Tag: KPTCL

  • ಬೆಂಗಳೂರಿನ ಈ ಪ್ರದೇಶದಲ್ಲಿ ನಾಳೆ, ನಾಡಿದ್ದು ವಿದ್ಯುತ್ ವ್ಯತ್ಯಯ – ನಿಮ್ಮ ಏರಿಯಾ ಇದ್ಯಾ?

    ಬೆಂಗಳೂರಿನ ಈ ಪ್ರದೇಶದಲ್ಲಿ ನಾಳೆ, ನಾಡಿದ್ದು ವಿದ್ಯುತ್ ವ್ಯತ್ಯಯ – ನಿಮ್ಮ ಏರಿಯಾ ಇದ್ಯಾ?

    ಬೆಂಗಳೂರು: ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಮಂಗಳವಾರ (ಸೆ.16) ಹಾಗೂ ಬುಧವಾರ (ಸೆ.17) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

    ಮಂಗಳವಾರ (ಸೆ.16) ಆಡುಗೋಡಿ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ಗಂಟೆವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ. ಆಡುಗೋಡಿ, ಸಲಾಪುರಿಯಾ ಟವರ್, ಬಿಗ್ ಬಜಾರ್, ಆಕ್ಸೆಂಚರ್, ಕೆ.ಎಮ್.ಎಪ್, ಗೋಡೌನ್, ನಂಜಪ್ಪ ಲೇಔಟ್, ನ್ಯೂ ಮೈಕೋ ರಸ್ತೆ, ಚಿಕ್ಕಲಕ್ಷ್ಮೀ ಲೇಔಟ್, ಮಹಲಿಂಗೇಶ್ವರ ಬಡಾವಣೆ, ಬೆಂಗಳೂರು ಡೈರಿ, ಫೋರಾಮ್, ರಂಗದಾಸಪ್ಪ ಲೇಔಟ್, ಲಕ್ಕಸಂದ್ರ, ವಿಲ್ಸನ್ ಗಾರ್ಡನ್, ಚಿನ್ನಯ್ಯನ್ನ ಪಾಳ್ಯ, ಚಂದ್ರಪ್ಪ ನಗರ, ನಿಮ್ಯಾನ್ಸ್ ಅಡ್ಮಿನಿಸ್ರೆಟಿವ್ ಬ್ಲಾಕ್, ಬಂಡೆ ಸ್ಲಮ್, ಸುಣ್ಣದಕಲ್ಲು, ಬೃಂದಾವನ ಸ್ಲಮ್, ಲಾಲ್‌ಜಿ ನಗರ, ಶಾಮಣ್ಣ ಗಾರ್ಡನ್, ಎನ್‌ಡಿಆರ್‌ಐ, ಪೋಲಿಸ್ ವಸತಿ ಗೃಹಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.ಇದನ್ನೂ ಓದಿ: ವಾಲ್ಮೀಕಿ ಹಗರಣ| ಬಳ್ಳಾರಿ ಬಿಜೆಪಿ ನಾಯಕನ ಮನೆ ಮೇಲೆ ಸಿಬಿಐ ದಾಳಿ

    ಇನ್ನೂ ಬುಧವಾರ (ಸೆ.17) 66/11 ಕೆವಿ ರಾಜನಕುಂಟೆ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 10:00 ಗಂಟೆಯಿಂದ ಸಂಜೆ 4:00ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಹೊನ್ನೇನಹಳ್ಳಿ, ಸಿಂಗನಾಯಕನಹಳ್ಳಿ, ರಾಜನಕುಂಟೆ, ಅಡ್ದೇವಿಶ್ವನಾಥಪುರ, ಮಾರಸಂದ್ರ, ಶ್ರೀರಾಮನಹಳ್ಳಿ, ನೆಲಕುಂಟೆ, ಹನಿಯೂರು, ಚೆಲ್ಲಹಳ್ಳಿ, ರ‍್ಲಾಪುರ, ಕೆಎಂಎಫ್, ಇಟಗಲ್ಪುರ, ರ‍್ಕೇರಿ, ಬೈರಾಪುರ, ಬೂದಮನಹಳ್ಳಿ, ದಿಬ್ಬೂರು, ಕಾಕೋಲು, ಸೊನ್ನೇನಹಳ್ಳಿ, ಸೆಂಚುರ್ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ.

  • ಯಾವ ಕ್ಷಣದಲ್ಲಾದ್ರೂ ಸೂಪಾ ಡ್ಯಾಮ್‌ನಿಂದ ನೀರು ಬಿಡುಗಡೆ – ಪ್ರವಾಹದ ಬಗ್ಗೆ ಕೆಪಿಟಿಸಿಎಲ್‌ನಿಂದ ಅಂತಿಮ ಎಚ್ಚರಿಕೆ

    ಯಾವ ಕ್ಷಣದಲ್ಲಾದ್ರೂ ಸೂಪಾ ಡ್ಯಾಮ್‌ನಿಂದ ನೀರು ಬಿಡುಗಡೆ – ಪ್ರವಾಹದ ಬಗ್ಗೆ ಕೆಪಿಟಿಸಿಎಲ್‌ನಿಂದ ಅಂತಿಮ ಎಚ್ಚರಿಕೆ

    ಬೆಂಗಳೂರು: ಕಾಳಿ ನದಿ (Kali River) ಯೋಜನೆ 1ನೇ ಹಂತ ಸೂಪಾ ಅಣೆಕಟ್ಟೆ (Supa Dam) ಜಲಾನಯನ ಪ್ರದೇಶದಲ್ಲಿ ಸತತ (Rain) ಮಳೆಯಾಗುತ್ತಿದೆ. ಈ ಹಿನ್ನೆಲೆ ಜಲಾಶಯದ ಕೆಳಹಂತದ ಪ್ರದೇಶದಲ್ಲಿ ಪ್ರವಾಹದ (Flood) ಕುರಿತು ಕೆಪಿಸಿಸಿಎಲ್ ವತಿಯಿಂದ ಮೂರನೆಯ ಹಾಗೂ ಅಂತಿಮ ಮುನ್ನೆಚ್ಚರಿಕೆ ನೀಡಲಾಗಿದೆ.

