Tag: Kotigobba-3

  • ನಿಮ್ಮ ಜೊತೆ ನಾವಿದ್ದೇವೆ – ಸೂರಪ್ಪ ಬಾಬುಗೆ ಧೈರ್ಯ ತುಂಬಿದ ಕಿಚ್ಚ

    ನಿಮ್ಮ ಜೊತೆ ನಾವಿದ್ದೇವೆ – ಸೂರಪ್ಪ ಬಾಬುಗೆ ಧೈರ್ಯ ತುಂಬಿದ ಕಿಚ್ಚ

    – ಯಾರು ಮಾಡಿದ್ದಾರೆ ಅನ್ನೋದು ನಮಗೆ ಚೆನ್ನಾಗಿ ಗೊತ್ತಿದೆ

    ಬೆಂಗಳೂರು: ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆ ಚಿತ್ರ ಕೋಟಿಗೊಬ್ಬ-3 ವಿಳಂಬಕ್ಕೆ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ಕಿಚ್ಚ ಧೈರ್ಯ ತುಂಬಿದ್ದಾರೆ.

    ಈ ಸಂಬಂಧ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವ ಕಿಚ್ಚ, ಬಾಬು ಅವರು ಅಪ್ಲೋಡ್ ಮಾಡಿದ ವೀಡಿಯೋ ನಾನು ನೋಡಿದೆ. ನೀವೊಬ್ಬರೇ ಅಲ್ಲ ನಿಮ್ಮ ಜೊತೆ ನಾವಿದ್ದೇವೆ. ಯಾರಿಂದ ತೊಂದರೆ ಆಗಿದೆ, ಯಾರು ಮಾಡಿದ್ದಾರೆ ಅನ್ನೋದು ನಮಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ಕಾಲವೇ ಉತ್ತರ ಕೊಡುತ್ತದೆ. ನಾಳೆಯಿಂದ ಪ್ರದರ್ಶನ ಕಾಣುತ್ತದೆ. ಭರ್ಜರಿಯಾಗಿ ಹೋಗುತ್ತದೆ ಅನ್ನೋದ್ರಲ್ಲಿ ಅನುಮಾನ ಇಲ್ಲ ಎಂದಿದ್ದಾರೆ.

    ಅಲ್ಲದೆ ಸ್ನೇಹಿತರಲ್ಲಿ ಕೇಳಿಕೊಳ್ಳುವುದುಬ ಇಷ್ಟೇ, ಯಾವುದೇ ಚಿತ್ರಮಂದಿರಗಳಿಗೆ ಡೈಮೇಜ್ ಮಾಡಬೇಡಿ. ನನಗೆ ನೀವು ತೋರಿಸುತ್ತಿರುವ ಪ್ರೀತಿ ತಿಳಿದಿದೆ. ಆದರೆ ಚಿತ್ರಮಂದಿರಗಳದ್ದು ತಪ್ಪಿಲ್ಲ. ನಾಳೆಯಿಂದ ಒಳ್ಳೆಯ ರೀತಿಯ ಪ್ರದರ್ಶನವನ್ನ 6 ಗಂಟೆಯಿಂದ ನೋಡ್ತೀರಿ ನೀವೆಲ್ಲ. ಎಲ್ಲರಿಗೂ ಧನ್ಯವಾದ. ಇವತ್ತು ಆಗಿರುವ ಈ ವಿಳಂಬಕ್ಕೆ ಕ್ಷಮೆ ಇರಲಿ ಎಂದು ವೀಡಿಯೋದಲ್ಲಿ ಅಭಿಮಾನಿಗಳಿಗೆ ಹಾಗೂ ಸಿನಿಮಾ ಟೀಮ್ ಗೆ ಕಿಚ್ಚ ಸುದೀಪ್ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಿಚ್ಚನ ಅಭಿಮಾನಿಗಳಲ್ಲಿ ಸೂರಪ್ಪ ಬಾಬು ಕ್ಷಮೆ

    ರಾಜ್ಯಾದ್ಯಂತ ಇಂದು ಸುಮಾರು 300 ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ-3 ರಿಲೀಸ್ ಆಗಬೇಕಿತ್ತು. ಅದಕ್ಕಾಗಿ ಕಿಚ್ಚನ ಅಭಿಮಾನಿಗಳು ಕೂಡ ಸಜ್ಜಾಗಿದ್ದರು. ಆದರೆ ಈ ಮಧ್ಯೆ ಸಿನಿಮಾ ರಿಲೀಸ್ ವಿಳಂಬವಾಗಿದ್ದು, ಇದು ಕಿಚ್ಚನ ಅಭಿಮಾನಿಗಳಿಗೆ ಆಕ್ರೋಸ ಹೊರಹಾಕುವಂತೆ ಮಾಡಿದೆ. ಈ ಸಂಬಂಧ ಸೂರಪ್ಪ ಬಾಬು ಹಾಗೂ ಕಿಚ್ಚ ಸುದೀಪ್ ಕೂಡ ತಮ್ಮ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ರಿಲೀಸ್ ವಿಳಂಬ- ಅಭಿಮಾನಿಗಳಲ್ಲಿ ಕಿಚ್ಚ ಕ್ಷಮೆ

  • ಕಿಚ್ಚನ ಅಭಿಮಾನಿಗಳಲ್ಲಿ ಸೂರಪ್ಪ ಬಾಬು ಕ್ಷಮೆ

    ಕಿಚ್ಚನ ಅಭಿಮಾನಿಗಳಲ್ಲಿ ಸೂರಪ್ಪ ಬಾಬು ಕ್ಷಮೆ

    – ನಾಳೆ ಕೋಟಿಗೊಬ್ಬ-3 ಸಿನಿಮಾ ರಿಲೀಸ್

    ಬೆಂಗಳೂರು: ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾ ರಾಜ್ಯಾದ್ಯಂತ ಇಂದು ತೆರೆಕಾಣಬೇಕಿತ್ತು. ಆದರೆ ತಾಂತ್ರಿಕ ದೋಷಗಳಿಂದ ಚಿತ್ರ ಬಿಡುಗಡೆಗೆ ವಿಳಂಬವಾಗಿದ್ದು, ನಾಳೆ ಸಿನಿಮಾ ರಾಜ್ಯಾದ್ಯಂತ ತೆರೆಕಾಣಲಿದೆ.

