Tag: Koti Raj

  • ಒಲಿಂಪಿಕ್ ಮೆಡಲ್ ಪಡೆಯುವ ತನಕ ನನಗೆ ಏನು ಆಗಲ್ಲ: ಜ್ಯೋತಿರಾಜ್ – ವಿಡಿಯೋ ನೋಡಿ

    ಒಲಿಂಪಿಕ್ ಮೆಡಲ್ ಪಡೆಯುವ ತನಕ ನನಗೆ ಏನು ಆಗಲ್ಲ: ಜ್ಯೋತಿರಾಜ್ – ವಿಡಿಯೋ ನೋಡಿ

    ಶಿವಮೊಗ್ಗ: ಕನ್ನಡಿಗರು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಚಿರಋಣಿ ಎಂದು ಜೋಗ ಜಲಪಾತದ ಬುಡದಲ್ಲಿ ನಾಪತ್ತೆಯಾಗಿದ್ದ ಜ್ಯೋತಿರಾಜ್ ಹೇಳಿದ್ದಾರೆ.

    ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಒಂದು ಕುಟುಂಬದ ನೋವು ನಿವಾರಿಸಲು ನನ್ನ ಕೈಲಾದ ಸಹಾಯ ಮಾಡಲು ಮುಂದಾಗಿದ್ದೆ, ಆದರೆ ಮೃತ ದೇಹದ ಪತ್ತೆ ಮಾಡುವ ವೇಳೆ ನನ್ನ ಕಾಲು ಜಾರಿ ಬಂಡೆಗಳ ನಡುವೆ ಸಿಲುಕಿಕೊಳ್ಳಬೇಕಾಯಿತು. ಆದರೆ ನಾನು ಅಲ್ಲಿಂದ ಮತ್ತೆ ಹತ್ತಿ ಬರಲು ಪ್ರಯತ್ನಿಸಿದೆ ಸದಾ ನೀರು ಹರಿಯುವ ಕಾರಣ ನನ್ನ ಪ್ರಯತ್ನ ವಿಫಲವಾಯಿತು. ಇಂತಹ ಸನ್ನಿವೇಶಗಳನ್ನು ಹೇಗೆ ಎದುರಿಸಬೇಕು ಎಂಬ ಮಾಹಿತಿ ಇದ್ದ ಕಾರಣ ದೇಹಕ್ಕೆ ಹೆಚ್ಚು ಶ್ರಮ ನೀಡದೇ ಬಂಡೆ ಹತ್ತಿಬರಲು ಪ್ರಯತ್ನಿಸಿದೆ ಎಂದರು.

    ಸಂಜೆ ವೇಳೆ ಎಷ್ಟೇ ಪ್ರಯತ್ನಿಸಿದರೂ ಮೇಲೆ ಬರಲು ಸಾಧ್ಯವಾಗಲಿಲ್ಲ, ಅದ್ದರಿಂದ ರಾತ್ರಿ ಪೂರ್ತಿ ಅಲ್ಲಿಯೇ ಉಳಿಯಬೇಕಾಯಿತು. ನನ್ನ ಜೀವನದಲ್ಲಿ ಮೊದಲ ಬಾರಿಗೆ ಇಂತಹ ಅನುಭವ ಆಗಿದೆ. ಕಲ್ಲು ಬಂಡೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೂ ಈ ರೀತಿ ನಡೆಯುವ ಕುರಿತು ಊಹೆ ಮಾಡಿರಲಿಲ್ಲ. ರಕ್ಷಣಾ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ತಿಳಿಸದರು.

    ಇದೇ ವೇಳೆ ನನ್ನ ಯೋಗ ಕ್ಷೇಮದ ಕುರಿತು ಇಷ್ಟು ಪ್ರೀತಿ ತೋರಿದ ಕರ್ನಾಟಕ ಜನತೆಗೆ ಚಿರಋಣಿ ಎಂದ ಅವರು, ಭಾರತಕ್ಕೆ ಒಲಿಂಪಿಕ್ ನಲ್ಲಿ ಪದಕ ತರುವ ತನಕ ನನಗೆ ಏನು ಆಗುವುದಿಲ್ಲ ಎಂದು ಮುಗುಳುನಕ್ಕರು. ಇದನ್ನೂ ಓದಿ: ಜ್ಯೋತಿ ರಾಜ್ ಪತ್ತೆಯಾಗಿದ್ದು ಹೇಗೆ? 

    https://www.youtube.com/watch?v=wzQj6XUCYj0

  • ಸ್ಪೈಡರ್ ಮ್ಯಾನ್ ಖ್ಯಾತಿಯ ಕೋತಿ ರಾಜ್ ಜೋಗದಲ್ಲಿ ನಾಪತ್ತೆ

    ಸ್ಪೈಡರ್ ಮ್ಯಾನ್ ಖ್ಯಾತಿಯ ಕೋತಿ ರಾಜ್ ಜೋಗದಲ್ಲಿ ನಾಪತ್ತೆ

    ಶಿವಮೊಗ್ಗ: ಭಾರತದ ಸ್ಪೈಡರ್ ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ಚಿತ್ರದುರ್ಗದ ಕೋತಿರಾಜ್ ಅಲಿಯಾಸ್ ಜ್ಯೋತಿರಾಜ್ ಜೋಗದಲ್ಲಿ ನಾಪತ್ತೆಯಾಗಿದ್ದಾರೆ.

    ಬೆಂಗಳೂರಿನ ರಾಮಗೊಂಡನಹಳ್ಳಿಯ ಯುವಕ ಜಲಪಾತದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಹಿನ್ನೆಲೆಯಲ್ಲಿ ಮೃತದೇಹದ ಶೋಧಕ್ಕಾಗಿ ಇಳಿದಿದ್ದ ವೇಳೆ ಘಟನೆ ನಡೆದಿದೆ.

    ಜೋಗದ ಬಾಂಬೆ ಐಬಿ ಕಡೆಯಿಂದ ಜಲಪಾತಕ್ಕೆ ಇಳಿದಿದ್ದ ಕೋತಿರಾಜ್ ಮಧ್ಯಾಹ್ನ ಮೂರು ಗಂಟೆಯಿಂದ ನಾಪತ್ತೆಯಾಗಿದ್ದಾರೆ. ಜೊತೆಗಿದ್ದವರಿಗೆ ಇಳಿಜಾರಿನ ಬಂಡೆಗಳಲ್ಲಿ ಇಳಿಯುವ ವೇಳೆ ಕೈಸನ್ನೆ ಮಾಡಿದ ಬಳಿಕ ನಾಪತ್ತೆಯಾಗಿದ್ದಾರೆ.

    ಮೃತ ದೇಹ ಪತ್ತೆ ಮಾಡಲು ಚಿತ್ರದುರ್ಗದಿಂದ ಜ್ಯೋತಿರಾಜ್ ಮತ್ತು ಸಹಚರರನ್ನು ಕರೆಸಲಾಗಿತ್ತು. ಜೋಗ ಪೊಲೀಸರು, ಅಗ್ನಿಶಾಮ ಕದಳ, ಸ್ಥಳೀಯರಿಂದ ಜ್ಯೋತಿರಾಜ್ ಗಾಗಿ ಈಗ ಹುಡುಕಾಟ ನಡೆಯುತ್ತಿದೆ.

     

    https://youtu.be/4nriJLe3cYg