Tag: KPSC office

  • ಫೈಲ್‍ನಲ್ಲಿ ಮಚ್ಚು ತಂದು ಮಹಿಳಾ ಸಿಬ್ಬಂದಿ ಮೇಲೆ ಬೀಸ್ದ- ಕೆಪಿಎಸ್‍ಸಿಯಲ್ಲಿ ಹರಿಯಿತು ನೆತ್ತರು!

    ಫೈಲ್‍ನಲ್ಲಿ ಮಚ್ಚು ತಂದು ಮಹಿಳಾ ಸಿಬ್ಬಂದಿ ಮೇಲೆ ಬೀಸ್ದ- ಕೆಪಿಎಸ್‍ಸಿಯಲ್ಲಿ ಹರಿಯಿತು ನೆತ್ತರು!

    ಬೆಂಗಳೂರು: ಸಿಲಿಕಾನ್ ಸಿಟಿಯ ಉದ್ಯೋಗ ಸೌಧವಾದ ಕೆಪಿಎಸ್‍ಸಿ ಕಚೇರಿಯಲ್ಲಿ ಸೈಕೊ ನೌಕರನೊಬ್ಬ ಮಹಿಳಾ ಸಿಬ್ಬಂದಿಗೆ ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟೆನ ನಡೆದಿದೆ.

    ನಟರಾಜ್, ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಕ್ಲರ್ಕ್. ಜಯಲಕ್ಷ್ಮಿ ಕ್ಲರ್ಕ್ ನಿಂತ ಹಲ್ಲೆ ಒಳಗಾದ ಮಹಿಳಾ ಸಿಬ್ಬಂದಿ. ಸೋಮವಾರ ಕೆಪಿಎಸ್‍ಸಿ ಕಚೇರಿಯಲ್ಲಿ ಮಧ್ಯಾಹ್ನ ಸುಮಾರು 12 ಘಂಟೆ ವೇಳೆಗೆ ಮಹಿಳಾ ಸಿಬ್ಬಂದಿ ಮೇಲೆಯೇ ಕ್ಲರ್ಕ್ ಮಚ್ಚು ಬೀಸಿದ್ದಾನೆ. ಪರಿಣಾಮ ಇಡೀ ಉದ್ಯೋಗಸೌಧ ಬೆಚ್ಚಿಬಿದ್ದಿತ್ತು.

    ಜಯಲಕ್ಷ್ಮಿ ಅವರು ಕೆಪಿಎಸ್‍ಸಿಯಲ್ಲಿ ಸೀನಿಯರ್ ಅಸಿಸ್ಟೆಂಟ್ ಆಗಿ ಕೆಲಸ ಮಾಡಿಕೊಂಡಿದ್ದರು. ಇಲ್ಲೇ ಕೆಲಸ ಮಾಡುತ್ತಿದ್ದ ಕ್ಲರ್ಕ್ ನಟರಾಜ್, ಈಕೆಯ ಜೊತೆ ಲವ್ವಿಡವ್ವಿ ಶುರು ಮಾಡಿದ್ದಾನೆ. ಇದೇ ವಿಚಾರವಾಗಿ ಜಗಳವಾಗಿ ಜಯಲಕ್ಷ್ಮಿ ಮೇಲೆ ನಟರಾಜ್ ಮಚ್ಚು ಬೀಸಿದ್ದಾನೆ. ಸದ್ಯಕ್ಕೆ ಮಚ್ಚಿನಿಂದ ಹಲ್ಲೆಗೊಳಗಾದ ಜಯಲಕ್ಷ್ಮಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಘಟನೆಯಲ್ಲಿ ಮತ್ತೊಬ್ಬ ಸಿಬ್ಬಂದಿ ರಾಮು ಮೇಲೂ ನಟರಾಜ್ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಪಕ್ಕದ ರೂಮ್‍ ನಲ್ಲಿದ್ದ ಜಯಲಕ್ಷ್ಮಿ ರಕ್ಷಣೆಗೆ ಬಂದಾಗ ಅವರಿಗೆ ಮಚ್ಚಿನೇಟು ಬಿದ್ದಿದೆ ಎಂದು ರಾಮು ಹೇಳುತ್ತಿದ್ದಾರೆ. ಆದರೆ ಇದು ಪ್ರಕರಣವನ್ನು ತಿರುಚುವ ಕೆಲಸ ಅನ್ನೋ ಮಾತುಗಳು ಕೇಳಿಬರುತ್ತಿದ್ದು, ಅಲ್ಲಿ ನಡೆದಿದ್ದೆ ಬೇರೆಯ ವಿಚಾರವಾಗಿದೆ ಎಂದು ಮೂಲಗಳು ತಿಳಿಸಿವೆ.

    ಮದುವೆಯಾಗಿ ಡಿವೋರ್ಸ್ ಆಗಿದ್ದ ನಟರಾಜ್ ಜಯಲಕ್ಷ್ಮಿ ಜೊತೆ ಸಂಬಂಧ ಇಟ್ಟುಕೊಂಡಿದ್ದನು. ಈ ವಿಚಾರ ಜಯಲಕ್ಷ್ಮಿ ಮನೆಯವರಿಗೆ ಗೊತ್ತಾಗಿ ವಾರ್ನ್ ಮಾಡಿದ್ದರು ಎನ್ನಲಾಗಿದೆ. ಆದ್ದರಿಂದ ನಟರಾಜ್‍ನನ್ನ ಜಯಲಕ್ಷ್ಮಿ ದೂರ ಮಾಡುವುದಕ್ಕೆ ಶುರು ಮಾಡಿದ ಹಿನ್ನೆಲೆಯಲ್ಲಿ ಮಚ್ಚು ಬೀಸಿದ್ದಾನೆ ಎನ್ನಲಾಗಿದೆ. ಸದ್ಯಕ್ಕೆ ಆರೋಪಿ ನಟರಾಜನನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv