Tag: Krish

  • ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂತು ಖ್ಯಾತ ನಿರ್ದೇಶಕನ ಹೆಸರು: ಡಿಸಿಪಿ ಪ್ರತಿಕ್ರಿಯೆ

    ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂತು ಖ್ಯಾತ ನಿರ್ದೇಶಕನ ಹೆಸರು: ಡಿಸಿಪಿ ಪ್ರತಿಕ್ರಿಯೆ

    ನ್ನಡವೂ ಸೇರಿದಂತೆ ಸಿನಿಮಾ ರಂಗದಲ್ಲಿ ಡ್ರಗ್ಸ್ (Drugs) ಹಾವಳಿ ಜಾಸ್ತಿಯಾಗಿದೆ. ಕನ್ನಡದ ಕೆಲ ನಟಿಯರು ಈ ಪ್ರಕರಣದಲ್ಲಿ ಬಂಧನವಾಗುತ್ತಿದ್ದಂತೆಯೇ ಸ್ಯಾಂಡಲ್ ವುಡ್ ಡ್ರಗ್ಸ್ ಸಹವಾಸಕ್ಕೆ ಹೋಗುತ್ತಿಲ್ಲ. ಆದರೆ, ತೆಲುಗು ಮತ್ತು ಮಲಯಾಳಂ ಸಿನಿಮಾ ರಂಗದಲ್ಲಿ ಸ್ವತಃ ಪೊಲೀಸರೇ ಕಾರ್ಯಾಚರಣೆಗೆ ಇಳಿಯುವಷ್ಟರ ಮಟ್ಟಿಗೆ ಚಿತ್ರೋದ್ಯಮವನ್ನು ಡ್ರಗ್ಸ್ ಕಾಡುತ್ತಿದೆ. ಇದೀಗ ಡ್ರಗ್ಸ್‍ ಪ್ರಕರಣದಲ್ಲಿ ಪವನ್ ಕಲ್ಯಾಣ್ ರಂಥ ದಿಗ್ಗಜ ನಟರಿಗೆ ನಿರ್ದೇಶನ ಮಾಡಿರುವ ಖ್ಯಾತ ನಿರ್ದೇಶಕನ ಹೆಸರು ಕೇಳಿ ಬಂದಿದೆ.

    ಆಂಧ್ರದ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆದ ಪಾರ್ಟಿಯಲ್ಲಿ ಡ್ರಗ್‍ ಸೇವಿಸಿದ್ದಾರೆ ಎನ್ನುವ ಆರೋಪದಡಿ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ. ಈ ಪ್ರಕರಣ ಚಿತ್ರೋದ್ಯಮದಲ್ಲಿ ಭಾರೀ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಈ ಒಂಬತ್ತು ಜನರಲ್ಲಿ ಖ್ಯಾತ ನಿರ್ದೇಶಕ ಕ್ರಿಶ್ (Krish) ಕೂಡ ಇದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಇವರನ್ನು 8ನೇ ಆರೋಪಿಯನ್ನಾಗಿ ಮಾಡಿದ್ದಾರೆ ಎನ್ನುವ ಸುದ್ದಿಯೂ ಇದೆ.

    ಈ ಕುರಿತಂತೆ ಸ್ವತಃ ತೆಲಂಗಾಣದ (Telangana) ಡಿಸಿಪಿ ವಿನೀತ್ (Vineeth) ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಪೆಡ್ಲರ್ ಅಬ್ಬಾಸ್ ಎನ್ನುವವನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಶ್ವೇತಾ, ಸಂದೀಪ್ ಸೇರಿದಂತೆ ಹಲವರು ತಪ್ಪಿಸಿಕೊಂಡಿದ್ದಾರೆ. ನಿರ್ದೇಶಕ ಕ್ರಿಶ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ಅವರು ಡ್ರಗ್ಸ್ ತೆಗೆದುಕೊಂಡಿದ್ದಾರೋ ಎಲ್ಲವೋ ಎನ್ನುವುದು ತನಿಖೆ ಆಗುತ್ತಿದೆ ಎಂದಿದ್ದಾರೆ ಡಿಸಿಪಿ.

     

    ಕ್ರಿಶ್ ಹೆಸರಾಂತ ಚಿತ್ರಗಳ ನಿರ್ದೇಶಕರು. ಪವನ್ ಕಲ್ಯಾಣ್ ನಟನೆಯ ಹರಿ ಹರ ವೀರ ಮಲ್ಲು ಚಿತ್ರವನ್ನು ಸದ್ಯ ನಿರ್ದೇಶನ ಮಾಡುತ್ತಿದ್ದಾರೆ. ಮಣಿಕರ್ಣಿಕಾ ಸೇರಿದಂತೆ ಭಾರೀ ಬಜೆಟ್ ಚಿತ್ರಗಳನ್ನು ಡೈರೆಕ್ಟ್ ಮಾಡಿದ್ದಾರೆ. ಹೀಗಾಗಿ ಡ್ರಗ್ಸ್ ಪ್ರಕರಣ ಬೇರೆ ಬೇರೆ ತಿರುವುದು ಪಡೆದುಕೊಳ್ಳುತ್ತಿದೆ.

  • ಪ್ರೇಕ್ಷಕರ ಮನಗೆದ್ದ ಹುಲಿರಾಯನ ಕಪಟ ನಾಟಕ!

    ಪ್ರೇಕ್ಷಕರ ಮನಗೆದ್ದ ಹುಲಿರಾಯನ ಕಪಟ ನಾಟಕ!

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೊಸಬರ ತಂಡಗಳು ಅಡಿಗಡಿಗೆ ಪ್ರೇಕ್ಷಕರ ಮನ ಗೆಲ್ಲುವಂಥಾ ಸಿನಿಮಾಗಳನ್ನು ಸೃಷ್ಟಿಸುತ್ತಿವೆ. ಆ ಸಾಲಿನಲ್ಲಿ ಕ್ರಿಶ್ ನಿರ್ದೇಶನದ ‘ಕಪಟ ನಾಟಕ ಪಾತ್ರಧಾರಿ’ ಚಿತ್ರವೂ ಸೇರಿಕೊಂಡಿದೆ. ಈ ಹಿಂದೆ ‘ಹುಲಿರಾಯ’ ಎಂಬ ಚಿತ್ರದ ಮೂಲಕ ನಾಯಕನಾಗಿ ಆರ್ಭಟಿಸಿದ್ದ ಬಾಲು ನಾಗೇಂದ್ರ ಅವರ ಅದ್ಭುತ ನಟನೆ, ಸಣ್ಣ ಸುಳಿವನ್ನೂ ಬಿಟ್ಟು ಕೊಡದಂತೆ ಬೇರೆಯದ್ದೇ ಅನುಭೂತಿಯನ್ನು ಪ್ರತಿ ಪ್ರೇಕ್ಷಕರಲ್ಲಿಯೂ ತುಂಬಿಸುವ ಅಮೋಘವಾದ ಕಥೆಯೊಂದಿಗೆ ಈ ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ನೀಡುತ್ತಿದೆ.

    ಇದು ಕ್ರಿಶ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಮೊದಲ ಚಿತ್ರ. ಹೀಗೆಂದರೆ ನಂಬಲು ತುಸು ಕಷ್ಟವಾಗುವಂಥಾ ಅಚ್ಚುಕಟ್ಟುತನದೊಂದಿಗೆ ಅವರು ಕಪಟ ನಾಟಕ ಪಾತ್ರಧಾರಿಯನ್ನು ರೂಪಿಸಿದ್ದಾರೆ. ಇಲ್ಲಿನ ಕಥೆ ಒಂದು ರೀತಿಯಲ್ಲಿ ವಿಶೇಷವಾಗಿದ್ದರೆ, ನಿರ್ದೇಶಕರು ಅದನ್ನು ನಿರೂಪಣೆ ಮಾಡಿರೋ ರೀತಿ ಮತ್ತೊಂದು ಥರದಲ್ಲಿ ವಿಶಿಷ್ಟವಾಗಿದೆ. ಇದರಲ್ಲಿನ ಪಾತ್ರಗಳಿಗೆ ಬಾಲು ನಾಗೇಂದ್ರ, ಸಂಗೀತಾ ಭಟ್ ಮತ್ತು ಇತರೇ ತಾರಾಗಣ ಜೀವ ತುಂಬಿರೋ ರೀತಿಯಂತೂ ಇಡೀ ಸಿನಿಮಾದ ಪ್ರಮುಖ ಶಕ್ತಿಯೆಂದರೂ ಅತಿಶಯವಲ್ಲ. ಒಟ್ಟಾರೆಯಾಗಿ ಒಂದಕ್ಕೊಂದು ಪೂರಕವಾದ ಎಲ್ಲ ಅಂಶಗಳು ಒಗ್ಗೂಡಿಕೊಂಡು ಕಪಟ ನಾಟಕ ಪಾತ್ರಧಾರಿಯನ್ನು ಪುಷ್ಕಳ ಗೆಲುವಿನತ್ತ ಸರಾಗವಾಗಿಯೇ ಕರೆದೊಯ್ಯುತ್ತಿವೆ.

