Tag: krishi mela

  • ಧಾರವಾಡ ಕೃಷಿ ಮೇಳಕ್ಕೆ ತೆರೆ – ನಾಲ್ಕೇ ದಿನದಲ್ಲಿ 23.7 ಲಕ್ಷ ಜನರ ಭೇಟಿ

    ಧಾರವಾಡ ಕೃಷಿ ಮೇಳಕ್ಕೆ ತೆರೆ – ನಾಲ್ಕೇ ದಿನದಲ್ಲಿ 23.7 ಲಕ್ಷ ಜನರ ಭೇಟಿ

    ಧಾರವಾಡ: ಜಿಲ್ಲೆಯಲ್ಲಿರುವ ಕೃಷಿ ವಿಶ್ವವಿದ್ಯಾಲಯದ (Agriculture University) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೃಷಿ ಮೇಳಕ್ಕೆ ಮಂಗಳವಾರ (ಸೆ.16) ತೆರೆಬಿದ್ದಿದ್ದು, ನಾಲ್ಕೇ ದಿನದಲ್ಲಿ 23.7 ಲಕ್ಷ ಜನರು ಭೇಟಿ ನೀಡಿದ್ದಾರೆ.

    ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಪ್ರತಿವರ್ಷ ನಡೆಯುವ ಕೃಷಿ ಮೇಳ ಇಡೀ ರಾಜ್ಯದಲ್ಲೇ ಹೆಸರುವಾಸಿ. ಇದನ್ನು ರೈತರ ಜಾತ್ರೆ ಎಂದೇ ಕರೆಯುತ್ತಾರೆ. ಈ ವರ್ಷ ಸೆ.13ರಿಂದ ಸೆ.16ರವರೆಗೆ ಕೃಷಿ ಮೇಳ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದಾಖಲೆಯ ಜನರು ಭೇಟಿ ನೀಡಿದ್ದಾರೆ.ಇದನ್ನೂ ಓದಿ: ದುಂಬಿ ಕೀಟಕ್ಕೆ ಚಿಪ್‌ ಅಳವಡಿಸಿ ಬೇಹುಗಾರಿಕೆ – ರಕ್ಷಣಾ ವ್ಯವಸ್ಥೆ, ಸೇನೆಗೆ ಸಹಕಾರಿ

    ನಾಲ್ಕು ದಿನಗಳ ಕಾಲ ನಡೆದ ಈ ಕೃಷಿ ಮೇಳಕ್ಕೆ ಬರೋಬ್ಬರಿ 23.74 ಲಕ್ಷ ಜನ ಭೇಟಿ ನೀಡಿದ್ದರು. ಮೊದಲ ದಿನ ಶನಿವಾರ (ಸೆ.13) 3.65 ಲಕ್ಷ ಜನ, ಎರಡನೇ ದಿನ ಭಾನುವಾರ (ಸೆ.14) 7.74 ಲಕ್ಷ, ಮೂರನೇ ದಿನ ಸೋಮವಾರ (ಸೆ.15) 8.6 ಲಕ್ಷ ಹಾಗೂ ಕೊನೆಯ ದಿನ ಮಂಗಳವಾರ (ಸೆ.16) 3.75 ಲಕ್ಷ ಜನ ಸೇರಿ ಒಟ್ಟು 23.74 ಲಕ್ಷ ಜನ ಕೃಷಿ ಮೇಳಕ್ಕೆ ಭೇಟಿ ನೀಡಿದ್ದಾರೆ.

  • ಶ್ವಾನಕ್ಕೆ ಶ್ವಾನದಿಂದಲೇ ರಕ್ತದಾನ

    ಶ್ವಾನಕ್ಕೆ ಶ್ವಾನದಿಂದಲೇ ರಕ್ತದಾನ

    ಧಾರವಾಡ: ಕೃಷಿ ಮೇಳದಲ್ಲಿ(Krishi Mela) ಶ್ವಾನವೊಂದಕ್ಕೆ ಶ್ವಾನವೇ(Dog) ರಕ್ತದಾನ(Blood Donation) ಮಾಡಿ ಸುದ್ದಿಯಾಗಿದೆ.

