್ವದ ಆದೇಶ ನೀಡಿದೆ.

    ಜನವರಿ 2 ರಿಂದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ (Archaeological Survey Of India) ಸಮೀಕ್ಷೆ ಮಾಡಲು ಕೋರ್ಟ್ ಆದೇಶಿಸಿದೆ. ಅಲ್ಲದೇ ಇದಕ್ಕೆ ಸಂಬಂಧಪಟ್ಟ ವರದಿಯನ್ನು ಜನವರಿ 20ರ ನಂತರ ನೀಡುವಂತೆಯೂ ಕೋರ್ಟ್ ಸೂಚಿಸಿದೆ. ಇದನ್ನೂ ಓದಿ: ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲಿಂಡರ್‌, ಪ್ಲ್ಯಾಂಟ್‌ಗಳ ಕಾರ್ಯನಿರ್ವಹಣೆ ಬಗ್ಗೆ ಗಮನ ಹರಿಸಿ – ಕೇಂದ್ರದಿಂದ ರಾಜ್ಯಗಳಿಗೆ ಎಚ್ಚರಿಕೆ

    ಹಿಂದೂ ಸೇನೆಯ (Hindu Sena) ವಿಷ್ಣು ಗುಪ್ತಾ ಅವರು ಸಲ್ಲಿಸಿದ್ದ ಮೊಕದ್ದಮೆಯ ಮೇರೆಗೆ ನ್ಯಾಯಾಲಯ ಈ ಆದೇಶ ನೀಡಿದೆ. ಕತ್ರಾ ಕೇಶವ್ ದೇವ್ ದೇವಸ್ಥಾನದಿಂದ 17ನೇ ಶತಮಾನದ ಶಾಹಿ ಈದ್ಗಾ ಮಸೀದಿಯನ್ನು ಕೆಡವಲು ಒತ್ತಾಯಿಸಿ ಹಿಂದೂ ಸಂಘಟನೆಗಳು ಮಾಡಿದ್ದ ಮೊಕದ್ದಮೆಗಳಲ್ಲಿ ಇದು ಒಂದಾಗಿದೆ. ಈ ಮಸೀದಿಯನ್ನು ಕೃಷ್ಣನ ಜನ್ಮಸ್ಥಳದಲ್ಲಿ ನಿರ್ಮಿಸಲಾಗಿದೆ ಎಂಬುದು ಹಿಂದೂ ಸಂಘಟನೆಗಳ ವಾದವಾಗಿದೆ. ಇದನ್ನೂ ಓದಿ: ಶ್ರೀಕೃಷ್ಣನ ಜನ್ಮಸ್ಥಳದಲ್ಲಿರೋ ಮಸೀದಿಯಲ್ಲಿ ಮುಸ್ಲಿಮರ ಪ್ರಾರ್ಥನೆಗೆ ನಿರ್ಬಂಧ ವಿಧಿಸಿ: ಕೋರ್ಟ್‌ಗೆ ಮನವಿ

    ಜ್ಞಾನವ್ಯಾಪಿ ಮಸೀದಿ (Gyanvapi Mosque) ಸಮೀಕ್ಷೆಗೆ ಅನುಮತಿ ಸಿಕ್ಕಿದ ಬೆನ್ನಲ್ಲೇ ಕಳೆದ ಮೇ 19ರಂದೇ ಮಥುರಾದ ಶ್ರೀಕೃಷ್ಣ ಜನ್ಮಭೂಮಿ ವಿವಾದ ಸಂಬಂಧ ಸಲ್ಲಿಕೆಯಾದ ಅರ್ಜಿ ವಿಚಾರಣೆಗೆ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ಕೋರಿ ಸಲ್ಲಿಸಿದ್ದ ಅರ್ಜಿಗಳು ವಿಚಾರಣೆಗೆ ಅರ್ಹವಾಗಿದೆ ಎಂದು ಮಥುರಾ ಜಿಲ್ಲಾ ನ್ಯಾಯಾಲಯ ಹೇಳಿತ್ತು. ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆ ನಡೆಸಲಾಯಿತು. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ – ವಾರಣಾಸಿ ಕೋರ್ಟ್‌ ವಿಚಾರಣೆಗೆ ಸುಪ್ರೀಂ ತಡೆ

