Tag: KR Market

  • ನಾಡಿನಾದ್ಯಂತ ದೀಪಾವಳಿ ಸಂಭ್ರಮ – ಕೆಆರ್ ಮಾರ್ಕೆಟ್‌ನಲ್ಲಿ ಹೂ, ಹಣ್ಣು ಖರೀದಿಗೆ ಮುಗಿಬಿದ್ದ ಜನ

    ನಾಡಿನಾದ್ಯಂತ ದೀಪಾವಳಿ ಸಂಭ್ರಮ – ಕೆಆರ್ ಮಾರ್ಕೆಟ್‌ನಲ್ಲಿ ಹೂ, ಹಣ್ಣು ಖರೀದಿಗೆ ಮುಗಿಬಿದ್ದ ಜನ

    ಬೆಂಗಳೂರು: ನಾಡಿನಾದ್ಯಂತ ದೀಪಗಳ ಹಬ್ಬ ದೀಪಾವಳಿ (Diwali) ಸಂಭ್ರಮ ಜೋರಾಗಿದೆ. ದೀಪಾವಳಿ ಹಿನ್ನೆಲೆ ಬೆಂಗಳೂರಿನ (Bengaluru) ಕೆಆರ್ ಮಾರ್ಕೆಟ್‌ನಲ್ಲಿ (KR Market) ಬೆಳ್ಳಂಬೆಳಗ್ಗೆ ಹೂ, ಹಣ್ಣು ಖರೀದಿಗೆ ಜನ ಮುಗಿಬಿದ್ದಿದ್ದಾರೆ.

    ಕೆಆರ್ ಮಾರ್ಕೆಟ್‌ನಲ್ಲಿ ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಸೇರಿದ್ದು, ವಿವಿಧ ಬಗೆಯ ಹೂ, ಹಣ್ಣುಗಳ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ಅವೆನ್ಯೂ ರಸ್ತೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಜನಮಯವಾಗಿದೆ. ಭಾರೀ ಜನಸಂಖ್ಯೆ ಹಿನ್ನೆಲೆ ಕೆಆರ್ ಮಾರ್ಕೆಟ್, ಹೂವಿನ ಮಾರ್ಕೆಟ್, ಅವೆನ್ಯೂ ರಸ್ತೆ ಸುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ. ಅಲ್ಲದೇ ಕೆಆರ್ ಮಾರ್ಕೆಟ್ ಫ್ಲೈಓವರ್ ಮೇಲೂ ಕಿ.ಮೀ.ಗಟ್ಟಲೇ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದನ್ನೂ ಓದಿ:  ರಷ್ಯಾದಿಂದ ತೈಲ ಖರೀದಿ ನಿಲ್ಲಿಸದಿದ್ದರೆ ಭಾರೀ ಸುಂಕ ಹಾಕ್ತೇವೆ: ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

    ಸತತ ಮಳೆ ಹಿನ್ನೆಲೆ ಹೂಗಳ ಬೆಲೆ ಏರಿಕೆಯಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆ ಕನಕಾಂಬರ, ಮಲ್ಲಿಗೆ, ಸೇವಂತಿಗೆ, ಸುಗಂಧರಾಜ, ಚೆಂಡು ಹೂಗಳ ಖರೀದಿ ಜೋರಾಗಿದೆ. ಇದನ್ನೂ ಓದಿ: ಚಿತ್ತಾಪುರ ಆಯ್ತು ಈಗ ಸೇಡಂ – ಕೊನೆ ಕ್ಷಣದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಬ್ರೇಕ್‌

    ಯಾವ ಹೂವಿಗೆ ಎಷ್ಟು ದರ?
    ಕನಕಾಂಬರ – 1,300-1,600 ರೂ.
    ಮಲ್ಲಿಗೆ, ಮಳ್ಳೆ ಹೂವು – 700-900 ರೂ.
    ಕಾಕಡ ಹೂವು – 700-800 ರೂ.
    ಸೇವಂತಿಗೆ – 800 ರೂ.
    ಗುಲಾಬಿ – 500 ರೂ.
    ಕಣಗಲೆ – 500 ರೂ.
    ಸುಗಂಧರಾಜ – 500 ರೂ.
    ತಾವರೆ ಹೂವು (ಜೋಡಿ) – 150 ರೂ.
    ಬಾಳೆಕಂದು – 150 ರೂ.

  • ಆಯುಧ ಪೂಜೆಗೆ ಖರೀದಿ ಭರಾಟೆ ಜೋರು – ಬೆಳ್ಳಂಬೆಳಗ್ಗೆ ಕೆ.ಆರ್ ಮಾರ್ಕೆಟ್ ಸುತ್ತ ಟ್ರಾಫಿಕ್ ಜಾಮ್

    ಆಯುಧ ಪೂಜೆಗೆ ಖರೀದಿ ಭರಾಟೆ ಜೋರು – ಬೆಳ್ಳಂಬೆಳಗ್ಗೆ ಕೆ.ಆರ್ ಮಾರ್ಕೆಟ್ ಸುತ್ತ ಟ್ರಾಫಿಕ್ ಜಾಮ್

    ಬೆಂಗಳೂರು: ದೇಶದೆಲ್ಲೆಡೆ ಇಂದು (ಅ.1) ಆಯುಧ ಪೂಜೆ ಸಂಭ್ರಮ ಜೋರಾಗಿದೆ. ಸಿಲಿಕಾನ್ ಸಿಟಿಯಲ್ಲಿ ಜನರು ಖರೀದಿಗಾಗಿ ಮುಗಿಬಿದ್ದಿದ್ದು, ಕೆ.ಆರ್ ಮಾರ್ಕೆಟ್  (KR Market) ಸುತ್ತ ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್ ಆಗಿದೆ.

    ಆಯುಧ ಪೂಜೆ ಹಿನ್ನೆಲೆ ಕೆ.ಆರ್ ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಹೂವು, ಹಣ್ಣು ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿದೆ. ಈ ಹಿನ್ನೆಲೆ ಟೌನ್‌ಹಾಲ್‌ನಿಂದ ಕೆಆರ್ ಮಾರ್ಕೆಟ್‌ವರೆಗೆ ಟ್ರಾಫಿಕ್ ಬಿಸಿ ತಟ್ಟಿದೆ. ಖರೀದಿಗೆ ಬಂದ ಜನರು ಫ್ಲೈಓವರ್ ಮೇಲೆಯೂ ವಾಹನಗಳನ್ನು ಪಾರ್ಕ್ ಮಾಡಿದ್ದು, ಫ್ಲೈ ಓವರ್ ಮೇಲೆಯೂ ಕಿ.ಮೀವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ.ಇದನ್ನೂ ಓದಿ: ಭಾರತದ ಮೋಸ್ಟ್‌ ಡೇಂಜರಸ್‌ ಫೋರ್ಟ್‌ – ಹರಿಹರ ಕೋಟೆ ಹತ್ತಲು ಡಬಲ್‌ ಗುಂಡಿಗೆ ಬೇಕು!

    ಆಯುಧ ಪೂಜೆ ಹಾಗೂ ದಸರಾ ಹಬ್ಬದ ಹಿನ್ನೆಲೆ ಹೂವು, ಹಣ್ಣುಗಳ ಬೆಲೆಯೂ ಗಗನಕ್ಕೇರಿದೆ. ಬೆಲೆ ಏರಿಕೆಯಾದರೂ ಹಬ್ಬರ ಸಂಭ್ರಮ ಜೋರಾಗಿ ಇದೆ.

    ಹೂವು                         ಇಂದಿನ ದರ (ಕೆ.ಜಿಗೆ)
    ಸೇವಂತಿ                      200-300 ರೂ.
    ಕನಕಾಂಬರ                2000-2500 ರೂ.
    ಮಲ್ಲಿಗೆ                         1500-2000 ರೂ.
    ಗುಲಾಬಿ                         400-450 ರೂ.
    ಕಾಕಡ                              800 ರೂ
    ಬಾಳೆಕಂಬ ಜೋಡಿ             50-70ರೂ.
    ಕುಂಬಳಕಾಯಿ                  50-60ರೂ
    ಗುಲಾಬಿ ಹಾರ                   4000 ರೂ.

  • ನಾಡಹಬ್ಬ ದಸರಾ ಸಂಭ್ರಮ – ಗಗನಕ್ಕೇರಿದ ಹೂವು, ಹಣ್ಣುಗಳ ಬೆಲೆ

    ನಾಡಹಬ್ಬ ದಸರಾ ಸಂಭ್ರಮ – ಗಗನಕ್ಕೇರಿದ ಹೂವು, ಹಣ್ಣುಗಳ ಬೆಲೆ

    • ಆಯೂಧ ಪೂಜೆಗೆ ಖರೀದಿ ಭರಾಟೆ ಜೋರು

    ಬೆಂಗಳೂರು: ದೇಶದೆಲ್ಲೆಡೆ ದಸರಾ (Dasara) ಸಂಭ್ರಮ ವಿಜೃಂಭಣೆಯಿಂದ ಸಾಗುತ್ತಿದ್ದು, ಬುಧವಾರ ಆಯುಧ ಪೂಜೆ ಹಿನ್ನೆಲೆ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ.

    ಸಿಲಿಕಾನ್ ಸಿಲಿಕಾನ್ ಜನರು ಆಯುಧ ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಹಣ್ಣು, ಹೂವು ಸೇರಿದಂತೆ ಇನ್ನಿತರ ವಸ್ತುಗಳ ಖರೀದಿಗಾಗಿ ಮುಗಿಬಿದ್ದಿದ್ದಾರೆ. ಹಬ್ಬದ ಹಿನ್ನೆಲೆ ಹೂವು, ಹಣ್ಣುಗಳ ಬೆಲೆಯೂ ಗಗನಕ್ಕೇರಿದೆ.ಇದನ್ನೂ ಓದಿ: Ayudha Puja 2025 | ವಿಜಯದಶಮಿ ಮುನ್ನಾದಿನ ಆಯುಧ ಪೂಜೆ ಆಚರಣೆ ಮಾಡುವುದೇಕೆ? ಈ ವರ್ಷ ಶುಭ ಮುಹೂರ್ತ ಯಾವಾಗ?

    ಯಾವುದೇ ಹಬ್ಬ ಬಂತೆಂದರೆ ಸಾಕು, ವಿವಿಧ ಬಗೆಯ ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗಾಗಿ ಜನರು ಮಾರ್ಕೆಟ್‌ಗೆ ಮುಗಿಬೀಳುತ್ತಾರೆ. ಅದರಂತೆ ವಸ್ತುಗಳ ಬೆಲೆಯೂ ದುಪ್ಪಟ್ಟಾಗಿದೆ.

    ಕೆ.ಜಿಗೆ                     ಇಂದಿನ ದರ             –         ಹಳೆಯ ದರ
    ಸೇವಂತಿ               300-400 ರೂ.                      50-60 ರೂ.
    ಕನಕಾಂಬರ           2000-2500 ರೂ.             1000-1500 ರೂ.
    ಮಲ್ಲಿಗೆ                   1500-2000 ರೂ.              700-1000 ರೂ.
    ಗುಲಾಬಿ                    400-450 ರೂ.                   200-250 ರೂ.
    ಕಾಕಡ                      800 ರೂ.                            600 ರೂ.
    ಬಾಳೆಕಂಬ ಜೋಡಿ    60-100ರೂ.                         30-40 ರೂ.
    ಕುಂಬಳಕಾಯಿ            50-60ರೂ                        20-30 ರೂ.