    ಈ ಕುರಿತಂತೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ನಿರ್ಮಾಪಕ ಸೂರಪ್ಪಬಾಬು ಅವರು, ಕೆಲವು ವಿತರಕರು ಮಾಡಿದ ಮೋಸದಿಂದ ಈ ದಿನ ನನ್ನ ನೆಚ್ಚಿನ ನಟ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾವನ್ನು ಬಿಡುಗಡೆಗೊಳಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಹಲವಾರು ಕಾರಣಗಳಿದೆ. ಇದರ ಹಿಂದೆ ಹಲವಾರು ಷಡ್ಯಂತರಗಳನ್ನು ಮಾಡಿದ್ದಾರೆ. ಹಾಗಾಗಿ ನನ್ನನ್ನು ಕ್ಷಮಿಸಿ. ಎಂದಿನಂತೆ ನಾಳೆ ಬೆಳಗ್ಗೆ 6 ಗಂಟೆಯಿಂದ ಕಿಚ್ಚನ ಅಭಿಮಾನಿಗಳಿಗೆ ಫ್ಯಾನ್ ಶೋವನ್ನು ಆರಂಭಿಸುತ್ತಿದ್ದೇವೆ. ಇದರಲ್ಲಿ ಯಾವುದೇ ನನ್ನ ತಪ್ಪಿಲ್ಲ. ದಯವಿಟ್ಟು ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ:  ಊಟದ ವಿಚಾರಕ್ಕೆ ತಾಯಿ, ಮಗನ ಗಲಾಟೆ – ಕುಡಿದ ಮತ್ತಿನಲ್ಲಿ ಗುಂಡು ಹಾರಿಸಿ ತಾಯಿ, ಅಕ್ಕನ ಹತ್ಯೆ

    ಈ ವಿಚಾರವಾಗಿ ಸುದೀಪ್ ಅವರೇ ನಿಮಗೆ ಸಂಪೂರ್ಣವಾದ ಸತ್ಯ ತಿಳಿದಿದೆ. ತಮ್ಮ ಅಭಿಮಾನಿಗಳಿಗೆ ರಸದೌತಣ ನೀಡಲು ಎಲ್ಲಾ ರೀತಿಯ ವ್ಯವಸ್ಥೆಗೊಳಿಸುತ್ತಿದ್ದೇನೆ. ನಾಳೆ ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿಯೂ ಬೆಳಗ್ಗೆ 6 ಗಂಟೆಯಿಂದಲೇ ಚಿತ್ರ ಪ್ರದರ್ಶನ ಆರಂಭವಾಗಲಿದೆ. ಎಲ್ಲರೂ ಸಿನಿಮಾ ನೋಡಿ ಹಾರೈಸಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ರಿಲೀಸ್ ವಿಳಂಬ- ಅಭಿಮಾನಿಗಳಲ್ಲಿ ಕಿಚ್ಚ ಕ್ಷಮೆ

    ಸುದೀಪ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಕೆಲವೊಂದು ವಿಚಾರಗಳಿಂದ ಸಿನಿಮಾದ ಮೊದಲ ಶೋ ವಿಳಂಬವಾಗಿದೆ. ಈ ಬಗ್ಗೆ ಮಾಹಿತಿ ನೀಡುವುದು ನನ್ನ ಕರ್ತವ್ಯವಾಗಿದೆ. ನಾನು ವೈಯಕ್ತಿವಾಗಿ ಎಲ್ಲರ ಬಳಿ ಕ್ಷಮೆಯಾಚಿಸುತ್ತೇನೆ. ಇದರಲ್ಲಿ ಥಿಯೇಟರ್ ಮಾಲೀಕ ತಪ್ಪಿಲ್ಲ. ಹೀಗಾಗಿ ಅಲ್ಲಿ ಅಹಿತರ ಘಟನೆಗಳನ್ನು ನಡೆಸಬೇಡಿ. ಚಿತ್ರಮಂದಿರಗಳಿಗೆ ಹಾನಿ ಮಾಡಬೇಡಿ. ಇದು ಅತ್ಯಂತ ವಿಚಿತ್ರ ಸನ್ನಿವೇಶವಾಗಿದೆ. ನಿರ್ಲಕ್ಷ್ಯಕ್ಕಾಗಿ ಕ್ಷಮೆಯಾಚಿಸುತ್ತೇನೆ. ಅಭಿಮಾನಿಗಳು ಕೆಟ್ಟ ರೀತಿಯಲ್ಲಿ ವರ್ತಿಸಬಾರದು. ಸಿನಿಮಾ ಬಿಡಗಡೆಯ ಸಮಯವನ್ನು ನಾನೇ ನೀಡುವೆ, ಕೆಲ ಸಮಸ್ಯೆಗಳಿಂದ ರಿಲೀಸ್ ವಿಳಂಬವಾಗಿದೆ ಎಂದು ಬರೆದುಕೊಂಡಿದ್ದಾರೆ.

  • ಕೋಟಿಗೊಬ್ಬ-3 ಸಿನಿಮಾ ರಿಲೀಸ್ ವಿಳಂಬ- ಅಭಿಮಾನಿಗಳಲ್ಲಿ ಕಿಚ್ಚ ಕ್ಷಮೆ

    ಕೋಟಿಗೊಬ್ಬ-3 ಸಿನಿಮಾ ರಿಲೀಸ್ ವಿಳಂಬ- ಅಭಿಮಾನಿಗಳಲ್ಲಿ ಕಿಚ್ಚ ಕ್ಷಮೆ

    ಬೆಂಗಳೂರು: ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾದ ಮೊದಲ ಶೋ ವಿಳಂಬವಾಗಿದ್ದಕ್ಕೆ ನಟ ತನ್ನ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.

    ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕಿಚ್ಚ, ಕೆಲವೊಂದು ವಿಚಾರಗಳಿಂದ ಸಿನಿಮಾದ ಮೊದಲ ಶೋ ವಿಳಂಬವಾಗಿದೆ. ಈ ಬಗ್ಗೆ ಮಾಹಿತಿ ನೀಡುವುದು ನನ್ನ ಕರ್ತವ್ಯವಾಗಿದೆ. ನಾನು ವೈಯಕ್ತಿವಾಗಿ ಎಲ್ಲರ ಬಳಿ ಕ್ಷಮೆಯಾಚಿಸುತ್ತೇನೆ. ಇದರಲ್ಲಿ ಥಿಯೇಟರ್ ಮಾಲೀಕ ತಪ್ಪಿಲ್ಲ. ಹೀಗಾಗಿ ಅಲ್ಲಿ ಅಹಿತರ ಘಟನೆಗಳನ್ನು ನಡೆಸಬೇಡಿ. ಚಿತ್ರಮಂದಿರಗಳಿಗೆ ಹಾನಿ ಮಾಡಬೇಡಿ.

    ಇದು ಅತ್ಯಂತ ವಿಚಿತ್ರ ಸನ್ನಿವೇಶವಾಗಿದೆ. ನಿರ್ಲಕ್ಷ್ಯಕ್ಕಾಗಿ ಕ್ಷಮೆಯಾಚಿಸುತ್ತೇನೆ. ಅಭಿಮಾನಿಗಳು ಕೆಟ್ಟ ರೀತಿಯಲ್ಲಿ ವರ್ತಿಸಬಾರದು. ಸಿನಿಮಾ ಬಿಡಗಡೆಯ ಸಮಯವನ್ನು ನಾನೇ ನೀಡುವೆ, ಕೆಲ ಸಮಸ್ಯೆಗಳಿಂದ ರಿಲೀಸ್ ವಿಳಂಬವಾಗಿದೆ. ಚಿತ್ರ ಬಿಡುಗಡೆಗೆ ನಾನು ಕೂಡ ಉತ್ಸುಕನಾಗಿರುವೆ. ಅಭಿಮಾನಿಗಳು ಶಾಂತಿಯಿಂದ ಇರಿ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಸಲ್ಮಾನ್ ಸಿನಿಮಾಗೆ ರವಿ ಬಸ್ರೂರ್ ಸಂಗೀತ ಸಂಯೋಜನೆ

    ರಾಜ್ಯಾದ್ಯಂತ ಇಂದು 300 ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ- 3 ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ತಾಂತ್ರಿಕ ದೋಷದಿಂದ ಶೋ ರದ್ದಾಗಿದ್ದು, ರಾಜ್ಯಾದ್ಯಂತ ಕಿಚ್ಚನ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ತಮ್ಮ ನೆಚ್ಚಿನ ನಟನ ಚಿತ್ರಕ್ಕಾಗಿ ಕಾದು ಕುಳಿತಿದ್ದ ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ.

