Tag: KRG

  • ಹೆಸರು ಬದಲಿಸಿಕೊಂಡ ಧೀರೇನ್ ರಾಮ್ ಕುಮಾರ್: KRGಯಿಂದ ರೀಲಾಂಚ್

    ಹೆಸರು ಬದಲಿಸಿಕೊಂಡ ಧೀರೇನ್ ರಾಮ್ ಕುಮಾರ್: KRGಯಿಂದ ರೀಲಾಂಚ್

    ಧೀರೇನ್ ರಾಮ್ ಕುಮಾರ್ ಅವರನ್ನು ಧೀರೇನ್ ಆರ್ ರಾಜ್ ಕುಮಾರ್ (Dheeren Ram Kumar) ಆಗಿ ಕೆ.ಆರ್.ಜಿ.ಸ್ಟೂಡಿಯೋಸ್ (KRG) ಮರುಪರಿಚಯಿಸಿದೆ. ಧೀರೇನ್ ಅವರ ಹುಟ್ಟುಹಬ್ಬದ ಅಂಗವಾಗಿ ಒಂದು ಹೊಸ ಚಿತ್ರವನ್ನೂ ಕೂಡ ಕೆ.ಆರ್.ಜಿ ಘೋಷಿಸಿದೆ. ಚಿತ್ರದ ಕುರಿತು ಮಾಹಿತಿಯನ್ನು ಸದ್ಯದಲ್ಲೇ ತಿಳಿಸಲಾಗುವುದು.

    ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶವನ್ನು ಹೊಂದಿರುವ ಕೆ.ಆರ್.ಜಿ ಸಂಸ್ಥೆ, ಇದೀಗ ಈ ನಿಟ್ಟಿನಲ್ಲಿ ಮತ್ತೊಂದು ಮಹತ್ತರ ಹೆಜ್ಜೆಯನ್ನು ಇಟ್ಟಿದೆ. ರತ್ನನ್ ಪ್ರಪಂಚ ಮೂಲಕ ರೋಹಿತ್ ಪದಕಿ,  ಪೌಡರ್ ಚಿತ್ರದ ಮೂಲಕ ಜನಾರ್ದನ್ ಚಿಕ್ಕಣ್ಣ, ಗುರುದೇವ್ ಹೊಯ್ಸಳ ಚಿತ್ರದ ಮೂಲಕ ವಿಜಯ್ ನಾಗೇಂದ್ರ ಮುಂತಾದ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಕೆ.ಆರ್.ಜಿ.ಯದ್ದು.

     

    ಈ‌ ರೀತಿ ಹೊಸ ಪ್ರತಿಭೆಗಳನ್ನು ಪರಿಚಯಿಸಿ, ಕನ್ನಡ ಚಿತ್ರರಂಗವನ್ನು ಬಹು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ಸಂಸ್ಥೆ ಹೊಂದಿದೆ. ಪ್ರಸ್ತುತವಾಗಿ ಬಹು ನಿರೀಕ್ಷಿತ ಉತ್ತರಕಾಂಡ ಚಿತ್ರ ಸೆಟ್ಟೇರಿದ್ದು, ಪೌಡರ್ ಚಿತ್ರದ ಡಬ್ಬಿಂಗ್ ಕಾರ್ಯ ಬಿರುಸಿನಿಂದ ಸಾಗುತ್ತಿದೆ.

  • ತಮಿಳು, ಮಲಯಾಳಂ ಚಿತ್ರರಂಗಕ್ಕೆ ಕೆಆರ್ ಜಿ ಸ್ಟುಡಿಯೋಸ್ ಎಂಟ್ರಿ

    ತಮಿಳು, ಮಲಯಾಳಂ ಚಿತ್ರರಂಗಕ್ಕೆ ಕೆಆರ್ ಜಿ ಸ್ಟುಡಿಯೋಸ್ ಎಂಟ್ರಿ

    ಕೆಆರ್ ಜಿ (KRG) ಸ್ಟುಡಿಯೋಸ್ ಒಂದು ಹೆಸರಾಂತ ಚಿತ್ರ ನಿರ್ಮಾಣ, ವ್ಯಾಪಾರ ಹಾಗೂ ವಿತರಣಾ ಸಂಸ್ಥೆಯಾಗಿದ್ದು, ಹಲವಾರು ಯಶಸ್ವಿ ಚಿತ್ರಗಳನ್ನು ಕೊಡುಗೆಯಾಗಿ ನೀಡಿದೆ‌. ಇದೀಗ ಈ ಸಂಸ್ಥೆ ಬೇರೆ ಭಾಷೆಯ ಚಿತ್ರರಂಗಕ್ಕೂ ಕಾಲಿಡುತ್ತಿದೆ.

