Tag: Kovid Center

  • ಕೋವಿಡ್ ಘಟಕದಲ್ಲಿ ಬೆಂಕಿ ಅಗ್ನಿ ಅವಘಡ- ಇಬ್ಬರು ಸಾವು

    ಕೋವಿಡ್ ಘಟಕದಲ್ಲಿ ಬೆಂಕಿ ಅಗ್ನಿ ಅವಘಡ- ಇಬ್ಬರು ಸಾವು

    – ಮಾಲ್ ಒಳಗೆ ಇರುವ ಆಸ್ಪತ್ರೆ

    ಮುಂಬೈ: ಮಾಲ್ ಒಳಗಿರುವ ಕೋವಿಡ್ ಸೆಂಟರ್‍ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇಬ್ಬರು ಮೃತಪಟ್ಟಿರುವ ಘಟನೆ ಮುಂಬೈನ ಭಾಂಡುಪ್‍ನ ಆಸ್ಪತ್ರೆಯಲ್ಲಿ ನಡೆದಿದೆ. 6 ಮಂದಿ ಒಳಗೆ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

    ಭಾಂಡುಪ್‍ನ ಡ್ರೀಮ್ ಮಾಲ್‍ನ ಮೂರನೇ ಮಹಡಿಯಲ್ಲಿ ಕೋವಿಡ್ ಕೇರ್ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆರು ಮಂದಿ ಒಳಗೆ ಸಿಲುಕಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅಗ್ನಿಶಾಮಕದಳ ಸಿಬ್ಬಂದಿ ಕಾರ್ಯಾಚರಣೆ ಮಾಡುತ್ತಿದ್ದಾರೆ. ಸಾವು-ನೋವುಗಳ ಸಂಖ್ಯೆಯಲ್ಲಿ ಹೆಚ್ಚಾಗುವ ಸಾಧ್ಯತೆಗಳಿವೆ.

    ಬೆಂಕಿ ಕಾಣಿಸಿಕೊಂಡಿರುವುದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ಮಾಲ್‍ನ ಒಳಗಡೆ ಆಸ್ಪತ್ರೆ ನಿರ್ಮಿಸಿರುವುದನ್ನು ನಾನು ಇದೇ ಮೊದಲು ಕೇಳಿರುವುದು. ಈ ಕುರಿತಾಗಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ. ಈ ಆಸ್ಪತ್ರೆಯಲ್ಲಿ 76 ಮಂದಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅದರಲ್ಲಿ 73 ಮಂದಿ ಕೋವಿಡ್ ಸೋಂಕಿತರಾಗಿದ್ದರು. ಆಸ್ಪತ್ರೆಯಲ್ಲಿದ್ದವರನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ ಎಂದು ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಹೇಳಿದ್ದಾರೆ.

  • ಕೊರೊನಾ ಸೋಂಕಿತರಿಗಾಗಿ ಹಾಸನದಲ್ಲಿ ಹೆಚ್ಚುವರಿ 300ಕ್ಕೂ ಹೆಚ್ಚು ಬೆಡ್‍ಗಳ ವ್ಯವಸ್ಥೆ

    ಕೊರೊನಾ ಸೋಂಕಿತರಿಗಾಗಿ ಹಾಸನದಲ್ಲಿ ಹೆಚ್ಚುವರಿ 300ಕ್ಕೂ ಹೆಚ್ಚು ಬೆಡ್‍ಗಳ ವ್ಯವಸ್ಥೆ

    ಹಾಸನ: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಹಾಸನ ಕೋವಿಡ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಕಡಿಮೆ ಮಾಡಲು ಹಾಸನ ಜಿಲ್ಲಾಡಳಿತ ಮತ್ತೊಂದು ಕೋವಿಡ್ ಸೆಂಟರ್ ಓಪನ್ ಮಾಡಿದೆ.

    ಹಾಸನ ನಗರದ ಹೃದಯ ಭಾಗದಲ್ಲಿರುವ ಮಂಜುನಾಥ ಆಯುರ್ವೇದಿಕ್‌ ಆಸ್ಪತ್ರೆಯ ಒಂದು ಭಾಗವನ್ನು ತೆಗೆದುಕೊಂಡಿದ್ದು, ಮೂನ್ನೂರು ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸಕಲ ವ್ಯವಸ್ಥೆ ಮಾಡಿದ್ದಾರೆ. ಒಂದು ರೂಮಿನಲ್ಲಿ ಮೂವರು ಕೋವಿಡ್ ರೋಗಿ ಹೊರತು ಪಡಿಸಿ ಬೇರೆಯವರಿಗೆ ಈ ಆಸ್ಪತ್ರೆಯಲ್ಲಿ ಪ್ರವೇಶವಿಲ್ಲ.

    ಕೊರೊನಾ ಸೋಂಕಿನ ಲಕ್ಷಣ ಇಲ್ಲದೇ ಪಾಸಿಟಿವ್ ಬಂದಿರುವ ವ್ಯಕ್ತಿಗಳಿಗೆ ಹೊಸ ಕೋವಿಡ್ ಆಸ್ಪತ್ರೆ ಮಾಡಲಾಗಿದೆ. ಹಾಸನದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಂದಿನಿಂದ ಮತ್ತೊಂದು ಹೊಸ ಕೋವಿಡ್ ಸೆಂಟರ್ ಕಾರ್ಯನಿರ್ವಹಿಸಲಿದೆ. ಈ ಮೂಲಕ ಹಾಸನದಲ್ಲಿ ಕೋವಿಡ್ ಸೋಂಕಿತರಿಗಾಗಿ ಸುಮಾರು 700ಕ್ಕೂ ಹೆಚ್ಚು ಬೆಡ್ ವ್ಯವಸ್ಥೆ ಮಾಡಿದಂತಾಗಿದೆ.