Tag: KR Pura

  • ಬೀದಿಬದಿ ವ್ಯಾಪಾರಿಗಳ ಮೇಲೆ ಪೊಲೀಸ್ ದರ್ಪ- ಸೊಪ್ಪನ್ನ ರಸ್ತೆಗೆ ಚೆಲ್ಲಿ ವಿಕೃತಿ!

    ಬೀದಿಬದಿ ವ್ಯಾಪಾರಿಗಳ ಮೇಲೆ ಪೊಲೀಸ್ ದರ್ಪ- ಸೊಪ್ಪನ್ನ ರಸ್ತೆಗೆ ಚೆಲ್ಲಿ ವಿಕೃತಿ!

    ಬೆಂಗಳೂರು: ಪೊಲೀಸರು ಅಂದ್ರೆ ಕಾನೂನು ಸುವ್ಯವಸ್ಥೆ ಕಾಪಾಡುವಂತವರು. ಲಾ & ಆರ್ಡರ್ ಆಗ್ಲಿ ಟ್ರಾಫಿಕ್ ಆಗ್ಲಿ ಎಲ್ಲವನ್ನೂ ವ್ಯವಸ್ಥಿತವಾಗಿ ನೋಡಿಕೊಳ್ಳಲು ಹರಸಾಹಸ ಪಡ್ತಾರೆ. ಆದರೆ ಇಲ್ಲಿ ಪೊಲೀಸರೇ ಅಮಾನವೀಯವಾಗಿ ವರ್ತಿಸಿದ್ದಾರೆ.

    ಹೌದು. ನಗರದಲ್ಲಿ ಬಿರು ಬಿಸಿಲು ಇನ್ನಿಲ್ಲದೇ ಕಾಡುತ್ತಿದೆ. ಇಂತಹ ಬಿಸಿಲಲ್ಲಿಯೂ ತಮ್ಮ ಜೀವನ ನಡೆಸಲು ಬೀದಿ ವ್ಯಾಪಾರಿಗಳು ವ್ಯಾಪಾರ ಮಾಡ್ತಾರೆ. ಇನ್ನು ನಮ್ಮ ಟ್ರಾಫಿಕ್ ಪೊಲೀಸರು ಸಹ ಬಿಸಿಲು ಮಳೆ ಎನ್ನದೇ ಶ್ರಮವಹಿಸ್ತಾರೆ. ಅದ್ರಲ್ಲಿ ನೋ ಡೌಟ್. ಆದರೆ ಕೆಆರ್ ಮಾರ್ಕೆಟ್ ನಲ್ಲಿ (KR Market) ತಳ್ಳುವ ಬಂಡಿ ಮೇಲೆ ಸೀಬೆ ಹಣ್ಣು ಮಾರುತ್ತಿದ್ದ ಹಿರಿಯ ವ್ಯಾಪಾರಿಯ ತಳ್ಳುವ ಗಾಡಿ ತಳ್ಳಿ, ಸೊಪ್ಪಿನ ಚೀಲವನ್ನ ನೆಲಕ್ಕೆ ಚೆಲ್ಲಿದ ವರ್ತನೆಯನ್ನು ಯಾರೂ ಸಹಿಸಲು ಆಗಲ್ಲ. ಆ ಸಂಪೂರ್ಣ ಘಟನೆ ನಿಮ್ಮ ಪಬ್ಲಿಕ್ ಟಿವಿ ಕ್ಯಾಮೆರಾದ ಕಣ್ಣಿಗೆ ಬಿದ್ದಿದೆ.

    ಬೀದಿ ವ್ಯಾಪಾರಿಗಳ ಕಾನೂನಿನ ಪ್ರಕಾರ, ಭಾರತ ದೇಶದ ಪ್ರತಿ ಪ್ರಜೆಗೆ ಬೀದಿಯಲ್ಲಿ ವ್ಯಾಪಾರ ಮಾಡುವ ಹಕ್ಕಿದೆ. ಟ್ರಾಫಿಕ್ ಪೊಲೀಸರಿಗೆ ಏನಾದ್ರೂ ಸಮಸ್ಯೆಯಿದ್ರೆ ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಬೇಕು. ಅದನ್ನ ಬಿಟ್ಟು ಈ ರೀತಿ ದೌರ್ಜನ್ಯ ಎಸಗುವುದು ತಪ್ಪು. ನಮ್ಮ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಘನತೆ ಗೌರವ ಕೊಟ್ಟಿದೆ. ಇಲ್ಲಿ ಬೀದಿ ವ್ಯಾಪಾರಿಗಳ ಘನತೆಗೆ ಧಕ್ಕೆ ಜೊತೆಗೆ ವ್ಯಾಪಾರಿಗಳಿಗೆ ಲಾಸ್ ಆಗಿದೆ. ಇದನ್ನೂ ಓದಿ: ಸೆಕ್ಯೂರಿಟಿ ವೈಫಲ್ಯ ಆಗಿಲ್ಲ, ಅವರವರ ರಕ್ಷಣೆಗೆ ಗನ್ ಇಟ್ಕೊಂಡಿರ್ತಾರೆ: ಡಿಕೆಶಿ

    ಪೊಲೀಸರು ಈ ರೀತಿ ದೌರ್ಜನ್ಯ ಮಾಡ್ತಿರೋದು ಇದೇ ಮೊದಲಲ್ಲ. ನಾವು ಅಲ್ಲಿಂದ ಬೀದಿ ವ್ಯಾಪಾರಿಯನ್ನ ಎತ್ತಿಸಿದ್ವಿ ಎಂದು ಟ್ರಾಫಿಕ್ ಪೊಲೀಸರು ರಾಜಾರೋಷವಾಗಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕ್ತಿದ್ದಾರೆ. ಬೀದಿ ವ್ಯಾಪಾರಿಗಳ ಕಾನೂನಿನ ಪ್ರಕಾರ, ನೋಟಿಸ್ ನೀಡದೇ ಯಾವ ಬೀದಿ ವ್ಯಾಪಾರಿಗಳನ್ನೂ ಎಬ್ಬಿಸುವಂತಿಲ್ಲ. ಬಿಬಿಎಂಪಿ ಪ್ರತಿವಲಯದಲ್ಲೂ ಪಟ್ಟಣ ವ್ಯಾಪಾರ ಸಮಿತಿ ಇರುತ್ತೆ ಬೀದಿ ವ್ಯಾಪಾರದಿಂದ ಸಮಸ್ಯೆಯಾದರೆ ಜಂಟಿ ಆಯುಕ್ತರ ಗಮನಕ್ಕೆ ತರಬೇಕು. ಅದನ್ನ ಬಿಟ್ಟು ಈ ರೀತಿ ದೌರ್ಜನ್ಯ ಅಕ್ಷಮ್ಯ ಎಂದು ಜಿಲ್ಲಾ ಬೀದಿ ಬದಿ ವ್ಯಾಪಾರಿ ಸಂಘದ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.

    ಒಟ್ಟಿನಲ್ಲಿ ಟ್ರಾಫಿಕ್ ಪೊಲೀಸರು ಇರೋದೇ ಯಾವುದೇ ಸಮಸ್ಯೆಗಳು ಆಗದಂತೆ ನೋಡಿಕೊಳ್ಳಲು. ಇಲ್ಲಿ ಇದನ್ನ ಬೇರೆ ರೀತಿ ಹ್ಯಾಂಡಲ್ ಮಾಡಬಹುದಿತ್ತು. ಆದರೆ ಅದನ್ನ ಬಿಟ್ಟು ಈ ರೀತಿ ಬೀದಿ ವ್ಯಾಪಾರಿಗಳ ಮೇಲೆ ದೌರ್ಜನ್ಯ ತಪ್ಪು ಅನ್ನೋದು ಸಾರ್ವಜನಿಕರ ಮಾತು.

  • 1 ಲಕ್ಷ ದಿನಸಿ ಕಿಟ್ ವಿತರಿಸಿದ ಭೈರತಿ ಬಸವರಾಜ್

    1 ಲಕ್ಷ ದಿನಸಿ ಕಿಟ್ ವಿತರಿಸಿದ ಭೈರತಿ ಬಸವರಾಜ್

    ಬೆಂಗಳೂರು: ಲಾಕ್‍ಡೌನ್ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಬಡವರು, ಶ್ರಮಿಕ ವರ್ಗದವರು, ಕೂಲಿ ಕಾರ್ಮಿಕರಿಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಮ್ಮ ಕ್ಷೇತ್ರದ ಒಂದು ಲಕ್ಷ ಕುಟುಂಬಗಳಿಗೆ ಆಹಾರ ಪದಾರ್ಥಗಳ ದಿನಸಿ ಕಿಟ್ ವಿವರಿಸಿದರು.

    ಕೆ.ಆರ್.ಪುರ ಕ್ಷೇತ್ರದ ಕೊತ್ತನೂರಿನ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಅಗತ್ಯ ಬಿದ್ದಲ್ಲಿ ಬಡಜನರಿಗೆ ಇನ್ನೂ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಕ್ಷೇತ್ರದ ಎಲ್ಲರಿಗೂ ಕೊರೊನಾ ಲಸಿಕೆಯನ್ನು ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಹಂತ ಹಂತವಾಗಿ ನೀಡಲಾಗುತ್ತದೆ ಎಂದರು. ಇದನ್ನೂ ಓದಿ: ಇನ್ಮುಂದೆ ಯಾವುದೇ ದಾನ ಸ್ವೀಕರಿಸಲ್ಲ: ಉಪೇಂದ್ರ

    ಕೃಷ್ಣರಾಜಪುರ ಸಾರ್ವಜನಿಕ ಆಸ್ಪತ್ರೆಯನ್ನು 200 ಹಾಸಿಗೆಗಳ ಆಸ್ಪತ್ರೆಗೆ ಉನ್ನತಿಕರಿಸಲು 13 ಕೋಟಿ ರೂ. ವೆಚ್ಚವಾಗಲಿದೆ. ಐಟಿಐ ಆಸ್ಪತ್ರೆಯಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕೇಂದ್ರ ಸರ್ಕಾರ ಅದಕ್ಕೆ ಒಪ್ಪಿಗೆ ನೀಡಿದೆ ಎಂದು ಹೇಳಿದರು.

    ಬಳಿಕ ಮಾತನಾಡಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ, ಈ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ದೇಶದ 130 ಕೋಟಿ ಜನರಿಗೂ ಕೋವಿಡ್ ಲಸಿಕೆಯನ್ನು ನೀಡಲಾಗುವುದು. ಜೂನ್ ಅಂತ್ಯದ ವೇಳೆಗೆ ಕೇಂದ್ರದಿಂದ ರಾಜ್ಯಕ್ಕೆ 50 ಲಕ್ಷ ಡೋಸ್ ಲಸಿಕೆ ನೀಡಲಾಗುತ್ತದೆ. ರಾಜ್ಯ ಸರ್ಕಾರ ಸಹ 15 ಲಕ್ಷ ಡೋಸ್ ಲಸಿಕೆಯನ್ನು ಖರೀದಿಸಲು ಮುಂದಾಗಿದೆ. ಈ ತಿಂಗಳಲ್ಲಿ ಒಟ್ಟು 65 ಲಕ್ಷ ಡೋಸ್‍ನಷ್ಟು ಲಸಿಕೆ ರಾಜ್ಯಕ್ಕೆ ಲಭ್ಯವಾಗಲಿದೆ ಎಂದರು.

    ಕೊರೊನಾ ಲಾಕ್‍ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಕೆ.ಅರ್.ಪುರ ವಿಧಾನಸಭಾ ಕ್ಷೇತ್ರದ ಜನರಿಗೆ ಒಂದು ಲಕ್ಷ ದಿನಸಿ ಕಿಟ್ ನ್ನು ಭೈರತಿ ಬಸವರಾಜ್ ವಿತರಣೆ ಮಾಡುತ್ತಿರುವುದು ಪುಣ್ಯದ ಕೆಲಸ. ಕ್ಷೇತ್ರದ ಜನ ಮತ ಹಾಕುವ ಮೂಲಕ ಅವರಿಗೆ ಆಶೀರ್ವಾದ ಮಾಡಿದ್ದೀರಿ. ಅವರು ನಿಮಗೆ ಇಂತಹ ಸಂದರ್ಭದಲ್ಲಿ ಸಹಾಯಕ್ಕೆ ಬಂದಿದ್ದಾರೆ. ಸದಾ ಜನರ ನಡುವೆ ಇರುವ ಬಸವರಾಜ್ ಅಂತಹವರು ಸಮಾಜಕ್ಕೆ ಅವಶ್ಯಕತೆ ಇದೆ. ಅವರಿಗೆ ತಮ್ಮ ಬೆಂಬಲ ಸದಾ ಇರಲಿ ಎಂದರು.

    ಕೆ.ಆರ್.ಪುರ ವಿಧಾನ ಸಭಾ ಕ್ಷೇತ್ರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಧಾನ ಸಭಾ ಕ್ಷೇತ್ರವಾಗಿದೆ. ಇದನ್ನು ಭೈರತಿ ಬಸವರಾಜ್ ಅವರು ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಈ ಭಾಗದ ಲೋಕಸಭಾ ಸದಸ್ಯನಾಗಿ ಮತ್ತು ಕೇಂದ್ರ ಸಚಿವನಾಗಿ ನನ್ನ ಬೆಂಬಲ, ಸಹಕಾರ ಈ ಕ್ಷೇತ್ರಕ್ಕೆ ಯಾವಾಗಲೂ ಇರುತ್ತದೆ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ನಿಯಂತ್ರಣ ಕುರಿತು ಸಭೆ ಕರೆದಾಗಲ್ಲೆಲ್ಲ ನಾನು ಕೆ.ಅರ್.ಪುರ ಕ್ಷೇತ್ರದ ಬಗ್ಗೆ ಮತ್ತು ಭೈರತಿ ಬಸವರಾಜ ಅವರು ಅಲ್ಲಿ ಕೈಗೊಂಡಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡುತ್ತೇನೆ. ಹೀಗಾಗಿ ಬಸವರಾಜ್ ಅವರ ಕಾರ್ಯವೈಖರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ತಿಳಿದಿದೆ ಎಂದರು.

    ಕೂತ್ತನೂರಿನ ನಂಜುಂಡೇಶ್ವರ ಕಲ್ಯಾಣ ಮಂಟಪ, ವಿಜನಾಪುರದ ಸೈನಿಕ ಭವನ, ಕಲ್ಕರೆಯ ಎನ್.ಅರ್.ಐ ಲೇಔಟ್, ಟಿ.ಸಿ.ಪಾಳ್ಯದ ಸಂತ ಅಂತೋಣಿ ಶಾಲೆ, ಕುರುಡುಸೊಣ್ಣೆನಹಳ್ಳಿಯ ಲೇಕ್ ಮೌಂಟ್ ಶಾಲೆ, ಎಚ್.ಎ.ಎಲ್ ನ ವಿಭೂತಿಪುರ ಶಾಲೆ, ಉದಯ ನಗರದ ಜೈನ ಭವನ, ಎ.ನಾರಾಯಣಪುರದ ಎಮ್.ಇ.ಜಿ ಲೇಔಟ್, ದೇವಸಂದ್ರದ ಕೆಂಪೇಗೌಡ ಕ್ರೀಡಾಂಗಣಗಳಲ್ಲಿ ದಿನಸಿ ಕಿಟ್ ವಿತರಿಸಲಾಯಿತು.

    ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಕೆ.ಅರ್.ಪುರ ಬಿಜೆಪಿ ಅಧ್ಯಕ್ಷ ಶಿವರಾಜ್, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಗೀತಾ ವಿವೇಕಾನಂದ, ಬಿಜೆಪಿ ಹಿರಿಯ ಮುಖಂಡ ಗಣೇಶ, ಬಿಬಿಎಂಪಿ ಮಾಜಿ ಸದಸ್ಯರಾದ ಶ್ರೀಕಾಂತ್, ಜಯಪ್ರಕಾಶ್, ನಾಗರಾಜ್, ಸುರೇಶ್, ರಮೇಶ್, ಅಂತೋಣಿ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಮಾಜಿ ಕಾರ್ಪೋರೇಟರ್ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಮಾಜಿ ಕಾರ್ಪೋರೇಟರ್ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಬೆಂಗಳೂರು: ನಗರದ ಬಸವನಪುರ ವಾರ್ಡ್ ಮಾಜಿ ಕಾರ್ಪೋರೇಟರ್ ಜಯಪ್ರಕಾಶ್ ಅವರ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಮನೆಯ ಕೊಣೆಯಲ್ಲಿ ನೇಣು ಹಾಕಿಕೊಂಡು ಕೆಆರ್ ಪುರ ವಿ. ಕ್ಷೇತ್ರದ ಬಸವನಪುರ ವಾರ್ಡ್‍ನ ಮಾಜಿ ಕಾರ್ಪೋರೇಟರ್ ಜಯಪ್ರಕಾಶ್ ಪತ್ನಿ ವಿನೋದಾ ಆತ್ಮಹತ್ಯೆಗೆ ಶರಣರಾಗಿದ್ದು, ಸ್ಥಳಕ್ಕೆ ಕೆ.ಆರ್.ಪುರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

    ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥರಾಗಿದ್ದ ವಿನೋದಾ ಅವರನ್ನು ಕೂಡಲೇ ಕುಟುಂಬಸ್ಥರು ಭಟ್ಟರಹಳ್ಳಿಯ ಸತ್ಯಸಾಯಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಆತ್ಮಹತ್ಯೆಗೆ ಯಾವುದೇ ನಿಖರ ತಿಳಿದು ಬಂದಿಲ್ಲ. ಇತ್ತೀಚೆಗಷ್ಟೇ ವಿನೋದಾ ಅಪೆಂಡಿಕ್ಸ್ ಆಪರೇಷನ್‍ಗೆ ಒಳಗಾಗಿದ್ದರು ಎನ್ನಲಾಗಿದೆ. ದಂಪತಿಗೆ ಮೂರು ವರ್ಷದ ಮಗುವಿದ್ದು, ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮಾಜಿ ಕಾರ್ಪೋರೇಟರ್ ಆಗಿರುವ ಜಯಪ್ರಕಾಶ್ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರ ಆಪ್ತರಾಗಿದ್ದಾರೆ.

  • ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಫೈರಿಂಗ್- ಬೆಚ್ಚಿ ಬಿದ್ದ ಕೆ.ಆರ್.ಪುರದ ಜನತೆ

    ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಫೈರಿಂಗ್- ಬೆಚ್ಚಿ ಬಿದ್ದ ಕೆ.ಆರ್.ಪುರದ ಜನತೆ

    – ತಡರಾತ್ರಿ ವರೆಗೆ ಅಂಗಡಿ ತೆರೆಯಬೇಡ ಅಂದಿದ್ದಕ್ಕೆ ದಾಳಿ
    – ತಡರಾತ್ರಿ ವರೆಗೆ ಸಮೋಸ ಅಂಗಡಿ ತೆರೆಯಬೇಡ ಅಂದಿದ್ದ ಬಾಬು ಸಹಚರರು

    ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯ ಮೇಲೆ ಅಪರಿಚಿತರು ಗುಂಡು ಹಾರಿಸಿರುವ ಆಘಾತಕಾರಿ ಘಟನೆ ಕೆ.ಆರ್.ಪುರದಲ್ಲಿ ನಡೆದಿದೆ.

    ನಗರದ ಕೆ.ಆರ್.ಪುರ ಪೊಲೀಸ್ ಠಾಣೆಯ ಹತ್ತಿರದ ದರ್ಗಾ ಮಹಲಾ ಬಳಿ ಘಟನೆ ನಡೆದಿದ್ದು. ಉದ್ಯಮಿ ಆಟೋ ಬಾಬು ಮೇಲೆ ಸೋಹೆಲ್ ಅಂಡ್ ಗ್ಯಾಂಗ್ ಫೈರಿಂಗ್ ಮಾಡಿ ಎಸ್ಕೇಪ್ ಆಗಿದೆ. ರಿಯಲ್ ಎಸ್ಟೇಟ್ ಕಚೇರಿಯಲ್ಲಿದ್ದ ವೇಳೆ ಏಕಾಏಕಿ ಫೈರಿಂಗ್ ಮಾಡಿದ್ದು, ಗಂಭೀರವಾಗಿ ಗಾಯಗೊಂಡ ಉದ್ಯಮಿ ಆಟೋ ಬಾಬುನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.’

    ರಿಯಲ್ ಎಸ್ಟೆಟ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಉದ್ಯಮಿ ಬಾಬು ಮೇಲೆ ರಾತ್ರಿ 9.15ಕ್ಕೆ ಇಬ್ಬರು ಯುವಕರು ಗುಂಡಿನ ದಾಳಿ ನಡೆಸಿದ್ದಾರೆ. ಒಬ್ಬ ಗನ್ ಫೈರ್ ಮಾಡಿದರೆ ಮತ್ತೊಬ್ಬ ಲಾಂಗ್ ನಿಂದ ಹಲ್ಲೆ ಮಾಡಿದ್ದಾನೆ. ಬಾಬು ಸ್ನೇಹಿತರೆಲ್ಲ ಗಣೇಶ ವಿಸರ್ಜನೆಗೆ ತೆರಳಿದ್ದು, ಕಚೇರಿಯಲ್ಲಿ ಒಬ್ಬರೆ ಇದ್ದದ್ದನ್ನು ಕಂಡು ದಾಳಿ ಮಾಡಿದ್ದಾರೆ. ಈ ವೇಳೆ ಗನ್ ಫೈರಿಂಗ್ ನಿಂದ ಬಾಬು ತಪ್ಪಿಸಿಕೊಂಡಿದ್ದು, ಕಚೇರಿ ಗಾಜಿಗೆ ಬುಲೆಟ್ ತಾಗಿದೆ. ನಂತರ ಇಬ್ಬರ ದಾಳಿಯಿಂದಲೂ ಬಾಬು ತಪ್ಪಿಸಿಕೊಂಡು ಹೊರ ಓಡಿದ್ದಾರೆ.

    ಗುಂಡಿನ ಶಬ್ದ ಕೇಳಿ ಸ್ಥಳೀಯ ಜನರು ಓಡಿ ಬಂದಿದ್ದು, ಅಷ್ಟರಲ್ಲಿ ಆರೋಪಿಗಳು ಕಾಲ್ಕಿತ್ತಿದ್ದಾರೆ. ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಡಿಸಿಪಿ, ಎಸಿಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಸೋಹೆಲ್ ಸ್ನೇಹಿತ ಮಿರ್ಜಿ ತಡರಾತ್ರಿ ವರೆಗೂ ಸಮೋಸ ಅಂಗಡಿ ತೆರೆಯುತ್ತಿದ್ದ. ಇದನ್ನು ನೋಡಿದ ಆಟೋ ಬಾಬು ಮತ್ತವರ ಕಡೆಯವರು ಅಂಗಡಿ ಮುಚ್ಚುವಂತೆ ಎಚ್ಚರಿಕೆ ನೀಡಿದ್ದರು. ಇದೇ ವಿಚಾರಕ್ಕೆ ಎರಡು ಗ್ಯಾಂಗ್ ನಡುವೆ ಗಲಾಟೆ ನಡೆದು ವೈಮನಸ್ಸು ಉಂಟಾಗಿತ್ತು. ನಿನ್ನೆ ತಡರಾತ್ರಿ ಆಟೋ ಬಾಬು ಆಫೀಸ್ ನಲ್ಲಿದ್ದ ವೇಳೆ ಹೊಂಚು ಹಾಕಿ ಸೋಹೆಲ್ ಹಾಗೂ ಗ್ಯಾಂಗ್ ದಾಳಿ ಮಾಡಿದ್ದು, ಎರಡು ಸುತ್ತು ಗುಂಡು ಹಾರಿಸಿದ್ದಾರೆ. ನಂತರ ಲಾಂಗ್ ನಲ್ಲಿ ಹಲ್ಲೆ ಮಾಡಿದ್ದಾರೆ. ಅಷ್ಟರಲ್ಲೇ ಆಟೋ ಬಾಬು ಎಸ್ಕೇಪ್ ಆಗಿದ್ದಾರೆ. ಐವರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಆಟೋ ಬಾಬು ಸಚಿವ ಭೈರತಿ ಬಸವರಾಜ್ ಗೆ ಅಪ್ತರಾಗಿದ್ದು, ತಡರಾತ್ರಿ ಆಟೋ ಬಾಬು ಮತ್ತು ಸೋಹೆಲ್ ಗ್ಯಾಂಗ್ ನಡುವೆ ಗಲಾಟೆಯಾಗಿದೆ. ಇದೇ ವಿಚಾರಕ್ಕೆ ಐವರ ಗುಂಪಿನಿಂದ ಆಟೋ ಬಾಬು ಮೇಲೆ ಫೈರಿಂಗ್ ಮಾಡಲಾಗಿದೆ. ನಂತರ ಲಾಂಗ್, ಮಚ್ಚುಗಳಿಂದ ಆಟೋ ಬಾಬು ಆಫೀಸ್ ಧ್ವಂಸ ಮಾಡಿ ಪರಾರಿಯಾಗಿದ್ದಾರೆ.

  • ಕನ್ನಡಕಕ್ಕಾಗಿ ಪರದಾಡಿದ ಸಿದ್ದರಾಮಯ್ಯ

    ಕನ್ನಡಕಕ್ಕಾಗಿ ಪರದಾಡಿದ ಸಿದ್ದರಾಮಯ್ಯ

    ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕನ್ನಡಕಕ್ಕಾಗಿ ಪರದಾಡಿದ ಪ್ರಸಂಗ ಇಂದು ಕೆ.ಆರ್.ಪುರದಲ್ಲಿ ನಡೆದಿದೆ.

    ಕೆ.ಆರ್.ಪುರ ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಪರ ಸಿದ್ದರಾಮಯ್ಯ ಅವರು ತೆರೆದ ವಾಹನದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದರು. ಚೆನ್ನಸಂದ್ರಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಹೂವು, ತುಳಸಿ ಹಾರ ಹಾಕಿದರು. ಬಳಿಕ ಹಾರ ತೆಗೆಯುತ್ತಿದ್ದಾಗ ಸಿದ್ದರಾಮಯ್ಯ ಅವರ ಕನ್ನಡಕ ಹಾರಕ್ಕೆ ಸಿಕ್ಕಿಹಾಕಿಕೊಂಡು ಬಿದ್ದಿತ್ತು.

    ಕನ್ನಡಕ ಕೆಳಗೆ ಬೀಳುತ್ತಿದ್ದಂತೆ ಸಿದ್ದರಾಮಯ್ಯ ಅವರು ಹುಡುಕಾಟ ಆರಂಭಿಸಿದರು. ಆಗ ಎಂ.ನಾರಾಯಣಸ್ವಾಮಿ ಅವರು ಹಾರದಲ್ಲಿ ಸಿಲುಕಿದ ಕನ್ನಡಕವನ್ನು ತೆಗೆದುಕೊಟ್ಟರು. ಬಳಿಕ ಕನ್ನಡಕ ಹಾಕಿಕೊಂಡ ಸಿದ್ದರಾಮಯ್ಯ ಅವರು ಭಾಷಣ ಆರಂಭಿಸಿದರು.

    ಈ ಚುನಾವಣೆಯನ್ನು ನಾವು ಬಯಸಿರಲಿಲ್ಲ. ಅನಗತ್ಯವಾಗಿ ಬಂದಿದೆ. ಅನರ್ಹ ಶಾಸಕ ಭೈರತಿ ಬಸವರಾಜ್ ಕಾಂಗ್ರೆಸ್‍ನಿಂದ ಎರಡು ಬಾರಿ ಆಯ್ಕೆಯಾಗಿದ್ದರು. ನಾನು ಹೋರಾಟ ಮಾಡಿ ಅವರಿಗೆ ಟಿಕೆಟ್ ಕೊಡಿಸಿದ್ದೆ. ಎರಡು ಬಾರಿ ಗೆದ್ದು ಅಧಿಕಾರ ಅನುಭವಿಸಿ ಲೂಟಿ ಹೊಡೆದರು. ಈಗ ಬಿಜೆಪಿಗೆ ಪಕ್ಷಾಂತರ ಆಗಿದ್ದಾರೆ. ಕಾಂಗ್ರೆಸ್‍ನಲ್ಲಿ ಏನು ಕಡಿಮೆ ಆಗಿತ್ತು ಅಂತ ನೀವು ಕೇಳಬೇಕು ಎಂದು ಸಿದ್ದರಾಮಯ್ಯ ಅವರು, ಮತದಾರರಿಗೆ ಮನವಿ ಮಾಡಿಕೊಂಡರು.

    ನಾನು ಮುಖ್ಯಮಂತ್ರಿ ಆಗಿದ್ದಾಗ ಕೆ.ಆರ್.ಪುರ ಅಭಿವೃದ್ಧಿಗೆ 2 ಸಾವಿರ ಕೋಟಿ ರೂ.ಗೂ ಹೆಚ್ಚು ಅನುದಾನ ಕೊಟ್ಟಿದ್ದೆ. ಭೈರತಿ ಬಸವರಾಜ್ ಅವರನ್ನು ಬೋರ್ಡ್ ಗೆ ಮೆಂಬರ್ ಮಾಡಿದ್ವಿ. ಅನುದಾನ ಪಡೆದು, ಅಧಿಕಾರ ಅನುಭವಿಸಿ ಬಿಜೆಪಿಗೆ ಹೋಗಿದ್ದಾರೆ. ನಿಮಗೆ, ಕಾಂಗ್ರೆಸ್‍ಗೆ ಭೈರತಿ ಮೋಸ ಮಾಡಿದ್ದಾರೆ. ಅಂದು ಎ.ಕೃಷ್ಣಪ್ಪ ಅವರಿಗೆ ಟಿಕೆಟ್ ತಪ್ಪಿಸಿ ಭೈರತಿ ಅವರಿಗೆ ಕೊಟ್ಟೆ. ಅವತ್ತು ಟಿಕೆಟ್ ಕೊಡಿಸಿ ತಪ್ಪು ಮಾಡಿದೆ ಅಂತ ಈಗ ಅನ್ನಿಸುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.

    ಉಪ ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳಲ್ಲಿಯೂ ಪಕ್ಷಾಂತರಿಗಳನ್ನ ಸೋಲಿಸಬೇಕು. ಜನ ಇಂತಹವರಿಗೆ ಪಾಠ ಕಲಿಸಬೇಕು. ಭೈರತಿ ಬೆದರಿಕೆಗೆ ನಮ್ಮ ಪಕ್ಷದ ಕಾರ್ಯಕರ್ತರು, ಪಾಲಿಕೆ ಸದಸ್ಯರು ಹೆದರುವುದಿಲ್ಲ ಎಂದು ಗುಡುಗಿದರು.

  • ಕೆ.ಆರ್.ಪುರಕ್ಕೆ ಭೈರತಿ, ನಂದೀಶ್ ರೆಡ್ಡಿ ಜೋಡೆತ್ತು- ಆರ್.ಅಶೋಕ್

    ಕೆ.ಆರ್.ಪುರಕ್ಕೆ ಭೈರತಿ, ನಂದೀಶ್ ರೆಡ್ಡಿ ಜೋಡೆತ್ತು- ಆರ್.ಅಶೋಕ್

    ಬೆಂಗಳೂರು: ಅನರ್ಹ ಶಾಸಕರ ಕ್ಷೇತ್ರಗಳಲ್ಲಿನ ಬಂಡಾಯವನ್ನು ಶಮನ ಮಾಡುವತ್ತ ಬಿಜೆಪಿ ನಾಯಕರು ಕಸರತ್ತು ನಡೆಸಿದ್ದು, ದಿನಕ್ಕೊಂದು ಕ್ಷೇತ್ರಕ್ಕೆ ಭೇಟಿ ನೀಡಿ ಸಂಧಾನ ಕಾರ್ಯ ಮಾಡುತ್ತಿದ್ದಾರೆ.

    ಇಂದು ಕಂದಾಯ ಸಚಿವ ಆರ್.ಅಶೋಕ್ ಕೆ.ಆರ್.ಪುರಕ್ಕೆ ಭೇಟಿ ನೀಡಿದ್ದು, ಭೈರತಿ ಬಸವರಾಜ್ ಹಾಗೂ ನಂದೀಶ್ ರೆಡ್ಡಿ ನಡುವಿನ ಅಸಮಾಧನವನ್ನು ತಿಳಿಸಿಗೊಳಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಕೆ.ಆರ್.ಪುರಕ್ಕೆ ಭೈರತಿ- ನಂದೀಶ್ ರೆಡ್ಡಿ ಜೋಡೆತ್ತು. ಕೆ.ಆರ್.ಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಕಾರ್ಯಕರ್ತರೇ ಇಲ್ಲ. ಬಸವರಾಜ್ ಅವರನ್ನು ಕರೆದುಕೊಂಡು ಬಂದಿದ್ದು ನಾನೇ ಮುಂಬೈನಲ್ಲಿ ಅನರ್ಹರ ಕಾವಲಿಗಿದ್ದಿದ್ದು ಭೈರತಿ ಬಸವರಾಜ್ ಎಂದರು.

    ನಂದೀಶ್ ರೆಡ್ಡಿ ನನ್ನ ಶಿಷ್ಯ, ಅವರ ಮನೆಯಲ್ಲಿ ಚಾಯ್ ಪೇ ಚರ್ಚಾ ಮಾಡುತ್ತೇವೆ. ಭೈರತಿ ಬಸವರಾಜ್ ಸಚಿವರಾಗುತ್ತಾರೆ. ಹಿಂದೆ ನಡೆದ ಘಟನೆಯನ್ನು ಮರೆಯಿರಿ. ದೇಶ, ರಾಜ್ಯ, ಕ್ಷೇತ್ರದ ಅಭಿವೃದ್ಧಿಗಾಗಿ ಕಮಲ ಗೆಲ್ಲಿಸಿ. ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ. ಕಾರ್ಪೋರೇಟರ್ ಗಳಿಗೂ ಸಮನಾದ ಗೌರವ ಇರುತ್ತದೆ. ಬಸವ-ನಂದಿಯರನ್ನು ಹೊಲ ಬೆಳೆಯೋಕೆ ಬಿಡುತ್ತಿದ್ದೇವೆ ಎಂದು ಉಲ್ಲೇಖಿಸಿದರು.

    ಈ ಮೂಲಕ ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದ ಬಂಡಾಯವು ಶಮನವಾದಂತಾಗಿದ್ದು, ನಂದೀಶ್ ರೆಡ್ಡಿ ನಿವಾಸದಲ್ಲಿ ಸಂಧಾನ ಸಭೆ ನಡೆಸಿ ಸಚಿವ ಆರ್.ಅಶೋಕ್ ಬಂಡಾಯ ಶಮನಗೊಳಿಸಿದ್ದಾರೆ. ಭೈರತಿ ಬಸವರಾಜ್, ನಂದೀಶ್ ರೆಡ್ಡಿಯನ್ನು ಒಟ್ಟಿಗೆ ಕೂರಿಸಿ ಆರ್.ಅಶೋಕ್ ಸಂಧಾನ ಮಾಡಿದ್ದಾರೆ. ಅಲ್ಲದೆ ಒಟ್ಟಿಗೆ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಸಂಧಾನದ ನಂತರ ಭೈರತಿ ಬಸವರಾಜ್ ಪರ ಕೆಲಸ ಮಾಡಲು ನಂದೀಶ್ ರೆಡ್ಡಿ ಒಪ್ಪಿಕೊಂಡಿದ್ದಾರೆ. ಬಿಎಂಟಿಸಿ ನಿಗಮದ ಅಧ್ಯಕ್ಷ ಸ್ಥಾನ ಸಿಕ್ಕಿದ ಬಳಿಕವೂ ನಂದೀಶ್ ರೆಡ್ಡಿ ಮುನಿಸು ಮುಂದುವರಿಸಿದ್ದರು.

  • ಮದ್ಯದ ಬಾಟಲ್‍ನಿಂದ ಹಸುವಿನ ಗುಪ್ತಾಂಗ, ಕೆಚ್ಚಲಿಗೆ ಚುಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಮದ್ಯದ ಬಾಟಲ್‍ನಿಂದ ಹಸುವಿನ ಗುಪ್ತಾಂಗ, ಕೆಚ್ಚಲಿಗೆ ಚುಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಬೆಂಗಳೂರು: ಕೆಲ ದುಷ್ಕರ್ಮಿಗಳು ಕೆಆರ್ ಪುರ ಠಾಣೆ ವ್ಯಾಪ್ತಿಯ ಭಟ್ಟರಹಳ್ಳಿ ಮನೆಯೊಂದರ ಮುಂದಿದ್ದ ಹಸುವನ್ನು ಎಳೆದೊಯ್ದು, ನಿರ್ಮಾಣ ಹಂತದ ಮನೆಯಲ್ಲಿ ಕೂಡಿ ಹಾಕಿ, ಮದ್ಯದ ಬಾಟಲಿಯಿಂದ ಗುಪ್ತಾಂಗ, ಕೆಚ್ಚಲಿಗೆ ಚುಚ್ಚಿ ಕೊಲೆ ಮಾಡಿದ್ದಾರೆ.

    ಭಟ್ಟರಹಳ್ಳಿ ನಿವಾಸಿ ನಾರಾಯಣಪ್ಪ ಮೃತ ಹಸುವಿನ ಮಾಲೀಕ. ಎಂದಿನಂತೆ ಶನಿವಾರ ರಾತ್ರಿಯೂ ಹಸುವನ್ನು ಮನೆಯ ಹೊರಗೆ ಕಟ್ಟಲಾಗಿತ್ತು. ಆದರೆ ಇಂದು ಕೆಲ ದುಷ್ಕರ್ಮಿಗಳು ಹಸುವನ್ನು ಎಳೆದೊಯ್ದು ಹಲ್ಲೆ ಮಾಡಿ, ಕೊಲೆಗೈದು ಪರಾರಿಯಾಗಿದ್ದಾರೆ.

    ಕೊಲೆ ಗೈದ ಮನೆಯು ನಿರ್ಜನ ಪ್ರದೇಶದಲ್ಲಿದ್ದು, ಇಲ್ಲಿಗೆ ಪ್ರತಿದಿನ ರಾತ್ರಿ ಸಮಯದಲ್ಲಿ ಅನೇಕ ಪುಂಡ ಪೋಕರಿಗಳು ಬೀಡಿ, ಸಿಗರೇಟ್, ಮದ್ಯ, ಗಾಂಜಾ ವ್ಯಸನಕ್ಕೆ ಬರುತ್ತಾರೆ. ಮದ್ಯದ ಅಮಲಿನಲ್ಲಿದ್ದವರೇ ಹಸುವನ್ನು ಎಳೆದುಕೊಂಡು ಬಂದು, ಕಾಲುಗಳನ್ನು ಕಟ್ಟಿಹಾಕಿದ್ದಾರೆ. ಜೊತೆಗೆ ಮದ್ಯದ ಬಾಟಲಿಯಿಂದ ಗುಪ್ತಾಂಗ, ಕೆಚ್ಚಲಿಗೆ ಚುಚ್ಚಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

    ಹಸುವನ್ನೇ ನಂಬಿಕೊಂಡು ನಾರಾಯಣಪ್ಪ ಅವರ ಕುಟುಂಬ ಜೀವನ ಸಾಗಿಸುತ್ತಿತ್ತು. ಹಾಲು ಕೊಡುತ್ತಿದ್ದ ಹಸುವನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರಿಂದ ದಿಕ್ಕು ತೋಚದಂತಾಗಿದ್ದು, ಬಡಕುಟುಂಬಕ್ಕೆ ಮುಂದಿನ ಜೀವನ ನಿರ್ವಹಣೆಗೆ ಕಷ್ಟದಾಯಕವಾಗಿದೆ.