ಶಿವರಾಜ್ ಕುಮಾರ್ ನಟನೆಯ ಶಿವಲಿಂಗು ಸೇರಿದಂತೆ ಕನ್ನಡದ ಅನೇಕ ಚಿತ್ರಗಳಲ್ಲಿ ನಟಿಸಿರುವ ವೇದಿಕಾಗೆ ಕರೋನಾ ಪಾಸಿಟಿವ್ ಆಗಿದೆಯಂತೆ. ಈ ವಿಷಯವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕೊರೊನಾ ಲಕ್ಷಣಗಳನ್ನು ಬರೆದುಕೊಂಡಿದ್ದಾರೆ. ತಾವೀಗ ತೀವ್ರ ರೀತಿಯ ಜ್ವರದಿಂದ ನರಳುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಹಾಗಾಗಿ ಅಗತ್ಯ ಚಿಕಿತ್ಸೆಯನ್ನೂ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ಕನ್ನಡ ಸಂಗಮಾ, ಹೋಮ್ ಮಿನಿಸ್ಟರ್, ಗೌಡರ ಹೋಟೆಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ವೇದಿಕಾ ತಮಗೆ ಕೋವಿಡ್ ಸೋಂಕು ತಗಲಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಇದೇ ಮೊದಲ ಬಾರಿಗೆ ನನಗೆ ಕೋವಿಡ್ ಪಾಸಿಟಿವ್ ಆಗಿದೆ. ನನ್ನ ದುರಾದೃಷ್ಟ ಎಂದು ಅವರು ನೋವು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಒಲವೇ ಜೀವನ ಲೆಕ್ಕಾಚಾರ ಅಂತಿದ್ದಾರೆ ಯುವ ಜೋಡಿ
ಮೊದ ಮೊದಲ ಜ್ವರದ ಲಕ್ಷಣಗಳಷ್ಟೇ ಕಾಣಿಸಿಕೊಂಡವು. ಆನಂತರ ತೀವ್ರ ಜ್ವರ ಶುರುವಾಯಿತು. ತಡಮಾಡದೇ ನಾನು ವೈದ್ಯರನ್ನು ಸಂಪರ್ಕ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಈ ವಿಷಯದಲ್ಲಿ ಯಾರೂ ನಿರ್ಲಕ್ಷ್ಯ ಮಾಡಬೇಡಿ ಎಂದು ಅವರು ಬರೆದುಕೊಂಡಿದ್ದಾರೆ. ಇದೀಗ ಅವರಿಗೆ 103 ಡಿಗ್ರಿ ಜ್ವರ ಇದೆಯಂತೆ. ಮೈಕೈ ನೋವಿನಿಂದಲೂ ಅವರು ನರಳುತ್ತಿದ್ದಾರಂತೆ.
ಕಲಬುರಗಿ: ಪಿಎಸ್‍ಐ ಅಕ್ರಮ ನೇಮಕಾತಿ ಕರ್ಮಕಾಂಡವು ಬಗೆದಷ್ಟು ಬಯಲಾಗುತ್ತಿದೆ. ಇದೀಗ ತನಿಖೆಯಲ್ಲಿ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ. ಪಿಎಸ್‍ಐ ಪರೀಕ್ಷೆ ಅಕ್ರಮಕ್ಕೆ ಕೋವಿಡ್‍ನಿಂದ ಮೃತಪಟ್ಟ ನೌಕರನ ಮೊಬೈಲ್‍ನನ್ನು ಕಿಂಗ್‍ಪಿನ್ ಆರ್.ಡಿ. ಪಾಟೀಲ್ ಬಳಸುತ್ತಿದ್ದ ಎನ್ನುವ ವಿಚಾರ ತನಿಖೆಯಲ್ಲಿ ಬಯಲಾಗಿದೆ.
ಸೊನ್ನ ಗ್ರಾಮದ ಲಕ್ಷ್ಮೀಪುತ್ರ ಎಂಬವರು ಆರ್‌ಡಿ ಪಾಟೀಲ್ ಬಳಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಲಕ್ಷ್ಮಿಪುತ್ರ ಕೋವಿಡ್‍ನಿಂದ ಮೃತಪಟ್ಟಿದ್ದರು. ಇವರು ಮೃತಪಟ್ಟ ಬಳಿಕ ಇವರ ಬಳಿ ಇದ್ದ ಎರಡು ಮೊಬೈಲ್‍ಗಳಲ್ಲಿ ಒಂದನ್ನು ಆರ್‌ಡಿ ಪಾಟೀಲ್ ಇಟ್ಟುಕೊಂಡಿದ್ದ. ಅದೇ ಮೊಬೈಲ್‍ನಿಂದ ಪಿಎಸ್‍ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಎಸಗಿದ್ದ. ಇದರಿಂದ ಬೇರೆ ಯಾರಿಗೂ ಅನುಮಾನ ಮೂಡುವುದಿಲ್ಲ ಎಂದು ಈ ರೀತಿ ಯೋಜನೆ ಮಾಡಿದ್ದ. ಇದನ್ನೂ ಓದಿ: ಅಸಿಸ್ಟೆಂಟ್ ಪ್ರೊಫೆಸರ್ ಎಕ್ಸಾಮ್‍ನಲ್ಲೂ ಗೋಲ್ಮಾಲ್- ಕಾಸು ಕೊಟ್ರೆ ಸರ್ಕಾರಿ ಹುದ್ದೆ..?
