Tag: Kottur

  • ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ : ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

    ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ : ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

    ಬಳ್ಳಾರಿ: 2 ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರೂ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಕೊಟ್ಟೂರು ಪಟ್ಟಣದ ಹೊರವಲಯದಲ್ಲಿ ನಡೆದಿದೆ.

    ಸಾಸಲವಾಡದ ಶಶಿಧರ್(30) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ. ಇನ್ನೂ ಕೊಟ್ಟೂರು ತಾಲೂಕಿನ ಲೊಟ್ಟನಕೆರೆ ನಿವಾಸಿಗಳಾದ ನಾಗರಾಜ್ (22) ಎಂಬವರ ಕಾಲು ಮುರಿದಿದ್ದು, ಹಿಂಬದಿ ಸವಾರ ಮೂಗಣ್ಣ ಗಂಭೀರವಾಗಿ ಗಾಯಗೊಂಡಿದ್ದಾರೆ. ರಸ್ತೆ ಮಧ್ಯದಲ್ಲಿಯೇ ಬಿದ್ದಿದ್ದ ಅವರನ್ನು ಸ್ಥಳೀಯ ನಿವಾಸಿಗಳು 108 ಅಂಬುಲೆನ್ಸ್ ಗೆ ಕರೆ ಮಾಡಿ ದಾವಣಗೆರೆ ಆಸ್ಪತ್ರೆಗೆ ಸಾಗಿಸಿದ್ದಾರೆ.

    ಪಟ್ಟಣದ ಹೊರವಲಯ ಮುರುಳ ಸಿದ್ಧೇಶ್ವರ ಕಲ್ಯಾಣ ಮಂಟಪದ ಸಮೀಪದಲ್ಲಿ ಅಪಘಾತ ನಡೆದಿದ್ದು, ಬೈಕ್ ಛಿದ್ರ ಛಿದ್ರವಾಗಿದ್ದು, ಬಿಡಿ ಭಾಗಗಳು ರಸ್ತೆ ತುಂಬ ಬಿದ್ದಿವೆ. ಈ ಕುರಿತು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಳ್ಳಾರಿಯ ಕೊಟ್ಟೂರೇಶ್ವರನಿಗೆ ಸಿದ್ಧವಾಗುತ್ತಿದೆ ಹೊಸ ರಥ

    ಬಳ್ಳಾರಿಯ ಕೊಟ್ಟೂರೇಶ್ವರನಿಗೆ ಸಿದ್ಧವಾಗುತ್ತಿದೆ ಹೊಸ ರಥ

    ಬಳ್ಳಾರಿ: ಜಿಲ್ಲೆಯ ಕೊಟ್ಟೂರು ಬಸವೇಶ್ವರನ ರಥೋತ್ಸವಕ್ಕಾಗಿ ಈ ಬಾರಿ ಹೊಸ ರಥ ನಿಮಾರ್ಣವಾಗುತ್ತಿದೆ. ಕಳೆದ ಫೆಬ್ರವರಿ 21 ರಂದು ರಥದ ಅಚ್ಚು ಮುರಿದು ರಥೋತ್ಸವದ ವೇಳೆಯೇ ತೇರು ಮಗುಚಿ ಬಿದ್ದಿತ್ತು. ಇದರಿಂದಾಗಿ ನೂತನ ರಥ ನಿರ್ಮಾಣ ಕಾರ್ಯ ಯಾವಾಗ ನಡೆಯುತ್ತೋ ಅಂತಾ ಭಕ್ತರು ಆತಂಕಗೊಂಡಿದ್ದು, ಇದೀಗ ನೂತನ ರಥ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

    ಸರ್ಕಾರ ನೂತನ ರಥ ನಿರ್ಮಾಣಕ್ಕಾಗಿ 2 ಕೋಟಿ ರೂಪಾಯಿ ಅನುದಾನ ನೀಡಿದ್ದು, ಈಗಾಗಲೇ ರಥ ನಿರ್ಮಾಣ ಕಾರ್ಯ ಅರ್ಧ ಮುಕ್ತಾಯಗೊಂಡಿದೆ. ಫೆಬ್ರುವರಿ 14ರಂದು ರಥೋತ್ಸವವನ್ನು ನೂತನ ರಥದಲ್ಲೆ ನಡೆಸಲಾಗುವುದು ಅಂತ ಉಜ್ಜೈನಿ ಶ್ರೀಗಳು ಹೇಳಿದ್ದಾರೆ.

    ಈ ಬಾರಿ ನೂತನ ರಥದೊಂದಿಗೆ ಬಸವೇಶ್ವರನ ಜಾತ್ರೆ ಅದ್ಧೂರಿಯಾಗಿ ನಡೆಸಲು ದೇವಾಲಯದ ಆಡಳಿತ ಮಂಡಳಿ ಕೂಡ ಸಜ್ಜಾಗಿದೆ. ನೂತನ ರಥವನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ.