Tag: KPCC President

  • ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬರೀ ಊಹಾಪೋಹ, ಯಾವುದೇ ಚರ್ಚೆ ನಡೆದಿಲ್ಲ – ಶರಣಪ್ರಕಾಶ್ ಪಾಟೀಲ್

    ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬರೀ ಊಹಾಪೋಹ, ಯಾವುದೇ ಚರ್ಚೆ ನಡೆದಿಲ್ಲ – ಶರಣಪ್ರಕಾಶ್ ಪಾಟೀಲ್

    ರಾಯಚೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬರೀ ಊಹಾಪೋಹ, ಯಾವುದೇ ಚರ್ಚೆಗಳು ನಡೆದಿಲ್ಲ. ನಾನು ಯಾವುದೇ ಆಕಾಂಕ್ಷಿನೂ ಅಲ್ಲ, ಅಪೇಕ್ಷೆಯೂ ಇಲ್ಲ. ಊಹಾಪೋಹಗಳಿಗೆ ಯಾವುದೇ ಹುರುಳಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ (Sharana Prakash Patil) ಹೇಳಿದ್ದಾರೆ.

    ಬೆಳಗಾವಿಯಲ್ಲಿ ನಡೆಯಲಿರುವ ಕಾಂಗ್ರೆಸ್‌ನ ರಾಷ್ಟ್ರಮಟ್ಟದ ಸಮಾವೇಶ ಹಿನ್ನೆಲೆ ರಾಯಚೂರಿನಲ್ಲಿ ಪೂರ್ವಭಾವಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಡಿಸಿಎಂ ಡಿಕೆ ಶಿವಕುಮಾರ್ ಸಮರ್ಥವಾಗಿ ಎದುರಿಸುತ್ತಿದ್ದಾರೆ. ಪಕ್ಷದ ಮಟ್ಟದಲ್ಲಿ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ, ಪ್ರಸ್ತಾಪವೂ ಇಲ್ಲ ಎಂದರು.ಇದನ್ನೂ ಓದಿ: ಸಿದ್ದರಾಮಯ್ಯ ರಾಜ್ಯದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಮಾಡಿದ ಸಿಎಂ – ಜನಾರ್ದನ ರೆಡ್ಡಿ ಲೇವಡಿ

    ನಮ್ಮ ಪಕ್ಷದಲ್ಲಿ ಯಾವುದೇ ಬಣ ರಾಜಕೀಯ ಇಲ್ಲ, ಯಾರಿಗೂ ಓಲೈಸುವಂಥದ್ದು ಇಲ್ಲ. ಸಿಎಲ್‌ಪಿ ಸಭೆಯಲ್ಲಿ ಯಾವುದೇ ಭಿನ್ನಮತ ಆಗಿಲ್ಲ. ಅವರವರ ಅಭಿಪ್ರಾಯವನ್ನ ನಾಯಕರು ವ್ಯಕ್ತಪಡಿಸಿದ್ದಾರೆ. ನಮ್ಮ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದಾರೆ. ರಾಜ್ಯದಲ್ಲಿ ಜನ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಅಧಿಕಾರ ಕೊಟ್ಟಿದ್ದಾರೆ. ನಿಸ್ವಾರ್ಥ ಭಾವನೆಯಿಂದ ಜನಸೇವೆ ಮಾಡೋದಕ್ಕೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

    ರಾಜ್ಯದಲ್ಲಿ ದರೋಡೆ ಪ್ರಕರಣಗಳು ಹೆಚ್ಚುತ್ತಿರುವ ವಿಚಾರವಾಗಿ ಮಾತನಾಡಿ, ಈ ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ, ಗೃಹ ಸಚಿವರು ಇದನ್ನ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಆರೋಪಿಗಳನ್ನ ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಾಗುತ್ತದೆ. ಬಿಜೆಪಿಯವರು ಏನೇ ಆರೋಪ ಮಾಡಬಹುದು, ಅವರ ಆಡಳಿತ ಹಿಂದೆ ಹೇಗಿತ್ತು ಗೊತ್ತಿದೆ. ಜಿ.ಪರಮೇಶ್ವರ್ ಸಮರ್ಥ ಗೃಹ ಸಚಿವರಿದ್ದಾರೆ. ಹಿರಿಯ ನಾಯಕರ ಬಗ್ಗೆ ಮಾತನಾಡೋದು ಯಾರಿಗೂ ಶೋಭೆ ತರುವುದಿಲ್ಲ. ಈ ಸವಾಲನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಬೀದರ್‌ನಲ್ಲಿ ಎಟಿಎಂ ಹಣ ದರೋಡೆ ಕೇಸ್ – ಖದೀಮರ ಸುಳಿವು ಪತ್ತೆ

  • 135 ಶಾಸಕರು ನಮ್ಮವರೇ, ಹೈಕಮಾಂಡ್ ಪಾದಕ್ಕೆ ಹಾಕಿದ್ದೀವಿ: ಡಿಕೆ ಶಿವಕುಮಾರ್

    135 ಶಾಸಕರು ನಮ್ಮವರೇ, ಹೈಕಮಾಂಡ್ ಪಾದಕ್ಕೆ ಹಾಕಿದ್ದೀವಿ: ಡಿಕೆ ಶಿವಕುಮಾರ್

    ಬೆಂಗಳೂರು: 135 ಶಾಸಕರು ನಮ್ಮವರೇ, ನಾನು ಸೇರಿದಂತೆ ಹೈಕಮಾಂಡ್ ಪಾದಕ್ಕೆ ಹಾಕಿದ್ದೀವಿ. ನೋಡೋಣ ಏನು ತೀರ್ಮಾನ ತೆಗೆದುಕೊಳ್ತಾರೆ ಅಂತಾ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

    ಸಾತನೂರಿನ ಆಕಾಶ್ ಫಾರಂ ನಿಂದ ತೆರಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುತೇಕ ಶಾಸಕರು ನನಗೆ ಸೀಕ್ರೆಟ್ ವೋಟ್ (Vote) ಮಾಡಿದ್ದಾರೆ ಅನ್ನೊ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಠಕ್ಕರ್ ನೀಡಿದರು. ಸಂತೋಷ ಯಾರು ಏನಾದ್ರು ಹೇಳಲಿ. ನನ್ನ ಬಳಿ ಯಾವ ಯಾವ ಶಾಸಕರಿಲ್ಲ. 135 ಶಾಸಕರು ನಮ್ಮವರೇ, ನಾನು ಸೇರಿದಂತೆ ಹೈಕಮಾಂಡ್ ಪಾದಕ್ಕೆ ಹಾಕಿದ್ದೀವಿ ಎಂದರು.

    ಎಲ್ಲರೂ ಆಸೆ ಪಡ್ಲಿ. ನಾವು ಒಂದು ಲೈನ್‌ ನಿರ್ಣಯ ಮಾಡಿದ್ದೇವೆ. ನನಗೆ ಯಾವ ಶಾಸಕರು ಏನ್ ಮಾಡಿದ್ದಾರೆ ಗೊತ್ತಿಲ್ಲ. ನನ್ನ ಜೊತೆಗೆ 135 ಶಾಸಕರು ಇದ್ದಾರೆ. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ 135 ಶಾಸಕರನ್ನ ಸೋನಿಯಾ ಗಾಂಧಿಗೆ ಅರ್ಪಿಸಿದ್ದೇನೆ. ನನ್ನ ಹತ್ರ ಯಾರು ಇಲ್ಲ, ಕಾಂಗ್ರೆಸ್ ಪಾರ್ಟಿಯಲ್ಲಿ 135 ಜನ ಇದ್ದಾರೆ. ನನ್ನ ಸೇರಿಸಿ 135 ಶಾಸಕರು ಕಾಂಗ್ರೆಸ್ ನಲ್ಲಿ ಇದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಹಿಂಸಾ ಗ್ಯಾರಂಟಿ ಸ್ಕೀಮ್ ಸಹಿಸುವುದಿಲ್ಲ: ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ

  • ಜ್ವರದಿಂದ ಬಳಲುತ್ತಿದ್ದಾರೆ ಡಿಕೆ ಶಿವಕುಮಾರ್

    ಜ್ವರದಿಂದ ಬಳಲುತ್ತಿದ್ದಾರೆ ಡಿಕೆ ಶಿವಕುಮಾರ್

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಜ್ವರದಿಂದ ಬಳಲುತ್ತಿದ್ದಾರೆ.

    ಕನಕಪುರದಿಂದ ಬೆಂಗಳೂರಿಗೆ ಆಗಮಿಸಿದ ಡಿಕೆಶಿಗೆ ಜ್ವರ ಬಂದಿದೆ. ಹೀಗಾಗಿ ಸದಾಶಿವನಗರ ನಿವಾಸದಲ್ಲಿ ವಿಶ್ರಾಂತಿಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಒಂದೇ ಅವಧಿಯಲ್ಲಿ ಒಬ್ಬ 2 ಅಸೆಂಬ್ಲಿ, 2 ಎಂಪಿ ಚುನಾವಣೆ ಎದುರಿಸಿದ್ರೆ ಅದು ನಾನೊಬ್ಬನೇ: ಪುಟ್ಟರಾಜು

    ವಿಧಾನಸಭೆ (Karnataka Assembly Election 2023) ಮತದಾನಕ್ಕೆ ಬುಧವಾರ ತೆರೆ ಬಿದ್ದಿದೆ. ಮತದಾನ ಮುಕ್ತಾಯದ ಬಳಿಕ ರಿಲ್ಯಾಕ್ಸ್ ಮೂಡ್‍ನಲ್ಲಿದ್ದ ಡಿಕೆ ಶಿವಕುಮಾರ್ ಅವರು ಸ್ಥಳೀಯ ಮುಖಂಡರ ಜೊತೆ ಕನಕಪುರದ ಕೆ.ಎನ್.ಎಸ್. ವೃತ್ತದ ವಾಸು ಹೋಟೆಲ್‍ಗೆ ತೆರಳಿ ಇಡ್ಲಿ ಸವಿದರು. ಅದಾದ ಬಳಿಕ ಚುನಾವಣೆ ಬಗ್ಗೆ ಸ್ಥಳೀಯರ ಜೊತೆ ಮಾತುಕತೆ ನಡೆಸಿ ಕಾಲ ಕಳೆದ ಬಳಿಕ ಬೆಂಗಳೂರಿಗೆ ಆಗಮಿಸಿದ್ದರು.

  • ದೆಹಲಿಯಲ್ಲಿ ಉಳಿದುಕೊಂಡೇ ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಸ್ಕೆಚ್!

    ದೆಹಲಿಯಲ್ಲಿ ಉಳಿದುಕೊಂಡೇ ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಸ್ಕೆಚ್!

    ಬೆಳಗಾವಿ: ದೆಹಲಿಯಲ್ಲಿ ಉಳಿದುಕೊಂಡೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ರಮೇಶ್ ಜಾರಕಿಹೊಳಿ (Ramesh Jarakiholi) ಸ್ಕೆಚ್ ಹಾಕಿದ್ದು, ಕಳೆದ ಮೂರು ದಿನಗಳಿಂದ ದೆಹಲಿಯ ಖಾಸಗಿ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿ ಕಾನೂನು ತಜ್ಞರು, ಆಪ್ತರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ.

    ಇಂದು ದೆಹಲಿಗೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ತೆರಳಲಿದ್ದು, ದೆಹಲಿಯಲ್ಲಿ ಬೊಮ್ಮಾಯಿ ಭೇಟಿಯಾಗಿ ಮಾತುಕತೆ ಸಾಧ್ಯತೆ ನಡೆಸುವ ಸಾಧ್ಯತೆ ಇದೆ. ಸಾಧ್ಯವಾದರೆ ಸಿಎಂ ಜೊತೆಯೇ ಸಂಜೆ ಬೆಂಗಳೂರಿಗೆ ಆಗಮಿಸಲು ನಿರ್ಧರಿಸಿದ್ದಾರೆ. ಈಗಾಗಲೇ ಅಮಿತ್ ಶಾ ಭೇಟಿಯಾಗಿ ಮಾತುಕತೆ ನಡೆಸಿರುವ ರಮೇಶ್ ಜಾರಕಿಹೊಳಿಗೆ ಬುಧವಾರ ಅಥವಾ ಗುರುವಾರ ತಮ್ಮ ಬಳಿ ಮಾತನಾಡುವೆ ಎಂದಿದ್ದಾರಂತೆ. ಹೀಗಾಗಿ ಮಂಗಳವಾರ ಗೋಕಾಕ್‍ಗೆ ವಾಪಸ್ ಆಗಿ ಮರಳಿ ಬುಧವಾರ ಮತ್ತೆ ಬೆಳಗ್ಗೆ ದೆಹಲಿಗೆ ತೆರಳಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಬುಸ್ ಬುಸ್ ತರ, ಯಾವಾಗ ಕಚ್ಚುತ್ತಾನೊ ಗೊತ್ತಿಲ್ಲ- ಏಕವಚನದಲ್ಲೇ ಜಮೀರ್ ವಾಗ್ದಾಳಿ

    ಮಂಗಳವಾರ ಮನೆದೇವರು ಲಕ್ಷ್ಮಿದೇವಿ ದರ್ಶನ ಪಡೆದು, ಕೊಲ್ಹಾಪುರಕ್ಕೆ ಪ್ರಯಾಣ ಬೆಳೆಸಿ ಮಂಗಳವಾರ ಕೊಲ್ಹಾಪುರ ಲಕ್ಷ್ಮಿದೇವಿ ದರ್ಶನ ಪಡೆದು ಮುಂಬೈಗೆ ಪ್ರಯಾಣ ಮಾಡಲಿದ್ದು, ಮಂಗಳವಾರ ಮುಂಬೈನಲ್ಲಿ ದೇವೇಂದ್ರ ಫಡ್ನವಿಸ್ (Devendra Fadnavis) ಭೇಟಿಯಾಗಿ ದೆಹಲಿಗೆ ಪ್ರಯಾಣ ಸಾಧ್ಯತೆ ಇದೆ ಎಂದು ರಮೇಶ್ ಜಾರಕಿಹೊಳಿ ಆಪ್ತ ಮೂಲಗಳು ಮಾಹಿತಿ ನೀಡಿವೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಂಗ್ರೆಸ್‍ಗೆ ಬನ್ನಿ ಅಂತ ಕರೆದಿಲ್ಲ- ಸುದೀಪ್ ಭೇಟಿಗೆ ಡಿಕೆಶಿ ಸ್ಪಷ್ಟನೆ

    ಕಾಂಗ್ರೆಸ್‍ಗೆ ಬನ್ನಿ ಅಂತ ಕರೆದಿಲ್ಲ- ಸುದೀಪ್ ಭೇಟಿಗೆ ಡಿಕೆಶಿ ಸ್ಪಷ್ಟನೆ

    ಕೋಲಾರ: ನಾವು ಯಾವುದೇ ರಾಜಕೀಯ ವಿಚಾರವನ್ನು ಚರ್ಚೆ ಮಾಡಿಲ್ಲ. ಕಾಂಗ್ರೆಸ್‍ಗೆ ಬನ್ನಿ ಅಂತ ಕರೆದಿಲ್ಲ. ಚಿತ್ರರಂಗದ ಸಮಸ್ಯೆ ಕುರಿತು ಪ್ರಣಾಳಿಕೆ ಮಾಡಲು ಚರ್ಚೆ ಮಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar) ಸ್ಪಷ್ಟನೆ ಕೊಟ್ಟಿದ್ದಾರೆ.

    ಮುಳಬಾಗಿಲು ತಾಲೂಕಿನಲ್ಲಿ ಕಪ್ಪಲಮಡಗೂ ಗ್ರಾಮದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ (Ambareesh), ಪುನೀತ್ ಹಾಗೂ ವಿಷ್ಣುವರ್ಧನ್ ರೀತಿ ಸುದೀಪ್ (Kichcha Sudeep) ಉತ್ತಮ ನಾಯಕ ನಟ. ಕಾಂಗ್ರೆಸ್ (Congress) ಪರ ಪ್ರಚಾರಕ್ಕೆ ಬನ್ನಿ ಎಂದು ಕರೆದಿಲ್ಲ. ನಾನು ರಾಜಕೀಯ ಆಹ್ವಾನ ನೀಡಿಲ್ಲ, ಅನೇಕ ವಿಚಾರವಾಗಿ ಸಲಹೆ ಪಡೆಯಲು ಭೇಟಿ ಮಾಡಿದ್ದೇನೆ ಎಂದರು.

    ಕೊರೊನಾ (Corona Virus) ವೇಳೆಯಲ್ಲಿ ಚಿತ್ರರಂಗದ ಸಹಾಯಕ್ಕೆ ಸರ್ಕಾರ ಬಂದಿಲ್ಲ. ಮೊದಲಿನಿಂದಲೂ ಅವರು ನಮ್ಮ ಖಾಸಗಿ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ, ಒಳ್ಳೆಯ ಸ್ನೇಹಿತ ಎಂದು ಹೇಳಿದರು. ಇದನ್ನೂ ಓದಿ: ಸುದೀಪ್ ಕಾಂಗ್ರೆಸ್ ಸೇರಿದರೆ ಸ್ವಾಗತ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

    ಪರಮೇಶ್ವರ್ ಪ್ರಣಾಳಿಕೆ ಸಮಿತಿಗೆ ರಾಜೀನಾಮೆ ನೀಡಿಲ್ಲ. ಬೆಂಗಳೂರು ಟ್ರಾಫಿಕ್ ಹಾಗೂ ಕುಡಿಯುವ ನೀರಿನ ವಿಚಾರವಾಗಿ ಸುರ್ಜೆವಾಲ ಜೊತೆ ಚರ್ಚೆ ಮಾಡಿದ್ದೇವೆ. ಅವರು ರಾಜೀನಾಮೆ ಏಕೆ ಕೊಡ್ತಾರೆ, ಅದರ ಅವಶ್ಯಕತೆ ಇಲ್ಲ. ಪರಮೇಶ್ವರ್ ಅಂತ ಶಿಸ್ತಿನ ಸಿಪಾಯಿ ಈ ರಾಜ್ಯದಲ್ಲಿ ಯಾರೂ ಇಲ್ಲ. ಕೆ.ಎಚ್.ಮುನಿಯಪ್ಪಗೆ ಯಾವುದು ಅಸಮಾಧಾನ ಇಲ್ಲ, ಒಗ್ಗಟಾಗಿದ್ದೇವೆ ಎಂದು ತಿಳಿಸಿದರು.

    ಸಿದ್ದರಾಮಯ್ಯ (Siddaramaiah) ನನ್ನ ವಿರುದ್ಧ ಯಾವುದೇ ಪತ್ರ ಬರೆದಿಲ್ಲ. ಬಿಜೆಪಿ ಕುಚೇಷ್ಟೆ ಮಾಡಿಕೊಂಡು ಬೋಗಸ್ ಮಾಡ್ತಿದ್ದಾರೆ. ದಿನಕ್ಕೆ ಒಂದು ವೀಡಿಯೋ ಹಾಕೋದು, ಪತ್ರ ಹಾಕೋದು ಮಾಡಿ ಬಿಜೆಪಿ ಅವರು ಮಿಸ್ ಗೈಡ್ ಮಾಡುತ್ತಿದ್ದಾರೆ. ಅದು ಸಿದ್ದರಾಮಯ್ಯನವರ ಸಹಿ ಅಲ್ಲ, ಈ ಬಗ್ಗೆ ಸಿದ್ದರಾಮಯ್ಯನವರೇ ದೂರು ದಾಖಲು ಮಾಡಿದ್ದಾರೆ ಎಂದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಚುನಾವಣೆ ಸಮಿತಿ ಇದೆಯೇ? – ಡಿಕೆಶಿಗೆ ಪತ್ರ ಬರೆದ ಸ್ಥಾನ ವಂಚಿತರು

    ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಚುನಾವಣೆ ಸಮಿತಿ ಇದೆಯೇ? – ಡಿಕೆಶಿಗೆ ಪತ್ರ ಬರೆದ ಸ್ಥಾನ ವಂಚಿತರು

    ಬೆಂಗಳೂರು: ಪರಿಷತ್ ಸ್ಥಾನ ವಂಚಿತ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಚಿಂಥನ-ಮಂಥನದಲ್ಲಿ ಮುಕ್ತ ಚರ್ಚೆಗೆ ಮೊದಲ ಆದ್ಯತೆ ಕೊಡಿ ಎಂದು ಮನವಿ ಮಾಡಿದ್ದಾರೆ.

    ಹೈಕಮಾಂಡ್ ನಾಯಕರಿಗೆ ಪ್ರಶ್ನೆಗಳನ್ನು ಮುಂದಿಟ್ಟಿರುವ ಸ್ಥಾನ ವಂಚಿತರು. ಚಿಂತನ-ಮಂಥನ ಸಭೆಯಲ್ಲಿ 6 ಪ್ರಶ್ನೆಗಳ ಮೇಲೆ ಚರ್ಚೆಗೆ ಅವಕಾಶ ಕೊಡಿ ಎಂದು ಎಂ.ಡಿ.ಲಕ್ಷ್ಮೀನಾರಾಯಣ್ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆ ಪ್ರವೇಶಿಸುವಂತಿಲ್ಲ – ವೈರಲ್ ಆಯ್ತು ಬ್ಯಾನರ್

    ಪ್ರಶ್ನೆಗಳೇನು?
    1. ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಚುನಾವಣೆ ಸಮಿತಿ ಇದೆಯೇ?
    2. ಇದ್ದಲ್ಲಿ ವಿಧಾನ ಪರಿಷತ್ ಚುನಾವಣೆಗೆ ಎಷ್ಟು ಸಭೆಗಳನ್ನು ನಡೆಸಲಾಯಿತು. ಯಾವ ಮಾನದಂಡವನ್ನು ಅನುಸರಿಸಿ ಆಯ್ಕೆ ಮಾಡಲಾಗಿದೆ.
    3.  ಅಪೇಕ್ಷೀತರ ಪಟ್ಟಿಯಲ್ಲಿ ಎಷ್ಟು ಜನರ ಹೆಸರನ್ನು ಎಐಸಿಸಿಗೆ ಶಿಫಾರಸ್ಸು ಮಾಡಲಾಯಿತು.
    4. ಕೆಪಿಸಿಸಿ ಅಧ್ಯಕ್ಷರು, ಸಿದ್ದರಾಮಯ್ಯ ಶಿಫಾರಸ್ಸು ಮಾಡಿ ನೀಡಿದ ಪಟ್ಟಿಯಲ್ಲಿರುವ ಹೆಸರುಗಳನ್ನು ತಿರಸ್ಕಾರ ಮಾಡಲು ಕಾರಣವೇನು? ತೀರ್ಮಾನಿಸಿ ಪಟ್ಟಿಯನ್ನು ತಿರಸ್ಕಾರ ಮಾಡಿದ್ದು ಸರಿಯೇ?
    5. ತಿರಸ್ಕಾರ ಮಾಡಿದ ನಂತರ ಯಾವ ಹೆಸರುಗಳನ್ನು ನೀಡಲಾಯಿತು?
    6. ಕೊನೆಗಳಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರು ನೀಡಿದ ಹೆಸರುಗಳನ್ನು ಕೈಬಿಟ್ಟು ಬೇರೆಯವರು ಸೂಚಿಸಿದ ಹೆಸರುಗಳನ್ನು ಎಐಸಿಸಿ ಅನುಮೋದನೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ.

    Siddaramaiah

    ಕೆಪಿಸಿಸಿ ಅಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರ ಗೌರವಕ್ಕೆ ಚ್ಯುತಿ ಬಂದಂತಾಗಿದೆ. ಈ ಬಗ್ಗೆ ಚರ್ಚೆಯಾಗಲಿ ಎಂದು ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.

  • ಎಪಿವಿಬಿನಲ್ಲಿದ್ದ 6 ಜನ ಹಿಜಬ್ ಧರಿಸಿದವರು ಈಗ ಸಿಎಫ್‍ಐಗೆ ಬಂದಿದ್ದಾರೆ: ಡಿಕೆಶಿ

    ಎಪಿವಿಬಿನಲ್ಲಿದ್ದ 6 ಜನ ಹಿಜಬ್ ಧರಿಸಿದವರು ಈಗ ಸಿಎಫ್‍ಐಗೆ ಬಂದಿದ್ದಾರೆ: ಡಿಕೆಶಿ

    ಗದಗ: ಎಬಿವಿಪಿನಲ್ಲಿದ್ದ 6 ಮಂದಿ ಹಿಜಬ್ ಧರಿಸಿದವರು ಈಗ ಸಿಎಫ್‍ಐಗೆ ಬಂದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ಹಿಜಾಬ್ ಮತ್ತು ಕೇಸರಿ ವರ್ಸಸ್ ಶಾಲು ವಿವಾದ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶದಲ್ಲಿ ಸಂವಿಧಾನ ಇದೆ, ಅದೇ ನಮ್ಮ ಧರ್ಮವಾಗಿದೆ. ರಾಷ್ಟ್ರಧ್ವಜವೇ ನಮ್ಮ ಧರ್ಮ ನಾವೂ ಹಿಂದೂಗಳೇ ಎಂದರು.

    ಇದೇ ವೇಳೆ ಹಿಜಬ್ ವಿವಾದದಲ್ಲಿ ಕಾಂಗ್ರೆಸ್ ಸಾಫ್ಟ್ ಕಾರ್ನರ್ ಆರೋಪಕ್ಕೆ ಪ್ರತಿಕ್ರಿಯಿಸಿ, ಹಿಜಬ್ ವಿಚಾರವನ್ನು ನಾವು ಮಾತನಾಡೋದಿಲ್ಲ. ಹಿಂದುಳಿದವರ ಕುರಿತು ನಾವು ಮಾತನಾಡೋದಿಲ್ಲ. ಮೈನಾರಿಟಿಸ್ ನಾವು ಮೊದಲಿನಿಂದಲೂ ರಕ್ಷಣೆ ಮಾಡುತ್ತಾ ಬಂದಿದ್ದೇವೆ ಮುಂದಕ್ಕೂ ಮಾಡುತ್ತೇವೆ ಎಂದು ಹೇಳಿದರು.

    ಹಿಜಬ್ ಕುರಿತು ವಿದ್ಯಾರ್ಥಿಗಳು ಟ್ವಿಟ್ಟರ್ ಫ್ರೀ ಪ್ಲಾನ್ ವಿಚಾರದ ಕುರಿತು ಮಾತನಾಡಿ, 6 ಜನ ಹಿಜಬ್ ವಿದ್ಯಾರ್ಥಿನಿಯರು ಎಪಿವಿಬಿ ನಲ್ಲಿದ್ದರು. ಅದೇ ಹೆಣ್ಣು ಮಕ್ಕಳು ಈಗ ಸಿಎಫ್‍ಐ ಗೆ ಬಂದಿದ್ದಾರೆ. ಯಾರಿಗೆ ಯಾರ ಜೊತೆ ಸಂಪರ್ಕ ಇದೆ, ಎಪಿವಿಬಿನಲ್ಲಿ ಯಾವಾಗ ಇದು, ಅದೆಲ್ಲವನ್ನೂ ಸರ್ಕಾರ ನೋಡಿಕೊಳ್ಳಲಿ ಎಂದು ತಿಳಿಸಿದರು. ಇದನ್ನೂ ಓದಿ: ಸ್ವಾತಂತ್ರ್ಯ ಪೂರ್ವದಿಂದಲೂ ಹಿಜಬ್‌ ಧರಿಸುತ್ತಿದ್ದಾರೆ: ಜಮೀರ್ ಅಹ್ಮದ್

    ವಿದ್ಯಾರ್ಥಿಗಳ ಟ್ವೀಟ್ ಬಗ್ಗೆ ಸರ್ಕಾರ ನೋಡಿಕೊಳ್ಳಲಿ. ಅವರ ಭಾವನೆ ಅವರ ವಿಚಾರ ಅವರು ಮಾತನಾಡೋದಕ್ಕೆ ನಾವು ಜವಾಬ್ದಾರರಲ್ಲ. ನಮ್ಮ ಸರ್ಕಾರ ಇದ್ದಿದ್ರೆ ನಾನು ರಿಯಾಕ್ಟ್ ಮಾಡ್ತಿದ್ದೆ. ಸರ್ಕಾರವೇ ಈ ವಿವಾದಕ್ಕೆ ಪ್ರೋತ್ಸಾಹ ನೀಡಿದೆ. ಪ್ರಾರಂಭದಲ್ಲೇ ನಿಯಂತ್ರಣ ಮಾಡಬಹುದಿತ್ತು. ಇದಕ್ಕೆ ಸರ್ಕಾರವೇ ಹೊಣೆ ಎಂದು ಡಿಕೆಶಿ ಕಿಡಿಕಾರಿದರು.

  • ರಾಜ್ಯಕ್ಕೆ ನೂತನ ಶಿಕ್ಷಣ ನೀತಿ ಅವಶ್ಯಕತೆ ಇಲ್ಲ, ಇದರ ಜಾರಿಗೆ ಬಿಡಲ್ಲ: ಡಿಕೆಶಿ ಎಚ್ಚರಿಕೆ

    ರಾಜ್ಯಕ್ಕೆ ನೂತನ ಶಿಕ್ಷಣ ನೀತಿ ಅವಶ್ಯಕತೆ ಇಲ್ಲ, ಇದರ ಜಾರಿಗೆ ಬಿಡಲ್ಲ: ಡಿಕೆಶಿ ಎಚ್ಚರಿಕೆ

    ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರವಾಗಿ ಸದನದಲ್ಲಿ ಚರ್ಚೆಗೆ ಅವಕಾಶ ನೀಡಿ ಎಂದು ಮನವಿ ಮಾಡಿದರೂ ಅದಕ್ಕೆ ಅವಕಾಶ ಕೊಟ್ಟಿಲ್ಲ. ಶಿಕ್ಷಣ ನೀತಿ ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ಇದರ ಜಾರಿಗೆ ನಾವು ಅವಕಾಶ ನೀಡುವುದಿಲ್ಲ. ಒಂದೊಮ್ಮೆ ರಾಜ್ಯ ಸರ್ಕಾರ ಇದನ್ನು ಜಾರಿಗೊಳಿಸಿದ್ದೇ ಆದರೆ, ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ನಾವಿದನ್ನು ಹಿಂಪಡೆಯುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.

    ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ರಾಜ್ಯ ಸರ್ಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರುತ್ತಿದೆ. ಬಿಜೆಪಿ ಆಡಳಿತದಲ್ಲಿರುವ ಯಾವ ರಾಜ್ಯದಲ್ಲೂ ಇದು ಅನುಷ್ಠಾನಗೊಳ್ಳುತ್ತಿಲ್ಲ. ನಮ್ಮ ರಾಜ್ಯದ ಪ್ರಾಥಮಿಕ ಶಿಕ್ಷಣ ಸಚಿವರು ಈ ನೀತಿಯ ಅನುಷ್ಠಾನ ಕ್ಲಿಷ್ಟವಾಗಿದ್ದು, ಅದರ ಅಧ್ಯಯನ ನಡೆಯಬೇಕು ಎಂದು ಹೇಳಿದ್ದಾರೆ. ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡೋಣ, ಇದರಲ್ಲಿ ಏನೆಲ್ಲಾ ಪ್ರಯೋಜನವಾಗಲಿದೆ ಎಂಬುದನ್ನು ಸ್ಪಷ್ಟಪಡಿಸಿ ಎಂದೆವು. ಅದನ್ನು ಬಿಟ್ಟು ಜಾರಿಗೆ ಮುಂದಾಗಿದ್ದಾರೆ. ಇವರು ಆರ್‌ಎಸ್ಎಸ್ ಅಜೆಂಡಾ, ನಾಗ್ಪುರ ಅಜೆಂಡಾಗಳನ್ನು ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳಲಿ. ಬೇಕಾದರೆ ತಮ್ಮದೇ ಸ್ವಂತ ಸಂಸ್ಥೆಗಳನ್ನು ಮಾಡಿಕೊಂಡು ಬೋಧನೆ ಮಾಡಿಕೊಳ್ಳಲಿ. ಇದು ನಮ್ಮ ಮಕ್ಕಳ ಶಿಕ್ಷಣದ ಪ್ರಶ್ನೆ ಎಂದರು.

    ವಾಜಪೇಯಿ ಯಾಕೆ ವಿರೋಧಿಸಲಿಲ್ಲ?: ಈಗ ಇರುವ ಶಿಕ್ಷಣ ನೀತಿಯನ್ನು ಜಾರಿಗೆ ತರುವಾಗ ವಾಜಪೇಯಿ ಅವರು ಯಾಕೆ ವಿರೋಧ ಮಾಡಲಿಲ್ಲ? ಬೇರೆ ಮಾಜಿ ಪ್ರಧಾನಿಗಳು ಯಾಕೆ ವಿರೋಧ ವ್ಯಕ್ತಪಡಿಸಲಿಲ್ಲ. ಇಷ್ಟು ದಿನ ನೀವು, ನಿಮ್ಮ ಮಕ್ಕಳು ಇದೇ ಶಿಕ್ಷಣ ನೀತಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಇದನ್ನು ಬದಲಾವಣೆ ಮಾಡುವುದು ಸರಿಯಲ್ಲ. ಇದು ರಾಜ್ಯಗಳಿಗೆ ಸಂಬಂಧಿಸಿದ ವಿಚಾರ. ಕೇಂದ್ರ ಸರ್ಕಾರ ಮಕ್ಕಳು ಸಂಸ್ಕೃತ ಓದಬೇಕು. ಹಿಂದಿ ಕಲಿಯಬೇಕು ಎಂದು ಹೇಳುವುದು ಸರಿಯಿಲ್ಲ. ಇವರು ಈ ಶಿಕ್ಷಣ ನೀತಿ ಜಾರಿಗೆ ತಂದರೆ ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ನಾವು ಇವುಗಳನ್ನು ಹಿಂಪಡೆಯುತ್ತೇವೆ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಹೇಳುತ್ತೇನೆ ಎಂದರು.

    ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡಬೇಕು ಎಂದು ಕೇಳಿದೆವು, ಆದರೆ ಇದಕ್ಕೆ ಅವಕಾಶ ಕೊಟ್ಟಿಲ್ಲ. ಈ ನೀತಿ ಜಾರಿಗೆ ತರಲು ಆ ಮಂತ್ರಿ ಡೋಂಗಿ ಕೆಲಸ ಮಾಡುತ್ತಿದ್ದಾನೆ. ಈ ಶಿಕ್ಷಣ ನೀತಿ ಜಾರಿಗೆ ತರಲು ಅವರದೇ ಸಂಪುಟದ ಸಚಿವರಿಗೆ, ಸರ್ಕಾರಕ್ಕೆ ಇಷ್ಟವಿಲ್ಲ. ಕೇವಲ ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ಹೊರಟಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ಮಧ್ಯಪ್ರದೇಶ, ಗುಜರಾತ್‌ನಲ್ಲಿ ಈ ಶಿಕ್ಷಣ ನೀತಿ ಜಾರಿಗೊಳಿಸಲಿ. ನಮ್ಮ ರಾಜ್ಯದಲ್ಲಿ ಈ ನೀತಿ ಜಾರಿಗೆ ಅವಕಾಶ ನೀಡುವುದಿಲ್ಲ. ಇದು ನಮ್ಮ ಮಕ್ಕಳ ಭವಿಷ್ಯದ ವಿಚಾರ, ನಾವಿದನ್ನು ವಿರೋಧಿಸುತ್ತೇವೆ. ಈ ಶಿಕ್ಷಣ ನೀತಿ ನಮ್ಮ ರಾಜ್ಯಕ್ಕೆ ಅವಶ್ಯಕತೆ ಇಲ್ಲ ಎಂದರು. ಇದನ್ನೂ ಓದಿ: ಮಂಡ್ಯದಲ್ಲಿ 30 ರಾಸುಗಳ ವಿಚಿತ್ರ ಸಾವು: ಬೆಚ್ಚಿಬಿದ್ದ ಕುಟುಂಬ

    ಈಗ ಇರುವುದು ಇಟಲಿ ಶಿಕ್ಷಣ ನೀತಿಯಾಗಿದ್ದರೆ, ವಾಜಪೇಯಿ ಅವರು ಬದಲಾವಣೆ ಮಾಡಬಹುದಿತ್ತಲ್ಲ. ಯಾಕೆ ಮಾಡಲಿಲ್ಲ? ಈಗ ಇರುವ ಶಿಕ್ಷಣ ನೀತಿ ಸರಿ ಇಲ್ಲವೇ? ಇಲ್ಲಿ ಶಿಕ್ಷಣ ಪಡೆದ ಇಂಜಿನಿಯರ್, ಡಾಕ್ಟರ್‌ಗಳು ವಿಶ್ವವಿಖ್ಯಾತಿ ಪಡೆದಿಲ್ಲವೇ? ಈ ರೀತಿ ಶಕ್ತಿ ತುಂಬಿರುವ ಶಿಕ್ಷಣ ನೀತಿ ನಮ್ಮ ಬಳಿ ಇದೆ. ಹೀಗಾಗಿ ನೂತನ ಶಿಕ್ಷಣ ನೀತಿಯನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

  • ಮುಂದಿನ ದಿನದಲ್ಲಿ ಕೆಂಪು ಕೋಟೆಯಲ್ಲಿ ನಾವು ಭಾಷಣ ಮಾಡ್ತೇವೆ: ಡಿಕೆಶಿ

    ಮುಂದಿನ ದಿನದಲ್ಲಿ ಕೆಂಪು ಕೋಟೆಯಲ್ಲಿ ನಾವು ಭಾಷಣ ಮಾಡ್ತೇವೆ: ಡಿಕೆಶಿ

    ಬೆಂಗಳೂರು: ಮುಂದಿನ ದಿನದಲ್ಲಿ ಕೆಂಪು ಕೋಟೆಯಲ್ಲಿ ನಾವು ಭಾಷಣ ಮಾಡುತ್ತೇವೆ. ನಮ್ಮ ಪಕ್ಷವೇ ಅಧಿಕಾರ ಹಿಡಿಯಲಿದೆ. ಅದಕ್ಕೆ ನಾವು ಇಲ್ಲಿಂದಲೇ ಧ್ವನಿ ನೀಡಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.

    ಇಂದು 74 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿತ್ತು. ಕಾಂಗ್ರೆಸ್ ಭವನದಲ್ಲಿ ಪಕ್ಷದ ವತಿಯಿಂದ 200 ಅಡಿ ಉದ್ದದ ರಾಷ್ಟ್ರಧ್ವಜ ಪ್ರದರ್ಶನ ಮಾಡುವ ಮೂಲಕ ಆಚರಿಸಲಾಯಿತು.

    ಕಾಂಗ್ರೆಸ್ ಭವನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಡಿಕೆಶಿ, ಇಂದು ಸಂವಿಧಾನದ ಅಪಚಾರ ಹೆಚ್ಚಾಗುತ್ತಿದೆ. ಅಂಬೇಡ್ಕರ್ ಬಗ್ಗೆ ಬಿಜೆಪಿಯವರಿಗೆ ಕಿಂಚಿತ್ತೂ ಗೌರವ ಇಲ್ಲ. ಅಂಬೇಡ್ಕರ್ ಸಂವಿಧಾನ ಬದಲಿಸಲು ಬಿಜೆಪಿ ಮುಂದಾಗಿದೆ. ದೇಶ ತುಂಡು ತುಂಡು ಮಾಡುವ ಸಂಚು ನಡೆಯುತ್ತಿದೆ. ಕೋಮುವಾದದ ವಿಷ ಬೀಜ ಬಿತ್ತಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

    ನಮಗೆ ಮತಾಂತರ, ಕೋಮುದ್ವೇಷಗಳಿಂದ ಸ್ವಾತಂತ್ರ್ಯ ಬೇಕಾಗಿದೆ. ಇಂದು ಸಂವಿಧಾನಕ್ಕೆ ಅಪಚಾರವಾಗುತ್ತಿದೆ. ಸಂವಿಧಾನ ಅಳಿಸುವ ಮೇಲಾಟ ನಡೆದಿದೆ. ಸಂವಿಧಾನದ ಮೇಲೆ ಬಿಜೆಪಿಯವರಿಗೆ ಕನಿಷ್ಠ ಬೆಲೆಯಿಲ್ಲ. ಸಂವಿಧಾನ ಸುಡಲು ಹೊರಟವರು ಅವರು. ಕೋಮುವಾದಿಗಳಿಂದ ಸ್ವಾತಂತ್ರ್ಯ ಪಡೆಯಬೇಕಿದೆ. ಕೋಮುವಾದ, ದ್ವೇಷ ಬೀಜ ಬಿತ್ತುತ್ತಿದ್ದಾರೆ. ಇಂತ ವಾತಾವರಣವನ್ನ ಬಿಜೆಪಿ ಸೃಷ್ಟಿಸುತ್ತಿದೆ. ಈ ವಿಷ ಬೀಜವನ್ನ ನಾವು ಕಿತ್ತು ಹಾಕಬೇಕಿದೆ ಎಂದರು.

    ನಾವು ಹೋರಾಟದ ಮೂಲಕವೇ ಸ್ವಾತಂತ್ರ್ಯ ಪಡೆಯಬೇಕಿದೆ. ದೇಶದಲ್ಲಿನ ತಿಕ್ಕಾಟವನ್ನ ತೊಡೆಯಬೇಕಿದೆ. ರಾಷ್ಟ್ರದಲ್ಲಿ ಮತ್ತೊಂದು ಬದಲಾವಣೆ ತರಬೇಕಿದೆ. ಮುಂದಿನ ದಿನದಲ್ಲಿ ಕೆಂಪುಕೋಟೆಯಲ್ಲಿ ನಾವು ಭಾಷಣ ಮಾಡ್ತೇವೆ. ನಮ್ಮ ಪಕ್ಷವೇ ಅಧಿಕಾರ ಹಿಡಿಯಲಿದೆ. ಅದಕ್ಕೆ ನಾವು ಇಲ್ಲಿಂದಲೇ ಧ್ವನಿ ನೀಡಬೇಕಿದೆ. ಯುವಜನತೆಯ ಮೂಲಕ ಹೋರಾಟ ಮಾಡಬೇಕಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಕೆಶಿ ಕರೆ ನೀಡಿದರು.

