Tag: kota srinivas poojary

  • ಸಾಮಾನ್ಯ ಸಿಬ್ಬಂದಿ ಈ ರೀತಿ ಮಾಡಲು ಸಾಧ್ಯವೇ?: ಜನಿವಾರ ವಿವಾದಕ್ಕೆ ಸರ್ಕಾರದ ವಿರುದ್ಧ ಕೋಟ ಕಿಡಿ

    ಸಾಮಾನ್ಯ ಸಿಬ್ಬಂದಿ ಈ ರೀತಿ ಮಾಡಲು ಸಾಧ್ಯವೇ?: ಜನಿವಾರ ವಿವಾದಕ್ಕೆ ಸರ್ಕಾರದ ವಿರುದ್ಧ ಕೋಟ ಕಿಡಿ

    ಉಡುಪಿ: ಸಾಮಾನ್ಯ ಸಿಬ್ಬಂದಿ ಈ ರೀತಿ ಮಾಡಲು ಸಾಧ್ಯವೇ ಎಂದು ವಿದ್ಯಾರ್ಥಿ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಸಂಸದ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಕಿಡಿಕಾರಿದರು.

    ಆಳುವ ಸರ್ಕಾರಕ್ಕೆ ಏನಾಗಿದೆಯೋ ಅರ್ಥವಾಗುತ್ತಿಲ್ಲ. ಸಿಇಟಿ ಪರೀಕ್ಷೆಯಲ್ಲಿ ಕಿವಿಯೋಲೆ ತೆಗೆಸಿದಾಗ ವಿವಾದ ಆಗಿತ್ತು. ಮಾಂಗಲ್ಯ ತೆಗೆಯಬೇಕು ಎಂಬ ಕಾರಣಕ್ಕೂ ಗಲಾಟೆ ಆಗಿತ್ತು. ಈಗ ಜನಿವಾರ (Janivara Row) ತೆಗೆಯಲು ಪ್ರಾರಂಭ ಮಾಡಿದ್ದಾರೆ. ಸರ್ಕಾರಕ್ಕೆ, ಮಂತ್ರಿಗಳಿಗೆ ಉನ್ನತ ಅಧಿಕಾರಿಗಳ ಗಮನಕ್ಕೆ ಬಂದಿಲ್ವಾ? ಸಾಮಾನ್ಯ ಸಿಬ್ಬಂದಿ ಈ ರೀತಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜನಿವಾರ ಕತ್ತರಿಸಿದ್ದು ಬಹಳ ದೊಡ್ಡ ತಪ್ಪು: ಪರಮೇಶ್ವರ್

    ಬ್ರಾಹ್ಮಣರು ಮಾತ್ರ ಯಜ್ಞೋಪವೀತ ಹಾಕುವುದಲ್ಲ. ಗೌಡ ಸರಸ್ವತರು, ವಿಶ್ವಕರ್ಮರು ಎಲ್ಲರೂ ಹಾಕುತ್ತಾರೆ. ಯಜ್ಞೋಪವೀತವನ್ನು ಪವಿತ್ರ ಎಂದು ಜನ ಭಾವಿಸುತ್ತಾರೆ. ಈ ರೀತಿ ಮಾಂಗಲ್ಯ ಕಿವಿಯೋಲೆ ಜನಿವಾರ ತೆಗೆಸುವುದು ಸರಿನಾ? ಜನಿವಾರದಲ್ಲಿ ನೇಣು ಹಾಕಿಕೊಳ್ಳುತ್ತೀರಾ ಅನ್ನೋದು ಸರಿಯಲ್ಲ ಎಂದು ಬೇಸರ ಹೊರಹಾಕಿದರು.

    ಮಂತ್ರಿಗಳೇ ನಿಮಗೆ ಗೊತ್ತಿಲ್ಲ ಅಂತೀರಿ. ತಪ್ಪು ಮಾಡಿದವರ ಮೇಲೆ ತಕ್ಷಣ ಕ್ರಮವಾಗಲಿ. ಒಂದು ಧರ್ಮದವರು ಏನು ಬೇಕಾದರೂ ಹಾಕಬಹುದಾ? ಮತ್ತೊಂದು ಧರ್ಮದವರು ಏನೂ ಹಾಕುವಂತಿಲ್ಲ ಅನ್ನೋದು ಸರಿಯಲ್ಲ. ಸಿಎಂ, ಗೃಹಮಂತ್ರಿಗಳು, ಶಿಕ್ಷಣ ಸಚಿವರು ಸಮಾಜದ ಮೇಲೆ ದಬ್ಬಾಳಿಕೆ ಮಾಡಬೇಡಿ ಎಂದು ಗರಂ ಆದರು. ಇದನ್ನೂ ಓದಿ: ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ ಕೂರಿಸದ ಪ್ರಕರಣ – ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ FIR

  • ವಕ್ಫ್ ಕಾಯ್ದೆಯನ್ನು ರಾಷ್ಟ್ರಭಕ್ತ ಮುಸ್ಲಿಮರು ಬೆಂಬಲಿಸಬೇಕು: ಕೋಟ ಶ್ರೀನಿವಾಸ ಪೂಜಾರಿ

    ವಕ್ಫ್ ಕಾಯ್ದೆಯನ್ನು ರಾಷ್ಟ್ರಭಕ್ತ ಮುಸ್ಲಿಮರು ಬೆಂಬಲಿಸಬೇಕು: ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ: ವಕ್ಫ್ ಕಾಯ್ದೆಯನ್ನು (Waqf Act) ರಾಷ್ಟ್ರಭಕ್ತ ಮುಸ್ಲಿಮರು ಬೆಂಬಲಿಸಬೇಕು ಎಂದು ವಿನಂತಿ ಮಾಡುತ್ತಿದ್ದೇನೆಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಹೇಳಿದರು.