    ಸೂಫಿಯುಂ ಸುಜಾತಯುಂ,‌ಹೋಮ್, ಅಂಗಮಲೇ ಬಾಯ್ಸ್ ನಂತಹ ಯಶಸ್ವಿ ಮಲಯಾಳಂ ಚಿತ್ರಗಳನ್ನು ನೀಡಿರುವ Friday Film Houseನೊಂದಿಗೆ “ಪಡಕ್ಕಲಂ” ಎಂಬ ಮಲಯಾಳಂ ಚಿತ್ರಕ್ಕಾಗಿ ಕೆಆರ್ ಜಿ ಕೈ ಜೋಡಿಸಿದೆ.ಈ‌ ಚಿತ್ರಕಥೆಯನ್ನು ಮನು ಸ್ವರಾಜ್  ಬರೆದು ನಿರ್ದೇಶಿಸಲಿದ್ದಾರೆ. ಬೇಸಿಲ್ ಜೋಸೆಫ್ ನಂತಹ ಖ್ಯಾತ ನಿರ್ದೇಶಕರೊಂದಿಗೆ ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿರುವ ಖ್ಯಾತಿ ಇವರದ್ದು.

    ಕೆ ಆರ್ ಜಿ ಸ್ಟುಡಿಯೋಸ್ ಮತ್ತು Friday Film House  ಸಹಯೋಗದಲ್ಲಿ ಈಗಾಗಲೇ ಮೂಡಿ ಬಂದಿರುವ “ಅಬ್ಬಬ್ಬ” ಎಂಬ ಹಾಸ್ಯಭರಿತ ಕನ್ನಡ ಚಿತ್ರ, “ವಾಲಟಿ” ಎಂಬ ಮಲಯಾಳಂ ಚಿತ್ರದ ಕನ್ನಡ ಡಬ್ಬಿಂಗ್ ಹಾಗೂ ಬಿಡುಗಡೆ ಎಲ್ಲೆಡೆ ಸದ್ದು ಮಾಡಿತ್ತು.ಇನ್ನು ಹೆಸರಾಂತ ಹಿಂದಿ ಚಿತ್ರ ನಿರ್ಮಾಣ ಸಂಸ್ಥೆಯಾದ ಟಿ.ವಿ.ಎಫ್ ನೊಂದಿಗೆ “ಪೌಡರ್” ಎಂಬ ಕನ್ನಡ ಚಿತ್ರವನ್ನು ಎದುರು ನೋಡುತ್ತಿದೆ. ಅಷ್ಟೇ ಅಲ್ಲದೆ, Bangalore Days, ಉಸ್ತಾದ್ ಹೊಟೇಲ್ ಖ್ಯಾತಿಯ ಅಂಜಲಿ ಮೆನನ್ ನಿರ್ದೇಶನದಲ್ಲಿ ತಮಿಳು ಚಿತ್ರವೊಂದನ್ನು ನಿರ್ಮಿಸುವ ಮೂಲಕ ತಮಿಳು ಚಿತ್ರರಂಗಕ್ಕೂ ಕಾಲಿಡಲಿದೆ.

     

    ಇನ್ನು ಇಂತಹ ಅನೇಕ ನವೀನ ಕಥಾ ವಸ್ತುವನ್ನು ಚಿತ್ರರಂಗಕ್ಕೆ ಪರಿಚಯಿಸುವ ಮಹೋದ್ದೇಶವನ್ನು ಕೆಆರ್ ಜಿ ಸ್ಟುಡಿಯೋಸ್ ಹೊಂದಿದೆ. ಈ ಮೂಲಕ ಕನ್ನಡ ಚಿತ್ರಗಳ ಮಾರ್ಕೆಟಿಂಗ್ ವ್ಯಾಪ್ತಿಯನ್ನು ಹೊರ ರಾಜ್ಯಗಳಲ್ಲಿ ವಿಸ್ತರಿಸಲು ಹೊರಟಿದೆ.   ಸದ್ಯಕ್ಕೆ ಕೆಆರ್ ಜಿ ಬ್ಯಾನರ್ ನಲ್ಲಿ ಪೌಡರ್, ಉತ್ತರಕಾಂಡ, ಕಿರಿಕೆಟ್ 11, ಕೆ.ಕೆ ಮುಂತಾದ ಚಿತ್ರಗಳು ತಯಾರಾಗುತ್ತಿವೆ.