    ಸೂಪಾ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು, ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ನೀರಿನ ಮಟ್ಟವು ಸತತವಾಗಿ ಏರುತ್ತಿದೆ. ಜಲಾಶಯದ ಗರಿಷ್ಠ ಮಟ್ಟವು 564.00 ಮೀಟರ ಆಗಿದ್ದು, ನೀರಿನ ಸಂಗ್ರಹಣ ಸಾಮರ್ಥ್ಯ 147.55 ಟಿಎಂಸಿ ಇರುತ್ತದೆ. ಜಲಾಶಯದ ಈಗಿನ ನೀರಿನ ಮಟ್ಟವು 558.87 ಮೀಟರ್ ಆಗಿದ್ದು, 126.345 ಟಿಎಂಸಿ ನೀರಿನೊಂದಿಗೆ ಒಟ್ಟು ಸಾಮರ್ಥ್ಯದ 85.63% ರಷ್ಟು ಭರ್ತಿಯಾಗಿದೆ. ಇದನ್ನೂ ಓದಿ: ಅಲೆಗಳ ಹೊಡೆತಕ್ಕೆ ಅರಬ್ಬಿ ಸಮುದ್ರದಲ್ಲಿ ಮುಳುಗಿದ ಪರ್ಷಿಯನ್ ಬೋಟ್ – 25 ಮೀನುಗಾರರ ರಕ್ಷಣೆ

    ಇದಲ್ಲದೆ, ಜಲಾಶಯದ ಒಳಹರಿವು ಸುಮಾರು 21,261 ಕ್ಯೂಸೆಕ್ ಇದ್ದು, ನೀರಿನ ಹರಿವು ಇದೇ ರೀತಿ ಮುಂದುವರಿದರೆ ಜಲಾಶಯವು ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆಣೆಕಟ್ಟು ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿ ಜಲಾಶಯದ ನೀರನ್ನು ಯಾವುದೇ ಸಮಯದಲ್ಲಾದರೂ ಹೊರ ಬಿಡಲಾಗುವುದು ಎಂದು ಕೆಪಿಸಿಸಿಎಲ್ ತಿಳಿಸಿದೆ.

    ಈ ಹಿನ್ನೆಲೆಯಲ್ಲಿ ಆಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರು ಇತ್ಯಾದಿಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕು. ಆಣೆಕಟ್ಟೆಯ ಕೆಳಭಾಗದ ನದಿ ಪಾತ್ರದಲ್ಲಿ ದೋಣಿ ಸಂಚಾರ, ಮೀನುಗಾರಿಕೆ, ಜಲಸಾಹಸ ಕ್ರೀಡಾ ಚಟುವಟಿಕೆಗಳನ್ನು ಮತ್ತು ಇತರೆ ಚಟುವಟಿಕೆಗಳನ್ನು ಮಳೆಗಾಲ ಮುಗಿಯುವವರೆಗೂ ನಡೆಸಬಾರದು ಎಂದು ಮನವಿ ಮಾಡಿದೆ. ಇದನ್ನೂ ಓದಿ: ಲಿಂಗನಮಕ್ಕಿ, ಗೇರುಸೊಪ್ಪ ಡ್ಯಾಮ್‌ನಿಂದ ನೀರು ಬಿಡುಗಡೆ – ಜೋಗ್‌ ಫಾಲ್ಸ್‌ಗೆ ಜೀವಕಳೆ

  • ಇಂದು ಬೆಂಗಳೂರಿನ ಹಲವಡೆ ವಿದ್ಯುತ್‌ ವ್ಯತ್ಯಯ – ನಿಮ್ಮ ಏರಿಯಾ ಇದ್ಯಾ ಚೆಕ್‌ ಮಾಡಿಕೊಳ್ಳಿ

    ಇಂದು ಬೆಂಗಳೂರಿನ ಹಲವಡೆ ವಿದ್ಯುತ್‌ ವ್ಯತ್ಯಯ – ನಿಮ್ಮ ಏರಿಯಾ ಇದ್ಯಾ ಚೆಕ್‌ ಮಾಡಿಕೊಳ್ಳಿ

    ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ (Bengaluru) ಮಹಾಲಕ್ಷ್ಮೀ ಲೇಔಟ್ (Mahalakshmi Layout) ಉಪಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

    ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಣೆಯಲ್ಲಿ ತಿಳಿಸಿದೆ.


    ಯಾವ ಪ್ರದೇಶದಲ್ಲಿ ವ್ಯತ್ಯಯ?
    ಮಂಜುನಾಥ್ ನಗರ, ತಿಮ್ಮಯ್ಯ ರಸ್ತೆ, ಭೋವಿ ಕಾಲೋನಿ, ಮಹಾಗಣಪತಿ ನಗರ, ಪುಷ್ಪಾಂಜಲಿ ಅಪಾರ್ಟ್‌ಮೆಂಟ್, ಶಿವನಹಳ್ಳಿ ಪಾರ್ಕ್, ಆದರ್ಶ ನಗರ, ಆದರ್ಶ ಲೇಔಟ್, ಯುನಿಕ್ಸ್ ಕಾಲೋನಿ. ಇದನ್ನೂ ಓದಿ: ರಷ್ಯಾ ಡ್ರೋನ್‌ ದಾಳಿ ಮುಳುಗಿತು ಉಕ್ರೇನ್‌ ಅತಿ ದೊಡ್ಡ ನೌಕಾ ಹಡಗು

    ಇಂದಿರಾ ನಗರ, ಮಂಜುನಾಥ್ ನಗರ, 3ನೇ ಹಂತ 1ನೇ ಬ್ಲಾಕ್, ಲಕ್ಷ್ಮೀ ನಗರ, HVKಲೇಔಟ್, ಕರ್ನಾಟಕ ಲೇಔಟ್, ಕಮಲಾ ನಗರ, VJSSಲೇಔಟ್, ನಾಗಾಪುರ, ಮಹಾಲಕ್ಷ್ಮಿ ಪುರಂ, ಮೋದಿ ಆಸ್ಪತ್ರೆ ರಸ್ತೆ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಹಂಸಲೇಖ ಹೋಮ್ ಸುತ್ತಮುತ್ತ, ಶಂಕರಮಠ, ಪೈಪ್ ಲೈನ್ ರಸ್ತೆ, ಜೆ.ಸಿ.ನಗರ, ಕುರಬರಳ್ಳಿ, ರಾಜಾಜಿನಗರ 2ನೇ ಬ್ಲಾಕ್.

    ESI ಹಾಸ್ಪಿಟಲ್, ಗೃಹಲಕ್ಷ್ಮಿ ಲೇಔಟ್ 2ನೇ ಹಂತ, ಗೆಳೆಯರ ಬಳಗ, ಮೈಕೋ ಲೇಔಟ್, ಜಿ.ಡಿ.ನಾಯ್ಡು ಹಾಲ್, ವೆಸ್ಟ್ ಆಫ್ ಕಾರ್ಡ್ ರಸ್ತೆ, ಇಸ್ಕಾನ್, BNES ಕಾಲೇಜು, ಎಸ್ಟೀಮ್ ಕ್ಲಾಸಿಕ್ ಅಪಾರ್ಟ್ ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯತ್ಯಯವಾಗಲಿದೆ.

  • ಬೆಂಗಳೂರಿನಲ್ಲಿ ಶನಿವಾರ, ಭಾನುವಾರ ವಿದ್ಯುತ್ ವ್ಯತ್ಯಯ – ನಿಮ್ಮ ನಗರ ಇದ್ಯಾ ಚೆಕ್‌ ಮಾಡಿ

    ಬೆಂಗಳೂರಿನಲ್ಲಿ ಶನಿವಾರ, ಭಾನುವಾರ ವಿದ್ಯುತ್ ವ್ಯತ್ಯಯ – ನಿಮ್ಮ ನಗರ ಇದ್ಯಾ ಚೆಕ್‌ ಮಾಡಿ

    ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಹೂಡಿ ಸ್ಟೇಷನ್ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

    ಎಲ್ಲೆಲ್ಲಿ ವ್ಯತ್ಯಯ?
    ಹುಡಿ ವಿಲೇಜ್, ತಿಗಳರಪಾಳ್ಯ, ಸೀತಾರಾಮಪಾಳ್ಯ, ಬಸವನಗರ, ಸೊನ್ನೆಹಳ್ಳಿ, ಎನ್‌ಜಿಎಫ್‌ ಕೈಗಾರಿಕಾ ಪ್ರದೇಶ, ಶಿವರಾಜ್ ಫ್ಯಾಕ್ಟರಿ, ಇಎಸ್ಐ ರಸ್ತೆ, ವಿಎಸ್ಎನ್ಎಲ್ ಡೇಟಾ ಸೆಂಟರ್, ಪುರವ ಪಾರ್ಕ್ ವಿಲಾಸ್, ಶಿವಗಂಗಾ ಲೇಔಟ್, ಅನುಗ್ರಹ ಲೇಔಟ್, ಚಿನ್ನಪ್ಪ ಲೇಔಟ್, ಔಟರ್ ರಿಂಗ್ ರಸ್ತೆ, ರಾಮಕೃಷ್ಣ ರೆಡ್ಡಿ ಲೇಔಟ್, ಗರುಡಾಚಾರ್ ಪಾಳ್ಯ, ಲಕ್ಷ್ಮೀ ಸಾಗರ, ಮಹೇಶ್ವರಮ್ಮ ದೇವಾಲಯ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

    ಪೀಣ್ಯ ವ್ಯಾಪ್ತಿಯಲ್ಲಿ ಭಾನುವಾರ ವಿದ್ಯುತ್ ವ್ಯತ್ಯಯ
    ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಪೀಣ್ಯ ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಇದನ್ನೂ ಓದಿ: ಮಹೇಶ್‌ ಶೆಟ್ಟಿ ತಿಮರೋಡಿಯನ್ನು ಒದ್ದು ಒಳಗೆ ಹಾಕಿದ್ದೀವಿ: ಡಿಕೆಶಿ

    ಎಲ್ಲೆಲ್ಲಿ ವ್ಯತ್ಯಯ?
    ಹೆಚ್. ಎಮ್.ಟಿ ರಸ್ತೆ, ಆಆರ್‌ಎನ್‌ಎಸ್‌ ಅಪಾರ್ಟ್‌ಮೆಂಟ್‌, ಸಿಎಂಟಿಐ, ಬರ‍್ಲಿಂಗಪ್ಪ ಗಾರ್ಡನ್‌, ಪೀಣ್ಯ ಪೊಲೀಸ್ ಠಾಣೆ ರಸ್ತೆ, ಟೆಲಿಫೋನ್ ಎಕ್ಸ್ಚೇಂಜ್, 6ನೇ ಕ್ರಾಸ್, ರಿಲಯನ್ಸ್ ಕಮ್ಯುನಿಕೇಷನ್, ಗಣಪತಿನಗರ ಮುಖ್ಯ ರಸ್ತೆ, ಪೊಲೀಸ್ ಠಾಣೆ ರಸ್ತೆ, ಚಾಮುಂಡಿಪುರ, ಮುನೇಶ್ವರ ದೇವಸ್ಥಾನ ರಸ್ತೆ. ಇದನ್ನೂ ಓದಿ: ಡಾ. ವಿಷ್ಣು ಅಭಿಮಾನ ಸ್ಮಾರಕ ಪುತ್ಥಳಿ ನಿರ್ಮಾಣಕ್ಕೆ ಚಾಲನೆ

    ಮಲಯಾಳಿ ಅತಿಥಿ ಗೃಹ ರಸ್ತೆ, ಕೆಎಚ್‌ಬಿ ಲೇಔಟ್, ರಾಜೇಶ್ವರಿನಗರ, ಆಕಾಶ್ ಥೀಟರ್ ರಸ್ತೆ, ವಿಜ್ಞಾನ ಪಬ್ಲಿಕ್ ಸ್ಕೂಲ್ ರಸ್ತೆ. ಭಿರವೇಶ್ವರ ನಗರ, ಬ್ಯಾಂಕ್ ಕಾಲೋನಿ, 6ನೇ ಮುಖ್ಯ ರಸ್ತೆ, ವಿ 5ನೇ ಮುಖ್ಯ ರಸ್ತೆ, ಯುಕೊ ಬ್ಯಾಂಕ್ ರಸ್ತೆ, 7ನೇ ಮುಖ್ಯ ರಸ್ತೆ, 3ನೇ ಹಂತ, ರಾಜಗೋಪಾಲ ನಗರ, ಕಸ್ತೂರಿ ಬಡಾವಣೆ, ಜಿಕೆಡಬ್ಲ್ಯೂ ಲೇಔಟ್, ಬೈರವೇಶ್ವರ ನಗರ, ಇಎಸ್ಐಸಿ ಆಸ್ಪತ್ರೆ ಮತ್ತು ಸುತ್ತಮುತ್ತಲಿನ ಪ್ರದೇಶ