    ವಕ್ಫ್ ಕಾಯ್ದೆ ವಿರೋಧ ವಿಚಾರವಾಗಿ ಮಾತನಾಡಿದ ಅವರು, ವಕ್ಫ್ ಮಂಡಳಿಗೆ ಕೋರ್ಟಿಗೆ ಹೋಗುವ ಅಧಿಕಾರ ಇಲ್ಲ. ಬಿಲ್ ಜಾರಿಗೊಳಿಸುವ ಮೂಲಕ ಪಾರದರ್ಶಕತೆ ಜಾರಿಗೆ ತರಲಾಗಿದೆ. ಅನ್ವರ್ ಮಾಣಿಪ್ಪಾಡಿ ವರದಿಯಲ್ಲಿ ಸ್ಪಷ್ಟವಾಗಿದೆ. ಎರಡು ಲಕ್ಷ ಕೋಟಿ ರೂಪಾಯಿ ವಕ್ಫ್ ಆಸ್ತಿ ಶ್ರೀಮಂತ ರಾಜಕಾರಣಿಗಳ ಪಾಲಾಗಿದೆ. ಶ್ರೀಮಂತ ರಾಜಕಾರಣಿಗಳು ಮೆಡಿಕಲ್ ಕಾಲೇಜು, ಶಾಲೆ ಆಸ್ಪತ್ರೆ-ವಾಣಿಜ್ಯ ವ್ಯವಹಾರಗಳನ್ನು ಮಾಡುತ್ತಿದ್ದಾರೆ. ಕಡಿಮೆ ಬೆಲೆಗೆ ಬಾಡಿಗೆ ಅಥವಾ ಲೀಸ್‌ಗೆ ಪಡೆದು ಎರಡು ಲಕ್ಷ ಕೋಟಿ ರೂಪಾಯಿ ವ್ಯವಹಾರ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದವರು ಈ ಮಾಹಿತಿಯನ್ನು ನೀಡುತ್ತಿದ್ದಾರೆ. ಬಡವರು, ಮಹಿಳೆಯರಿಗೆ ಮಕ್ಕಳ ಶಿಕ್ಷಣಕ್ಕೆ ವಕ್ಫ್ ಆಸ್ತಿ ಬಳಕೆಯಾಗಬೇಕು. ಶ್ರೀಮಂತರ ಹಿಡಿತದಿಂದ ತಪ್ಪಿಸಿ ಬಡ ಮುಸ್ಲಿಮರ ಪರವಾಗಿ ಈ ಕಾಯ್ದೆ ಇದೆ. ಮತೀಯ ಮತ್ತು ಮತದ ಕಾರಣಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವಕ್ಫ್ ಕಾಯ್ದೆಯನ್ನು ರಾಷ್ಟ್ರಭಕ್ತ ಮುಸ್ಲಿಮರು ಬೆಂಬಲಿಸಬೇಕು ಎಂದು ವಿನಂತಿ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ವಕ್ಫ್‌ ಸದ್ಬಳಕೆ ಆಗಿದ್ದರೆ ಮುಸ್ಲಿಮರು ಪಂಕ್ಚರ್‌ ಹಾಕುತ್ತಿರಲಿಲ್ಲ: ಮೋದಿ

    ಸರ್ಕಾರ ಉರುಳಿಸಲು ಮೋದಿ, ಅಮಿತ್ ಶಾ ಷಡ್ಯಂತ್ರ ಎಂಬ ಮಲ್ಲಿಕಾರ್ಜುನ ಖರ್ಗೆ ಆರೋಪಕ್ಕೆ ಪ್ರತಿಕ್ರಿಯಿಸಿ, ಡಿಕೆಶಿ, ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಒಗ್ಗಟ್ಟಿನ ಬಗ್ಗೆ ನಾನು ಮಾತಾಡಲ್ಲ. ಒಗ್ಗಟ್ಟಿಲ್ಲ ಅಂತ ಖರ್ಗೆಗೂ ಅನಿಸಿರಬೇಕು ಹಾಗಾಗಿ ಈ ಹೇಳಿಕೆ ಕೊಟ್ಟಿರಬಹುದು. ಬಿಜೆಪಿ ಸರ್ಕಾರವನ್ನು ವಜಾ ಮಾಡಲು ಯತ್ನಿಸಿದ್ದು ಕಾಂಗ್ರೆಸ್. ಮೋದಿ ಆಡಳಿತದಲ್ಲಿ ಈ ಥರದ ದುಷ್ಕೃತ್ಯ ಎಲ್ಲೂ ಆಗಿಲ್ಲ. ಮೋದಿ ಅವಧಿಯಲ್ಲಿ ರಾಜ್ಯಪಾಲರ ಆಡಳಿತ ತಂದ ಒಂದೇ ಒಂದು ಉದಾಹರಣೆ ಇಲ್ಲ. ಖರ್ಗೆ ಬಹಳ ದೊಡ್ಡವರು ಇತಿಹಾಸ ಗೊತ್ತಿದ್ದವರು. ನಾವಾದ್ರೆ ವಜಾ ಮಾಡ್ತಿದ್ದೆವು, ಬಿಜೆಪಿಯವರು ಬಿಟ್ಟಿದ್ದಾರೆ ಎಂಬರ್ಥದಲ್ಲಿ ಹೇಳಿರಬಹುದು. ಸರ್ಕಾರ ವಜಾ ಮಾಡುವುದರಲ್ಲಿ ಕಾಂಗ್ರೆಸ್ ಎತ್ತಿದ ಕೈ. ಆ ಮಾನಸಿಕತೆ ಬಿಜೆಪಿಗೆ ಇಲ್ಲ. ರಾಜ್ಯಪಾಲರಾಗಿದ್ದ ಹಂಸರಾಜ ಭಾರದ್ವಾಜ್ ಗೋಹತ್ಯೆ ನಿಷೇಧ ಕಾಯ್ದೆ ಬಿಲ್‌ಗೆ ಸಹಿ ಹಾಕಿಲ್ಲ. ಬಿಲ್ಲನ್ನು ರಾಷ್ಟ್ರಪತಿಗೆ ವರ್ಗಾವಣೆ ಮಾಡಿದ್ದರು. ರಿಸರ್ವೇಶನ್ ಬಿಲ್ಲನ್ನು ಗೆಹ್ಲೋಟ್ ರಾಷ್ಟ್ರಪತಿಗೆ ಕಳುಹಿಸಿದ್ದಾರೆ. ಅಂದು ಸ್ವಾಗತಿಸಿದ ನೀವು ಇಂದು ಈ ನಡೆಯನ್ನು ಸ್ವಾಗತಿಸಬೇಕಿತ್ತು ಎಂದು ಟಾಂಗ್ ಕೊಟ್ಟರು.

    ಜಾತಿಗಣತಿ ‘ಪಬ್ಲಿಕ್ ಟಿವಿ’ ರಿಯಾಲಿಟಿ ಚೆಕ್ ಬಗ್ಗೆ ಮಾತನಾಡಿ, ಚರ್ಚಾ ಸಮರವಾಗಲಿ, ಎಲ್ಲರ ಅಭಿಪ್ರಾಯ ವ್ಯಕ್ತವಾಗಲಿ. ನ್ಯಾಯ ಸಮ್ಮತವಾದ ತೀರ್ಮಾನ ಹೊರಬರಲಿ. ನಮ್ಮ ಮನೆಯಲ್ಲಿ ಗಣತಿ ನಡೆದಿಲ್ಲ ಎಂದು ಬಹಳಷ್ಟು ಜನ ಹೇಳಿದ್ದಾರೆ. ಸರ್ಕಾರಕ್ಕೆ ಜವಾಬ್ದಾರಿ ಇದ್ದರೆ ಸ್ಪಷ್ಟಪಡಿಸಬೇಕು, ಉತ್ತರಿಸಬೇಕು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಗಣತಿ ನಡೆದಿರುವುದು. ಎಲ್ಲಾ ಜಿಜ್ಞಾಸೆ ಮತ್ತು ಎಲ್ಲಾ ಪ್ರಶ್ನೆಗಳಿಗೆ ಸರ್ಕಾರ ಉತ್ತರ ಕೊಡಬೇಕು. ಜನ ನಮ್ಮನೆಗೆ ಸರ್ವೆಗೆ ಬಂದಿಲ್ಲ ಅಂತಾರೆ ಈ ವರದಿಯನ್ನು ಹೇಗೆ ಒಪ್ಪಿಕೊಳ್ಳುವುದು? ಕಾಂತರಾಜು ವರದಿಯಲ್ಲಿ ರಚನೆ ಆಗುವಾಗ ಆದ ಲೋಪಗಳೇನು? ಸಮೀಕ್ಷೆ ಮಾಡಿದ ವರದಿ ಕೊಟ್ಟವರ ಜವಾಬ್ದಾರಿಯೂ ಇದರ ಹಿಂದೆ. ನಮ್ಮನೆಯಲ್ಲಿ ಸರ್ವೆ ಆಗಿಲ್ಲ ಎಂದು ಜನ ಹೇಳುತ್ತಿದ್ದಾರೆ. ಉತ್ತರ ಕೊಡಬೇಕಾದ್ದು ಸರ್ಕಾರದ ಜವಾಬ್ದಾರಿ. ತಿರಸ್ಕರಿಸಿ, ಮರು ಸರ್ವೆ ಮಾಡಿ ಎಂದು ನಾನು ಒತ್ತಾಯಿಸುತ್ತಿಲ್ಲ. ಜಾತಿ ಜನಗಣತಿಯ ಬಗ್ಗೆ ನಮ್ಮ ಆಕ್ಷೇಪ ಇಲ್ಲ. ಹಿಂದುಳಿದ ವರ್ಗ, ಕಟ್ಟ ಕಡೆ ವ್ಯಕ್ತಿ ಸಾಮಾಜಿಕ ಸಮಬಾಳಿಗೆ ನ್ಯಾಯಕ್ಕಾಗಿ ಜಾತಿಗಣತಿ ಬೇಕು. ಸರ್ಕಾರ ತನ್ನ ಆಂತರಿಕ ಸಮಸ್ಯೆಯಿಂದ ಮುಕ್ತ ಆಗಲು ಜನಗಣತಿಯನ್ನು ಬಳಸುತ್ತಿದೆ. ಜಾತಿ ಜನಗಣತಿಯನ್ನು ಸರ್ಕಾರ ಗುರಾಣಿಯಾಗಿ ಬಳಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಪ್ಪು ಸರಿಯ ಬಗ್ಗೆ ಚರ್ಚೆಯಾಗಲಿ, ಸಮರ ನಡೆಯಲಿ. ಯಾವುದೇ ಸಮುದಾಯವನ್ನು ಹೆಚ್ಚು ಮಾಡಿ ಕಡಿಮೆ ಮಾಡಿದ್ದರೆ ಅದು ತಪ್ಪು. ಮನೆ ಮನೆಗೆ ಹೋಗದೆ ವರದಿ ಸಿದ್ಧಪಡಿಸದಿದ್ದರೆ ಅದು ತಪ್ಪು. ಒಂದು ಸಮುದಾಯವನ್ನು ಹೆಚ್ಚು ಮಾಡುವುದು ಮತ್ತೊಂದು ಸಮುದಾಯಕ್ಕೆ ಹಲವು ಉಪಜಾತಿ ತೋರಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ವಕ್ಫ್‌ ಕಾಯ್ದೆ ವಿರೋಧಿಸಿ ಹಿಂಸಾಚಾರ – ಹಿಂದೂಗಳು ಮನೆಬಿಟ್ಟು ಓಡಿಹೋಗುತ್ತಿದ್ದಾರೆಂದು ಬಿಜೆಪಿ ಆರೋಪ

  • ಕೊಂಕಣ ರೈಲ್ವೆ ಭಾರತೀಯ ರೈಲ್ವೆಯಲ್ಲಿ ವಿಲೀನ ಮಾಡಿ: ಕೋಟ ಶ್ರೀನಿವಾಸ ಪೂಜಾರಿ ಆಗ್ರಹ

    ಕೊಂಕಣ ರೈಲ್ವೆ ಭಾರತೀಯ ರೈಲ್ವೆಯಲ್ಲಿ ವಿಲೀನ ಮಾಡಿ: ಕೋಟ ಶ್ರೀನಿವಾಸ ಪೂಜಾರಿ ಆಗ್ರಹ

    ಬೆಂಗಳೂರು: ಕೊಂಕಣ ರೈಲ್ವೆಯನ್ನು (Konkan Railway) ಭಾರತೀಯ ರೈಲ್ವೆಯಲ್ಲಿ (Indian Railways) ವಿಲೀನಗೊಳಿಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರ (Kota Srinivas Poojary) ನೇತೃತ್ವದ ಶಾಸಕರ ತಂಡ ಸಚಿವರಿಗೆ ಮನವಿ ಸಲ್ಲಿಸಿದೆ.

    ರಾಜ್ಯ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ಈ ಕುರಿತು ಕ್ರಮ ಕೈಗೊಳ್ಳಲು ಸಂಬಂಧಿತರಿಗೆ ಸೂಚಿಸಿದ್ದಾಗಿ ಪ್ರಕಟಣೆ ತಿಳಿಸಿದೆ. ಜಾರ್ಜ್ ಫರ್ನಾಂಡಿಸ್ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಅನುಷ್ಠಾನಕ್ಕೆ ತಂದ ಮಹತ್ವದ ಕೊಂಕಣ ರೈಲ್ವೆ ಯೋಜನೆಗೆ ಇಂದಿಗೆ ಸುಮಾರು 30 ವರ್ಷಗಳು ತುಂಬುತ್ತಿದೆ. ಏಕ ಹಳಿಯ ಪ್ರಯಾಣ ಸೌಲಭ್ಯ ಇರುವುದರಿಂದ ಹೆಚ್ಚುವರಿ ರೈಲ್ವೆ ಓಡಾಡಲು ಕಷ್ಟವಾಗುತ್ತದೆ ಮತ್ತು ಕೊಂಕಣ ರೈಲ್ವೆಯಲ್ಲಿ ಅನುದಾನದ ಕೊರತೆ ಇರುವುದರಿಂದ ನೂತನ ರೈಲ್ವೆ ನಿಲ್ದಾಣಗಳೂ ಸೇರಿದಂತೆ, ಮೂಲಭೂತ ಸೌಕರ್ಯ ವ್ಯವಸ್ಥೆಗೆ ಆರ್ಥಿಕ ಕೊರತೆ ಉಂಟಾಗುತ್ತಿದೆ. ಆದ್ದರಿಂದ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನ ಮಾಡುವುದರ ಮೂಲಕ ಭಾರತ ಸರ್ಕಾರದ ಅನುದಾನದ ಪಡೆದು ಕರಾವಳಿ ಪ್ರದೇಶದಲ್ಲೂ ಕೂಡ ಮಹತ್ವದ ರೈಲ್ವೆ ಯೋಜನೆ ಅನುಷ್ಠಾನ ಮಾಡಲು ಅವಕಾಶ ಮಾಡಿಕೊಡಬೇಕೆಂದು ನಿಯೋಗವು ತಿಳಿಸಿದೆ. ಇದನ್ನೂ ಓದಿ: ಬೆಂಗಳೂರು| ನೇಣು ಬಿಗಿದುಕೊಂಡು ಪೊಲೀಸ್ ಹೆಡ್‌ಕಾನ್ಸ್ಟೇಬಲ್ ಆತ್ಮಹತ್ಯೆ

    ಈ ಸಂಬಂಧ ಸಚಿವರ ಜೊತೆ ನಿಯೋಗವು ಸುದೀರ್ಘವಾಗಿ ಚರ್ಚಿಸಿತು. ಭಾರತೀಯ ರೈಲ್ವೆಯಲ್ಲಿ ವಿಲೀನಗೊಂಡರೆ, ಮುಂದಿನ ದಿನಗಳಲ್ಲಿ ಸಿಂಗಲ್ ಲೈನನ್ನು ಹೊರತುಪಡಿಸಿ, ಡಬ್ಲಿಂಗ್ ಮಾಡುವುದು ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆ ಅನುಷ್ಠಾನನವಾಗುವ ಲಭ್ಯ ಅವಕಾಶವನ್ನು ಸಚಿವರಿಗೆ ನಿಯೋಗ ಮನವರಿಕೆ ಮಾಡಿತು. ಸುದೀರ್ಘ ಚರ್ಚೆಯ ನಂತರ ಎಂ.ಬಿ ಪಾಟೀಲ್ ಸಹಮತ ವ್ಯಕ್ತಪಡಿಸಿದರು. ಅಲ್ಲದೇ, ತಕ್ಷಣವೇ ಇಲಾಖಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮಂಜುಳಾ ರವರಿಗೆ ದೂರವಾಣಿ ಮೂಲಕ ಸೂಚನೆ ನೀಡಿ ತಕ್ಷಣ ಕಡತ ಸಿದ್ದಪಡಿಸಿ, ಮುಂದೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು, ಭಾರತೀಯ ರೈಲ್ವೆಯಲ್ಲಿ ವಿಲೀನವಾಗುವ ಬಗ್ಗೆ ಸಂಸದರು ಮತ್ತು ಶಾಸಕರ ನಿಯೋಗಕ್ಕೆ ಭರವಸೆ ನೀಡಿದರು. ಇದನ್ನೂ ಓದಿ: CET: ಕನ್ನಡ ಭಾಷೆ ಪರೀಕ್ಷೆ ಏಪ್ರಿಲ್ 15ಕ್ಕೆ ಹಿಂದೂಡಿಕೆ – ಕೆಇಎ

    ಸಂಸದ ಕೋಟರೊಂದಿಗೆ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮತ್ತು ಉಡುಪಿಯ ಶಾಸಕ ಯಶ್‌ಪಾಲ್ ಸುವರ್ಣ ಭಾಗವಹಿಸಿದ್ದರು. ಇದನ್ನೂ ಓದಿ: ಮಹದೇಶ್ವರ ಬೆಟ್ಟದ ಅಂತರಗಂಗೆಯಲ್ಲಿ ಸೋಪು, ಶಾಂಪೂ ಬಳಕೆಗೆ ನಿಷೇಧ

  • ಸಿ.ಟಿ ರವಿಯನ್ನ ಊರೆಲ್ಲ ತಿರುಗಿಸಿದ್ದೇ ಸಾಧನೆ ಅಲ್ಲ – ಸಾಲು ಸಾಲು ದರೋಡೆಗೆ ಕೋಟಾ ಕಿಡಿ

    ಸಿ.ಟಿ ರವಿಯನ್ನ ಊರೆಲ್ಲ ತಿರುಗಿಸಿದ್ದೇ ಸಾಧನೆ ಅಲ್ಲ – ಸಾಲು ಸಾಲು ದರೋಡೆಗೆ ಕೋಟಾ ಕಿಡಿ

    ಚಿಕ್ಕಮಗಳೂರು: ರಾಜ್ಯದಲ್ಲಿ ನಡೆದ ಸಾಲು-ಸಾಲು ದರೋಡೆ ಪ್ರಕರಣಗಳ ವಿಚಾರವಾಗಿ ಸರ್ಕಾರದ ವಿರುದ್ಧ ಸಂಸದ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಚಿಕ್ಕಮಗಳೂರಿನಲ್ಲಿ (Chikkamagaluru) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಪೊಲೀಸರನ್ನು ಯಕ್ಷಗಾನ ತಡೆಯುವುದಕ್ಕೆ ನಿಯೋಜನೆ ಮಾಡುವುದು ಬೇಡ. ಸಿ.ಟಿ ರವಿ (C.T Ravi) ಅವರನ್ನು ಪೊಲೀಸರ ಮೂಲಕ ಊರೆಲ್ಲಾ ತಿರುಗಿಸಿ ಏನೋ ಸಾಧನೆ ಮಾಡಿದ್ದೇವೆ ಎಂಬ ಭ್ರಮೆ ಬೇಡ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ರಾಜ್ಯ ಸರ್ಕಾರ ಆಡಳಿತಾತ್ಮಕವಾಗಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ವಿರೋಧ ಪಕ್ಷದಲ್ಲಿ ಆಂತರಿಕ ಕಚ್ಚಾಟ ಇದ್ರೆ ಪಕ್ಷದ ಮೇಲೆ ಮಾತ್ರ ಪರಿಣಾಮ ಬೀರುತ್ತೆ. ಆಡಳಿತ ಪಕ್ಷದಲ್ಲಿ ಆಂತರಿಕ ಕಚ್ಚಾಟ ಇರಬಾರದು. ಆಡಳಿತ ಪಕ್ಷದಲ್ಲಿ ಆಂತರಿಕ ಕಚ್ಚಾಟ ಜೋರಾದ್ರೆ ಜನರಿಗೆ ತೊಂದರೆ ಆಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಕಾಂಗ್ರೆಸ್‍ನಲ್ಲಿ (Congress) ಒಂದು ಕಡೆ ಟಗರು ಮತ್ತೊಂದು ಕಡೆ ಬಂಡೆ ಗುದ್ದಾಡ್ತಾ ಇದ್ರೆ ಜನರಿಗೆ ತೊಂದರೆ ಆಗುತ್ತೆ. ಬಿಜೆಪಿ ಪಕ್ಷದಲ್ಲಿನ ಆಂತರಿಕ ಕಲಹದ ಬಗ್ಗೆ ಇಂದು ಅಥವಾ ನಾಳೆ ಎಲ್ಲವೂ ಕೂಡ ಸರಿ ಹೋಗಲಿದೆ ಎಂದಿದ್ದಾರೆ.

  • ಯೋಗೇಶ್ವರ್ ನಮ್ಮನ್ನು ಬಿಡುವುದಿಲ್ಲ ಎನ್ನುವ ವಿಶ್ವಾಸವಿತ್ತು: ಕೋಟ ಶ್ರೀನಿವಾಸ ಪೂಜಾರಿ ಬೇಸರ

    ಯೋಗೇಶ್ವರ್ ನಮ್ಮನ್ನು ಬಿಡುವುದಿಲ್ಲ ಎನ್ನುವ ವಿಶ್ವಾಸವಿತ್ತು: ಕೋಟ ಶ್ರೀನಿವಾಸ ಪೂಜಾರಿ ಬೇಸರ

    ಉಡುಪಿ: ಸಿ.ಪಿ.ಯೋಗೇಶ್ವರ್ (C.P.Yogeshwar) ನಮ್ಮನ್ನು ಬಿಡುವುದಿಲ್ಲ ಎನ್ನುವ ವಿಶ್ವಾಸವಿತ್ತು ಎಂದು ಸಿಪಿವೈ ಕಾಂಗ್ರೆಸ್ ಸೇರಿದ್ದಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಬೇಸರ ವ್ಯಕ್ತಪಡಿಸಿದರು.

    ಉಡುಪಿಯಲ್ಲಿ (Udupi) ಮಾತನಾಡಿದ ಅವರು, ಯೋಗೀಶ್ವರ್ ನಮ್ಮನ್ನು ಬಿಡುವುದಿಲ್ಲ ಎನ್ನುವ ವಿಶ್ವಾಸವಿತ್ತು. ಕ್ಷೇತ್ರದಲ್ಲಿ ಎನ್‌ಡಿಎ ಗೆಲ್ಲಬೇಕು ಅನ್ನೋದು ನಮ್ಮ ವಿಚಾರ. ಚನ್ನಪಟ್ಟಣದಲ್ಲಿ ನಮಗೆ ಗೆಲ್ಲುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಕರ್ನಾಟಕ ಫ್ರಾಡ್‌ಗಳ ಸಂತೆಯಾಗಲು ಸಿದ್ದರಾಮಯ್ಯ ಕಾರಣ – ಹೆಚ್‌. ವಿಶ್ವನಾಥ್‌ ಲೇವಡಿ

    ರಾಜಕಾರಣದಲ್ಲಿ ಈ ರೀತಿಯ ತರ್ಕಗಳು, ಚರ್ಚೆಗಳು ಬೆಳವಣಿಗೆಗಳು ಆಗುವುದು ಸಹಜ. ಒಟ್ಟು ಚುನಾವಣೆ ಸುಖಾಂತ್ಯವಾಗುತ್ತದೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.

    ಎನ್‌ಡಿಎ ಇಂದ ಯಾರನ್ನು ನಿಲ್ಲಿಸಬೇಕು ಅನ್ನೋದನ್ನ ಪಕ್ಷ ತೀರ್ಮಾನ ಮಾಡುತ್ತದೆ. ನಮಗಿಂತ ದೊಡ್ಡವರು ಎಲ್ಲಾ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಆಶ್ಚರ್ಯವೇನಿಲ್ಲ – ನಿಖಿಲ್ ಕುಮಾರಸ್ವಾಮಿ

  • ಭ್ರಷ್ಟಾಚಾರ ಆರೋಪ – ಸಿಎಂ ವಿರುದ್ಧ ಕೋಟಾ ಶ್ರೀನಿವಾಸ್ ಪೂಜಾರಿ ಮೌನ ಪ್ರತಿಭಟನೆ

    ಭ್ರಷ್ಟಾಚಾರ ಆರೋಪ – ಸಿಎಂ ವಿರುದ್ಧ ಕೋಟಾ ಶ್ರೀನಿವಾಸ್ ಪೂಜಾರಿ ಮೌನ ಪ್ರತಿಭಟನೆ

    – ತನಿಖೆ ಸಿಬಿಐಗೆ ವಹಿಸುವಂತೆ ಆಗ್ರಹ

    ಬೆಂಗಳೂರು: ಭ್ರಷ್ಟಾಚಾರ ಆರೋಪ ಮಾಡಿದ್ದ ಸಿಎಂ ಸಿದ್ದರಾಮಯ್ಯ‌ (Siddaramaiah) ವಿರುದ್ಧ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ (Kota Srinivas Poojary) ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

    ಮೌನ ಪ್ರತಿಭಟನೆ ನಡೆಸಿದ ಕೋಟಾ ಶ್ರೀನಿವಾಸ್ ಪೂಜಾರಿಗೆ ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಸುರೇಶ್ ಕುಮಾರ್, ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಪ್ರತಾಪ್ ಸಿಂಹ ನಾಯಕ್, ಶಾಂತರಾಮ್ ಸಿದ್ದಿ ಸಾಥ್ ನೀಡಿದರು. ನನ್ನ ಮೇಲೆ ಆರೋಪ ಹಿಂಪಡೆಯಿರಿ, ಇಲ್ಲವೇ ಸಿಬಿಐ ತನಿಖೆಗೆ ಕೊಡಿ ಎಂದು ಆಗ್ರಹಿಸಿ ಭಿತ್ತಿ ಪತ್ರ ಪ್ರದರ್ಶನದ ಮೂಲಕ ಮೌನವಾಗಿ ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ಭ್ರಷ್ಟಾಚಾರ ಆರೋಪ – ಸಿಎಂ ವಿರುದ್ಧ ಕೋಟಾ ಶ್ರೀನಿವಾಸ್ ಪೂಜಾರಿ ಮೌನ ಪ್ರತಿಭಟನೆ

    ಇನ್ನು ಪ್ರತಿಭಟನೆ ಬಳಿಕ ಮಾತನಾಡಿದ ಕೋಟಾ ಶ್ರೀನಿವಾಸ್ ಪೂಜಾರಿ, ಒಂದು ವಾರದ ಕೆಳಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೆ. ಸದನದ ಒಳಗೆ, ಹೊರಗೂ ಪ್ರಸ್ತಾಪ ಮಾಡಿದ್ದರು. ನಾನು ಯಾವುದೇ ಖಾತೆ ನಿಭಾಯಿಸಿದ್ದರೂ 1 ರೂ. ಭ್ರಷ್ಟಾಚಾರ ಮಾಡಿಲ್ಲ. ಒಂದು ವೇಳೆ ಭ್ರಷ್ಟಾಚಾರ ಮಾಡಿದ್ದರೇ ಸಿಬಿಐಗೆ ವಹಿಸಿ ಎಂದು ಪತ್ರ ಬರೆದಿದ್ದೆ. ಸಿಬಿಐಗೆ ವಹಿಸದಿದ್ದರೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡುವುದಾಗಿ ಹೇಳಿದ್ದೆ. ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ನಿನ್ನೆಯೂ ಮತ್ತೊಂದು ಪತ್ರ ಸಿಎಂಗೆ ಬರೆದಿದ್ದೇನೆ ಎಂದರು. ಇದನ್ನೂ ಓದಿ: ಕುಡಿಯುವ ನೀರಿಗಾಗಿ ಜನ ಮತ ಹಾಕಿದ್ದಾರೆ; ಬೆಂಗಳೂರಿಗೆ ನೀರು ಕೊಡಿ – ರಾಜ್ಯಸಭೆಯಲ್ಲಿ ಹೆಚ್‌ಡಿಡಿ ಮನವಿ

    ಸದನದ ಒಳಗೆ ನಿಂತು ನನ್ನನ್ನು ನಾನು ಸಮರ್ಥಿಸಿಕೊಳ್ಳಲು ಅವಕಾಶ ಇಲ್ಲ. ನಾನು ಸಂಸದನಾದ ಕಾರಣ ಇದು ಸಾಧ್ಯವಾಗಲಿಲ್ಲ. ನನ್ನ ಮೇಲೆ ಮಾಡಿರುವ ಆರೋಪವನ್ನು ಹಿಂಪಡೆಯಬೇಕು, ಇಲ್ಲವಾದರೆ ಸಿಬಿಐ ತನಿಖೆಗೆ ವಹಿಸುವಂತೆ ಕೋಟಾ ಶ್ರೀನಿವಾಸ್ ಪೂಜಾರಿ ಒತ್ತಾಯಿಸಿದರು. ಸಿಎಂ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ಯೋಚನೆ ಮಾಡಿ ತೀರ್ಮಾನಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ – ಸಿದ್ದರಾಮಯ್ಯ ಪರ ಸಚಿವ ಜಮೀರ್ ಬ್ಯಾಟಿಂಗ್‌

  • ಕಂಬಳದಲ್ಲಿ ಅಪರ್ಣಾ ಜಾಣ ನಿರೂಪಣೆ – ನೆನಪಿನ ಬುತ್ತಿ ಬಿಚ್ಚಿಟ್ಟ ಸಂಸದ ಕೋಟ

    ಕಂಬಳದಲ್ಲಿ ಅಪರ್ಣಾ ಜಾಣ ನಿರೂಪಣೆ – ನೆನಪಿನ ಬುತ್ತಿ ಬಿಚ್ಚಿಟ್ಟ ಸಂಸದ ಕೋಟ

    – ಅಪರ್ಣಾ ಜಾಗ ಖಾಲಿಯಾಗಿಯೇ ಉಳಿಯಲಿದೆ

    ಉಡುಪಿ: ಅಪರ್ಣಾ (Aparna) ಕೊನೆಯುಸಿರೆಳೆಯುವ ಮೂಲಕ ಸ್ವಚ್ಛ ನಿರೂಪಣೆ, ಸ್ವರಭಾರ, ಕನ್ನಡದ ಧ್ವನಿ ಎಲ್ಲವೂ ಅಡಗಿಹೋಯಿತು ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಕಂಬನಿ ಮಿಡಿದರು.

    ಉಡುಪಿಯಲ್ಲಿ (Udupi) ಮಾತನಾಡಿದ ಅವರು, ಮಸಣದ ಹೂ ಚಿತ್ರದ ಮೂಲಕ ಅಪರ್ಣಾ ಚಿತ್ರಲೋಕಕ್ಕೆ ಪದಾರ್ಪಣೆ ಮಾಡಿದರು. ನಮ್ಮ ಸರ್ಕಾರ ಇದ್ದಾಗ ಮುಖ್ಯಮಂತ್ರಿಗಳು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳ ನಿರೂಪಣೆಗೆ ಅವರೇ ಬರುತ್ತಿದ್ದರು. ಕರಾವಳಿಯ ಕಂಬಳದ ಬಗ್ಗೆ ನಿರೂಪಣೆ ಮಾಡುವಾಗ, ಕಂಬಳದ ಗುರಿಕಾರ ಪ್ರಶಸ್ತಿ ಸ್ವೀಕರಿಸಲು ಬರಬೇಕು ಎಂದು ಹೇಳಿದ್ದರು. ಕಂಬಳದ ಬಗ್ಗೆ ಅಪರ್ಣಾಗೆ ಕಲ್ಪನೆ ಇರಲಿಲ್ಲ. ಆದರೆ ವಿಚಾರವನ್ನು ತಿಳಿದುಕೊಂಡು ನಿರೂಪಣೆ ಮಾಡುತ್ತಿದ್ದರು ಎಂದು ಹಿಂದಿನ ಅನುಭವವನ್ನು ಬಿಚ್ಚಿಟ್ಟರು.  ಇದನ್ನೂ ಓದಿ: Dengue Alert: ರಾಜ್ಯದಲ್ಲಿ ಒಂದೇ ದಿನ 400ಕ್ಕೂ ಹೆಚ್ಚು ಕೇಸ್‌ ಪತ್ತೆ!

