Tag: kp nanjundi

  • ಚುನಾವಣೆ ಸಮಯದಲ್ಲಿ ಬಿಜೆಪಿಗೆ ಶಾಕ್- ವಿಧಾನ ಪರಿಷತ್ ಸ್ಥಾನಕ್ಕೆ ಕೆ.ಪಿ.ನಂಜುಂಡಿ ರಾಜೀನಾಮೆ

    ಚುನಾವಣೆ ಸಮಯದಲ್ಲಿ ಬಿಜೆಪಿಗೆ ಶಾಕ್- ವಿಧಾನ ಪರಿಷತ್ ಸ್ಥಾನಕ್ಕೆ ಕೆ.ಪಿ.ನಂಜುಂಡಿ ರಾಜೀನಾಮೆ

    – ಬುಧವಾರ ಕಾಂಗ್ರೆಸ್ ಸೇರ್ಪಡೆ

    ಹುಬ್ಬಳ್ಳಿ: ಚುನಾವಣೆಯ ಸಮಯದಲ್ಲಿ ಬಿಜೆಪಿಗೆ (BJP) ಮತ್ತೊಂದು ಆಘಾತ ಎದುರಾಗಿದ್ದು, ವಿಧಾನ ಪರಿಷತ್ ಸ್ಥಾನಕ್ಕೆ (MLC) ಕೆ.ಪಿ.ನಂಜುಂಡಿ (KP Nanjundi) ರಾಜೀನಾಮೆ ನೀಡಿದ್ದಾರೆ.

    ಬಿಜೆಪಿ ವಿಧಾನ ಪರಿಷತ್ ಸದಸ್ಯರಾಗಿದ್ದ ಕೆ.ಪಿ.ನಂಜುಂಡಿ ಸಭಾಪತಿ ಬಸವರಾಜ ಹೊರಟ್ಟಿಯವರ ಹುಬ್ಬಳ್ಳಿಯ ಗೃಹ ಕಚೇರಿಗೆ ತೆರಳಿ ರಾಜೀನಾಮೆ (Resignation) ನೀಡಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆ ಅಂಗೀಕಾರ ಮಾಡಿದ್ದು, ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ನಂಜುಂಡಿ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಬಣದಲ್ಲಿ ಗುರುತಿಸಿಕೊಂಡಿದ್ದ ಕೆ.ಪಿ.ನಂಜುಂಡಿ ವಿಶ್ವಕರ್ಮ ಸಮುದಾಯದ ಪ್ರಬಲ ನಾಯಕರಾಗಿದ್ದಾರೆ. ಇದನ್ನೂ ಓದಿ: ರಾಜ್ಯ ಕ್ಯಾಂಪೇನ್‍ಗೆ ಪ್ರಿಯಾಂಕಾ ಗಾಂಧಿ- ಬೆಂಗಳೂರು, ಚಿತ್ರದುರ್ಗದಲ್ಲಿ ಪ್ರಚಾರ

    ರಾಜೀನಾಮೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಂಜುಂಡಿ, ಬಿಜೆಪಿ ಕಾರ್ಯಕರ್ತರಿಗೆ, ಪಕ್ಷದ ಮುಖಂಡರಿಗೆ ಧನ್ಯವಾದ ತಿಳಿಸುವೆ. ರಾಜಕೀಯ ನನ್ನ ವೃತ್ತಿ ಅಲ್ಲಾ. ನನ್ನ ಸಮಾಜದ ಉಳಿವಿಗಾಗಿ ನಾನು ರಾಜಕೀಯಕ್ಕೆ ಬಂದಿದ್ದೆ. ಹಿಂದುಳಿದ ವರ್ಗಗಳ ಧ್ವನಿಯಾಗಿ ನನ್ನನ್ನು ಬಳಸಿಕೊಳ್ಳುತ್ತಾರೆ ಎಂದು ಬಿಜೆಪಿ ಸೇರಿದ್ದೆ. ಬರೀ ಎಂಎಲ್‌ಸಿ ಮಾಡಿದರೆ ನಮ್ಮ ಸಮಾಜ ಉದ್ಧಾರ ಆಗಲ್ಲ. ನಮ್ಮ ಸಮಾಜಕ್ಕೆ ಏನೂ ಮಾಡಿಲ್ಲ. ಎಂಎಲ್‌ಸಿ ಎನ್ನುವುದು ಗೌರವ ಅಧಿಕಾರ ಅಲ್ಲಾ. ಎಂಎಲ್‌ಸಿ ಮಾಡಿದರೆ ಸಮಾಜಕ್ಕೆ ಎಲ್ಲಾ ಸಿಗುತ್ತೆ ಎನ್ನುವುದು ತಪ್ಪು. ನಾನು ಮೋದಿ ಬಗ್ಗೆ, ಪಕ್ಷದ ಬಗ್ಗೆ ಏನೂ ಮಾತನಾಡಲ್ಲ. ಆದರೆ ಪಕ್ಷದಲ್ಲಿ ನನ್ನನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಬರಪರಿಹಾರ ಬಿಡುಗಡೆ – ಇಂದು ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ಪ್ರತಿಭಟನೆ

