– ಕೋವಿಡ್ ನಿಯಮ ಪಾಲನೆ ಕಡ್ಡಾಯ
– ಪುಣ್ಯ ಸ್ನಾನ ಮಾಡಲು ಅವಕಾಶ ಇಲ್ಲ
ಮಡಿಕೇರಿ: ಪವಿತ್ರ ಕಾವೇರಿ ತೀರ್ಥೋದ್ಭವ ವೀಕ್ಷಣೆಗೆ ತಲಕಾವೇರಿ ಕ್ಷೇತ್ರಕ್ಕೆ ಎಲ್ಲ ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗುವುದೆಂದು ಕೊಡಗು ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕಳೆದ ಶನಿವಾರ ತೀರ್ಥೋದ್ಭವಕ್ಕೆ ತಲಕಾವೇರಿಗೆ ಬರುವ ಭಕ್ತರು ಭಗಮಂಡಲದಿಂದ ಕಾಲ್ನನಡಿಗೆಯಲ್ಲಿ ಬರಬೇಕು. ವಾಹನಗಳನ್ನು ಭಾಗಮಂಡಲದಲ್ಲಿ ನಿಲ್ಲಿಸಬೇಕು, ಕೋವಿಡ್ ವರದಿ ಮತ್ತು ವ್ಯಾಕ್ಸಿನೇಷನ್ ಕಡ್ಡಾಯ ಮಾಡಲಾಗಿತ್ತು.

ಈ ನಿಯಮದ ವಿರುದ್ಧ ಕೊಡಗಿನ ಮೂಲ ನಿವಾಸಿಗಳು ತಿರುಗಿ ಬಿದ್ದಿದ್ದರು. ಮುಖ್ಯಮಂತ್ರಿ ಬೊಮ್ಮಾಯಿ ಅವರ ಗಮನಕ್ಕೆ ತಂದ ಬಳಿಕ ಜಿಲ್ಲಾಡಳಿತ ಎಚ್ಚೆತ್ತುಗೊಂಡಿದ್ದು ಕೊಡಗಿನ ನಿವಾಸಿಗಳ ಜೊತೆ ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲಾಗಿದೆ.
ಭಕ್ತರು ಕೋವಿಡ್ ನಿಯಮ ಪಾಲನೆಮಾಡಬೇಕು. ತೀರ್ಥೋದ್ಬವ ಅಗುವ ಸಮಯದಲ್ಲಿ ಕಾವೇರಿ ಭಕ್ತರಿಗೆ ಮುಕ್ತ ಅವಕಾಶ ಇದೆ ಇರುತ್ತದೆ ಎಂದು ಹೇಳುವ ಮೂಲಕ ಎದ್ದಿದ್ದ ಗೊಂದಲಕ್ಕೆ ಶ್ರೀನಿವಾಸ್ ಪೂಜಾರಿ ತೆರೆ ಎಳೆದಿದ್ದಾರೆ. ಇದನ್ನೂ ಓದಿ: RSS ಇಲ್ಲವೆಂದಿದ್ದರೆ ಭಾರತ, ಪಾಕಿಸ್ತಾನ ಆಗ್ತಿತ್ತು: ಪ್ರಭು ಚವ್ಹಾಣ್
ಕೊಡಗಿನ ಭಕ್ತರ ಭಾವನೆಗೆ ಸರ್ಕಾರ ಗೌರವ ನೀಡಿದ್ದು, ಪವಿತ್ರ ತೀರ್ಥ ಕೊಂಡೊಯ್ಯಲು ಮುಕ್ತ ಅವಕಾಶ ನೀಡಲಾಗಿದೆ. ಆದರೆ ಈ ಬಾರಿ ತಲಕಾವೇರಿಯ ಕುಂಡಿಕೆ ಬಳಿ ಇರುವ ಕೊಳದಲ್ಲಿ ಪುಣ್ಯ ಸ್ನಾನ ಮಾಡಲು ಅವಕಾಶ ಇಲ್ಲ ಎಂದು ಸಚಿವರು ಹೇಳಿದ್ದಾರೆ. ಅ.17 ರಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ಪವಿತ್ರ ಕಾವೇರಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.
























