Tag: Kothur Manjunath

  • ಡಿಕೆಶಿಗೆ ಮಾನ, ಮರ್ಯಾದೆ ಇದ್ರೆ ಕೂಡ್ಲೇ ಮಂಜುನಾಥ್ ಉಚ್ಚಾಟಿಸಿ: ಶರಣು ಸಲಗರ್

    ಡಿಕೆಶಿಗೆ ಮಾನ, ಮರ್ಯಾದೆ ಇದ್ರೆ ಕೂಡ್ಲೇ ಮಂಜುನಾಥ್ ಉಚ್ಚಾಟಿಸಿ: ಶರಣು ಸಲಗರ್

    ಬೀದರ್: ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಮಾನ, ಮರ್ಯಾದೆ ಇದ್ರೆ ಕೂಡಲೇ ಮಂಜುನಾಥರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಬಿಜೆಪಿ ಶಾಸಕ ಶರಣು ಸಲಗರ್(Sharanu Salagar) ಕಿಡಿಕಾರಿದರು.

    ಬೀದರ್‌ನಲ್ಲಿ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್(Kothur Manjunath) ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆಪರೇಷನ್ ಸಿಂಧೂರ(Operation Sindoor) ಬಗ್ಗೆ ರೈತರು, ಕೂಲಿ ಕಾರ್ಮಿಕರು ಎಲ್ಲರಿಗೂ ಸಂತೋಷವಿದೆ. ಉಗ್ರವಾದವನ್ನ ಬುಡ ಸಮೇತ ಕಿತ್ತು ಹಾಕುವ ಕೆಲಸವನ್ನು ಆಪರೇಷನ್ ಸಿಂಧೂರ ಮಾಡಿದೆ ಎಂದರು. ಇದನ್ನೂ ಓದಿ: ಕೊತ್ತೂರು ಮಂಜುನಾಥ್ ಅಬ್‌ನಾರ್ಮಲ್ ಪರ್ಸನ್, ಕಾಂಗ್ರೆಸ್ ಸಸ್ಪೆಂಡ್ ಮಾಡ್ಬೇಕು: ಎನ್.ಮಹೇಶ್ ಆಗ್ರಹ

    ಕಾಂಗ್ರೆಸ್ ಶಾಸಕರು ಮೂರ್ಖತನದ ಹೇಳಿಕೆ ಕೊಡುತ್ತಿದ್ದು, ಕಾಂಗ್ರೆಸ್‌ನ(Congress) ಮುಖವಾಡ ಕಳಚುತ್ತಿದೆ. ಇದು ಕೇವಲ ಶಾಸಕನ ಮಾತಲ್ಲ, ಇಡೀ ಕಾಂಗ್ರೆಸ್ ಪಕ್ಷದ ಹೇಳಿಕೆ. ಯಾಕಂದ್ರೆ, ಇದು ರಾಷ್ಟ್ರ ಕಟ್ಟುವ ಕೆಲಸವಾಗಿದ್ದು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಸರ್ಕಾರ ಗಟ್ಟಿ ನಿರ್ಧಾರ ಕೈಗೊಳ್ಳುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಪಾಕ್‌, ಉಗ್ರರ ಮೇಲೆ ಕಣ್ಣು – ನಾಳೆ ಭಾರತದ ಬೇಹುಗಾರಿಕಾ ಉಪಗ್ರಹ ಉಡಾವಣೆ!

    ಮುರ್ಖತನ, ದೇಶದ್ರೋಹದ ಹೇಳಿಕೆ ಕೊಟ್ಟಿರುವ ಕೊತ್ತೂರು ಮಂಜುನಾಥ್ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಂತಹ ದೇಶದ್ರೋಹಿ ಶಾಸಕರನ್ನ ಅಧಿವೇಶನದೊಳಗೆ ಕಾಲಿಡಲು ಬಿಡಲ್ಲ ಎಂದು ಆಕ್ರೋಶ ಹೊರಹಾಕಿದರು.

    ಕಾಂಗ್ರೆಸ್ ನಾಯಕರು ಆಪರೇಷನ್ ಸಿಂಧೂರ ಬಗ್ಗೆ ಸಾಕ್ಷಿ ಕೇಳುತ್ತಿರುವ ವಿಚಾರವಾಗಿ ಮಾತನಾಡಿ, ಯುದ್ಧ ಮಾಡಬೇಕಾದ್ರೆ ಇವರೆಲ್ಲರಿಗೂ ಲೈವ್ ತೋರಿಸಿ ಯುದ್ಧ ಮಾಡೋಕೆ ಆಗಲ್ಲ. ಪ್ರಿಯಾಂಕ್ ಖರ್ಗೆಯವರ ಹೇಳಿಕೆಯಲ್ಲ ಇಡೀ ಕಾಂಗ್ರೆಸ್ ಹೇಳಿಕೆಯಾಗಿದೆ. ಪ್ರಿಯಾಂಕ್ ಖರ್ಗೆಯವರಿಗೆ ನಾಲಿಗೆಯ ಮೇಲೆ ಹಿಡಿತವಿರಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಪಾಕಿಸ್ತಾನ ಜಿಂದಾಬಾದ್ ಕೂಗೋ ಮನಸ್ಥಿತಿ ಇರೋರನ್ನ ಸಂಸತ್ ನಿಯೋಗದಲ್ಲಿ ಸೇರಿಸಬೇಕಾ: ಕರಂದ್ಲಾಜೆ

    ಇದು ಸಿಂಧೂರ ಅಷ್ಟೇ, ಕೆಲವೇ ದಿನಗಳಲ್ಲಿ ಆಪರೇಷನ್ ಸಂಹಾರ ಮಾಡಲಾಗುತ್ತದೆ. ನನಗೂ ಆದೇಶ ಬಂದ್ರೆ ಗನ್ ಹಿಡಿದು ಯುದ್ಧಕ್ಕೆ ಹೋಗ್ತೀನಿ. ನನಗೆ ಯಾವುದೇ ತರಬೇತಿ ಬೇಡ. ಅನುಮತಿ ಕೊಟ್ರೆ ಪಾಕಿಸ್ತಾನ ವಿರುದ್ಧ ಮುಗಿ ಬೀಳುತ್ತೇವೆ ಎಂದು ಹೇಳಿದರು.

  • ಕೊತ್ತೂರು ಮಂಜುನಾಥ್ ಅನುಮಾನ ಸೇನೆ ಬಗ್ಗೆ ಅಲ್ಲ, ಬಿಜೆಪಿ ನಾಯಕರ ಬಗ್ಗೆ: ರಾಮಲಿಂಗಾ ರೆಡ್ಡಿ

    ಕೊತ್ತೂರು ಮಂಜುನಾಥ್ ಅನುಮಾನ ಸೇನೆ ಬಗ್ಗೆ ಅಲ್ಲ, ಬಿಜೆಪಿ ನಾಯಕರ ಬಗ್ಗೆ: ರಾಮಲಿಂಗಾ ರೆಡ್ಡಿ

    ರಾಮನಗರ: ಮಂಜುನಾಥ್‌ಗೆ (Kothur Manjunath) ಸೈನ್ಯದ ಬಗ್ಗೆ ವಿಶ್ವಾಸ ಇದೆ. ಸೈನ್ಯಕ್ಕೆ ಇನ್ನೂ ಫ್ರೀಹ್ಯಾಂಡ್ ಕೊಟ್ಟಿದ್ರೆ ಪಾಕಿಸ್ತಾನಕ್ಕೆ ಮತ್ತಷ್ಟು ಬುದ್ದಿ ಕಲಿಸಬಹುದಿತ್ತು ಎನ್ನುವುದು ಅವರ ಅಭಿಪ್ರಾಯ. ಅವರು ಬಿಜೆಪಿ (BJP) ನಾಯಕರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ ಹೊರತು ಸೈನ್ಯದ ಬಗ್ಗೆ ಅಲ್ಲ ಎಂದು ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy)  ಹೇಳಿದ್ದಾರೆ.

     

    ಆಪರೇಷನ್ ಸಿಂಧೂರ (Operation Sindoor) ಬಗ್ಗೆ ಶಾಸಕ ಕೊತ್ತೂರು ಮಂಜುನಾಥ್ ಅನುಮಾನ ವ್ಯಕ್ತಪಡಿಸಿದ ವಿಚಾರದ ಕುರಿತು ರಾಮನಗರದಲ್ಲಿ ಮಾತನಾಡಿದ ಅವರು, ಕೊತ್ತೂರು ಮಂಜುನಾಥ್ ಪಕ್ಕಾ ದೇಶಾಭಿಮಾನಿ. ಸೈನ್ಯದ ಬಗ್ಗೆ ಅವರು ತಪ್ಪು ಮಾತನಾಡಿಲ್ಲ. ಸೈನಿಕರ ಬಗ್ಗೆ ಕಾಂಗ್ರೆಸ್ ಯಾವತ್ತೂ ಅಪಮಾನ ಮಾಡಲ್ಲ. ಕಾಂಗ್ರೆಸ್ ಪಕ್ಷ ಸ್ವಾತಂತ್ರ‍್ಯ ಹೋರಾಟ ಮಾಡಿದ ಪಕ್ಷ. ಬಿಜೆಪಿಯವರು ಬೇಕಾದರೆ ಸೈನಿಕರಿಗೆ ಅಪಮಾನ ಮಾಡಬಹುದು ಆದರೆ ಕಾಂಗ್ರೆಸ್ ಮಾಡಲ್ಲ. ಸೇನಾ ಮುಖ್ಯಸ್ಥರು ಹೇಳಿರೋದನ್ನ ನಾವು ನಂಬುತ್ತೇವೆ ಹೊರತು ಬಿಜೆಪಿಗರ ಮಾತು ನಂಬಲ್ಲ ಎಂದು ಕೊತ್ತೂರು ಮಂಜುನಾಥ್ ಹೇಳಿಕೆಯನ್ನ ಸಮರ್ಥನೆ ಮಾಡಿಕೊಂಡರು. ಇದನ್ನೂ ಓದಿ: ಪಾಕ್‌ ಏಜೆಂಟರ ರೀತಿ ಕಾಂಗ್ರೆಸ್ ನಾಯಕರು ಮಾತಾಡ್ತಿದ್ದಾರೆ: ರವಿಕುಮಾರ್ ಕಿಡಿ

    ಬಮೂಲ್ ನಿರ್ದೇಶಕ ಸ್ಥಾನಕ್ಕೆ ಮಾಜಿ ಸಂಸದ ಡಿ.ಕೆ.ಸುರೇಶ್ ಸ್ಪರ್ಧೆ ಮಾಡಿರುವ ವಿಚಾರದ ಕುರಿತು ಮಾತನಾಡಿದ ಅವರು, ಇಂದು ಡಿ.ಕೆ ಸುರೇಶ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅವರು ಎಲ್ಲಾ ಸ್ಥಾನಕ್ಕೂ ಅರ್ಹವಾಗಿದ್ದಾರೆ. ಲೋಕಸಭಾ ಸದಸ್ಯರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರು ಬಯಸಿದರೆ ಯಾವ ಸ್ಥಾನ ಬೇಕಾದರೂ ಅವರಿಗೆ ಸಿಗುತ್ತಿತ್ತು. ಆದರೆ ಅವರು ಯಾವ ಸ್ಥಾನವನ್ನೂ ಕೇಳಿರಲಿಲ್ಲ. ಈಗ ಬಮೂಲ್‌ಗೆ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಪಾಕ್‌ ವಿರುದ್ಧ ‘ಬ್ರಹ್ಮೋಸ್‌’ ಪರಾಕ್ರಮ – ಬ್ರಹ್ಮೋಸ್‌ ಕ್ಷಿಪಣಿಗಾಗಿ 18 ರಾಷ್ಟ್ರಗಳಿಂದ ಬೇಡಿಕೆ

  • ಪಾಕ್‌ ಏಜೆಂಟರ ರೀತಿ ಕಾಂಗ್ರೆಸ್ ನಾಯಕರು ಮಾತಾಡ್ತಿದ್ದಾರೆ: ರವಿಕುಮಾರ್ ಕಿಡಿ

    ಪಾಕ್‌ ಏಜೆಂಟರ ರೀತಿ ಕಾಂಗ್ರೆಸ್ ನಾಯಕರು ಮಾತಾಡ್ತಿದ್ದಾರೆ: ರವಿಕುಮಾರ್ ಕಿಡಿ

    ಬೆಂಗಳೂರು: ಭಾರತ ಹಾಗೂ ಭಾರತೀಯ ಸೇನೆಯ ವಿರುದ್ಧ ಕಾಂಗ್ರೆಸ್ (Congress) ನಾಯಕರು ಪಾಕಿಸ್ತಾನದ (Pakistan) ಏಜೆಂಟ್ ‌ರೀತಿ ವರ್ತನೆ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ಸಚೇತಕ ರವಿಕುಮಾರ್ (N.Ravikumar) ವಾಗ್ದಾಳಿ ನಡೆಸಿದ್ದಾರೆ.

    ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ (Kothur Manjunath), ಸಚಿವ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ದಿನೇಶ್ ಗುಂಡೂರಾವ್ ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು. ಈ ವೇಳೆ, ಪಾಕಿಸ್ತಾನ ಪರವಾದ ವಕ್ತಾರರು ರಾಜ್ಯದಲ್ಲಿ ಜಾಸ್ತಿ ಆಗಿದ್ದಾರೆ. ಮಂಜುನಾಥ್, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ ಪಾಕ್ ವಕ್ತಾರರು. ಪಾಕಿಸ್ತಾನದವರು ಮಾತಾಡಿದ ರೀತಿ ಮಾತಾಡ್ತಿದ್ದಾರೆ. ಪಾಕಿಸ್ತಾನವೇ ಭಾರತ‌ ದಾಳಿ ಒಪ್ಪಿಕೊಂಡಿದೆ.‌ ಉಗ್ರರ ಹತ್ಯೆ ಆಗಿದ್ದಕ್ಕೆ ಅವರ ಕುಟುಂಬಕ್ಕೆ ಪಾಕ್‌ ಸರ್ಕಾರ ಹಣ ಕೊಟ್ಟಿದೆ‌. ಮಂಜುನಾಥ್ ಅವರು ಸಾಕ್ಷಿ ಕೇಳ್ತಾರೆ. ಪ್ರಿಯಾಂಕ್ ಖರ್ಗೆ ಯಾರನ್ನ ನಂಬಬೇಕು ಅಂತ ಕೇಳ್ತಾರೆ. ಖರ್ಗೆ ಅವರೇ ನೀವು ಭಾರತದವರನ್ನ ನಂಬುತ್ತಾರಾ ಪಾಕಿಸ್ತಾನವನ್ನ ನಂಬುತ್ತಿರಾ? ನಿಮ್ಮ ಮಾತು ಕೇಳಿದ್ರೆ ಪಾಕಿಸ್ತಾನ ಪರ ಇದ್ದಂತೆ ಆಗ್ತಿದೆ.ಪ್ರಿಯಾಂಕ್ ಖರ್ಗೆ ಮಾತು ಕೇಳಿ ಕ್ಷೇತ್ರದ ಮತದಾರರೇ ಮತ ಹಾಕಿ ತಪ್ಪು ಮಾಡಿದ್ದೇವೆ ಅಂತಿದ್ದಾರೆ ಅನಿಸುತ್ತಿದೆ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಕಾಂಗ್ರೆಸ್‌ನವ್ರಿಗೆ ಪಾಕ್‌ ಫ್ರೀ ವೀಸಾ ಕೊಡುತ್ತೆ, ಮಂಜುನಾಥ್ ನೋಡ್ಕೊಂಡು ಬರಲಿ: ಯತ್ನಾಳ್ ಕಿಡಿ

    ಕಾಂಗ್ರೆಸ್ ವಿಪಕ್ಷವಾಗಿ ಟೀಕೆ ಮಾಡಿ, ಆದರೆ ಸೈನಿಕರನ್ನ ಬಲಿಕೊಟ್ಟು ಟೀಕೆ ಮಾಡಬೇಡಿ. ದೇಶಕ್ಕೆ ಸೈನಿಕರು ಹುತಾತ್ಮರಾಗಿದ್ದಾರೆ. ಇದು ಕಾಂಗ್ರೆಸ್ ನಾಯಕರು, ಸಚಿವರಿಗೆ ಗೊತ್ತಿಲ್ಲವಾ? ಇವರಿಗೆ ಇತಿಹಾಸ ಗೊತ್ತಿಲ್ಲ. ಮಂಜುನಾಥ್ ಇತಿಹಾಸ ಗೊತ್ತಾ? ಅಡಿ ಜಮೀನಿಗೆ ಎಷ್ಟು ಅಂತ ಮಾತ್ರ ಗೊತ್ತು ಇವರಿಗೆ. ಗೊತ್ತಿಲ್ಲ ಎಂದರೆ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಹೇಗಿದೆ ಅಂತ ತೋರಿಸೋಕೆ ಕಳಿಸ್ತೀವಿ ಹೋಗಿ ಬನ್ನಿ. ಮತ ಬ್ಯಾಂಕ್‌ಗೆ ಹೀಗೆ ಪಾಕಿಸ್ತಾನ ಪರವಾಗಿ ಗುಲಾಮಿ ತರ ವರ್ತನೆ ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

    ಪ್ರಿಯಾಂಕ್ ಖರ್ಗೆ ಬಗ್ಗೆ ಅವರ ತಂದೆ ವ್ಯಥೆ ಪಡುತ್ತಿದ್ದಾರೆ ಅನ್ನಿಸುತ್ತೆ. ಮರಿ ಖರ್ಗೆ ಅವರೇ ದೇಶಕ್ಕೆ ಅಪಮಾನ ‌ಮಾಡ್ತಿದ್ದೀರಾ. ಸಂತೋಷ್ ಲಾಡ್ ಅವರಿಗೆ ಸಚಿವ ಸ್ಥಾನದಿಂದ ತೆಗೆಯುತ್ತಾರೆ ಎಂಬ ಭಯ ಇರಬಹುದು. ಅದಕೋಸ್ಕರ ಅವರು ಪಾಕಿಸ್ತಾನ ಪರ ಮಾತಾಡ್ತಿದ್ದಾರೆ. ನಿಮಗೇನು ಅವಾರ್ಡ್ ಸಿಗೊಲ್ಲ. ನಿಮ್ಮನ್ನ ಡಿಸಿಎಂ ಆಗಿ ಮಾಡೋದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

    ಸಾಧನ ಸಮಾವೇಶ ಮಾಡೋಕೆ ಹೊರಟಿದ್ದಾರೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿರೋಕೆ ಸಾಧನೆ ಸಮಾವೇಶನಾ? PFI ಅವರ ಮೇಲಿನ ಕೇಸ್ ತೆಗೆದಿದ್ದಕ್ಕೆ ಸಾಧನೆ ಸಮಾವೇಶನಾ? ನಿಮ್ಮ ಸಾಧನೆ ಏನಿದೆ? ಎಷ್ಟು ಅಭಿವೃದ್ಧಿ ಆಗಿದೆ ಹೇಳಿ. ಗ್ಯಾರಂಟಿ ಗ್ಯಾರಂಟಿ ಅಂತೀರಾ ಏನ್ ಗ್ಯಾರಂಟಿ. ಭಯೋತ್ಪಾದಕರ ಕೇಸ್ ತೆಗೆದಿದ್ದು ಗ್ಯಾರಂಟಿನಾ? ಲಾಡ್, ಖರ್ಗೆ, ದಿನೇಶ್ ಗುಂಡೂರಾವ್ ಅವರೇ ನಿಮ್ಮ ಸರ್ಕಾರದ ಅಭಿವೃದ್ಧಿ ಬಗ್ಗೆ ಮಾತಾಡಿ. ಯಾಕೆ ಮೋದಿ ವಿರುದ್ಧ ಮಾತಾಡ್ತೀರಾ? ಪಾಕಿಸ್ತಾನ ಪರವಾದ ಗುಲಾಮಿ ತನ ಒಳ್ಳೆಯದಲ್ಲ ಎಂದಿದ್ದಾರೆ.

    ಕಾಂಗ್ರೆಸ್ ಹೈಕಮಾಂಡ್ ‌ಇದ್ದರೆ ಸೇನೆ ಬಗ್ಗೆ ಮಾತಾಡಿರೋದರ ಬಗ್ಗೆ ತನಿಖೆ ಮಾಡಲಿ. ಯಾವ ರೋಗ ಬಂದಿದೆ ಅಂತ ತನಿಖೆ ಮಾಡಲಿ. ಟ್ರಂಪ್ ಹೇಳಿದ್ದು, ಪಾಕಿಸ್ತಾನ ಪ್ರಧಾನಿ ಹೇಳಿದ್ದೇ ನಿಜನಾ? ಮೋದಿ ಹೇಳೋದು ನಂಬೊಲ್ಲವಾ? ನಾಚಿಕೆ ಆಗ್ಬೇಕು ಕಾಂಗ್ರೆಸ್‌ಗೆ. ಕಾಂಗ್ರೆಸ್‌ನ ದಡ್ಡತನದ ವರ್ತನೆ ಇದು. ಕಾಂಗ್ರೆಸ್‌ಗೆ ರೋಗ ಬಂದಿದೆ. ಬಿಜೆಪಿಯನ್ನು ಟೀಕೆ ಮಾಡೋ ಭರದಲ್ಲಿ ಸೇನೆಯನ್ನ ಹೀಯಾಳಿಸೋದು, ಸೈನಿಕರನ್ನ ಕುಗ್ಗಿಸೋದು ಸರಿಯಲ್ಲ. ರಾಹುಲ್ ಗಾಂಧಿ ಭಾರತದ ಬಗ್ಗೆ ಟೀಕೆ ಮಾಡ್ತಿದ್ದಾರೆ. ಕಾಂಗ್ರೆಸ್‌ನವರು ಹೀಗೆ ಮಾತಾಡೋದು ನೋಡಿದ್ರೆ ಕಾಂಗ್ರೆಸ್ ‌ಪಾಕಿಸ್ತಾನದ ರೂಲಿಂಗ್ ಪಾರ್ಟಿ ಏಜೆಂಟ್ ಆಗಿದೆ. ಮಿತ್ರ ಪಕ್ಷ ಆಗಿದೆ ಅಥವಾ ಪಾಕಿಸ್ತಾನದ ರೂಲಿಂಗ್ ಪಾರ್ಟಿ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆಯೇ ಎಂದು ಪ್ರಶ್ನಿಸಿದ್ದಾರೆ.

    ಭಯೋತ್ಪಾದಕರನ್ನು ಸೇನೆ ಹೊಡೆದು ಹಾಕಿದೆ. ಸೇನೆ ನಿರ್ಧಾರ ಮಾಡಿದೆ ಅವರಿಗೆ ಬಿಡಿ. ಇಂದಿರಾಗಾಂಧಿ ತರಹ ಶಿಮ್ಲಾ ಒಪ್ಪಂದವನ್ನು ಮಾಡಿದ ರೀತಿ ಮೋದಿಯವರು ಮಾಡೋದಿಲ್ಲ. ರಾಹುಲ್ ಗಾಂಧಿ ರೀತಿ ದೇಶಕ್ಕೆ ಅಪಕೀರ್ತಿ ತರುವ ಕೆಲಸವನ್ನು ಮೋದಿ ಮಾಡೋದಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಸರ್ವಪಕ್ಷ ನಿಯೋಗ – ಕಾಂಗ್ರೆಸ್‌ ಕೊಟ್ಟ 4 ಹೆಸರು ಬಿಟ್ಟು ಶಶಿ ತರೂರ್‌ ಆಯ್ಕೆಮಾಡಿದ ಕೇಂದ್ರ!

  • ಕಾಂಗ್ರೆಸ್‌ನವ್ರಿಗೆ ಪಾಕ್‌ ಫ್ರೀ ವೀಸಾ ಕೊಡುತ್ತೆ, ಮಂಜುನಾಥ್ ನೋಡ್ಕೊಂಡು ಬರಲಿ: ಯತ್ನಾಳ್ ಕಿಡಿ

    ಕಾಂಗ್ರೆಸ್‌ನವ್ರಿಗೆ ಪಾಕ್‌ ಫ್ರೀ ವೀಸಾ ಕೊಡುತ್ತೆ, ಮಂಜುನಾಥ್ ನೋಡ್ಕೊಂಡು ಬರಲಿ: ಯತ್ನಾಳ್ ಕಿಡಿ

    ದಾವಣಗೆರೆ: ಕಾಂಗ್ರೆಸ್‍ನವರಿಗೆ (Congress) ಪಾಕಿಸ್ತಾನದವರು ಫ್ರೀ ವೀಸಾ ಕೊಡ್ತಾರೆ, ಶಾಸಕ ಕೊತ್ತೂರು ಮಂಜುನಾಥ್ (Kothur Manjunath) ಹೋಗಿ ಭಾರತೀಯ ಸೇನೆ ದಾಳಿ ನಡೆಸಿದ ಜಾಗಗಳನ್ನು ನೋಡಿಕೊಂಡು ಬರಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಕಿಡಿಕಾರಿದ್ದಾರೆ.

    ದಾವಣಗೆರೆಯಲ್ಲಿ (Davanagere) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಕೊತ್ತೂರು ಮಂಜುನಾಥ್ ಅವರು, ಆಪರೇಷನ್ ಸಿಂಧೂರದ ಬಗ್ಗೆ ಲೇವಡಿ ಮಾಡಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಶಾಸಕರಿಗೆ ಅನುಮಾನ ಇದ್ದರೆ ಪ್ಲೈಟ್‍ನಲ್ಲಿ ಹೋಗಿ ನೋಡಿಕೊಂಡು ಬರಲಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬೂಟಾಟಿಕೆಗೆ 4 ಫ್ಲೈಟ್ ಕಳಿಸಿದ್ದು ಬಿಟ್ರೆ ಏನೂ ಮಾಡಿಲ್ಲ; `ಆಪರೇಷನ್‌ ಸಿಂಧೂರ’ ಕುರಿತು ಕಾಂಗ್ರೆಸ್‌ ಶಾಸಕ ಲೇವಡಿ

    ಪಾಕಿಸ್ತಾನದ ಹೀರೋ ಎಂದರೆ ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ, ಕಾಂಗ್ರೆಸ್‍ನವರಿಗೆ ಪಾಕಿಸ್ತಾನದಿಂದ ಫ್ರೀ ವೀಸಾ ಸಿಗುತ್ತದೆ. ಹೋಗಿ ಎಲ್ಲೆಲ್ಲಿ ಉಗ್ರರ ಕ್ಯಾಂಪ್ ಮೇಲೆ ದಾಳಿಯಾಗಿದೆ ಎಂದು ನೋಡಿಕೊಂಡು ಬರಲಿ. ಈ ರೀತಿ ಸೈನಿಕರ ವಿಚಾರವಾಗಿ ಮಾತನಾಡೋದು ಸರಿಯಲ್ಲ ಎಂದಿದ್ದಾರೆ.

    ಕೋಲಾರದಲ್ಲಿ ಮಾತನಾಡಿದ್ದ ಶಾಸಕ ಕೊತ್ತೂರು ಮಂಜುನಾಥ್‌, ಕೇಂದ್ರ ಸರ್ಕಾರ ಬೂಟಾಟಿಕೆಗೆ ನಾಲ್ಕು ಫ್ಲೈಟ್ ಮೇಲೆ ಕಳಿಸಿದ್ದು ಬಿಟ್ರೆ ಏನೂ ಮಾಡಿಲ್ಲ ಎಂದು ಲೇವಡಿ ಮಾಡಿದ್ದರು. 26 ಜನ ಮಹಿಳೆಯರ ಅರಿಶಿನ ಕುಂಕುಮಕ್ಕೆ ಬೆಲೆ ಇಷ್ಟೆನಾ? ಆ ಹೆಣ್ಣು ಮಕ್ಕಳಿಗೆ ಸಿಕ್ಕ ಪರಿಹಾರ ಇದೇನಾ? ಅಂತ ಬೇಸರ ವ್ಯಕ್ತಪಡಿಸಿದ್ದರು. ಸಾಮಾನ್ಯ ಪ್ರಜೆಗಳ ಮೇಲೆ ಯುದ್ಧ ಮಾಡೋದಕ್ಕೆ ನಮ್ಮ ವಿರೋಧವಿದೆ. ಆದ್ರೆ ನಮ್ಮ ದೇಶದೊಳಗೆ ಬಂದು ಪತ್ನಿಯರ ಎದುರೇ ಪತಿಯನ್ನ ಹೊಡೆದ್ರೆ ಹೇಗೆ ಸಹಿಸೋದು? ಆ ಹೆಣ್ಣು ಮಕ್ಕಳು ಗಟ್ಟಿಯಾಗಿರೋದಕ್ಕೆ ಪರವಾಗಿಲ್ಲ. ಇಲ್ಲಾ ಅಂದ್ರೆ ಹಾರ್ಟ್ ಅಟ್ಯಾಕ್ ಆಗಿ ಸಾಯಬೇಕಿತ್ತು. ಅಂತಹದಕ್ಕೆ ಪರಿಹಾರ ಇದಲ್ಲ, ಬೇರಿಂದ ಕೊಂಬೆ ತನಕ ಎಲ್ಲವನ್ನ ಹೊಡಿಯಬೇಕು. ಭಾರತಕ್ಕೆ ಒಳ್ಳೆಯ ಅವಕಾಶ ಇತ್ತು. ಆದ್ರೆ ಏನೂ ಮಾಡಿಲ್ಲ ಅನ್ನೋದು ಬೇಸರ ತಂದಿದೆ ಎಂದಿದ್ದರು.

    ಈ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಆಪರೇಷನ್ ಸಿಂಧೂರ ಸಮಾಧಾನ ತಂದಿಲ್ಲ ಅಂದಿದ್ದು, ಸೇನೆ ಬಗ್ಗೆ ಹಗುರವಾಗಿ ಮಾತಾಡಿಲ್ಲ ಎಂದು ಮಂಜುನಾಥ್ ಸ್ಪಷ್ಟನೆ ನೀಡಿದ್ದರು. ಇದನ್ನೂ ಓದಿ: ಆಪರೇಷನ್ ಸಿಂಧೂರ ಸಮಾಧಾನ ತಂದಿಲ್ಲ ಅಂದಿದ್ದು, ಸೇನೆ ಬಗ್ಗೆ ಹಗುರವಾಗಿ ಮಾತಾಡಿಲ್ಲ: ಮಂಜುನಾಥ್ ಸ್ಪಷ್ಟನೆ

  • ಆಪರೇಷನ್ ಸಿಂಧೂರ ಸಮಾಧಾನ ತಂದಿಲ್ಲ ಅಂದಿದ್ದು, ಸೇನೆ ಬಗ್ಗೆ ಹಗುರವಾಗಿ ಮಾತಾಡಿಲ್ಲ: ಮಂಜುನಾಥ್ ಸ್ಪಷ್ಟನೆ

    ಆಪರೇಷನ್ ಸಿಂಧೂರ ಸಮಾಧಾನ ತಂದಿಲ್ಲ ಅಂದಿದ್ದು, ಸೇನೆ ಬಗ್ಗೆ ಹಗುರವಾಗಿ ಮಾತಾಡಿಲ್ಲ: ಮಂಜುನಾಥ್ ಸ್ಪಷ್ಟನೆ

    ಕೋಲಾರ: ಆಪರೇಷನ್ ಸಿಂಧೂರದ(Operation Sindoor) ಹಾಗೂ ಸೇನೆ ಬಗ್ಗೆ ಹಗುರವಾಗಿ ಮಾತನಾಡಿದಲ್ಲ. ಆಪರೇಷನ್ ಸಿಂಧೂರ ಯಾರಿಗೂ ಸಮಾಧಾನ ತಂದಿಲ್ಲ ಎಂದು ಹೇಳಿದ್ದು ಎಂದು ಶಾಸಕ ಕೊತ್ತೂರು ಮಂಜುನಾಥ್(Kothur Manjunath) ಸ್ಪಷ್ಟನೆ ನೀಡಿದರು.

    ಕೋಲಾರದಲ್ಲಿ(Kolar) ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಾರ್ವಜನಿಕರು ಸೇರಿ ಬಿಜೆಪಿ ನಾಯಕರಿಗೂ ಇದು ಸಮಧಾನ ಇಲ್ಲ. ಸಾರ್ವಜನಿಕರ ಮುಂದೆಯೇ ಉಗ್ರರನ್ನ ನೆಲಸಮ ಮಾಡಬೇಕು ಅನ್ನೋದು ನಮ್ಮ ಉದ್ದೇಶ ಎಂದರು. ಇದನ್ನೂ ಓದಿ: ಇಡೀ ದೇಶ, ಸೇನೆ, ಸೈನಿಕರು ಮೋದಿ ಪಾದಗಳಿಗೆ ನಮಸ್ಕರಿಸುತ್ತಾರೆ: ಡಿಸಿಎಂ ವಿವಾದಾತ್ಮಕ ಹೇಳಿಕೆ

    ಪಹಲ್ಗಾಮ್‌ಗೆ ಬಂದು ನಮ್ಮ ಹೆಣ್ಣುಮಕ್ಕಳ ಮುಂದೆ ದಾಳಿ ಮಾಡ್ತಾರೆ ಎಂದರೆ ಹೇಗೆ. ನಮ್ಮ ಸೇನೆ ಬಲಿಷ್ಟವಾಗಿದೆ ಎಂಬುದು ಆಪರೇಷನ್ ಸಿಂಧೂರದಿಂದ ತಿಳಿದಿದೆ. ಇಂತಹ ಶಕ್ತಿವಂತ ದೇಶದ ಮೇಲೆ ಪದೇಪದೇ ದಾಳಿಗಳಾಗುತ್ತವೆ ಎಂದರೆ ಅದು ಹೇಗೆ ಸಾಧ್ಯ. ಅದಕ್ಕೆ ಸೇನೆಗೆ ಫ್ರೀ ಹ್ಯಾಂಡ್ ಕೊಡಬೇಕು ಎಂದು ಹೇಳಿದರು. ಇದನ್ನೂ ಓದಿ: ಟರ್ಕಿಗೆ ಬೆಂಗಳೂರು ಶಾಕ್‌ – ಸೆಲೆಬಿ ಏವಿಯೇಷನ್‌ ಏರ್‌ಪೋರ್ಟ್‌ ಸೇವೆ ಸ್ಥಗಿತ

    ಪಹಲ್ಗಾಮ್ ದಾಳಿಗೆ(Pahalgam Attack) ಕಾರಣರಾದ ಉಗ್ರಗಾಮಿಗಳನ್ನ ಹೊಡೆಯಬೇಕು. ಇಲ್ಲಿರುವ ಉಗ್ರರನ್ನ ಮೊದಲಿಗೆ ಹೊಡೆಯಬೇಕು. ಆದರೆ ಎಲ್ಲೋ ಹೊಡೆದಿದ್ದೇವೆ ಅನ್ನೋದೆ ನಮಗೆ ಬೇಸರ. ನಮ್ಮ ನಿರೀಕ್ಷೆ ಹುಸಿಯಾಗಿದೆ. ಮತ್ತಷ್ಟು ದಾಳಿಯ ನಿರೀಕ್ಷೆ ಇತ್ತು ಎಂದರು.

  • ಬೂಟಾಟಿಕೆಗೆ 4 ಫ್ಲೈಟ್ ಕಳಿಸಿದ್ದು ಬಿಟ್ರೆ ಏನೂ ಮಾಡಿಲ್ಲ; `ಆಪರೇಷನ್‌ ಸಿಂಧೂರ’ ಕುರಿತು ಕಾಂಗ್ರೆಸ್‌ ಶಾಸಕ ಲೇವಡಿ

    ಬೂಟಾಟಿಕೆಗೆ 4 ಫ್ಲೈಟ್ ಕಳಿಸಿದ್ದು ಬಿಟ್ರೆ ಏನೂ ಮಾಡಿಲ್ಲ; `ಆಪರೇಷನ್‌ ಸಿಂಧೂರ’ ಕುರಿತು ಕಾಂಗ್ರೆಸ್‌ ಶಾಸಕ ಲೇವಡಿ

    – ಪ್ಲ್ಯಾನ್‌ ಮಾಡಿ ಉಗ್ರರನ್ನ ದೇಶದೊಳಗೆ ಬಿಟ್ಟುಕೊಂಡ್ರಾ? – ಕೊತ್ತೂರು ಮಂಜುನಾಥ್‌ ಪ್ರಶ್ನೆ
    – 100 ಉಗ್ರರನ್ನ ಹೊಡೆದಿದ್ದಾರೆ ಅನ್ನೋದು ಎಲ್ಲೂ ಕನ್‌ಫರ್ಮ್‌ ಆಗಿಲ್ಲ ಅಂತ ಟೀಕೆ

    ಕೋಲಾರ: ಕೇಂದ್ರ ಸರ್ಕಾರ ಬೂಟಾಟಿಕೆಗೆ ನಾಲ್ಕು ಫ್ಲೈಟ್ ಮೇಲೆ ಕಳಿಸಿದ್ದು ಬಿಟ್ರೆ ಏನೂ ಮಾಡಿಲ್ಲ ಎಂದು ʻಆಪರೇಷನ್‌ ಸಿಂಧೂರʼ (Operation Sindoor) ಕುರಿತು ಕಾಂಗ್ರೆಸ್‌ ಶಾಸಕ ಕೊತ್ತೂರು ಮಂಜುನಾಥ್‌ (Kothur Manjunath) ಲೇವಡಿ ಮಾಡಿದ್ದಾರೆ.

    ಕೋಲಾರದಲ್ಲಿ (Kolara) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 26 ಜನ ಮಹಿಳೆಯರ ಅರಿಶಿನ ಕುಂಕುಮಕ್ಕೆ ಬೆಲೆ ಇಷ್ಟೆನಾ? ಆ ಹೆಣ್ಣು ಮಕ್ಕಳಿಗೆ ಸಿಕ್ಕ ಪರಿಹಾರ ಇದೇನಾ? ಅಂತ ಬೇಸರ ವ್ಯಕ್ತಪಡಿಸಿದ್ರು. ಸಾಮಾನ್ಯ ಪ್ರಜೆಗಳ ಮೇಲೆ ಯುದ್ಧ ಮಾಡೋದಕ್ಕೆ ನಮ್ಮ ವಿರೋಧ. ಆದ್ರೆ ನಮ್ಮ ದೇಶದೊಳಗೆ ಬಂದು ಪತ್ನಿಯರ ಎದುರೇ ಗಂಡಂದಿರನ್ನ ಹೊಡೆದ್ರೆ ಹೇಗೆ ಸಹಿಸೋದು? ಆ ಹೆಣ್ಣು ಮಕ್ಕಳು ಗಟ್ಟಿಯಾಗಿರೋದಕ್ಕೆ ಪರವಾಗಿಲ್ಲ. ಇಲ್ಲಾ ಅಂದ್ರೆ ಹಾರ್ಟ್ ಅಟ್ಯಾಕ್ ಆಗಿ ಸಾಯಬೇಕಿತ್ತು. ಅಂತಹದಕ್ಕೆ ಪರಿಹಾರ ಇದಲ್ಲ, ಬೇರಿಂದ ಕೊಂಬೆ ತನಕ ಎಲ್ಲವನ್ನ ಹೊಡಿಯಬೇಕು. ಭಾರತಕ್ಕೆ ಒಳ್ಳೆಯ ಅವಕಾಶ ಇತ್ತು. ಆದ್ರೆ ಏನೂ ಮಾಡಿಲ್ಲ ಅನ್ನೋದು ಬೇಸರ ತಂದಿದೆ ಅಂತ ಬೇಸರ ಹೊರಹಾಕಿದ್ದಾರೆ.

    ʻಆಪರೇಷನ್‌ ಸಿಂಧೂರʼ ಹೆಸರಲ್ಲಿ ಅಷ್ಟು ಜನ ಇಷ್ಟು ಜನ ಉಗ್ರರು ಹೊಡೆದಿದ್ದೇವೆ ಅಂತಾರೆ. ಆದ್ರೆ ಇಲ್ಲಿಯವರೆಗೂ ಎಲ್ಲೂ ಕನ್‌ಫರ್ಮ್‌ ಆಗಿಲ್ಲ. ಮಾಧ್ಯಮಗಳಲ್ಲಿ ಬಂದಿದ್ದು ಬಿಟ್ರೆ ಬೇರೆಲ್ಲೂ ನೋಡಲಿಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲು – ತಾಲಿಬಾನ್‌ ವಿದೇಶಾಂಗ ಸಚಿವರ ಜೊತೆ ಜೈಶಂಕರ್‌ ಮಾತುಕತೆ

    ನಮ್ಮ ದೇಶಕ್ಕೆ ಬಂದು ನಮ್ಮನ್ನ ಹೊಡೆದು ತಪ್ಪಿಸಿಕೊಂಡು ಹೋಗ್ತಾರೆ ಅಂದ್ರೆ ನಮ್ಮ ಭದ್ರತಾ ವೈಪಲ್ಯ, ಗಡಿಯಲ್ಲಿ ಸೇನೆ ಏನ್ ಮಾಡ್ತಾ ಇತ್ತು? ಇವರೆ ಏನಾದ್ರು ಪ್ಲಾನ್ ಮಾಡಿದ್ರಾ? ಅವರನ್ನು (ಉಗ್ರರು) ಇವರೇ ಪ್ಲಾನ್ ಬಿಟ್ಟುಕೊಂಡ್ರ ಯಾವುದು ನಿಜ ಯಾವುದು ಸುಳ್ಳು ನಮಗೆ ಗೊತ್ತಿಲ್ಲ. ಆದ್ರೆ ಭಾರತ ಕೊಟ್ಟ ಪ್ರತ್ಯುತ್ತರ ಸಮಧಾನಕರವಾದ ಕ್ರಮ ಅಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಮೇಲೆ ಭಾರತದ ಬ್ರಹ್ಮೋಸ್ ದಾಳಿಯಾಗಿದೆ: ಪಾಕ್ ನಿವೃತ್ತ ಏರ್ ಮಾರ್ಷಲ್ ಮಸೂದ್ ಅಕ್ತರ್

    ಉಗ್ರವಾದವನ್ನ ಬೇರು ಸಮೇತ ಕಿತ್ತೋಗೆಯಲು ಒಳ್ಳೆಯ ಚಾನ್ಸ್ ಇತ್ತು. ಆದ್ರೆ ನಮ್ಮ ನಿರೀಕ್ಷೆ ಹುಸಿಯಾಗಿದೆ. ನಮ್ಮ ನಿರೀಕ್ಷೆ ಇತ್ತು ಸಿಂಧೂರ ಕಳೆದುಕೊಂಡ ಹಣ್ಣು ಮಕ್ಕಳ ಕೈಗೆ ಗನ್‌ ಕೊಟ್ಟು ಶಿಕ್ಷೆ ಕೊಡಿಸಬೇಕಿತ್ತು. ಆದ್ರೆ ಕದನ ವಿರಾಮ ಎಂದು ಹೇಳುವ ನೀವು ಇಸ್ರೇಲ್ ನೋಡಿ ಕಲಿಯಬೇಕಿದೆ, ಇಸ್ರೇಲ್ ಯಾರ ಮಾತು ಕೇಳಿಲ್ಲ, ರಷ್ಯಾ-ಉಕ್ರೇನ್ ಹೇಗೆ ಒಡೆಯಿತು ಸರ್ವ ನಾಶ ಮಾಡಿ ಬಿಟ್ರು, ಆದ್ರೆ ನಮ್ಮ ಹೆಣ್ಣು ಮಕ್ಕಳಿಗೆ ಬೆಲೆ ಇಲ್ವಾ? ಆ ಉಗ್ರರನ್ನ ಹಿಡಿದುಕೊಂಡು ಬಂದು ನಮ್ಮ ಹೆಣ್ಣು ಮಕ್ಕಳ ಕೈಗೆ ಕೊಡಬೇಕಿತ್ತು ಎಂದಿದ್ದಾರೆ.

  • ಮುಳಬಾಗಿಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠೇಗೌಡ ಹೃದಯಾಘಾತದಿಂದ ನಿಧನ

    ಮುಳಬಾಗಿಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠೇಗೌಡ ಹೃದಯಾಘಾತದಿಂದ ನಿಧನ

    ಕೋಲಾರ: ಶಾಸಕ ಕೊತ್ತೂರು ಮಂಜುನಾಥ್ (Kothur Manjunath) ಆಪ್ತ ಹಾಗೂ ಮುಳಬಾಗಿಲು (Mulbagal) ಬ್ಲಾಕ್ ಕಾಂಗ್ರೆಸ್ (Congress) ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ ಹೃದಯಾಘಾತದಿಂದ  (Heart Attack)ನಿಧನರಾಗಿದ್ದಾರೆ.

    ಕಳೆದ ರಾತ್ರಿ ಅವರಿಗೆ ತೀವ್ರ ಹೃದಯಾಘಾತವಾಗಿದೆ. ಅವರನ್ನು ಕೂಡಲೇ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ.

    ನೀಲಕಂಠೇಗೌಡರು ಈ ಹಿಂದೆ ಮುಳಬಾಗಿಲು ತಾಲೂಕು ಪಂಚಾಯತಿ ಅಧ್ಯಕ್ಷರಾಗಿದ್ದರು. ಸದ್ಯ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದರು. ಮುಳಬಾಗಿಲು ಕಾಂಗ್ರೆಸ್‌ನಲ್ಲಿ ಅವರು ಹಿರಿಯ ನಾಯಕರಾಗಿದ್ದರು. ತಾಲೂಕಿನ ಕಾಂಗ್ರೆಸ್ ನಾಯಕರಲ್ಲಿ ತಮ್ಮ ನಾಯಕನನ್ನು ಕಳೆದುಕೊಂಡ ಶೋಕ ಮನೆಮಾಡಿದೆ.

  • ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ: ಕೊತ್ತೂರು ಮಂಜುನಾಥ್

    ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ: ಕೊತ್ತೂರು ಮಂಜುನಾಥ್

    ಕೋಲಾರ: ಸಿಎಂ ಸಿದ್ದರಾಮಯ್ಯ (Siddaramaiah) 5 ವರ್ಷಗಳ ಕಾಲ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಶಾಸಕ ಕೊತ್ತೂರು ಮಂಜುನಾಥ್ (Kothur Manjunath) ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದರು.

    ಕೋಲಾರ (Kolar) ತಾಲೂಕಿನಲ್ಲಿ ಸುಮಾರು 3 ಕೋಟಿ ರೂ. ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನರೆವೇರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2028ರಲ್ಲೂ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಚುನಾವಣೆ ನಡೆಯಲಿದೆ. ಇದಕ್ಕೆ ಯಾರಿಂದಲೂ ಯಾವುದೇ ಅಭ್ಯಂತರವಿಲ್ಲ. ಸಿದ್ದರಾಮಯ್ಯ ರಾಜ್ಯದಲ್ಲಿ ತುಂಬಾ ಆಕ್ವೀವ್ ಆಗಿದ್ದಾರೆ, ಕೆಲಸ ಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಹ ಆಗುವುದಿಲ್ಲ, ಇದು ಕೇವಲ ಮಾಧ್ಯಮಗಳಲ್ಲಿ ಮಾತ್ರ ಹೇಳಲಾಗುತ್ತಿದೆ. ನಮ್ಮಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು. ಇದನ್ನೂ ಓದಿ: Bengaluru| ಅರಮನೆ ಮೈದಾನದಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ

    ಒಬ್ಬರಿಗೆ ಒಂದೇ ಹುದ್ದೆಯೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಲ್ಲಿಕಾರ್ಜುನ ಖರ್ಗೆ, ದೊಡ್ಡವರು ಏನು ಹೇಳುತ್ತಾರೋ ಅದೇ ಅಂತಿಮ ತೀರ್ಮಾನವಾಗಲಿದೆ. ಇನ್ನು ಸಚಿವ ಸಂಪುಟ ವಿಸ್ತರಣೆ ಕುರಿತು ನನಗೆ ಗೊತ್ತಿಲ್ಲ. ನಾನು ಯಾರ ಮನೆ ಬಾಗಿಲಿಗೆ ಹೋಗುವುದಿಲ್ಲ. ಕೋಲಾರ ಜನತೆ ನನಗೆ ಕೆಲಸ ಮಾಡುವಂತೆ ಮತ ಹಾಕಿದ್ದಾರೆ. ಕೆಲಸ ಮಾಡಲು ನಾನು ಸಿದ್ಧನಾಗಿದ್ದಾನೆ. ಮಂತ್ರಿಗಿರಿ ಇರಲಿ, ಬಿಡಲಿ, ನಾನು ಮಂತ್ರಿಗಿರಿಗೆ ಆಸೆ ಪಟ್ಟಿಲ್ಲ. ಕೋಲಾರ ಕ್ಷೇತ್ರದಲ್ಲಿ ನಮ್ಮ ಜಾತಿ ಮತಗಳು ಕೇವಲ ಬೆರಳಿಕೆಯಷ್ಟೇ ಇರುವುದು. ಇವತ್ತು ಜನ ನಂಬಿ ಮತ ಹಾಕಿದ್ದಾರೆ. ಅವರ ಋಣ ತೀರಿಸುವೆ ಕೆಲಸ ಮಾಡುವೆ ಎಂದು ಹೇಳಿದರು. ಇದನ್ನೂ ಓದಿ: ದರ್ಶನ್ ಬರ್ತ್‌‌ಡೇ ಸಂಭ್ರಮ; ಆಪ್ತರಿಗಷ್ಟೇ ಆಹ್ವಾನ ನೀಡಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ

    ಉದಯಗಿರಿ ಗಲಾಟೆ ಕುರಿತು ಮಾತನಾಡಿ, ನಾನು ನನ್ನ ವಿಧಾನಸಭಾ ಕ್ಷೇತ್ರದ ಕುರಿತು ಕೇಳಿದರೆ ಹೇಳುವೆ. ಪಕ್ಕದ ಜಿಲ್ಲೆಗಳ ಬಗ್ಗೆ ಮಾತನಾಡುವುದಿಲ್ಲ. ಇನ್ನು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಕೋಲಾರ ತಾಲೂಕಿನ ಗದ್ದೆಕಣ್ಣೂರುನಿಂದ ಗಾಂಧಿನಗರದವರೆಗೂ ಸುಮಾರು 3 ಕೋಟಿಗಳ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿದ್ದು, ಕೂಡಲೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮುಂಬೈ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ – ಇಬ್ಬರು ಕಾರ್ಮಿಕರು ಸಜೀವ ದಹನ

  • ಸಚಿವ ಸ್ಥಾನ ಕೊಟ್ಟರೆ ತೆಗೆದುಕೊಳ್ಳುವೆ, ಯಾರ ಮನೆ ಬಾಗಿಲಿಗೂ ಹೋಗಲ್ಲ: ಕೊತ್ತೂರು ಮಂಜುನಾಥ್

    ಸಚಿವ ಸ್ಥಾನ ಕೊಟ್ಟರೆ ತೆಗೆದುಕೊಳ್ಳುವೆ, ಯಾರ ಮನೆ ಬಾಗಿಲಿಗೂ ಹೋಗಲ್ಲ: ಕೊತ್ತೂರು ಮಂಜುನಾಥ್

    ಕೋಲಾರ: ಸಚಿವ ಸಂಪುಟ ಪುನರ್ ರಚನೆ (Cabinet Reshuffle) ಆಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ನಾನು ಯಾರ ಮನೆ ಬಾಗಿಲಿಗೂ ಹೋಗಿ ಕೇಳಿಕೊಳ್ಳಲ್ಲ. ಒಂದು ವೇಳೆ ಸಚಿವ ಸ್ಥಾನ ಕೊಟ್ಟರೆ ತೆಗೆದುಕೊಳ್ಳುವೆ ಎಂದು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ (Kothur Manjunath) ಸ್ಪಷ್ಟಪಡಿಸಿದರು.

    ಕೋಲಾರದ ತಾಲೂಕು ಕಚೇರಿಯಲ್ಲಿ ದರಕಾಸ್ತು ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನದ ಬಗ್ಗೆ ನಾನು ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯ ಸಚಿವ ಸಂಪುಟದಲ್ಲಿ ಯಾರಿಗೆ ಸ್ಥಾನಮಾನ ಬೇಕೋ ಅವರು ಹೈಕಮಾಂಡ್ ಬಳಿ ಹೋಗುತ್ತಾರೆ. ಸಚಿವ ಸ್ಥಾನ ಕೇಳುವುದು ಅವರ ಜವಾಬ್ದಾರಿ ಎಂದರು. ಇದನ್ನೂ ಓದಿ: ಸಂತ ಚಿನ್ಮಯ್‌ ಕೃಷ್ಣದಾಸ್‌ರಿಂದ ಅಂತರ ಕಾಯ್ದುಕೊಂಡ ಇಸ್ಕಾನ್‌

     

    ಇನ್ನು ಚನ್ನಪಟ್ಟಣ ಫಲಿತಾಂಶ ಏರುಪೇರಾಗುತ್ತೆ ಎಂದು ಮೊದಲೇ ಹೇಳಿದ್ದೆ. ಆದರೆ ಜನ ನಮ್ಮ ಮೇಲೆ ನಿರೀಕ್ಷೆ ಇಟ್ಟಿದ್ದಾರೆ ಅನ್ನೋದಕ್ಕೆ ಇದೇ ಸಾಕ್ಷಿ. ನಾನು ಸಹ ಕೋಲಾರದಲ್ಲಿ ಗೆಲ್ಲುತ್ತೇನೆ ಎಂದುಕೊಂಡಿರಲಿಲ್ಲ. ಜನ ನನ್ನನ್ನು ಗೆಲ್ಲಿಸಿದ್ದಾರೆ. ಗೆಲುವಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಉತ್ತಮ ಕೆಲಸವೇ ಕಾರಣ ಎಂದರು. ಇದನ್ನೂ ಓದಿ: ನ.30ರಂದು ನಿಖಿಲ್ ಕುಮಾರಸ್ವಾಮಿ ಕೃತಜ್ಞತಾ ಸಭೆ

    ನಾವು ಜನ ಸಾಮಾನ್ಯರು, ರೈತರ, ಅಭಿವೃದ್ಧಿಯ ಪರವಾಗಿದ್ದೇವೆ ಎಂಬುದಕ್ಕೆ ಈ ಫಲಿತಾಂಶವೇ ಕಾರಣ. ನಾವು ಹಣದಿಂದ ಗೆದ್ದಿದ್ದೇವೆ ಅನ್ನೋದಾದರೆ ತೋರಿಸಲಿ. ದುಡ್ಡು ಕೊಟ್ಟಿದ್ದರೆ ತೋರಿಸಲಿ, ನಾವು ತಪ್ಪೊಪ್ಪಿಕೊಳ್ಳುತ್ತೇವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಆರ್‌.ಅಶೋಕ್‌

    ಸರ್ಕಾರ ಪ್ರಭಾವ ಬಳಸಿದೆ ಅನ್ನೋದಾದರೆ 2019ರಲ್ಲಿ ಮಂಡ್ಯದಲ್ಲಿ ಸೋಲು ಏಕೆ? ಜನ ತೀರ್ಮಾನ ಮಾಡಿದರೆ ಮುಗೀತು. ಅವರ ತೀರ್ಮಾನದಂತೆ ಫಲಿತಾಂಶ ಬಂದಿದೆ. ಇನ್ನು ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರು ಒಂದೇ ಒಂದು ಕೆಡಿಪಿ ಸಭೆ ಮಾಡಿಲ್ಲ. ಅಲ್ಲಿ ಲೋಕಲ್ ವರ್ಸಸ್ ನಾನ್ ಲೋಕಲ್ ಬಂದಿತ್ತು. ಸಿಪಿವೈ ಲೋಕಲ್ ಆದರೆ ನಿಖಿಲ್ ಕುಮಾರಸ್ವಾಮಿ ಹೊರಗಿನವರು. ಹಾಗಾಗಿ ಸಿಪಿವೈಗೆ ಗೆಲುವು ಸುಲಭವಾಯಿತು ಎಂದು ಹೇಳಿದರು. ಇದನ್ನೂ ಓದಿ: ರಾಜ್ಯಾಧ್ಯಕ್ಷ ಹೋಗಿ ಡಿಕೆಶಿ ಬಳಿ 20 ಪತ್ರಕ್ಕೆ ಸಹಿ ಹಾಕಿಸಿಕೊಂಡ ವಿಡಿಯೋ ನನ್ನ ಬಳಿ ಇದೆ: ಯತ್ನಾಳ್ ಬಾಂಬ್‌

  • ನಿಯತ್ತಾಗಿರುವವರು ಯಾರು ಬೇಕಾದರೂ ಕಾಂಗ್ರೆಸ್‌ಗೆ ಬರಬಹುದು: ಕೊತ್ತೂರು ಮಂಜುನಾಥ್

    ನಿಯತ್ತಾಗಿರುವವರು ಯಾರು ಬೇಕಾದರೂ ಕಾಂಗ್ರೆಸ್‌ಗೆ ಬರಬಹುದು: ಕೊತ್ತೂರು ಮಂಜುನಾಥ್

    ಕೋಲಾರ: ನಿಯತ್ತಾಗಿ ಇರುವವರು ಯಾರು ಬೇಕಾದರೂ ಕಾಂಗ್ರೆಸ್‌ಗೆ (Congress) ಬರಬಹುದು. ನಿಯತ್ತಿಲ್ಲದವರು ಕಾಂಗ್ರೆಸ್‌ಗೆ ಬರುವುದು ಬೇಡ ಎಂದು ಶಾಸಕ ಕೊತ್ತೂರು ಮಂಜುನಾಥ್ (Kothur G. Manjunath) ಹೇಳಿದ್ದಾರೆ.

    ಉಪಚುನಾವಣೆಗಳ ಕುರಿತು ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುವ ಮೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಚನ್ನಪಟ್ಟಣದಲ್ಲಿ (Channapatna) ಕಡಿಮೆ ಅಂತರದಲ್ಲಿ ಗೆಲ್ಲುತ್ತೇವೆ. ಶಿಗ್ಗಾಂವಿ ಮತ್ತು ಸಂಡೂರು ಗೆಲುತ್ತೇವೆ. ಸಂಡೂರಿನಲ್ಲಿ ಜೆಡಿಎಸ್ ಎರಡು ಬಾರಿ ಗೆದಿದ್ದೆ ಅಷ್ಟೇ. ಉಳಿದಂತೆ ಎಲ್ಲಾ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಚನ್ನಪಟ್ಟಣಕ್ಕೆ ಅಚ್ಚರಿ ಅಭ್ಯರ್ಥಿಯಾಗಲಿದ್ದಾರೆ. ನಮಗೆ ಗೊತ್ತು ಯಾರು ಅಭ್ಯರ್ಥಿ ಅಂತಾ. ಆದರೆ ಈಗ ಬಹಿರಂಗಪಡಿಸುವುದಿಲ್ಲ. ನಾಳೆ ನಾಡಿದ್ದು ಎಲ್ಲರಿಗೂ ಗೊತ್ತಾಗಲಿದೆ ಎಂದರು. ಇದನ್ನೂ ಓದಿ: ನಾನು ಅವರ ಹಾಸಿಗೆಯ ಮೇಲೆ ಕುಳಿತಿದ್ದೆ – ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮತ್ತೆ ಸಾಕ್ಷಿ ಮಲಿಕ್‌ ಆರೋಪ

    ಯೋಗೇಶ್ವರ್ (CP Yogeshwar) ಕಾಂಗ್ರೆಸ್ ಬರುವ ಕುರಿತು ಪ್ರತಿಕ್ರಿಯಿಸಿ, ಯೋಗೇಶ್ವರ್ ಬಂದರೆ ಸ್ವಾಗತ. ಅವರು ಒಳ್ಳೆಯ ಮನುಷ್ಯ. ಸ್ವಲ್ಪ ಕೋಪಿಷ್ಟ ಅಷ್ಟೇ. ಯೋಗೇಶ್ವರ್ ಅವರಿಗೆ ಅವರದೇ ಮತಬ್ಯಾಂಕ್ ಇದೆ. ಮುಸ್ಲಿಂ ಬಂಧುಗಳು ಸಹ ಮತ ಹಾಕುತ್ತಾರೆ. ಅವರಿಗೆ ಒಳ್ಳೆಯ ಹೆಸರು ಇದೆ. ಜೆಡಿಎಸ್ ತೀರ್ಮಾನ ನೋಡಿಕೊಂಡು ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರು ಮಳೆಯ ಸಮಸ್ಯೆಗೆ ಪರಿಹಾರ ಕೊಡದ ಈ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ: ಸುರೇಶ್ ಬಾಬು

    ಡಿ.ಕೆ.ಶಿವಕುಮಾರ್‌ಗೆ ಸಿಬಿಐ ನೋಟಿಸ್ ಕುರಿತು ಮಾತನಾಡಿ, ಅದು ದೊಡ್ಡವರ ವಿಷಯ. ಪ್ರತಿ ಚುನಾವಣೆ ಬಂದಾಗ ಡಿಕೆಶಿಗೆ ನೋಟಿಸ್ ಬರುತ್ತದೆ. ಡಿಕೆಶಿ ಅವರು ಮಾವಿನ ಮರದ ರೀತಿ. ರಸ್ತೆಯಲ್ಲಿ ಹೋಗುವವರೆಲ್ಲರೂ ಒಂದು ಕಲ್ಲು ಹಾಕುತ್ತಾರೆ. ದೇಶದಲ್ಲಿ ತಪ್ಪು ಮಾಡದ ವ್ಯಕ್ತಿ ಯಾರೂ ಇಲ್ಲ. ಗೊತ್ತೋ ಗೊತ್ತಿಲ್ಲದೋ ತಪ್ಪು ಮಾಡುತ್ತೇವೆ. ಅದಕ್ಕೆ ಪದೇ ಪದೇ ಗಾಯದ ಮೇಲೆ ಬರೆ ಎಳೆಯಬಾರದು. ಇದನ್ನು ವಿರೋಧ ಪಕ್ಷದವರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆಯಾರ್ಭಟ: ದಿ. ಅಬ್ದುಲ್ ಕಲಾಂ ಸಂಬಂಧಿಕರಿಗೆ ತಟ್ಟಿದ ಜಲ ಕಂಟಕ