    ನೆಲಗೆದರನಹಳ್ಳಿ ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

    ಕೆಂಪಯ್ಯ ಗಾರ್ಡನ್‌, ತಿಗಳರಪಾಳ್ಯ ಮುಖ್ಯ ರಸ್ತೆ, ಮಾರುತಿ ಇಂಡಸ್ಟ್ರಿಯಲ್ ಎಸ್ಟೇಟ್, ನೆಲಿಕಾಗಡರನಹಳ್ಳಿ, ಹೆಚ್ ಎಂ ಟಿ ಲೇಔಟ್, ಶಿವಪುರ, ಗೃಹಲಕ್ಷ್ಮಿ ಲೇಔಟ್, ಶಿವಪುರ ಬೆಳ್ಮಾರ್ ಲೇಔಟ್, ವಿನಾಯಕನಗರ, 8ನೇ ಮೈಲ್ ರಸ್ತೆ, ಜಾಲಹಳ್ಳಿ ಕ್ರಾಸ್, ಕೆ.ಎಲ್.ಎ.ಪಿ.ಎಲ್. ಆಂಟಿಬಯೋಟಿಕ್ಸ್ ಪ್ರೈವೇಟ್ ಲಿಮಿಟೆಡ್, ರುಕ್ಮಿಣಿನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯತ್ಯಯ ಉಂಟಾಗಲಿದೆ.

  • ಬೆಂಗಳೂರಿನ ಈ ಭಾಗದಲ್ಲಿ ಜು.21, 22ರಂದು ವಿದ್ಯುತ್‌ ವ್ಯತ್ಯಯ

    ಬೆಂಗಳೂರಿನ ಈ ಭಾಗದಲ್ಲಿ ಜು.21, 22ರಂದು ವಿದ್ಯುತ್‌ ವ್ಯತ್ಯಯ

    ಬೆಂಗಳೂರು: ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 66/11ಕೆವಿ ಸಹಕಾರನಗರ ಉಪಕೇಂದ್ರ ವ್ಯಾಪ್ತಿಯಲ್ಲಿ ಇದೇ ಜುಲೈ 21 (ಸೋಮವಾರ), ಜು.22 (ಮಂಗಳವಾರ) ಬೆಂಗಳೂರು ನಗರದ ಹಲವೆಡೆ ವಿದ್ಯುತ್‌ ವ್ಯತ್ಯಯ (Power Outage) ಆಗಲಿದೆ.

    ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್‌ (Electricity) ಪೂರೈಕೆಯಲ್ಲಿ ವ್ಯತ್ತಯ ಉಂಟಾಗಲಿದೆ ಎಂದು ಕೆಪಿಟಿಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಜೆಡಿಎಸ್-ಬಿಜೆಪಿ ಸಂಸದರು ಮೋದಿ ಮುಂದೆ ನಿಂತು ಮಾತಾಡೋಕೆ ನಡುಗುತ್ತಾರೆ: ಸಿದ್ದರಾಮಯ್ಯ ವಾಗ್ದಾಳಿ

    ಎಲ್ಲೆಲ್ಲಿ ವಿದ್ಯುತ್‌ ವ್ಯತ್ಯಯ?
    ಬೆಂಗಳೂರು ನಗರದ ಎ ಬ್ಲಾಕ್, ಇ ಬ್ಲಾಕ್, ಬಳ್ಳಾರಿ ಮುಖ್ಯ ರಸ್ತೆ, ಜಿ-ಬ್ಲಾಕ್, ಎಫ್ ಬ್ಲಾಕ್, ತಲಕಾವೇರಿ ಲೇಔಟ್, ಅಮೃತಹಳ್ಳಿ, ಬಿಜಿಎಸ್ ಲೇಔಟ್, ನವ್ಯನಗರ ಬ್ಲಾಕ್, ಶಬರಿ ನಗರ, ಬೈತರಾಯನಪುರ ಜಕ್ಕೂರು ಬಡಾವಣೆ, ಜಿಕೆವಿಕೆ ಲೇಔಟ್, ಜಕ್ಕೂರು ಪ್ಲಾಂಟೇಶನ್, ಯೋಷಾದ ನಗರಾಮೃತಹಳ್ಳಿ, ಅಮೃತಹಳ್ಳಿ ಬಿ ಬ್ಲಾಕ್, ಸಿ ಬ್ಲಾಕ್, ಸಿಕ್ಯುಎಎಲ್ ಲೇಯೋಟ್, ಡಿ ಬ್ಲಾಕ್, ಇ ಬ್ಲಾಕ್, ಸಂಪಿಗೆಹಳ್ಳಿ, ಅಗ್ರಹಾರ ಗ್ರಾಮ, ಜಯಸೂರ್ಯ ಲೇಔಟ್, ವಿಧಾನಸೌಧ ಲೇಔಟ್ ಸಾಯಿಬಾಬಾ ಲೇಔಟ್, ಟೆಲಿಕಾಂ ಲೇಔಟ್, ಎಂಸಿಇಸಿಎಚ್ಎಸ್ ಲೇಔಟ್, ಎಂಸಿಇಸಿಎಚ್ಎಸ್ ಲೇಔಟ್, ಎಂಸಿ ಪಿಎಚ್‌ಎಸ್ ಲೇಔಟ್, ಸೂರ್ಯೋನಗರ, ಅಗ್ರಹಾರ ಲೇಔಟ್, ಕೋಗಿಲು ಲೇಔಟ್, ಶ್ರೀನಿವಾಸಪುರಜಕ್ಕೂರು, ವಿಆರ್‌ಎಲ್‌ ರಸ್ತೆ (ಸಂತೆ ರಸ್ತೆ), ಐಎಎಸ್ ರಸ್ತೆ, ಅರ್ಕಾವತಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ. ಇದನ್ನೂ ಓದಿ: ಜೆಡಿಎಸ್ ಶಾಸಕರಿಗೆ ಅನುದಾನ ಬಿಡುಗಡೆ ಮಾಡದೇ ರಾಜ್ಯ ಸರ್ಕಾರ ಅನ್ಯಾಯ: ಸುರೇಶ್ ಬಾಬು

  • ಡಿಕೆ ಡಿಕೆ ಅಂತ ಕೂಗೋದಲ್ಲ, ಮುಂದೆಯೂ ನನಗೆ ಅವಕಾಶ ಕೊಡಿ: ಮತ್ತೆ ಸಿಎಂ ಆಸೆ ಬಿಚ್ಚಿಟ್ಟ ಡಿಕೆಶಿ

