ಚಿಕ್ಕಮಗಳೂರು: ಲೋಕಸಭಾ ಚುನಾವಣಾ ಪ್ರಚಾರದ (Loksabha Election Campaign) ವೇಳೆ ಬಿಜೆಪಿ ಕಾರ್ಯಕರ್ತ ಹಾಗೂ ಚುರುಮುರಿ ವ್ಯಾಪಾರಿಯೋರ್ವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿಗೆ 25,000 ಹಣ ನೀಡಿ ಗೆಲ್ಲುವಂತೆ ಶುಭ ಹಾರೈಸಿದ್ದಾರೆ.
ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ಇಂದು ಬೆಳಗ್ಗೆಯಿಂದ ಚಿಕ್ಕಮಗಳೂರು ನಗರದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಈ ವೇಳೆ ಪ್ರಚಾರಕ್ಕೆಂದು ಹೋದಾಗ ಚಿಕ್ಕಮಗಳೂರು ಹೊರವಲಯದ ತೇಗೂರು ಸರ್ಕಲ್ ನಲ್ಲಿನ ಚುರುಮುರಿ ವ್ಯಾಪಾರಿ ಲೊಕೇಶ್ ಬಾಬು ಅವರು ಕೋಟಾಗೆ 25 ಸಾವಿರ ಹಣವನ್ನ ಚುನಾವಣಾ ಖರ್ಚಿಗಾಗಿ ನೀಡಿ ಗೆಲ್ಲುವಂತೆ ಶುಭ ಹಾರೈಸಿದ್ದಾರೆ. ಹಣದ ಜೊತೆ ಎಲೆ-ಅಡಿಕೆ-ಬಾಳೆಹಣ್ಣು ಸೇರಿ ವಿವಿಧ ಹಣ್ಣುಗಳನ್ನ ನೀಡಿ ಚುನಾವಣೆಗೆ ಶುಭಕೋರಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗದಲ್ಲಿ ಪುಷ್ಪಕ್ ಆರ್‌ಎಲ್‍ವಿ ಸ್ಪೇಸ್‍ಶಿಪ್ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ
ಕಳೆದ 25 ವರ್ಷಗಳಿಂದ ತೇಗೂರು ಸರ್ಕಲ್ ನಲ್ಲಿ ಚುರುಮುರಿ ಅಂಗಡಿ ಇಟ್ಟಿರುವ ಲೊಕೇಶ್ ಬಿಜೆಪಿಯ ಅಪ್ಪಟ ಕಾರ್ಯಕರ್ತ. ಇಂದು ಕೋಟಾ ಪ್ರತಿಯೊಂದು ಅಂಗಡಿಗಳಿಗೆ ಹೋಗಿ ಮತಯಾಚನೆ ಮಾಡುವ ವೇಳೆ ಹಣ ನೀಡಿ ಶುಭಕೋರಿದ್ದಾರೆ. ಈ ವೇಳೆ ಕೋಟಾ ಜೊತೆಗಿದ್ದ ಸಿ.ಟಿ ರವಿ ಲೋಕೇಶ್ ರನ್ನ ಆತ್ಮೀಯವಾಗಿ ತಬ್ಬಿಕೊಂಡು ಇಂತಹ ದೇವ ದುರ್ಲಬ ಕಾರ್ಯಕರ್ತರೇ ಬಿಜೆಪಿಯ ಶಕ್ತಿ ಎಂದು ವರ್ಣಿಸಿದ್ದಾರೆ.
ಇಂದು ಮತ್ತು ನಾಳೆ ಚಿಕ್ಕಮಗಳೂರಿನಲ್ಲಿ ಪ್ರಚಾರ ಮಾಡಲಿರುವ ಕೋಟಾ ಶ್ರೀನಿವಾಸ ಪೂಜಾರಿ ಜಿಲ್ಲೆಯ ವಿವಿಧೆಡೆ ಪ್ರಚಾರ ಮಾಡಲಿದ್ದಾರೆ. ಇಂದು ಬೆಳಗ್ಗೆ ಯೋಗಶಾಲೆ, ಜಿಲ್ಲಾ ಆಟದ ಮೈದಾನದಲ್ಲಿ ವಾಕ್ ಮಾಡುತ್ತಿದ್ದವರನ್ನ ಭೇಟಿ ಮಾಡಿ ಮತಬೇಟೆ ನಡೆಸಿದ್ದಾರೆ. ಸರಳ ಹಾಗೂ ಸಜ್ಜನ ವ್ಯಕ್ತಿತ್ವದ ಕೋಟಾಗೆ ಮತದಾರರು ಬೆಂಬಲ ನೀಡುವಂತೆ ಭರವಸೆ ನೀಡಿದ್ದಾರೆ.
ಬೆಂಗಳೂರು: ಕಳೆದ ವರ್ಷ ಧಾರ್ಮಿಕ ದತ್ತಿ ಇಲಾಖೆಗೆ (Department of Religious Endowments) ನಮ್ಮ ಸರ್ಕಾರ 250 ಕೋಟಿ ರೂ. ನೀಡಿದೆ. ಆದರೆ ಕಾಂಗ್ರೆಸ್ (Congress) ಸರ್ಕಾರ ಹಿಂದೂ ಧಾರ್ಮಿಕ ದತ್ತಿ ಇಲಾಖೆಯನ್ನು ಕಡೆಗಣಿಸಿದ್ದು, 50 ಕೋಟಿಯನ್ನೂ ಕೊಟ್ಟಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಬೇಸರಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಚಕರಿಗೆ ತಪ್ಪು ಮಾಹಿತಿ ಕೊಡಲಾಗಿದೆ. ಅವರು ಪತ್ರಿಕಾಗೋಷ್ಠಿ ಮಾಡುವಂತಾಗಿದೆ. ಅರ್ಚಕರಿಗೆ ಮನೆ ಕೊಟ್ಟದ್ದು ನಮ್ಮ ಸರ್ಕಾರ. ತಸ್ತೀಕ್ ತಂದದ್ದು ನಮ್ಮ ಸರ್ಕಾರ. ಅದನ್ನು 48 ಸಾವಿರಕ್ಕೆ ಏರಿಸಿದ್ದು ನಮ್ಮ ಸರ್ಕಾರ. ಇದೆಲ್ಲವನ್ನು ಜನರು ಅರ್ಥ ಮಾಡಿಕೊಳ್ಳಬೇಕು. ದೇವಸ್ಥಾನದ ಒಟ್ಟು ಆದಾಯದಿಂದ ಶೇ.10 ಪಡೆಯುವ ಮಸೂದೆ ಜಾರಿಗೆ ಮುಂದಾದುದರಿಂದ ದೇವಸ್ಥಾನದ ಒಟ್ಟು ಆರ್ಥಿಕ ವ್ಯವಸ್ಥೆ ಕುಸಿಯಬಾರದೆಂಬ ಕಾರಣಕ್ಕೆ ವಿರೋಧಿಸಿದ್ದೇವೆ. ಆದರೆ, ಬಿಜೆಪಿಯವರ (BJP) ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಇದನ್ನೂ ಓದಿ: ಜಾರ್ಖಂಡ್‌ನ ಮಾಜಿ ಸಿಎಂ ಮಧು ಕೋಡ ಪತ್ನಿ, ಕಾಂಗ್ರೆಸ್ ಸಂಸದೆ ಗೀತಾ ಕೋಡಾ ಬಿಜೆಪಿ ಸೇರ್ಪಡೆ
ತುಂಬಾ ದೇವಸ್ಥಾನಗಳಲ್ಲಿ ಶಾಲೆ, ಗೋಶಾಲೆ ನಡೆಸುತ್ತಿದ್ದಾರೆ. ಮಧ್ಯಾಹ್ನದ ಅನ್ನ ಪ್ರಸಾದ, ಸಪ್ತಪದಿ (ಮದುವೆ) ವ್ಯವಸ್ಥೆ ಇದೆ. ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿ ಮೊನ್ನೆ ದೇಗುಲಗಳ ಮಸೂದೆಯನ್ನು ಬಿಜೆಪಿ- ಜೆಡಿಎಸ್ ಸದಸ್ಯರು ವಿರೋಧಿಸಿದ್ದಾರೆ. ನಾವು ಅರ್ಚಕರಿಗೆ- ದೇವಾಲಯಗಳಿಗೆ ಒಳ್ಳೆಯದು ಮಾಡಲು ಹೊರಟಿದ್ದೆವು. ಆದರೆ ಬಿಜೆಪಿ ಇದನ್ನು ವಿರೋಧಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು, ವಿಶೇಷವಾಗಿ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್, ಹಿರಿಯ ಸಚಿವ ಹೆಚ್.ಕೆ.ಪಾಟೀಲ್, ಧಾರ್ಮಿಕ ದತ್ತಿ ಸಚಿವ ರಾಮಲಿಂಗಾರೆಡ್ಡಿ ಅವರು ಆರೋಪಿಸುತ್ತಿರುವುದನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ವಾಸ್ತವಿಕವಾಗಿ ದೇವಾಲಯಗಳ ಅಭಿವೃದ್ಧಿಗಾಗಿ ತಿದ್ದುಪಡಿ ತಂದು 33,500 ದೇವಸ್ಥಾನಗಳಿಗೆ ತಸ್ತೀಕ್ ಕೊಡುವ ಯೋಜನೆ ರೂಪಿಸಿದ್ದೇ ಬಿಜೆಪಿ ಎಂದು ವಿವರಿಸಿದರು. ಇದನ್ನೂ ಓದಿ: ರಾಜ್ಯ ಶಿಕ್ಷಣ ನೀತಿ ಸಮಿತಿ ಅವಧಿ ಆಗಸ್ಟ್ ವರೆಗೂ ವಿಸ್ತರಣೆ: ಡಾ.ಸುಧಾಕರ್
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದು, ನಾಗರಾಜ ಶೆಟ್ಟಿಯವರು ಸಚಿವರಾಗಿದ್ದಾಗ ತಸ್ತೀಕ್ ಎಂಬ ಯೋಜನೆಯನ್ನು ನಮ್ಮ ಸರಕಾರ ಜಾರಿಗೊಳಿಸಿತ್ತು. ಆಗ ತಸ್ತೀಕ್ 6,500 ರೂ ಇತ್ತು. 33,500 ದೇವಸ್ಥಾನಗಳಿಗೂ ಅದನ್ನು ಕೊಡುತ್ತಿದ್ದೆವು. ವಿ.ಎಸ್.ಆಚಾರ್ಯರು ಸಚಿವರಿದ್ದಾಗ ಅದನ್ನು 12 ಸಾವಿರ ಮಾಡಿದ್ದು, ನಾನು ಧಾರ್ಮಿಕ ದತ್ತಿ ಸಚಿವನಾದಾಗ 24 ಸಾವಿರಕ್ಕೆ ಏರಿಸಿದ್ದೆ. ನಮ್ಮದೇ ಸರಕಾರ ಇದ್ದಾಗ 48 ಸಾವಿರಕ್ಕೆ ಏರಿಸಿದ್ದು, ಈಗ ಅದು 60 ಸಾವಿರ ಆಗಿದೆ ಎಂದು ವಿವರ ನೀಡಿದರು. ಬಡ ದೇವಸ್ಥಾನಗಳಿಗೆ ಅನುಕೂಲ ಆಗಲಿ ಎಂದು ಅದನ್ನು 1 ಲಕ್ಷಕ್ಕೆ ಏರಿಸಲು ಒತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಧ್ರುವ್ ರಥೀ ವಿಡಿಯೋ ಪೋಸ್ಟ್ ಮಾಡಿ ತಪ್ಪು ಮಾಡಿದ್ದೇನೆ – ಸುಪ್ರೀಂನಲ್ಲಿ ಕೇಜ್ರಿವಾಲ್ ತಪ್ಪೊಪ್ಪಿಗೆ
ನಾನು ಸಚಿವನಾಗಿದ್ದಾಗ ಅರ್ಚಕರಿಗೆ ಪಿಂಚಣಿ, ಆರೋಗ್ಯ ವಿಮೆ, ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿವೇತನ, ಅರ್ಚಕರ ಮನೆ ಪ್ರಸ್ತಾಪ ಮುಂದಿಟ್ಟಿದ್ದು, ಅರ್ಚಕರ ಮನೆ ಮಂಜೂರು ಮಾಡಿದ್ದೇವೆ. ಭಕ್ತರು ಹುಂಡಿಗೆ ಹಾಕಿದ ಹಣ, ಭಕ್ತರ ಸೇವೆಯಿಂದ 1 ಕೋಟಿ ಆದಾಯದಿಂದ 90 ಲಕ್ಷ ದೇವಾಲಯಕ್ಕೆ ಖರ್ಚು ಮಾಡಿ, ಉಳಿದ 10 ಲಕ್ಷದಲ್ಲಿ 10% ಎಂದರೆ 1 ಲಕ್ಷ ಸರ್ಕಾರಕ್ಕೆ ಬರುತ್ತಿತ್ತು. ಈಗ ತಿದ್ದುಪಡಿಯಲ್ಲಿ ಮೂಲ ಆದಾಯದಲ್ಲಿ 10% (10 ಲಕ್ಷ) ಪಡೆಯಲು ತಿದ್ದುಪಡಿ ಮಾಡಿದ್ದಾರೆ. ಇದನ್ನು ವಿರೋಧಿಸಿದ್ದೇವೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಲ್ಲ: ಡಾ.ಎಂ.ಸಿ ಸುಧಾಕರ್
ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ 100 ಕೋಟಿ ಆದಾಯವಿದ್ದರೆ 10 ಕೋಟಿಯನ್ನು ಧಾರ್ಮಿಕ ದತ್ತಿ ಇಲಾಖೆಗೆ ಕೊಡಬೇಕಾಗುತ್ತದೆ. ನಿರ್ವಹಣಾ ವೆಚ್ಚ ತೆಗೆದ ನಂತರ ನಿವ್ವಳ ಉಳಿಕೆಯಲ್ಲಿ ಶೇ.10 ಪಡೆಯಬೇಕೆಂದು ನಮ್ಮ ಒತ್ತಾಯವಿತ್ತು. ವ್ಯವಸ್ಥಾಪನಾ ಸಮಿತಿಯನ್ನು ರಚಿಸುವ ಅಧಿಕಾರ ಎ ದರ್ಜೆಯ ದೇವಸ್ಥಾನಕ್ಕೆ ಧಾರ್ಮಿಕ ಪರಿಷತ್ ಮಾಡುತ್ತದೆ. ಬಿ ಮತ್ತು ಸಿ ದರ್ಜೆ ದೇವಸ್ಥಾನಗಳಿಗೆ ಜಿಲ್ಲಾ ಧಾರ್ಮಿಕ ಪರಿಷತ್ ಮಾಡುತ್ತದೆ. ಧಾರ್ಮಿಕ ಪರಿಷತ್ ಮೂಲಕ ಸದಸ್ಯರ ಆಯ್ಕೆ ಮಾಡಿದ ನಂತರ ಅಧ್ಯಕ್ಷರನ್ನು ಅವರೇ ಆಯ್ಕೆ ಮಾಡಬೇಕು. ರಾಮಲಿಂಗಾರೆಡ್ಡಿಯವರ ಬಿಲ್‌ನಲ್ಲಿ ಧಾರ್ಮಿಕ ಪರಿಷತ್ತಿನ ಮೂಲಕ ವ್ಯವಸ್ಥಾಪನ ಸಮಿತಿ, ಅಧ್ಯಕ್ಷರನ್ನು ಸರ್ಕಾರವೇ ಆಯ್ಕೆ ಮಾಡುತ್ತದೆ. ಇದನ್ನು ವಿರೋಧಿಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ತಂದಿದ್ದು ಬಿಜೆಪಿ, ಟಿಕೆಟ್ ಬಗ್ಗೆ ಡೌಟೇ ಇಲ್ಲ: ಸುಮಲತಾ
ಡಿ.ಕೆ.ಶಿವಕುಮಾರರು ನಾವು ಅರ್ಚಕರಿಗೆ ಒಳ್ಳೆಯದು ಮಾಡಲು ಹೋದೆವು. ಆದರೆ, ಬಿಜೆಪಿಯವರು ಅಡ್ಡ ಹಾಕಿದ್ದಾರೆ. ಮೇಲ್ಮನೆಯಲ್ಲಿ 3 ತಿಂಗಳಲ್ಲಿ ಬಹುಮತ ಬರಲಿದೆ. ಆಗ ನಾವು ತರುತ್ತೇವೆ ಎಂದು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯನವರು ಬಿಜೆಪಿಯವರು ತಪ್ಪು ಮಾಡುತ್ತಿದ್ದಾರೆ. ನಾವು ಒಳ್ಳೆಯದು ಮಾಡಿದರೆ ಇವರು ಕೆಟ್ಟದು ಮಾಡುತ್ತಾರೆ ಎಂದು ಪ್ರಥಮ ಬಾರಿಗೆ ದೇವರ ಪರ ಮಾತನಾಡಿದ್ದಾರೆ. ಚರ್ಚೆ ಮಾಡಿ ಅನುಮೋದಿಸಲು ಒತ್ತಾಯಿಸಿದ್ದೇವೆ. ಆದರೆ ಡಿಕೆಶಿ ಅವರು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ʻಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆʼ ರದ್ದು – ಸಂಪುಟ ನಿರ್ಧಾರಕ್ಕೆ ಕಾಂಗ್ರೆಸ್ ಆಕ್ಷೇಪ; ಸಭಾತ್ಯಾಗ
ನಿವ್ವಳ ಉಳಿಕೆಯಲ್ಲಿ ಹಣ ಪಡೆಯಲು ತಿಳಿಸಿದೆವು. ವ್ಯವಸ್ಥಾಪನಾ ಸಮಿತಿಯಲ್ಲಿ ಅಧ್ಯಕ್ಷರ ಆಯ್ಕೆ ಸರಿಯಲ್ಲ ಎಂದಿದ್ದೇವೆ. ರಾಮಲಿಂಗಾರೆಡ್ಡಿ, ಹೆಚ್.ಕೆ.ಪಾಟೀಲ್ ಅವರಂಥ ಹಿರಿಯರು ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳ ಒಳ್ಳೆಯ ಸಲಹೆಗೆ ಬೆಲೆ ಕೊಡುತ್ತಾರೆಂದು ಭಾವಿಸಿದ್ದೆವು. ಆದರೆ, ಸರಕಾರ ಹಠಮಾರಿತನದ ಧೋರಣೆ ಅನುಸರಿಸಿದೆ. ತಿದ್ದುಪಡಿಯನ್ನು ಮತ್ತೊಮ್ಮೆ ಚರ್ಚೆ ಮಾಡಿ ಎಂದು ತಿರಸ್ಕಾರ ಮಾಡಿದ್ದೇವೆ. ಅರ್ಚಕರ ಪರವಾಗಿರುವ ನಮ್ಮ ಒಟ್ಟು ನಿಲುವಿನ ಕುರಿತು ದಾರಿ ತಪ್ಪಿಸುವ ಕೆಲಸವನ್ನು ಸಿದ್ದರಾಮಯ್ಯ, ಡಿಕೆಶಿ ಮತ್ತು ಇತರರು ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಗಂಡಸರಿಗೆ ಅಧಿಕಾರ ನಮ್ಮಲ್ಲೇ ಇರಬೇಕು ಅನ್ನೋ ಭಾವನೆ- ಅಭಿಯಾನದ ವಿರುದ್ಧ ಶೋಭಾ ರೆಬೆಲ್
ವಿಧಾನಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಮಾತನಾಡಿ, 35 ಸಾವಿರ ಅರ್ಚಕರ ಮನೆಗೆ 15 ಕೋಟಿ, ಸ್ಕಾಲರ್‌ಶಿಪ್‌ಗೆ 5 ಕೋಟಿ, 5 ಕೋಟಿಯಲ್ಲಿ ವಿಮೆ ಮಾಡಿಸುವುದಾಗಿ ಹೇಳಿದ್ದಾರೆ. ನೀವು ಕ್ರಿಶ್ಚಿಯನ್ನರು, ಮುಸ್ಲಿಮರಿಗೆ 300 ಕೋಟಿ ಕೊಟ್ಟಿದ್ದೀರಿ. 35 ಸಾವಿರ ದೇವಸ್ಥಾನಗಳಿಗೆ 300 ಕೋಟಿ ಕೊಡಬೇಕಿತ್ತು ಎಂದು ಹೇಳಿದರು. ಹಿಂದೂ ದೇವಾಲಯ ಎಂದರೆ ಇಷ್ಟು ಕನಿಷ್ಠವೇ ಎಂದು ಪ್ರಶ್ನಿಸಿದರು. ಹಿಂದೂಗಳ ವಿಚಾರ ಬಂದಾಗ ಶ್ರೀಮಂತ ದೇವಾಲಯದಿಂದ ಕಿತ್ತುಕೊಂಡು ಬೇರೆ ದೇವಾಲಯಕ್ಕೆ ಕೊಡಲು ನೀವೇ ಬೇಕೇ? ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಎಂದು ಘೋಷಿಸುವ ಸರ್ಕಾರ, ಅಲ್ಪಸಂಖ್ಯಾತರ ಅಭಿವೃದ್ಧಿಗೆ 1 ಸಾವಿರ ಕೋಟಿ ಎಂದು ಆದೇಶ ನೀಡಿದ ರಾಜ್ಯ ಕಾಂಗ್ರೆಸ್ ಸರ್ಕಾರವು ಹಿಂದುಳಿದ, ಅತಿ ಕೆಳ ಸ್ಥಿತಿಯಲ್ಲಿರುವ ದೇವಸ್ಥಾನಗಳಿಗೆ 300 ಕೋಟಿ ಕೊಡಲು ಸಾಧ್ಯವಿಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಈ ವೇಳೆ ವಿಧಾನಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಪ್ರತಾಪಸಿಂಹ ನಾಯಕ್, ಅವರು ಹಾಜರಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯನವರೇ ನಿಮ್ಮಷ್ಟು ನೀಚತನಕ್ಕೆ ನಾನು ಇಳಿಯೋದಿಲ್ಲ – ಸಿಎಂ ವಿರುದ್ಧ ಹರಿಹಾಯ್ದ ಜೋಶಿ
ಉಡುಪಿ: ಜಗದೀಶ್ ಶೆಟ್ಟರ್ (Jagadish Shettar) ಬಿಜೆಪಿಗೆ (BJP) ಮರಳುವ ನಿರೀಕ್ಷೆ ಇತ್ತು. ಅವರು ನಮ್ಮ ಸಿದ್ಧಾಂತದ ಜೊತೆಗೆ ಸುದೀರ್ಘ ಕಾಲ ಗುರುತಿಸಿಕೊಂಡಿದ್ದವರು. ಸೈದ್ಧಾಂತಿಕ ಹಿನ್ನೆಲೆಯವರಿಗೆ ಬೇರೆ ಪಕ್ಷ ಒಗ್ಗುವುದಿಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಆಗಮನದಿಂದ ಪಕ್ಷದ ಶಕ್ತಿ ವೃದ್ಧಿಯಾಗುತ್ತದೆ. ಇದರಿಂದ ನಮ್ಮ ವಿಶ್ವಾಸ ಹೆಚ್ಚಾಗಿದೆ. ಮತ್ತಷ್ಟು ನಾಯಕರು ಬಿಜೆಪಿಗೆ ಮರಳುತ್ತಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ನನ್ನ ನಿಲುವು ಸ್ಪಷ್ಟ, ನಾನು ಬಿಜೆಪಿಗೆ ಹೋಗಲ್ಲ: ಲಕ್ಷ್ಮಣ್ ಸವದಿ ಸ್ಪಷ್ಟನೆ
ಶೆಟ್ಟರ್ ಸುದೀರ್ಘ ರಾಜಕೀಯ ಅನುಭವಿ ಮತ್ತು ಮುತ್ಸದ್ದಿ. ಅವರು ಜನಸಂಘ ಕಾಲದಿಂದ ಬಿಜೆಪಿ ಕಟ್ಟಿದವರು. ಅವರು ಪಕ್ಷಕ್ಕೆ ಮರಳಿರುವುದು ಸಂತೋಷ ಹಾಗೂ ಸಮಾಧಾನ ತಂದಿದೆ. ಅವರು ಬಿಜೆಪಿಯ ಪರಮೋಚ್ಚ ನಾಯಕರನ್ನು ಎಂದೂ ಟೀಕಿಸಿಲ್ಲ. ಆರೋಗ್ಯಕರ ಟೀಕೆಗಳನ್ನು ಮಾತ್ರ ಮಾಡುತ್ತಿದ್ದರು. ಶೆಟ್ಟರ್ ಬಿಜೆಪಿಗೆ ಮರಳಿದ ಕ್ರೆಡಿಟ್ ಪಕ್ಷಕ್ಕೆ ಸಲ್ಲುತ್ತದೆ ಎಂದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ವೇಳೆ, ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್‍ಗೆ ಸೇರಿದ್ದರು. ಇದೀಗ, ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇಂದು (ಗುರುವಾರ) ದೆಹಲಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಜೊತೆಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿ ಸುದೀರ್ಘವಾದ ಚರ್ಚೆ ನಡೆಸಿದ್ದಾರೆ. ಈ ವೇಳೆ ಹಾವೇರಿ ಅಥವಾ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಂದು ಕ್ಷೇತ್ರಕ್ಕೆ ಟಿಕೆಟ್ ಕೊಡಿಸುವ ಭರವಸೆಯನ್ನು ಹೈಕಮಾಂಡ್ ನೀಡಿದೆ. ಇದನ್ನೂ ಓದಿ: ಇಲ್ಲಿಯವರೆಗೆ ಸಹಕಾರ ಕೊಟ್ಟಿದ್ದಕ್ಕೆ ಡಿಕೆಶಿ, ಸಿಎಂಗೆ ಧನ್ಯವಾದ ಸಲ್ಲಿಸಿದ್ರು ಶೆಟ್ಟರ್
ಬೆಳಗಾವಿ: ಹುಬ್ಬಳ್ಳಿಯಲ್ಲಿ ನಡೆದ ಮೌಲ್ವಿಗಳ ಸಮಾವೇಶದಲ್ಲಿ ಮುಸ್ಲಿಮರಿಗೆ (Muslims) 10 ಸಾವಿರ ಕೋಟಿ ರೂ. ಅನುದಾನ ಕೊಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿಚಾರ ಇಂದು ಪರಿಷತ್‌ನಲ್ಲಿ ಸದ್ದು ಮಾಡಿತು. ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದರು.
ಸಿಎಂ ಸಿದ್ದರಾಮಯ್ಯನವರು ಹುಬ್ಬಳ್ಳಿಯಲ್ಲಿ ಮುಸ್ಲಿಂ ಸಮಾವೇಶದಲ್ಲಿ ಮಾತನಾಡುತ್ತಾರೆ. ದೇಶದ ಸಂಪತ್ತನ್ನು ನಿಮಗೆ ಹಂಚುತ್ತೇನೆ ಹಾಗೂ 10 ಕೋಟಿ ರೂ. ನಿಮಗೆ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಯಾವುದೇ ಸಮುದಾಯಕ್ಕೆ ಹಣ ಮೀಸಲಿಟ್ಟರೇ ಯಾರದ್ದೇ ವಿರೋಧವಿಲ್ಲ. ಆದರೆ ಸಿಎಂ ಅವರು ಅಲ್ಪ ಸಂಖ್ಯಾತ ಸಮುದಾಯಕ್ಕೆ 10,000 ಕೋಟಿ ರೂ. ನೀಡುತ್ತೇನೆ ಎಂದಿದ್ದಾರೆ ಇದು ಸರಿಯಲ್ಲ ಎಂದರು.
ಸರ್ಕಾರ ಪರಿಶಿಷ್ಠ ಜಾತಿ- ಪಂಗಡಗಳಿಗೆ ಮೀಸಲಿಟ್ಟ 11,500 ಕೋಟಿ ರೂ. ಅನುದಾನವನ್ನು ಗ್ಯಾರಂಟಿಗಳಿಗೆ ಬಳಸಿ, ಸಮಾಜದ ಕಟ್ಟ ಕಡೆಯ ಬಡ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸರ್ವರನ್ನೊಳಗೊಂಡ ಸಮಾಜ ನಿರ್ಮಾಣ ಮಾಡುವ ಭರವಸೆ ನೀಡಿರುವ ಸಿದ್ದರಾಮಯ್ಯನವರು ಒಂದು ವರ್ಗವನ್ನು ಒಲೈಸುವ ಭರದಲ್ಲಿ, ಸಮಾಜದ ಪರಿಶಿಷ್ಠ ಜಾತಿ ಹಿಂದುಳಿದ ವರ್ಗದ ಬಡವನರನ್ನು ನಿರ್ಲಕ್ಷಿಸುತ್ತಿದ್ದಾರೆ ಅಂತ ಕಿಡಿಕಾರಿದರು. ಇದನ್ನೂ ಓದಿ: ‘ಮೋದಿ ಜೀ’ ಕರೆದು ಸಾರ್ವಜನಿಕರಿಂದ ನನ್ನ ದೂರ ಮಾಡ್ಬೇಡಿ: ಪ್ರಧಾನಿ ಮನವಿ
ಹಿಂದುಳಿದ ವರ್ಗಗಳ ಹಾಗೂ ಪರಿಶಿಷ್ಠ ಜಾತಿ-ಪಂಗಡಗಳಿಗೆ ಸೇರಿದ ವಸತಿ ನಿಲಯಗಳಲ್ಲಿನ ಸಾವಿರಾರು ಬಡ ಮಕ್ಕಳು ಹಾಸ್ಟೆಲ್‌ಗಳ ಪ್ರವೇಶ ದೊರಕದೆ ಸೌಲಭ್ಯ ವಂಚಿತರಾಗಿದ್ದಾರೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನವಿಲ್ಲದೇ ಪರದಾಡುತ್ತಿದ್ದಾರೆ. 10,000 ಮಹಿಳೆಯರಿಗೆ ಹೊಲಿಗೆ ಯಂತ್ರ ಮಂಜೂರಾಗಿದ್ದರೂ ಬಡ ನಿರುದ್ಯೋಗಿಗಳಿಗೆ ಮಹಿಳೆಯರಿಗೆ ನೀಡದೇ ಸತಾಯಿಸುವ ಕೆಲಸವಾಗುತ್ತಿದೆ. 471 ಹಿಂದುಳಿದ ವರ್ಗಗಳ ಸಮುದಾಯ ಭವನಗಳಿಗೆ ಅನುದಾನ ಮಂಜುರಾಗಿ ಆದೇಶವಾಗಿದ್ದರೂ ಹಣ ಬಿಡುಗಡೆ ಮಾಡದೇ ಅನ್ಯಾಯ ಮಾಡಲಾಗುತ್ತಿದೆ ಎಂದರು.
ಪರಿಶಿಷ್ಟ ವರ್ಗಗಳಿಗೆ ಮೀಸಲಿರಿಸಿರುವ ಅನುದಾವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿರುವುದರಿಂದ, ಪರಿಶಿಷ್ಠ ವರ್ಗಗಳ ಬಡ ಜನರ ಆರೋಗ್ಯ ಮತ್ತು ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಇಂತಹ ಜಾತ್ಯತೀತ ಸರ್ಕಾರ, ರಾಜಕಾರಣಕ್ಕಾಗಿ ಕೇವಲ ಒಂದು ಧರ್ಮದ ಒಲೈಕೆಗಾಗಿ 10,000 ಕೋಟಿ ರೂ. ನೀಡುವುದಾಗಿ ಹೇಳುತ್ತಿರುವುದು ಮತ್ತು ಉಳಿದೆಲ್ಲಾ ಹಿಂದುಳಿದ ವರ್ಗಗಳನ್ನು ಹಾಗೂ ಪರಿಶಿಷ್ಟರನ್ನು ನಿರ್ಲಕ್ಷಿಸುತ್ತಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಆತಂಕಕಾರಿಯಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ಸದನದಲ್ಲಿ ಉತ್ತರ ಕೊಡಬೇಕು ಎಂದು ಪೂಜಾರಿ ಒತ್ತಾಯ ಮಾಡಿದರು. ಕೋಟ ಪ್ರಸ್ತಾಪಕ್ಕೆ ಸಿಎಂ ಸಿದ್ದರಾಮಯ್ಯ ಅವರಿಂದ ಉತ್ತರ ಕೊಡಿಸುವುದಾಗಿ ಸಭಾ ನಾಯಕ ಬೋಸರಾಜು ತಿಳಿಸಿದರು. ಇದನ್ನೂ ಓದಿ: ಮುಸ್ಲಿಮರ ಮೇಲೆ ಅಷ್ಟೊಂದು ಪ್ರೀತಿ ಇದ್ರೆ ನಿಮ್ಮ ಆಸ್ತಿ ಮಾರಿ ಹಣ ಕೊಡಿ: ಸಿಎಂ ವಿರುದ್ಧ ರೇಣುಕಾ ವಾಗ್ದಾಳಿ
ರಾಮನಗರ: ರಾಜ್ಯ ಸರ್ಕಾರ ಈ ಕೂಡಲೇ 10 ಸಾವಿರ ಕೋಟಿ ರೂ. ಬರ (Drought) ಪರಿಹಾರ ಘೋಷಣೆ ಮಾಡಿ. ಇಲ್ಲದೇ ಹೋದರೆ ಬಿಜೆಪಿಯಿಂದ (BJP) ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಎಚ್ಚರಿಕೆ ನೀಡಿದ್ದಾರೆ.
ಗುರುವಾರ ರಾಮನಗರಕ್ಕೆ ಆಗಮಿಸಿದ್ದ ಬಿಜೆಪಿ ಬರ ಅಧ್ಯಯನ ತಂಡ (Drought Study Team) ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ಮಾಜಿ ಸಚಿವ ಕೋಟಾ ಶ್ರೀನಿವಾಸಪೂಜಾರಿ ನೇತೃತ್ವದಲ್ಲಿ ಬರ ಪರಿಶೀಲನೆ ಮಾಡಿದರು. ಈ ವೇಳೆ ಮಾತನಾಡಿದ ಮಾಜಿ ಸಚಿವ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ರಾಜ್ಯ ಸರ್ಕಾರ ಬರ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಈವರೆಗೂ ಯಾವೊಬ್ಬ ರೈತನಿಗೂ ಪರಿಹಾರ ನೀಡಿಲ್ಲ. ಕೇವಲ 324 ಕೋಟಿ ರೂ. ಅನುದಾನ ಬಿಡುಗಡೆ ಮಾಡ್ತೀವಿ ಎಂದು ಸಿಎಂ ಹೇಳಿದ್ದಾರೆ. ಮೊದಲು ಸೂಕ್ತ ಪರಿಹಾರ ನೀಡದೇ ಕೇಂದ್ರದ ಕಡೆ ಕೈ ತೋರಿಸುತ್ತಿದ್ದಾರೆ. ಸುಖಾ ಸುಮ್ಮನೆ ಕೇಂದ್ರದ ಕಡೆ ಬೊಟ್ಟು ಮಾಡುವುದು ಬಿಟ್ಟು ಮೊದಲು ಪರಿಹಾರ ನೀಡಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಶುಕ್ರವಾರ ಬಳ್ಳಾರಿ ಬಂದ್‌ಗೆ ಕರೆ – ಬಹುತೇಕ ಸಂಘಟನೆಯ ಬೆಂಬಲ
ರಾಜ್ಯದಲ್ಲಿ 39 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಹಾಳಾಗಿದೆ. 3 ಲಕ್ಷ ತೋಟಗಾರಿಕೆ ಬೆಳೆ ಹಾಳಾಗಿದೆ. 33 ಸಾವಿರ ಕೋಟಿ ನಷ್ಟ ಆಗಿರೋ ಬಗ್ಗೆ ಸಿದ್ದರಾಮಯ್ಯ ಹೇಳಿದ್ರು. ಮೊದಲು ನೀವು 10 ಸಾವಿರ ಕೋಟಿ ರೂ. ಬಿಡುಗಡೆ ಮಾಡಿ. ಆಮೇಲೆ ಪ್ರಧಾನಿಯನ್ನು ಕೇಳೋಣ. ಆಗ ನಾವು ಜೊತೆಗೆ ಬರುತ್ತೇವೆ ಎಂದು ಹೇಳಿದರು.
ಜಾನುವಾರುಗಳ ಮೇವು ಹಾಗೂ ಗೋಶಾಲೆಗಳ ಸಮಸ್ಯೆ ಆಗಿದೆ. ರೈತರು ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಇದೆ. ಕೂಡಲೇ 10 ಸಾವಿರ ಕೋಟಿ ರೂ. ಪರಿಹಾರ ಘೋಷಣೆ ಮಾಡಿ. ಇಲ್ಲವಾದರೆ ಮಾಜಿ ಸಿಎಂ ಬಿಎಸ್‌ವೈ, ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಲಿಂಗಾಯತ ನಾಯಕರು ಕಾಂಗ್ರೆಸ್‌ನಲ್ಲಿ ಅಲೆಮಾರಿಗಳಾಗಿದ್ದಾರೆ: ಗೋವಿಂದ ಕಾರಜೋಳ
ಉಡುಪಿ: 6 ತಿಂಗಳ ಆಡಳಿತದಲ್ಲಿ ಸಿದ್ದರಾಮಯ್ಯ (Siddaramaiah) ಸರ್ಕಾರ ಸಂಪೂರ್ಣ ವಿಫಲವಾಗಿ ಕುಸಿತ ಕಂಡಿದೆ. ಕಂಡು ಕೇಳರಿಯದ ಬರ ಜನರನ್ನು, ರೈತರನ್ನು ಕಾಡುತ್ತಿದೆ. ರಾಜ್ಯದ 195 ತಾಲೂಕಿನಲ್ಲಿ ಬರ ಘೋಷಣೆ ಮಾಡಿದ್ದರೂ ಪರಿಹಾರಕ್ಕೆ ಬಿಡಿಗಾಸು ಬಿಡುಗಡೆ ಮಾಡಿಲ್ಲ ಎಂದು ವಿಧಾನಪರಿಷತ್ ಸದಸ್ಯ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಹೇಳಿದ್ದಾರೆ.
ಮಳೆ ಕೊರತೆಯಿಂದ 30 ಸಾವಿರ ಕೋಟಿ ರೂ. ನಷ್ಟ ಎಂದು ಸರ್ಕಾರ ವರದಿಯಲ್ಲಿ ನೀಡಿದೆ. ತಕ್ಷಣ ಕನಿಷ್ಟ 5 ಸಾವಿರ ಕೋಟಿ ರೂ. ಕೂಡಾ ಬಿಡುಗಡೆ ಮಾಡಿಲ್ಲ. ಕೇಂದ್ರಕ್ಕೆ ಮನವಿ ಕೊಟ್ಟಿದ್ದೇವೆ ಎಂದು ಹೇಳೋದ್ರಲ್ಲೇ ತಲ್ಲೀನವಾಗಿದೆ. ಸರ್ಕಾರ ರೈತರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡುತ್ತಿಲ್ಲ. ಬೀಜ ವಿತರಿಸಿ ಗೊಬ್ಬರ ಖರೀದಿಗೆ ಅನುದಾನ ಕೊಡಿ, ನೀರಾವರಿ ವ್ಯವಸ್ಥೆ ಮಾಡಿ ಗೋಶಾಲೆ ತೆರೆಯಿರಿ ಎಂದು ಸಲಹೆ ನೀಡಿದರು. ಅಧ್ಯಯನ ಮಾಡೋದರಲ್ಲೇ ಕಾಲ ಕಳೆಯಬೇಡಿ ಎಂದರು.
ವಿದ್ಯುತ್ ಕೊರತೆಯಾಗಿದೆ. ದಿನಕ್ಕೆ 7 ಗಂಟೆ 3 ಫೇಸ್ ಪವರ್ ಎಂದು ಘೋಷಿಸಿ 2 ಗಂಟೆಗೆ ಇಳಿಸಿದ್ದಾರೆ. ರೈತರು ಕಂಗಾಲಾಗಿದ್ದರೂ ಸಿದ್ದರಾಮಯ್ಯ ಸ್ಪಂದಿಸುತ್ತಿಲ್ಲ. ಕಿಸಾನ್ ಸಮ್ಮಾನ್ ಯೋಜನೆಗೆ 1 ರೂ.ಯನ್ನೂ ಬಿಡುಗಡೆ ಮಾಡಿಲ್ಲ. ಬಿಜೆಪಿ ಸರ್ಕಾರ ರಾಜ್ಯದಿಂದ 4 ಕೇಂದ್ರದಿಂದ 6 ಸಾವಿರ ರೂ. ಕೊಡುತ್ತಿದ್ದನ್ನು ನಿಲ್ಲಿಸಿ ರೈತರ ಖಾತೆಯ ಹಣಕ್ಕೆ ಕನ್ನ ಹಾಕಿದ್ದಾರೆ. ರೈತರ ಮೇಲೆ ಬದ್ಧತೆ ಇದ್ದರೆ ಹಣ ಬಿಡುಗಡೆ ಮಾಡಿ ಎಂದು ಶ್ರೀನಿವಾಸ ಪೂಜಾರಿ ಉಡುಪಿಯಲ್ಲಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆಯಲ್ಲಿ ದೆಹಲಿ ನಾಯಕರು ಪ್ರಯೋಗ ಮಾಡುತ್ತಿದ್ದಾರೆ: ಜಗದೀಶ್ ಶೆಟ್ಟರ್ ವ್ಯಂಗ್ಯ
ರಾಜ್ಯ ಸರ್ಕಾರ 2 ಪಾಲಾಗಿ ವಿಭಜನೆಯಾಗಿದೆ. ಚುನಾವಣೆ ಸಂದರ್ಭದಲ್ಲಿ ಜನರಿಗೆ ಶಾಸಕರು ಭರವಸೆ ಕೊಟ್ಟಿದ್ದಾರೆ. ರಾಜ್ಯದ ಯಾವ ಶಾಸಕರ ನೇತೃತ್ವದ ಅಭಿವೃದ್ಧಿಗೆ ಒಂದು ಕೋಟಿ ರೂ.ಯೂ ಬಿಡುಗಡೆ ಮಾಡಿಲ್ಲ. 9 ಸಾವಿರ ವಿವೇಕ ಶಾಲಾ ಕೊಠಡಿ ಸ್ಥಗಿತ ಆಗಿದೆ. ಶಾಸಕರ ಮುನಿಸು, ಆಕ್ರೋಶದಲ್ಲೇ 6 ತಿಂಗಳು ಕಳೆದು ಹೋಗಿದೆ. ವಿಧಾನಸೌಧ ಕಡೆ ಮಂತ್ರಿಗಳು, ಜನ ಬರುತ್ತಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 11,500 ಕೋಟಿ ರೂ. ಅನುದಾನಗಳನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡಲಾಗುತ್ತಿದೆ. ಎಲ್ಲಾ ಯೋಜನೆಯ ಹಣವನ್ನು 5 ಗ್ಯಾರಂಟಿಗಳಿಗೆ ಬಳಕೆ ಮಾಡಿದರೆ ಅಭಿವೃದ್ಧಿಗೆ ಹಣ ಎಲ್ಲಿಂದ ತರುತ್ತೀರಿ ಎಂದು ಕೋಟ ಪ್ರಶ್ನೆ ಮಾಡಿದರು.
ಎಸ್‌ಸಿ, ಎಸ್‌ಟಿ ಭೂಮಿಯನ್ನು ಅಕ್ರಮವಾಗಿ ಖರೀದಿ ಮಾಡಿದ ಪ್ರಕರಣದ ಬಗ್ಗೆ ಕ್ರಮ ಆಗಿಲ್ಲ. ಶರಣಪ್ರಕಾಶ್ ಪಾಟೀಲ್ ವಿರುದ್ಧ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಗ್ಗೆ ಸಚಿವರ ವಿರುದ್ಧ ಕ್ರಮ ಆಗಿಲ್ಲ. ಅಂದು ಈಶ್ವರಪ್ಪ ರಾಜೀನಾಮೆ ಕೊಡಬೇಕು ಪಾಟೀಲ್ ಕೊಡಲ್ವಾ? ಕರ್ನಾಟಕದಲ್ಲಿ ಎರಡು ನ್ಯಾಯ ಮಾಡಲು ಸಾಧ್ಯವಿಲ್ಲ ಎಂದರು. ಸಿದ್ದರಾಮಯ್ಯ-ಡಿಕೆಶಿ ಆಂತರಿಕ ಗೊಂದಲದಲ್ಲಿ ಅಧಿಕಾರಿಗಳು ಹೊಸ ಸಿಎಂ ನಿರೀಕ್ಷೆಯಲ್ಲಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಇದನ್ನೂ ಓದಿ: 2022ರಲ್ಲೇ ಹುಲಿ ಚರ್ಮ ಹಿಂದಿರುಗಿಸಲಾಗಿದೆ- ವಿನಯ್ ಗುರೂಜಿ ಆಶ್ರಮದಿಂದ ಸ್ಪಷ್ಟನೆ
ಬೆಂಗಳೂರು : ಸಿದ್ದರಾಮಯ್ಯ ಸರ್ಕಾರ (Siddaramaiah) ಹಿಂದೂಗಳಿಗೆ (Hindu) ಸುರಕ್ಷಿತ ಅಲ್ಲ ಎಂದು ಬಿಜೆಪಿ ಮಾಜಿ ಸಚಿವ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗ ಗಲಭೆ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು, ಗುರುವಾರ ಸತ್ಯ ಶೋಧನ ಸಮಿತಿ ಶಿವಮೊಗ್ಗಗೆ (Shivamogga) ಹೋಗಿತ್ತು.ನೊಂದ ಹಿಂದೂಗಳು ಸಮಿತಿ ಮುಂದೆ ಬದುಕಲಿ ಬಿಡಿ ಅಂತ ಹೇಳ್ತಿದ್ದಾರೆ. ನಾವು ಪಾಠ ಕಲಿಸಿದ ಮಕ್ಕಳು ಶಿಕ್ಷಕರಾದ ನಮ್ಮ ಮನೆಗೆ ಕಲ್ಲಿನಿಂದ ಹೊಡೆಯುವ ದುರಂತ ನೋಡಬೇಕಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ. ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ (Kashmiri Pandits) ಊರು ಬಿಟ್ಟು ಹೋಗೋ ಸ್ಥಿತಿ ನಿರ್ಮಾಣ ಆಗಿತ್ತು. ಈಗ ಅದೇ ನೋವನ್ನು ರಾಗಿಗುಡ್ಡದಲ್ಲಿ ಇರುವ ಹಿಂದೂಗಳು ಅನುಭವಿಸುತ್ತಿದ್ದಾರೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.
ಹಿಂದೂಗಳಿಗೆ ಕರ್ನಾಟಕ ಸೇಫ್ (Karnataka Safe) ಅಲ್ಲ ಎಂಬ ಭಾವನೆ ಬರುವ ವಾತಾವರಣವನ್ನು ಸರ್ಕಾರ ನಿರ್ಮಾಣ ಮಾಡಿದೆ. ದುರಾದೃಷ್ಟಕ್ಕೆ ಹಿರಿಯ ಸಚಿವರು ವೇಷ ಮರೆಸಿಕೊಂಡು ಬಂದಿದ್ದಾರೆ ಅಂತ ಹಿಂದೂಗಳ ಮೇಲೆ ಆರೋಪ ಮಾಡ್ತಾರೆ. ತ್ರಿಶೂಲ ಇಟ್ಟುಕೊಂಡಿದ್ದಕ್ಕೆ ತಳವಾರ್ ಹಿಡಿದ್ದಾರೆ ತಪ್ಪೇನು ಅಂತ ಉಸ್ತುವಾರಿ ಮಂತ್ರಿ ಕೇಳ್ತಾರೆ. ಗಣೇಶೋತ್ಸವದಲ್ಲಿ ಯಾರಾದರೂ ತ್ರಿಶೂಲ ಹಿಡಿದುಕೊಂಡಿರುವುದನ್ನು ತೋರಿಸಲಿ ನೋಡೋಣ ಎಂದು ಸವಾಲ್ ಹಾಕಿದರು.
ನೋವಿನ ಸಂಗತಿ ಅಂದರೆ 75 ಸಾವಿರ ರೂ. ನಷ್ಟ ಅಂತ ಜಿಲ್ಲಾಡಳಿತ ವರದಿ ಕೊಟ್ಟಿದೆ. 6-7 ಕಾರು ಜಖಂ ಆಗಿದೆ. ಮನೆಗಳ ಗಾಜು ಒಡೆದು ಹೋಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕೇವಲ 75 ಸಾವಿರ ರೂ. ನಷ್ಟ ಅಂತ ತೋರಿಸಿ ಇಷ್ಟು ದೊಡ್ಡ ಗಲಟೆಯನ್ನು ಏನು ಇಲ್ಲ ಅಂತ ಸರ್ಕಾರ ತೋರಿಸಲು ಹೊರಟಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದೂಗಳು ಸುರಕ್ಷಿತ ಅಲ್ಲ ಅನ್ನೋ ಸ್ಥಿತಿ ಆಗಿದೆ ವಾಗ್ದಾಳಿ ನಡೆಸಿದರು.
ರಾಗಿಗುಡ್ಡದ ಜನರು ಕಣ್ಣೀರು ಹಾಕುತ್ತಿದ್ದಾರೆ. ಹೀಗಿದ್ದರೂ ಸಿಎಂ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಕೊಡುತ್ತೇನೆ ಎಂದು ಹೇಳಿಲ್ಲ. ಏನೇ ನಷ್ಟ ಆದರೂ ನಮಗೂ ಸರ್ಕಾರಕ್ಕೂ ಸಂಬಂಧ ಇಲ್ಲ ಎಂಬ ರೀತಿ ಇದ್ದಾರೆ. ಎಸ್‌ಪಿ, ಡಿಸಿಗೆ ಈ ಸರ್ಕಾರ ಕೆಲಸ ಮಾಡಲು ಬಿಡುತ್ತಿಲ್ಲ. ಸರ್ಕಾರದ ನಡೆಯನ್ನು ನಾವು ಖಂಡಿಸುತ್ತೇವೆ. ಗೃಹ ಸಚಿವರು ಸ್ಥಳಕ್ಕೆ ಹೋಗಿ ಸಮಸ್ಯೆ ಆಲಿಸುತ್ತಾರೆ ಅಂದರೆ ಅವರು ರಾಜ್ಯದಲ್ಲಿ ಇಲ್ಲ ಅನ್ನೋ ಮಾಹಿತಿ ಇದೆ. ಸಿದ್ದರಾಮಯ್ಯ ಇಂತಹ ಆಡಳಿತ ನೀಡುತ್ತಿರುವುದು ನೋವಿನ ಸಂಗತಿ ಅಂತ ಕಿಡಿಕಾರಿದರು.
ಉಡುಪಿ: ಶಿವಮೊಗ್ಗದ ರಾಗಿ ಗುಡ್ಡದಲ್ಲಿ ನಡೆದ ಘಟನೆ ಕುರಿತು ಅಲ್ಲಿನ ಮಹಿಳೆಯರು ಮಾತನಾಡಿದ್ದನ್ನು ನೋಡಿ ಆತಂಕವಾಗಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಈದ್ ಮಿಲಾದ್ (Shivamogga EidMilad) ಮೆರವಣಿಗೆ ಘರ್ಷಣೆ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳ ಮನೆಗೆ ನುಗ್ಗಿ ಕಲ್ಲು ಹೊಡೆದು ಮಾನ, ಪ್ರಾಣಕ್ಕೆ ಬೆದರಿಕೆ ಹಾಕಿದ್ದಾರೆ. ಮಹಿಳೆಯರು ಅಳಲನ್ನು ತೋಡಿಕೊಂಡಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರ ಕರ್ನಾಟಕವನ್ನು ಹಿಂದಿನ ಕಾಶ್ಮೀರ ಮಾಡಲು ಹೊರಟಿದೆಯಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಾವು ಎಂತವರು ಗೊತ್ತಲ್ಲಾ.. ಇಷ್ಟರೊಳಗೆ ರಾಜ್ಯಕ್ಕೆ ಬೆಂಕಿ ಹಾಕ್ಬೇಕಿತ್ತು: ಪೊಲೀಸರಿಗೆ ಕಿಡಿಗೇಡಿಯಿಂದ ಆವಾಜ್
ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಜರುಗಿಸಿಲ್ಲ ಯಾಕೆ?. ಗಲಭೆ ಮಾಡಿದವರನ್ನು ಅಮಾಯಕರ ಪಟ್ಟಿಯಲ್ಲಿ ಸೇರಿಸಿ, ಅವರನ್ನು ರಕ್ಷಣೆ ಮಾಡಲಾಗುತ್ತಿದೆ. ತಲ್ವಾರ್ ಪ್ರದರ್ಶಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಕಲ್ಲು ತೂರಲಾಗಿದೆ. ಗೃಹ ಸಚಿವರು ಮರದ ತಲ್ವಾರ್‍ಗೆ ಬಣ್ಣ ಬಳಿಯಲಾಗಿದೆ ಅಂತಾರೆ. ತನಿಖೆಯ ದಿಕ್ಕು ತಪ್ಪಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಮುಸಲ್ಮಾನರ ಓಲೈಕೆಗಾಗಿ ಪೊಲೀಸರಿಗೆ ಇದುವರೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದ ತಂಡ ಶಿವಮೊಗ್ಗಕ್ಕೆ ಭೇಟಿ ಕೊಡಲಿದೆ. ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ, ಅಧ್ಯಯನ ನಡೆಸುತ್ತೇವೆ. ಸರ್ಕಾರದ ವಿರುದ್ಧ ಯಾವ ರೀತಿಯ ಹೋರಾಟವನ್ನು ಮಾಡಬೇಕೆಂದು ತೀರ್ಮಾನಿಸುತ್ತೇವೆ ಎಂದರು.
ಉಡುಪಿ: ಮಾಜಿ ಮುಖ್ಯಮಂತ್ರಿ ದೇವರಾಜ ಅರಸು (D. Devaraj Urs) ಜನ್ಮದಿನ ಆಗಸ್ಟ್ 20ರಂದು ನಡೆಯಲಿದೆ. ಬಿಜೆಪಿ ಸರ್ಕಾರ ಇದ್ದಾಗ ಮೂರು ದಿನಗಳ ಕಾಲ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ದೇವರಾಜ ಅರಸು ಉತ್ಸವ ಆರಂಭ ಮಾಡಿತ್ತು. ಸಿದ್ದರಾಮಯ್ಯ (Siddaramaiah) ಸರ್ಕಾರ ಈ ಪರಿಪಾಠ ಕೈಬಿಟ್ಟಿದೆ. ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬದುಕು ಬರಹ ಸಾಮಾಜಿಕ ನ್ಯಾಯ ವಿಚಾರವನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಕೆಲಸ ಬಿಜೆಪಿ ಸರ್ಕಾರ ಮಾಡಿತ್ತು. ಹಾಸ್ಟೆಲ್ ಮಕ್ಕಳಿಂದ ಪ್ರತಿಭಾ ಪ್ರದರ್ಶನ ಮಾಡಿಸಿದ್ದೆವು, ವಿಚಾರ ಸಂಕೀರ್ಣವನ್ನು ಮಾಡಿದ್ದೆವು. ರಾಜ್ಯ ಮಟ್ಟದ ಪ್ರಶಸ್ತಿ ನೀಡಿದ್ದೆವು, ಅರಸು ಆದರ್ಶ ಪಾಲಿಸಿದವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿದ್ದೆವು. ಸಿದ್ದರಾಮಯ್ಯ ಹಿಂದುಳಿದವರ ಕಾಳಜಿ ಬಗ್ಗೆ ಮಾತನಾಡುತ್ತಾರೆ. ಈ ಸರ್ಕಾರ ಕೂಡ ಮೂರು ದಿನಗಳ ಉತ್ಸವ ಮಾಡಬೇಕೆಂದು ಸಿದ್ದರಾಮಯ್ಯಗೆ ಪತ್ರ ಬರೆದಿದ್ದೆ. ದುರಾದೃಷ್ಟವಶಾತ್ ಮುಖ್ಯಮಂತ್ರಿ ಕಚೇರಿಯಿಂದ ಹಿಂಬರಹ ಬಿಟ್ಟರೆ ಬೇರೇನೂ ಪ್ರತಿಕ್ರಿಯೆ ಬಂದಿಲ್ಲ. ಹಿಂದಿನ ಸರ್ಕಾರ ಮಾಡಿದ ಅರಸು ಉತ್ಸವ ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಮೂರು ದಿನಗಳ ಆಚರಣೆಗೆ ಯಾವ ದೊಡ್ಡ ಮೊತ್ತದ ಅವಶ್ಯಕತೆ ಇಲ್ಲ. ಆಯಾ ಜಿಲ್ಲೆಗಳಲ್ಲಿರುವ ಅನುದಾನ ಬಳಸಿಕೊಂಡು ಮಾಡಬಹುದು. ಯಾವುದೇ ವಿಶೇಷ ಅನುದಾನದ ಸಮಸ್ಯೆ ಆಗುವುದಿಲ್ಲ. ಆದರೆ ಇಚ್ಛಾಶಕ್ತಿ ಬೇಕು ಅಷ್ಟೇ. ಸಿದ್ದರಾಮಯ್ಯನವರೇ ಇಚ್ಛಾಶಕ್ತಿ ಪ್ರದರ್ಶಿಸಿ ಎಂದು ಕೋಟಾ ಕಿವಿ ಹಿಂಡಿದ್ದಾರೆ.
ಹಿಂದುಳಿದ ವರ್ಗಗಳ ಪ್ರಭಾವಿ ನಾಯಕ ಆಗಿದ್ದ ದಿವಂಗತ ದೇವರಾಜ ಅರಸು ಅವರ ಸಮಸ್ಮರಣೆಯ ನೆನಪಿನ ಕಾರ್ಯಕ್ರಮವನ್ನು ಕಾಂಗ್ರೆಸ್ ಸರ್ಕಾರ ಮುಂದುವರೆಸುತ್ತಾ? ಒಂದು ಸರ್ಕಾರಿ ಕಾರ್ಯಕ್ರಮದ ರೀತಿ ಆಚರಿಸುತ್ತಾ ಎಂಬ ಪ್ರಶ್ನೆ ಇದೆ.
ಬೆಂಗಳೂರು: ಬಿಜೆಪಿ (BJP) ಸರ್ಕಾರದಲ್ಲಿ ವಿದ್ಯುತ್ ದರ (Electricity Bill) ಏರಿಕೆ ಮಾಡಿಲ್ಲ ಅಂತ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ (Congress) ಸಚಿವರ ಆರೋಪಕ್ಕೆ ವಿಧಾನಸೌಧದಲ್ಲಿ ಮಾತನಾಡಿದ ಅವರು ತಿರುಗೇಟು ನೀಡಿದರು.
ಪ್ರತಿ ಯುನಿಟ್‍ಗೆ 70 ಪೈಸೆ ದರ ಹೆಚ್ಚಳ ಮಾಡಿದ್ದೀರಿ. ಕೈಗಾರಿಕೆಗಳು ನಿಲ್ಲಿಸೋ ಬಗ್ಗೆ ಸಂಘದವರು ಮಾತಾಡಿದ್ದಾರೆ. ಇದನ್ನ ಸರಿ ಮಾಡೋ ಕೆಲಸ ಸರ್ಕಾರ ಮಾಡಬೇಕು ಅಂತ ಆಗ್ರಹ ಮಾಡಿದರು. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಅವರು ಪ್ರತಿ ವರ್ಷ ದರ ಏರಿಕೆಗೆ ಪ್ರಸ್ತಾಪ ಮಾಡುತ್ತಾರೆ. ಆದರೆ ನಮ್ಮ ಸರ್ಕಾರ ಅದನ್ನ ಒಪ್ಪಿರಲಿಲ್ಲ. ಈಗ ಹೆಚ್ಚಳ ಮಾಡಿರೋ ವಿದ್ಯುತ್ ದರ ಏರಿಕೆ ಕಡಿಮೆ ಮಾಡಿ ಅಂತ ಒತ್ತಾಯ ಮಾಡಿದ್ರು.
ಜನವರಿಯಲ್ಲಿ ಸಹಜವಾಗಿ ಕೆಇಆರ್ ಸಿ ಬೆಲೆ ಏರಿಕೆ ಪ್ರಸ್ತಾಪ ಇಡುತ್ತೆ. ಆದರೆ ನನ್ನ ಮಾಹಿತಿ ಪ್ರಕಾರ ನಮ್ಮ ಸರ್ಕಾರ ಹೆಚ್ಚಳ ಮಾಡಿಲ್ಲ. ಒಂದು ವೇಳೆ ಹೆಚ್ಚಳ ಆಗಿದ್ರು ಈಗ ನೀವು ವಾಪಸ್ ಪಡೆದುಕೊಳ್ಳಬೇಕು. ಕೆಇಆರ್ ಸಿ ಏನು ಸುಪ್ರೀಂಕೋರ್ಟ್ (Supremecourt) ಅಲ್ಲ. ಯಾವುದೇ ಕಾರಣಕ್ಕೂ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಬಾರದು ಅಂತ ಕೋಟಾ ಆಗ್ರಹಿಸಿದರು.