    ಏನಿದು ವಿವಾದ?
    ಮಥುರಾ ಶ್ರೀಕೃಷ್ಣನ ಜನ್ಮ ಸ್ಥಳವಾಗಿದೆ. ಪ್ರಸ್ತುತ ಈಗ ಇರುವ ಶಾಹಿ ಈದ್ಗಾ ಮಸೀದಿಯನ್ನು ಅಕ್ರಮ ಎಂದು ಘೋಷಿಸಿ ಅದನ್ನು ನೆಲಸಮಗೊಳಿಸಬೇಕು ಮತ್ತು 13.37 ಎಕರೆ ಸಂಪೂರ್ಣ ಭೂಮಿಯನ್ನು ಡಿ-ಫಾಕ್ಟೋ ಮಾಲೀಕ ಭಗವಾನ್ ಶ್ರೀಕೃಷ್ಣ ವಿರಾಜಮಾನರಿಗೆ ಹಸ್ತಾಂತರಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ವಕೀಲರಾದ ರಂಜನಾ ಅಗ್ನಿಹೋತ್ರಿ ಸೇರಿ ಇತರ ಆರು ಮಂದಿ ಕಳೆದ ವರ್ಷ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ ಇನ್ನೂ ಅನೇಕ ಮಂದಿ ಅರ್ಜಿ ಸಲ್ಲಿಸಿದ್ದರು. ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್, ಶಾಹಿ ಈದ್ಗಾ ಮಸೀದಿ, ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ ಮತ್ತು ಶ್ರೀಕೃಷ್ಣ ಜನ್ಮಭೂಮಿ ಸೇವಾ ಸಂಸ್ಥಾನವನ್ನು ಪ್ರಕರಣದಲ್ಲಿ ಭಾಗಿ ಮಾಡಲಾಗಿದ್ದು, ಮೇ 6 ರಂದು ಕೋರ್ಟ್ ವಿಚಾರಣೆ ಅಂತ್ಯಗೊಳಿಸಿತ್ತು.

    ಅರ್ಜಿಯಲ್ಲಿ ಏನಿತ್ತು?
    ಶಾಹಿ ಈದ್ಗಾ ಮಸೀದಿಯನ್ನು ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ 1669-70ರಲ್ಲಿ ಶ್ರೀಕೃಷ್ಣನ ಜನ್ಮಸ್ಥಳದ ಸಮೀಪವಿರುವ ಕತ್ರಾ ಕೇಶವ್ ದೇವ್ ದೇವಸ್ಥಾನದ ಬಳಿ ನಿರ್ಮಿಸಲಾಗಿದೆ. 13.37 ಎಕರೆ ಜಾಗದಲ್ಲಿ ಹರಡಿರುವ ಶ್ರೀಕೃಷ್ಣ ಜನ್ಮಭೂಮಿ ದೇವಸ್ಥಾನದ ಒಂದು ಭಾಗವನ್ನು ಕೆಡವಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ. ಈ ಜಾಗದ ಸಂಪೂರ್ಣ ಹಕ್ಕು ಭಗವಾನ್ ಶ್ರೀಕೃಷ್ಣ ವಿರಾಜಮಾನರಿಗೆ ನೀಡಬೇಕು. ಹೀಗಾಗಿ ಶಾಹಿ ಈದ್ಗಾ ಮಸೀದಿಯನ್ನು ತೆರವು ಮಾಡಿ ಮಂದಿರಕ್ಕೆ ಭೂಮಿಯನ್ನು ವಾಪಸ್ ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮಥುರಾದ ಕೃಷ್ಣ ಜನ್ಮಭೂಮಿ, ಶಾಹಿ ಈದ್ಗಾ ಮಸೀದಿ ವಿವಾದ – 4 ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಲು ಸೂಚನೆ

    ಮಥುರಾದ ಕೃಷ್ಣ ಜನ್ಮಭೂಮಿ, ಶಾಹಿ ಈದ್ಗಾ ಮಸೀದಿ ವಿವಾದ – 4 ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಲು ಸೂಚನೆ

    ಲಕ್ನೋ: ಮಥುರಾದ ಕೃಷ್ಣ ಜನ್ಮಭೂಮಿ – ಶಾಹಿ ಈದ್ಗಾ ಮಸೀದಿ ವಿವಾದ ಪ್ರಕರಣದ ಬಗ್ಗೆ ಅಲಹಾಬಾದ್ ಹೈಕೋರ್ಟ್ ವಿಚಾರಣೆ ನಡೆಸಿ ನಾಲ್ಕು ತಿಂಗಳಲ್ಲಿ ತೀರ್ಪು ನೀಡುವಂತೆ ಮಥುರಾ ಕೋರ್ಟ್‍ಗೆ ಸೂಚಿಸಿದೆ.

    ಶಾಹಿ ಈದ್ಗಾ ಮಸೀದಿಯಿರುವ ಭೂಮಿ ಕೃಷ್ಣ ಜನ್ಮಭೂಮಿಗೆ ಸೇರಿದ್ದು, ಮಸೀದಿ ತೆರವು ಮಾಡಬೇಕು ಎನ್ನುತ್ತಾ ಹಿಂದೂ ಆರ್ಮಿಯ ಮನೀಶ್ ಯಾದವ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ವೇಳೆ ಸುನ್ನಿ ವಕ್ಫ್ ಬೋರ್ಡ್ ಸೇರಿ ಇತರೆ ಪಾರ್ಟಿಗಳು ಗೈರಾಗಿದ್ದರು. ಹೀಗಾಗಿ ಇದಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ನಾಲ್ಕು ತಿಂಗಳಲ್ಲಿ ನಡೆಸಲು ಮಥುರಾ ಕೋರ್ಟ್‍ಗೆ ಅಲಹಾಬಾದ್ ಹೈಕೋರ್ಟ್ ಸೂಚನೆ ನೀಡಿದೆ. ಇದನ್ನೂ ಓದಿ: ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯ

    ವಕೀಲೆ ರಂಜನಾ ಅಗ್ನಿಹೋತ್ರಿ ಮತ್ತು ಇತರ ಆರು ಮಂದಿ ಕಳೆದ ವರ್ಷ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಈ ಪ್ರಕರಣದ ಕುರಿತಾಗಿ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದರು. ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್, ಶಾಹಿ ಈದ್ಗಾ ಮಸೀದಿ, ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್ ಮತ್ತು ಶ್ರೀ ಕೃಷ್ಣ ಜನ್ಮಭೂಮಿ ಸೇವಾ ಸಂಸ್ಥಾನವನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಶ್ರೀ ಕೃಷ್ಣ ಜನ್ಮಭೂಮಿಯ 13.37 ಎಕರೆ ಭೂಮಿಯನ್ನು ಬಿಡುಗಡೆ ಮಾಡುವಂತೆ ಮತ್ತು ಜನ್ಮಭೂಮಿಯ ಆವರಣದಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ತೆಗೆದುಹಾಕುವಂತೆ ಅರ್ಜಿಯಲ್ಲಿ ಮನವಿ ಸಲ್ಲಿಸಲಾಗಿದೆ. ಇದನ್ನೂ ಓದಿ: ಇನ್ನು ಮುಂದೆ ಬಲವಂತದ ಮತಾಂತರ ಅಪರಾಧ: ಕಾಯ್ದೆಯಲ್ಲಿ ಏನಿದೆ?

    ಟ್ರಸ್ಟ್‌ನ ಭೂಮಿಯಲ್ಲಿ ನಿರ್ಮಿಸಲಾದ ಈದ್ಗಾವನ್ನು ಅಕ್ರಮ ಎಂದು ಘೋಷಿಸಿ ಅದನ್ನು ಕೆಡವಲು ಮತ್ತು ಸಂಪೂರ್ಣ ಭೂಮಿಯನ್ನು ಡಿ ಫ್ಯಾಕ್ಟೋ ಮಾಲೀಕ ಭಗವಾನ್ ಶ್ರೀ ಕೃಷ್ಣ ವಿರಾಜಮಾನರಿಗೆ ಹಸ್ತಾಂತರಿಸುವಂತೆ ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿವಾದಿತ ಸ್ಥಳವನ್ನು ಅಗೆಯುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.