    ಡಿಕೆ ಡಿಕೆ ಅಂತ ಕೂಗೋದಲ್ಲ, ಮುಂದೆಯೂ ನನಗೆ ಅವಕಾಶ ಕೊಡಿ: ಮತ್ತೆ ಸಿಎಂ ಆಸೆ ಬಿಚ್ಚಿಟ್ಟ ಡಿಕೆಶಿ

    ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮತ್ತೊಮ್ಮೆ ಪರೋಕ್ಷವಾಗಿ ಸಿಎಂ ಸ್ಥಾನ ಆಸೆಯನ್ನು ಹೊರ ಹಾಕಿದ್ದಾರೆ. ಅಷ್ಟೇ ಅಲ್ಲ ಡಿಕೆ ಶಿವಕುಮಾರ್‌ಗೆ ನೀವು ಶಕ್ತಿ ಕೊಡಬೇಕು ಎಂಬ ಮನವಿ ಮಾಡುವ ಮೂಲಕ ಸಿಎಂ ಸ್ಥಾನಕ್ಕೆ (Chief Minister Post) ನನ್ನನ್ನ ಕೂರಿಸಿ ಎಂಬ ಪರೋಕ್ಷವಾಗಿ ಸಂದೇಶ ಕಳುಹಿಸಿದ್ದಾರೆ.

    ಅರಮನೆ ಮೈದಾನದಲ್ಲಿ ಇವತ್ತು ಕೆಪಿಟಿಸಿಎಲ್ (KPTCL) ನೌಕರರ ಸಂಘದ ವಜ್ರ ಮಹೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ವೇಳೆ ಡಿಕೆ ಶಿವಕುಮಾರ್ ಭಾಷಣ ಮಾಡಲು ಬಂದ ಕೂಡಲೇ ವಿದ್ಯುತ್ ಇಲಾಖೆ ಸಿಬ್ಬಂದಿಗಳು, ನೌಕರರು ಡಿಕೆ ಡಿಕೆ ಅಂತ ಘೋಷಣೆ ಕೂಗಿದರು. ಇದನ್ನೂ ಓದಿ: ನಂದಿನಿ ನಮ್ಮ ಸಂಸ್ಥೆ, ‘ನಮ್ಮ ಮೆಟ್ರೋ’ದಲ್ಲಿ ಮಳಿಗೆ ಹಾಕಲು ಅವಕಾಶ ಕೊಡ್ತೀವಿ: ಡಿಕೆಶಿ

     

    ಈ ವೇಳೆ ಮಾತಾನಾಡಿದ ಡಿಕೆ ಶಿವಕುಮಾರ್ ಈಗ ಡಿಕೆ ಡಿಕೆ ಅನ್ನೋದು ಅಲ್ಲ. ಎಲೆಕ್ಷನ್ ‌ನಲ್ಲಿ ಇನ್ನೊಂದು ಸಾರಿ ಡಿಕೆ ಶಿವಕುಮಾರ್ ತಂದು ಕೂರಿಸಿದ ಮೇಲೆ ಈ ಘೋಷಣೆ ಕೂಗಿ ಎಂದರು. ಇದನ್ನೂ ಓದಿ: ನಾವಿರುವವರೆಗೂ ಎಸ್ಕಾಂಗಳ ಖಾಸಗೀಕರಣಕ್ಕೆ ಅವಕಾಶವಿಲ್ಲ: ಡಿ.ಕೆ ಶಿವಕುಮಾರ್

    ಮಾತು ಮುಂದುವರೆಸಿದ ಡಿಕೆಶಿವಕುಮಾರ್, ತಾವು ಇಂಧನ ಇಲಾಖೆ ಸಚಿವನಾಗಿ ಇದ್ದಾಗ ಮಾಡಿದ ಸಾಧನೆ ಹೇಳಿದ್ರು. ನೀವು ಮನಸ್ಸು ಮಾಡಿದ್ರೆ ಡಿಕೆ ಶಿವಕುಮಾರ್‌ನನ್ನು ಮೇಲಕ್ಕೆ ಎತ್ತಬಹುದು. ಕೆಳಗೆ ಇಳಿಸಬಹುದು. ಅಷ್ಟು ಶಕ್ತಿ ನಿಮಗೆ ಇದೆ. ನಾವು ನಿಮಗೆ ಎಲ್ಲಾ ಮಾಡಿದ್ದೇವೆ. ನಿಮಗೆ ನಮ್ಮ ಮೇಲೆ ಉಪಕಾರ ಸ್ಮರಣೆ ಇರಬೇಕು. ಬರೀ ಡಿಕೆ ಡಿಕೆ ಅನ್ನೋದಲ್ಲ. ಈ ಸರ್ಕಾರವನ್ನು ತಂದು ಕೂರಿಸಬೇಕು ಎನ್ನುವ ಮೂಲಕ ಸಿಎಂ ಸ್ಥಾನಕ್ಕೆ ಆಶೀರ್ವಾದ ಮಾಡಬೇಕೆಂದು ಪರೋಕ್ಷವಾಗಿ ಹೇಳಿದರು.

  • ಮತ್ತೆ ದರ ಏರಿಕೆ ಶಾಕ್‌ – ಎಸ್ಕಾಂ ಪಿಂಚಣಿ ಹಣ ಹೊಂದಿಸಲು ಜನರ ಜೇಬಿಗೆ ಕತ್ತರಿ

    ಮತ್ತೆ ದರ ಏರಿಕೆ ಶಾಕ್‌ – ಎಸ್ಕಾಂ ಪಿಂಚಣಿ ಹಣ ಹೊಂದಿಸಲು ಜನರ ಜೇಬಿಗೆ ಕತ್ತರಿ

    – ಯೂನಿಟ್‌ಗೆ 36 ಪೈಸೆಯಂತೆ ದರ ಹೆಚ್ಚಳ

    ಬೆಂಗಳೂರು: ಎಸ್ಕಾಂಗಳ ಪಿಂಚಣಿ ಹಣ ಹೊಂದಿಸಲು ಜನರ ಜೇಬಿಗೆ ಸರ್ಕಾರ ಕತ್ತರಿ ಹಾಕಿದೆ. ಸಿಬ್ಬಂದಿಯ ಪಿಂಚಣಿ ದುಡ್ಡಿಗಾಗಿ ಪ್ರತಿ ಯೂನಿಟ್‌ಗೆ 36 ಪೈಸೆಯಂತೆ ದರವನ್ನು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (KERC) ಏರಿಕೆ ಮಾಡಿದೆ.

    ಕೆಪಿಟಿಸಿಎಲ್ (KPTCL) ಪ್ರಸ್ತಾವನೆಗೆ ಕೆಇಆರ್‌ಸಿ ಅಸ್ತು ಎಂದಿದ್ದು ಇದೇ ಏಪ್ರಿಲ್‌ನಿಂದ ಇದು ಜಾರಿಯಾಗಲಿದೆ. ಎಸ್ಕಾಂಗಳ ಪಿಂಚಣಿ ದುಡ್ಡನ್ನು ಗ್ರಾಹಕರಿಗೆ ವರ್ಗಾಯಿಸಿ ಶಾಕ್ ನೀಡಿದ್ದು ಸರಿ ಎಂಬ ಪ್ರಶ್ನೆ ಎದ್ದಿದೆ.

    ಇಂಧನ ಪೂರೈಕೆ ಕಂಪನಿಗಳಿಗೆ (ಎಸ್ಕಾಂಗಳು) ಬುಧವಾರವೇ ಕೆಇಆರ್‌ಸಿ ಗ್ರಾಹಕರಿಂದ ಸರ್ಕಾರದ ಪಿಂಚಣಿ ಮತ್ತು ಗ್ರಾಚ್ಯುಟಿ ಕೊಡುಗೆಗಳ ಪಾಲನ್ನು ವಸೂಲಿ ಮಾಡಲು ಅವಕಾಶ ನೀಡಿ ಆದೇಶ ಪ್ರಕಟಿಸಿದೆ. ಈ ವರ್ಷಕ್ಕೆ ಮಾತ್ರವಲ್ಲದೆ 2026-27 ಮತ್ತು 2027-28ರ ಆರ್ಥಿಕ ವರ್ಷಕ್ಕೂ ಪಿಂಚಣಿ ಮತ್ತು ಗ್ರಾಚ್ಯುಟಿ ಕೊಡುಗೆಗಳನ್ನು ಪರಿಷ್ಕರಣೆ ಮಾಡಲಾಗಿದೆ. ಇದರಿಂದಾಗಿ ಮುಂದಿನ ವರ್ಷಗಳಿಗೆ ಗ್ರಾಹಕರು ಕ್ರಮವಾಗಿ 35 ಪೈಸೆ ಮತ್ತು 34 ಪೈಸೆ ಪಾವತಿಸಬೇಕಾಗುತ್ತದೆ. ನೀರಾವರಿ ಪಂಪ್‌ಸೆಟ್, ವಿದ್ಯುತ್ ಬಳಕೆದಾರರು ಸೇರಿದಂತೆ ಎಲ್ಲಾ ಗ್ರಾಹಕರಿಂದಲೂ ವಸೂಲಿಗೆ ನಿರ್ಧಾರ ಮಾಡಲಾಗಿದೆ.

    ಕೆಪಿಟಿಸಿಎಲ್ ಮತ್ತು ಎಸ್ಕಾಂಗಳ ಸಿಬ್ಬಂದಿ ಪಿಂಚಣಿ ಗ್ರಾಚ್ಯುಟಿಯಲ್ಲಿ ಸರ್ಕಾರದ ಪಾಲನ್ನು ಎಸ್ಕಾಂಗಳು ಬಯಸಿದ್ರೆ ಗ್ರಾಹಕರಿಗೆ ವರ್ಗಾಯಿಸಬಹುದು ಎಂದು 2022 ರಲ್ಲಿ ಕರ್ನಾಟಕ ವಿದ್ಯುತ್ ಸುಧಾರಣಾ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿತ್ತು. ಈ ತಿದ್ದುಪಡಿಗೆ ಆಗಲೇ ವಿರೋಧ ವ್ಯಕ್ತವಾಗಿತ್ತು. ವಿರೋಧದ ಬೆನ್ನಲ್ಲೇ ಸರ್ಕಾರ ಯಥಾವತ್‌ ಆಗಿ ಜಾರಿ ಮಾಡಲು ಮುಂದಾಗಿದೆ.

    ಪಿಂಚಣಿ ಗ್ರಾಚ್ಯುಟಿ ನೆಪದಲ್ಲಿ 36 ಪೈಸೆ ಹೆಚ್ಚಳ ಮಾಡಿದ್ದರಿಂದ ಒಂದು ಮನೆಗೆ ಅಂದಾಜು 90 ರೂ. ವಿದ್ಯುತ್ ಬಿಲ್ ಹೆಚ್ಚಳವಾಗುವ ಸಾಧ್ಯತೆಯಿದೆ.

     

  • ಯಲಹಂಕ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರ ಲೋಕಾರ್ಪಣೆ

    ಯಲಹಂಕ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರ ಲೋಕಾರ್ಪಣೆ

    – 370 ಮೆ.ವ್ಯಾ ಸ್ಥಾಪಿತ ಸಾಮರ್ಥ್ಯದ ಗ್ಯಾಸ್, ಸ್ಟೀಮ್‌ನಿಂದ ಉತ್ಪಾದನೆ

    ಬೆಂಗಳೂರು: ವಿದ್ಯುತ್ ಸ್ಥಾವರ ಉದ್ಘಾಟನೆ ಮೂಲಕ ಭವಿಷ್ಯದ ಬೇಡಿಕೆಗೆ ಅಗತ್ಯ ವಿದ್ಯುತ್ ಉತ್ಪಾದನೆಯತ್ತ ಮಹತ್ವದ ಹೆಜ್ಜೆ ಇಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು.

    ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಸ್ಥಾಪಿಸಿರುವ ರಾಜ್ಯದ ಮೊಟ್ಟ ಮೊದಲ 370 ಮೆಗಾವ್ಯಾಟ್ ಸಾಮರ್ಥ್ಯದ ಅನಿಲ ಆಧಾರಿತ ಯಲಹಂತ ಸಂಯುಕ್ತ ವಿದ್ಯುತ್ ಸ್ಥಾವರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Shivakumar) ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ (K J George) ಮಂಗಳವಾರ ಲೋಕಾರ್ಪಣೆ ಮಾಡಿದರು.ಇದನ್ನೂ ಓದಿ:

    ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಈ ಸ್ಥಾವರ ಉದ್ಘಾಟನೆ ಮೂಲಕ ಭವಿಷ್ಯದ ಬೇಡಿಕೆಗೆ ಅಗತ್ಯ ವಿದ್ಯುತ್ ಉತ್ಪಾದನೆಯತ್ತ ಮಹತ್ವದ ಹೆಜ್ಜೆ ಇಟ್ಟಿದ್ದೇವೆ. 2016ರಲ್ಲಿ ಈ ಸ್ಥಾವರ ಸ್ಥಾಪನೆಗೆ ಮುಖ್ಯಮಂತ್ರಿಯಾಗಿ ನಾನೇ ಅಡಿಗಲ್ಲು ಹಾಕಿದ್ದೆ. ಆಗ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದರು. ಕೆ.ಜೆ.ಜಾರ್ಜ್ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದರು. ಇದೀಗ ಎಂಟು ವರ್ಷಗಳ ಬಳಿಕ ಮುಖ್ಯಮಂತ್ರಿಯಾಗಿ ಸ್ಥಾವರ ಲೋಕಾರ್ಪಣೆ ಮಾಡಿದ್ದೇನೆ ಎಂದು ಹೇಳಿದರು.