  • ಸಂಕಷ್ಟದಲ್ಲಿ ಕೈ ಹಿಡಿದ ನಿರ್ಮಾಪಕನಿಗೆ ವಿಶೇಷ ಧನ್ಯವಾದ ಹೇಳಿದ ಸುದೀಪ್

    ಸಂಕಷ್ಟದಲ್ಲಿ ಕೈ ಹಿಡಿದ ನಿರ್ಮಾಪಕನಿಗೆ ವಿಶೇಷ ಧನ್ಯವಾದ ಹೇಳಿದ ಸುದೀಪ್

    ಬೆಂಗಳೂರು: ತಮ್ಮ ಕಷ್ಟದ ದಿನದಲ್ಲಿ ಕೈ ಹಿಡಿದ ನಿರ್ಮಾಪಕರೊಬ್ಬರ ಬಗ್ಗೆ ತಿಳಿಸುತ್ತಾ ವೇದಿಕೆ ಮೇಲೆ ಸುದೀಪ್ ಧನ್ಯವಾದ ಹೇಳಿದ್ದಾರೆ.

    ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿ 25 ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆ ಕೋಟಿಗೊಬ್ಬ 3 ಚಿತ್ರತಂಡ ಬೆಂಗಳೂರಿನಲ್ಲಿ ಬೆಳ್ಳಿ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಂದರ್ಭದಲ್ಲಿ ತಮ್ಮ ಸಿನಿ ಜರ್ನಿ ಕುರಿತಂತೆ ಮಾತನಾಡಿದ ಕಿಚ್ಚ ಸುದೀಪ್ ಮಾತನಾಡಿದರು.

    ಶ್ರೀಮಂತ ಕುಟುಂಬದಲ್ಲಿ ಬೆಳೆದ ಕಿಚ್ಚ ಸುದೀಪ್ ಹುಚ್ಚ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸಿದ ಬಳಿಕ ಕಷ್ಟವನ್ನು ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾರೆ. ಈ ವೇಳೆ ತಮಗೆ ಸಹಾಯ ಮಾಡಿದ ನಿರ್ಮಾಪಕ ರಾಕ್‍ಲೈನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಈ ವ್ಯಕ್ತಿ ಮೇಲೆ ನನಗೆ ಬಹಳ ಹೊಟ್ಟೆ ಕಿಚ್ಚಿದೆ. ಕಾರಣ ಅವರನ್ನು ಬೇರೆಯವರು ನನಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಾರೆ. ನಾನು ಮೊದಲಿಗೆ ಕಲಾವಿದನಾಗಿದ್ದಾಗ ನನಗೆ ತೊಂದರೆಯಾದಾಗ ನನ್ನ ಸಹಾಯಕ್ಕೆ ಇಂಡಸ್ಟ್ರಿಯಲ್ಲಿ ಬೆನ್ನ ಹಿಂದೆ ನಿಂತಿದ್ದಾರೆ ಎಂದರೆ ಅದು ರಾಕ್‍ಲೈನ್ ವೆಂಕಟೇಶ್. ಹುಚ್ಚ ಸಿನಿಮಾದ ನಂತರ ಕೈನಲ್ಲಿ ಹಣವಿಲ್ಲದ ಸಂದರ್ಭದಲ್ಲಿ ಮಧ್ಯರಾತ್ರಿ ಅವರಿಗೆ ಕರೆ ಮಾಡಿದೆ. ಕರೆ ಸ್ವೀಕರಿಸಿದ ಕೂಡಲೇ ಸರ್ ನಾನು ನಿಮ್ಮೊಟ್ಟಿಗೆ ಮಾತನಾಡಬೇಕು ಬರುತ್ತೇನೆ ಎಂದು ಹೇಳಿದೆ. ಅದಕ್ಕೆ ಅವರು ಬೇಡ ನಾನೇ ಬರುತ್ತೇನೆ ಎಂದರು. ಆಗ ಇಲ್ಲ ಸರ್ ನಾನೇ ಬರುತ್ತೇನೆ ಎಂದು ಹೇಳಿ ಮಧ್ಯರಾತ್ರಿ 12.30ಕ್ಕೆ ರಾಕ್‍ಲೈನ್‍ರವರ ಮನೆಗೆ ಹೋದೆ. ಈ ವೇಳೆ ಅವರು ನನ್ನ ತಲೆ ತಗ್ಗಿಸಲು ಕೂಡ ಬಿಡದೇ ಏನುಬೇಕಾದರೂ ಕೇಳಿ ಎಂದು ಹೇಳಿ ಹಣ ಸಹಾಯ ಮಾಡಿದರು. ಇಂದಿಗೂ ನಾನು ಆ ಸಂದರ್ಭವನ್ನು ನೆನಪಿಟ್ಟುಕೊಂಡಿದ್ದೇನೆ ಎಂದರೆ ಅದು ಅವರು ನೀಡಿದ್ದ ಹಣದಿಂದ ಅಲ್ಲ. ಬದಲಾಗಿ ಅಂದು ಅವರು ನನ್ನ ಮೇಲಿಟ್ಟುಕೊಂಡಿದ್ದ ಅಭಿಪ್ರಾಯ ಎಂದು ಹೇಳಿದರು.

    ಇಂದು ನಾನು ಅವರೊಟ್ಟಗೆ ಏನೇ ಕಿತ್ತಾಡಿಕೊಂಡು, ಮನಸ್ತಾಪ ಮಾಡಿಕೊಂಡಿರಬಹುದು. ಅದರೆ ನನಗೆ ಅವರು ಎಂದಿಗೂ ರಾಕ್‍ಲೈನ್ ವೆಂಕಟೇಶ್ ಅವರೇ. ಯಾವತ್ತಿಗೂ ಅವರು ನನಗೆ ಹಿರಿಯ ಸಹೋದರನೇ. ನನ್ನ ಕೊನೆಯ ಉಸಿರು ಇರುವವರಿಗೂ ನೀವು ಮಾಡಿದ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ ಎಂದು ನುಡಿದರು.

    ಕಿಚ್ಚ ಸುದೀಪ್ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ನಟ ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್, ರಾಕ್‍ಲೈನ್ ವೆಂಕಟೇಶ್, ರವಿಶಂಕರ್ ಹಲವಾರು ಗಣ್ಯರು ಪಾಲ್ಗೊಂಡಿದ್ದರು.

