Tag: Kovid-19 Test

  • ದುಡುಕಿ ಮಾತನಾಡಿಲ್ಲ – ಕೊರೊನಾ ಕಿರಿಕ್‍ಗೆ ಶ್ರೀಕಂಠೇಗೌಡ ಸಮರ್ಥನೆ

    ದುಡುಕಿ ಮಾತನಾಡಿಲ್ಲ – ಕೊರೊನಾ ಕಿರಿಕ್‍ಗೆ ಶ್ರೀಕಂಠೇಗೌಡ ಸಮರ್ಥನೆ

    – ಪುತ್ರನ ಬಗ್ಗೆ ಕೇಳಿದ ತಕ್ಷಣ ಉತ್ತರಿಸದ ಶಾಸಕ

    ಮಂಡ್ಯ: ಶ್ರೀಕಂಠೇಗೌಡರು ಯಾವಾಗಲೂ ಮೃದುವಾಗಿಯೇ ಮಾತನಾಡುವುದು. ಯಾವತ್ತು ದುಡುಕಿ ಮಾತನಾಡುವುದಿಲ್ಲ ಎಂದು ಜೆಡಿಎಸ್ ವಿಧಾನಪರಿಷತ್ ಸದಸ್ಯ ಕೆ.ಟಿ ಶ್ರೀಕಂಠೇಗೌಡ ತಮ್ಮ ಮತ್ತು ಮಗನ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶ್ರೀಕಂಠೇಗೌಡ, ಅಂಬೇಡ್ಕರ್ ಭವನ ಜನನಿಬೀಡ ಪ್ರದೇಶ. ಹೀಗಾಗಿ ಜನನಿಬೀಡ ಪ್ರದೇಶದಲ್ಲಿ ಟೆಸ್ಟಿಂಗ್ ಸೆಂಟರ್ ಮಾಡಬಾರದು ಎಂದು ಜನರು ನನಗೆ ದೂರು ನೀಡಿದ್ದರು. ನಂತರ ನಾನು ವಾರ್ತಾ ಅಧಿಕಾರಿಗಳನ್ನು ಹೋಗಿ ಕೇಳಿದೆ. ಆಗ ಅವರು ನಾವು ತಪ್ಪು ಮಾಡಿದ್ದೀವಿ ಬೇರೆಡೆಗೆ ಶಿಫ್ಟ್ ಮಾಡುತ್ತೇನೆ ಎಂದಿದ್ದರು ಅಂತ ಹೇಳಿದರು. ಇದನ್ನೂ ಓದಿ: ಗೂಂಡಾಗಿರಿ ಮಾಡಿ ಎಂಎಲ್‍ಸಿ ಆಗಿ ಮುಂದುವರಿಯೋಕೆ ಯಾವ ಅರ್ಹತೆ ಇದೆ: ಶ್ರೀಕಂಠೇಗೌಡ ವಿರುದ್ಧ ಸುಮಲತಾ ಕಿಡಿ

    ಕೊರೊನಾ ಟೆಸ್ಟಿಂಗ್‍ನ ಐಸೋಲೇಷನ್ ಕಟ್ಟಡದಲ್ಲಿ ಮಾಡಬೇಕು. ಜನನಿಬೀಡ ಪ್ರದೇಶದಲ್ಲಿ ಮಾಡಬಾರದು. ಸಾರ್ವಜನಿಕರು ಓಡಾಡುವ ಪ್ರದೇಶದಲ್ಲಿ ಮಾಡುವುದು ಬೇಡ ಐಸೋಲೇಷನ್ ಕಟ್ಟಡದಲ್ಲಿ ಮಾಡಬೇಕೆಂದು ನಮ್ಮ ಮನವಿ ಅಷ್ಟೇ. ಜನರು ನಮ್ಮ ಬಳಿ ಬಂದು, ನಾವು ಟೆಸ್ಟಿಂಗ್ ಸೆಂಟರ್ ನಿಂದ 10 ಅಡಿ ದೂರದಲ್ಲಿ ವಾಸ ಮಾಡುತ್ತಿದ್ದೇವೆ. ಇಲ್ಲಿ ಟೆಸ್ಟಿಂಗ್ ಸೆಂಟರ್ ಮಾಡುವುದು ಬೇಡ ಐಸೋಲೇಷನ್ ಕಟ್ಟಡಕ್ಕೆ ಶಿಫ್ಟ್ ಮಾಡಬೇಕು ಎಂದು ಮನವಿ ಮಾಡಿದ್ದರು. ಹೀಗಾಗಿ ನಾನು ಬಂದು ಅವರಿಗೆ ಹೇಳಿದೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

