Tag: kottur manjunath

  • ಕೊತ್ತೂರು ಮಂಜುನಾಥ್ ಅಬ್‌ನಾರ್ಮಲ್ ಪರ್ಸನ್, ಕಾಂಗ್ರೆಸ್ ಸಸ್ಪೆಂಡ್ ಮಾಡ್ಬೇಕು: ಎನ್.ಮಹೇಶ್ ಆಗ್ರಹ

    ಕೊತ್ತೂರು ಮಂಜುನಾಥ್ ಅಬ್‌ನಾರ್ಮಲ್ ಪರ್ಸನ್, ಕಾಂಗ್ರೆಸ್ ಸಸ್ಪೆಂಡ್ ಮಾಡ್ಬೇಕು: ಎನ್.ಮಹೇಶ್ ಆಗ್ರಹ

    ಚಾಮರಾಜನಗರ: ಕೊತ್ತೂರು ಮಂಜುನಾಥ್ ಒಬ್ಬ ಅಬ್‌ನಾರ್ಮಲ್ ಪರ್ಸನ್ ಅಂತ ಅನಿಸುತ್ತೆ ಎಂದು ಬಿಜೆಪಿ ನಾಯಕ ಎನ್.ಮಹೇಶ್ ಗುಡುಗಿದರು.

    ಮಂಜುನಾಥ್‌ಗೆ ತಲೆ ನೆಟ್ಟಗಿಲ್ಲ. ಒಂದು ಬಾರಿ ನಿಮ್ಹಾನ್ಸ್ಗೆ ಹೋಗಿ ತಲೆ ರಿಪೇರಿ ಮಾಡಿಸಿಕೊಂಡು ಬರ್ಬೇಕು. ಇದು ದೇಶದ ಸಂಕಷ್ಟ ಸಂದರ್ಭ. 147 ಕೋಟಿ ಜನರು ಪಕ್ಷಬೇಧ, ಜಾತಿಬೇಧ, ಧರ್ಮಬೇಧ ಮರೆತು ಸೈನಿಕರ ಜೊತೆ ನಿಲ್ಲಬೇಕು, ಆತ್ಮ ವಿಶ್ವಾಸ ತುಂಬಬೇಕು ಎಂದು ತಿಳಿಸಿದರು.

    ಓರ್ವ ಶಾಸಕನಾಗಿದ್ದು, ಆ ಸ್ಥಾನಕ್ಕೆ ಅವಮಾನವಿದು. ಎಐಸಿಸಿ, ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡ್ತೀನಿ. ಕೊತ್ತೂರು ಮಂಜುನಾಥ್‌ನ ಅಮಾನತು ಮಾಡ್ಬೇಕು. ಆತ ಓರ್ವ ಲೂಸ್.. ಲೂಸ್ ಟಾಕ್ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.

    ಬಿಜೆಪಿ ಸಚಿವರೊಬ್ಬರು ಸೋಫಿಯಾ ಖುರೇಷಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಚಾರಕ್ಕೆ ಸಂಬಂಧಿಸಿದಂತೆ, ಈಗಾಗ್ಲೆ ನಾವು ಅವರನ್ನು ಅಮಾನತು ಮಾಡಿದ್ದೇವೆ. ನಾವು ಅವರ ಮಾತನ್ನ ಖಂಡಿಸಿದ್ದೇವೆ. ದೇಶದ ಸೈನಿಕರ ವಿರುದ್ಧ ಯಾರೇ ಮಾತನಾಡಿದ್ರು ನಾನು ಅದನ್ನ ಖಂಡಿಸುತ್ತೇನೆ ಎಂದರು.

  • ಸಂತೋಷ್ ಲಾಡ್ ಮೈತುಂಬಾ ಮೈನಿಂಗ್ ದುಡ್ಡು ಅಂಟಿಕೊಂಡಿದೆ, ಹೊರಗಡೆ ಸಾಚಾ ಅಂತ ಬಿಲ್ಡಪ್: ಪ್ರತಾಪ್ ಸಿಂಹ ಕೆಂಡ

    ಸಂತೋಷ್ ಲಾಡ್ ಮೈತುಂಬಾ ಮೈನಿಂಗ್ ದುಡ್ಡು ಅಂಟಿಕೊಂಡಿದೆ, ಹೊರಗಡೆ ಸಾಚಾ ಅಂತ ಬಿಲ್ಡಪ್: ಪ್ರತಾಪ್ ಸಿಂಹ ಕೆಂಡ

    – ಕೊತ್ತೂರು ಮಂಜುನಾಥ್‌ಗೆ ಸಿಂಧೂರಕ್ಕೂ ಸಿಂಧೂರಿಗೂ ವ್ಯತ್ಯಾಸವೇ ಗೊತ್ತಿಲ್ಲ: ಮಾಜಿ ಸಂಸದ ಟಾಂಗ್

    ಮೈಸೂರು: ಸಂತೋಷ್ ಲಾಡ್ ಮೈತುಂಬಾ ಮೈನಿಂಗ್ ದುಡ್ಡು ಅಂಟಿಕೊಂಡಿದೆ. ಹೊರಗಡೆ ಮಾತ್ರ ತಾನು ಬಹಳ ಸಾಚಾ ಅಂತ ಬಿಲ್ಡಪ್ ಕೊಡುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಕಿಡಿಕಾರಿದರು.

    ಕರ್ನಾಟಕದಲ್ಲಿ ಇಬ್ಬರು ಸಚಿವರು ದಿನ ಬೆಳಗಾದರೆ ಕಾಗೆ ಥರ ಕಾಕಾ ಅಂತ ಮಾತಾಡುತ್ತಾರೆ. ಲಾಡ್ ನೀವು ಏನ್ ಮಾತಾಡ್ತಿದ್ದೀರಿ ಅನ್ನೋ ಜ್ಞಾನ ನಿಮಗೆ ಇದ್ಯಾ? ಮೋದಿ ಬಗ್ಗೆ ಮಾತಾಡದೆ ಇದ್ದರೆ ಲಾಡ್‌ಗೆ ತಿಂದಿದ್ದು ಕರಗುವುದಿಲ್ಲ. ಮರಾಠ ಸಮುದಾಯದ ಸಂತೋಷ್ ಲಾಡ್ (Santosh Lad) ಬಾಯಲ್ಲಿ ಶಿವಾಜಿ ರೀತಿ ಮಾತು ಬರುತ್ತಿಲ್ಲ. ಅಬ್ದುಲ್ ಖಾನ್ ರೀತಿ ಮಾತು ಬರುತ್ತಿದೆ. ನೀವೇನೂ ಬಹಳ ಮೇಧಾವಿ ನಾ? ಸಂತೋಷ್ ಲಾಡ್ ಒಬ್ಬ ತಿಳಿಗೇಡಿ. ನೇಹಾ ಹತ್ಯೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರೆ ಮೋದಿ ಕೇಳ್ರಿ ಅಂತಾರೆ? ಹತ್ಯೆ ಮಾಡಿದವನ ಏನ್‌ಕೌಂಟರ್‌ಗೆ ಮೋದಿ ಅನುಮತಿ ಏಕೆ ಬೇಕು ಲಾಡ್? ಒಂದು ವರ್ಷವಾಯ್ತು ನೇಹಾಗೆ ನ್ಯಾಯ ಕೊಡಿಸಿದ್ರಾ ಎಂದು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಸರ್ವಪಕ್ಷ ನಿಯೋಗ – ಕಾಂಗ್ರೆಸ್‌ ಕೊಟ್ಟ 4 ಹೆಸರು ಬಿಟ್ಟು ಶಶಿ ತರೂರ್‌ ಆಯ್ಕೆಮಾಡಿದ ಕೇಂದ್ರ!

    ಕಾರ್ಮಿಕ ಇಲಾಖೆಯ ಹೆಲ್ತ್ ಕಿಟ್ ಹಗರಣದ ಕಥೆ ಏನ್ ಆಯ್ತು? ಮೋದಿಗೆ ಹೇಳಿ ಕೊಡುವಷ್ಟು ನೀವು ಬುದ್ದಿವಂತರಾ? 1971 ರಲ್ಲಿ ಇಂದಿರಾ ಗಾಂಧಿ ಏನ್ ಕಡಿದು ಕಟ್ಟೆ ಹಾಕಿದ್ರು. ಅವತ್ತಿನ ಯುದ್ಧದ ಗೆಲುವನ್ನು ಹಾಳು ಮಾಡಿದ್ದು ನಿಮ್ಮ ಇಂದಿರಾ ಗಾಂಧಿ. ಅದು ನೆನಪಿರಲಿ. ಸಂತೋಷ್ ಲಾಡ್ ಕನಿಷ್ಠ ಪರಿಜ್ಞಾನ ಇಟ್ಟುಕೊಂಡು ಮಾತಾಡಿ. ಪಹಲ್ಗಾಮ್‌ನಿಂದ ಕನ್ನಡಿಗರನ್ನು ಕರೆದುಕೊಂಡು ಬರಲು ಅವಕಾಶ ಮಾಡಿಕೊಟ್ಟಿದ್ದು ಮೋದಿ. ಅದರಲ್ಲಿ ನಿಮ್ಮ ಸಾಧನೆ ಏನಿದೆ ಲಾಡ್? ನಿಮ್ಮ ಅನಿಷ್ಟಕ್ಕೆಲ್ಲ ಮೋದಿ ಕಾರಣ ಅನ್ನೋ ರೀತಿ ಯಾಕೆ ಮಾತಾಡ್ತೀರಿ? ಪಾಕಿಸ್ತಾನ ಮಾತ್ರ ಶತೃ ಅಲ್ಲ. ನಮ್ಮ ಜೊತೆಯಲ್ಲೇ ಇಂತಹ ಹಿತಶತೃಗಳು ಟೈಂ ಬಾಂಬ್ ಥರ ಇದ್ದಾರೆ. ಸಂತೋಷ್ ಲಾಡ್‌ಗೆ ಮೈತುಂಬಾ ಮೈನಿಂಗ್ ದುಡ್ಡು ಅಂಟಿಕೊಂಡಿದೆ. ಹೊರಗಡೆ ಮಾತ್ರ ತಾನೂ ಬಹಳ ಸಾಚಾ ಅನ್ನೋ ರೀತಿ ಪೋಸ್ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ಮುಡಾ ಹಗರಣಕ್ಕೆ ಸಿಲುಕಿದ ಕಾರಣ ಸಂತೋಷ್ ಲಾಡ್ ಕಾರ್ಮಿಕ ಕಿಟ್ ಹಗರಣದಿಂದ ಬಚಾವ್ ಆದ್ರು. ಇಲ್ಲದೆ ಇದ್ದಿದ್ದರೆ ಎರಡನೇ ಬಾರಿ ರಾಜೀನಾಮೆ ಕೊಡಬೇಕಿತ್ತು. ದುಡ್ಡನ ಕೊಬ್ಬಿನಿಂದ ಲಾಡ್ ಮಾತಾಡ್ತಿದ್ದಾರೆ. ನಿಮಗೆ ದುಡ್ಡು ಇರಬಹುದು, ಪತ್ರಕರ್ತರಿಗೆ ನೈತಿಕತೆ ಇದೆ. ನೆನಪಿಟ್ಟುಕೊಳ್ಳಿ ಲಾಡ್. ಪಾಕಿಸ್ತಾನವೇ ತನ್ನ ಮೇಲೆ ದಾಳಿ ಆಗಿರುವುದಕ್ಕೆ ಸಾಕ್ಷಿ ಕೊಟ್ಟಿದೆ. ಆದರೂ ಭಾರತದಲ್ಲಿ ಕೆಲವರ ತಕರಾರು ನಿಲ್ಲುತ್ತಿಲ್ಲ ಎಂದು ಕಿಡಿಕಾರಿದರು.

    ಕೊತ್ತೂರು ಮಂಜುನಾಥ್‌ಗೆ (Kottur Manjunath) ಸಿಂಧೂರಕ್ಕೂ ಸಿಂಧೂರಿಗೆ ವ್ಯತ್ಯಾಸವೇ ಗೊತ್ತಿಲ್ಲ. ಸಿಂಧೂರ, ಸಿಂಧೂರಿ ಅಂತಾ ಏನೇನೋ ಕಲ್ಪಿಸಿಕೊಂಡು ಕನವರಿಸುತ್ತಿದ್ದಾರೆ. ಮಂಜುನಾಥ್‌ಗೆ ಭೂಮಿಯ ಚದರ ಅಡಿ ಮಾತ್ರ ಗೊತ್ತಿರೋದು. ಒಂದ್ ಸೈಟ್ ನಾಲ್ಕು ಜನಕ್ಕೆ ಮಾರಿ ದುಡ್ಡು ಮಾಡೋದಷ್ಟೆ ಗೊತ್ತು. ಕೊತ್ತೂರು ಮಂಜುನಾಥ್ ನಿಮಗೆ ದೇಶ, ಯುದ್ಧ ಇದೆಲ್ಲ ನಿಮಗೆ ಅರ್ಥವಾಗಲ್ಲ. ಸುಮ್ಮನೆ ಇರಿ ಟಾಂಗ್ ಕೊಟ್ಟರು. ಇದನ್ನೂ ಓದಿ: ಪಾಕ್‌ ಪ್ರಧಾನಿ ನಿದ್ದೆಗೆಡಿಸಿದ ʻಆಪರೇಷನ್‌ ಸಿಂಧೂರʼ – ಶೆಹಬಾಜ್‌ಗೆ ಮಧ್ಯರಾತ್ರಿ ಕರೆ ಮಾಡಿದ್ಯಾರು?

    ಅಂಬೇಡ್ಕರ್ ಅವತ್ತು ಈ ದೇಶದ ಪ್ರಧಾನಿ ಆಗಿದ್ದರೆ, ದೇಶಕ್ಕೆ ಇವತ್ತು ಈ ಸ್ಥಿತಿ ಬರುತ್ತಿರಲಿಲ್ಲ. ಮುಸ್ಲಿಮರ ಮನಸ್ಥಿತಿ ಅಂಬೇಡ್ಕರ್ ಅವರಿಗೆ ಬಹಳ ಚೆನ್ನಾಗಿ ಅರ್ಥವಾಗಿತ್ತು. ಅಂಬೇಡ್ಕರ್ ಅವರೇ ಮುಸ್ಲಿಮರ ಮನಸ್ಥಿತಿ ಬಗ್ಗೆ ಬಹಳ ಸ್ಪಷ್ಟವಾಗಿ ಅವತ್ತೆ ಹೇಳಿದ್ರು. ಅಂಬೇಡ್ಕರ್ ಅವರ ಫೋಟೋವನ್ನು ಗಾಂಧೀಜಿಯ ಜೊತೆಯಲ್ಲಿ ನೋಟ್‌ನಲ್ಲಿ ಹಾಕಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ. ಬರೀ ಮೀಸಲಾತಿ ದೃಷ್ಟಿಕೋನದಿಂದ ಅಷ್ಟೆ ಅಂಬೇಡ್ಕರ್ ಅವರನ್ನು ನೋಡುವುದ ಬಿಡಿ. ಈಗ ಎಲ್ಲರಿಗೂ ಅಂಬೇಡ್ಕರ್ ಅವರ ವಿಶಾಲ ದೃಷ್ಟಿಕೋನ ಅರ್ಥವಾಗುತ್ತಿದೆ ಎಂದು ತಿಳಿಸಿದರು.

  • ಕೋಲಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲೇ ಬಡಿದಾಡಿಕೊಂಡ ಕಾರ್ಯಕರ್ತರು

    ಕೋಲಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲೇ ಬಡಿದಾಡಿಕೊಂಡ ಕಾರ್ಯಕರ್ತರು

    ಕೋಲಾರ: ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ (Congress Office) ಮಾರಾಮಾರಿ ನಡೆದಿದ್ದು ಎರಡು ಗುಂಪಿನ ಕಾರ್ಯಕರ್ತರು ಪರಸ್ಪರ ಬಡಿದಾಡಿಕೊಂಡ ಘಟನೆ ಕೋಲಾರದಲ್ಲಿ (Kolara) ನಡೆದಿದೆ.

    ಡಿಸಿಸಿ ಬ್ಯಾಂಕ್ ಪಕ್ಕದಲ್ಲಿರುವ ಕಾಂಗ್ರೆಸ್ ‌ಕಚೇರಿಯಲ್ಲಿ ಶಾಸಕ ಕೊತ್ತೂರು ಮಂಜುನಾಥ್ (Kottur Manjunath) ಬೆಂಬಲಿಗರು ಮತ್ತು ಕೆ.ಎಚ್.ಮುನಿಯಪ್ಪ (KH Muniyappa) ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ.  ಇದನ್ನೂ ಓದಿ: ಸ್ಕೈವಾಕ್‌ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿ – ಡಿಕೆಶಿಗೆ ಸೂರ್ಯ ಪತ್ರ

     

    ಇಂದು ಕಾಂಗ್ರೆಸ್‌ ಕಚೇರಿಯಲ್ಲಿ ಬೂತ್‌ ಮಟ್ಟದ ಏಜೆಂಟರ ಸಭೆಯನ್ನು ಕರೆಯಲಾಗಿತ್ತು. ಈ ವೇಳೆ ಜಿಲ್ಲಾ ಕಾಂಗ್ರೆಸ್‌‌ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ ಮೇಲೆ ಶಾಸಕ ಕೊತ್ತೂರು ಮಂಜುನಾಥ್ ಅವರ ಬೆಂಬಲಿಗರು ಏಕಾಏಕಿ ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ.  ಇದನ್ನೂ ಓದಿ: ನಟನೆ ಬಿಟ್ಟು ಹೊಸ ಕೆಲಸ ಒಪ್ಪಿಕೊಂಡ ಸಮಂತಾ

    ಕೆಪಿಸಿಸಿ ಕಾರ್ಯದರ್ಶಿ ರಮೇಶ್ ಮತ್ತು ರಾಜಕುಮಾರ್ ಸಮ್ಮುಖದಲ್ಲಿ ಎರಡು ಗುಂಪುಗಳ ಬೆಂಬಲಿಗರು ಹೊಡೆದಾಡಿಕೊಂಡಿದ್ದಾರೆ. ಗಲಾಟೆ ಹೆಚ್ಚಾಗುತ್ತಿದ್ದಂತೆ ಸಭೆಯಿಂದ ಮುನಿಯಪ್ಪ ಬೆಂಬಲಿಗ ಕಾರ್ಯಾಧ್ಯಕ್ಷ ಊರುಬಾಗಲು ಶ್ರೀನಿವಾಸ ಹೊರ ನಡೆದಿದ್ದಾರೆ.

     

  • ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವಷ್ಟು ಶಕ್ತಿ ಯಾರಿಗೂ ಇಲ್ಲ: ಕೊತ್ತೂರು ಮಂಜುನಾಥ್

    ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವಷ್ಟು ಶಕ್ತಿ ಯಾರಿಗೂ ಇಲ್ಲ: ಕೊತ್ತೂರು ಮಂಜುನಾಥ್

    ಕೋಲಾರ: ಕಾಂಗ್ರೆಸ್ (Congress) ಸರ್ಕಾರವನ್ನು ಬೀಳಿಸುವಷ್ಟು ಶಕ್ತಿ ಯಾರಿಗೂ ಇಲ್ಲ. ನಾವು 136 ಜನ ಶಾಸಕರು ಇದ್ದೇವೆ. ಸರ್ಕಾರವನ್ನು ಬೀಳಿಸಲು ಯಾರ ಕೈಯಲ್ಲೂ ಆಗುವುದಿಲ್ಲ ಎಂದು ಶಾಸಕ ಕೊತ್ತೂರು ಮಂಜುನಾಥ್ (Kottur Manjunath)  ಹೇಳಿದ್ದಾರೆ.

    ಕೋಲಾರದಲ್ಲಿ (Kolar) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ (DK Shivakumar) ಹಾಗೂ ಸಿದ್ದರಾಮಯ್ಯ (Siddaramaiah) ಇರುವವರೆಗೂ ಯಾರಿಗೂ ಕದಲಿಸಲು ಆಗುವುದಿಲ್ಲ. ಅವಿರಿಬ್ಬರು ನಮಗೆ ಅಂತರಗಂಗೆ ಬೆಟ್ಟ ಇದ್ದಂತೆ. ಆ ಬೆಟ್ಟವನ್ನು ಕದಲಿಸಲು ಸಾಧ್ಯವಿಲ್ಲ. ಮಾತನಾಡಿಕೊಳ್ಳುವವರು ಮಾತನಾಡಿಕೊಳ್ಳಲಿ. ಸರ್ಕಾರ ಸುಭಿಕ್ಷವಾಗಿದೆ, ಚೆನ್ನಾಗಿದೆ, ಖುಷಿಯಾಗಿದೆ ಎಂದರು. ಇದನ್ನೂ ಓದಿ: ಸಿಂಗಾಪುರದಲ್ಲಿ ತಂತ್ರಗಾರಿಕೆ – ಕಾಂಗ್ರೆಸ್ ಸರ್ಕಾರಕ್ಕೆ ಆಪರೇಷನ್ ಭೀತಿ?

    ಬಿಕೆ ಹರಿಪ್ರಸಾದ್ (BK Hariprasad) ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮಳೆ, ಗಾಳಿ ಹೇಳಿ ಬರುವುದಿಲ್ಲ. ಬಿಕೆ ಹರಿಪ್ರಸಾದ್ ಮಾತು ಈ ಮಾತಿಗೆ ಸಮ ಎಂದು ಲೇವಡಿ ಮಾಡಿದರು. ಇನ್ನು ರಮೇಶ್ ಕುಮಾರ್ (Ramesh Kumar) ಅವರಿಗೆ ರಾಜ್ಯಸಭಾ ಸದಸ್ಯ ಸ್ಥಾನ ವಿಚಾರದ ಕುರಿತು ಮಾತನಾಡಿದ ಅವರು, ರಮೇಶ್ ಕುಮಾರ್ ಅವರು ಕೋಲಾರದ ಹುಲಿ. ನಮ್ಮ ಜಿಲ್ಲೆಯ ಶಾಸಕರು ಯಾರೂ ಈ ರೀತಿ ಕೇಳಿಲ್ಲ. ಅವರಿಗೆ ಅಂತಹ ದರಿದ್ರ ಏನೂ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ವೇಲು ನಾಯ್ಕರ್ ಡಿಕೆಶಿ ಬಗ್ಗೆಯೂ ಹೇಳಿದ್ದ – ಹನಿಟ್ರ್ಯಾಪ್‌ ಆರೋಪಕ್ಕೆ ಮುನಿರತ್ನ ತಿರುಗೇಟು

    ಅಧಿಕಾರಕ್ಕಾಗಿ ಕೈಚಾಚುವ ಪರಿಸ್ಥಿತಿ ಇಲ್ಲ. ಅವರ ಮನೆ ಬಾಗಿಲಿಗೆ ಬಂದಿದ್ದನ್ನ ಬೇಡ ಎಂದು ಹೇಳುವ ವ್ಯಕ್ತಿ ಅವರು. ವಿಸಿಲ್ ಹೊಡೆಯುವ ಟೈಮಲ್ಲಿ ಅವರಿಗೆ ಬೇಕಾದ ಪೋಸ್ಟ್ ಸಿಗುತ್ತೆ. ಅವರು ನ್ಯಾಯ, ನೀತಿ, ಧರ್ಮ ಎಂದು ಪಾಲನೆ ಮಾಡುವವರು. ಜನರ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ಹೇಳುತ್ತಾರೆ. ಅವರಿಗೆ ಶಕ್ತಿಯಾಗಿ ನಾವು ಇರುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಉಚಿತವಾಗಿ ಕೊತ್ತಂಬರಿ ಸೊಪ್ಪು ವಿತರಿಸಿದ ಸಿದ್ದರಾಮಯ್ಯ ಅಭಿಮಾನಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಳಬಾಗಿಲು ಗಂಗಮ್ಮ ದೇವಾಲಯ ಮುಂಭಾಗವೇ ಕೈ ನಗರಸಭೆ ಸದಸ್ಯನ ಬರ್ಬರ ಕೊಲೆ

    ಮುಳಬಾಗಿಲು ಗಂಗಮ್ಮ ದೇವಾಲಯ ಮುಂಭಾಗವೇ ಕೈ ನಗರಸಭೆ ಸದಸ್ಯನ ಬರ್ಬರ ಕೊಲೆ

    ಕೋಲಾರ: ಹಾಸನ ಬಳಿಕ ನಗರದಲ್ಲಿಂದು ನಗರಸಭೆ ಸದಸ್ಯರೊಬ್ಬರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಮುಳಬಾಗಿಲು ನಗರದ ಮುತ್ಯಾಲಪೇಟೆಯಲ್ಲಿರುವ ಗಂಗಮ್ಮ ದೇವಾಲಯದ ಮುಂಭಾಗವೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

    ಮುಳಬಾಗಿಲು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರನ್ನು ಕೊಲೆ ಮಾಡಿದ್ದಾರೆ. ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ ಅವರನ್ನು ಸಂಚು ಹಾಕಿ ಇಂದು ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಮನೆ ಎದುರು ಮಾರಾಕಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

    ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರ ಬಲಗೈ ಬಂಟ ಮತ್ತು ಆಪ್ತನಾಗಿದ್ದ ಇವರನ್ನು ಮುಂಜಾನೆ ನಾಲ್ಕು ಜನರ ತಂಡ ಲಾಂಗು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಮುಳಬಾಗಿಲು ಡಿವೈಎಸ್‍ಪಿ ಗೌರಿಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಳಬಾಗಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇನ್ನೂ ತನ್ನ ಬಲಗೈ ಬಂಟನ ಕೊಲೆ ವಿಚಾರ ತಿಳಿದ ಕೊತ್ತೂರು ಮಂಜುನಾಥ್ ಅವರು ಜಾಲಪ್ಪ ಆಸ್ಪತ್ರೆಯ ಶವಗಾರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.