Tag: kota srinivasa poojari

  • ಸಿಎಂ ಬಿಎಸ್‍ವೈ ನಮ್ಮ ಪ್ರಶ್ನಾತೀತ ನಾಯಕರು: ಕೋಟ ಶ್ರೀನಿವಾಸ ಪೂಜಾರಿ

    ಸಿಎಂ ಬಿಎಸ್‍ವೈ ನಮ್ಮ ಪ್ರಶ್ನಾತೀತ ನಾಯಕರು: ಕೋಟ ಶ್ರೀನಿವಾಸ ಪೂಜಾರಿ

    ಹಾವೇರಿ: ವಯಸ್ಸು ಎಲ್ಲರಿಗೂ ಆದಂತೆ ಅವರಿಗೂ ಆಗಿದೆ. ಯಾವುದೇ ಚರ್ಚೆ ಇಲ್ಲ. ಸಿಎಂ ಯಡಿಯೂರಪ್ಪ ಅವರೇ ನಮ್ಮ ಪ್ರಶ್ನಾತೀತ ನಾಯಕರು. ಅವರೇ ನಮ್ಮ ಮುಖ್ಯಮಂತ್ರಿ. ಪಕ್ಷ ಮತ್ತು ಸರ್ಕಾರ ಒಟ್ಟಾಗಿ ನಡೆಯುತ್ತೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ವೈ ಅವರೇ ನಮ್ಮ ಮುಖ್ಯಮಂತ್ರಿಗಳಾಗಿ ಇರುತ್ತಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚರ್ಚೆಗಳು ಸ್ವಾಭಾವಿಕವಾಗಿ ಬಂದಿರಬಹುದು. ನಮ್ಮ ಪಕ್ಷದವರು ಪತ್ರ ಬರೆದಿರಲಿಕ್ಕಿಲ್ಲ. ಯಾರಾದರೂ ಬೇರೆಯವರು ಮಾಡಿರಬಹುದು. ಚರ್ಚೆ ಆಗುತ್ತೆ, ಅಂತಿಮವಾಗಿ ಯಡಿಯೂರಪ್ಪ ಅವರೇ ನಮ್ಮ ಪ್ರಶ್ನಾತೀತ ನಾಯಕ. ನಾವೆಲ್ಲ ಅವರ ಜೊತೆ ಹೆಜ್ಜೆ ಹಾಕುತ್ತೇವೆ. ಅವರ ನೇತೃತ್ವದಲ್ಲಿ ರಾಜ್ಯದ ಅಭಿವೃದ್ಧಿ ಆಗುತ್ತದೆ ಎಂದರು.

    ನಂತರ ಮಾತನಾಡಿದ ಅವರು, ಅಮೆರಿಕ ಅಧ್ಯಕ್ಷ ಭಾರತಕ್ಕೆ ಬಂದಿದ್ದು ಪ್ರಧಾನಿ ಅವರ ಜೊತೆ ಮಾತನಾಡಿದ್ದು ದೇಶದ ಗೌರವ ಹೆಚ್ಚಿಸಿದೆ. ಕುಮಾರಸ್ವಾಮಿ ಇದ್ದಾಗ ಯಾರಾದರೂ ಬಂದರೆ ಖರ್ಚು ಮಾಡ್ತಿರಲಿಲ್ವಾ? ವಿರೋಧ ಪಕ್ಷದಲ್ಲಿದ್ದಾರೆ. ವಿರೋಧ ಮಾಡಬೇಕೆಂದು ಮಾಡಿದ್ದಾರಷ್ಟೆ. ಮಾರ್ಚ್‍ನಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡುವುದು ಪರಮಾಧಿಕಾರಿ ಪಕ್ಷದ ಹೈಕಮಾಂಡ್, ರಾಜ್ಯಾಧ್ಯಕ್ಷರು ಮತ್ತು ಸಿಎಂಗೆ ಇದೆ. ಅವರು ತೆಗೆದುಕೊಳ್ಳೋ ನಿರ್ಧಾರಕ್ಕೆ ನಾವೆಲ್ಲ ಬೆಂಬಲಿಸ್ತೇವೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

  • ಹುದ್ದೆಗೆ ತಕ್ಕುದಾದ ಮಾತನಾಡಿ, ಕರಾವಳಿಯನ್ನು ನೀವು ಉದ್ಧಾರ ಮಾಡಿಲ್ಲ- ಸಿಎಂ ವಿರುದ್ಧ ಕೋಟಾ ಕಿಡಿ

    ಹುದ್ದೆಗೆ ತಕ್ಕುದಾದ ಮಾತನಾಡಿ, ಕರಾವಳಿಯನ್ನು ನೀವು ಉದ್ಧಾರ ಮಾಡಿಲ್ಲ- ಸಿಎಂ ವಿರುದ್ಧ ಕೋಟಾ ಕಿಡಿ

    ಉಡುಪಿ: ಮುಖ್ಯಮಂತ್ರಿ ಹುದ್ದೆಗೆ ತಕ್ಕುದಾದ ಮಾತುಗಳನ್ನಾಡಿ. ಕರಾವಳಿಯನ್ನು ನೀವು ಉದ್ಧಾರ ಮಾಡಿಲ್ಲ. ನಿಮ್ಮ ಕುಟುಂಬ ರಾಜಕಾರಣಕ್ಕೆ ಕರಾವಳಿ ಜನ ಬೆಂಬಲ ನೀಡಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಗರಂ ಆಗಿದ್ದಾರೆ.

    ಕರಾವಳಿ ಜನರಿಗೆ ತಿಳುವಳಿಕೆ ಇಲ್ಲ. ಅವರು ಮೋದಿಗೆ ವೋಟ್ ಹಾಕ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕರಾವಳಿಗೆ ನಿಮ್ಮ ಕೊಡುಗೆ ಏನು ಎಂದು ಮೊದಲು ಹೇಳಿ. ಉಡುಪಿ ಜನ ನಿಮ್ಮ ಮುಂದೆ ತಿರುಗಿ ಬಿದ್ದಿದ್ದಾರೆ. ನಿಮಗೆ ಮತ ಹಾಕಿಲ್ಲ ಅಂತ ಕರಾವಳಿ ಜನರ ಅವಹೇಳನ ಮಾಡ್ತೀರಾ. ಹೇಳಿಕೆ ವಾಪಸ್ ಪಡೆದು ಕ್ಷಮೆ ಕೇಳಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಉಡುಪಿ, ಕಾಪು, ಕಾರ್ಕಳ ಜನಕ್ಕೆ ತಿಳುವಳಿಕೆ ಇಲ್ಲ- ಸಿಎಂ ಹೇಳಿಕೆ ವಿರುದ್ಧ ಕರಾವಳಿ ಗರಂ

    ಕುಟುಂಬ ರಾಜಕಾರಣ ಕರಾವಳಿಯಲ್ಲಿ ನಡೆಯಲ್ಲ. ನೀವೇನು ಕರಾವಳಿಯನ್ನು ಉದ್ಧಾರ ಮಾಡಿಲ್ಲ. ಮುಖ್ಯಮಂತ್ರಿ ಹುದ್ದೆಗೆ ತಕ್ಕುದಾದ ಮಾತನ್ನು ಆಡಿ. ಬಜೆಟ್ ನಲ್ಲಿ ಕರಾವಳಿ ಗೆ ಅನ್ಯಾಯ ಮಾಡಿದ್ದೀರಿ. ವಿಧಾನಸೌಧದ ಎದುರು ಕರಾವಳಿ ಶಾಸಕರು ಧರಣಿ ಕೂತಿದ್ದನ್ನು ಮರೆತು ಬಿಟ್ರಾ ಎಂದು ಪ್ರಶ್ನಿಸಿ, ಯಾವ ಸಿಎಂ ಕೂಡ ನಿಮ್ಮಷ್ಟು ಕರಾವಳಿಯನ್ನು ಅವಹೇಳನ ಮಾಡಿಲ್ಲ ಎಂದು ಸಿಎಂ ವಿರುದ್ಧ ಗರಂ ಆದ್ರು. ಇದನ್ನೂ ಓದಿ: ಲೋಕಾಯುಕ್ತ ಮುಗಿಸಿದಂತೆ ಲೋಕಪಾಲ್ ಮುಗಿಸ್ತೀರಾ: ಖರ್ಗೆಗೆ ಶ್ರೀನಿವಾಸ ಪೂಜಾರಿ ಪ್ರಶ್ನೆ

    ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದೇಶದಲ್ಲೇ ಉಡುಪಿ ಮುಂಚೂಣಿಯಲ್ಲಿದೆ. ಕರಾವಳಿಯ ಅಭಿವೃದ್ಧಿಗೆ ದೇವೇಗೌಡರ ಕುಟುಂಬ ಕಾರಣ ಅಲ್ಲ. ರೇವಣ್ಣ ಲೋಕೋಪಯೋಗಿ ಇಲಾಖೆಯಿಂದ ಕರಾವಳಿಗೆ ಏನು ಕೊಟ್ಟಿದ್ದೀರಿ. ಬಂದರು ಅಭಿವೃದ್ಧಿಗೆ ಸಿಎಂ ಏನು ಕೊಟ್ಟಿದ್ದೀರಿ. ನಿಮ್ಮ ಕುಟುಂಬ ರಾಜಕಾರಣಕ್ಕೆ ಕರಾವಳಿಗರು ಬೆಲೆ ನೀಡಲ್ಲ. ನಿಮ್ಮ ಪಕ್ಷಕ್ಕೆ ವಿದ್ಯಾವಂತ ಜನರು ವೋಟ್ ಹಾಕಲ್ಲ. ಮುಂದಿನ ಚುನಾವಣೆಯಲ್ಲಿ ಜಿಡಿಎಸ್ ಅಭ್ಯರ್ಥಿಗೆ ತಕ್ಕಪಾಠ ಕಲಿಸುತ್ತಾರೆ. ನಿಮ್ಮ ಮಾತಿನಿಂದ ಬಿಜೆಪಿಗೆ ಬಹುಮತ ಬರಲು ಅನುಕೂಲವಾಗಿದೆ ಅಂದ್ರು.