Tag: kota srinivas poojary

  • ಮುಂದಿನ ದಿನಗಳು ಹಿಂದೂಗಳಿಗೆ ಕಠಿಣವಾಗಲಿದೆ: ಕೋಟ ಶ್ರೀನಿವಾಸ ಪೂಜಾರಿ

    ಮುಂದಿನ ದಿನಗಳು ಹಿಂದೂಗಳಿಗೆ ಕಠಿಣವಾಗಲಿದೆ: ಕೋಟ ಶ್ರೀನಿವಾಸ ಪೂಜಾರಿ

    – ಗೋಹತ್ಯೆ, ಮತಾಂತರ ಕಾಯ್ದೆ ನಿಷೇಧಕ್ಕೆ ಕಾರ್ಯತಂತ್ರ ರೂಪುಗೊಂಡಿದೆ

    ಮಂಗಳೂರು: ಮುಂದಿನ ದಿನಗಳು ಹಿಂದುತ್ವ ಮತ್ತು ಹಿಂದೂಗಳಿಗೆ (Hindu) ಕಠಿಣ ದಿನವಾಗಲಿದೆ. ಗೋಹತ್ಯೆ ಕಾಯ್ದೆ, ಮತಾಂತರ ಕಾಯ್ದೆ ನಿಷೇಧಕ್ಕೆ ಕಾರ್ಯತಂತ್ರಗಳು ರೂಪುಗೊಂಡಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಹೇಳಿಕೆ ನೀಡಿದ್ದಾರೆ.

    ಮಂಗಳೂರಿನಲ್ಲಿ (Mangaluru) ಮಾತನಾಡಿದ ಅವರು, ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಪೊಲೀಸರಿಗೆ ಕೇಸರಿ ಶಾಲಿನ ಆರೋಪ ಮಾಡಿದ್ದಾರೆ. ಅಧಿಕಾರಿಗಳ ಮೇಲೆ ಹರಿಹಾಯ್ದು ಎಚ್ಚರಿಕೆ ಕೊಟ್ಟಿರೋದು ಕಂಡು ಬಂದಿದೆ. ಕೇಸರಿ ಶಾಲು ಈ ರಾಜ್ಯದಲ್ಲಿ ನಿಷೇಧ ಇಲ್ಲ. ಕರ್ತವ್ಯದಲ್ಲಿ ಇದ್ದಾಗ ಯಾರೂ ಕೇಸರಿ ಪ್ರಯೋಗ ಮಾಡಿಲ್ಲ. ಅವರ ಖಾಸಗಿ ಜೀವನದಲ್ಲಿ ಅವರ ಉಡುಪುಗಳ ಬಗ್ಗೆ ಪ್ರಶ್ನೆ ಮಾಡಿ ಡಿಕೆಶಿ ದ್ವೇಷ ತೀರಿಸಿಕೊಂಡಿದ್ದಾರೆ. ಇದು ಸರಿಯಲ್ಲ, ಅವರು ತಮ್ಮ ಮಾತನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.

    ಚಿತ್ರದುರ್ಗ ಜಿಲ್ಲೆಯ ಶಿಕ್ಷಕರು ಮುಖ್ಯಮಂತ್ರಿಗಳ ಸಾಲದ ಬಗ್ಗೆ ಮಾತನಾಡಿದ್ದಕ್ಕೆ ಅಮಾನತು ಮಾಡಲಾಗಿದೆ. ಡಿಕೆಶಿ ಮತ್ತು ಸಿದ್ದರಾಮಯ್ಯ ಸರ್ಕಾರದಲ್ಲಿ ದ್ವೇಷ ಸಾಧಿಸೋ ವಾತಾವರಣ ಕಂಡು ಬರುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರಲ್ಲ. ಅದನ್ನು ಪುನರ್ ಪರಿಶೀಲಿಸಲಿ ಎಂದರು. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಶುರುವಾಯ್ತು ಬಿಜೆಪಿ ಕಾಲದ ಅಕ್ರಮದ ತನಿಖೆ – ಮೊದಲ ಎಫ್‌ಐಆರ್‌ ದಾಖಲು

    ಸಿದ್ದರಾಮಯ್ಯ ಮತ್ತು ಡಿಕೆಶಿ 40% ಕಮಿಷನ್ ತನಿಖೆ ಮಾಡುತ್ತೇವೆ ಎಂದಿದ್ದಾರೆ. ಈ ತನಿಖೆಯನ್ನು ಮುಕ್ತವಾಗಿ ನಾನು ಸ್ವಾಗತ ಮಾಡುತ್ತೇನೆ. ನನ್ನಿಂದಲೇ ತನಿಖೆ ಪ್ರಾರಂಭವಾಗಲಿ. ಇಡೀ ತನಿಖೆ ಮಾಡಲಿ, ಯಾವ ತನಿಖೆಯಲ್ಲಿ ಏನಾಗುತ್ತೆ ನೋಡೋಣ. ವ್ಯಕ್ತಿಗತ ದ್ವೇಷಕ್ಕೆ ಅವಕಾಶ ಕೊಡಬಾರದು. ಆದರೂ ತನಿಖೆ ಮಾಡಲಿ ಎಂದು ತಿರುಗೇಟು ನೀಡಿದರು.

    ಸಾಮಾನ್ಯವಾಗಿ ಹಿಂದುತ್ವದ ವಿಚಾರ ಇಟ್ಟುಕೊಂಡು ಅವರ ಗುರಿ ಇದೆ ಅನ್ನೋದು ನಮಗೆ ಅರ್ಥವಾಗಿದೆ. ಮುಂದಿನ ದಿನಗಳು ಹಿಂದುತ್ವ ಮತ್ತು ಹಿಂದೂಗಳಿಗೆ ಕಠಿಣ ದಿನವಾಗಲಿದೆ. ಯಾರನ್ನಾದರೂ ಓಲೈಕೆ ಮಾಡಲು ಹಿಂದುತ್ವದ ಚಟುವಟಿಕೆಗಳನ್ನು ನಿಷೇಧ ಮಾಡುವುದು, ನೈತಿಕ ಪೊಲೀಸ್‌ಗಿರಿ ಆರೋಪ ಮಾಡಿ ಬಂಧಿಸುವ ಕೆಲಸಗಳು ಮುಂದೆ ಆಗಲಿದೆ ಎಂದು ನಮಗೆ ಅನಿಸುತ್ತಿದೆ. ಮುಂದಿನ ದಿನಗಳಲ್ಲಿ ಗೋಹತ್ಯೆ ಕಾಯ್ದೆ, ಮತಾಂತರ ಕಾಯ್ದೆ ನಿಷೇಧಿಸುವ ಕಾರ್ಯತಂತ್ರ ರೂಪುಗೊಂಡಿದೆ. ಆದರೆ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷವಾಗಿ ನಾವು ಜನಸಾಮಾನ್ಯರಿಗೆ ರಕ್ಷಣೆ ಕೊಡ್ತೇವೆ ಎಂದು ಕೋಟ ಶ್ರೀನಿವಾಸ್ ಪೂಜಾರಿ ಭರವಸೆ ನೀಡಿದರು. ಇದನ್ನೂ ಓದಿ: 24 ಹಿಂದೂ ಕಾರ್ಯಕರ್ತರನ್ನು ಸಿದ್ದರಾಮಯ್ಯ ಹತ್ಯೆ ಮಾಡಿದ್ದಾರೆ: ಹರೀಶ್ ಪೂಂಜಾ

  • ಉಡುಪಿ ಜಿಲ್ಲೆಯಲ್ಲಿ ಎಲ್ಲಾ ಐದು ಕ್ಷೇತ್ರಗಳನ್ನು ಗೆಲ್ಲುತ್ತೇವೆ: ಕೋಟಾ ವಿಶ್ವಾಸ

    ಉಡುಪಿ ಜಿಲ್ಲೆಯಲ್ಲಿ ಎಲ್ಲಾ ಐದು ಕ್ಷೇತ್ರಗಳನ್ನು ಗೆಲ್ಲುತ್ತೇವೆ: ಕೋಟಾ ವಿಶ್ವಾಸ

    ಉಡುಪಿ: ಉಡುಪಿ (Udupi) ಜಿಲ್ಲೆಯಲ್ಲಿ ಎಲ್ಲಾ ಐದು ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಉಡುಪಿ ಹಾಗೂ ಕುಂದಾಪುರದಲ್ಲಿ ಬಹುದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ. ಉಳಿದ ಕ್ಷೇತ್ರಗಳಲ್ಲೂ ನಿಶ್ಚಯವಾಗಿ ಗೆಲುವು ಸಾಧಿಸುತ್ತೇವೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತಮ ಮತದಾನವಾದಾಗ ಭಾರತೀಯ ಜನತಾ ಪಕ್ಷಕ್ಕೆ ಅನುಕೂಲವಾಗಿದೆ. ಕಡಿಮೆ ಮತದಾನವಾದಾಗ ಬಿಜೆಪಿ (BJP) ಗೆಲುವು ಕಂಡಿರುವುದು ಕಡಿಮೆ. ಈ ಬಾರಿ ಬಹು ದೊಡ್ಡ ಪ್ರಮಾಣದಲ್ಲಿ ಮತದಾನವಾಗಿದೆ. ಮತದಾನದ ಸಂಖ್ಯೆ ಹೆಚ್ಚಿರುವುದರಿಂದ ಬಿಜೆಪಿಯ ಗೆಲುವಿಗೆ ಪೂರಕವಾಗಲಿದೆ. ಬದಲಾವಣೆಗಾಗಿ ಜನ ಹೆಚ್ಚಿನ ಮತ ಹಾಕಿರಬಹುದು ಮತ್ತು ಆ ಬದಲಾವಣೆ ನಮ್ಮ ಪರವಾಗಿ ಇರಬಹುದು ಎಂದರು. ಇದನ್ನೂ ಓದಿ: ಬಿಎಸ್‌ವೈ ನಿವಾಸದಲ್ಲಿ ನಾಯಕರ ಸಭೆ – ಅಧಿಕಾರಕ್ಕೇರಲು ಬಿಜೆಪಿ ರಣತಂತ್ರ

    ಬೆಂಗಳೂರಿನಲ್ಲಿ (Bengaluru) ಕಡಿಮೆ ಮತದಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದೇಶಕ್ಕೆ ಒಳ್ಳೆಯದಾಗಬೇಕು, ಅಭಿವೃದ್ಧಿ ಆಗಬೇಕು ಎಂದು ಹೇಳುವವರು ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸಬೇಕು. ಹಾಗೆ ಮಾಡಿದರೆ ಪ್ರಜಾಪ್ರಭುತ್ವಕ್ಕೆ ಶಕ್ತಿ ಬರುತ್ತಿತ್ತು. ಅದನ್ನು ಹೇಳುವುದು ಯಾರು, ಮಾಡುವುದು ಯಾರು ಎಂಬ ಚರ್ಚೆಯಿದೆ. ಕಡ್ಡಾಯವಾಗಿ ಮತದಾನ ಮಾಡಿ ಎಂದು ಹೇಳುವ ಹಕ್ಕು ರಾಜಕೀಯ ಸರ್ಕಾರಕ್ಕೆ ಇಲ್ಲ. ಹೆಚ್ಚು ಮತದಾನದಿಂದ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ. ಇಷ್ಟಾದರೂ ಮತದಾನವಾಗಿದೆಯಲ್ಲ ಎಂದು ಹೇಳಿದರು. ಇದನ್ನೂ ಓದಿ: ಸೋಲು-ಗೆಲುವಿನ ಲೆಕ್ಕಾಚಾರ; ‘ಚೊಂಬೇಶ್ವರ’ ಅಂತ ಚೊಂಬು ಶಾಸ್ತ್ರದ ಮೊರೆ ಹೋದ ಕಾರ್ಯಕರ್ತರು

    ರಾಜ್ಯದಲ್ಲಿ ಅತಂತ್ರವಾದರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಆಪರೇಷನ್ ಆಗುವ ಪ್ರಶ್ನೆಯೇ ಬರುವುದಿಲ್ಲ. ಆಪರೇಷನ್ ಕಮಲದ ಅಗತ್ಯವೂ ಇಲ್ಲ. ಅತಂತ್ರ ಆದರೇ ಎಂದು ಕೇಳಿ ನಮ್ಮ ದಾರಿ ತಪ್ಪಿಸಬೇಡಿ. ಅತಂತ್ರ ಬಂದರೆ ಏನು ಮಾಡಬೇಕು ಎಂದು ಪಕ್ಷದ ದೊಡ್ಡವರು ಯೋಚನೆ ಮಾಡುತ್ತಾರೆ. ನಳಿನ್ ಕುಮಾರ್, ಬಸವರಾಜ ಬೊಮ್ಮಾಯಿ, ಅಮಿತ್ ಶಾ, ನಡ್ಡಾ ಅವರ ಮಟ್ಟದಲ್ಲಿ ಚರ್ಚೆ ಮಾಡುತ್ತಾರೆ. ನಾಳಿನ ಫಲಿತಾಂಶದಲ್ಲಿ ಮಾತ್ರ ಯಾವ ಆಪರೇಷನ್ ಅಗತ್ಯ ಬರಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಫಲಿತಾಂಶ ಹೊರಬೀಳುವ ಹೊತ್ತಿನಲ್ಲೇ ರಾಜ್ಯದ ಜನತೆಗೆ ಕರೆಂಟ್‌ ಶಾಕ್ – ವಿದ್ಯುತ್‌ ದರ ಹೆಚ್ಚಳ

    ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (H.D.Kumaraswamy) ಅವರೊಂದಿಗಿನ ರಾಜಕೀಯ ಮಾತುಕತೆ ವಿಚಾರವಾಗಿ ಮಾತನಾಡಿದ ಅವರು, ಮುಂಜಾಗರೂಕತಾ ಕ್ರಮವಾಗಿ ಒಬ್ಬರ ಜೊತೆ ಇನ್ನೊಬ್ಬರು ಮಾತನಾಡಿರಬಹುದು. ನಾಳೆ ಫಲಿತಾಂಶ ಬಂದನಂತರ ಯಾವುದೇ ಆತಂಕ ಇರುವುದಿಲ್ಲ. ಲೆಕ್ಕಾಚಾರ ಮುಗಿದ ನಂತರ ಯಾವುದೇ ಚರ್ಚೆ ಇರುವುದಿಲ್ಲ. ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಯಾರು ಎನ್ನುವುದನ್ನು ಶಾಸಕಾಂಗ ಸಭೆ ತೀರ್ಮಾನ ಮಾಡುತ್ತದೆ ಎಂದರು. ಇದನ್ನೂ ಓದಿ: ವಿಧಾನಸಭೆ ಚುನಾವಣೆ 2023: ಕಣದಲ್ಲಿದ್ದ ಸಿನಿಮಾ ಸೆಲೆಬ್ರಿಟಿಗಳ ಕನಸು ನನಸಾಗತ್ತಾ?

  • ಯಾರೇ ಕೈಮುಗಿದರೂ ಮೋದಿ ವಾಪಸ್ ಕೈಮುಗಿಯುತ್ತಾರೆ- ಕೋಟ ಶ್ರೀನಿವಾಸ ಪೂಜಾರಿ

    ಯಾರೇ ಕೈಮುಗಿದರೂ ಮೋದಿ ವಾಪಸ್ ಕೈಮುಗಿಯುತ್ತಾರೆ- ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ: ಫೈಟರ್ ರವಿ (Fighter Ravi) ಹಾಗೂ ಪ್ರಧಾನಿ ನರೇಂದ್ರ ಮೋದಿ (Narendra Modi) ಪರಸ್ಪರ ನಮಸ್ಕಾರ ಮಾಡಿಕೊಂಡ ಫೋಟೊ ಬಹಳಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಡಿ.ಕೆ.ಶಿವಕುಮಾರ್ (D.K.Shivakumar) ಮತ್ತು ಮನಮೋಹನ್ ಸಿಂಗ್ (Manmohan Singh) ಫೋಟೋವನ್ನು ಹೋಲಿಕೆ ಮಾಡಿ ಜನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಬೆಳವಣಿಗೆಗೆ ಸಂಬಂಧಪಟ್ಟಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಪ್ರತಿಕ್ರಿಯೆ ನೀಡಿದ್ದಾರೆ.

    ಮೋದಿಗೆ ಕೈ ಮುಗಿಯಬಾರದು ಎಂದು ನಾವು ಹೇಳಲು ಆಗುವುದಿಲ್ಲ. ರಾಜಕೀಯ ಪಕ್ಷದ ಕಾರ್ಯಕರ್ತನಾಗಿ ಪ್ರಧಾನ ಮಂತ್ರಿಗೆ ಕೈಮುಗಿಯುತ್ತಾರೆ. ಯಾರೇ ಕೈಮುಗಿದರೂ ವಾಪಾಸ್ ಕೈಮುಗಿಯುವುದು ಪ್ರಧಾನ ಮಂತ್ರಿಗಳು ಇಟ್ಟುಕೊಂಡ ಸಂಪ್ರದಾಯ. ಆತ ಯಾವ ವ್ಯಕ್ತಿ? ಆತನ ಹೆಸರೇನು? ಯಾವ ಸೀಟು ಎನ್ನುವುದು ಪ್ರಧಾನಿಗೆ ಗೊತ್ತಿರುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಅಪ್ಪು ಹೆಸರಿನಲ್ಲಿ ಜೆಡಿಎಸ್, ಕಾಂಗ್ರೆಸ್ ರಾಜಕೀಯ – PSI ಮೇಲೆ ಹಲ್ಲೆ 

    ಭಾರತೀಯನೊಬ್ಬ ಪ್ರಧಾನಿಗೆ ಕೈಮುಗಿದಿದ್ದಾನೆ. ಆತ ರೌಡಿಶೀಟರ್ ಆಗಿದ್ದರೆ ಯಾವ ರಕ್ಷಣೆಯೂ ಇಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಏನಾದರು ಅಪರಾಧ ಮಾಡಿದರೆ ಸಂವಿಧಾನದ ಪ್ರಕಾರ ಕ್ರಮ ಆಗುತ್ತದೆ. ಬಿಜೆಪಿ (BJP) ಪಕ್ಷದ ವಿಜಯ ಸಂಕಲ್ಪ ರಥಯಾತ್ರೆಗೆ (Vijaya Sankalpa Yatra) ಅಭೂತಪೂರ್ವ ಸ್ಪಂದನೆಯನ್ನು ಜನತೆ ನೀಡಿದ್ದಾರೆ. ಯುವಕರ ರಣೋತ್ಸವ, ಕಾಯಕರ್ತರ ಉತ್ಸಾಹದಿಂದಾಗಿ ಸಾವಿರಾರು ಜನರು ರಥಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಇದರ ಆಧಾರದಲ್ಲಿ ಬಿಜೆಪಿ ಪಕ್ಷವು ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸುತ್ತದೆ ಎಂದು ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಗುಬ್ಬಿ ಶ್ರೀನಿವಾಸ್‌ಗೆ ಆಹ್ವಾನ – ಇಬ್ರಾಹಿಂ ವಿರುದ್ಧ ಹೆಚ್‌ಡಿಕೆ ಗರಂ

    ಹಳೇ ಮೈಸೂರು (Mysuru) ಭಾಗದಲ್ಲಿ ಅಭ್ಯರ್ಥಿಯ ಆಯ್ಕೆಗೂ ತಡಕಾಡುತ್ತಿದ್ದ ಕಾಲವಿತ್ತು. ಆದರೆ ಈಗ ನೂರಕ್ಕೆ ನೂರು ಶಕ್ತಿ ವೃದ್ಧಿಸಿದೆ. ಪ್ರಧಾನಿ ಮೋದಿಯವರ ಮಂಡ್ಯ (Mandya) ಭೇಟಿ ವೇಳೆ ಜನರು ತೋರಿದ ಪ್ರೀತಿಯೇ ಇದಕ್ಕೆ ಸಾಕ್ಷಿ ಎಂದರು. ಲೋಕಾಯುಕ್ತಕ್ಕೆ ಹಲ್ಲು ಕೊಟ್ಟದ್ದು ಬಿಜೆಪಿ ಸರ್ಕಾರ. ಶಾಸಕ ವಿರೂಪಾಕ್ಷಪ್ಪ ಮಾಡಾಳ್ (Madal Virupakshappa) ವಿರುದ್ಧ ದಾಖಲಾಗಿರುವ ಲೋಕಾಯುಕ್ತ ಪ್ರಕರಣವು ಚುನಾವಣಾ ಸನಿಹದಲ್ಲಿರುವುದರಿಂದ ಸ್ವಾಭಾವಿಕವಾಗಿ ಚರ್ಚೆಯಾಗುತ್ತದೆ. ಆದರೆ ಲೋಕಾಯುಕ್ತವನ್ನು ಸಂಪೂರ್ಣ ನಿಷ್ಕ್ರಿಯ ಮಾಡಿ, ಎಸಿಬಿ ರಚಿಸಿದ್ದು ಯಾರು ಎಂಬುದು ರಾಜ್ಯದ ಜನರಿಗೆ ತಿಳಿದಿದೆ. ಲೋಕಾಯುಕ್ತಕ್ಕೆ ಮರುಜೀವ ನೀಡಿ, ಶಕ್ತಿ ಕೊಟ್ಟು, ಹಲ್ಲು ಕೊಟ್ಟಿರುವುದು ಬೊಮ್ಮಾಯಿ (Basavaraj Bommai) ನೇತೃತ್ವದ ಬಿಜೆಪಿ ಸರ್ಕಾರ ಎಂದರು. ಇದನ್ನೂ ಓದಿ: ಬಡವರಿಗೆ ಮನೆ, ಅನಾಥಾಶ್ರಮಗಳಿಗೆ ಮಧ್ಯಾಹ್ನದ ಭೋಜನ – ಇದು ದಿನಗೂಲಿ ನೌಕರರಿಂದಲೇ ರಚನೆಯಾದ ಟ್ರಸ್ಟ್‌ 

    ಪಾರದರ್ಶಕ ಆಡಳಿತ ಮತ್ತು ಭ್ರಷ್ಟಾಚಾರ ನಿಯಂತ್ರಣಕ್ಕೆ ತರುವ ಸಲುವಾಗಿ ಲೋಕಾಯುಕ್ತವನ್ನು ಜಾರಿಗೆ ತಂದಿದೆ. ನಮ್ಮ ಸರ್ಕಾರ ಬಿಟ್ಟು ಬೇರೆ ಯಾವ ಸರ್ಕಾರ ಇದ್ದರೂ, ಆಡಳಿತ ಪಕ್ಷದ ಶಾಸಕನ ಮೇಲೆ ಪ್ರಕರಣ ದಾಖಲಾಗಲು ಸಾಧ್ಯವಿತ್ತೆ? ಆರೋಪವಿದೆ, ಅದಕ್ಕೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಸುದ್ದಿಗೋಷ್ಠಿಯಲ್ಲಿ ಸೋಮಣ್ಣ ಕಣ್ಣೀರು – ಬಿಜೆಪಿ ಬಿಡಲ್ಲ ಎಂದು ಸ್ಪಷ್ಟನೆ

  • ಪರೇಶ್ ಮೆಸ್ತಾ ಸಾವು ಬಿಜೆಪಿ ಪ್ರೇರಿತ ಸಾವು: ಹರಿಪ್ರಸಾದ್‌

    ಪರೇಶ್ ಮೆಸ್ತಾ ಸಾವು ಬಿಜೆಪಿ ಪ್ರೇರಿತ ಸಾವು: ಹರಿಪ್ರಸಾದ್‌

    ಬೆಂಗಳೂರು : ಪರೇಶ್ ಮೆಸ್ತಾ ಪ್ರಕರಣ ಮತ್ತೆ ಇವತ್ತು ವಿಧಾನ ಪರಿಷತ್‌ನಲ್ಲಿ ಸದ್ದು ಮಾಡಿತು‌. ಆಡಳಿತ – ವಿಪಕ್ಷಗಳ ನಡುವೆ ಮಾತಿನ ಚಕಮಕಿ, ಗದ್ದಲ ಗಲಾಟೆಗೆ ಕಾರಣವಾಯಿತು.

    ರಾಜ್ಯಪಾಲರ ಭಾಷಣದ ಮೇಲೆ ವಿಪಕ್ಷ ನಾಯಕರ ಹರಿಪ್ರಸಾದ್‌ ಭಾಷಣ ಮಾಡುತ್ತಿದ್ದರು. ಈ ವೇಳೆ ಪರೇಶ್ ಮೆಸ್ತಾ ಪ್ರಕರಣ ಉಲ್ಲೇಖ ಮಾಡಿದರು. ಬಿಜೆಪಿ ಅವರು ಇದನ್ನು ಕೊಲೆ ಅಂದರು‌. ಆದರೆ ಸಿಬಿಐ ಇದನ್ನ ಆಕಸ್ಮಿಕ ಸಾವು ಅಂತ ಹೇಳಿತು ಎಂದರು.

    ಇದಕ್ಕೆ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ವಿರೋಧ ವ್ಯಕ್ತಪಡಿಸಿದರು. ಬಾಯಿಗೆ ಬಂದ ಹಾಗೆ ಮಾತಾಡಬೇಡಿ ಎಂದರು. ಪರೇಶ್ ಮೆಸ್ತಾ (Paresh Mesta) ತಂದೆ ಏನ್ ಹೇಳಿದ್ದಾರೆ ನೋಡಿ ಅಂತ ಹರಿಪ್ರಸಾದ್‌ ವಿರುದ್ಧ ಕಿಡಿಕಾರಿದರು.

    ಈ ವೇಳೆ ಮತ್ತೆ ಹರಿಪ್ರಸಾದ್‌ (BK Hariprasad) ‌ಮಾತನಾಡಿ, ಪರೇಶ್ ಮೆಸ್ತಾ ಸಾವು ಮಾಡಿಸಿದ್ದೇ ಬಿಜೆಪಿ. ಇದು ಬಿಜೆಪಿ (BJP) ಪ್ರೇರಿತ ಕೊಲೆ ಎಂದರು. ಹರಿಪ್ರಸಾದ್‌ ಮಾತಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿದರು. ನಿಮ್ಮ ಮನಸ್ಸಿಗೆ ಬಂದ ಹಾಗೆ ಮಾತಾಡಬೇಡಿ. 23 ಜನ ಹಿಂದೂ ಸತ್ತಾಗ ಎಲ್ಲಿ ಹೋಗಿದ್ರಿ ನೀವು. ಪರೇಶ್ ಮೆಸ್ತಾ ಕೇಸ್‌ನಲ್ಲಿ ಅವರ ತಂದೆ ಏನು ಹೇಳಿದರು. ಏನೇನೋ ಮಾತಾಡಬೇಡಿ ಎಂದು ಮತ್ತೆ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.

    ಈ ವೇಳೆ ಸದನದಲ್ಲಿ ಮಾತಿನ ಚಕಮಕಿ ನಡೀತು. ಆಡಳಿತ ಪಕ್ಷ-ವಿಪಕ್ಷ ನಡುವೆ ಗದ್ದಲ ಗಲಾಟೆ ಆಯ್ತು. ಈ ವೇಳೆ ನನಗೆ ರಕ್ಷಣೆ ಬೇಕು. ನನ್ನ ಮಾತಿಗೆ ಯಾರು ಅಡ್ಡಿ ಬರಬಾರದು. ಇಲ್ಲದೆ ಹೋದ್ರೆ ನಾನು ಧರಣಿ ಮಾಡುತ್ತೇನೆ ಎಂದ ಹರಿಪ್ರಸಾದ್‌ ಮುಂದಾದರು.

    ಬಳಿಕ ಪೂಜಾರರನ್ನ ಸಭಾಪತಿಗಳು ಸಮಾಧಾನ ಮಾಡಿದರು. ಮಾತು ಮುಂದುವರೆಸಿದ ಹರಿಪ್ರಸಾದ್, ತಮ್ಮ ಕೆಲಸ ಮಾಡುವುದಕ್ಕೆ ಬಡವರ ಮಕ್ಕಳನ್ನು ಬಲಿ ಕೊಡೋಕೆ ಹೊರಟಿದ್ದಾರೆ. MLA ಮಕ್ಕಳು ಎಂಪಿ ಮಕ್ಕಳನ್ನು ರಕ್ಷಣೆ ಮಾಡಲು ಬಡವರ ಮಕ್ಕಳನ್ನ ಬಾವಿಗೆ ತಳುತ್ತೀರಾ? ಎಂದರು. ಇದನ್ನೂ ಓದಿ: ಜೂನ್ ಅಂತ್ಯಕ್ಕೆ ರಾಜ್ಯದ ಸ್ಮಾರ್ಟ್ ಸಿಟಿ ಕಾಮಗಾರಿಗಳು ಪೂರ್ಣ: ಭೈರತಿ ಬಸವರಾಜ್

    ಮತ್ತೆ ಪೂಜಾರಿ ಹರ್ಷಾ ಕೊಲೆ ಮಾಡಿದಾಗ ಕಾಂಗ್ರೆಸ್ ಅವರು ಖಂಡಿಸಿದ್ರಾ? ಎಂದರು. ಇದಕ್ಕೆ ನಾವು ಖಂಡಿಸಿದ್ದೇವೆ ಎಂದು ಹರಿಪ್ರಸಾದ್‌ ಹೇಳಿದರು. ಈ ವೇಳೆ ಮತ್ತೆ ಗದ್ದಲ ಗಲಾಟೆ ಆಯ್ತು. ಇದನ್ನೂ ಓದಿ: ಸಹಕಾರಿ ಬ್ಯಾಂಕ್‌ಗಳ ಅಕ್ರಮದ ತನಿಖೆ ಸಿಬಿಐಗೆ: ಎಸ್‌.ಟಿ.ಸೋಮಶೇಖರ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡಿಸೆಂಬರ್‌ನಲ್ಲಿ ಅಸ್ಪೃಶ್ಯತೆ ನಿವಾರಣೆಯ ಜಾಗೃತಿ ಸಮಾವೇಶ – ಏನಿದು ವಿನಯ ಸಾಮರಸ್ಯ ಯೋಜನೆ

    ಡಿಸೆಂಬರ್‌ನಲ್ಲಿ ಅಸ್ಪೃಶ್ಯತೆ ನಿವಾರಣೆಯ ಜಾಗೃತಿ ಸಮಾವೇಶ – ಏನಿದು ವಿನಯ ಸಾಮರಸ್ಯ ಯೋಜನೆ

    ಬೆಂಗಳೂರು: ಅಸ್ಪೃಶ್ಯತೆ (Untouchability) ನಿವಾರಣೆಗಾಗಿ ರೂಪಿಸಲಾಗಿರುವ ವಿನಯ ಸಾಮರಸ್ಯ ವಿನೂತನ ಯೋಜನೆಯ ಬೃಹತ್ ಸಮಾವೇಶ ಡಿಸೆಂಬರ್ ತಿಂಗಳಲ್ಲಿ ಹಮ್ಮಿಕೊಂಡಿರುವುದಾಗಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ (kota srinivas poojary) ತಿಳಿಸಿದ್ದಾರೆ.

    ಅನಾರೋಗ್ಯದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು, ವಿನಯ ಸಾಮರಸ್ಯ ಯೋಜನೆಯ (Vinaya Samarasya Yojana) ಚಾಲನಾ ಸಮಾವೇಶ ಸಂಬಂಧ ಇಲಾಖೆ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ಮೂಲಕ ಸಭೆ ನಡೆಸಿದರು. ಅಸ್ಪೃಶ್ಯತೆ ನಿವಾರಣೆಗಾಗಿ ಇಲಾಖೆಯಿಂದ ರೂಪಿಸಿರುವ ವಿನೂತನ ವಿನಯ ಸಾಮರಸ್ಯ ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ನೀಡಬೇಕಿದ್ದು, ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಪುರುಷರು ಜೊತೆಯಲ್ಲಿರದಿದ್ದರೆ ಮಹಿಳೆಯರಿಗಿಲ್ಲ ಜಾಮಾ ಮಸೀದಿ ಪ್ರವೇಶ

    kota srinivas poojary

    ಅಸ್ಪೃಶ್ಯತೆಯಂತಹ ಅನಿಷ್ಠ ಪದ್ಧತಿಯನ್ನು ಅನುಭವಿಸುವವರಿಗಿಂತ ಅನುಸರಿಸುವವರಿಗೆ ಜಾಗೃತಿ ಮೂಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟೇತರ ಸಮುದಾಯಗಳ ಧುರೀಣರು, ಮಠಾಧಿಪತಿಗಳು, ಧಾರ್ಮಿಕ ಮುಖಂಡರನ್ನು ಸಮಾವೇಶಕ್ಕೆ ಆಹ್ವಾನಿಸಬೇಕು. ಈ ಮೂಲಕ ಸಮಾಜದಲ್ಲಿನ ಅಸ್ಪೃಶ್ಯತೆ ನಿವಾರಣೆಯ ಜಾಗೃತಿ ಸಮಾವೇಶ ಅರ್ಥಪೂರ್ಣವಾಗಿ ಯಶಸ್ವಿಯಾಗಬೇಕು ಎಂದಿದ್ದಾರೆ. ಇದನ್ನೂ ಓದಿ: ಹಿಂದೂ ಸಂಘಟನೆಗಳನ್ನು ಟಾರ್ಗೆಟ್ ಮಾಡಲಾಗ್ತಿದ್ದು, ದೇವರ ದಯೆಯಿಂದ ಇದು ಸಾಧ್ಯವಾಗಲಿಲ್ಲ: ಸಿಟಿ ರವಿ

    ಬೆಂಗಳೂರು ಅಥವಾ ಕೊಪ್ಪಳದಲ್ಲಿ ಸಮಾವೇಶ ಹಮ್ಮಿಕೊಳ್ಳುವ ಬಗ್ಗೆ ಸದ್ಯದಲ್ಲಿಯೇ ಸ್ಥಳ ಹಾಗೂ ದಿನಾಂಕ ಅಂತಿಮಗೊಳಿಸಲಾಗುವುದು. ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿಯವರು ವಿನಯ ಸಾಮರಸ್ಯ ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಬರುವ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯ್ತಿ ಹಂತದಲ್ಲೂ ಈ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಬೇಕಿದ್ದು, ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಹಾಗೂ ಚಾಲನಾ ಸಮಾವೇಶ ಅರ್ಥಪೂರ್ಣ ಕಾರ್ಯಕ್ರಮವಾಗಿಸುವ ಮೂಲಕ ಯಶಸ್ವಿಗೊಳಿಸಲು ಶ್ರಮಿಸಬೇಕೆಂದು ಹೇಳಿದ್ದಾರೆ.

    ಏನಿದು ವಿನಯ ಸಾಮರಸ್ಯ ಯೋಜನೆ?
    2021ರ ಸೆಪ್ಟೆಂಬರ್‍ನಲ್ಲಿ ಕೊಪ್ಪಳ ಜಿಲ್ಲೆ ಮಿಯಾಪುರದಲ್ಲಿ ದಲಿತ ಸಮುದಾಯದ ನಾಲ್ಕು ವರ್ಷದ ಬಾಲಕ ವಿನಯ್ ಮಾರುತಿ ದೇವಸ್ಥಾನ ಪ್ರವೇಶಿಸಿದ್ದನು. ಇದರಿಂದ ಗ್ರಾಮದ ಸವರ್ಣಿಯರು ಬಾಲಕನ ಪೋಷಕರಿಗೆ 25 ಸಾವಿರ ರೂ. ದಂಡ ವಿಧಿಸಿ ಊರಿಂದ ಭಹಿಷ್ಕರಿಸಿದ್ದರು. ಸುದ್ದಿ ತಿಳಿದ ಜಿಲ್ಲಾಡಳಿತ ಹಾಗೂ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದ್ದರು. ಅಲ್ಲದೇ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ವಿನಯ್ ಹೆಸರಿನಲ್ಲಿ ಅಸ್ಪೃಶ್ಯತೆ ನಿವಾರಣೆಯ ವಿನಯ ಸಾಮರಸ್ಯ ಯೋಜನೆಯನ್ನು ಸರ್ಕಾರ ಘೋಷಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ 2-3 ತಿಂಗಳಲ್ಲಿ ಭಿಕ್ಷಾಟನೆ ತಡೆಗೆ ಕ್ರಮ: ಕೋಟಾ ಶ್ರೀನಿವಾಸ ಪೂಜಾರಿ

    ಬೆಂಗಳೂರಿನಲ್ಲಿ 2-3 ತಿಂಗಳಲ್ಲಿ ಭಿಕ್ಷಾಟನೆ ತಡೆಗೆ ಕ್ರಮ: ಕೋಟಾ ಶ್ರೀನಿವಾಸ ಪೂಜಾರಿ

    ಬೆಂಗಳೂರು: ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ನಡೆಯುತ್ತಿರುವ ಭಿಕ್ಷಾಟನೆಯನ್ನು ಎರಡು ಮೂರು ತಿಂಗಳಿನಲ್ಲಿ ನಿಯಂತ್ರಣ ಮಾಡುವ ಎಲ್ಲಾ ಪ್ರಯತ್ನ ನಡೆಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ (Kota Srinivasa Poojary) ತಿಳಿಸಿದ್ದಾರೆ.

    ವಿಧಾನ ಪರಿಷತ್ (Vidhana Parishad) ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಅ.ದೇವೇಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯ ಬೆಂಗಳೂರಿನಲ್ಲಿ ಭಿಕ್ಷಾಟನೆ ನಿಯಂತ್ರಿಸುವ ಅನಿವಾರ್ಯತೆ ಇದೆ ಎಂದರು. ಇದನ್ನೂ ಓದಿ: ತಿಂಗಳಾದ್ರೂ ಶಾಲಾ ಆವರಣದ ನೀರು ಹೊರಹಾಕದೇ ನಿರ್ಲಕ್ಷ್ಯ- ಇದು ಹೆಚ್‍ಡಿಕೆ ಸ್ವಕ್ಷೇತ್ರದ ದುಸ್ಥಿತಿ

    ಯಾವುದೋ ಮಕ್ಕಳನ್ನು ಬಾಡಿಗೆಗೆ ಪಡೆದು ಅವರಿಗೆ ಮತ್ತು ಬರುವ ಔಷಧಿ ನೀಡಿ ಮಗುವನ್ನು ಎತ್ತಿಕೊಂಡು ಅನುಕಂಪ ಗಿಟ್ಟಿಸಿಕೊಂಡು ಭಿಕ್ಷಾಟನೆ ನಡೆಸಲಾಗುತ್ತಿದೆ. ಭಿಕ್ಷಾಟನೆ ನಂತರ ಆ ಮಗುವನ್ನು ಪೋಷಕರಿಗೆ ವಾಪಸ್ ಕೊಡುವ ಘಟನೆ ನಡೆಯುತ್ತಿದೆ. ಅವರನ್ನು ರಕ್ಷಿಸಬೇಕಿದೆ ಎಂದು ಹೇಳಿದರು.

    ಅದೇ ರೀತಿ ವೃದ್ಧರನ್ನು ಬಳಸಿಕೊಂಡು ಭಿಕ್ಷಾಟನೆ ಮಾಡಲಾಗುತ್ತಿದೆ. ತೃತೀಯ ಲಿಂಗಿಗಳು ಕೂಡ ಭಿಕ್ಷಾಟನೆ (Beggar) ಮಾಡುತ್ತಿದ್ದು ಕೆಲ ಕಡೆ ಅಹಿತಕರ ಘಟನೆ ನಡೆಯುತ್ತಿದೆ ಎನ್ನುವುದು ಗಮನಕ್ಕೆ ಬಂದಿದೆ. ಇದರ ನಿಯಂತ್ರಣಕ್ಕಾಗಿಯೇ ಡಿಸಿಪಿ ನೇತೃತ್ವದಲ್ಲಿ 8 ಟಾಸ್ಕ್ ಫೋರ್ಸ್ ರಚಿಸಿದ್ದು, ಭಿಕ್ಷಾಟನೆ ನಿಯಂತ್ರಣಕ್ಕೆ ಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

    18 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಬಂಧನ ಮಾಡುವಂತಿಲ್ಲದ ಕಾರಣ ಕಾನೂನು ಸಚಿವರ ಜೊತೆ ಚರ್ಚಿಸಿ ಅವರ ರಕ್ಷಣೆಗೆ ಕ್ರಮ ವಹಿಸಲಾಗುತ್ತದೆ. ಎರಡು ಮೂರು ತಿಂಗಳಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲೂ ಭಿಕ್ಷಾಟನೆ ನಿಯಂತ್ರಣಕ್ಕೆ ಪ್ರಯತ್ನಿಸಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.

    Live Tv
    [brid partner=56869869 player=32851 video=960834 autoplay=true]

  • ಮೊದಲ ದಲಿತ, ಮುಸ್ಲಿಂ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ- ಟ್ವೀಟ್ ಮಾಡಿ ಮುಜುಗರಕ್ಕೀಡಾದ ಕೋಟಾ

    ಮೊದಲ ದಲಿತ, ಮುಸ್ಲಿಂ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ- ಟ್ವೀಟ್ ಮಾಡಿ ಮುಜುಗರಕ್ಕೀಡಾದ ಕೋಟಾ

    ಬೆಂಗಳೂರು: ವಾಟ್ಸಾಪ್‌ನಲ್ಲಿ ಬಂದ ಸುಳ್ಳು ಸುದ್ದಿಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತೀವ್ರ ಮುಜುಗರಕ್ಕೀಡಾಗಿದ್ದಾರೆ. ಬಳಿಕ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.

    ಯಾವ್ಯಾವ ಸಮುದಾಯದವರನ್ನು ಬಿಜೆಪಿ ರಾಷ್ಟ್ರಪತಿ ಮಾಡಿದೆ ಎಂಬ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಟ್ವೀಟ್ ಮಾಡಿದ್ದಾರೆ. ಮೊದಲ ಮುಸ್ಲಿಂ ರಾಷ್ಟ್ರಪತಿಯನ್ನು ಮಾಡಿದ್ದು ನಾವೇ.. ಮೊದಲ ದಲಿತ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದು ನಾವೇ.. ಮೊದಲ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದು ನಾವೇ.. ನಾವು ಜಾತಿವಾದಿಗಳಲ್ಲ.. ರಾಷ್ಟ್ರವಾದಿಗಳು.. ವಾಟ್ಸಾಪ್‌ನಲ್ಲಿ ಬಂದ ಸಂದೇಶ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಸಾರ್ವಜನಿಕ ವಲಯದಲ್ಲೂ ಸಾಕಷ್ಟು ಆಕ್ಷೇಪ, ಟೀಕೆಗಳು ವ್ಯಕ್ತವಾಗಿವೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ಹಿಟ್‌ಮ್ಯಾನ್ – ಭಾವುಕ ಪತ್ರ ಬರೆದ ರೋಹಿತ್ ಶರ್ಮಾ

    ಇದಕ್ಕೆ ವಾಟ್ಸಾಪ್ ವಿಶ್ವವಿದ್ಯಾನಿಲಯದವರ ಜ್ಞಾನದ ಮಟ್ಟ ಇದು ಎಂದು ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಕೋಟಾ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದುಕೊಂಡು ವಾಟ್ಸಾಪ್‌ನಲ್ಲಿ ಬಂದಿದ್ದನ್ನು ಯಥಾವತ್ತಾಗಿ ಪೋಸ್ಟ್ ಮಾಡುತ್ತಾರೆ ಎಂದರೆ ಅವರ ಬುದ್ದಿಗೆ ಎಷ್ಟು ಮಂಕು ಕವಿದಿರಬಹುದು? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಬಿಕ್ಕಟ್ಟು; ಡೀಸೆಲ್‌ಗಾಗಿ ಬಂಕ್‌ನಲ್ಲಿ 5 ದಿನ ಕ್ಯೂನಲ್ಲಿ ನಿಂತಿದ್ದ ಟ್ರಕ್‌ ಡ್ರೈವರ್‌ ಸಾವು

    ಪೂಜಾರಿಯವರೇ ವಾಟ್ಸ್ಅಪ್‌ನಲ್ಲಿ ಬಂದಿರುವುದನ್ನು ಪೋಸ್ಟ್ ಮಾಡುವ ಮುನ್ನ ಇತಿಹಾಸ ಓದಿಕೊಳ್ಳಿ. ಮೊದಲ ಮುಸ್ಲಿಂ ರಾಷ್ಟ್ರಪತಿ ಕಾಂಗ್ರೆಸ್‌ನ ಕೊಡುಗೆ, ಮೊದಲ ಸಿಖ್ಖ್ ರಾಷ್ಟ್ರಪತಿ ಕಾಂಗ್ರೆಸ್‌ನ ಕೊಡುಗೆ, ಮೊದಲ ದಲಿತ ರಾಷ್ಟ್ರಪತಿಯೂ ಕಾಂಗ್ರೆಸ್‌ನ ಕೊಡುಗೆ, ಅಷ್ಟೆ ಏಕೆ? ಮೊದಲ ಮಹಿಳಾ ರಾಷ್ಟ್ರಪತಿಯ ಕೊಡುಗೆಯೂ ಕಾಂಗ್ರೆಸ್‌ನದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

    ನೀವು ರಾಷ್ಟ್ರವ್ಯಾದಿಗಳು: ಕಾಂಗ್ರೆಸ್ ಯಾವತ್ತೂ ರಾಷ್ಟ್ರಪತಿ ಮಾಡಿದ್ದನ್ನು ಪ್ರಚಾರಕ್ಕೆ ಬಳಸಲಿಲ್ಲ. ಇದೇ ಕಾಂಗ್ರೆಸ್‌ಗೂ ಬಿಜೆಪಿಗೂ ಇರುವ ವ್ಯತ್ಯಾಸ. ನೀವು ರಾಷ್ಟ್ರವಾದಿಗಳಲ್ಲ. ರಾಷ್ಟ್ರವ್ಯಾದಿಗಳು ಎಂದು ದಿನೇಶ್ ಗುಂಡೂರಾವ್ ಕುಟುಕಿದ್ದಾರೆ.

    Live Tv

  • RSS ಚಡ್ಡಿ ಬಗ್ಗೆ ಸಿದ್ದರಾಮಯ್ಯ ಭಯಭೀತರಾಗಿದ್ದಾರೆ: ಕೋಟ ಶ್ರೀನಿವಾಸ ಪೂಜಾರಿ

    RSS ಚಡ್ಡಿ ಬಗ್ಗೆ ಸಿದ್ದರಾಮಯ್ಯ ಭಯಭೀತರಾಗಿದ್ದಾರೆ: ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ: ಆರ್‌ಎಸ್‍ಎಸ್ ಚಡ್ಡಿ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭಯಭೀತರಾಗಿದ್ದಾರೆ ಎಂದು ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದರು.

    ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಆರ್‌ಎಸ್‍ಎಸ್‍ನ ಚಡ್ಡಿ ವಿಚಾರವಾಗಿ ಭಾರೀ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಆರ್‌ಎಸ್‍ಎಸ್‍ನ ಚಡ್ಡಿ ಸುಡಿ ಎಂದು ಸಿದ್ದರಾಮಯ್ಯ ಅವರು ಕರೆಕೊಟ್ಟಿದ್ದಾರೆ. ಈ ಕುರಿತು ಪ್ರತಿಕ್ರಿಯೆ ಕೊಟ್ಟ ಅವರು, ಆರ್‌ಎಸ್‍ಎಸ್ ಚಡ್ಡಿ ಬಗ್ಗೆ ಸಿದ್ದರಾಮಯ್ಯ ಅವರು ಭಯಭೀತರಾಗಿದ್ದಾರೆ. ಚಡ್ಡಿ ಸುಡಲು ಹೊರಟಿರುವ ಸಿದ್ದರಾಮಯ್ಯ ಬಗ್ಗೆ ಮರುಕ ಪಡಬೇಕು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ:  ಕಾಂಗ್ರೆಸ್ ಉಗ್ರಗಾಮಿಗಳ ಸಂತಾನ: ಸಿದ್ದು ಸವದಿ

    ಅಂದಿನ ಪ್ರಧಾನಿ ನೆಹರೂ ಅವರು ಆರ್‌ಎಸ್‍ಎಸ್ ಸಂಘವನ್ನು ಪ್ರಶಂಸಿಸಿದ್ದರು. ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆರ್‌ಎಸ್‍ಎಸ್‍ಗೆ ಅವಕಾಶ ಕೊಟ್ಟಿದ್ದರು. ಪ್ರಣಬ್ ಮುಖರ್ಜಿ ನಾಗಪುರದಲ್ಲಿ ಆರ್‌ಎಸ್‍ಎಸ್ ರಾಷ್ಟ್ರಭಕ್ತರ ಸಂಘಟನೆ ಎಂದು ಹೇಳಿದ್ದರು. ಆರ್‌ಎಸ್‍ಎಸ್ ಚಡ್ಡಿ ಸುಡಲು ಹೊರಟರೆ ಕಾಂಗ್ರೆಸ್ ಅಧೋಗತಿಗೆ ಕಾರಣವಾಗುತ್ತೆ. ಚಡ್ಡಿ ಹಾಕಿಕೊಂಡೇ ಚಡ್ಡಿ ಸುಡಿ ಎಂದು ಯಾರೋ ಹೇಳಿದರು ಎಂದು ತಿರುಗೇಟು ಕೊಟ್ಟರು.

    ದಿನದಿಂದ ದಿನಕ್ಕೆ ಕಾಂಗ್ರೆಸ್ ವೋಟುಗಳು ಕಡಿಮೆಯಾಗೋದು ಖಚಿತ. ರಾಜ್ಯಾದ್ಯಂತ ಸಿದ್ದರಾಮಯ್ಯ ಅವರಿಗೆ ನಲಪಾಡ್ ಅವರಿಗೆ ಮತ್ತು ಕೆಪಿಸಿಸಿ ಕಚೇರಿಗೆ ಚಡ್ಡಿಗಳನ್ನು ಕಳುಹಿಸಿಕೊಡುವ ಮೂಲಕ ಪ್ರತಿಭಟನೆ ನಡೆಯುತ್ತಿದೆ. ರಾಜ್ಯದ ಜನ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ ಎಂದರು.

  • ಯಾವ ರಾಜ್ಯದಲ್ಲಿ 150 ಸೀಟು ಗೆಲ್ತೀರಾ – ಕಾಂಗ್ರೆಸ್‍ಗೆ ಕುಟುಕಿದ ಕೋಟ ಶ್ರೀನಿವಾಸ ಪೂಜಾರಿ

    ಯಾವ ರಾಜ್ಯದಲ್ಲಿ 150 ಸೀಟು ಗೆಲ್ತೀರಾ – ಕಾಂಗ್ರೆಸ್‍ಗೆ ಕುಟುಕಿದ ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ: ಬಿಜೆಪಿ ಈ ಬಾರಿ 150 ಸೀಟು ಗೆಲ್ಲುತ್ತದೆ. ಆದರೆ ಕಾಂಗ್ರೆಸ್ ಹೇಳುವ 150 ಸೀಟು ಯಾವ ರಾಜ್ಯದ್ದು ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಂದು ವ್ಯಂಗ್ಯವಾಡಿದ್ದಾರೆ.

    ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಯ ಸಿದ್ಧತೆಗಳನ್ನು ಮಾಡುತ್ತಿವೆ. ಆಡಳಿತ ಪಕ್ಷ ಬಿಜೆಪಿ ಉಳಿದ ಎಲ್ಲಾ ಪಕ್ಷಗಳಿಗಿಂತ ಅಬ್ಬರದ ತಯಾರಿಗಳನ್ನು ಮಾಡುತ್ತಿವೆ. ಪ್ರಮುಖ ಮೂರು ಪಕ್ಷಗಳು ಈಗಾಗಲೇ 150ರ ಜಪವನ್ನು ಮಾಡಲು ಆರಂಭಿಸಿದೆ.

    ಬಿಜೆಪಿಯ ರಾಜ್ಯ ಕಾರ್ಯಕಾರಿಣಿಯಲ್ಲಿ ಮಿಷನ್ 150 ಪ್ಲಸ್ ಘೋಷಣೆ ಮಾಡಲಾಗಿದೆ. ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಈ ಬಾರಿ 150ಸೀಟು ಗೆಲ್ಲುತ್ತೇವೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಈ ನಡುವೆ ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ಕೂಡ ಜನ ಈ ಬಾರಿ ನಮಗೆ 150 ಸೀಟು ಆಶೀರ್ವಾದ ಮಾಡುತ್ತಾರೆ ಎಂದು ಅಚ್ಚರಿಯ ಹೇಳಿಕೆ ನೀಡುತ್ತಿದ್ದಾರೆ. ಇದನ್ನೂ ಓದಿ: ದಲಿತ ಹುಡುಗನಿಗೆ ಕಾಲು ನೆಕ್ಕಲು ಒತ್ತಾಯ – ವೀಡಿಯೋ ವೈರಲ್, 8 ಮಂದಿ ಅರೆಸ್ಟ್

    ಎಲ್ಲ ಬೆಳವಣಿಗೆಗಳ ನಡುವೆ ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೋಟ, 150 ಸೀಟು ಗೆಲ್ಲುತ್ತೀರಾ? ಗೆಲುವಿಗೆ ಬೇಕಾದ ಸಂಘಟನಾತ್ಮಕ ವ್ಯೂಹ ರಚನೆಯಾಗಿದೆ. ಕಾರ್ಯಕಾರಿಣಿಯಲ್ಲಿ ಮುಂದಿನ ಚುನಾವಣೆ ರೂಪುರೇಷೆ ಮಾಡಲಾಗಿದೆ. ಜನಾದೇಶದ ಮೂಲಕ ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಉತ್ತರಿಸುತ್ತೇವೆ. ಬಿಜೆಪಿ 150ಕ್ಕೂ ಹೆಚ್ಚು ಸೀಟು ಗೆಲ್ಲುತ್ತದೆ. ಕಾಂಗ್ರೆಸ್ ಗೆಲ್ಲಲಿರುವ 150 ಸೀಟು ಯಾವ ರಾಜ್ಯದ್ದು ಎಂದು ಪ್ರಶ್ನಿಸಿದರು.

    ಈ ನೂರೈವತ್ತು ಸೀಟಿನ ವಿಚಾರದಲ್ಲಿ ರಾಜ್ಯದ ಜನ ಗೊಂದಲದಲ್ಲಿದ್ದಾರೆ. ಎಲ್ಲಾ ಗೊಂದಲಗಳಿಗೆ ಸಿದ್ದರಾಮಯ್ಯ ಡಿಕೆಶಿಯೇ ಉತ್ತರಿಸಬೇಕು. ಅವರು ಯಾವ ರಾಜ್ಯದ ಚುನಾವಣೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುವುದನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಸಂತೋಷ್ ಪಾಟೀಲ್ ಕುಟುಂಬಕ್ಕೆ 5 ಲಕ್ಷ ರೂ. ನೀಡುವ ಭರವಸೆ ಕೊಟ್ಟ ಕಾಂಗ್ರೆಸ್ ಶಾಸಕ

  • ಸಿದ್ದರಾಮಯ್ಯನವರ ಮಾನಸಿಕ ಸ್ಥಿತಿ ನ್ಯಾಯಾಲಯದ ತೀರ್ಪನ್ನು ಸಹ ಗೌರವಿಸುತ್ತಿಲ್ಲ: ಕೋಟ ಶ್ರೀನಿವಾಸ ಪೂಜಾರಿ

    ಸಿದ್ದರಾಮಯ್ಯನವರ ಮಾನಸಿಕ ಸ್ಥಿತಿ ನ್ಯಾಯಾಲಯದ ತೀರ್ಪನ್ನು ಸಹ ಗೌರವಿಸುತ್ತಿಲ್ಲ: ಕೋಟ ಶ್ರೀನಿವಾಸ ಪೂಜಾರಿ

    ಕಾರವಾರ: ಸಿದ್ದರಾಮಯ್ಯನವರ ಮಾನಸಿಕ ಸ್ಥಿತಿ ಹೇಗಿದೆ ಅಂದ್ರೆ ನ್ಯಾಯಾಲಯದ ತೀರ್ಪನ್ನು ಸಹ ಗೌರವಿಸುತ್ತಿಲ್ಲ ಎಂದು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಕೋಟಾ ‌ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದರು.

    ಕಾರವಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಹೇಳಿಕೆ ಕಾಲಕಾಲಕ್ಕೆ ಸ್ಫೋಟಗೊಂಡಾಗ ಅದು ಬಿಜೆಪಿಗೆ ಅನುಕೂಲವಾಗುತ್ತೆ. ಕೆಲವೊಮ್ಮೆ ಸಿದ್ದರಾಮಯ್ಯ ಇಂತಹ ಹೇಳಿಕೆ ಕೊಡುತ್ತಿರುತ್ತಾರೆ. ಇದರಿಂದ ನಮ್ಮ ಪಕ್ಷಕ್ಕೆ ವರವಾಗುತ್ತದೆ ಎಂದರು. ಇದನ್ನೂ ಓದಿ: ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ, ಸಿದ್ದರಾಮಯ್ಯ ಧೋರಣೆ- ಬಿಜೆಪಿ ತಿರುಗೇಟು

    ಉಡುಪಿ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಹಿಂದೂ ದೇವರ ಜಾತ್ರೆಗಳಲ್ಲಿ ಇಸ್ಲಾಂ ಧರ್ಮದವರ ಅಂಗಡಿಗಳ ನಿರ್ಬಂಧ ಕುರಿತು ಮಾತನಾಡಿ, ಅಲ್ಲಲ್ಲಿ ಕೆಲವು ಕಡೆ ಇಂತಹ ಘಟನೆಗಳು ನಡೆದಿವೆ. ಧಾರ್ಮಿಕ ಸ್ಥಳಗಳ ಬಗ್ಗೆ ಕಾಯ್ದೆಯನ್ನು ಈ ಹಿಂದೆ ತಂದವರು ಕಾಂಗ್ರೆಸ್‍ನವರು. ಈ ಹಿಂದೆ ಇದ್ದ ಕಾಯ್ದೆ ಅನುಷ್ಠಾನ ಆಗಿರಬಹುದೇ ಹೊರತು ನಾವು ಹೊಸದಾಗಿ ಕಾನೂನು ತಂದಿಲ್ಲ ಎಂದು ಕಾಂಗ್ರೆಸ್‍ಗೆ ಟಾಂಗ್ ಕೊಟ್ಟರು. ಇದನ್ನೂ ಓದಿ: ಕಾಂಗ್ರೆಸ್ ಉಳಿಯಬೇಕಾದ್ರೆ ಮೊದಲು ಸಿದ್ದರಾಮಯ್ಯರನ್ನು ವಜಾ ಮಾಡಿ: ಈಶ್ವರಪ್ಪ

    ಎಲ್ಲ ಧರ್ಮದವರು ಸಮಾನರು, ನೆಮ್ಮದಿಯಿಂದ ಬದಕುವ ಕಲ್ಪನೆಗೆ ಒತ್ತುಕೊಟ್ಟು ಬಿಜೆಪಿ ಪಕ್ಷ ಕೆಲಸ ಮಾಡುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ದೇಶದ್ರೋಹ, ಧರ್ಮ ದ್ರೋಹ ಮಾಡುವಂತ ಪೋಸ್ಟ್‌ಗಳನ್ನು ಹಾಕಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.