ಈ ಸ್ಫೋಟಕ ಮಾಹಿತಿ ಸಿಐಡಿ ಅಧಿಕಾರಿಗಳ ವಿಚಾರಣೆ ವೇಳೆ ಬಹಿರಂಗವಾಗಿದೆ. ತಮ್ಮ ಬಳಿಯಿರುವ ಮೊಬೈಲ್ ಬಳಸಿದರೆ ಪ್ರಕರಣ ಬಯಲಿಗೆ ಬರುತ್ತದೆ ಎಂದು ಮೃತ ವ್ಯಕ್ತಿಯ ಮೊಬೈಲ್‍ನ್ನು ಬಳಸುತ್ತಿದ್ದೆ ಎಮದು ಒಪ್ಪಿಕೊಂಡಿದ್ದಾನೆ. ಎರಡು ದಿನಗಳ ಹಿಂದೆ ಆರ್‌ಡಿ ಪಾಟೀಲ್ ಸ್ನೇಹಿತ ಮಂಜುನಾಥ್ ಮಲ್ಲುಗೌಡನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಕಲಬುರಗಿ ಜೆಎಮ್‍ಎಫ್‍ಸಿ ಕೋರ್ಟ್ 13 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿದೆ. ಇದನ್ನೂ ಓದಿ: ಕಲುಷಿತ ನೀರು ಸೇವಿಸಿ 15 ಮಂದಿ ಅಸ್ವಸ್ಥ
ಲಕ್ನೋ: ಉತ್ತರಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಇಲ್ಲಿನ ಗೌತಮಬುದ್ಧ ಜಿಲ್ಲೆಯೊಂದರಲ್ಲೇ ಒಟ್ಟು ಸೋಂಕಿತರ ಶೇ.50 ರಷ್ಟು ಪ್ರಕರಣಗಳು ಪತ್ತೆಯಾಗಿದೆ. ಉತ್ತರಪ್ರದೇಶದ ಒಟ್ಟು 980 ಪ್ರಕರಣಗಳ ಪೈಕಿ 529 ಪ್ರಕರಣ ಜಿಲ್ಲೆಯೊಂದರಲ್ಲೇ ಇದೆ ಎಂದು ಹೇಳಲಾಗಿದೆ.
ಕಳೆದ 24 ಗಂಟೆಯಲ್ಲಿ ಇದೊಂದೇ ಜಿಲ್ಲೆಯಲ್ಲಿ 103 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸಕ್ರೀಯ ಪ್ರಕರಣಗಳ ಸಂಖ್ಯೆ 529ಕ್ಕೆ ಏರಿಕೆಯಾಗಿದೆ. ಕೆಲ ದಿನಗಳಿಂದ ಈಚೆಗೆ ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿ ಕೋವಿಡ್ ಗಣನೀಯವಾಗಿ ಏರಿಕೆಯಾಗಿದೆ. ಆದರೂ ಸರ್ಕಾರ ಹಾಗೂ ಆರೋಗ್ಯಾಧಿಕಾರಿಗಳು ಯಾವುದೇ ಭಯವಿಲ್ಲ ಎನ್ನುತ್ತಿದ್ದಾರೆ. ಲಸಿಕೆ ಪಡೆಯದಿರುವುದು ಹಾಗೂ ಜನರು ಕೋವಿಡ್ ನಿಯಮಗಳನ್ನು ಉಲ್ಲಂಘಿಸುತ್ತಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ, ನೀರವ್ ಮೋದಿ ಬಗ್ಗೆ ಬೋರಿಸ್ ಹೇಳಿದ್ದೇನು?
ಉತ್ತರಪ್ರದೇಶದಲ್ಲಿ ಈಗಾಗಲೇ ದೆಹಲಿ ಮಾದರಿಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ವಿಧಿಸಲಾಗಿದೆ. 7 ಗೌತಮಬುದ್ಧನಗರ, ಗಾಝಿಯಾಬಾದ್, ಹಾಂಪುರ್, ಮೀರತ್, ಬುಲಂದ್‌ಶಹರ್ ಹಾಗೂ ಭಗ್‌ಪತ್, ಲಕ್ನೋ, ಗುರುಗ್ರಾಮ್, ಜ್ಹಗ್ಗರ್, ಸಾನಿಪತ್ ಹಾಗೂ ಫರಿದಾಬಾದ್‌ಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ನಿಮಯ ಉಲ್ಲಂಘಿಸಿದ ಅನೇಕ ಮಂದಿಗೆ ಈಗಾಗಲೇ ದಂಡ ವಿಧಿಸಲಾಗಿದೆ. 2ನೇ ಬಾರಿಗೆ ನಿಯಮ ಉಲ್ಲಂಘಿಸಿದವರಿಗೆ ಐಪಿಸಿ 188 ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನನ್ನ ಕೈಯಲ್ಲಿ ಭಾರತದ ಲಸಿಕೆಯಿದೆ: ಬ್ರಿಟನ್ ಪ್ರಧಾನಿ ಬೋರಿಸ್
ಕಮಲ್ ಹಾಸನ್ ಪುತ್ರಿ, ನಟಿ ಶ್ರುತಿ ಹಾಸನ್ ವಿಚಿತ್ರ ಸಮಸ್ಯೆಯೊಂದರಿಂದ ಹೈರಾಣಾಗಿದ್ದಾರಂತೆ. ಕೋವಿಡ್ ಗಿಂತಲೂ ಈ ಸಮಸ್ಯೆ ತುಂಬಾ ಬಾಧಿಸುತ್ತಿದೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಶ್ರುತಿ ಹಾಸನ್ ಅವರಿಗೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ದವು. ಅವರು ಕೊರೋನಾಗೆ ಬೇಕಾದ ಅಗತ್ಯ ಚಿಕಿತ್ಸೆಯನ್ನು ಪಡೆದುಕೊಂಡರು. ಬರೋಬ್ಬರಿ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆದರು. ಆದರೂ, ಕೋವಿಡ್ ನಂತರ ಅವರಿಗೆ ಬೇರೆ ಬೇರೆ ಸಮಸ್ಯೆಗಳು ಕಾಣಿಸಿಕೊಂಡಿವೆಯಂತೆ. ಇದನ್ನೂ ಓದಿ : ಪುನೀತ್ ಅಭಿಮಾನಿಗಳಿಗೆ ಭಾರೀ ನಿರಾಸೆ : ಮೆರವಣಿಗೆ ಇಲ್ಲ, ಹೆಲಿಕಾಪ್ಟರ್ ಗೆ ಅನುಮತಿ ಕೊಟ್ಟಿಲ್ಲ
ಕೋವಿಡ್ ಗೆ ಚಿಕಿತ್ಸೆ ಪಡೆದುಕೊಂಡ ನಂತರ ವಿಪರೀತ ತಲೆನೋವು ಶುರುವಾಗಿದೆ. ದೇಹ ಆಯಾಸಗೊಳ್ಳುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿದ್ದೇವೆ. ಇದರಿಂದಾಗಿ ಬೇರೆ ಬೇರೆ ಸಮಸ್ಯೆಗಳು ನನ್ನಲ್ಲಿ ಶುರುವಾಗಿವೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ಕೋವಿಡ್ ನಿಂದಾದ ಪರಿಣಾಮನಾ ಇದು ಎಂದು ಕೇಳಿದ್ದಾರೆ. ಇದನ್ನೂ ಓದಿ : ದುನಿಯಾ ವಿಜಯ್ ನಟನೆಯ ತೆಲುಗು ಸಿನಿಮಾದ ಫಸ್ಟ್ ಲುಕ್ ರಿಲೀಸ್ : ಯಾರದು ಪ್ರತಾಪ್ ರೆಡ್ಡಿ?
ತೆಲುಗು ಮತ್ತು ತಮಿಳು ಸಿನಿಮಾಗಳನ್ನು ಒಪ್ಪಿಕೊಂಡಿರುವ ಶ್ರುತಿ, ಈಗ ಅವುಗಳ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಿದೆ. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯ. ಈ ಸಮಸ್ಯೆಗಳ ನಡುವೆಯೂ ಅವು ನಿರಂತರವಾಗಿ ವ್ಯಾಯಾಮ ಮಾಡುತ್ತಿದ್ದಾರಂತೆ. ಆದರೆ, ನಿದ್ರೆ ಸಮಸ್ಯೆಯೇ ಅವರನ್ನು ಗಂಭೀರವಾಗಿ ಕಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಬೆಂಗಳೂರು: ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆ ಎಂಬ ಭೇದವಿಲ್ಲದೇ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಎಲ್ಲೆಡೆ ಉಚಿತವಾಗಿ ಮಾಡಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ವೈದ್ಯರ ಘಟಕದ ಅಧ್ಯಕ್ಷರಾದ ಬಿ.ಎಲ್.ವಿಶ್ವನಾಥ್, ಶೇ.75ಕ್ಕೂ ಹೆಚ್ಚು ಬೆಂಗಳೂರಿಗರು ಖಾಸಗಿ ಆಸ್ಪತ್ರೆಗಳು ಅಥವಾ ಲ್ಯಾಬೊರೇಟರಿಗಳ ಮೇಲೆ ಅವಲಂಬಿತರಾಗಿದ್ದಾರೆ. ಸಮೀಪದಲ್ಲಿ ಸರ್ಕಾರಿ ಆಸ್ಪತ್ರೆಯಿಲ್ಲದ ಕಾರಣಕ್ಕೆ ಬಡವರು ಹಾಗೂ ಮಧ್ಯಮ ವರ್ಗದವರೂ ಖಾಸಗಿ ಮೊರೆ ಹೋಗಬೇಕಾಗಿದೆ. ಖಾಸಗಿ ಲ್ಯಾಬೊರೇಟರಿಗಳು 500 ರೂ. ಪರೀಕ್ಷಾ ಶುಲ್ಕ ಹಾಗೂ 300 ರೂ.ವರೆಗೆ ಇತರೆ ಶುಲ್ಕ ಸೇರಿ 800 ರೂಪಾಯಿವರೆಗೂ ವಸೂಲಿ ಮಾಡುತ್ತಿವೆ. ಎಲ್ಲೆಡೆಯು ಉಚಿತ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಸರ್ಕಾರವು ವ್ಯವಸ್ಥೆ ಕಲ್ಪಿಸಿ ಜನರಿಗೆ ನೆರವಾಗಬೇಕು ಎಂದು ಒತ್ತಯಿಸಿದರು. ಇದನ್ನೂ ಓದಿ: ಪಾದಯಾತ್ರೆ ಕೈ ಬಿಡುವಂತೆ ಸಿದ್ದರಾಮಯ್ಯ, ಡಿಕೆಶಿಗೆ ಸಿಎಂ ಬೊಮ್ಮಾಯಿ ಪತ್ರ
ಕೋವಿಡ್ ಟೆಸ್ಟಿಂಗ್ ಕಿಟ್‍ಗಳನ್ನು ಸರ್ಕಾರವು ಖಾಸಗಿ ಆಸ್ಪತ್ರೆಗಳ ಮೂಲಕವೂ ಉಚಿತವಾಗಿ ವಿತರಿಸಬೇಕು. ಇದರಿಂದ ಟೆಸ್ಟಿಂಗ್ ಪ್ರಮಾಣ ಹೆಚ್ಚಾಗಿ ಕೋವಿಡ್ ರೋಗಿಗಳ ನಿಜವಾದ ಸಂಖ್ಯೆ ತಿಳಿಯಲಿದೆ. ಮೂರನೇ ಅಲೆಯಲ್ಲಿ ಐಸಿಯುಗಳಿಗಿಂತ ಹೊರ ರೋಗ ಚಿಕಿತ್ಸಾ ವಿಭಾಗದ ಅವಶ್ಯಕತೆ ಹೆಚ್ಚಿದ್ದು, ಸರ್ಕಾರ ಈ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕು. ಕೋವಿಡ್ ರೋಗಿಗಳ ಸಿಆರ್‌ಪಿ ಡಿ ಡೈಮರ್ ರಕ್ತ ಪರೀಕ್ಷೆಗೆ ಕೆಲವು ಲ್ಯಾಬೊರೇಟರಿಗಳಲ್ಲಿ 2,500ವರೆಗೆ ಬಿಲ್ ಮಾಡಲಾಗುತ್ತಿದೆ. ಸರ್ಕಾರ ಇದಕ್ಕೆ ರಿಯಾಯಿತಿ ದರದಲ್ಲಿ ನಿರ್ದಿಷ್ಟ ಮೊತ್ತವನ್ನು ನಿಗದಿ ಪಡಿಸಬೇಕು ಎಂದು ಆಗ್ರಹಿಸಿದರು.
ಕೋವಿಡ್‍ಗೆ ಐವರ್‌ಮೆಕ್ಟಿನ್ ಹಾಗೂ ಡಾಕ್ಸಿಸೈಕ್ಲಿನ್ ಮಾತ್ರೆಗಳು ಔಷಧಿಗಳೆಂದು ಸಾಬೀತಾಗಿಲ್ಲ. ಆ ಮಾತ್ರೆಗಳಿಂದ ತೀವ್ರ ಗ್ಯಾಸ್ಟ್ರಿಕ್ ಹಾಗೂ ವಾಂತಿ ಆಗುವ ಸಾಧ್ಯತೆಯಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಅವುಗಳನ್ನು ಆರು ತಿಂಗಳ ಹಿಂದೆಯೇ ಪಟ್ಟಿಯಿಂದ ಕೈಬಿಟ್ಟಿದೆ. ಆದರೆ ಈಗಲೂ ಆ ಮಾತ್ರೆಗಳಿರುವ ಕಿಟ್‍ಗಳನ್ನು ಬಿಬಿಎಂಪಿ ವಿತರಿಸುತ್ತಿದೆ. ಜನರ ಆರೋಗ್ಯದ ವಿಚಾರದಲ್ಲಿ ಬಿಬಿಎಂಪಿ ಎಷ್ಟು ನಿರ್ಲಕ್ಷ್ಯ ವಹಿಸುತ್ತಿದೆ ಎಂಬುದು ಇದರಿಂದಲೇ ತಿಳಿಯುತ್ತದೆ ಎಂದು ವೈದ್ಯ ಘಟಕದ ಡಾ.ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ
ಚೆನ್ನೈ: ದಕ್ಷಿಣ ಭಾರತದ ಮಹಾನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.
ಕೀರ್ತಿ ಅವರು ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದು, ಎಲ್ಲರಿಗೂ ನಮಸ್ಕಾರ. ನಾನು ಕೋವಿಡ್-19 ಪಾಸಿಟಿವ್ ದೃಢವಾಗಿದೆ. ನಾನು ಎಲ್ಲ ರೀತಿಯ ಅಗತ್ಯ ಮುನ್ನೆಚ್ಚರಿಕೆಗಳು ಮತ್ತು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡರೂ ಸೋಂಕಿನ ಸೌಮ್ಯ ರೋಗಲಕ್ಷಣಗಳು ನನಗೆ ಕಾಣಿಸಿಕೊಂಡಿತು. ಇತ್ತೀಚೆಗೆ ಈ ವೈರಸ್ ಹರಡುತ್ತಿರುವುದನ್ನು ನೋಡಿದರೆ ಆತಂಕವಾಗುತ್ತಿದೆ. ದಯವಿಟ್ಟು ಎಲ್ಲರೂ ಕೋವಿಡ್ ನ ಎಲ್ಲ ಸುರಕ್ಷತಾ ನಿಯಮಗಳನ್ನು ಅನುಸರಿಸಿ ಮತ್ತು ಸುರಕ್ಷಿತವಾಗಿರಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಿನ್ಸ್ ಮಹೇಶ್ ಬಾಬುಗೆ ಕೊರೊನಾ ಪಾಸಿಟಿವ್
ಇತ್ತೀಚೆಗೆ ನನ್ನೊಂದಿಗೆ ಸಂಪರ್ಕಕ್ಕೆ ಬಂದವರು ದಯವಿಟ್ಟು ಪರೀಕ್ಷಿಸಿಕೊಳ್ಳಿ. ನೀವು ಇನ್ನೂ ಲಸಿಕೆ ಹಾಕಿಸಿಕೊಳ್ಳದಿದ್ದರೆ, ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳಿ. ಲಸಿಕೆಯಿಂದ ಸೋಂಕಿನ ತೀವ್ರತೆ ಕಮ್ಮಿ ಇರುತ್ತೆ. ಬೇಗ ಗುಣಮುಖರಾಗಬಹುದು. ನಿಮ್ಮ ಆರೋಗ್ಯಕ್ಕಾಗಿ ದಯವಿಟ್ಟು ಲಸಿಕೆಗಳನ್ನು ಬೇಗ ತೆಗೆದುಕೊಳ್ಳಿ. ನೀವು ಮತ್ತು ನಿಮ್ಮ ಪ್ರೀತಿಪಾತ್ರರು. ನಾನು ಶೀಘ್ರವಾಗಿ ಚೇತರಿಸಿಕೊಂಡು ಮತ್ತೆ ಕೆಲಸಕ್ಕೆ ಮರಳುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಕೀರ್ತಿ ತೆಲುಗು ಚಿತ್ರ ‘ಮಹಾನಟಿ’ ಅಭಿನಯಕ್ಕೆ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದು, ಇತ್ತೀಚೆಗೆ ಓಟಿಟಿಯಲ್ಲಿ ಬಿಡುಗಡೆಯಾದ ಥ್ರಿಲ್ಲರ್ ಮೂವೀ ‘ಪೆಂಗ್ವಿನ್’ ಸಿನಿಮಾದ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.
ಕೀರ್ತಿ ಬೆಳ್ಳಿತೆರೆ ಮೇಲೆ ಕೊನೆಯಾದಾಗಿ ರಜನಿಕಾಂತ್ ನಟಿಸಿದ ‘ಅಣ್ಣಾತ್ತೆ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಮೋಹನ್ ಲಾಲ್ ಅಭಿನಯದ ಮಲಯಾಳಂ ಚಿತ್ರ ‘ಮರಕ್ಕರ್ ಚಿತ್ರದಲ್ಲಿಯೂ ಈ ನಟಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಇದನ್ನೂ ಓದಿ: ಬಿಹಾರ ಸಿಎಂ ನಿತೀಶ್ ಕುಮಾರ್‌ಗೆ ಕೊರೊನಾ ಪಾಸಿಟಿವ್
ನಿರ್ಮಾಪಕ ಜಿ.ಸುರೇಶ್ ಕುಮಾರ್ ಮತ್ತು ನಟಿ ಮೇನಕಾ ಅವರ ಪುತ್ರಿ ಕೀರ್ತಿ ಹಲವಾರು ಚಿತ್ರಗಳಲ್ಲಿ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡಿದ್ದಾರೆ. 2013 ರ ಮಲಯಾಳಂ ‘ಗೀತಾಂಜಲಿ’ ಸಿನಿಮಾದ ಮೂಲಕ ಸಿನಿ ಲೋಕಕ್ಕೆ ಪೂರ್ಣಪ್ರಮಾಣದ ನಟಿಯಾಗಿ ಪಾದರ್ಪಣೆ ಮಾಡಿದರು. ನಂತರ ರಿಂಗ್ ಮಾಸ್ಟರ್, ಮನ್ಮಧುಡು 2, ಸಂದಕೋಜಿ 2, ರಜಿನಿ ಮುರುಗನ್, ರೆಮೋ ಮತ್ತು ನೇನು ಸೈಲಜಾ ಮುಂತಾದ ಚಿತ್ರಗಳಲ್ಲಿ ನಟಿಸಿದರು.
ರಾಯಚೂರು: ಜಿಲ್ಲಾ ಆರೋಗ್ಯ ಇಲಾಖೆ ಗುತ್ತಿಗೆ ನೌಕರರಿಗೆ ಕೂಡಲೇ ಸಂಬಳ ಬಿಡುಗಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣಗೆ ತರಾಟೆಗೆ ತೆಗೆದುಕೊಂಡರು.
ನಗರದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಕೋವಿಡ್ ಹಾಗೂ ಮಳೆಹಾನಿ ಪರಿಹಾರ ಕುರಿತು ಇಂದು ಸಭೆ ನಡೆಯಿತು. ಈ ವೇಳೆ ಹಾಲಪ್ಪ ಅವರು ರಾಮಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಅವರು, ಅಧಿಕಾರಿಗಳ ಸಭೆಯಲ್ಲಿ ಸಂಬಳ ನೀಡದೆ ಸಿಬ್ಬಂದಿಯನ್ನ ಸತಾಯಿಸಬೇಡಿ. ಕೋವಿಡ್ ಸಂದರ್ಭದಲ್ಲಿ ದುಡಿದವರಿಗೆ ಯಾಕೆ ಕಾಡಿಸುತ್ತೀರಿ. ಅವರನ್ನ ಕೆಲಸಕ್ಕೆ ತೆಗೆದುಕೊಂಡಿದ್ದೀರಿ, ದುಡಿಸಿಕೊಂಡಿದ್ದೀರಿ ಸಂಬಳ ಕೊಡಲು ಏನು ಕಷ್ಟ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮತ್ತೆ ಮೇಕೆದಾಟು ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ
ಗುತ್ತಿಗೆ ಆಧಾರದಲ್ಲಿ ತೆಗೆದುಕೊಂಡು ದುಡಿಸಿಕೊಂಡು ಸಂಬಳ ನೀಡದಿದ್ದರೆ ಹೇಗೆ ಎಂದು ಸಿಂಬ್ಬದಿಗಳ ಪರ ನಿಂತರು. ಈ ಕುರಿತು ಕೂಡಲೇ ವರದಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ಮತ್ತು ರಾಜೇಂದ್ರನ್ ಅವರಿಗೆ ಸೂಚನೆ ನೀಡಿದ್ದಾರೆ.
ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ಸರ್ಕಾರ ಮಟ್ಟದಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ಹಾಲಪ್ಪ ಆಚಾರ್ ಅವರು ಎಚ್ಚರಿಕೆ ಕೊಟ್ಟಿದ್ದಾರೆ.
ಮಂಗಳೂರು: ಕೋವಿಡ್ ಸಂಗ್ರಾಮದಲ್ಲಿ ಮಾಸ್ಕ್ ಧಾರಣೆಗೆ ಹೆಚ್ಚಿನ ಮಹತ್ವವಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಮಾಸ್ಕ್ ವಿತರಿಸಿ ಸಂದೇಶವನ್ನು ಕೊಟ್ಟರು.
‘ಮಾಸ್ಕ್ ಧರಿಸಿ, ಸರಿಯಾಗಿ ಧರಿಸಿ’ ಎಂಬ ಅಭಿಯಾನವನ್ನು ಜಿಲ್ಲಾಡಳಿತ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರೆಡ್ ಕ್ರಾಸ್ ವತಿಯಿಂದ ನಗರದ ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಅಂಗಾರ ಅವರು ಚಾಲನೆ ನೀಡಿದರು. ನಂತರ ಮಾಸ್ಕ್ ಅನ್ನು ಜನರಿಗೆ ವಿತರಿಸಿ ಸಂದೇಶವನ್ನು ಸಾರಿದರು. ಇದನ್ನೂ ಓದಿ: ಹಿರಿಯ ಸಾಹಿತಿ, ರಾಷ್ಟ್ರಪ್ರಶಸ್ತಿ ವಿಜೇತ ಎನ್.ಎಸ್.ದೇವಿಪ್ರಸಾದ್ ನಿಧನ
ಈ ವೇಳೆ ಮಾತನಾಡಿದ ಅವರು, ಕೋವಿಡ್ ವಿರುದ್ಧದ ಸಂಗ್ರಾಮದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು. ಅದು ಕೂಡ ಸರಿಯಾಗಿ ಧರಿಸಬೇಕು. ಆ ಮೂಲಕ ಜಿಲ್ಲೆಯ ಎಲ್ಲರೂ ಕೋವಿಡ್ ಹರಡದಂತೆ ಸಹಕರಿಸಬೇಕು. ಈ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯ ಮಾಧ್ಯಮಗಳು ಪ್ರತಿಯೊಬ್ಬರಲ್ಲಿಯೂ ಹೊಣೆಗಾರಿಕೆಯನ್ನು ಮೂಡಿಸುತ್ತಿವೆ. ಇದರಿಂದ ಯಶಸ್ವಿಯಾಗಿ ಹಾಗೂ ಸುಲಭವಾಗಿ ನಾಗರೀಕರಲ್ಲಿ ಅರಿವು ಮೂಡಿಸಬಹುದಾಗಿದೆ. ಸಾರ್ವಜನಿಕರ ಜೀವ ರಕ್ಷಣೆ ಹಾಗೂ ಅವರ ಆರೋಗ್ಯದ ಹಿತದ ಮುನ್ನೆಚ್ಚರಿಕಾ ಕ್ರಮಗಳಿಗಾಗಿ ವಾರಾಂತ್ಯ ಕಫ್ರ್ಯೂ ವಿಧಿಸಲಾಗಿದೆ. ಕೋವಿಡ್ ಸೋಂಕು ನಿಯಂತ್ರಿಸುವಲ್ಲಿ ಜನರ ಸಹಕಾರ ಅಗತ್ಯವಿದೆ ಎಂದು ವಿನಂತಿಸಿಕೊಂಡರು.
ಜಿಲ್ಲಾಧಿಕಾರಿ ಡಾ.ರಾಜೇಂದ್ರ.ಕೆ.ವಿ ಅವರು ಮಾತನಾಡಿ, ಜನರಲ್ಲಿ ಈಗಾಗಲೇ ಸೋಂಕು ಹರಡದಂತೆ ವಹಿಸಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿದೆ. ಕೆಲವರು ಗುಂಪುಗಳಲ್ಲಿ ಸೇರುವುದು, ಸಾಮಾಜಿಕ ಅಂತರ ವಹಿಸದೇ ಇರುವುದರ ಬಗ್ಗೆ ಜಿಲ್ಲಾಡಳಿತದಿಂದ ಅರಿವು ಮೂಡಿಸಲಾಗುತ್ತಿದೆ. ಇದಕ್ಕೆ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರೆಡ್ ಕ್ರಾಸ್ ಕೈ ಜೋಡಿಸಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಕೋವಿಡ್ ಸೋಂಕು ಹರಡದಂತೆ ಮಾಸ್ಕ್ ಅನ್ನು ಮೂಗು ಮುಚ್ಚುವ ಹಾಗೆ ಸರಿಯಾಗಿ ಧರಿಸಬೇಕು. ಬಾಯಿಯ ಕೆಳಗೆ ಅಥವಾ ಗಂಟಲಿಗೆ ಹಾಕಿಕೊಳ್ಳಬಾರದು. ಪರಸ್ಪರ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಹಾಗೂ ಸ್ಯಾನಿಟೈಸರ್ ಬಳಕೆ ಅತ್ಯುತ್ತಮ ಮಾರ್ಗಗಳಾಗಿವೆ. ಬಸ್ಸುಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಎಚ್ಚರಿಕೆ ಕೊಟ್ಟರು.
ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಏಕೆಂದರೆ ತಜ್ಞರು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಈ ಮಾರ್ಗಸೂಚಿಗಳನ್ನು ಸಿದ್ಧಪಡಿಸಿರುತ್ತಾರೆ. ಅದನ್ನು ಸರ್ಕಾರದಿಂದ ಅನುಷ್ಠಾನ ಗೊಳಿಸಲಾಗುತ್ತದೆ. ಓಮಿಕ್ರಾನ್ ತಡೆಗಟ್ಟಲು ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ವ್ಯಾಕ್ಸಿನೇಷನ್ ಪಡೆಯಬೇಕು ಎಂದರು.
ಲಾಕ್ ಡೌನ್ ನಿಂದ ಪಾರಾಗಲು ವ್ಯಾಪಾರಸ್ಥರು ಕಡ್ಡಾಯವಾಗಿ ವ್ಯಾಕ್ಸಿನ್ ಪಡೆಯಬೇಕು. ರೋಗ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಚಿಕಿತ್ಸೆ ಪಡೆದು. ಕ್ವಾರಂಟೈನ್ ಗೆ ಒಳಗಾಗಬೇಕು. ಜಿಲ್ಲೆಯಲ್ಲಿ ಕೋವಿಡ್ ನ ಹೆಚ್ಚು ಪ್ರಕರಣಗಳು ವರದಿಯಾದಲ್ಲಿ ನಾಗರೀಕರು ಭಯಪಡುವ ಅಗತ್ಯವಿಲ್ಲ. ಏಕೆಂದರೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮದುವೆ, ಜಾತ್ರೆ ಸೇರಿದಂತೆ ಜನ ಜನಸಂದಣಿ ಸೇರುವ ಸ್ಥಳಗಳಿಗೆ ಹೋಗಬಾರದು. ಮಾಸ್ಕ್ ನ ಹೊರಪದರವನ್ನು ಪದೇಪದೇ ಮುಟ್ಟಬಾರದು. ಮಾಸ್ಕ್ ಧರಿಸುವ ಮೂಲಕ ಕೋವಿಡ್ ಅನ್ನು ಗೆಲ್ಲಬೇಕು ಎಂದು ಹೇಳಿದರು. ಇದನ್ನೂ ಓದಿ: 1000ಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ಪಾಸಿಟಿವ್
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಹಿರಿಯ ಪತ್ರಕರ್ತರಾದ ಮಹಮ್ಮದ್ ಆರೀಫ್, ಪುಷ್ಪರಾಜ್, ಭಾಸ್ಕರ್ ರೈ, ಸುಖ್‍ಪಾಲ್ ಪೊಳಲಿ, ರೆಡ್ ಕ್ರಾಸ್ ನ ಅಧ್ಯಕ್ಷ ಶಾಂತರಾಮ ಶೆಟ್ಟಿ, ಉಪಾಧ್ಯಕ್ಷ ನಿತ್ಯಾನಂದ ಶೆಟ್ಟಿ, ಕಾರ್ಯದರ್ಶಿ ಡಿ.ಕೆ.ಕುಸುಮಾಧರ, ಜಿಲ್ಲಾ ರೆಡ್ ಕ್ರಾಸ್ ನ ಮಾಜಿ ಕಾರ್ಯದರ್ಶಿ ಪ್ರಭಾಕರ್ ಶರ್ಮಾ, ಕಾರ್ಯಕಾರಿ ಸಮಿತಿಯ ಸದಸ್ಯರಾದ ರವೀಂದ್ರ, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಯಾದಗಿರಿ: ಜಿಲ್ಲೆಯ ಜನರಿಗೆ ಕೋವಿಡ್ ಲಸಿಕೆ ಬಗ್ಗೆ ಅತೀವವಾದ ಮೂಢನಂಬಿಕೆ ಇರುವುದರಿಂದ, ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳಿಂದ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಜಿಲ್ಲೆಯಲ್ಲಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಈ ಅಭಿಯಾನ ಆರಂಭಿಸಿದ್ದು, ಸುರಪುರ, ಗುರುಮಿಠಕಲ್ ಮತ್ತು ಶಹಾಪೂರದ ವಿವಿಧ ವಾರ್ಡ್‍ಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಬೆಂಗಳೂರಿನಿಂದ ಬಂದಿರುವ ನುರಿತ ಕಲಾವಿದರು. ಯಾದಗಿರಿ ಭಾಷೆಯಲ್ಲಿಯೇ ಜನರಿಗೆ ಲಸಿಕೆ ಬಗ್ಗೆ ಮನವರಿಕೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಕಳ್ಳಬೇಟೆ ಬಯಲು – ದಂತ, ಹುಲಿ ಹಲ್ಲು, ಜಿಂಕೆ ಕೊಂಬು, ಸ್ಫೋಟಕ ವಶ!
ಕಲಾವಿದರು ನಾಟಕ ಮಾಡುವ ಸಮಯದಲ್ಲಿ ನಾಟಕ ವೀಕ್ಷಣೆಗೆ ಬರುವ ಜನರಿಗೆ ಸ್ಥಳದಲ್ಲಿಯೇ ಲಸಿಕೆ ಸಹ ನೀಡಲಾಗುತ್ತಿದೆ. ಯಾದಗಿರಿಯಲ್ಲಿ ಲಸಿಕೆ ಬಗ್ಗೆ ಮೂಢನಂಬಿಕೆ ಹೆಚ್ಚಾಗಿದ್ದು, ಈ ಕುರಿತು ಸಾರ್ವಜನಿಕರಿಗೆ ಹರಿವು ಮೂಡಿಸುವ ನಿಟ್ಟಿನಲ್ಲಿ ಈ ಅಭಿಮಾನವನ್ನು ಕೈಗೊಳ್ಳಲಾಗಿತ್ತು.
ಈ ಹಿಂದೆಯೂ ಲಸಿಕೆ ಹಾಕಲು ಹೋದ ವೈದ್ಯರು ಮತ್ತು ಅಧಿಕಾರಿಗಳ ಮೇಲೆಯೇ ಇಲ್ಲಿನ ಜನರು ಧಮ್ಕಿ ಹಾಕಿ, ಅವರನ್ನು ಬಾಯಿಗೆ ಬಂದಂತೆ ಬೈಯುತ್ತಿದ್ದರು. ಈ ನಾಟಕ ನೋಡಿಯಾದರು ಅವರಲ್ಲಿ ಏನಾದರೂ ಬದಲಾವಣೆಯಾಗುತ್ತಾ ಕಾದು ನೋಡಬೇಕು. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ
ಬೆಂಗಳೂರು: ಕೋವಿಡ್ ಆರಂಭದಲ್ಲಿ ವೈದ್ಯಕೀಯ ಸಾಧನಗಳ ಕೊರತೆ ಇತ್ತು. ನಂತರ ಮೇಕ್ ಇನ್ ಇಂಡಿಯಾದಿಂದಾಗಿ ಹೊರದೇಶಗಳಿಗೂ ಸಾಧನಗಳನ್ನು ರಫ್ತು ಮಾಡುವ ಸಾಮಥ್ರ್ಯ ಬಂದಿದ್ದು, ಇದರಿಂದ ನವಭಾರತ ನಿರ್ಮಾಣವಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಐಐಟಿಪಿಎಲ್ ನ ನೂತನ ಕ್ಯಾತ್ ಲ್ಯಾಬ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗಾಗಿ ‘ಮೇಕ್ ಇನ್ ಇಂಡಿಯಾ’ ಕರೆ ನೀಡಿದ್ದಾರೆ. ಉತ್ಪಾದನಾ ವಲಯದಲ್ಲಿ ಎಫ್‍ಡಿಐ ಹೂಡಿಕೆ 2014 ಕ್ಕಿಂತ ಮುನ್ನ 20 ಬಿಲಿಯನ್ ಡಾಲರ್ ಇತ್ತು. ಈಗ ಮೂರು ಪಟ್ಟು ಹೆಚ್ಚಿದ್ದು, 68 ಬಿಲಿಯನ್ ಡಾಲರ್ ಹೂಡಿಕೆ ಬಂದಿದೆ. ಹೆಚ್ಚಿನ ವೈದ್ಯಕೀಯ ಉಪಕರಣಗಳಿಗಾಗಿ ನಾವು ಬೇರೆ ದೇಶಗಳನ್ನು ಅವಲಂಬಿಸಿದ್ದೇವೆ. ಆದರೆ ಐಐಟಿಪಿಎಲ್ ಕಂಪನಿ ಆತ್ಮನಿರ್ಭರ ಭಾರತದ ಪರಿಕಲ್ಪನೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಯಡಿಯೂರಪ್ಪ ವ್ಯಕ್ತಿ ಅಲ್ಲ ದೊಡ್ಡ ಶಕ್ತಿ: ಶ್ರೀರಾಮುಲು
ಈ ಹಿಂದೆ ಪಿಪಿಇ ಕಿಟ್ ಗೂ ಚೀನಾವನ್ನು ಅವಲಂಬಿಸಬೇಕಾಗಿತ್ತು. ನಂತರ ಮೋದಿ ಅವರ ಪ್ರಯತ್ನದಿಂದ ಅನೇಕ ದೇಶೀಯ ಕಂಪನಿಗಳು ಮಾಸ್ಕ್, ಪಿಪಿಇ ಕಿಟ್ ತಯಾರಿಸಿ ವಿದೇಶಗಳಿಗೂ ರಫ್ತು ಮಾಡುವಂತಾಯಿತು. ಇದರಿಂದ ನವಭಾರತ ನಿರ್ಮಾಣ ಸಾಧ್ಯವಾಗಿದೆ ಎಂದರು.
ಭಾರತ ಮಧುಮೇಹಿಗಳು ಹೆಚ್ಚಿರುವ ಕೇಂದ್ರವಾಗಿದೆ. ಇದು ಬೇರೆ ರೋಗಗಳಿಗೂ ದಾರಿ ಮಾಡಿಕೊಡುತ್ತದೆ. ಸಾಂಕ್ರಾಮಿಕ ರೋಗಗಳಲ್ಲಿ ಹೆಚ್ಚಿನವು ಹೃದಯ ಸಂಬಂಧಿ ರೋಗಗಳಿಗೆ ಸಂಬಂಧಿಸಿದೆ. ಇದಕ್ಕಾಗಿ ಚಿಕಿತ್ಸೆ ನೀಡಲು ಅನೇಕ ವೈದ್ಯಕೀಯ ಉಪಕರಣಗಳು ಬೇಕಿದ್ದು, ಇದು ಸಾಮಾಜಿಕ ಪರಿಣಾಮವನ್ನೂ ಬೀರುತ್ತದೆ. ಇದು ಕೇವಲ ಉದ್ಯಮವಾಗಿರದೆ ಜನರ ಜೀವನದ ಮೇಲೆ ಪರಿಣಾಮ ಬೀರುವ ಅಂಶವೂ ಆಗಿದೆ. 3-4 ಲಕ್ಷ ರೂ. ಬೆಲೆಬಾಳುವ ಉಪಕರಣಗಳನ್ನು ಬೆಂಗಳೂರಿನಲ್ಲೇ ಉತ್ಪಾದಿಸಲು ಐಐಟಿಪಿಎಲ್ ಕಂಪನಿ ಮೂಲಸೌಕರ್ಯ ಅಭಿವೃದ್ಧಿಪಡಿಸಿದ್ದು, ಇದು ಜನರಿಗೆ ಅನುಕೂಲವಾಗಲಿದೆ. ಇಂತಹ ಹೂಡಿಕೆದಾರರು ಹಾಗೂ ಸಂಶೋಧಕರಿಗೆ ಸರ್ಕಾರ ಎಲ್ಲ ಬಗೆಯ ನೆರವು ನೀಡಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಾಪತ್ತೆಗೂ ಮುನ್ನ ಖತರ್ನಾಕ್ ಪ್ಲಾನ್ ಮಾಡಿದ್ದ ಯುವತಿ, ಮಕ್ಕಳು
ಶೀಘ್ರದಲ್ಲೇ ಸಭೆ
ಕೋವಿಡ್ ಗೆ ಸಂಬಂಧಿಸಿದ ತೀರ್ಮಾನಗಳನ್ನು ಕೈಗೊಳ್ಳಲು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಇದಕ್ಕೂ ಮೊದಲು ತಾಂತ್ರಿಕ ಸಲಹಾ ಸಮಿತಿಯ ಸಭೆ ನಡೆಸಿ ಸಲಹೆಗಳನ್ನು ಪಡೆಯಲಾಗುವುದು. ಕೋವಿಡ್ ಒಂದು ರಾಜ್ಯ ಅಥವಾ ದೇಶಕ್ಕೆ ಸೀಮಿತವಾಗಿಲ್ಲ. ರಾಜ್ಯದಲ್ಲಿ 83% ಮೊದಲ ಲಸಿಕೆ ಡೋಸ್, 38% ಎರಡೂ ಡೋಸ್ ನೀಡಲಾಗಿದೆ. ರಾಜ್ಯದಲ್ಲಿ ಸದ್ಯಕ್ಕೆ ತೀವ್ರ ಆತಂಕ ಇಲ್ಲ ಎಂದು ಸ್ಪಷ್ಟಪಡಿಸಿದರು.