    ವಿದ್ಯುತ್‌ನಲ್ಲಿ ಸ್ವಾವಲಂಬನೆ ಸಾಧ್ಯವಾಗದಿದ್ದರೆ ಆರ್ಥಿಕ ಪ್ರಗತಿ ಸಾಧ್ಯವಿಲ್ಲ. ವಾಣಿಜ್ಯ, ಕೃಷಿ, ಗೃಹ ಬಳಕೆಗೆ ವಿದ್ಯುತ್ ಅನಿವಾರ್ಯವಾಗಿದೆ. ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸದಿದ್ದಲ್ಲಿ ಜಿಡಿಪಿ ಬೆಳವಣಿಗೆಯೂ ಆಗುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಗುಣಮಟ್ಟದ ವಿದ್ಯುತ್ ಪೂರೈಕೆ ಜೊತೆಗೆ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಆದ್ಯತೆ ನೀಡುತ್ತದೆ ಎಂದರು.

    ರಾಜ್ಯದಲ್ಲಿ ಬೇಸಿಗೆಯಲ್ಲಿ 16 ರಿಂದ 17 ಸಾವಿರ ಮೆಗಾವ್ಯಾಟ್ ಮತ್ತು ಮಳೆಗಾಲದಲ್ಲಿ 15 ರಿಂದ 16 ಸಾವಿರ ಮೆಗಾವ್ಯಾಟ್ ಯೂನಿಟ್ ವಿದ್ಯುತ್ ಬೇಡಿಕೆ ಇದೆ. ಕಳೆದ ವರ್ಷ ತೀವ್ರ ಬರಗಾಲವಿದ್ದರೂ ಸಮರ್ಪಕ ವಿದ್ಯುತ್ ಪೂರೈಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಆದರೂ ಭವಿಷ್ಯದ ಬೇಡಿಕೆಯನ್ನು ಮುಂದಿಟ್ಟುಕೊಂಡು 2030ರ ವೇಳೆಗೆ ಈಗಿರುವ 34,639 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಸ್ಥಾಪಿತ ಸಾಮರ್ಥ್ಯವನ್ನು 60 ಸಾವಿರ ಮೆಗಾವ್ಯಾಟ್‌ಗೆ ಹೆಚ್ಚಿಸಲು ಬಜೆಟ್‌ನಲ್ಲಿ ಘೋಷಿಸಿದ್ದು, ಅದಕ್ಕೆ ತಕ್ಕಂತೆ ಯೋಜನೆ ರೂಪಿಸಲಾಗುತ್ತದೆ ಎಂದು ತಿಳಿಸಿದರು.

    ಛತ್ತೀಸ್‌ಗಡದ ಗೋದ್ನಾದಲ್ಲಿ 1600 ಮೆಗಾವ್ಯಾಟ್ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರ, ಶರಾವತಿಯಲ್ಲಿ 2,000 ಮೆಗಾವ್ಯಾಟ್, ವಾರಾಹಿಯಲ್ಲಿ 1500 ಮೆಗಾವ್ಯಾಟ್ ಪಂಪ್ಡ್ ಸ್ಟೋರೇಜ್ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರ ಜೊತೆಗೆ ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಗೂ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.ಇದನ್ನೂ ಓದಿ:

  • ಸಾರಿಗೆ ಬಸ್ ಡಿಕ್ಕಿ: ಕೆಪಿಟಿಸಿಎಲ್ ಇಂಜಿನಿಯರ್ ದುರ್ಮರಣ

    ಸಾರಿಗೆ ಬಸ್ ಡಿಕ್ಕಿ: ಕೆಪಿಟಿಸಿಎಲ್ ಇಂಜಿನಿಯರ್ ದುರ್ಮರಣ

    ಮಂಡ್ಯ: ಸಾರಿಗೆ ಬಸ್ (KSRTC Bus) ಡಿಕ್ಕಿಯಾಗಿ ಕೆಪಿಟಿಸಿಎಲ್ (ಟಿಎಲ್‍ಐ) ಇಂಜಿನಿಯರ್ ಒಬ್ಬರು ಮೃತಪಟ್ಟ ಘಟನೆ ಮಳವಳ್ಳಿ ತಾಲೂಕಿನ ಕಣಿಗಲ್ ಗೇಟ್ ಬಳಿ ನಡೆದಿದೆ.

    ಮೃತರನ್ನು ಮಳವಳ್ಳಿ ತಾಲೂಕಿನ ಮಂಚನಹಳ್ಳಿ ಗ್ರಾಮದ ಪಿ.ರವಿ (42) ಎಂದು ಗುರುತಿಸಲಾಗಿದೆ. ಶಿವನಸಮುದ್ರ ಬಳಿಯ ಕೆಪಿಟಿಸಿಎಸ್‍ನ (KPTCL) ವಿಭಾಗದಲ್ಲಿ ಕಿರಿಯ ಇಂಜಿನಿಯರ್ ಆಗಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಬೈಕ್‍ನಲ್ಲಿ ಮಳವಳ್ಳಿ ಪಟ್ಟಣಕ್ಕೆ ಹೋಗಿ ಮಂಚನಹಳ್ಳಿಗೆ ತೆರಳುತ್ತಿದ್ದಾಗ ಈ ಅವಘಡ ನಡೆದಿದೆ. ಇದನ್ನೂ ಓದಿ: ಜನಾಂಗೀಯ ನಿಂದನೆ ಹೇಳಿಕೆ ನೀಡಿದ್ದ ಸ್ಯಾಮ್‌ ಪಿತ್ರೋಡಾ ಈಗ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ

    ವಾಪಸ್ ಆಗುತ್ತಿದ್ದ ವೇಳೆ ಮಳೆ ಬಂದ ಕಾರಣ ರವಿಯವರು ರಾಷ್ಟ್ರೀಯ ಹೆದ್ದಾರಿ-209ರ ಕಣಿಗಲ್ ಗೇಟ್ ಬಳಿ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ಮರವೊಂದರ ಕೆಳಗೆ ಹಣ್ಣು ಖರೀದಿಗೆ ತೆರಳಿದ್ದರು. ಈ ವೇಳೆ ಮಳವಳ್ಳಿಯಿಂದ ಚಾಮರಾಜನಗರಕ್ಕೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಪಿ.ರವಿ ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

    ಘಟನಾ ಸ್ಥಳಕ್ಕೆ ಗ್ರಾಮಾಂತರ ಪಿಎಸ್‍ಐ ಶ್ರವಣ ದಾಸರಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್ – ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ

  • ಬೆಂಗಳೂರಿನಲ್ಲಿಂದು ಹಲವೆಡೆ ವಿದ್ಯುತ್ ವ್ಯತ್ಯಯ; Ind Vs Pak ಮ್ಯಾಚ್ ನೋಡುವ ಫ್ಯಾನ್ಸ್‌ಗೆ ನಿರಾಸೆ ಸಾಧ್ಯತೆ

    ಬೆಂಗಳೂರಿನಲ್ಲಿಂದು ಹಲವೆಡೆ ವಿದ್ಯುತ್ ವ್ಯತ್ಯಯ; Ind Vs Pak ಮ್ಯಾಚ್ ನೋಡುವ ಫ್ಯಾನ್ಸ್‌ಗೆ ನಿರಾಸೆ ಸಾಧ್ಯತೆ

    ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿಂದು (Bengaluru) ಹಲವೆಡೆ ವಿದ್ಯುತ್‌ ವ್ಯತ್ಯಯವಾಗಲಿದ್ದು, ಭಾರತ-ಪಾಕಿಸ್ತಾನ ಮ್ಯಾಚ್ (Ind Vs Pak Match) ನೊಡುವ ಕ್ರಿಕೆಟ್‌ ಅಭಿಮಾನಿಗಳಿಗೆ ನಿರಾಸೆಯಾಗುವ ಸಾಧ್ಯತೆಗಳಿವೆ.

    ನಗರದ ಬಹುತೇಕ ಕಡೆ ಇಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ವಿದ್ಯುತ್ ಸರಬರಾಜು ಕಂಪನಿಯ (BESCOM) ತಿಳಿಸಿದೆ. ಬೆಸ್ಕಾಂ ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KPTCL) ಸೇರಿದಂತೆ ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ನಿರ್ವಹಣಾ ಯೋಜನೆಗಳನ್ನು ಕೈಗೊಂಡಿವೆ. ಈ ಹಿನ್ನೆಲೆಯಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದ್ದು, ಕ್ರಿಕೆಟ್‌ ಅಭಿಮಾನಿಗಳಲ್ಲಿ ನಿರಾಸೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: World Cup 2023: ಇಂಡೋ-ಪಾಕ್‌ ಕದನ ಯಾವಾಗಲೂ ರಣಕಣ ಏಕೆ? – ನೆನಪಿದೆಯಾ ಆ ಕರಾಳ ದಿನಗಳು?

    ಎಲ್ಲೆಲ್ಲಿ ವಿದ್ಯುತ್‌ ವ್ಯತ್ಯಯ?
    ಎಸ್‌ಜೆಎಂ ನಗರ, ಎಸ್‌ಎಂಕೆ ನಗರ, ಬಾಬು ಜಗಜೀವನ ನಗರ, ದೇವರಾಜ್‌ ಅರಸ್‌ ಬಡಾವಣೆ, ವಿಜಯನಗರ ಬಡಾವಣೆ, ರಾಜೀವ್‌ ಗಾಂಧಿ ಬಡಾವಣೆ, ಎಸ್‌ಪಿ ಕಚೇರಿ, ಆರ್‌ಟಿಒ ಕಚೇರಿ, ಜ್ಯೋತಿನಗರ, ಶಂಕರಾನಂದ ಬಡಾವಣೆ, ಸಚಿನ್‌ ಲೇಔಟ್‌, ಗಂಗಮ್ಮ ಲೇಔಟ್‌, ಕಲ್ಲುಕೋಟೆ, ಪದವಿ ಕಾಲೇಜು ಸುತ್ತಮುತ್ತ, ನಾಗಾಜಿ ಗುಡೆನ್ಸಿ, ಪ್ರೆಸಿಡೆನ್ಸಿ, ಡೈರಿ ಸರ್ಕಲ್, ಫುಡ್ ಗೋಡೌನ್, ಕುಂಟೇಗೌಡನಹಳ್ಳಿ, ಯಲದಬಾಗಿ, ಹಾವಿನಹಾಳು, ಕಾಟವೀರನಹಳ್ಳಿ, ನವನೆಬೋರನಹಳ್ಳಿ, ಅಜ್ಜಯ್ಯನಪಾಳ್ಯ, ಎಲ್.ಎಚ್ ಪಾಳ್ಯ, ಬೋರಸಂದ್ರ, ತಿಪ್ಪನಹಳ್ಳಿ, ಬ್ಯಾಡರಹಳ್ಳಿ, ದಾಸರಹಳ್ಳಿ, ವೆಂಕಟಾಪುರ, ಸಾಲುಪರಹಳ್ಳಿ, ದೊಡ್ಡರಸಹಳ್ಳಿ, ದೊಡರಸ ಅಗ್ರಹಾರ, ತಿ. ಲಶೆಟ್ಟಿಹಳ್ಳಿ, ಯತ್ತಪ್ಪನಹಟ್ಟಿ, ಕಾಳಜ್ಜಿರೊಪ್ಪ, ಸೀಬಯ್ಯನಪಾಳ್ಯ, ಬಸರಿಹಳ್ಳಿ, ಹುಂಜನಾಳ್ ಮತ್ತು ಬ್ಯಾಡರಹಳ್ಳಿ. ಇದನ್ನೂ ಓದಿ: ಇಂಡೋ-ಪಾಕ್‌ ವಿಶ್ವ ಸಮರ: ʻಗೆದ್ದು ಬಾ ಭಾರತʼ – ಕೋಟ್ಯಂತರ ಅಭಿಮಾನಿಗಳ ಶುಭ ಹಾರೈಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]