  • ಬೆಂಗಳೂರಿನಲ್ಲಿ ಭೀಕರ ಅಗ್ನಿ ದುರಂತ – ಒಂದೇ ಕುಟುಂಬದ ನಾಲ್ವರು ಸೇರಿ ಐವರು ಸಜೀವ ದಹನ

    ಬೆಂಗಳೂರಿನಲ್ಲಿ ಭೀಕರ ಅಗ್ನಿ ದುರಂತ – ಒಂದೇ ಕುಟುಂಬದ ನಾಲ್ವರು ಸೇರಿ ಐವರು ಸಜೀವ ದಹನ

    ಬೆಂಗಳೂರು: ಇಲ್ಲಿನ ಕೆ.ಆರ್ ಮಾರ್ಕೆಟ್ (KR Market) ಬಳಿಯ ನಗರ್ತಪೇಟೆಯ ವಾಣಿಜ್ಯ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ (Massive Fire) ಒಂದೇ ಕುಟುಂಬದ ನಾಲ್ವರು ಸೇರಿ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ.

    ದುರಂತದಲ್ಲಿ ಸಜೀವ ದಹನವಾದ ಮದನ್ (38), ಪತ್ನಿ ಸಂಗೀತಾ (33) ಮಿತೇಶ್ (8), ವಿಹಾನ್ (5) ಒಂದೇ ಕುಟುಂಬದವರಾಗಿದ್ದು, ಮತ್ತೊಂದು ಮಹಡಿಯಲ್ಲಿ ಸುರೇಶ್‌ ಎಂಬವರೂ ಸುಟ್ಟು ಕರಕಲಾಗಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ಭಾರೀ ಮಳೆಯಿಂದ ಭೂಕುಸಿತ – ಇಬ್ಬರು ಸಾವು, ಇಂದು ರೆಡ್ ಅಲರ್ಟ್ ಘೋಷಣೆ

    ಇನ್ನೂ ಘಟನಾ ಸ್ಥಳಕ್ಕೆ ನಗರ ಪೊಲೀಸ್‌ ಆಯುಕ್ತ (Bengaluru Police Commissioner) ಸೀಮಂತ್‌ ಕುಮಾರ್‌ ಸಿಂಗ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ರಾತ್ರಿ 2.30ರ ಸುಮಾರಿಗೆ ಅಗ್ನಿ ಅವಗಢ ಸಂಭವಿಸಿದ ಮಾಹಿತಿ ಬಂತು. ಅಗ್ನಿಶಾಮಕ ದಳದವರು ನಮ್ಮ ಪೊಲೀಸ್ರು ಪರಿಶೀಲನೆ ಮಾಡ್ತಿದ್ದಾರೆ. ಗ್ರೌಂಡ್ ಫ್ಲೋರ್ ನಲ್ಲಿರುವ ಗೋಡೌನ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಅದು ಮೇಲಿನ ಫ್ಲೋರ್ ಗಳಿಗೆ ಆವರಿಸಿದೆ. ಬೆಂಕಿ ಹೊತ್ತಿಕೊಂಡ ಕೂಡಲೇ ಕಟ್ಟಡದಲ್ಲಿದ್ದ ಬಹುತೇಕ ಜನ ಓಡಿ ಹೋಗಿದ್ದಾರೆ. ಆದ್ರೆ ಒಂದು ಫ್ಯಾಮಿಲಿ ಮಾತ್ರ ಬೆಂಕಿ ಕೆನ್ನಾಲಿಗೆಗೆ ಸಿಲುಕಿಕೊಂಡಿದೆ.

    ಎರಡು ಮೃತದೇಹಗಳನ್ನ ಈಗಾಗಲೇ ಹೊರ ತೆಗೆಯಲಾಗಿದೆ. ಮೇಲಿನ ಫ್ಲೋರ್ ನಲ್ಲಿ ಕಂಪ್ಲೀಟ್ ಬೆಂಕಿ, ಹೊಗೆ ಆವರಿಸಿದೆ ಒಳಗಡೆ ಹೋಗೋದಕ್ಕೆ ಆಗ್ತಿಲ್ಲ, ಹೀಗಾಗಿ ಒಳಗಡೆ ಸಿಲುಕಿದವರನ್ನ ಹುಡುಕಲು ಆಗ್ತಿಲ್ಲ. ಕಾರ್ಯಾಚರಣೆ ಮುಂದುವರಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ, ವಿಧಿವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳು ಹಾಗೂ ನಮ್ಮ ರಕ್ಷಣಾ ತಂಡದವರು ಕಾರ್ಯಾಚರಣೆ ಮಾಡ್ತಿದ್ದಾರೆ. ಇನ್ನು ಮೃತದೇಹಗಳು ಇರುವ ಶಂಕೆ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು | ನಗರ್ತಪೇಟೆಯಲ್ಲಿ ಭೀಕರ ಅಗ್ನಿ ದುರಂತ – ಓರ್ವ ಸುಟ್ಟು ಕರಕಲು, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

    ಏನಿದು ದುರಂತ?
    ಕೆ.ಆರ್ ಮಾರ್ಕೆಟ್ ಬಳಿಯ ನಗರ್ತಪೇಟೆಯ ವಾಣಿಜ್ಯ ಕಟ್ಟಡದಲ್ಲಿದ್ದ ಮಹಡಿ ಮನೆಯಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಸ್ಥಳದಲ್ಲಿ ಅಂಬುಲೆನ್ಸ್‌ಗಳನ್ನ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಸರ್ಕಾರ ಧರ್ಮಸ್ಥಳದ ಜೊತೆಗಿರುತ್ತೆ, ದಿಕ್ಕು ತಪ್ಪಿಸಿದವರನ್ನ ನಾವು ಬಿಡಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

  • ಬೆಂಗಳೂರು | ನಗರ್ತಪೇಟೆಯಲ್ಲಿ ಭೀಕರ ಅಗ್ನಿ ದುರಂತ – ಓರ್ವ ಸುಟ್ಟು ಕರಕಲು, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

    ಬೆಂಗಳೂರು | ನಗರ್ತಪೇಟೆಯಲ್ಲಿ ಭೀಕರ ಅಗ್ನಿ ದುರಂತ – ಓರ್ವ ಸುಟ್ಟು ಕರಕಲು, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

    ಬೆಂಗಳೂರು: ಇಲ್ಲಿನ ಕೆ.ಆರ್ ಮಾರ್ಕೆಟ್ (KR Market) ಬಳಿಯ ನಗರ್ತಪೇಟೆಯ ವಾಣಿಜ್ಯ ಕಟ್ಟಡದಲ್ಲಿದ್ದಲ್ಲಿ ಭೀಕರ ಅಗ್ನಿ ಅವಘಡ (Massive fire) ಸಂಭವಿಸಿದ್ದು, ಓರ್ವ ವ್ಯಕ್ತಿ ಸುಟ್ಟುಕರಕಲಾಗಿರುವ ಘಟನೆ ನಡೆದಿದೆ.

    ರಾಜಸ್ಥಾನ ಮೂಲದ ಮದನ್ ಸಿಂಗ್ ಮೃತಪಟ್ಟಿರುವ‌ ವ್ಯಕ್ತಿ. ವಾಣಿಜ್ಯ ಕಟ್ಟಡದ (Commercial building) 3ನೇ ಅಂತಸ್ಥಿನಲ್ಲಿದ್ದ ಮನೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ದುರಂತ ಸಂಭವಿಸಿದೆ. ಈ ವೇಳೆ ಮಳಿಗೆಯಲ್ಲೇ ಇದ್ದ ಮದನ್ ಸಿಂಗ್ ಸಾವನ್ನಪ್ಪಿದ್ದಾನೆ. ಇನ್ನೂ ದುರಂತ ನಡೆದ ಮಳಿಗೆಯಲ್ಲಿ ಒಂದೇ ಕುಟುಂಬದ ಇನ್ನೂ ಮೂವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಒಟ್ಟು ನಾಲ್ವರು ಮನೆಯಲ್ಲಿ ವಾಸಿಸುತ್ತಿದ್ದರು. ಮನೆಯಲ್ಲಿ ಪತಿ, ಪತ್ನಿ ಹಾಗೂ 8 ಮತ್ತು 5 ವರ್ಷದ ಇಬ್ಬರು ಮಕ್ಕಳಿದ್ದರು. ಮದನ್‌ ಸಿಂಗ್‌ ಎಂಬಾತ ಸಾವನ್ನಪ್ಪಿದ್ದು, ಉಳಿದ ಮೂವರು ಸಾವನ್ನಪ್ಪಿರುವ ಶಂಕ್ಯೆ ವ್ಯಕ್ತವಾಗಿದೆ. ಇದನ್ನೂ ಓದಿ: ಈ ದೇಶಗಳಲ್ಲಿ ಬೀದಿ ನಾಯಿಗಳಿಗೆ ಗ್ಯಾಸ್‌ ಚೇಂಬರ್‌, ದಯಾಮರಣ ಶಿಕ್ಷೆ – ಯಾವ ದೇಶದಲ್ಲಿ ಏನು ಕಾನೂನು?

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಇದರೊಂದಿಗೆ ಸ್ಥಳದಲ್ಲಿ ಮೂರು ಅಂಬುಲೆನ್ಸ್‌ಗಳನ್ನ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್‌ಗೆ ಬಸ್ ಡಿಕ್ಕಿ – 10 ಮಂದಿ ಯಾತ್ರಿಕರು ಸಾವು

    ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿರುವ ಹಿನ್ನೆಲೆ ರಕ್ಷಣಾ ಸಿಬ್ಬಂದಿ ಆಕ್ಸಿಜನ್ ಸಿಲಿಂಡರ್ ಧರಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನೂ ದುರಂತ ನಡೆದ ಮಳಿಗೆಯಲ್ಲಿ ತಾಯಿ-ಮಗು ಒಳಗೆ ಸಿಲುಕಿದ್ದಾರೆಂದು ಹೇಳಲಾಗುತ್ತಿದೆ. ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಇದನ್ನೂ ಓದಿ: ಇಂದು ಬಿಜೆಪಿಯಿಂದ ʻಧರ್ಮಸ್ಥಳ ಚಲೋʼ – 500 ಕಾರುಗಳಲ್ಲಿ ಬೃಹತ್‌ ಯಾತ್ರೆ

  • ವರಮಹಾಲಕ್ಷ್ಮಿ ಹಬ್ಬಕ್ಕೆ ಖರೀದಿ ಭರಾಟೆ ಜೋರು – ಹಿಂದಿನ ದರ ಎಷ್ಟು? ಈಗ ಎಷ್ಟು ಏರಿಕೆ?

    ವರಮಹಾಲಕ್ಷ್ಮಿ ಹಬ್ಬಕ್ಕೆ ಖರೀದಿ ಭರಾಟೆ ಜೋರು – ಹಿಂದಿನ ದರ ಎಷ್ಟು? ಈಗ ಎಷ್ಟು ಏರಿಕೆ?

    ಬೆಂಗಳೂರು: ಇಂದು (ಆ.8) ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ಈ ಹಿನ್ನೆಲೆ ಹೂವು, ಹಣ್ಣುಗಳ ಬೆಲೆ ದುಪ್ಪಟ್ಟಾಗಿದ್ದು, ಬೆಂಗ್ಳೂರಿನ ಕೆ.ಆರ್ ಮಾರ್ಕೆಟ್‌ನಲ್ಲಿ ಖರೀದಿ ಭರಾಟೆ ಜೋರಾಗಿದೆ.