  • ಕೆ.ಆರ್.ಜಿ ಪಾಲಾಯ್ತು ಮಲಯಾಳಂ ‘ವಾಲಟ್ಟಿ’ ಸಿನಿಮಾ ರೈಟ್ಸ್

    ಕೆ.ಆರ್.ಜಿ ಪಾಲಾಯ್ತು ಮಲಯಾಳಂ ‘ವಾಲಟ್ಟಿ’ ಸಿನಿಮಾ ರೈಟ್ಸ್

    ಲಯಾಳಂನಲ್ಲಿ (Malayalam) ಬಹು ನಿರೀಕ್ಷೆ ಹುಟ್ಟುಹಾಕಿರುವ ಸಿನೆಮಾ ವಾಲಟ್ಟಿ (Valatty). ಇದೊಂದು ವಿಭಿನ್ನ ಹಾಗೂ ಶ್ವಾನಗಳ ಕುರಿತಾದ ಎಮೋಷನಲ್ ಸಿನೆಮಾ ಆಗಿದ್ದು, ಈಗಾಗಲೇ ಪೋಸ್ಟರ್ ಇಂದ ಎಲ್ಲರ ಗಮನ ಸೆಳೆದಿತ್ತು.ಇನ್ನೇನು ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದ್ದು, ಇಂದು (ಜುಲೈ 10) ವಾಲಟ್ಟಿ – ಎ ಟೀಲ್ ಆಫ್ ಟೇಲ್ಸ್ ಸಿನೆಮಾದ ಟ್ರೈಲರ್ ಬಿಡುಗಡೆ ಮಾಡಿದೆ.

    ಸಾಕು ನಾಯಿಗಳ ಬಗ್ಗೆ ತಯಾರಾಗಿರುವ ಈ ಅದ್ಭುತ ಚಿತ್ರದಲ್ಲಿ ಹೃದಯ ಬೆಚ್ಚಗಾಗಿಸುವ ಎಲಿಮೆಂಟ್ಸ್ ತುಂಬಿವೆ. ಈ ಸಿನಿಮಾದ ಮತ್ತೊಂದು ವಿಶೇಷವೆಂದರೆ, ಇದರಲ್ಲಿ ಒಟ್ಟು 9 ನಾಯಿಗಳು ಇದ್ದು, ಸತತವಾಗಿ 2 ವರ್ಷ ಆಕ್ಟಿಂಗ್ ತರಬೇತಿ ಪಡೆದಿವೆ. ನಾಯಿಗಳನ್ನು ಒಳಗೊಂಡ ಈ ಚಿತ್ರದಲ್ಲಿ ಅಮೋಘವಾದ ಸಾಹಸಮಯ ದೃಶ್ಯಗಳನ್ನೂ ನೋಡಬಹುದು.

    ಈಗಾಗಲೇ ಟ್ರೈಲರ್ ಬಿಡುಗಡೆಯಾಗಿದ್ದು ಮೇಕಿಂಗ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು ಪ್ರೇಕ್ಷಕರು ಡೈಲಾಗ್ಸ್ ಗೆ ಫಿದಾ ಆಗಿದ್ದಾರೆ. ವಾಲಟ್ಟಿ ಕನ್ನಡ ಡೈಲಾಗ್ ಡಬ್ಬಿಂಗ್ ಜವಾಬ್ದಾರಿಯನ್ನು ರತ್ನನ್ ಪ್ರಪಂಚ ಸಿನೆಮಾದ ನಿರ್ದೇಶಕ ರೋಹಿತ್ ಪಡಕ್ಕಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇದನ್ನೂ ಓದಿ:ಪವನ್ ಒಡೆಯರ್ ನಿರ್ದೇಶನದ ಬಾಲಿವುಡ್ ಸಿನಿಮಾಗೆ ಟೈಟಲ್ ಫಿಕ್ಸ್

    ಈಗಾಗಲೇ ಅಂಗಾಮಲಿ ಡೈರೀಸ್ ಹಾಗೂ ಹೋಮ್ ಎಂಬ ವಿಭಿನ್ನ ಸಿನೆಮಾಗಳನ್ನು ಮಾಡಿ ಹೊಸ ರೀತಿಯ ಸಿನಿಮಾಗಳಿಗೆ ಬುನಾದಿ ಹಾಡಿದ್ದ ವಿಜಯ್ ಬಾಬುರವರು ವಾಲಟ್ಟಿ – ಎ ಟೇಲ್ ಆಫ್ ಟೇಲ್ಸ್ ಚಿತ್ರವನ್ನು ಮಲಯಾಳಂನಲ್ಲಿ ಪ್ರಸ್ತುತ ಪಡಿಸುತ್ತಿದ್ದಾರೆ.

     

    ನಿರ್ದೇಶಕ ದೇವನ್ (Devan) ಆಕ್ಷನ್ ಕಟ್ ಹೇಳಿರುವ ಚೊಚ್ಚಲ ಚಿತ್ರ ಇದಾಗಿದೆ. ‘ವಾಲಟ್ಟಿ – ಎ ಟೇಲ್ ಆಫ್ ಟೇಲ್ಸ್’ ಚಿತ್ರವು ಜುಲೈ 14 ರಂದು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಜುಲೈ 21 ರಂದು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಚಿತ್ರ ಪ್ರಪಂಚದಾದ್ಯಂತ ಬಿಡುಗಡೆಗೊಳ್ಳಲಿದ್ದು, ಈ ಸಿನಿಮಾವನ್ನು ಕನ್ನಡದ ವಿತರಣಾ ಸಂಸ್ಥೆಯಾದ ಕೆಆರ್‌ಜಿ (KRG) ಸ್ಟುಡಿಯೋಸ್ ವಿಶ್ವದಾದ್ಯಂತ ಚಿತ್ರ ಬಿಡುಗಡೆಯ ಹಕ್ಕುಗಳನ್ನು ಪಡೆದುಕೊಂಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಾಲಿ ಧನಂಜಯ್ ನಟನೆ ‘ಗುರುದೇವ್ ಹೊಯ್ಸಳ’ ಗೆದ್ದಿದೆ : ಕಾರ್ತಿಕ್ ಗೌಡ

    ಡಾಲಿ ಧನಂಜಯ್ ನಟನೆ ‘ಗುರುದೇವ್ ಹೊಯ್ಸಳ’ ಗೆದ್ದಿದೆ : ಕಾರ್ತಿಕ್ ಗೌಡ

    ಡಾಲಿ ಧನಂಜಯ್ (Dali Dhananjay) ನಟನೆಯ ‘ಗುರುದೇವ್ ಹೊಯ್ಸಳ’ (Gurudev Hoysala) ಸಿನಿಮಾ ಕಳೆದ ವಾರವಷ್ಟೇ ರಿಲೀಸ್ ಆಗಿದೆ. ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರೂ ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಆದರೆ, ಚಿತ್ರಮಂದಿರಕ್ಕೆ ಜನರು ಬರುತ್ತಿಲ್ಲ ಎನ್ನುವ ಮಾತೂ ಕೇಳಿ ಬಂದಿತ್ತು. ಈ ಎಲ್ಲದರ ಕುರಿತು ಕೆ.ಆರ್.ಜಿ ನಿರ್ಮಾಣ ಸಂಸ್ಥೆ ಸುದೀರ್ಘವಾಗಿ ಪತ್ರವೊಂದನ್ನು ಬರೆದಿದೆ. ಆ ಪತ್ರ ಹೀಗಿದೆ..

    ಕಳೆದ ವಾರ ಬಿಡುಗಡೆಯಾದ ನಮ್ಮ ಸಂಸ್ಥೆ ನಿರ್ಮಿಸಿರುವ ‘ಗುರುದೇವ್ ಹೊಯ್ಸಳ’ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಅಪಾರ ಮೆಚ್ಚುಗೆ ಸಿಕ್ಕಿದ್ದು, ಚಿತ್ರ ಎರಡನೆಯ ವಾರಕ್ಕೆ ಕಾಲಿಟ್ಟಿದೆ. ರಾಜ್ಯದಲ್ಲಿ ಚುನಾವಣೆಗಳ ಕಾವು ಮತ್ತು ಐಪಿಎಲ್ ಜ್ವರದ ನಡುವೆಯೂ ಚಿತ್ರಕ್ಕೆ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಬಂದು ನೋಡಿ ಗೆಲ್ಲಿಸಿದ್ದಾರೆ. ಈ ಪ್ರಶಂಸೆಯಿಂದ ನಮ್ಮ ತಂಡಕ್ಕೆ ಸಾರ್ಥಕ್ಯದ ಭಾವ ಮೂಡಿದೆ.