    ಬಿಜೆಪಿ ಅಧಿಕಾರದಲ್ಲಿದ್ದಾಗ ನನಗೆ ಸಚಿವ ಸ್ಥಾನ ನೀಡಬೇಕಿತ್ತು. ನನಗೆ ಅರ್ಹತೆ ಇತ್ತು. ನಾಳೆ (ಬುಧವಾರ) ಬೆಳಗ್ಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯ ನಡೆಯಲಿದೆ. ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪಕ್ಷ ಸೇರ್ಪಡೆ ಆಗುವೆ ಎಂದು ತಿಳಿಸಿದರು. ಇದನ್ನೂ ಓದಿ: ಇಂದು ಮಧ್ಯರಾತ್ರಿ ವಿಶ್ವವಿಖ್ಯಾತ ಐತಿಹಾಸಿಕ ಕರಗೋತ್ಸವಕ್ಕೆ ವಿದ್ಯುಕ್ತ ಚಾಲನೆ

  • ಸೌಲಭ್ಯದ ಕೊರತೆಯಿಂದ ವಿಶ್ವಕರ್ಮರು ಮತಾಂತರವಾಗ್ತಿದ್ದಾರೆ: ಕೆ.ಪಿ ನಂಜುಂಡಿ ವಿಷಾದ

    ಸೌಲಭ್ಯದ ಕೊರತೆಯಿಂದ ವಿಶ್ವಕರ್ಮರು ಮತಾಂತರವಾಗ್ತಿದ್ದಾರೆ: ಕೆ.ಪಿ ನಂಜುಂಡಿ ವಿಷಾದ

    ಧಾರವಾಡ: ವಿಶ್ವಕರ್ಮ ಸಮಾಜ (Vishwakarma Community) ಸರ್ಕಾರಿ ಸೌಲಭ್ಯಗಳಿಂದ ವಂಚಿತವಾಗಿದ್ದು, ಅನಿವಾರ್ಯವಾಗಿ ಇಸ್ಲಾಂ ಹಾಗೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ (KP Nanjundi) ವಿಷಾದ ವ್ಯಕ್ತಪಡಿಸಿದ್ದಾರೆ.

    ಧಾರವಾಡದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಶ್ವಕರ್ಮ ಸಮಾಜದವರು ಮುಸ್ಲಿಂ (Muslims), ಕ್ರೈಸ್ತ ಧರ್ಮಕ್ಕೆ ಹೋಗುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ ಬೇರೆ-ಬೇರೆ ಧರ್ಮಕ್ಕೆ ಸೇರಿಕೊಳ್ಳುತ್ತಿದ್ದಾರೆ. ನಾನು ವಿಧಾನ ಪರಿಷತ್ ಸದಸ್ಯನಾಗಿಯೂ ಅವರನ್ನು ತಡೆಯಲು ಆಗುತ್ತಿಲ್ಲ ಎಂದು ವಿಷಾದಿಸಿದ್ದಾರೆ. ಇದನ್ನೂ ಓದಿ: ಮಂಗಳೂರು ಬಾಂಬ್ ಸ್ಫೋಟದ ತನಿಖೆ NIA ಹೆಗಲಿಗೆ : ನಳಿನ್ ಕುಮಾರ್ ಕಟೀಲ್

    ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕಾಗಿ ಹೋರಾಟ ಮಾಡಿದ್ದೆವು. 5 ತಿಂಗಳಿನಿಂದ ಈ ನಿಗಮ ಖಾಲಿ ಇದೆ. ನಿಗಮದ ಅಧ್ಯಕ್ಷ ಸ್ಥಾನ ಭರ್ತಿ ಮಾಡಿಲ್ಲ. ಇದರಿಂದ ಮತಾಂತರಗೊಳ್ಳುವ ನಮ್ಮವರನ್ನು ಕೇಳಿದರೆ, ತಿನ್ನೋಕೆ ಗತಿ ಇಲ್ಲ.. ನಿಮ್ಮ ಸರ್ಕಾರ ತಂದು ಕೊಡುತ್ತಾ ಎಂದು ಪ್ರಶ್ನೆ ಮಾಡ್ತಾರೆ? ಬದುಕಿಗೆ, ಊಟಕ್ಕೆ ಜಾತಿ, ಧರ್ಮ ಇಲ್ಲ. ಅದು ಇಲ್ಲದೇ ಇದ್ದಾಗಲೇ ಅಲ್ವೆ ಬೇರೆ ಕಡೆ ಹೋಗೋದು ಎಂದು ಮರುಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾಗಾಲ್ಯಾಂಡ್ ಜೈಲಿನಿಂದ 9 ಕೈದಿಗಳು ಎಸ್ಕೇಪ್

    ಜನಿವಾರ ಹಾಕಿದವರೆಲ್ಲಾ ಬ್ರಾಹ್ಮಣರಲ್ಲ (Brahmins):
    ನಮ್ಮ-ನಮ್ಮ ಕಸುಬುಗಳನ್ನು ನಂಬಿ ಶೋಚನೀಯವಾಗಿದ್ದೇವೆ. ಸಾಮಾಜಿಕ ನ್ಯಾಯದಿಂದ ವಂಚಿತವಾದ ಸಮಾಜ ವಿಶ್ವಕರ್ಮರದ್ದು. ನಮ್ಮ ಸಮಾಜದಲ್ಲಿ ಕೂಡ ನಾವು ಜನಿವಾರ ಹಾಕುತ್ತೇವೆ. ಆದರೆ ಜನಿವಾರ ಹಾಕಿದವರೆಲ್ಲಾ ಬ್ರಾಹ್ಮಣರಲ್ಲ. ನಮ್ಮ ಸಮಾಜದವರು ನಾವು ಬ್ರಾಹ್ಮಣರು ಎಂದು ಭ್ರಮೆಯಲ್ಲಿ ಬದುಕುತ್ತಿದ್ದಾರೆ. ನಾವು ಬ್ರಾಹ್ಮಣರಲ್ಲ ಎಂದು ಜನಜಾಗೃತಿ ಮೂಡಿಸುವ ಸ್ಥಿತಿ ಬಂದಿದೆ. ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷ ನನ್ನನ್ನು ಗುರುತಿಸಬೇಕು ಎಂದು ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೈಕಮಾಂಡ್ ಅವಕಾಶ ಕೊಟ್ಟರೇ ನಾವು ಸಿದ್ದರಾಮೋತ್ಸವಕ್ಕಿಂತಲೂ ಹೆಚ್ಚು ಜನರನ್ನು ಸೇರಿಸುತ್ತೇವೆ: ಕೆ.ಪಿ.ನಂಜುಂಡಿ

    ಹೈಕಮಾಂಡ್ ಅವಕಾಶ ಕೊಟ್ಟರೇ ನಾವು ಸಿದ್ದರಾಮೋತ್ಸವಕ್ಕಿಂತಲೂ ಹೆಚ್ಚು ಜನರನ್ನು ಸೇರಿಸುತ್ತೇವೆ: ಕೆ.ಪಿ.ನಂಜುಂಡಿ

    ರಾಯಚೂರು: ಹೈಕಮಾಂಡ್ ಅವಕಾಶ ಕೊಟ್ಟರೇ ನಾವು ಸಿದ್ದರಾಮೋತ್ಸವಕ್ಕಿಂತಲೂ ಹೆಚ್ಚು ಜನರನ್ನು ಸೇರಿಸುತ್ತೇವೆ ಎಂದು ಬಿಜೆಪಿ ಎಂಎಲ್‍ಸಿ ಕೆ.ಪಿ. ನಂಜುಂಡಿ ಅಭಿಪ್ರಾಯಪಟ್ಟಿದ್ದಾರೆ.

    ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮೋತ್ಸವ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದು ಸಿದ್ದರಾಮಯ್ಯರ ಅಭಿಮಾನಿಗಳು ಅಲ್ಲ. ಇಡೀ ಪಕ್ಷ. ನನ್ನ ಪ್ರಕಾರ ಸಿದ್ದರಾಮೋತ್ಸವಕ್ಕೆ ಜನಸಂಖ್ಯೆ ಕಡಿಮೆ ಬಂದಿತ್ತು. 224 ಕ್ಷೇತ್ರದ ದೊಡ್ಡ ದೊಡ್ಡ ನಾಯಕರು ಸಮಿತಿಯಲ್ಲಿ ಇದ್ದರು. ಎಲ್ಲರೂ ಸೇರಿ ಸಿದ್ದರಾಮಯ್ಯ ಹುಟ್ಟುಹಬ್ಬ ಮಾಡಿದ್ದಾರೆ. ಅದು ದೊಡ್ಡ ವಿಷಯವೇ ಅಲ್ಲ. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಒಗ್ಗಟ್ಟು ಪ್ರದರ್ಶನ ವಿಧಾನ ಸರಿಯಾಗಿ ಇರಲಿಲ್ಲ. ರಾಹುಲ್ ಗಾಂಧಿ ತಬ್ಬಿಕೊಳ್ಳಲು ಹೇಳಿದರು. ರಾಹುಲ್ ಗಾಂಧಿ ಹೇಳದೆ ಅವರು ತಬ್ಬಿಕೊಂಡಿದ್ದರೆ ಜನರು ಒಗ್ಗಟ್ಟಾಗಿದ್ದಾರೆ ಎಂದು ಭಾವಿಸುತ್ತಿದ್ದರು ಎಂದಿದ್ದಾರೆ. ಇದನ್ನೂ ಓದಿ: ಕೆಂಪು, ಬಿಳಿ, ಹಸಿರು ಎಂದು ಬಾವುಟದ ಬಣ್ಣ ತಪ್ಪಾಗಿ ಹೇಳಿದ ಸಿದ್ದರಾಮಯ್ಯ

    ನಮಗೆ ಹೈಕಮಾಂಡ್ ಅವಕಾಶ ಕೊಟ್ಟು ಕಾರ್ಯಕ್ರಮ ಮಾಡಲು ಹೇಳಿದರೆ ನಮ್ಮ ಶಕ್ತಿಯ ಪ್ರದರ್ಶನ ಮಾಡುತ್ತೇವೆ ಎಂದರು. ಸಿಎಂ ಬಸವರಾಜ ಬೊಮ್ಮಾಯಿ ಬದಲಾವಣೆ ವಿಚಾರವಾಗಿ ಮಾತನಾಡಿ, ಸಿಎಂ ಬದಲಾವಣೆ ಒಂದು ಗಾಸಿಪ್. ಸಿಎಂ ಬೊಮ್ಮಾಯಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ಅವಧಿ ಮುಗಿಯುವವರೆಗೂ ಸಿಎಂ ಬದಲಾವಣೆ ಇಲ್ಲ. ಸಿಎಂ ಬದಲಾವಣೆ ಹೇಳಿಕೆಯೂ ಕೇವಲ ಬಾಯಿಚಪಲ ಇದ್ದಂತೆ ಎಂದು ಖಾರವಾಗಿ ಉತ್ತರಿಸಿದ್ದಾರೆ. ಇದನ್ನೂ ಓದಿ: 9 ವರ್ಷಗಳ ಹಿಂದೆ ಕಿಡ್ನ್ಯಾಪ್‌ ಆಗಿದ್ದ ಬಾಲಕಿ ಪೋಸ್ಟರ್ ಸಹಾಯದಿಂದ ಹೆತ್ತವರ ಮಡಿಲಿಗೆ

    Live Tv
    [brid partner=56869869 player=32851 video=960834 autoplay=true]

  • `ಕೈ’ ಬಿಟ್ಟು ಕಮಲ ಹಿಡಿದ ವಿಶ್ವಕರ್ಮ ಸಮುದಾಯದ ಮುಖಂಡ ಕೆಪಿ ನಂಜುಂಡಿ

    `ಕೈ’ ಬಿಟ್ಟು ಕಮಲ ಹಿಡಿದ ವಿಶ್ವಕರ್ಮ ಸಮುದಾಯದ ಮುಖಂಡ ಕೆಪಿ ನಂಜುಂಡಿ

    ಬೆಂಗಳೂರು: ವಿಶ್ವಕರ್ಮ ಸಮುದಾಯದ ಮುಖಂಡ ಕೆ.ಪಿ.ನಂಜುಂಡಿ ಅವರು ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