    ಹಿಂದೂಗಳ ಪ್ರಕಾರ ಈ ಮಸೀದಿಯನ್ನು ಮೊಘಲ್ ದೊರೆ ಔರಂಗಜೇಬ್ ಆದೇಶದ ಮೇರೆಗೆ 1669 ರಿಂದ 70ರ ಅವಧಿಯಲ್ಲಿ ಖತ್ರಾ ಕೇಶವ್ ದೇವ್ ಮಂದಿರದ ಸಮೀಪದ 13.37 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದೆ. ಇದು ಕೃಷ್ಣ ಜನ್ಮಸ್ಥಳಕ್ಕೆ ಸನಿಹವಿದೆ. ಹೀಗಾಗಿ ಈ ಮಸೀದಿಯನ್ನು ತೆರವು ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

  • ಮಸೀದಿ ತೆರವುಗೊಳಿಸಿ ಶ್ರೀಕೃಷ್ಣ ಜನ್ಮಭೂಮಿ ವಶ ಕೋರಿದ್ದ ಅರ್ಜಿ ವಜಾ

    ಮಸೀದಿ ತೆರವುಗೊಳಿಸಿ ಶ್ರೀಕೃಷ್ಣ ಜನ್ಮಭೂಮಿ ವಶ ಕೋರಿದ್ದ ಅರ್ಜಿ ವಜಾ

    ಮಥುರಾ: ಶ್ರೀ ಕೃಷ್ಣ ಜನ್ಮಭೂಮಿಯಾದ ಮಥುರಾದಲ್ಲಿ ನಿರ್ಮಾಣಗೊಂಡಿದೆ ಎನ್ನಲಾದ ಈದ್ಗಾ ಮಸೀದಿ ತೆರವುಗೊಳಿಸಬೇಕೆಂದು ಸಲ್ಲಿಕೆಯಾದ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.

    1991ರ ಪ್ರಾರ್ಥನಾ ಸ್ಥಳಗಳ (ವಿಶೇಷ ನಿಯಮಾವಳಿ) ಕಾಯ್ದೆಯ ಪ್ರಕಾರ ಪ್ರಾರ್ಥನಾ ಮಂದಿರಗಳ ಬದಲಾವಣೆ ಮಾಡಲು ಅಸಾಧ್ಯ. ಹೀಗಾಗಿ ಅರ್ಜಿಯನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಮಥುರಾ ಜಿಲ್ಲಾ ಸಹಾಯಕ ನ್ಯಾಯಾಧೀಶ ಛಯ್ಯಾ ಶರ್ಮಾ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

    ಕೋರ್ಟ್‌ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀ ಕೃಷ್ಣ ಜನ್ಮಸ್ಥಾನ ಪರ ಹೋರಾಟದ ಭಾಗವಾದ ಅಖಾಡ ಪರಿಷತ್‌ ಅಧ್ಯಕ್ಷ ಮಹಾಂತ್‌ ನರೇಂದ್ರ ಗಿರಿ,  ಅ.15ರಂದು ಕೋರ್ಟ್‌ ಆದೇಶದ ಸಂಬಂಧ ಸಭೆ ನಡೆಯಲಿದೆ. ಅಲ್ಲಿ ಮಥುರಾದ ಶ್ರೀಕೃಷ್ಣ ಜನ್ಮಸ್ಥಾನ ವಶಕ್ಕೆ ಅಗತ್ಯವಿರುವ ಹೋರಾಟದ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಅಯೋಧ್ಯೆಯ ರಾಮ ದೇವಾಲಯವಿದ್ದ ಜಾಗದಲ್ಲಿ ಬಾಬ್ರಿ ಮಸೀದಿ ನಿರ್ಮಾಣವಾಗಿದೆ ಎಂದು ಸುಪ್ರೀಂಕೋರ್ಟ್‌ ಐತಿಹಾಸಿಕಾ ತೀರ್ಪು ನೀಡಿದ ಬಳಿಕ ಈ ಅರ್ಜಿ ಸಲ್ಲಿಕೆಯಾಗಿತ್ತು.

    ಯುಪಿ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಮತ್ತು ಶಾಹಿ ಈದ್ಗಾ ಟ್ರಸ್ಟ್​ನ ನಿರ್ವಹಣಾ ಸಮಿತಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.

    ಅರ್ಜಿಯಲ್ಲಿ ಏನಿತ್ತು?
    ಮಥುರಾದ ಕೃಷ್ಣ ಜನ್ಮಭೂಮಿ ಪ್ರದೇಶ ಹಿಂದೂಗಳಿಗೆ ಸೇರಿದೆ. ಕೃಷ್ಣನ ಭಕ್ತರು ಮತ್ತು ಹಿಂದೂ ಸಮುದಾಯದವರಿಗೆ ಇದು ಪವಿತ್ರ ಸ್ಥಳವಾಗಿದೆ. 1968ರ ರಾಜಿ ಪತ್ರವನ್ನು ಒಪ್ಪಲಾಗದು.

    ಕೆಲವು ಮುಸ್ಲಿಮರ ಸಹಾಯದಿಂದ ಈದ್ಗಾ ಟ್ರಸ್ಟ್ ಶ್ರೀ ಕೃಷ್ಣ ಜನಂಸ್ಥಾನ್ ಟ್ರಸ್ಟ್ ಮತ್ತು ದೇವತೆಗೆ ಸೇರಿದ ಭೂಮಿಯನ್ನು ಅತಿಕ್ರಮಣ ಮಾಡಿ ಈದ್ಗಾ ಮಸೀದಿ ನಿರ್ಮಾಣ ಮಾಡಲಾಗಿದೆ. ಕೃಷ್ಣ ಜನಿಸಿದ ಸ್ಥಳವನ್ನು ʼಕತ್ರಾ ಕೇಶವ್ ದೇವ್’ ಎಂದು ಗುರುತಿಸಲಾಗಿದೆ. ಅಯೋಧ್ಯೆಯಂತೆ ಇಲ್ಲೂ ಸಹ ಶ್ರೀಕೃಷ್ಣನ ಜನ್ಮಸ್ಥಳವು ಈದ್ಗಾ ಮಸೀದಿ ಟ್ರಸ್ಟ್‌ನ ನಿರ್ವಹಣಾ ಸಮಿತಿ ರಚಿಸಿರುವ ಸಂರಚನೆಯ ಕೆಳಗೆ ಇದೆ.

    ಮಥುರಾದಲ್ಲಿನ ಕೃಷ್ಣ ದೇಗುಲವನ್ನು ಮುಘಲ್ ದೊರೆ ಔರಂಗಜೇಬ್ ಧ್ವಂಸಗೊಳಿಸಿದ್ದ ಎಂಬುದ್ದಕ್ಕೆ ಇತಿಹಾಸದಲ್ಲಿ ಸಾಕ್ಷ್ಯಗಳು ಸಿಗುತ್ತದೆ. ಕೃಷ್ಣ ಜನ್ಮಭೂಮಿಯಲ್ಲಿದ್ದ ದೇಗುಲವೂ ಸೇರಿದಂತೆ ಅನೇಕ ಹಿಂದೂ ದೇಗುಲಗಳನ್ನು ಔರಂಗಜೇಬ್ ಧ್ವಂಸಗೊಳಿಸಿದ್ದ, ಹೀಗಾಗಿ ಕೃಷ್ಣ ಜನ್ಮಭೂಮಿಯ 13.37 ಎಕರೆ ಪ್ರದೇಶ ಹಿಂದೂಗಳಿಗೆ ಸೇರಿದೆ. ಹೀಗಾಗಿ ಕೃಷ್ಣ ಜನ್ಮಭೂಮಿಯಿಂದ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸಿ ಈ ಜಾಗವನ್ನು ಹಿಂದೂಗಳಿಗೆ ನೀಡಬೇಕೆಂದು ಮನವಿ ಮಾಡಲಾಗಿತ್ತು.