    ನಮ್ಮ ಕೆ ಆರ್ ಜಿ ಸ್ಟುಡಿಯೋಸ್ ನ ಮೊದಲ ಚಿತ್ರ ‘ರತ್ನನ್ ಪ್ರಪಂಚ’, ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಅತ್ಯಂತ ಹೆಚ್ಚು ವೀಕ್ಷಣೆಯಾದ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಇದನ್ನೂ ಓದಿ:‘ಕೆಜಿಎಫ್’ ರೈಟರ್ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ಬೋಲ್ಡ್ ಬ್ಯೂಟಿ

    ಈಗ ನಮ್ಮ ಸಂಸ್ಥೆಯ ಎರಡನೆಯ ಚಿತ್ರಕ್ಕೂ ಜನಮನ್ನಣೆ ಸಿಕ್ಕಿರುವುದು ನಮ್ಮೆಲ್ಲರ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮರ್ಯಾದೆ ಹತ್ಯೆ ಎಂಬ ಗಹನವಾದ ಸಮಸ್ಯೆಯ ಕುರಿತ ಈ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ನಮಗೆ ಈ ತರಹದ ಇನ್ನಷ್ಟು ಸೂಕ್ಷ್ಮ ಸಂವೇದನೆಯ ಚಿತ್ರಗಳನ್ನು ನಿರ್ಮಿಸುವುದಕ್ಕೆ ಪ್ರೇರೇಪಿಸಿದೆ.

    ಈ ಎರಡೂ ಚಿತ್ರಗಳ ಯಶಸ್ಸಿನಿಂದ ಸದ್ಯದಲ್ಲೇ ನಮ್ಮ ಸಂಸ್ಥೆಯ ಮೂರನೆಯ ಪ್ರಯತ್ನವಾದ ಉತ್ತರಕಾಂಡ ಚಿತ್ರವನ್ನು ಸದ್ಯದಲ್ಲೇ ಶುರು ಮಾಡಲಿದ್ದೇವೆ. ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ನಡೆಯುವ ಈ ಕಥೆಯಲ್ಲೂ ಧನಂಜಯ ನಟಿಸುತ್ತಿದ್ದಾರೆ. ಇದಲ್ಲದೆ ಇನ್ನಷ್ಟು ಚಿತ್ರಗಳನ್ನು ನಮ್ಮ ಸಂಸ್ಥೆಯಡಿ ನಿರ್ಮಿಸುತ್ತಿದ್ದು, ಸದ್ಯದಲ್ಲೇ ಈ ಬಗ್ಗೆ ಘೋಷಣೆಯಾಗಲಿದೆ.

    ನಮ್ಮ ಈ ಗೆಲುವಿನಲ್ಲಿ ಸಿನಿಮಾ ಪ್ರೇಮಿಗಳು ಮತ್ತು ಮಾಧ್ಯಮದವರ ಪಾತ್ರ ಮಹತ್ವದ್ದಾಗಿದ್ದು, ನಮ್ಮ ಮುಂದಿನ ಕನಸುಗಳಿಗೆ ಅವರೇ ಸ್ಫೂರ್ತಿ ಎಂದರೆ ತಪ್ಪಿಲ್ಲ. ಜತೆಗೆ ವಿಮರ್ಶಕರು, ಸೋಷಿಯಲ್ ಮೀಡಿಯಾದ ಇನ್ಫ್ಲೂಯೆನ್ಸ್ ಪ್ರೋತ್ಸಾಹ ಮತ್ತು ಸಿನಿಮಾ ಪ್ರೀತಿ ಮರೆಯುವುದಕ್ಕೆ ಸಾಧ್ಯವೇ ಇಲ್ಲ.

    ನಮಗೆ ಸಲಹೆ, ಸೂಚನೆ ಮತ್ತು ಅಪರಿಮಿತ ಪ್ರೀತಿ ತೋರಿಸುತ್ತಾ ಬಂದಿರುವ ಸಹೋದರರಾದ ವಿಜಯ್ ಕಿರಗಂದೂರು ಮತ್ತು ನನ್ನ ಎಲ್ಲ ಹಿತೈಷಿಗಳಿಗೂ ನಾನು ಚಿರಋಣಿ. ಇಂದು ಕೆ ಆರ್ ಜಿ ಸ್ಟುಡಿಯೋಸ್ ಮತ್ತು ಕೆ ಆರ್ ಜಿ ಕನೆಕ್ಟ್ಸ್ ಈ ಹಂತಕ್ಕೆ ಬೆಳೆಯುತ್ತಿರುವುದಕ್ಕೆ ನಮ್ಮ ತಂಡದ ಪ್ರೀತಿ ಮತ್ತು ಪರಿಶ್ರಮ ಸಹ ಕಾರಣ. ಮುಂದಿನ ದಿನಗಳಲ್ಲಿ ನಿಮ್ಮನ್ನು ಇನ್ನಷ್ಟು ಮನರಂಜಿಸುವುದಕ್ಕೆ ಉತ್ಸುಕರಾಗಿದ್ದೇವೆ ಎಂದು ಕೆ ಆರ್ ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ (Karthik Gowda)  ಹಾಗೂ ಯೋಗಿ ಜಿ ರಾಜ್ (Yogi G Raj) ತಿಳಿಸಿದ್ದಾರೆ.