    ಡಾಲರ್ಸ್ ಕಾಲೋನಿಯ ಕೆ.ಪಿ.ನಂಜುಂಡಿ ನಿವಾಸಕ್ಕೆ ಬಿಎಸ್‍ವೈ ಭೇಟಿ ನೀಡಿ ಮಾತುಕತೆಯ ಬಳಿಕ ವಿಶ್ವಕರ್ಮ ಸಮುದಾಯದ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಬಿಜೆಪಿ ಪಕ್ಷ ಸೇರಿದ್ದಾರೆ.

    ಬಳಿಕ ಮಾತನಾಡಿದ ಅವರು, ಕಳೆದ 16 ವರ್ಷಗಳಿಂದ ನಾನು ಕಾಂಗ್ರೆಸ್‍ನಲ್ಲಿದ್ದೆ. ಆದರೆ ಈಗ ಬಿಜೆಪಿ ಸೇರುತ್ತಿದ್ದೇನೆ. 16 ವರ್ಷದಲ್ಲೇ ಏನನ್ನೂ ನಾನು ಬಯಸಿಲ್ಲ. ಇಂದು ಬಿಜೆಪಿಗೆ ಸೇರಿ, ಈಗಲೇ ಏನನ್ನು ಕೇಳುವುದಿಲ್ಲ. ಬಿಜೆಪಿಯಲ್ಲಿ ನಾನು ಒಬ್ಬ ಸಾಮಾನ್ಯ ಅಟೆಂಡರ್ ಆಗಿ ಕೆಲಸ ಮಾಡಲು ಸಿದ್ಧ ಅಂತಾ ಹೇಳಿದ್ದಾರೆ.

    ಯಾವುದೇ ಬೇಡಿಕೆಗಳನ್ನು ಪಕ್ಷದ ಮುಂದೆ ಇಡದೇ ಬಿಜೆಪಿಗೆ ಸೇರುತ್ತಿದ್ದೇನೆ. ಯಡಿಯೂರಪ್ಪ ಮಾತು ಕೊಟ್ಟರೇ ಸತ್ಯ ಹರಿಶ್ಚಂದ್ರ ಮಾತು ಕೊಟ್ಟಂತೆ. ಅವರು ಸೂಕ್ತ ಸ್ಥಾನಮಾನ ನೀಡುವುದಾಗಿ ಹೇಳಿದ್ದಾರೆ ಎಂದು ನಂಜುಂಡಿ ತಿಳಿಸಿದ್ದಾರೆ.

    ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಮಾತನಾಡಿ, ಈ ಕ್ಷಣದಿಂದಲೇ ನಂಜುಂಡಿ ಬಿಜೆಪಿ ಸೇರಿದ್ದಾರೆ. ಮುಂದಿನ ಚುನಾವಣೆ ಬಳಿಕ ನಂಜುಂಡಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು. ಯಾವುದೇ ಬೇಡಿಕೆಯನ್ನು ಇಡದೇ ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಅವರ ಅಧಿಕೃತ ಬಿಜೆಪಿ ಸೇರ್ಪಡೆ ಕೆಲಸ ಎರಡ್ಮೂರು ದಿನಗಳಲ್ಲಿ ಆಗುತ್ತೆ. ಇನ್ಮುಂದೆ ವಿಶ್ವಕರ್ಮ ಸಮುದಾಯ ನಮ್ಮ ಜೊತೆಗೆ ಇರಲಿದೆ ಅಂತಾ ಹರ್ಷ ವ್ಯಕ್ತಪಡಿಸಿದ್ರು.

    ಇದನ್ನೂ ಓದಿ: ನಮ್ಮ ಸಮಾಜವನ್ನು ಕಡೆಗಣಿಸಿ ಹೇಗೆ ಪಕ್ಷ ಬೆಳೆಸುತ್ತೀರಿ : ಸಿಎಂಗೆ ನಂಜುಂಡಿ ಸವಾಲು

  • ನಮ್ಮ ಸಮಾಜವನ್ನು ಕಡೆಗಣಿಸಿ ಹೇಗೆ ಪಕ್ಷ  ಬೆಳೆಸುತ್ತೀರಿ : ಸಿಎಂಗೆ ನಂಜುಂಡಿ ಸವಾಲು

    ನಮ್ಮ ಸಮಾಜವನ್ನು ಕಡೆಗಣಿಸಿ ಹೇಗೆ ಪಕ್ಷ ಬೆಳೆಸುತ್ತೀರಿ : ಸಿಎಂಗೆ ನಂಜುಂಡಿ ಸವಾಲು

    – ಕೈ ಸರ್ಕಾರದ ವಿರುದ್ಧ ವಿಶ್ವಕರ್ಮ ಸಮುದಾಯದ ನಾಯಕರು ಗರಂ
    – ಸೋನಿಯಾಗೆ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ: ನಂಜುಂಡಿ

    ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ವಿಶ್ವಕರ್ಮ ಸಮಾಜ ಸಾಕಷ್ಟು ಶ್ರಮವಹಿಸಿದೆ. ನಾನು ರಾಜಕೀಯವನ್ನು ವೃತ್ತಿಯಾಗಿ ತೆಗೆದುಕೊಂಡಿಲ್ಲ, ಬದಲಾಗಿ ಸಮಾಜ ಸೇವೆಗಾಗಿ ಆರಿಸಿಕೊಂಡಿದ್ದೇನೆ. ಆದ್ರೆ ನಾನು ಸಿಎಂ ನಂಬಿ ಸೋತು ಹೋಗಿದ್ದೇನೆ ಕೆ.ಪಿ ನಂಜುಡಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

    ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಸ್ವಾಮೀಜಿಯವರು, ಸ್ವಾಮೀಜಿ ಎನ್ನುವುದನ್ನು ಮರೆತು ಚುನಾವಣೆಯಲ್ಲಿ ಮತ ಯಾಚನೆ ಮಾಡಿದ್ದರು. ಅದೆನ್ನೆಲ್ಲ ಸಿಎಂ ಮರೆತು ಬಿಟ್ಟಿದ್ದಾರೆ. ನನ್ನ ಕೈ ಬಿಟ್ಟಿರುವ ಹಿಂದೆ ಅದೇನು ರಾಜಕೀಯ ಅಡಗಿದ್ಯೋ ಗೊತ್ತಿಲ್ಲ ಎಂದು ಹೇಳಿದರು.

    ಚುನಾವಣೆಯಲ್ಲಿ ಎಂಎಲ್‍ಸಿ ಸ್ಥಾನಕ್ಕೆ ಕಾಂಗ್ರೆಸ್‍ನಿಂದ ಟಿಕೆಟ್ ನೀಡುವುದಾಗಿ ಸಿಎಂ ಭರವಸೆ ನೀಡಿದ್ದರು. ಆದರೆ ಬೇರೆ ಯಾರದ್ದೋ ಹೆಸರ ಬದಲಾಗಿ ಕೊನೆಯ ಕ್ಷಣದಲ್ಲಿ ನನ್ನ ಹೆಸರನ್ನು ಕೈ ಬಿಟ್ಟಿದ್ದಾರೆ. ನನಗೆ ಭಾಷಣ ಮಾಡಲು ಬರುವುದಿಲ್ಲವೆಂದುಕೊಂಡಿದ್ದಾರೆ ಅನ್ನಿಸುತ್ತದೆ. ನಮ್ಮ ಸಮಾಜವನ್ನು ಕಡೆಗಣಿಸಿ ಹೇಗೆ ಪಕ್ಷವನ್ನು ಬೆಳೆಸುತ್ತೀರಿ ಎಂದು ಅವರು ಸಿಎಂಗೆ ಸವಾಲು ಹಾಕಿದರು.

    ಶೋಷಿತ ವರ್ಗದ ಧ್ವನಿಯಲ್ಲ: ಸಿಎಂ ಸಿದ್ಧರಾಮಯ್ಯ ದೇವರಾಜ್ ಅರಸು ಆಗುತ್ತಾರೆ ಎಂದುಕೊಂಡಿದ್ದೆವು. ಆದರೆ ಅವರು ಹಾಗೆ ಅಗಿಲ್ಲ. ಅರಸು ಜೊತೆ ಅವರನ್ನು ಹೋಲಿಕೆ ಮಾಡುವುದು ಸರಿಯಲ್ಲ. ಅವರು ಶೋಷಿತ ವರ್ಗದ ಧ್ವನಿಯಲ್ಲ, ಎಲ್ಲವು ಕಾಲ ನಿರ್ಣಯ. ನನ್ನಂತವನಿಗೆ ಈ ರೀತಿ ಆದರೆ ಸಾಮಾನ್ಯ ವ್ಯಕ್ತಿಗಳ ಗತಿ ಏನು ಎಂದು ನಂಜುಂಡಿ ಪ್ರಶ್ನಿಸಿದರು.

    224 ಶಾಸಕರಿಗೆ ವಿಶ್ವಕರ್ಮ ಸಮುದಾಯದವರ ಮತ ಬೇಕು, ಆದ್ರೆ ನಾವು ಬೇಡ. ಇಷ್ಟರ ಮಟ್ಟಿಗೆ ಒಂದು ಸಮಾಜವನ್ನು ನಿರ್ಲಕ್ಷ್ಯ ಮಾಡಬಾರದು. ನನಗೆ ಕಾಂಗ್ರೆಸ್ ಪಕ್ಷ ಸೇರೋದೆ ಬೇಡ ಅಂತ ನಮ್ಮ ಸಮಾಜದ ಜನ ಹೇಳಿದ್ದರು. ಆದ್ರೇ ನಾನೇ ಅವರ ಮನವೊಲಿಸಿ ಪಕ್ಷಕ್ಕೆ ಸೇರಲು ಮುಂದಾದರೆ ಇಂದು ಇಡೀ ಸಮಾಜಕ್ಕೆ ಅನ್ಯಾಯ ಮಾಡಿದ್ದೇನೆ. ಈಗ ಅವರು ಬಿಜೆಪಿಗೆ ಹೋಗು ಅಂದ್ರೆ ಹೋಗುತ್ತೇನೆ, ಜೆಡಿಎಸ್‍ಗೆ ಹೋಗು ಅಂದ್ರೆ ಹೋಗ್ತೀನಿ ಎಂದರು.

    ಸೋನಿಯಾ ಚೆನ್ನಾಗಿದ್ದಾರೆ: ಸ್ವತಃ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನನಗೆ ಆ ಹಬ್ಬಕ್ಕೆ ಶುಭಾಶಯ ಈ ಹಬ್ಬಕ್ಕೆ ಶುಭಾಶಯ, ಅಂತಾ ಹೇಳಿದ್ದಾರೆ. ದಿಗ್ವಿಜಯ ಸಿಂಗ್ ನಮ್ಮ ಸಮಾಜದ ಸಮಾವೇಶಕ್ಕೆ ಬಂದು ನನ್ನನ್ನು ಗ್ರೇಟ್ ಲೀಡರ್ ಅಂತಾ ಟ್ವೀಟ್ ಮಾಡಿದ್ದಾರೆ. ಅವರೆಲ್ಲರಿಗೆ ನನ್ನ ಬಗ್ಗೆ ಗೊತ್ತಿದೆ. ಆದ್ರೆ ಸಿದ್ದರಾಮಯ್ಯ ಅವರ ಬಳಿ ನನ್ನ ಬಗ್ಗೆ ಏನು ಹೇಳಿದ್ದಾರೋ ಗೊತ್ತಿಲ್ಲ. ನಾನು ಇಲ್ಲಿಯವರೆಗೆ ರಾಜೀನಾಮೆ ನೀಡಿಲ್ಲ, ಇಲ್ಲಿ ರಾಜೀನಾಮೆ ನೀಡುವುದಿಲ್ಲ. ಮುಖ್ಯಮಂತ್ರಿಗಿಂತ ನನ್ನ ಜೊತೆ ಸೋನಿಯಾ ಗಾಂಧಿಯವರು ಚೆನ್ನಾಗಿದ್ದು ಅವರಲ್ಲಿ ರಾಜೀನಾಮೆ ನೀಡಿ, ನನಗಾದ ಅನ್ಯಾಯವನ್ನು ಹೇಳಿಕೊಳ್ಳುತ್ತೇನೆ ಎಂದರು.

    ‘ಕೈ’ ಸೇರಲ್ಲ: ಬಿಜೆಪಿಯವರು ನನ್ನ ಸಂಪರ್ಕ ಮಾಡಿದ್ದಾರೆ. ಆದ್ರೆ ಸ್ವಾಮಿಜಿಯವರು ಯಾರು ಸ್ಥಾನಮಾನ ನೀಡ್ತಾರೋ ಅವರ ಜೊತೆ ಹೋಗೋಣ ಅಂತಾ ಸಲಹೆ ನೀಡಿದ್ದಾರೆ. ಯಾವ ಪಕ್ಷ ಅಂತಾ ನಿರ್ಧಾರ ಮಾಡಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಆಹ್ವಾನಿಸಿದ್ದಾರೆ. ಮತ್ತೆ ಸೋನಿಯಾ ಮನವೊಲಿಸಿದರೂ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮಾತೇ ಇಲ್ಲ ಎಂದು ನಂಜುಡಿ ತಮ್ಮ ನಿರ್ಧಾರವನ್ನು ತಿಳಿಸಿದರು.

    ಕಾಳಹಸ್ತೇಂದ್ರ ಶ್ರೀಗಳು ಮಾತನಾಡಿ, ಇನ್ನು ಮುಂದೆ ಕಾಂಗ್ರೆಸ್ ಪಕ್ಷದ ಜೊತೆ ನಾವು ಯಾವುದೇ ಕಾರಣಕ್ಕೂ ಕೈ ಜೋಡಿಸಲ್ಲ. ಸಿದ್ದರಾಮಯ್ಯ ಹತ್ತಿರ ನಾವು ಉಪಮುಖ್ಯಮಂತ್ರಿ, ಸಚಿವ ಸ್ಥಾನ ಕೇಳಿಲ್ಲ. ಸಣ್ಣ ಸ್ಥಾನಮಾನ ಕೊಡಲು ಇಷ್ಟೆಲ್ಲ ಹಿಂದೇಟು ಹಾಕ್ತಾರೆ ಅಂದ್ರೆ ನಮ್ಮನ್ನು ಎಷ್ಟು ನಿರ್ಲಕ್ಷ್ಯ ಮಾಡ್ತಾರೆ ಅನ್ನೋದು ಗೊತ್ತಾಗುತ್ತದೆ ಎಂದರು.

    45 ಲಕ್ಷ ಜನ ಇರುವ ಸಮುದಾಯ ನಮ್ಮದು, ನಮಗೆ ಸಿಎಂ ಮೋಸ ಮಾಡಿದ್ದಾರೆ. ಅವರ ಮೇಲಿನ ನಂಬಿಕೆ ಹೋಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಕೊಟ್ಟಿರುವ ಬೆಂಬಲವನ್ನು ಸಂಪೂರ್ಣ ವಾಪಸ್ ಪಡೆದುಕೊಳ್ಳುತ್ತೇವೆ. ಆದರೆ ನಮಗೆ ಯಾಕೆ ಮೋಸ ಮಾಡಿದ್ದಾರೆ ಎಂದು ಪ್ರಶ್ನಿಸಿ ಶ್ರೀಗಳು ಭಾವುಕರಾದರು.

    ಅದ್ಯಾವುದೋ ಸಮಾಜಕ್ಕೆ ಪಕ್ಷದಲ್ಲಿ, ಉನ್ನತ ಸ್ಥಾನ ಕೊಟ್ಟಿದ್ದೀರಿ? ಆದರೆ ವಿಶ್ವ ಕರ್ಮ ಸಮಾಜಕ್ಕೆ ಮಾತ್ರ ಪದೇ ಪದೇ ಮೋಸ ಯಾಕೆ ಮಾಡ್ತಾ ಇದ್ದೀರಿ ಎಂದು ಪ್ರಶ್ನಿಸಿದ ಅವರು ಇನ್ಯಾವ ಪರಿ ನಿಮಗೆ ಕೆಲಸ ಮಾಡಬೇಕು? ನಂಜುಂಡಿ ಇಷ್ಟೆಲ್ಲ ಪಕ್ಷಕ್ಕೆ ಒದ್ದಾಡಿದ್ದಾರೆ. ಆದರೆ ಅವರಿಗೆ ಬೆಲೆ ಕೊಟ್ಟಿಲ್ಲ. ಇದು ಸಿಎಂ ನಮಗೆ ಮಾಡಿದ ಮೋಸ ಅಷ್ಟೇ ಅಲ್ಲ, ಅವರಿಗೆ ಅವರೇ, ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಮಾಡಿದ ಮಹಾಮೋಸ ಎಂದು ವಾಗ್ದಾಳಿ ನಡೆಸಿದರು.