    ಒಂದು ವರ್ಗವನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಿದರೆ ಒಂದಂಶವನ್ನು ಪ್ರಧಾನವಾಗಿ ಪರಿಗಣಿಸಿದರೆ ಸಾಕಾಗುತ್ತದೆ. ಆದರೆ ನಿರ್ದೇಶಕ ಕ್ರಿಶ್ ಕಪಟ ನಾಟಕ ಪಾತ್ರಧಾರಿ ಎಲ್ಲ ವರ್ಗಗಳ ಪ್ರೇಕ್ಷಕರಿಗೂ ಮೆಚ್ಚುಗೆಯಾಗಬೇಕೆಂಬ ಉದ್ದೇಶದಿಂದಲೇ ಈ ಕಥೆಯನ್ನು ರೂಪಿಸಿದ್ದಾರೆ. ಅದರಲ್ಲಿ ಯಶವನ್ನೂ ಕಂಡಿದ್ದಾರೆ. ಇಲ್ಲಿ ರೋಚಕ ತಿರುವುಗಳಿವೆ, ಹಾರರ್ ಅಂಶಗಳಿವೆ, ಮಾಸ್, ಲವ್, ಸೆಂಟಿಮೆಂಟ್ ಸೇರಿದಂತೆ ಎಲ್ಲವೂ ಇವೆ. ಆದರೆ ಕಥೆ ಎತ್ತ ಹೊರಳಿಕೊಂಡರೂ ಮನೋರಂಜನೆಗೆ ಮಾತ್ರ ಯಾವ ಕಾರಣದಿಂದಲೂ ಕೊರತೆಯಾಗದಂತೆ ಕ್ರಿಶ್ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದಾರೆ. ಆದ ಕಾರಣದಿಂದಲೇ ಇದು ಎಲ್ಲ ವರ್ಗದ ಪ್ರೇಕ್ಷಕರೂ ತಲೆದೂಗಿ ಮೆಚ್ಚಿಕೊಳ್ಳುವಂತೆ ಮೂಡಿ ಬಂದಿದೆ.

  • ಮತ್ತೆ ವೀಡಿಯೋ ಸಾಂಗ್‍ನೊಂದಿಗೆ ಬಂದ ಕಪಟ ನಾಟಕ ಪಾತ್ರಧಾರಿ!

    ಮತ್ತೆ ವೀಡಿಯೋ ಸಾಂಗ್‍ನೊಂದಿಗೆ ಬಂದ ಕಪಟ ನಾಟಕ ಪಾತ್ರಧಾರಿ!

    ಬೆಂಗಳೂರು:ಕಪಟ ನಾಟಕ ಪಾತ್ರಧಾರಿಯ ದರ್ಶನವಾಗಲು ಕೆಲವೇ ಕೆಲ ದಿನಗಳು ಮಾತ್ರ ಬಾಕಿ ಉಳಿದುಕೊಂಡಿವೆ. ಈ ಕ್ಷಣಗಳನ್ನು ಮತ್ತಷ್ಟು ಕಳೆಗಟ್ಟಿಸುವ ಸಲುವಾಗಿಯೇ ಚಿತ್ರತಂಡ ಮತ್ತೊಂದು ವೀಡಿಯೋ ಸಾಂಗ್ ಅನ್ನು ಬಿಡುಗಡೆಗೊಳಿಸಿದೆ. ಇದು ಈ ಹಿಂದೆಯೇ ಬಿಡುಗಡೆಯಾಗಿ ಭಾರೀ ಕ್ರೇಜ್ ಸೃಷ್ಟಿಸಿದ್ದ ‘ಯಾಕೆ ಅಂತ ಗೊತ್ತಿಲ್ಲ ಕಂಡ್ರಿ, ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ’ ಎಂಬ ಹಾಡಿನ ವೀಡಿಯೋ. ಈ ಹಾಡು ಆರಂಭದಲ್ಲಿ ಬಿಡುಗಡೆಯಾದಾಗಲೇ ತಾಜಾ ಸಾಹಿತ್ಯ ಮತ್ತು ವಿಶಿಷ್ಟ ಸೌಂಡಿಂಗ್‍ನ ಸಂಗೀತ ಸಂಯೋಜನೆಯ ಮೂಲಕ ಹಿಟ್ ಆಗಿತ್ತು. ಇದೀಗ ಹೊರ ಬಂದಿರೋ ವೀಡಿಯೋ ಸಾಂಗ್ ಕೂಡಾ ಮತ್ತೊಂದು ಸಲ ಪ್ರೇಕ್ಷಕರನ್ನು ತಾಕಿದೆ. ಈ ಮೂಲಕವೇ ಬಿಡುಗಡೆಯ ಕ್ಷಣಗಳನ್ನು ಮತ್ತಷ್ಟು ನಿರೀಕ್ಷೆಗಳಿಂದ ಶೃಂಗರಿಸುವಲ್ಲಿ ಚಿತ್ರ ತಂಡ ಗೆದ್ದಿದೆ.