  • ಕಿಚ್ಚನ ಹುಟ್ಟುಹಬ್ಬಕ್ಕೆ ಕೋಟಿಗೊಬ್ಬ-3 ತಂಡದಿಂದ ಭರ್ಜರಿ ಗಿಫ್ಟ್

    ಕಿಚ್ಚನ ಹುಟ್ಟುಹಬ್ಬಕ್ಕೆ ಕೋಟಿಗೊಬ್ಬ-3 ತಂಡದಿಂದ ಭರ್ಜರಿ ಗಿಫ್ಟ್

    ಬೆಂಗಳೂರು: ಕಿಚ್ಚನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸರ್ಪ್ರೈಸ್ ವೊಂದು ರಿವೀಲ್ ಆಗಿದೆ.

    ಇದೇ ಸೆಪ್ಟೆಂಬರ್ 2ರಂದು ಸುದೀಪ್ ಹುಟ್ಟುಹಬ್ಬವಾಗಿದ್ದು, 48ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನೆಲೆ ಕೋಟಿಗೊಬ್ಬನ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು ಭಾರೀ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಾಮನ್ ಡಿಸ್‍ಪ್ಲೇ(ಸಿಡಿಪಿ) ಬಿಡುಗಡೆಗೂ ಮುಂದಾಗಿದ್ದಾರೆ. ಇದೇ ಸಂದರ್ಭದಲ್ಲಿ ಇದೀಗ ಮತ್ತೊಂದು ಸರ್ಪ್ರೈಸ್ ಹೊರ ಬಿದ್ದಿದೆ.

    ಈ ಕುರಿತು ಆನಂದ್ ಆಡಿಯೋ ಟ್ವೀಟ್ ಮಾಡುವ ಸರ್ಪ್ರೈಸ್ ರಿವೀಲ್ ಮಾಡಿದ್ದು, ಸುದೀಪ್ ಹುಟ್ಟುಹಬ್ಬದ ಹಿನ್ನೆಲೆ ಕೋಟಿಗೊಬ್ಬ-3 ಟೀಸರ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಈ ಮೂಲಕ ಕಿಚ್ಚನ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದೆ. ಇದರಿಂದಾಗಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

    ಈ ಹಿಂದೆ ಕೋಟಿಗೊಬ್ಬ-3 ಸಿನಿಮಾದ ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಲಾಗಿತ್ತು. ಅದಾದ ಬಳಿಕ ಸಿನಿಮಾ ಕುರಿತು ಯಾವುದೇ ಟಪ್‍ಡೇಟ್ ಸಿಕ್ಕಿರಲಿಲ್ಲ. ಹೀಗಾಗಿ ಅಭಿಮಾನಿಗಳು ಸಹ ನಿರಾಶೆಗೊಳಾಗಿದ್ದರು. ಇದೀಗ ಟೀಸರ್ ಬಿಡುಗಡೆ ಮಾಡುವುದಾಗಿ ಆನಂದ್ ಆಡಿಯೋ ತಿಳಿಸಿದೆ. ಈಗಾಗಲೇ ಕೋಟಿಗೊಬ್ಬ-3 ಸಿನಿಮಾ ಕುರಿತು ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದ್ದು, ಈ ಬಾರಿ ಬಿಡುಗಡೆಯಾಗಲಿರುವ ಟೀಸರ್ ಹೇಗಿರಲಿದೆ ಎಂದು ಅಭಿಮಾನಿಗಳು ಲೆಕ್ಕ ಹಾಕುತ್ತಿದ್ದಾರೆ.

    ಸುದೀಪ್ ಸದ್ಯ ಫ್ಯಾಂಟಮ್ ಚಿತ್ರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಜೊತೆಗೆ ಕೋಟಿಗೊಬ್ಬ-3 ಚಿತ್ರೀಕರಣವನ್ನು ನಿಭಾಯಿಸುತ್ತಿದ್ದಾರೆ. ಈ ಮೂಲಕ ಎರಡೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಇಂದು ಬಿಡುವು ಮಾಡಿಕೊಂಡು ತಾಯಿಯ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಹೀಗಾಗಿ ಮನೆಯಲ್ಲೇ ಇದ್ದಾರೆ.

  • ಕಿಚ್ಚನ ಕೋಟಿಗೊಬ್ಬ-3 ಅಡ್ಡಕ್ಕೆ ಸನ್ನಿ ಎಂಟ್ರಿ

    ಕಿಚ್ಚನ ಕೋಟಿಗೊಬ್ಬ-3 ಅಡ್ಡಕ್ಕೆ ಸನ್ನಿ ಎಂಟ್ರಿ

    ಬೆಂಗಳೂರು: ಕಿಚ್ಚನ ಕೋಟಿಗೊಬ್ಬ-3 ಅಡ್ಡಕ್ಕೆ ಮಾದಕ ಚೆಲುವೆ ಸನ್ನಿ ಲಿಯೋನ್ ಎಂಟ್ರಿ ಕೊಡುತ್ತಿದ್ದಾರೆ ಎಂಬ ಕುರಿತ ಬಿಸಿ ಬಿಸಿ ಚರ್ಚೆ ಇದೀಗ ಆರಂಭವಾಗಿದೆ. ಫ್ಯಾಂಟಮ್ ಚಿತ್ರದ ಶೂಟಿಂಗ್‍ನಲ್ಲೇ ಕಿಚ್ಚ ಬ್ಯುಸಿಯಾಗಿದ್ದು, ಇತ್ತ ಕೋಟಿಗೊಬ್ಬ-3 ಚಿತ್ರಕ್ಕೆ ಸೇಸಮ್ಮ ಸದ್ದಿಲ್ಲದೇ ಎಂಟ್ರಿ ಕೊಟ್ಟಿದ್ದಾರೆ.

    ಹೌದು ಇತ್ತೀಚೆಗಷ್ಟೇ ಫ್ಯಾಂಟಮ್ ತಂಡ ಸಿನಿಮಾ ಶೂಟಿಂಗ್ ಆರಂಭಿಸಿದ ಕುರಿತು ಮಾಹಿತಿ ನೀಡಿತ್ತು. ಅಲ್ಲದೆ ಚಿತ್ರದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿರುವ ವಿಕ್ರಾಂತ್ ರೋಣನ ಫಸ್ಟ್ ಲುಕ್ ಪೋಸ್ಟರ್‍ನ್ನು ಸಹ ಬಿಡುಗಡೆ ಮಾಡಲಾಗಿತ್ತು. ಆದರೆ ತುಂಬಾ ದಿನಗಳಿಂದ ಕೋಟಿಗೊಬ್ಬ-3 ಅಪ್‍ಡೇಟ್ ಸಿಕ್ಕಿರಲಿಲ್ಲ. ಈ ಕುರಿತು ಕಿಚ್ಚ ಸುದೀಪ್ ಸಹ ಎಲ್ಲೂ ಮಾಹಿತಿ ಹಂಚಿಕೊಂಡಿರಲಿಲ್ಲ. ಆದರೆ ಇದೀಗ ಸಿನಿಮಾ ಅಂಗಳದಿಂದ ಹಾಟ್ ನ್ಯೂಸ್ ಹೊರಬಿದ್ದಿದೆ.

    ಕಿಚ್ಚನ ಕೋಟಿಗೊಬ್ಬ-3 ಸಿನಿಮಾದ ಹಾಡೊಂದರಲ್ಲಿ ಮಾದಕ ಚೆಲುವೆ ಸನ್ನಿ ಲಿಯೋನ್ ಹೆಜ್ಜೆ ಹಾಕಲಿದ್ದಾರಂತೆ. ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸ್ವತಃ ನಟಿ ಸನ್ನಿ ಲಿಯೋನ್ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಈ ಮೂಲಕ ಕಿಚ್ಚನ ಜೊತೆ ಸೊಂಟ ಬಳುಕಿಸುವುದಾಗಿ ತಿಳಿಸಿದ್ದಾರೆ. ಕೇವಲ ಐಟಂ ಸಾಂಗ್‍ನಲ್ಲಿ ಡ್ಯಾನ್ಸ್ ಮಾಡುತ್ತಿರುವ ಕುರಿತು ತಿಳಿಸಿದ್ದಾರೆ. ಆದರೆ ಯಾವ ಹಾಡು ಎಂಬುದನ್ನು ಬಹಿರಂಗಪಡಿಸಿಲ್ಲ.

    ಕೋಟಿಗೊಬ್ಬ-3 ಸಿನಿಮಾದ ಐಟೆಮ್ ಸಾಂಗ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಹಾಡು, ನೃತ್ಯವನ್ನು ಸೊಗಸಾಗಿ ಚಿತ್ರಿಸಲಾಗಿದೆ. ರಾಗಿಣಿ ಎಂಎಂಎಸ್ 2 ಸಿನಿಮಾದ ಬೇಬಿ ಡೋಲ್ ರೀತಿಯಲ್ಲೇ ಈ ಹಾಡು ಸಹ ಹಿಟ್ ಆಗಲಿದೆ ಎಂಬ ಭರವಸೆ ಇದೆ ಎಂದು ಸಂದರ್ಶನದಲ್ಲಿ ಸನ್ನಿ ಲಿಯೋನ್ ತಿಳಿಸಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

    ಅಂದಹಾಗೆ ಕೋಟಿಗೊಬ್ಬ ಹೆಸರಿನ 2 ಸರಣಿ ಸಿನಿಮಾಗಳು ಕಿಚ್ಚ ಸುದೀಪ್‍ಗೆ ಸಾಕಷ್ಟು ಯಶಸ್ಸು ತಂದುಕೊಟ್ಟಿವೆ. ಕೋಟಿಗೊಬ್ಬ-2 ಸಿನಿಮಾ ಸಹ ಸಖತ್ ಹಿಟ್ ಆಗಿದೆ. ಹೀಗಾಗಿ ಸುದೀಪ್ ಇದೀಗ ಕೋಟಿಗೊಬ್ಬ-3 ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಸಹ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು, ಯಾವ ರೀತಿಯ ಕಥೆ ಹೆಣೆಯಲಾಗಿದೆ ಎಂದು ಅಭಿಮಾನಿಗಳು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ. ಆದರೆ ಸಿನಿಮಾ ತಂಡ ಕೋಟಿಗೊಬ್ಬ-3 ಸಿನಿಮಾ ಕುರಿತು ಅಷ್ಟೇನು ಅಪ್‍ಡೇಟ್ ನೀಡುತ್ತಿಲ್ಲ.

  • ಯೂಟ್ಯೂಬ್‍ನಲ್ಲಿ ಟ್ರೆಂಡ್ ಸೃಷ್ಟಿಸಿದ ಕೋಟಿಗೊಬ್ಬ-3 ಟೈಟಲ್ ಟ್ರ್ಯಾಕ್

    ಯೂಟ್ಯೂಬ್‍ನಲ್ಲಿ ಟ್ರೆಂಡ್ ಸೃಷ್ಟಿಸಿದ ಕೋಟಿಗೊಬ್ಬ-3 ಟೈಟಲ್ ಟ್ರ್ಯಾಕ್

    ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ ಸಿನಿಮಾದ ಲಿರಿಕಲ್ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದ್ದು, ಯೂಟ್ಯೂಬ್‍ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ನಂ.1 ಟ್ರೆಂಡಿಂಗ್‍ನಲ್ಲಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 7 ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಪಡೆದಿದೆ. ಅಲ್ಲದೆ ನಂ.1 ಟ್ರೆಂಡಿಂಗ್‍ನಲ್ಲಿದೆ. ಈ ಮೂಲಕ ಲಾಕ್‍ಡೌನ್‍ನಿಂದ ಬೇಸರದಲ್ಲಿದ್ದ ಅಭಿಮಾನಿಗಳನ್ನು ಕಿಚ್ಚ ಸುದೀಪ್ ರಂಜಿಸಿದ್ದಾರೆ. ಕಿಚ್ಚ ಸುದೀಪ್ ಏ.24ರಂದು ಟ್ವೀಟ್ ಮಾಡಿ ಹಾಡು ಬಿಡುಗಡೆ ಮಾಡುವುದರ ಕುರಿತು ತಿಳಿಸಿದ್ದರು. ನಿರೀಕ್ಷೆಯಂತೆಯೇ ಏಪ್ರಿಲ್ 27ರಂದು ಹಾಡು ಬಿಡುಗಡೆಯಾಗಿದ್ದು, ಯೂಟ್ಯೂಬ್‍ನಲ್ಲಿ ಸಖತ್ ಸದ್ದು ಮಾಡುತ್ತಿದೆ.

    ಕೋಟಿಗೊಬ್ಬ-2 ಚಿತ್ರದಲ್ಲಿನ ಮ್ಯೂಸಿಕ್‍ನ ಬೇರೆ ವರ್ಷನ್ ಇದಾಗಿದ್ದು, ಆಕಾಶನೇ ಅದರಿಸುವ, ಈ ಭೂಮಿನ ಪಳಗಿಸುವಾ, ಕೋಟಿ ಕೋಟಿ ನೋಟುಗಳ ಕೋಟೆ ಮೇಲೆ ಕುಳಿತಿರುವ ಎಂದು ಮುಂದುವರಿಯುತ್ತದೆ. ನಂತರ ನಾಲ್ಕು ತಲೆ ಬ್ರಹ್ಮನಿಗೂ ಅಬ್ಬಬ್ಬ ಕನ್ಫ್ಯೂಸು ಮಾಡೋನಿವಾ….ಎನ್ನುತ್ತಿದ್ದಂತೆ ಕೋಟಿಗೊಬ್ಬ ಎಂಬ ವಾಯ್ಸ್ ಬರುತ್ತದೆ. ಹೀಗೆ ವಿಭಿನ್ನ ಶೈಲಿಯ ಮ್ಯೂಸಿಕ್‍ನೊಂದಿಗೆ ಹಾಡು ಅಭಿಮಾನಿಗಳಲ್ಲಿ ಹುಚ್ಚು ಹಿಡಿಸಿದೆ.

    ಲಾಕ್‍ಡೌನ್ ಇರುವುದರಿಂದ ಸಿನಿಮಾದ ಬಿಡುಗಡೆ ತಡವಾಗಿದೆ. ಈ ಚಿತ್ರಕ್ಕೆ ಸ್ವತಃ ಕಿಚ್ಚ ಸುದೀಪ್ ಚಿತ್ರಕಥೆ ಬರೆದಿದ್ದು, ಶಿವಕಾರ್ತಿಕ್ ನಿರ್ದೇಶಿಸಿದ್ದಾರೆ. ಚಿತ್ರದ ಬಹುತೇಕ ಭಾಗವನ್ನು ಪೋಲ್ಯಾಂಡ್‍ನಲ್ಲಿ ಚಿತ್ರೀಕರಿಸಲಾಗಿದೆ. ಸುದೀಪ್‍ಗೆ ಜೋಡಿಯಾಗಿ ಮಲಯಾಳಂ ನಟಿ ಮಡೋನ್ನಾ ಸೆಬಾಸ್ಟೀನ್ ಕಾಣಿಸಿಕೊಂಡಿದ್ದು, ಶ್ರದ್ಧಾ ದಾಸ್, ಅಫ್ತಬ್ ಶಿವದಾಸನಿ, ರವಿಶಂಕರ್ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸೂರಪ್ಪ ಬಾಬು ‘ಕೋಟಿಗೊಬ್ಬ 3’ ಚಿತ್ರವನ್ನು ನಿರ್ಮಿಸಿದ್ದಾರೆ. ಈಗಾಗಲೇ ಸ್ಯಾಟಲೈಟ್, ಡಬ್ಬಿಂಗ್ ಹಕ್ಕುಗಳಿಂದಲೇ ಸಿನಿಮಾ 27 ಕೋಟಿ ರೂ. ಗಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • ಕೋಟಿಗೊಬ್ಬ-3 ಚಿತ್ರ ತಂಡದಿಂದ ಸರ್ಪ್ರೈಸ್

    ಕೋಟಿಗೊಬ್ಬ-3 ಚಿತ್ರ ತಂಡದಿಂದ ಸರ್ಪ್ರೈಸ್

    ಬೆಂಗಳೂರು: ಲಾಕ್‍ಡೌನ್ ಸಮಯದಲ್ಲೂ ಕೋಟಿಗೊಬ್ಬ-3 ಚಿತ್ರ ತಂಡದಿಂದ ಹೊಸ ಸುದ್ದಿಗಳು ಹೊರ ಬರುತ್ತಿದ್ದು, ಇದೀಗ ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ನೀಡಲು ಮುಂದಾಗಿದೆ. ಟೀಸರ್ ಮೂಲಕ ಹುಚ್ಚು ಹಿಡಿಸಿದ್ದ ಚಿತ್ರ ತಂಡ ಇದೀಗ ಅಭಿಮಾನಿಗಳ ನಿರೀಕ್ಷೆಯಂತೆ ಹೊಸ ಸುದ್ದಿಯನ್ನು ಕೊಟ್ಟಿದ್ದು, ಸಂತಸ ಮೂಡಿಸಿದೆ.

    ಹೌದು ಲಾಕ್‍ಡೌನ್ ಹೊತ್ತಲ್ಲಿ ಕೋಟಿಗೊಬ್ಬ-3 ಚಿತ್ರತಂಡ ಕಿಕ್ಕೇರಿಸುತ್ತಿದ್ದು, ಚಿತ್ರದ ಟೈಟಲ್ ಟ್ರ್ಯಾಕ್‍ನ ಲಿರಿಕಲ್ ವಿಡಿಯೋವನ್ನು ಬಿಡುಗಡೆ ಮಾಡುತ್ತಿದೆ. ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರದ ಶೂಟಿಂಗ್ ಮುಗಿದು ಹಲವು ದಿನಗಳೇ ಕಳೆದಿದ್ದು, ಚಿತ್ರ ಬಿಡುಗಡೆಯ ಹಂತ ತಲುಪಿದೆ. ಆದರೂ ಸಿನಿಮಾದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ತಡವಾಗಿದೆ. ಈ ಹಿಂದೆ ಟೀಸರ್ ಮಾತ್ರ ಬಿಡುಗಡೆಯಾಗಿದ್ದು, ಇದಾದ ಬಳಿಕ ಚಿತ್ರದ ಕುರಿತು ಯಾವುದೇ ಅಪ್‍ಡೇಟ್ ನೀಡಿಲ್ಲ. ಹೀಗಾಗಿ ಅಭಿಮಾನಿಗಳು ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ.

    ಅಭಿಮಾನಿಗಳು ಪ್ರಶ್ನಿಸುತ್ತಿರುವುದನ್ನು ಮನಗಂಡ ಚಿತ್ರ ತಂಡ ಮೊದಲ ರಿಲಿಕಲ್ ವಿಡಿಯೋ ಬಿಡುಗಡೆಗೆ ಮುಂದಾಗಿದ್ದು ಈ ಕುರಿತು ಸ್ವತಃ ಕಿಚ್ಚ ಸುದೀಪ್ ತಿಳಿಸಿದ್ದಾರೆ. ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ ಅವರು, ಕೋಟಿಗೊಬ್ಬ-3ಯ ಟೈಟಲ್ ಟ್ರ್ಯಾಕ್‍ನ ಲಿರಿಕಲ್ ವಿಡಿಯೋ ಏಪ್ರಿಲ್ 27ರಂದು ಬೆಳಗ್ಗೆ 10 ಗಂಟೆಗೆ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಹ್ಯಾಶ್ ಟ್ಯಾಗ್ ಮೂಲಕ ‘ಆಕಾಶಾನೆ ಅದರಿಸುವ’ ಎಂದು ಬರೆದಿದ್ದಾರೆ. ಅಂದಹಾಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‍ನಲ್ಲಿ ಹಾಡು ಬಿಡುಗಡೆಯಾಗುತ್ತಿದೆ.

    ವಿ.ನಾಂಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ. ವ್ಯಾಸರಾಜ್ ಕಂಠದಲ್ಲಿ ಈ ಹಾಡು ಮೂಡಿ ಬಂದಿದೆ. ಬಹುನಿರೀಕ್ಷಿತ ಟೈಟಲ್ ಟ್ರ್ಯಾಕ್ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿದೆ.

    ಅಂದಹಾಗೆ ಚಿತ್ರದಲ್ಲಿ ಬಹುತಾರಾಗಣವೇ ಇದ್ದು, ವಿಲನ್ ಪಾತ್ರದಲ್ಲಿ ರವಿಶಂಕರ್ ಕಾಣಿಸಿಕೊಳ್ಳುತ್ತಿದ್ದಾರೆ. ಮಲಯಾಳಂ ಹಾಗೂ ತಮಿಳು ನಟಿ ಮಡೋನ್ನಾ ಸೆಬಸ್ಟಿಯನ್ ಈ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಶ್ರದ್ಧಾ ದಾಸ್ ಇಂಟರ್ ಪೋಲ್ ಅಧಿಕಾರಿಯ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಅಫ್ತಾಬ್ ಶಿವದಾಸನಿ, ನವಾಬ್ ಶಹರೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  • ಯುಟ್ಯೂಬ್‍ನಲ್ಲಿ ಕೋಟಿಗೊಬ್ಬ-3 ಟೀಸರ್ ಡಿಲೀಟ್- ನಿರ್ಮಾಪಕ ಸೂರಪ್ಪಬಾಬು ಸ್ಪಷ್ಟನೆ

    ಯುಟ್ಯೂಬ್‍ನಲ್ಲಿ ಕೋಟಿಗೊಬ್ಬ-3 ಟೀಸರ್ ಡಿಲೀಟ್- ನಿರ್ಮಾಪಕ ಸೂರಪ್ಪಬಾಬು ಸ್ಪಷ್ಟನೆ

    ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-3’ ಚಿತ್ರದ ಟೀಸರ್ ಯುಟ್ಯೂಬ್‍ನಿಂದ ಡಿಲೀಟ್ ಆಗಿದ್ದಕ್ಕೆ ನಿರ್ಮಾಪಕ ಸೂರಪ್ಪಬಾಬು ಅವರು ಸ್ಪಷ್ಟನೆ ನೀಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೂರಪ್ಪ ಅವರು, ಕೋಟಿಗೊಬ್ಬ-3 ಚಿತ್ರದ ಟೀಸರ್ ಯುಟ್ಯೂಬ್‍ನಿಂದ ಏಕೆ ಡಿಲೀಟ್ ಆಯ್ತು ಎಂದು ಕೇಳುತ್ತಿದ್ದರು. ಕೊರೊನಾ ವೈರಸ್‍ಗಿಂತ ಇದು ಜಾಸ್ತಿ ಸುದ್ದಿಯಾಗುತ್ತಿತ್ತು. ಪೋಲ್ಯಾಂಡ್‍ನಿಂದ ಶೂಟಿಂಗ್ ಆದ ಬಳಿಕ ಅಲ್ಲಿ ಸಹೋದರರಾದ ಸಂಜಯ್ ಪಾಲ್ ಹಾಗೂ ಅಜಯ್ ಪಾಲ್ ಇದ್ದರು. ಅವರು ಯಾರೆಂಬುದು ನನಗೆ ಗೊತ್ತಿರಲಿಲ್ಲ. ನನಗೆ ಯಾರೋ ಒಬ್ಬರು ಇಬ್ಬರು ಸಹೋದರರನ್ನು ಪರಿಚಯ ಮಾಡಿಸಿ ಅಲ್ಲಿ ಶೂಟಿಂಗ್ ಮಾಡೋಕ್ಕೆ ವ್ಯವಸ್ಥೆ ಮಾಡಿಕೊಟ್ಟರು. ಆದರೆ ಅವರು ಇಲ್ಲಿ ಹೋಗುವಾಗ ಆಡಿದ ಮಾತುಗಳನ್ನು ಅಲ್ಲಿ ಏನು ಮಾಡಿಕೊಟ್ಟಿಲ್ಲ. ಅವರಿಗೆ ಸಲ್ಲಬೇಕಾದ ಹಣವನ್ನು ನಮ್ಮ ಖಾತೆ ಮೂಲಕ ಕೊಟ್ಟಿದ್ದು, ಇದಕ್ಕೆ ನನ್ನ ಬಳಿ ದಾಖಲೆ ಇವೆ ಎಂದರು.

    ಯುಟ್ಯೂಬ್‍ನಲ್ಲಿ ಈಗ ಯಾರು ಏನಾದರೂ ದೂರು ನೀಡಿದರೆ ತಕ್ಷಣ ಅದನ್ನು ಡಿಲೀಟ್ ಮಾಡುತ್ತದೆ ಎಂಬುದು ನನಗೆ ನಿನ್ನೆ ಗೊತ್ತಾಗಿದೆ. ಇದರ ವಿರುದ್ಧವಾಗಿ ಆನಂದ್ ಆಡಿಯೋ ಶ್ಯಾಮ್ ಅವರು ಕಾನೂನಿನ ಪ್ರಕಾರ ಕ್ರಮಕೈಗೊಂಡಿದ್ದಾರೆ. ನಿನ್ನೆ, ಮೊನ್ನೆ ಶನಿವಾರ, ಭಾನುವಾರ ಆಗಿದ್ದ ಕಾರಣ ಅದು ವರ್ಕ್ ಆಗಿಲ್ಲ ಎಂಬ ಕಾರಣದಿಂದ ಇಂದು ಸಂಜೆಯೊಳಗೆ ಟೀಸರ್ ಅಪ್ಲೋಡ್ ಆಗುತ್ತದೆ ಎಂದು ನನಗೆ ಭರವಸೆ ಕೊಟ್ಟಿದ್ದಾರೆ. ಯುಟ್ಯೂಬ್ ಎನ್ನುವಂತದ್ದು ಮಶಿನ್ ಆಗಿದ್ದು, ಮನುಷ್ಯರು ಅಲ್ಲಿ ಕೆಲಸ ಮಾಡಲ್ಲ ಎಂದು ಶ್ಯಾಮ್ ಅವರು ತಿಳಿಸಿದ್ದರು. ಮನುಷ್ಯರು ಕೆಲಸ ಮಾಡುವಂತಿದ್ದರೆ ಈ ಸಮಸ್ಯೆಯನ್ನು ಅಲ್ಲಿಯೇ ಹೋಗಿ ಸರಿಪಡಿಸಬಹುದಿತ್ತು. ಆದರೆ ಅದು ಆಗಲ್ಲ ಎಂದು ತಿಳಿಸಿದರು.

    ಪಾಲ್ ಸಹೋದರರಿಂದ ಆದ ಅನ್ಯಾಯವನ್ನು ಪದೇ ಪದೇ ಹೇಳುತ್ತಾ ಕೋರ್ಟ್‍ಗೆ ಹೋಗುತ್ತೇನೆ ಎಂದು ಹೇಳುವ ಪರಿಸ್ಥಿತಿಯಲ್ಲಿ ನಾನಿಲ್ಲ. ನನ್ನ ಇಬ್ಬರು ಸಿಬ್ಬಂದಿಯನ್ನು ವಶಕ್ಕೆ ಪಡೆದು ಬ್ಯಾಕ್‍ಮೇಲ್ ಮಾಡಿದ್ದರು ಎಂಬುದು ಈ ಹಿಂದೆಯೇ ದಾಖಲೆಯೊಂದಿಗೆ ತೋರಿಸಿದ್ದೇನೆ. ಬಳಿಕ ನನ್ನ ಸಿಬ್ಬಂದಿಯನ್ನು ಕೇಂದ್ರ ಸಚಿವ ಸದಾನಂದ ಗೌಡ ಅವರ ಮೂಲಕ ಕರೆಸಿಕೊಂಡಿದ್ದೇವು. ಪಾಲ್ ಸಹೋದರರ ಮುಖಾಂತರ ನಾವು ಎಲ್ಲಾ ಲೋಕೇಶನ್‍ಗೆ ಹಣ ಕಟ್ಟಿದ್ದೇವೆ. ಆದರೆ ಈಗ ನನ್ನ ಸಂಬಂಧಪಟ್ಟವರಿಂದ ನನಗೆ ದುಡ್ಡು ಬಂದಿಲ್ಲ, ನಮ್ಮ ಲೋಕೇಶನ್ ಬಳಸಿಕೊಂಡಿದ್ದೀರಾ ಎಂದು ಪತ್ರ ಬರೆದು ಕಳುಹಿಸಿದ್ದರು ಎಂದು ಹೇಳಿದರು.

    ಶೂಟಿಂಗ್ ಕಡೆ ದಿನ ಅಂದರೆ 95 ಲಕ್ಷ ರೂ. ಕೊಟ್ಟರೆ ಮಾತ್ರ ನಿಮ್ಮ ತಂಡವನ್ನು ಹೊರಗೆ ಕಳುಹಿಸುತ್ತೇನೆ ಎಂದಿದ್ದ ವ್ಯಕ್ತಿ ಕೊನೆ ಕ್ಷಣದಲ್ಲಿ ಅಕೌಂಟ್ ಎಲ್ಲಾ ನೋಡಿ 45 ಲಕ್ಷ ರೂ. ಕೇಳಿದ್ದಾನೆ. ಇದರಿಂದ ನನ್ನ ಅಕೌಂಟೆಂಟ್ ಹೆದರಿ ನನಗೆ ಕರೆ ಮಾಡಿ ಸರ್ ಹಣ ಕಳುಹಿಸಿಕೊಡಿ ಇವರು ನನ್ನ ಬಿಡುತ್ತಿಲ್ಲ ಎಂದು ಹೇಳಿದ್ದಾರೆ. ಆಗ ನಾನು ಜಗ್ಗೇಶ್ ಅವರ ಮುಖಾಂತರ ದೂರು ನೀಡಿ ಅಕೌಂಟೆಂಟ್‍ನನ್ನು ಹಾಗೆ ಕರೆದುಕೊಂಡು ಬಂದೇವು. ನನ್ನ ಲೆಕ್ಕದ ಪ್ರಕಾರ ನಾನು ಅವರಿಗೆ 45 ಲಕ್ಷ ರೂ. ಕೊಡುವಂತಿಲ್ಲ. ಆ ಹಣವನ್ನು ನಾನು ಕೋರ್ಟ್‍ನಲ್ಲಿ ಡೆಪಾಸಿಟ್ ಇಟ್ಟು ಕಾನೂನಿನ ಹೋರಾಟ ಕೈಗೊಳ್ಳುತ್ತೇನೆ. ಆ ಹಣ ಕೊಡುವಂತಿದ್ರೆ ನಾನು ಕೊಡುತ್ತೇನೆ ಎಂದು ಸೂರಪ್ಪ ಸ್ಪಷ್ಟನೆ ನೀಡಿದರು.

  • ಇಬ್ಬರ ಅಲ್ಲ ಒಬ್ಬನೇ- ಕೋಟಿಗೊಬ್ಬ ಟೀಸರ್ ಝಲಕ್‍ನಲ್ಲಿ ಕಿಚ್ಚ ಕಮಾಲ್

    ಇಬ್ಬರ ಅಲ್ಲ ಒಬ್ಬನೇ- ಕೋಟಿಗೊಬ್ಬ ಟೀಸರ್ ಝಲಕ್‍ನಲ್ಲಿ ಕಿಚ್ಚ ಕಮಾಲ್

    ಬೆಂಗಳೂರು: ಚಂದನವನದ ಬಹುನೀರಿಕ್ಷಿತ ಕೋಟಿಗೊಬ್ಬ-3 ಸಿನಿಮಾದ ಟೀಸರ್ ಬಿಡುಗಡೆಗೊಂಡಿದ್ದು, ಕಿಚ್ಚನ್ ಆ್ಯಕ್ಷನ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಆರಂಭದಲ್ಲಿಯೇ ನಟ ರವಿಶಂಕರ್ ಪೊಲೀಸರ ಮುಂದೆ, ಸರ್ ಇಬ್ಬರ ಅಲ್ಲ ಅವನು ಒಬ್ಬನೇ ಎಂದು ಕಿಚ್ಚ ಸುದೀಪ್ ಪಾತ್ರವನ್ನ ವಿಶ್ಲೇಷಣೆ ಮಾಡ್ತಾ ಹೋಗ್ತಾರೆ. ಲೋಕಲ್ ನಲ್ಲಿ ಹೊಡೆದಾಗಲೇ ಹೇಳಿದ್ರೆ ಯಾರು ಕೇಳಲಿಲ್ಲ. ಈಗ ಅವನು ಇಂಟರ್ ನ್ಯಾಷನಲ್ ಕಿಲಾಡಿ. ಅವನ ಟ್ರಿಕ್ಸ್ ನನಗೆ ಗೊತ್ತು. ನೀವು ಅವನನ್ನ ಬಿಟ್ಟರೆ ಮುಂದೆ ಯಾರು ಹಿಡಿಯೋದಕ್ಕೆ ಸಾಧ್ಯನೇ ಇಲ್ಲ ಎಂದು ಹೇಳುವ ದೃಶ್ಯಗಳನ್ನು ಟೀಸರ್ ನಲ್ಲಿ ನೋಡಬಹುದಾಗಿದೆ.

    ರವಿಶಂಕರ್ ಹೇಳುತ್ತಿದ್ದಂತೆ ಮಧ್ಯೆ ಕಿಚ್ಚನ ಮಾಸ್ ಲುಕ್ ನೋಡುಗರನ್ನ ಸೆಳೆಯುತ್ತಿದೆ. ಟೀಸರ್ ನಲ್ಲಿ ಕಿಚ್ಚನ್ ಡೈಲಾಗ್ ಇಲ್ಲದಿದ್ದರೂ, ಫೈಟಿಂಗ್ ದೃಶ್ಯಗಳು ಮಾಸ್ ಆಡಿಯನ್ಸ್ ಸೆಳೆಯುವಲ್ಲಿ ಯಶಸ್ವಿಯಾಗುತ್ತೆ ಎಂಬ ಭರವಸೆಯನ್ನು ಮೂಡಿಸಿದೆ. ಈ ಮೋಷನ್ ಪೋಸ್ಟರ್ ನಲ್ಲಿ ಕನ್ನಡಕದ ಲುಕ್ ಗೆ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಮೊದಲ ಬಾರಿಗೆ ಗಾಂಧಿನಗರಕ್ಕೆ ಬಂದಿರೋ ಅಫ್ತಾಬ್ ಶಿವದಾಸನಿ ಪಾತ್ರವನ್ನು ಟೀಸರ್ ನಲ್ಲಿ ಪರಿಚಯಿಸಲಾಗಿದೆ.

    ಶಿವ ಕಾರ್ತಿಕ್ ನಿರ್ದೇಶನ, ಸೂರಪ್ಪ ಬಾಬು ನಿರ್ಮಾಣದಲ್ಲಿ ಸಿನಿಮಾ ಮೂಡಿಬರುತ್ತಿದೆ. ಮಾಡೋನ ಸೆಬಾಸ್ಟಿಯನ್ ಮತ್ತು ಶ್ರದ್ಧಾ ದಾಸ್ ಕೋಟಿಗೊಬ್ಬನಿಗೆ ನಾಯಕಿಯರಾಗಿದ್ದಾರೆ. ಶಿವರಾತ್ರಿ ಹಬ್ಬಕ್ಕೆ ಕೋಟಿಗೊಬ್ಬ-3 ಸಿನಿಮಾ ತಂಡ ಕಿಚ್ಚನ ಅಭಿಮಾನಿಗಳಿಗೆ ಟೀಸರ್ ರಿಲೀಸ್ ಮಾಡುವ ಮೂಲಕ ಹಬ್ಬದ ಗಿಫ್ಟ್ ನೀಡಿದೆ.