    ಶ್ರೀಕಂಠಗೌಡರು ಯಾವಾಗಲೂ ಮೃದುವಾಗಿಯೇ ಮಾತನಾಡುವುದು. ದುಡುಕಿ ಮಾತನಾಡುವುದಿಲ್ಲ. ನನ್ನ ಮಗ ಸಾರ್ವಜನಿಕವಾಗಿ ಬಂದಿದ್ದು, ಮಾಧ್ಯಮದವರು ಮೊದಲಿಗೆ ಜೋರಾಗಿ ಮಾತನಾಡಿದ್ದು, ನಾವು ಜೋರಾಗಿ ಮಾತನಾಡಿಲ್ಲ ಎಂದು ತಮ್ಮ ಮಗನ ಬಗ್ಗೆ ಕೇಳಿದ ತಕ್ಷಣ ಉತ್ತರಿಸಿದೆ ಹೋದರು.

    ನಡೆದಿದ್ದೇನು?
    ನಗರದ ಅಂಬೇಡ್ಕರ್ ಭವನದಲ್ಲಿ ಇಂದು ಪತ್ರಕರ್ತರ ಕೋವಿಡ್ 19 ಟೆಸ್ಟ್ ಇತ್ತು. ಆದರೆ ಅಂಬೇಡ್ಕರ್ ಭವನದ ಬಳಿಯೇ ವಿಧಾನಸಭಾ ಸದಸ್ಯ ಕೆ.ಟಿ ಶ್ರೀಕಂಠೇಗೌಡ ಅವರ ಮನೆಯಿದೆ. ಹೀಗಾಗಿ ಇಲ್ಲಿ ಟೆಸ್ಟ್ ಮಾಡಬೇಡಿ ಎಂದು ತನ್ನ ಸಂಗಡಿಗರನ್ನು ಕರೆದುಕೊಂಡು ಬಂದು ಖ್ಯಾತೆ ತೆಗೆದಿದ್ದರು. ಅಲ್ಲದೆ ಕೋವಿಡ್ ಟೆಸ್ಟ್ ನಿಲ್ಲಿಸುವಂತೆ ಜಗಳ ಮಾಡಿದ್ದರು.

    ಇದೇ ವೇಳೆ ಕೆಟಿಎಸ್ ಪುತ್ರ ಪತ್ರಕರ್ತರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದ. ಇದೀಗ ಕೋವಿಡ್_19 ಟೆಸ್ಟ್ ನಡೆಸದಂತೆ ಕಿರಿಕ್ ಮಾಡಿದ್ದ ಶ್ರೀಕಂಠೇಗೌಡ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143(ಅಕ್ರಮ ಗುಂಪು), 147(ದೊಂಬಿ) 341(ಅಕ್ರಮವಾಗಿ ತಡೆಯುವುದು) ಅಡಿ ಪ್ರಕರಣ ದಾಖಲಾಗಿದೆ. ಶ್ರೀಕಂಠೇಗೌಡ ಎ1, ಪುತ್ರ ಕೃಷಿಕ್ ಗೌಡ ಎ2, ಬೆಂಬಲಿಗರಾದ ಚಂದ್ರಕಲಾ ಎ3, ಜಗದೀಶ್ ನಾಲ್ಕನೇ ಆರೋಪಿ ಆಗಿದ್ದಾರೆ.

  • ಕೊರೊನಾ ಟೆಸ್ಟ್ ನಡೆಸದಂತೆ ಕಿರಿಕ್ – ಜೆಡಿಎಸ್ ಎಂಎಲ್‍ಸಿ, ಪುತ್ರನ ವಿರುದ್ಧ ಎಫ್‍ಐಆರ್

    ಕೊರೊನಾ ಟೆಸ್ಟ್ ನಡೆಸದಂತೆ ಕಿರಿಕ್ – ಜೆಡಿಎಸ್ ಎಂಎಲ್‍ಸಿ, ಪುತ್ರನ ವಿರುದ್ಧ ಎಫ್‍ಐಆರ್

    ಮಂಡ್ಯ: ಕೋವಿಡ್-19 ಟೆಸ್ಟ್ ನಡೆಸದಂತೆ ಕಿರಿಕ್ ಮಾಡಿದ್ದ ಜೆಡಿಎಸ್ ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143 (ಅಕ್ರಮ ಗುಂಪು), 147 (ದೊಂಬಿ) 341 (ಅಕ್ರಮವಾಗಿ ತಡೆಯುವುದು), ವಿಪತ್ತು ನಿರ್ವಹಣಾ ಕಾಯ್ದೆ 2005 ಅಡಿ ಪ್ರಕರಣ ದಾಖಲಾಗಿದೆ. ಶ್ರೀಕಂಠೇಗೌಡ ಎ2, ಪುತ್ರ ಕೃಷಿಕ್ ಗೌಡ ಎ3, ಬೆಂಬಲಿಗರಾದ ಚಂದ್ರಕಲಾ ಎ4, ಜಗದೀಶ್ ಐದನೇ ಆರೋಪಿ ಆಗಿದ್ದಾರೆ.

    ನಗರದ ಅಂಬೇಡ್ಕರ್ ಭವನದಲ್ಲಿ ಇಂದು ಪತ್ರಕರ್ತರ ಕೋವಿಡ್ 19 ಟೆಸ್ಟ್ ಇತ್ತು. ಆದರೆ ಅಂಬೇಡ್ಕರ್ ಭವನದ ಬಳಿಯೇ ವಿಧಾನಸಭಾ ಸದಸ್ಯ ಕೆ.ಟಿ ಶ್ರೀಕಂಠೇಗೌಡ ಅವರ ಮನೆಯಿದೆ. ಹೀಗಾಗಿ ಇಲ್ಲಿ ಟೆಸ್ಟ್ ಮಾಡಬೇಡಿ ಎಂದು ತನ್ನ ಸಂಗಡಿಗರನ್ನು ಕರೆದುಕೊಂಡು ಬಂದು ಖ್ಯಾತೆ ತೆಗೆದಿದ್ದರು. ಅಲ್ಲದೆ ಕೋವಿಡ್ ಟೆಸ್ಟ್ ನಿಲ್ಲಿಸುವಂತೆ ಜಗಳ ಮಾಡಿದ್ದರು.

    ಇದೇ ವೇಳೆ ಕೆಟಿಎಸ್ ಪುತ್ರ ಪತ್ರಕರ್ತರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

    ಈ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿ ವೆಂಕಟೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಕೆಟಿಎಸ್ ನಡೆದುಕೊಂಡ ರೀತಿ ಕಾನೂನು ಬಾಹಿರ ಹಾಗೂ ಅಕ್ಷಮ್ಯ ಅಪರಾಧವಾಗಿದೆ. ಈ ಸಂಬಂಧ ದೂರು ಪರಿಶೀಲಿಸಿ ಎಫ್‍ಐಆರ್ ದಾಖಲಿಸಲು ನಿರ್ಧಾರ ಮಾಡುವುದಾಗಿ ತಿಳಿಸಿದ್ದರು.