    ಇದು ಕ್ರಿಶ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರ. ಇದು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದೇ ಚೆಂದದ ಹಾಡುಗಳ ಮೂಲಕ. ಒಂದಕ್ಕಿಂತ ಒಂದು ಚೆಂದ ಎಂಬಂಥಾ ಹಾಡುಗಳು ವಿಶಿಷ್ಟ ಸಾಹಿತ್ಯದ ಮೂಲಕವೂ ಗಮನ ಸೆಳೆದಿದ್ದವು. ಆ ಸಾಲಿನಲ್ಲಿ ಹಸಿದಾ ಶಿಖನು ಎಂಬ ಹಾಡೂ ಕೂಡಾ ಸೇರಿಕೊಂಡಿದೆ. ಇದೀಗ ಬಂದಿರೋ ಈ ಲಿರಿಕಲ್ ವಿಡಿಯೋ ದ್ಯಷ್ಯಗಳಂತೂ ನೋಡುಗರನ್ನೆಲ್ಲ ಆವರಿಸಿಕೊಳ್ಳುವಂತೆ ಮೂಡಿ ಬಂದಿದೆ. ಇದರಲ್ಲಿ ನಾಯಕ ಬಾಲು ನಾಗೇಂದ್ರ ಮತ್ತು ನಾಯಕಿ ಸಂಗೀತಾ ಭಟ್ ಚೆಂದದ ಲುಕ್ಕುಗಳಲ್ಲಿ ಕಂಗೊಳಿಸಿದ್ದಾರೆ. ಈ ಮೂಲಕ ಕಪಟ ನಾಟಕ ಪಾತ್ರಧಾರಿಯ ಹಾಡುಗಳ ಹವಾ ಅಡೆತಡೆಯಿಲ್ಲದೆ ಮುಂದುವರೆದಿದೆ.

    ಇದು ಕ್ರಿಶ್ ನಿರ್ದೇಶನದ ಮೊದಲ ಚಿತ್ರ. ಇದರ ಹಿಂದೆ ಶಶಕ್ತವಾದ ಪ್ರತಿಭಾವಂತರ ತಂಡವಿದೆ. ಈ ಹಿಂದೆ ‘ಕಡ್ಡಿಪುಡಿ’ ಮುಂತಾದ ಚಿತ್ರಗಳಲ್ಲಿ ವಿಲನ್ ರೋಲ್ ಮಾಡುತ್ತಲೇ ‘ಹುಲಿರಾಯ’ ಚಿತ್ರದ ಮೂಲಕ ನಾಯಕನಾಗಿ ಅಬ್ಬರಿಸಿದ್ದ ಬಾಲು ನಾಗೇಂದ್ರ ಈ ಸಿನಿಮಾ ನಾಯಕ. ಆಟೋ ಚಾಲಕನೊಬ್ಬನ ಬದುಕಿನ ಹಿನ್ನೆಲೆಯಲ್ಲಿ ಹಾಡುಗಳಷ್ಟೇ ಡಿಫರೆಂಟಾದ ಕಥೆಯನ್ನು ಕಪಟನಾಟಕ ಪಾತ್ರಧಾರಿಯ ಮೂಲಕ ನಿರ್ದೇಶಕ ಕ್ರಿಶ್ ಹೇಳಲಣಿಯಾಗಿದ್ದಾರೆ. ಸಂಗೀತಾ ಭಟ್ ಬಹುಕಾಲದ ನಂತರ ಕಪಟನಾಟಕ ಪಾತ್ರಧಾರಿಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಚಾಣಕ್ಯ, ಅನಿರುದ್ಧ್ ಶಾಸ್ತ್ರಿ ಮತ್ತು ವೇಣು ಹಸ್ರಾಳಿ ಇದರ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದರೆ, ಪರಮೇಶ್ ಛಾಯಾಗ್ರಹಣ ಮತ್ತು ಶ್ರೀಕಾಂತ್ ಸಂಕಲನ ಈ ಚಿತ್ರಕ್ಕಿದೆ. ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿರೋ ಈ ಚಿತ್ರ ನವೆಂಬರ್ 8ರಂದು ತೆರೆಗಾಣುತ್ತಿದೆ.

  • ಟ್ರೇಲರ್ ಮೂಲಕ ನಡುಕ ಹುಟ್ಟಿಸಿದ ಕಪಟನಾಟಕ ಪಾತ್ರಧಾರಿ!

    ಟ್ರೇಲರ್ ಮೂಲಕ ನಡುಕ ಹುಟ್ಟಿಸಿದ ಕಪಟನಾಟಕ ಪಾತ್ರಧಾರಿ!

    ಬೆಂಗಳೂರು: ಬಾಲು ನಾಗೇಂದ್ರ ನಾಯಕನಾಗಿ ನಟಿಸಿರೋ ‘ಕಪಟನಾಟಕ’ ಪಾತ್ರಧಾರಿ ಚಿತ್ರ ಒಂದರ ಹಿಂದೊಂದರಂತೆ ಬಿಡುಗಡೆಯಾಗಿದ್ದ ಹಾಡುಗಳೊಂದಿಗೆ ಪ್ರೇಕ್ಷಕರನ್ನು ತಲುಪಿಕೊಂಡಿತ್ತು. ಈ ಕಾರಣದಿಂದಲೇ ಈ ಸಿನಿಮಾ ಸುತ್ತ ಒಂದಷ್ಟು ಕೌತುಕಗಳಿಗೂ ಜೀವ ಬಂದಂತಾಗಿತ್ತು. ಇದೀಗ ಕ್ರಿಶ್ ನಿರ್ದೇಶನದ ‘ಕಪಟನಾಟಕ’ ಪಾತ್ರಧಾರಿಯ ಟ್ರೇಲರ್ ಬಿಡುಗಡೆಯಾಗಿದೆ. ಇದರಲ್ಲಿಯೇ ಪ್ರೇಕ್ಷಕರ ಎಣಿಕೆಯೂ ಮಿಗಿಲಾದ ಕಥೆಯ ಸುಳಿವುಗಳು ಅನಾವರಣಗೊಂಡಿದೆ. ಇದನ್ನೂ ಓದಿ:  ಕಪಟನಾಟಕ ಪಾತ್ರಧಾರಿಯಾಗಿ ಹಾಡಾದ ಹುಲಿರಾಯ!

    ಬಾಲು ನಾಗೇಂದ್ರ ‘ಹುಲಿರಾಯ’ ಚಿತ್ರದ ನಂತರದಲ್ಲಿ ತಮಗೊಪ್ಪುವ ಕಥೆಗಾಗಿ ತೀವ್ರ ಹುಡುಕಾಟ ನಡೆಸಿ, ಬಂದ ಹಲವಾರು ಅವಕಾಶಗಳಲ್ಲಿ ‘ಕಪಟನಾಟಕ’ ಪಾತ್ರಧಾರಿಯನ್ನು ಮಾತ್ರವೇ ಒಪ್ಪಿಕೊಂಡಿದ್ದಾರೆ. ಅಷ್ಟೆಲ್ಲ ಅಳೆದೂ ತೂಗಿ ಅವರು ಈ ಕಥೆಯನ್ನೇ ಏಕೆ ಒಪ್ಪಿಕೊಂಡಿದ್ದಾರೆಂಬುದಕ್ಕೆ ಈ ಟ್ರೇಲರ್‍ನಲ್ಲಿ ಸಾಕ್ಷಿಗಳು ಸಿಕ್ಕಿವೆ. ಸಿಕ್ಕ ಕೆಲಸಗಳನ್ನೆಲ್ಲ ಬಿಡುತ್ತಾ, ಆಟೋ ಡ್ರೈವರ್ ಆಗಿ ಸೇರಿಕೊಳ್ಳೋ ನಾಯಕನಿಗೆ ಹಬ್ಬಿಕೊಳ್ಳುವ ಪ್ರೀತಿ, ಆತನಿಗೆ ಸುತ್ತಿಕೊಳ್ಳುವ ಒಂದು ಭೀಕರ ಕ್ರೈಂ ಮತ್ತು ಅದರ ಸುತ್ತಾ ಹರಡಿಕೊಳ್ಳುವ ಹಾರರ್ ವೃತ್ತಾಂತದ ಸುತ್ತಾ ಮಜವಾದ ಕಥೆಯನ್ನು ಈ ಚಿತ್ರ ಒಳಗೊಂಡಿದೆ ಎಂಬುದು ಈ ಟ್ರೇಲರ್ ಮೂಲಕವೇ ಸಾಬೀತಾಗಿದೆ. ಇದನ್ನೂ ಓದಿ: ಕಪಟನಾಟಕ ಪಾತ್ರಧಾರಿಯ ವಿಶೇಷ ಲಿರಿಕಲ್ ವೀಡಿಯೋ!

    ಈ ಚಿತ್ರದ ಶೀರ್ಷಿಕೆ, ಹಾಡುಗಳನ್ನು ಕೇಳಿದ ಪ್ರೇಕ್ಷಕರಿಗೆ ಇದರಲ್ಲೇನೋ ಇದೆ ಎಂಬಂಥಾ ಭರವಸೆ ಮೂಡಿಕೊಂಡಿತ್ತು. ಆದರೀಗ ಈ ಟ್ರೇಲರ್ ನೋಡಿದವರೆಲ್ಲ ತಾವು ಎಣಿಸಿದ್ದಕ್ಕಿಂತಲೂ ಮಜವಾದ ಕಥೆ ಈ ಸಿನಿಮಾದಲ್ಲಿರೋದು ಖಾತರಿಯಾಗಿದೆ. ಬಾಲು ನಾಗೇಂದ್ರ ಈ ಹಿಂದೆ ‘ಹುಲಿರಾಯ’ ಚಿತ್ರದಲ್ಲಿ ವಿಶಿಷ್ಟವಾದ ಪಾತ್ರದ ಮೂಲಕ ನಾಯಕನಾಗಿ ಮನಗೆದ್ದಿದ್ದವರು. ಅವರು ‘ಕಪಟನಾಟಕ’ ಪಾತ್ರಧಾರಿಯಾಗಿ ಅದಕ್ಕಿಂತಲೂ ಮಜವಾದ ಪಾತ್ರ ಮಾಡಿರೋದಕ್ಕೂ ಈ ಟ್ರೇಲರ್ ಸಾಕ್ಷಿಯಂತೆ ಮೂಡಿ ಬಂದಿದೆ. ಒಟ್ಟಾರೆಯಾಗಿ ಇತ್ತೀಚಿನ ದಿನಗಳಲ್ಲಿ ಬಂದಿರೋ ಭರವಸೆಯ ಟ್ರೇಲರುಗಳಲ್ಲಿ ‘ಕಪಟನಾಟಕ’ ಪಾತ್ರಧಾರಿಯ ಟ್ರೇಲರ್ ಕೂಡಾ ಒಂದೆಂದು ಪ್ರೇಕ್ಷಕರು ಪರಿಗಣಿಸಿದ್ದಾರೆ.

  • ಕಪಟ ನಾಟಕ ಪಾತ್ರಧಾರಿ: ಲಿರಿಕಲ್ ವಿಡಿಯೋದ ಫೇಸ್‍ಬುಕ್ ಸವಾರಿ!

    ಕಪಟ ನಾಟಕ ಪಾತ್ರಧಾರಿ: ಲಿರಿಕಲ್ ವಿಡಿಯೋದ ಫೇಸ್‍ಬುಕ್ ಸವಾರಿ!

    ಬೆಂಗಳೂರು: ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ನಾಯಕನಾಗಿ ನಟಿಸಿರುವ ಕಪಟನಾಟಕ ಪಾತ್ರಧಾರಿ ಚಿತ್ರವೀಗ ಬಿಡುಗಡೆಯ ಹಂತದಲ್ಲಿದೆ. ಹೆಚ್ಚೇನೂ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿಕೊಂಡಿರೋ ಈ ಸಿನಿಮಾವೀಗ ಭಾರೀ ಸದ್ದು ಮಾಡುತ್ತಿರೋದು ಲಿರಿಕಲ್ ವಿಡಿಯೋ ಒಂದರ ಮೂಲಕ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಲಿರಿಕಲ್ ವೀಡಿಯೋ ಭರಾಟೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಈ ಹಾಡು ಹೀಗೆ ಅಬ್ಬರದಿಂದ ಹರಿದಾಡುತ್ತಿರೋದಕ್ಕೆ ಮೂಲ ಕಾಲರಣ ಅದನ್ನು ರೂಪಿಸಿರುವ ಕ್ರಿಯಾಶೀಲ ರೀತಿ ಮತ್ತು ಅದರ ತುಂಬೆಲ್ಲ ಕಣ್ಣಿಗೆ ಕಟ್ಟಿದಂತೆ ಕಾಣಿಸೋ ಹೊಸತನ.

    ಕ್ರಿಶ್ ನಿರ್ದೇಶನದ ಈ ಚಿತ್ರದ ಯಾಕೆ ಅಂತ ಗೊತ್ತಿಲ್ಲ ಕಣ್ರಿ, ನನ್ನನ್ನು ನೋಡಿ ನಕ್ಬಿಟ್ಳು ಸುಂದ್ರಿ ಅಂತ ಶುರುವಾಗೋ ಈ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾದ ಕ್ಷಣದಿಂದಲೇ ಕ್ರೇಜ್ ಹುಟ್ಟು ಹಾಕಿತ್ತು. ಆದಿಲ್ ನದಾಫ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿದ್ದ ಈ ಹಾಡನ್ನು ಹರಿಚರಣ್ ಶೇಷಾದ್ರಿ ಹಾಡಿದ್ದರು. ವೇಣು ಹಸ್ರಾಳಿ ಸಾಹಿತ್ಯವಿರೋ ಈ ಹಾಡನ್ನು ಚಿತ್ರ ತಂಡ ರೂಪಿಸಿರೋ ರೀತಿ ಮಾತ್ರ ಎಂಥವರೂ ಮೆಚ್ಚಿಕೊಳ್ಳುವಂತಿದೆ. ಈ ಕಾರಣದಿಂದಲೇ ಇದೀಗ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಸಖತ್ ಸೌಂಡ್ ಮಾಡುತ್ತಿದೆ.

    ಈ ಲಿರಿಕಲ್ ವಿಡಿಯೋ ಎಲ್ಲರಿಗೂ ಹಾಟ್ ಫೇವರಿಟ್ ಆಗಿರೋ ಫೇಸ್‍ಬುಕ್ ಥೀಮ್‍ನಲ್ಲಿ ತಯಾರಾಗಿದೆ. ಫೇಸ್‍ಬುಕ್ ಗೋಡೆಯಲ್ಲಿನ ಥರ ಥರದ ಚಿತ್ತಾರಗಳೊಂದಿಗೇ ಈ ಹಾಡು ತೆರೆದುಕೊಳ್ಳುತ್ತೆ. ನಾವು ಫೇಸ್‍ಬುಕ್‍ನಲ್ಲಿ ಯಾವುದೇ ಪೋಸ್ಟ್ ಮಾಡುವಾಗ ಅಕ್ಷರ ಟೈಪ್ ಮಾಡುತ್ತೇವಲ್ಲಾ? ಆ ಪ್ಲೇಸಿನಲ್ಲಿ ಈ ಹಾಡಿನ ಸಾಹಿತ್ಯ ಬರುತ್ತದೆ. ಪೋಸ್ಟ್ ಗಳ ಮೂಲಕವೇ ಇದರ ಸ್ಟಿಲ್ಲುಗಳು ಕದಲುತ್ತವೆ. ಈ ಚಿತ್ರದ ತಾಂತ್ರಿಕ ವರ್ಗದ ವಿವರಗಳನ್ನೂ ಕೂಡಾ ಅವರವರ ಫೇಸ್‍ಬುಕ್ ಖಾತೆಯ ಮೂಲಕವೇ ಪ್ರಚುರಪಡಿಸುವಂಥಾ ನವೀನ ಮಾದರಿಯನ್ನೂ ಇಲ್ಲಿ ಅನುಸರಿಸಲಾಗಿದೆ. ಹೀಗೆ ಫೇಸ್‍ಬುಕ್‍ನೊಳಗೇ ಕದಲೋ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಬಿಟ್ಟಿದೆ. ಅಂದಹಾಗೆ ಈ ಚಿತ್ರದಲ್ಲಿ ಹುಲಿರಾಯ ಚಿತ್ರದ ನಂತರ ಬಾಲು ನಾಗೇಂದ್ರ ಮತ್ತೊಂದು ಮಜವಾದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಂಗೀತಾ ಭಟ್ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ.

  • ಕಿಚ್ಚ ಸುದೀಪ್ ಹೊಸ ಅವತಾರ

    ಕಿಚ್ಚ ಸುದೀಪ್ ಹೊಸ ಅವತಾರ

    ಸ್ಯಾಂಡಲ್ ವುಡ್ ನಲ್ಲಿ ಕೋಟಿಗೊಬ್ಬ ಅಂದಾಕ್ಷಣ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರೇ ಕಣ್ಣ ಮುಂದೆ ಬರುತ್ತಾರೆ. ಕೋಟಿಗೊಬ್ಬ ಆ ಕಾಲದ ಸೂಪರ್ ಹಿಟ್ ಸಿನಿಮಾ ಕೂಡ ಆಗಿತ್ತು. ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 2 ಚಿತ್ರವೂ ಬ್ಲಾಕ್ ಬಸ್ಟರ್ ಹಿಟ್ ಕಂಡಿದ್ದು, ಕಿಚ್ಚನಿಗೆ ಒಂದು ಮಟ್ಟಿನ ಇಮೇಜನ್ನು ತಂದುಕೊಟ್ಟಿತ್ತು. ಇದೀಗ ಅದರದೇ ಮೂರನೇ ಸೀಕ್ವೆಲ್ ನಲ್ಲಿ ಕಿಚ್ಚ ಸುದೀಪ್ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಚಿತ್ರದ ಟೀಸರ್ ನಲ್ಲಿಯೇ ದುಬಾರಿ ಮೇಕ್ ಓವರ್ ಮೂಲಕ ದೊಡ್ಡ ಹೈಪ್ ಕ್ರಿಯೇಟ್ ಮಾಡಿದ್ದ, ಕೋಟಿಗೊಬ್ಬ 3 ಸಿನಿಮಾ ಇದೀಗ ತನ್ನ ಮತ್ತೊಂದು ವಿಚಾರದಿಂದ ಅಭಿಮಾನಿಗಳ ಮುಖವರಳಿಸಿದೆ.

    ಕೋಟಿಗೊಬ್ಬ 3 ಸಿನಿಮಾದಲ್ಲಿನ ಕಿಚ್ಚ ಸುದೀಪ್ ಅವರ ಹೊಸದೊಂದು ಲುಕ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಕಿಚ್ಚ ಸುದೀಪ್ ಆ ಲುಕ್ ನಲ್ಲಿ ಸೇಮ್ ಕ್ರಿಶ್ ಚಿತ್ರದ ಹೃತಿಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲ್ಯಾಕ್ ಕಾಸ್ಟ್ಯೂಮ್, ಲಾಂಗ್ ಹೇರ್, ಕಣ್ಣಿಗೆ ಬಣ್ಣ ಹಚ್ಚಿಕೊಂಡು ಸುದೀಪ್ ದರ್ಶನ ಭಾಗ್ಯ ನೀಡಿದ್ದಾರೆ. ಅಂದಹಾಗೆ ಕೋಟಿಗೊಬ್ಬ 3 ಚಿತ್ರತಂಡ ಫೈಟಿಂಗ್ ಶೂಟಿಂಗ್ ಗೆ ವಿದೇಶಕ್ಕೆ ಹಾರಿದ್ದು, ಚಿತ್ರೀಕರಣವನ್ನು ನಡೆಸುತ್ತಿದೆ. ಇತ್ತೀಚೆಗಷ್ಟೇ ಮಿನರ್ವ ಮಿಲ್ ನಲ್ಲಿ ಮೆಟ್ರೋ ಮಾದರಿಯ ಬೃಹತ್ ಸೆಟ್ ನಿರ್ಮಿಸಿಯೂ ಶೂಟಿಂಗ್ ಮಾಡಲಾಗಿತ್ತು. ಕಿಚ್ಚನ ಈ ಅವತಾರ ಅಭಿಮಾನಿಗಳಲ್ಲಿ ನಾನಾ ಕುತೂಹಲಗಳನ್ನು ಹುಟ್ಟುಹಾಕಿದೆ.