    ಧಾರವಾಡ(Dharawada) ಕೃಷಿ ಮೇಳಕ್ಕೆ ಆಗಮಿಸಿರುವ ಡಾಗ್ ಸ್ಕ್ವಾಡ್ ʼಮಾಯಾʼಗೆ ಅನಾರೋಗ್ಯ ಹಿನ್ನೆಲೆಯಲ್ಲಿ ರಕ್ತದ ಅವಶ್ಯಕತೆ ಇತ್ತು. ಈ ಹಿನ್ನೆಲೆಯಲ್ಲಿ ರೆಸ್ಕ್ಯೂ ಟೀಂ ಸದಸ್ಯರಾಗಿರುವ ಸೋಮು ಅವರ ಜರ್ಮನ್ ಶೆಫರ್ಡ್ ʼಚಾರ್ಲಿʼ ರಕ್ತ ನೀಡಿದೆ. ಇದನ್ನೂ ಓದಿ: ಮಗಳ ನಿಶ್ಚಿತಾರ್ಥದ ಊಟಕ್ಕೆ ಮನೆಯಲ್ಲಿ ಸಾಕಿದ್ದ ಹಸುವೇ ಬಲಿ

    ಕೃಷಿ ವಿಶ್ವವಿದ್ಯಾಲಯ ವೈದ್ಯಕೀಯ ಸಿಬ್ಬಂದಿ ಯಶಸ್ವಿಯಾಗಿ ರಕ್ತದಾನ ಮಾಡಿಸಿದ್ದಾರೆ. ಎರಡನೇ ಬಾರಿ ರಕ್ತದಾನ ಮಾಡುವ ಮೂಲಕ ಚಾರ್ಲಿ ಗಮನ ಸೆಳೆದಿದೆ.

    Live Tv
    [brid partner=56869869 player=32851 video=960834 autoplay=true]

  • ಕೃಷಿಮೇಳ-ಫಲಪುಷ್ಪ ಪ್ರದರ್ಶನದಲ್ಲಿ ಕಣ್ಮನ ಸೆಳೆದ ಶಿವಕುಮಾರ ಶ್ರೀಗಳ ಕಲಾಕೃತಿ

    ಕೃಷಿಮೇಳ-ಫಲಪುಷ್ಪ ಪ್ರದರ್ಶನದಲ್ಲಿ ಕಣ್ಮನ ಸೆಳೆದ ಶಿವಕುಮಾರ ಶ್ರೀಗಳ ಕಲಾಕೃತಿ

    ಚಿಕ್ಕಬಳ್ಳಾಪುರ: ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕೃಷಿಮೇಳದಲ್ಲಿ ಶಿವೈಕ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಮರಳಿನ ಪ್ರತಿಮೆ ಎಲ್ಲರ ಮನ ಸೆಳೆಯುತ್ತಿದೆ.

    ಸಾವಯುವ ಮತ್ತು ಸಿರಿಧಾನ್ಯ ಹಾಗೂ ಫಲಪುಷ್ಪ ಪ್ರದರ್ಶನದಲ್ಲಿ ಶ್ರೀಗಳ ಮರಳಿನಲ್ಲಿ ಪ್ರತಿಮೆ ನಿರ್ಮಿಸಲಾಗಿದ್ದು, ಕೃಷಿ ಮೇಳಕ್ಕೆ ಭೇಟಿ ನೀಡಿದ ಅನೇಕರು ಕಲಾಕೃತಿಗೆ ನಮನ ಸಲ್ಲಿಸಿದ್ದಾರೆ. ಮರಳಿನ ಪ್ರತಿಮೆ ಅಷ್ಟೇ ಅಲ್ಲದೆ ತರಕಾರಿಯಲ್ಲಿಯೂ ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳ ಕಲಾಕೃತಿ ಅರಳಿದೆ.

    ಪುಷ್ಪಗಳಲ್ಲಿ ಅರಳಿ ನಿಂತಿರುವ ಕೆಂಪುಕೋಟೆ ಜನಾಕರ್ಷಣೀಯವಾಗಿದೆ. ಮಹಾತ್ಮಾ ಗಾಂಧೀಜಿ ಅವರ ಸಬರಮತಿ ಆಶ್ರಮ, ಭಾರತ ರತ್ನ ಸರ್ ಎ.ವಿಶ್ವೇಶ್ವರಯ್ಯ ಅವರ ಪ್ರತಿಮೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಎರಡು ದಿನಗಳ ಕಾಲ ನಡೆಯುವ ಕೃಷಿ ಮೇಳದಲ್ಲಿ ನೂರಾರು ಕೃಷಿ ಪರಿಕರ ಮಳಿಗೆಗಳು ತೆರೆಯಲಾಗಿದೆ.

    ಕೃಷಿ ಮೇಳದ ನಿಮಿತ್ತ ಎರಡೂ ದಿನ ಬೆಳಿಗ್ಗೆ 7 ಗಂಟೆಯಿಂದಲೂ ಸಂಜೆ 7 ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ. ಈ ಕೃಷಿ ಮೇಳವನ್ನು ಕೃಷಿ ಸಚಿವ ಶಿವಶಂಕರರೆಡ್ಡಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಡಾ. ಸುಧಾಕರ್ ವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv