Tag: kotturu

  • ಕೊಟ್ಟೂರು ಗುರುಬಸವೇಶ್ವರ ರಥದೊಳಗಿನ ಸ್ಟೇರಿಂಗ್ ಕಟ್ – ತಪ್ಪಿದ ಭಾರೀ ಅನಾಹುತ

    ಕೊಟ್ಟೂರು ಗುರುಬಸವೇಶ್ವರ ರಥದೊಳಗಿನ ಸ್ಟೇರಿಂಗ್ ಕಟ್ – ತಪ್ಪಿದ ಭಾರೀ ಅನಾಹುತ

    – ರಥದಡಿ ಸಿಲುಕಿ ಅಪ್ಪಚ್ಚಿಯಾದ ಬೈಕ್, ಸ್ಕೂಟಿ

    ಬಳ್ಳಾರಿ: ವಿಜಯನಗರ (Vijayanagar) ಜಿಲ್ಲೆಯ ಐತಿಹಾಸಿಕ ಕೊಟ್ಟೂರು ಗುರುಬಸವೇಶ್ವರ (Kotturu Guru Basaveshwara) ತೇರನ್ನು ಹೊರತೆಗೆಯುವಾಗ ಅವಘಡ ಸಂಭವಿಸಿದ್ದು, ಕೂದಲೆಳೆ ಅಂತರದಲ್ಲಿ ಭಕ್ತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇದನ್ನೂ ಓದಿ: ‘ಪುಷ್ಪ 2’ ವಿವಾದದ ಬಳಿಕ ಎಚ್ಚೆತ್ತ ಅಲ್ಲು ಅರ್ಜುನ್

    ಸೋಮವಾರ ಸಂಜೆ ಗುರುಬಸವೇಶ್ವರ ತೇರನ್ನು ಹೊರತೆಗೆಯುವಾಗ ಅದರೊಳಗಿನ ಸ್ಟೇರಿಂಗ್ ಕೈ ಕೊಟ್ಟಿತ್ತು. ಹೀಗಾಗಿ ರಥವನ್ನು ಜೋರಾಗಿ ಎಳೆಯಲಾಗಿದೆ. ಜೋರಾಗಿ ಎಳೆದ ಪರಿಣಾಮ ಬೃಹತ್ ಗಾತ್ರದ ತೇರು ರಭಸವಾಗಿ ಕೆಳಗೆ ಬಿದ್ದಿದೆ. ಈ ವೇಳೆ ಸ್ಥಳದಲ್ಲಿದ್ದ ಭಕ್ತರು ಪಕ್ಕಕ್ಕೆ ಸರಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದು, ಭಾರೀ ಅನಾಹುತ ತಪ್ಪಿದೆ.

    ರಥದ ಗಾಲಿಗಳ ನಿರ್ವಹಣೆ ಮಾಡುವವರ ಸಮಯ ಪ್ರಜ್ಞೆಯಿಂದ ಜನರನ್ನ ಬದಿಗೆ ಸರಿಸಲು ಕಾರಣವಾಯಿತು. ಆದರೆ ರಸ್ತೆ ಬದಿಗೆ ನಿಂತಿದ್ದ ಸ್ಕೂಟಿ ಹಾಗೂ ಬೈಕ್‌ಗಳು ರಥದಡಿಗೆ ಸಿಲುಕಿ ಅಪ್ಪಚ್ಚಿಯಾಗಿವೆ.ಇದನ್ನೂ ಓದಿ: ಫೆ.9, 10 ಕ್ಕೆ ಕುಂಭಮೇಳದಲ್ಲಿ ಡಿ.ಕೆ.ಶಿವಕುಮಾರ್ ಭಾಗಿ

     

  • ನನ್ನ ಯಾರೂ, ಏನೂ ಮಾಡಲು ಸಾಧ್ಯವಿಲ್ಲ- ಮುನಿಯಪ್ಪಗೆ ಮಂಜುನಾಥ್ ಟಾಂಗ್

    ನನ್ನ ಯಾರೂ, ಏನೂ ಮಾಡಲು ಸಾಧ್ಯವಿಲ್ಲ- ಮುನಿಯಪ್ಪಗೆ ಮಂಜುನಾಥ್ ಟಾಂಗ್

    ಕೋಲಾರ: ಲೋಕಸಭಾ ಚುನಾವಣೆ ಮುಗಿದ ಮೇಲೂ ಕೋಲಾರದಲ್ಲಿ ಸಂಸದ ಮುನಿಯಪ್ಪ ಹಾಗೂ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ನಡುವಿನ ಗುದ್ದಾಟ ಮುಂದುವರಿದಿದೆ.

    ಕೋಲಾರದ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ತಮ್ಮ ಬೆಂಬಲಿಗ ರಾಜೇಂದ್ರಗೌಡ ನಾಪಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಸಂಸದ ಮುನಿಯಪ್ಪಗೆ ಟಾಂಗ್ ಕೊಟ್ಟರು. ನಾನು ಕೊತ್ತೂರು ಮಂಜು, ಫುಟ್‍ಪಾತ್ ಮಂಜು ಅಲ್ಲ. ಕೊತ್ತೂರು ಮಂಜು ಏನು ಎಂದು ಎಲ್ಲರಿಗೂ ಗೊತ್ತಿದೆ. ನ್ಯಾಯ-ನೀತಿ-ಧರ್ಮ ಪಾಲನೆ ಮಾಡುವವನು. ನಾನು ಯಾರಿಗೂ ಮೋಸ ಮಾಡಿಲ್ಲ. ಕೆಟ್ಟದ್ದೂ ಬಯಸಿಲ್ಲ. ಹಾಗಾಗಿ ಯಾರೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಮುನಿಯಪ್ಪಗೆ ಟಾಂಗ್ ನೀಡಿದ್ದಾರೆ.

    ಚುನಾವಣೆಯಲ್ಲಿ ಒಬ್ಬರ ಪರ ಕೆಲಸ ಮಾಡಬೇಕು. ನೋಡಿಕೊಳ್ಳುತ್ತೇನೆ ಅಂದ್ರೆ, ನಾವು ನೋಡಿಕೊಳ್ಳುತ್ತೀವಿ. ಅವರು ನೋಡಿ ಆದ ಮೇಲೆ ನಾವು ನೋಡಿಕೊಳ್ಳುತ್ತೇವೆ ಎಂದು ಚುನಾವಣೆಗೆ ಮುನ್ನ, 18ರ ನಂತರ ಎಲ್ಲರನ್ನು ನೋಡಿಕೊಳ್ಳುವೆ ಎಂದಿದ್ದ ಸಂಸದ ಮುನಿಯಪ್ಪಗೆ ನೇರವಾಗಿ ತಿರುಗೇಟು ನೀಡಿದರು.

    ಈಗಾಗಲೇ ಮೈತ್ರಿ ಧರ್ಮ ಪಾಲನೆ ಮಾಡದೆ 10 ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರ ವಿರುದ್ಧ ಕೆಪಿಸಿಸಿಗೆ ದೂರು ನೀಡಿ ಸಸ್ಪೆಂಡ್ ಬೆದರಿಕೆ ಹಾಕಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದೇನು ಡಿಸಿ-ಎಸಿ ಕೆಲಸ ಅಲ್ಲ. ಸಸ್ಪೆಂಡ್ ಮಾಡೋದಾದ್ರೆ ಮಾಡಿಕೊಳ್ಳಲಿ ಎಂದು ಕಾಂಗ್ರೆಸ್‍ಗೆ ಸವಾಲೆಸೆದರು.

    ಸರ್ಕಾರಕ್ಕೆ ಎರಡು ವರದಿ ಸಲ್ಲಿಕೆಯಾಗಿದೆ. ಬಿಜೆಪಿ ಅಭ್ಯರ್ಥಿ 2 ಲಕ್ಷ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತವಾಗಿದೆ. ನಾವೂ ಕೂಡ ದೈವ ಭಕ್ತರು. ನಾವೂ ಸಾಕಷ್ಟು ದೇವಾಲಯಗಳನ್ನ ಕಟ್ಟಿದ್ದೇವೆ. 500 ವೋಟ್‍ನಲ್ಲಿ ಆದರೂ ಬಿಜೆಪಿ ಅಭ್ಯರ್ಥಿಯನ್ನು ಗದ್ದೇ ಗೆಲ್ಲುತ್ತಾರೆ ಎಂದು ಅವರು ಹೇಳಿದರು.

  • ಫೇಸ್‍ಬುಕ್ ಮೂಲಕ ಕೊಟ್ಟೂರು ಕೆರೆಗೆ ಸಿಕ್ತು ಮರುಜೀವ!

    ಫೇಸ್‍ಬುಕ್ ಮೂಲಕ ಕೊಟ್ಟೂರು ಕೆರೆಗೆ ಸಿಕ್ತು ಮರುಜೀವ!

    -ಅಂಚೆ ಕೊಟ್ರೇಶ ಫೇಸ್‍ಬುಕ್ ಪೋಸ್ಟ್ ಗೆ ಸ್ಪಂದಿಸಿದ ಯುವಕರು

    ಬಳ್ಳಾರಿ: ತಮಿಳು ನಟ ಧನುಷ್ ನಟಿಸಿರುವ ಬಿಟೆಕ್ ರಘುವರನ್ ಸಿನಿಮಾದಲ್ಲೊಂದು ಸೀನಿದೆ. ಫೇಸ್‍ಬುಕ್ ಮೂಲಕವೇ ಯುವಕರನ್ನೆಲ್ಲಾ ಸೇರಿಸಿ ಅಪಾರ್ಟ್‍ಮೆಂಟ್ ಕಾಮಗಾರಿಯನ್ನು ಕಂಪ್ಲೀಟ್ ಮಾಡಿದ ಸೀನ್ ಅದು. ಅದೇ ರೀತಿಯಲ್ಲಿ ಬಳ್ಳಾರಿಯಲ್ಲೊಬ್ಬರು ಫೇಸ್‍ಬುಕ್ ಮೂಲಕವೇ ಕೆರೆ ಕ್ರಾಂತಿಗೆ ಮುಂದಾಗಿದ್ದಾರೆ.

    ಅಂಚೆ ಕೊಟ್ರೇಶ ಅಂತಾನೇ ಕರೆಸಿಕೊಳ್ಳುವ ಕೂಡ್ಲಗಿ ತಾಲೂಕಿನ ಕೊಟ್ಟೂರು ಪಟ್ಟಣದ ನಿವಾಸಿ ಕೊಟ್ರೇಶ ಅವರು 5 ವಾರಗಳ ಹಿಂದೆಯಷ್ಟೇ ಏಕಾಂಗಿಯಾಗಿ ಕರೆಯಲ್ಲಿನ ಜಾಲಿ ಮುಳ್ಳುಗಳನ್ನು ತೆರವು ಮಾಡುವ ಕಾಯಕದಲ್ಲಿ ತೊಡಗಿಕೊಂಡಿದ್ದರು. ಈ ಬಗ್ಗೆ ಪೇಸ್‍ಬುಕ್‍ನಲ್ಲಿ ನಮ್ಮ ಕೆರೆ ನಮ್ಮ ಹಕ್ಕು ಕೆರೆ ಕ್ಲೀನ್ ಮಾಡೋಕೆ ಬನ್ನಿ ಅಂತಾ ಮನವಿಯನ್ನೂ ಮಾಡಿದ್ದರು. ಇವರ ಫೇಸ್‍ಬುಕ್ ಪೋಸ್ಟ್ ಗೆ ಸ್ಪಂದಿಸಿದ ಯುವಕರು 700 ಎಕರೆಯಷ್ಟು ವಿಶಾಲವಾಗಿರುವ ಕೆರೆಗೆ ಮರು ಜೀವ ನೀಡೋ ಕಾಯಕಕ್ಕೆ ಕೈಜೋಡಿಸಿದ್ದಾರೆ.

    ಇದುವರೆಗೆ ಕೆರೆಯ ತುಂಬಾ ಹರಡಿದ್ದ ಜಾಲಿ ಮುಳ್ಳನು ಖಾಲಿ ಮಾಡಲಾಗಿದೆ. ಜೆಸಿಬಿ ಮೂಲಕವೂ ಕೆರೆಯನ್ನು ಶುಚಿಗೊಳಿಸುವ ಕಾಯಕ ಸಾಗಿದೆ. ಜಿಲ್ಲಾಡಳಿತ ಕೂಡಾ ಜೊತೆಯಾದರೆ ಕೊಟ್ಟೂರು ಕೆರೆ ಮತ್ತೆ ಕೋಡಿ ಹೊಡೆಯೋದ್ರಲ್ಲಿ ಅನುಮಾನವೇ ಇಲ್ಲ.

  • ಹಂಪಿಯಲ್ಲಿ ರಥ ಕೊಂಡೊಯ್ಯುವ ವೇಳೆ ಜೆಸಿಬಿ ಆಕ್ಸಿಲ್ ಕಟ್- ಸಹಾಯಕ್ಕೆ ಬಂದ ಗಜರಾಜ!

    ಹಂಪಿಯಲ್ಲಿ ರಥ ಕೊಂಡೊಯ್ಯುವ ವೇಳೆ ಜೆಸಿಬಿ ಆಕ್ಸಿಲ್ ಕಟ್- ಸಹಾಯಕ್ಕೆ ಬಂದ ಗಜರಾಜ!

    ಬಳ್ಳಾರಿ: ಕೊಟ್ಟೂರು ಜಾತ್ರೆ ಹಾಗೂ ಕುರುಗೋಡು ಜಾತ್ರೆಯಲ್ಲಿ ನಡೆದ ಅವಘಡದ ನೆನಪುಗಳು ಮಾಸುವ ಮುನ್ನವೇ ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ಭಾರೀ ಅವಘಡವೊಂದು ತಪ್ಪಿದೆ.

    ಹಂಪಿಯ ವಿರೂಪಾಕ್ಷೇಶ್ವರನ ರಥ ಕೊಂಡೊಯ್ಯುವ ವೇಳೆ ಜೆಸಿಬಿ ಯಂತ್ರದ ಆಕ್ಸಿಲ್ ಕಟ್ ಆಗಿದೆ. ಈ ವೇಳೆ ಸಹಾಯಕನಾಗಿ ಬಂದ ಹಂಪಿ ದೇಗುಲದ ಗಜರಾಜ ರಥವನ್ನು ಎಳೆದು ಮುಂದೆ ಸಾಗಿಸಿದೆ. ಈ ಮೂಲಕ ಸ್ಥಳೀಯರು ಕ್ರೇನ್ ಹಾಗೂ ಆನೆಯ ಸಹಾಯದಿಂದ ರಥವನ್ನು ಮುನ್ನಡೆಸಿಕೊಂಡು ಹೋಗಿದ್ದಾರೆ. ಆದ್ರೆ ಬಳ್ಳಾರಿ ಜಿಲ್ಲೆಯಲ್ಲಿ ಒಂದರ ಮೇಲೊಂದು ಇಂತಹ ಅವಘಡಗಳು ನಡೆಯುತ್ತಿರುವುದರಿಂದ ಇದೀಗ ಭಕ್ತರಲ್ಲಿ ಆತಂಕ ಸೃಷ್ಟಿಸಿದೆ.

    ಕೊಟ್ಟೂರು ಜಾತ್ರೆ: ಕಳೆದ ಫೆ.22ರಂದು ಜಿಲ್ಲೆಯ ಕೂಡ್ಲಗಿ ತಾಲೂಕಿನ ಕೊಟ್ಟೂರು ಗುರು ಬಸವೇಶ್ವರ ರಥೋತ್ಸವದ ವೇಳೆ ಚಕ್ರದ ಅಚ್ಚು ಮುರಿದು 60 ಅಡಿ ಎತ್ತರದ ರಥ ಮಗುಚಿ ಬಿದ್ದಿತ್ತು. ಅದೃಷ್ಟವಶಾತ್ ಘಟನೆಯಿಂದ ಯಾರಿಗೂ ಅಪಾಯವುಂಟಾಗಿರಲಿಲ್ಲ.

    ಕುರುಗೋಡು: ಜಿಲ್ಲೆಯ ಕುರುಗೋಡಿನಲ್ಲಿ ನಡೆದ ದೊಡ್ಡಬಸವೇಶ್ವರ ರಥೋತ್ಸವದಲ್ಲಿ ರಥದ ಚಕ್ರಕ್ಕೆ ಸಿಲುಕಿ ಓರ್ವ ಮೃತಪಟ್ಟ ಘಟನೆ ಮಾ. 13ರಂದು ನಡೆದಿತ್ತು.

  • ಬಳ್ಳಾರಿ ಕೊಟ್ಟೂರೇಶ್ವರ ಜಾತ್ರೆಯಲ್ಲಿ ಉರುಳಿ ಬಿದ್ದ ರಥ

    ಬಳ್ಳಾರಿ ಕೊಟ್ಟೂರೇಶ್ವರ ಜಾತ್ರೆಯಲ್ಲಿ ಉರುಳಿ ಬಿದ್ದ ರಥ

     

    ಬಳ್ಳಾರಿ: ಜಿಲ್ಲೆಯ ಕೂಡ್ಲಗಿ ತಾಲೂಕಿನ ಕೊಟ್ಟೂರು ಗುರು ಬಸವೇಶ್ವರ ರಥೋತ್ಸವ ವೇಳೆಯಲ್ಲಿ ಚಕ್ರದ ಅಚ್ಚು ಮರಿದು ರಥ ಮುಗುಚಿ ಬಿದ್ದಿದೆ.

    ಚಕ್ರದ ಅಚ್ಚು ಮುರಿದು 60 ಅಡಿ ಎತ್ತರದ ರಥ ಬಿದ್ದಿದೆ. ರಥದ ಕೆಳಗೆ 50 ಕ್ಕೂ ಹೆಚ್ಚು ಭಕ್ತಾದಿಗಳು ಸಿಲುಕಿರುವ ಶಂಕೆಯಿದ್ದು, ಪರಿಹಾರ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

    ರಥದ ಕೆಳಗೆ ಸಿಲುಕಿರುವ ಭಕ್ತಾದಿಗಳನ್ನು ರಕ್ಷಿಸುವ ಕಾರ್ಯ ಪೊಲೀಸರು ಮತ್ತು ಸ್ಥಳೀಯರ ಸಹಾಯದಿಂದ ಸಾಗಿದೆ. ರಥ ಕೆಳಗೆ ಸಿಲುಕಿರುವ ಭಕ್ತರ ನರಳಾಟ, ಚೀರಾಟ ಜೋರಾಗಿದೆ.

    ಪ್ರತಿ ವರ್ಷ ನಡೆಯುವ ಗುರು ಬಸವೇಶ್ವರ ರಥೋತ್ಸವದಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಿದ್ದು, ಈ ವರ್ಷವೂ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.

    .

    https://www.youtube.com/watch?v=iwUr8Y0qoQQ

     

     

    https://www.youtube.com/watch?v=oOGOlAPVqEE