    ಕನ್ನಡದ ಕಾರ್ಯಕ್ರಮಕ್ಕೆ ಬಂದು ಯಜಮಾನರು ಕಂಬಳ ಕೋಣ ಓಡಿಸುವವರು ಸ್ಥಳದಲ್ಲಿದ್ದ ಎಲ್ಲರನ್ನು ಮಾತನಾಡಿಸಿ, ವಿಚಾರಗಳನ್ನು ಸಂಗ್ರಹಿಸಿ, ವೇದಿಕೆಯಲ್ಲಿ ನಿಂತು ಆಳ ಅಧ್ಯಯನ ಮಾಡಿ ಅರಿತವರಂತೆ ಮಾತನಾಡುವ ಚಾಕಚಕ್ಯತೆ ಅಪರ್ಣಾಗೆ ಇತ್ತು ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಒಬ್ಬ ಭಯಂಕರ ಸರ್ವಾಧಿಕಾರಿ, ಭ್ರಷ್ಟಾಚಾರಿ -‌ ಸಿಎಂ ಸ್ಥಾನದಿಂದ ಕೆಳಗಿಳಿಸಲು ಹೈಕಮಾಂಡ್‍ಗೆ ಸಾಧ್ಯವೇ?: ಜೋಶಿ

    ಅಪರ್ಣಾ ಯಾವುದೇ ಕಾರ್ಯಕ್ರಮಗಳಿಗೆ ತಮ್ಮ ನಿರೂಪಣೆಯ ಮೂಲಕ ಮೆರುಗು ನೀಡುತ್ತಿದ್ದರು. ಕನ್ನಡದ ಧ್ವನಿಯೊಂದು ಹುದುಗಿ ಹೋಗಿದೆ. ಅಪರ್ಣಾ ನಿಧನದಿಂದ ಕರ್ನಾಟಕವೇ ದುಃಖದಲ್ಲಿ ಮುಳುಗಿದೆ. ಅವರ ಧ್ವನಿ ಭಾರ ಜನಸಾಮಾನ್ಯರ ಮೇಲೂ ಪರಿಣಾಮ ಬೀರಿದೆ. ಅಪರ್ಣಾ ಕನ್ನಡದ ಮನೆಮಗಳು. ಅರ್ಪಣಾ ಅವರ ಜಾಗ ಖಾಲಿಯಾಗಿಯೇ ಉಳಿಯಲಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ – ಸಿಎಂ ಖಡಕ್‌‌ ಮಾತು

  • ಆರು ತಿಂಗಳಲ್ಲಿ ಹಿಂದಿ ಮಾತನಾಡಲು ಕಲಿಯುತ್ತೇನೆ: ಕೋಟಾ

    ಆರು ತಿಂಗಳಲ್ಲಿ ಹಿಂದಿ ಮಾತನಾಡಲು ಕಲಿಯುತ್ತೇನೆ: ಕೋಟಾ

    – ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟಾಗೆ ಗೆಲುವು

    ಉಡುಪಿ: ಇನ್ನು ಆರು ತಿಂಗಳಲ್ಲಿ ಹಿಂದಿ ಮಾತನಾಡಲು ಕಲಿಯುತ್ತೇನೆ ಎಂದು ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಸಾಮಾನ್ಯ ಮನುಷ್ಯ ಹಿಂದಿ ಗೊತ್ತಿಲ್ಲ ಎಂದಿದ್ದೆ. ಲೆಕ್ಕ ಇಟ್ಟುಕೊಳ್ಳಿ ಆರು ತಿಂಗಳು ಅವಧಿ ಇದೆ. ಹಿಂದಿ ಮಾತನಾಡೋದನ್ನು ಕಲಿಯಲು ಇವತ್ತಿನಿಂದಲೇ ಶುರು ಮಾಡುತ್ತೇನೆ ಎಂದರು.

    ಬಿಜೆಪಿ ನನ್ನಂಥ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ಕೊಟ್ಟದ್ದೇ ಆಶ್ಚರ್ಯ. ಎರಡು ಜಿಲ್ಲೆಯ ನಾಯಕರ ಅವಿಶ್ರಾಂತ ದುಡಿಮೆ ಈ ಗೆಲುವಿಗೆ ಕಾರಣ. ಇದು ಕಾರ್ಯಕರ್ತರ ಗೆಲುವು ಎಂದು ಭಾವಿಸಿದ್ದೇನೆ. ಪಕ್ಷ ಮತ್ತು ಎನ್‍ಡಿಎ ಒಕ್ಕೂಟಕ್ಕೆ ಗೆಲುವನ್ನು ಸಮರ್ಪಿಸುತ್ತೇನೆ ಎಂದು ಹೇಳಿದರು.

    ಪಂಚಾಯತ್ ನಿಂದ ಪಾರ್ಲಿಮೆಂಟ್‍ವರೆಗೆ ಎಂಬ ಘೋಷಣೆ ಇಂದು ಸಾಬೀತಾಯಿತು. ನಾವು 1 ಲಕ್ಷ ಸುಮಾರು ಅಂತರದ ಗೆಲುವು ಪಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಕಾರ್ಯಕರ್ತರು ನಾಯಕರ ಪರಿಶ್ರಮ ನನ್ನ ಮೇಲಿನ ಪ್ರೀತಿ ಈ ಸಂಖ್ಯೆಗೆ ಕಾರಣ. ನರೇಂದ್ರ ಮೋದಿ ಅವರಿಂದ ಭಾರತಕ್ಕೆ ಗೌರವ ಎಂಬುದು ಸತ್ಯ. ರಾಷ್ಟ್ರೀಯ ಭದ್ರತೆ, ರಾಮಮಂದಿರ -370, ಇಂತಹ ಬಹುದೊಡ್ಡ ಸವಾಲುಗಳಿಂದ ನಾವು ಗೆದ್ದಿದ್ದೇವೆ ಎಂದು ತಿಳಿಸಿದರು.