    ಗಾಂಧಿಯವರ ತತ್ವಗಳನ್ನ ನಾವು ಅನುಸರಿಸಬೇಕು. ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟವರನ್ನ ಸ್ಮರಿಸಿಕೊಳ್ಳಬೇಕು. ಅಸಮಾನತೆ ನಿವಾರಿಸಿ ಸಮಾನತೆ ಸಾಧಿಸಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನ ಎತ್ತಿಹಿಡಿಯಬೇಕು. ಕಾಂಗ್ರೆಸ್ ಜನ್ಮತಾಳಿದ್ದೇ ಸ್ವಾತಂತ್ರ್ಯಕ್ಕಾಗಿ. ದೇಶದ ಐಕ್ಯತೆಯನ್ನ ನಾವು ಇಂದು ಉಳಿಸಬೇಕಿದೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಎಂಎಲ್‍ಸಿ ಬಿ.ಕೆ ಹರಿಪ್ರಸಾದ್, ನಾರಾಯಣ ಸ್ವಾಮಿ ಸೇರಿ ಹಲವು ನಾಯಕರು ಭಾಗಿಯಾಗಿದ್ದರು.

  • ಕರ್ಫ್ಯೂನಿಂದ 3 ದಿನ ಆಹಾರವಿಲ್ಲದೆ ಯುವತಿ ಸಾವು

    ಕರ್ಫ್ಯೂನಿಂದ 3 ದಿನ ಆಹಾರವಿಲ್ಲದೆ ಯುವತಿ ಸಾವು

    ಬಳ್ಳಾರಿ: ಭಾರತ ಲಾಕ್‍ಡೌನ್‍ಗೆ ರಾಯಚೂರಿನ ಯುವತಿಯೊಬ್ಬಳು ಬಲಿಯಾದ ಘಟನೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

    ಬೆಂಗಳೂರಿಳಿಂದ ರಾಯಚೂರಿನ ಸಿಂಧನೂರಿಗೆ ವಾಪಸ್ ತೆರಳುತ್ತಿದ್ದ ಗಂಗಮ್ಮ ಎಂಬವರು 3 ದಿನ ಅನ್ನಾಹಾರ ಸಿಗದೆ ಸಾವನ್ನಪ್ಪಿದ್ದಾರೆ. ಮಾರ್ಚ್ 30 ರಂದು ಬೆಂಗಳೂನಿಂದ ಸಿಂಧನೂರಿಗೆ ಗಂಗಮ್ಮ ಮತ್ತು ಕುಟುಂಬ ಟ್ರ್ಯಾಕ್ಟರ್ ಮೂಲಕ ಹೊರಟಿತ್ತು. ಆದರೆ ತುಮಕೂರು ಬಳಿ ಟೋಲ್‍ನಲ್ಲಿ ತಡೆಯಲಾಗಿತ್ತು. ನಂತರ ಕುಟುಂಬಸ್ಥರ ಜೊತೆ ನಡೆದೇ ಸಾಗಿದ್ದರು.

    ಬಳ್ಳಾರಿ ಬಳಿ ತೆರಳಿದ್ದಾಗ ಎಲ್ಲರನ್ನೂ ವಶಕ್ಕೆ ಪಡೆದ ಪೊಲೀಸರು ವಲಸಿಗರ ಶಿಬಿರದಲ್ಲಿ ಇಟ್ಟಿದ್ದರು. ಅಷ್ಟೊತ್ತಿಗಾಗಲೇ ಸರಿಯಾಗಿ ಊಟ ಸಿಗದ ಕಾರಣ ರಕ್ತ ಕಡಿಮೆಯಾಗಿ, ಕಿಡ್ನಿ ಸಮಸ್ಯೆಯಿಂದ ಗಂಗಮ್ಮ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಏಪ್ರಿಲ್ 5ರಂದು ಸಾವನ್ನಪ್ಪಿದ್ದಾರೆ. ಘಟನೆಯನ್ನು ಸಿಎಂ ಯಡಿಯೂರಪ್ಪಗೆ ಸೂಚ್ಯವಾಗಿ ತಿಳಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ತಾಯಿ, ಮಗಳನ್ನ ದೂರ ಮಾಡಿತು ಹೆಮ್ಮಾರಿ:
    ಯಾದಗಿರಿಯ ಶಹಾಪುರದ ಕೊಂಗಡಿ ಗ್ರಾಮದಲ್ಲಿ ಬಾಲಕಿಯೊಬ್ಬರು ತೀವ್ರ ಕೆಮ್ಮು, ಜ್ವರ, ಗಂಟಲು ನೋವಿಂದ ಸಾವನ್ನಪ್ಪಿದ್ದಾರೆ. ಇದು ಕೂಡ ಕೊರೊನಾಗೇ ಬಲಿಯಾ ಎನ್ನುವ ಆತಂಕ ಹೆಚ್ಚಿಸಿದೆ. ಏಪ್ರಿಲ್ 1ರಂದು ಬಾಲಕಿ ಕುಟುಂಬ ಬೆಂಗಳೂರಿಗೆ ಬಂದಿತ್ತು. ಬಾಲಕಿ ಗಂಟಲು ದ್ರವ ಮತ್ತು ರಕ್ತ ಮಾದರಿಯನ್ನು ಕಲಬುರಗಿಗೆ ರವಾನೆ ಮಾಡಲಾಗಿದೆ. ಕೊರೊನಾ ಪ್ರೋಟೋಕಾಲ್ ನಿಯಮದಂತೆ ಐದು ಜನ ಅಧಿಕಾರಿ ನೇತೃತ್ವದಲ್ಲಿ ಬಾಲಕಿ ಶವಸಂಸ್ಕಾರ ಮಾಡಲಾಗಿದೆ.