    ಶ್ರಾವಣ ಮಾಸ ಬಂತೆಂದರೆ ಸಾಕು. ಸಾಲು ಸಾಲು ಹಬ್ಬಗಳ ಬರುವುದರಿಂದ ಹೂವು, ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಆದರೆ ಇಂದು ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಕಳೆದ ವಾರಕ್ಕಿಂತ ಈ ವಾರ ದರ ಹೆಚ್ಚಳವಾಗಿದ್ದು, ಹೂವು, ಹಣ್ಣು ಹಾಗೂ ತರಕಾರಿಗಳ ಬೆಲೆಯಲ್ಲಿಯೂ ಏರಿಕೆಯಾಗಿದೆ.ಇದನ್ನೂ ಓದಿ: ಬೆಂಗಳೂರಿಗೆ ಫಿಲಿಪೈನ್ಸ್ ಅಧ್ಯಕ್ಷರ ಭೇಟಿ – ರಾಜ್ಯಪಾಲರ ಜೊತೆ ಸಂವಾದ

    ಯಾವುದರ ಬೆಲೆ ಎಷ್ಟಿದೆ?
    ಹೂವು ಇಂದಿನ ದರ
    ಕನಕಾಂಬರ – 1600ರೂ.
    ಮಲ್ಲಿಗೆ, ಮಳ್ಳೆ ಹೂವು – 900ರೂ.
    ಕಾಕಡ ಹೂವು – 800ರೂ.
    ಸೇವಂತಿಗೆ – 800ರೂ.
    ಗುಲಾಬಿ – 500ರೂ.
    ಕಣಗಲೆ – 500ರೂ.
    ಸುಗಂಧರಾಜ – 500ರೂ.
    ತಾವರೆ ಹೂವು (ಜೋಡಿ) – 150ರೂ.
    ಜೋಡಿ ಬಾಳೆಕಂದು – 80ರೂ.

    ತರಕಾರಿ (ಆವರಣದ ಒಳಗಡೆ ನೀಡಿರುವುದು ಹಿಂದಿನ ದರ)
    ಹುರುಳಿಕಾಯಿ – 150 ರೂ.(80 ರೂ.)
    ಕ್ಯಾಪ್ಸಿಕಂ 80ರೂ. (40ರೂ.)
    ಬೀನ್ಸ್ 80ರೂ. (40ರೂ.)
    ಬದನೆಕಾಯಿ 60ರೂ. (40ರೂ.)
    ಹೂಕೋಸು 30ರೂ. (15ರೂ.)
    ತೊಂಡೆಕಾಯಿ 45ರೂ. (30ರೂ.)

    ಹಣ್ಣುಗಳು
    ಹಣ್ಣು (ಆವರಣದ ಒಳಗಡೆ ನೀಡಿರುವುದು ಹಿಂದಿನ ದರ)
    ಸೇಬು 300ರೂ. (180ರೂ.)
    ದಾಳಿಂಬೆ 280ರೂ. (150ರೂ.)
    ಕಿತ್ತಳೆ 200ರೂ. (120ರೂ.)
    ಮೂಸಂಬಿ 150ರೂ. (70ರೂ.)
    ಸಪೋಟ 150ರೂ. (100ರೂ.)
    ದ್ರಾಕ್ಷಿ 200ರೂ. (150ರೂ.)
    ಸೀತಾಫಲ 200ರೂ. (60ರೂ.)ಇದನ್ನೂ ಓದಿ: ಆ.14ಕ್ಕೆ ಯುವನಿಧಿ ಯೋಜನೆಯಡಿ ಅಭ್ಯರ್ಥಿಗಳ ನೋಂದಣಿ ಕಾರ್ಯಕ್ರಮ

  • ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ – ಕೆಆರ್ ಮಾರ್ಕೆಟ್‌ನಲ್ಲಿ ಖರೀದಿ ಭರಾಟೆ ಜೋರು

    ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ – ಕೆಆರ್ ಮಾರ್ಕೆಟ್‌ನಲ್ಲಿ ಖರೀದಿ ಭರಾಟೆ ಜೋರು

    – ದರ ಏರಿಕೆ ನಡುವೆಯೂ ಖರೀದಿಗೆ ಮುಗಿಬಿದ್ದ ಜನ

    ಬೆಂಗಳೂರು: ಶುಕ್ರವಾರ ರಾಜ್ಯದೆಲ್ಲೆಡೆ ವರಮಹಾಲಕ್ಷ್ಮಿ (Varamahalakshmi) ಹಬ್ಬದ ಪ್ರಯುಕ್ತ ಹಬ್ಬಕ್ಕೆ ಜನರ ತಯಾರಿ ಜೋರಾಗಿದೆ. ಹಣ್ಣು, ಹೂಗಳು, ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಕೊಳ್ಳೋಕೆ ಜನ ಮಾರ್ಕೆಟ್‌ಗಳತ್ತ ಮುಖ ಮಾಡಿದ್ದಾರೆ. ಹೂವು, ಹಣ್ಣಿನ ರೇಟ್ ಡಬಲ್ ಇದ್ರೂ ಜನರ ಖರೀದಿ ಭರಾಟೆ ಜೋರಾಗಿದೆ.

    ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಜನರು ಸಾಲು ಸಾಲು ಹಬ್ಬಗಳ ಆಚರಣೆಯಲ್ಲಿ ಬ್ಯುಸಿಯಾಗುತ್ತಾರೆ. ಅದರಂತೆ ಶ್ರಾವಣ ಮಾಸದಲ್ಲಿ ಬರುವ ವರಮಹಾಲಕ್ಷ್ಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಿಂದೂಗಳ ಪ್ರತಿಯೊಂದು ಮನೆಯಲ್ಲೂ ವರಮಹಾಲಕ್ಷ್ಮಿ ಕೂರಿಸಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.

    ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಗ್ರಾಹಕರು ಬೆಂಗಳೂರಿನ (Bengaluru) ಕೆಆರ್ ಮಾರುಕಟ್ಟೆಯತ್ತ (KR Market) ಲಗ್ಗೆ ಇಡುತ್ತಿದ್ದಾರೆ. ಹಣ್ಣು, ತರಕಾರಿ ಮತ್ತು ಹೂವುಗಳ ಖರೀದಿಯಲ್ಲಿ ಜನರು ಬ್ಯುಸಿಯಾಗಿದ್ದಾರೆ. ಹೂವಿನಂಗಡಿ, ಹಣ್ಣಿನಂಗಡಿ, ತರಾಕಾರಿ ಅಂಗಡಿಗಳು, ಗ್ರಂಥಿಗೆ ಅಂಗಡಿಗಳಲ್ಲಿ ಜನರು ತುಂಬಿ ತುಳುಕುತಿದ್ದಾರೆ.

    ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಎಲ್ಲಾ ವಸ್ತುಗಳ ಬೆಲೆ ಮೊದಲಿಗಿಂತಲೂ ಡಬಲ್ ಆಗಿದೆ. ಸೇಬು, ದಾಳಿಂಬೆ, ಬಟಾಣಿ, ಹುರುಳಿಕಾಯಿ, ಮುಂತಾದ ವಸ್ತುಗಳ ಬೆಲೆಗಳು ಏರಿಕೆಯಾಗಿವೆ. ಹೂವುಗಳ ಬೆಲೆಯೂ ಅಧಿಕವಾಗಿದ್ದು, ಹೂವುಗಳನ್ನು ಕೊಳ್ಳೋ ಅಷ್ಟರಲ್ಲೇ ಜೇಬು ಖಾಲಿಯಾಗುತ್ತದೆ. ಕಳೆದ ವಾರದ ದರಕ್ಕೆ ಹೋಲಿಸಿದ್ರೆ ಈ ವಾರ ಎಲ್ಲಾ ವಸ್ತುಗಳ ರೇಟ್ ಡಬಲ್ ಆಗಿದೆ.

    ಯಾವುದರ ದರ ಎಷ್ಟಿದೆ?
    ತರಕಾರಿ – ಈಗಿನ ದರ – ಹಳೆ ದರ
    ಹುರುಳಿಕಾಯಿ – 150 – 80
    ಕ್ಯಾಪ್ಸಿಕಂ – 80 – 40
    ಬೀನ್ಸ್ – 80 – 40
    ಬದನೆಕಾಯಿ – 60 – 40
    ಹೂಕೋಸು – 30 – 15
    ತೊಂಡೆಕಾಯಿ – 45 – 30

    ಹಣ್ಣುಗಳ ದರ ಎಷ್ಟಿದೆ?
    ಹಣ್ಣುಗಳು – ಈಗಿನ ದರ – ಹಳೆ ದರ
    ಸೇಬು – 300 – 180
    ದಾಳಿಂಬೆ – 280 – 150
    ಕಿತ್ತಳೆ – 200 – 120
    ಮೂಸಂಬಿ – 150 – 70
    ಸಪೋಟ – 150 – 100
    ದ್ರಾಕ್ಷಿ – 200 – 150
    ಸೀತಾಫಲ – 200 – 60

    ಕೆಆರ್ ಮಾರ್ಕೆಟ್ ರಸ್ತೆ ಸಂಪೂರ್ಣ ಬಂದ್:
    ಇನ್ನು ಕೆಆರ್ ಮಾರ್ಕೆಟ್‌ನಲ್ಲಿ ಖರೀದಿ ಭರಾಟೆ ಜೋರಾಗಿದ್ದರಿಂದಾಗಿ ಸಂಚಾರಿ ಪೊಲೀಸರು ಕೆಆರ್ ಮಾರ್ಕೆಟ್ ರಸ್ತೆ ಸಂಪೂರ್ಣ ಕ್ಲೋಸ್ ಮಾಡಿದ್ದು, ಗ್ರಾಹಕರಿಗೆ ಅನೂಕೂಲ ಆಗುವಂತೆ ರಸ್ತೆ ಮಾರ್ಗ ಬದಲಿಸಿದ್ದಾರೆ. ಟೌನ್ ಹಾಲ್‌ನಿಂದ ಕೆಆರ್ ಮಾರ್ಕೆಟ್‌ಗೆ ಬರುವ ಮಾರ್ಗ, ಮೈಸೂರು ಸರ್ಕಲ್‌ನಿಂದ ಕೆಆರ್ ಮಾರ್ಕೆಟ್‌ಗೆ ಬರುವ ಮಾರ್ಗ ಬಂದ್ ಮಾಡಿದ್ದು, ಕೆಆರ್ ಮಾರ್ಕೆಟ್ ಫ್ಲೈಓವರ್ ಮೇಲೆ ಮಾತ್ರ ವಾಹನ ಓಡಾಟಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

  • ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರಲು ನಾಲಾಯಕ್: ಜೆಡಿಎಸ್ ಕಿಡಿ

    ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರಲು ನಾಲಾಯಕ್: ಜೆಡಿಎಸ್ ಕಿಡಿ

    ಬೆಂಗಳೂರು: ಕೆ.ಆರ್ ಮಾರುಕಟ್ಟೆಯಲ್ಲಿ (KR Market) ನಡೆದಿದ್ದ ಸಾಮೂಹಿಕ ಅತ್ಯಾಚಾರ ಕೇಸ್‌ಗೆ ಸಂಬಂಧಿಸಿದಂತೆ ಉಡಾಫೆ ಉತ್ತರ ಕೊಟ್ಟಿದ್ದ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ದ ಜೆಡಿಎಸ್ (JDS) ಕಿಡಿಕಾರಿದೆ.

    ಸಿದ್ದರಾಮಯ್ಯ ವಿರುದ್ದ ಎಕ್ಸ್‌ನಲ್ಲಿ ಕಿಡಿಕಾರಿರುವ ಜೆಡಿಎಸ್, ವಿಪಕ್ಷದಲ್ಲಿ ಇದ್ದಾಗ ಸಿದ್ದರಾಮಯ್ಯ ಮಾಡಿದ್ದ ಟ್ವೀಟ್ ಟ್ಯಾಗ್ ಮಾಡಿ ವಾಗ್ದಾಳಿ ನಡೆಸಿದೆ. ಅಷ್ಟೇ ಅಲ್ಲದೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ನಾಲಾಯಕ್ ಎಂದು ಲೇವಡಿ ಮಾಡಿದೆ. ಇದನ್ನೂ ಓದಿ: KUWSDB ಎಂಜಿನಿಯರ್‌ಗೆ ಉಪಲೋಕಾಯುಕ್ತ ತರಾಟೆ

    ಜೆಡಿಎಸ್ ಟ್ವೀಟ್ ಏನು?
    ಸಿದ್ದರಾಮಯ್ಯ ಅವರೇ ಅಧಿಕಾರ ಅನುಭವಿಸುವಾಗ ನಿಮಗೆ ಮರೆವಿನ ಕಾಯಿಲೆಯೇ? ಬೆಂಗಳೂರಿನ ಕೆ.ಆರ್.ಮಾರ್ಕೆಟ್‌ನಲ್ಲಿ ನಡೆದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಇಡೀ ರಾಜ್ಯವೇ ತಲೆ ತಗ್ಗಿಸುವ ಹೀನ ಕೃತ್ಯವಾಗಿದೆ. ಇದನ್ನೂ ಓದಿ: ಹೆಬ್ಬಾಳ್ಕರ್‌ ಕಾರನ್ನು ಬಟ್ಟೆ ಹಾಕಿ ಮುಚ್ಚಿದ್ದು ಯಾಕೆ? – ಮತ್ತೆ ಅನುಮಾನ ವ್ಯಕ್ತಪಡಿಸಿದ ಛಲವಾದಿ

    ಇದನ್ನು ಪ್ರಶ್ನಿಸಿದರೇ ಹಿಂದಿನ ಸರ್ಕಾರಗಳ ಕಾಲದಲ್ಲಿ ರೇಪ್ ಆಗಿಲ್ವಾ ಎಂದು ಸಮರ್ಥಿಸಿಕೊಳ್ಳುವ ನೀವು ರಾಜ್ಯದ ಮುಖ್ಯಮಂತ್ರಿಯಾಗಿರಲು ನಾಲಾಯಕ್ ಸಿದ್ದರಾಮಯ್ಯ. ಇದನ್ನೂ ಓದಿ: ಬಿಜೆಪಿ ಕೋರ್‌ ಕಮಿಟಿ ಸಭೆ – ರಾಮುಲುಗೆ ರಾಧಾಮೋಹನ್‌ ದಾಸ್‌ ಕ್ಲಾಸ್‌!

    ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಕೊಲೆ, ದರೋಡೆ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇರುವುದು ರಾಜ್ಯದಲ್ಲಿ ಕುಸಿದುಬಿದ್ದಿರುವುದು ಕಾನೂನು-ಸುವ್ಯವಸ್ಥೆಗೆ ಸಾಕ್ಷಿ ಎಂದು ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ಏಯ್‌ ಯತ್ನಾಳ್‌ ಎಲ್ಲವನ್ನ ತೆಗೀಬೇಕಾ? – ಜಿಟಿಡಿ ಖಡಕ್‌ ವಾರ್ನಿಂಗ್‌

  • ನಾಳೆ ವರಮಹಾಲಕ್ಷ್ಮೀ ಹಬ್ಬ: ಗ್ರಾಹಕರಿಗೆ ಹೂ-ಹಣ್ಣು ಬೆಲೆ ಏರಿಕೆಯ ಬಿಸಿ

    ನಾಳೆ ವರಮಹಾಲಕ್ಷ್ಮೀ ಹಬ್ಬ: ಗ್ರಾಹಕರಿಗೆ ಹೂ-ಹಣ್ಣು ಬೆಲೆ ಏರಿಕೆಯ ಬಿಸಿ

    ಬೆಂಗಳೂರು: ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ನಮಗೆ ಎದುರಾಗುತ್ತವೆ. ತಿಂಗಳ ಆರಂಭದಿಂದಲೇ ಶುರುವಾಗುವ ತಯಾರಿ ಶ್ರಾವಣ ಮುಗಿಯುವವರೆಗೂ ನಿಲ್ಲುವುದಿಲ್ಲ. ಪ್ರತಿ ಶುಕ್ರವಾರ ಮನೆಯಲ್ಲಿ ವಿಜೃಂಭಿಸುವ ಲಕ್ಷ್ಮೀ ಪೂಜೆಯ ಸಿದ್ಧತೆಯಂತೂ ಸಂಭ್ರಮದಿಂದ ಕೂಡಿರುತ್ತದೆ. ಹಬ್ಬದಲ್ಲಿ ಗಡಿಬಿಡಿಯೂ ಇರುತ್ತದೆ.

    ನಾಳೆ ಶಾವ್ರಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮೀ ಪೂಜೆ (Varamahalakshmi festival) ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಮಾರುಕಟ್ಟೆಯಲ್ಲಿ ಹೂವು-ಹಣ್ಣುಗಳ (Flowers, Fruits) ಬೆಲೆ ಗಗನಕ್ಕೇರಿದೆ. ಹಬ್ಬದ ಹಿಂದಿನ ದಿನ ಮಾರುಕಟ್ಟೆಗೆ ಇಳಿಯುವ ಜನರು ಹೂವು ಹಣ್ಣಿನ ಬೆಲೆ ಕೇಳಿ ಶಾಕ್ ಆಗಿದ್ದಾರೆ. ಹೂವು ಹಣ್ಣುಗಳಿಲ್ಲದೇ ಹಬ್ಬ ಮಾಡುವುದು ಅಸಾಧ್ಯ. ಹೀಗಾಗಿ ದರ ಹೆಚ್ಚಿದ್ದರೂ ಜನರಿಗೆ ಕೊಂಡುಕೊಳ್ಳುವುದು ಅನಿವಾರ್ಯವಾಗಿದೆ.

    ಸಾಮಾನ್ಯ ದಿನ ಮಾರಾಟವಾಗುವ ದರಕ್ಕಿಂತ ಹೂವು ಹಣ್ಣಿನ ದರ ದುಪ್ಪಟ್ಟಾಗಿದೆ. ಹಾಗಾದರೆ ಯಾವುದರ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

    ಹೂವಿನ ಬೆಲೆ ಎಷ್ಟಿದೆ?
    ಮಲ್ಲಿಗೆ ಕೆಜಿಗೆ 1,600 ರೂಪಾಯಿ, ಸೇವಂತಿ 80-300 ರೂ., ಗುಲಾಬಿ 200-250 ರೂ., ಚೆಂಡು ಹೂವು 50-80 ರೂ., ಸುಗಂಧರಾಜ 300 ರೂ., ಕನಕಾಂಬರ 2,000 ರೂ., ಸೇವಂತಿಗೆ ಮಾರು 80-200 ರೂ., ಮಲ್ಲಿಗೆ ಹಾರ 1,500-2,000 ರೂ. ಹಾಗೂ ಬಾಳೆಕಂದು ಜೋಡಿ 100-150 ರೂ. ಇದೆ.

    ಯಾವ ಹಣ್ಣಿಗೆ ಎಷ್ಟು ಬೆಲೆ?
    ಮಿಕ್ಸ್ ಹಣ್ಣು ಕೆಜಿಗೆ 450 ರೂಪಾಯಿ, ಸೇಬು 300 ರೂ., ದಾಳಿಂಬೆ 250 ರೂ., ಅನಾನಸ್ 150-200 ರೂ. ಇದೆ.

  • ಮತ್ತೆ ಟೊಮೆಟೋ ದರ ಭಾರೀ ಏರಿಕೆ – ಗ್ರಾಹಕರು ಕಂಗಾಲು

    ಮತ್ತೆ ಟೊಮೆಟೋ ದರ ಭಾರೀ ಏರಿಕೆ – ಗ್ರಾಹಕರು ಕಂಗಾಲು

    ಬೆಂಗಳೂರು: ಈಗಾಗಲೇ ಗಗನದತ್ತ ಮುಖ ಮಾಡಿದ್ದ ಟೊಮೆಟೋ (Tomato) ದರ ಮತ್ತಷ್ಟು ಏರಿಕೆ ಕಂಡಿದೆ. ಮೊದಲೇ ಕಂಗಾಲಾಗಿದ್ದ ಗ್ರಾಹಕರಿಗೆ ದರ (Price) ಏರಿಕೆ ಮತ್ತಷ್ಟು ಶಾಕ್ ನೀಡಿದೆ.

    ನಾಟಿ ಟೊಮೆಟೋ ಕೆಜಿಗೆ 140 ರಿಂದ 150 ರೂ.ಗೆ ಹಾಗೂ ಫಾರ್ಮ್ ಟೊಮೆಟೋ 120 ರಿಂದ 130 ರೂ.ಗೆ ಏರಿಕೆ ಕಂಡಿದೆ. ಇದರಿಂದ ಟೊಮೆಟೋ ಮಾರಾಟಗಾರರ ಅದೃಷ್ಟ ಶುಕ್ರದೆಸೆಗೆ ತಿರುಗಿದೆ. ಇನ್ನೊಂದೆಡೆ ಗ್ರಾಹಕರಿಗೆ ಗಗನ ಕುಸುಮವಾಗಿ ಕಾಡಿದೆ. ಇದನ್ನೂ ಓದಿ: 21 ಲಕ್ಷ ಮೌಲ್ಯದ ಟೊಮೆಟೋ ತುಂಬಿದ್ದ ಲಾರಿ ನಾಪತ್ತೆ ಕೇಸ್‌ – ಹಣದೊಂದಿಗೆ ಚಾಲಕ, ಕ್ಲೀನರ್ ಪರಾರಿ

    ಕಳೆದ ಒಂದು ವಾರದ ಹಿಂದೆ ಕೆಜಿಗೆ 70-80 ರೂ.ಗೆ ಇದ್ದ ಟೊಮೆಟೋ ದರ ಪೂರೈಕೆ ಕಡಿಮೆ ಆಗಿರುವ ಹಿನ್ನಲೆ ಮತ್ತೆ ದಿಢೀರ್ ಏರಿಕೆ ಕಂಡಿದೆ. ಈ ಬಾರಿ ರಾಜ್ಯದಲ್ಲಿ ಟೊಮೆಟೋ ಇಳುವರಿ ಕಡಿಮೆಯಾಗಿದ್ದು ಇದಕ್ಕೆ ಕಾರಣವಾಗಿದೆ. ಅಲ್ಲದೇ ಜಡಿ ಮಳೆಯಿಂದಾಗಿ ಒಂದಷ್ಟು ಕಡೆ ಬೆಲೆ ಹಾನಿಯಾಗಿದ್ದು ಪೂರೈಕೆಯಲ್ಲಿ ವ್ಯತ್ಯಯಕ್ಕೆ ಕಾರಣವಾಗಿದೆ.

    ಇದರಿಂದ ಕೆಲವು ಮಾರುಕಟ್ಟೆಗಳಿಗೆ ಟೊಮೆಟೋ ಪೂರೈಕೆಯೇ ಆಗಿಲ್ಲ. ಬಹುತೇಕ ಎಲ್ಲಾ ತರಕಾರಿ ಅಂಗಡಿಗಳಲ್ಲೂ ಕಾಣುತ್ತಿದ್ದ ಟೊಮೆಟೋ ಕೆಆರ್ ಮಾರ್ಕೆಟ್‍ನಿಂದ  (KR Market) ಕಾಣೆಯಾಗಿದೆ. ಇದನ್ನೂ ಓದಿ: ರಾತ್ರೋ ರಾತ್ರಿ ರೈಲ್ವೇ ಕಂಬಿಗಳ ಸಾಗಾಟ – ಮಾಲು ಸಮೇತ ವಾಹನ ವಶಕ್ಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]