    ಬಡವರ ಮನೆಗೆ ಒಂದು ಲಕ್ಷ ಎಂದು ಇಂಡಿಯಾ ಕೂಟ ಹೇಳಿತ್ತು. ಎನ್ ಡಿ ಎ ಕೇಂದ್ರದಲ್ಲಿ ಅಧಿಕಾರ ಮಾಡುವುದರಲ್ಲಿ ಸಂಶಯ ಇಲ್ಲ. ನಾನು ಸಾಮಾನ್ಯ ಮನುಷ್ಯ ಹಿಂದಿ ಗೊತ್ತಿಲ್ಲ ಎಂದಿದ್ದೆ. ಲೆಕ್ಕ ಇಟ್ಟುಕೊಳ್ಳಿ ಇನ್ನು ಮುಂದೆ ಆರು ತಿಂಗಳು ಅವಧಿ ಇದೆ ಎಂದು ನುಡಿದರು.

    ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಈ ಬಾರಿ ಹೊಸ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಕಣಕ್ಕಿಳಿಸಿದ್ದರು. ಇದೀ ಕೋಟಾ ಅವರು ಕಾಂಗ್ರೆಸ್‍ನ ಜಯಪ್ರಕಾಶ್ ಹೆಗ್ಡೆ ವಿರುದ್ಧ ಎರಡೂವರೆ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ತನ್ನದಾಗಿಸಿಕೊಂಡಿದ್ದಾರೆ.

    ಇವಿಎಂ ಮತ್ತು ಅಂಚೆ ಮತಗಳ ಲೆಕ್ಕಚಾರ: ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿಗೆ 731408 ಮತಗಳು ಬಿದ್ದರೆ, ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆಯವರಿಗೆ 4,72,505 ಮತಗಳು ಬಿದ್ದಿವೆ. ಈ ಮೂಲಕ 2,58,903 ಮತಗಳ ಅಂತರದಿಂದ ಕೋಟಾ ಅವರಿಗೆ ಪಾರ್ಲಿಮೆಂಟ್‌ ಪ್ರವೇಶ ಮಾಡುವ ಅವಕಾಶ ದಕ್ಕಿದೆ.

  • ನೀತಿ ಸಂಹಿತೆ ಉಲ್ಲಂಘನೆ – ಶ್ರೀನಿವಾಸ ಪೂಜಾರಿಗೆ ಕೋರ್ಟ್‌ ಸಮನ್ಸ್‌

    ನೀತಿ ಸಂಹಿತೆ ಉಲ್ಲಂಘನೆ – ಶ್ರೀನಿವಾಸ ಪೂಜಾರಿಗೆ ಕೋರ್ಟ್‌ ಸಮನ್ಸ್‌

    ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ (Violation Of Election Code) ಮಾಡಿದ ಆರೋಪದ ಹಿನ್ನೆಲೆಯಲ್ಲಿ ಉಡುಪಿ, ಚಿಕ್ಕಮಗಳೂರು (Udupi Chikkamgaluru) ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ಅವರಿಗೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ.

    ಕೋಟಾ ಶ್ರೀನಿವಾಸ ಪೂಜಾರಿ, ಗುರುಮೆ ಸುರೇಶ್ ಶೆಟ್ಟಿ, ಲಾಲಾಜಿ ಮೆಂಡನ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.  ಇದನ್ನೂ ಓದಿ: ಇವಿಎಂನಲ್ಲೇ ಚುನಾವಣೆ, ಸ್ಲಿಪ್‌ ಮತದಾರನ ಕೈಗೆ ಸಿಗಬೇಕು : ಕಾಂಗ್ರೆಸ್‌ ಪ್ರಣಾಳಿಕೆ

     

    ಮಾರ್ಚ್ 30 ರಂದು ಕಠಪಾಡಿ ಖಾಸಗಿ ಕಾಲೇಜು ಅವರಣದಲ್ಲಿ ಶ್ರೀನಿವಾಸ ಪೂಜಾರಿ ಪ್ರಚಾರ ಭಾಷಣ ಮಾಡಿದ್ದರು. ಚುನಾವಣಾ ಅಧಿಕಾರಿಗಳ ಅನುಮತಿ ಇಲ್ಲದೆ ರಾಜಕೀಯ ಭಾಷಣ ಮಾಡಿದ ಹಿನ್ನಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಕೋರ್ಟ್‌ಗೆ ಖಾಸಗಿ ದೂರು ದಾಖಲಿಸಲಾಗಿತ್ತು.

    ಈ ದೂರಿನ ಹಿನ್ನೆಲೆಯಲ್ಲಿ ಕೋರ್ಟ್‌ ಸಮನ್ಸ್‌ ಜಾರಿ ಮಾಡಿ ಮೇ 27ಕ್ಕೆ ವಿಚಾರಣೆಯನ್ನು ಮುಂದೂಡಿದೆ.

     

  • ದೈವಕೋಲದ ವೇಳೆ ಸಾರ್ವಜನಿಕ ಸಭೆ – ಜಯಪ್ರಕಾಶ್ ಹೆಗ್ಡೆ ವಿರುದ್ಧ ಕೇಸ್

    ದೈವಕೋಲದ ವೇಳೆ ಸಾರ್ವಜನಿಕ ಸಭೆ – ಜಯಪ್ರಕಾಶ್ ಹೆಗ್ಡೆ ವಿರುದ್ಧ ಕೇಸ್

    ಉಡುಪಿ: ದೈವಕೋಲದ ವೇಳೆ ಸಭೆ ನಡೆಸಿದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ (Udupi Chikmagalur Lok Sabha constituency) ಕಾಂಗ್ರೆಸ್ (Congress) ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ (Jayaprakash Hegde) ವಿರುದ್ಧ ಕೇಸ್ ದಾಖಲಾಗಿದೆ.

    ಜಾರಾಂದಾಯ ದೈವಸ್ಥಾನದ ಜಾತ್ರೆಗೆ ತೆರಳಿದ್ದ ಜಯಪ್ರಕಾಶ್ ಹೆಗ್ಡೆ, ಸಾರ್ವಜನಿಕರೊಂದಿಗೆ ಚುನಾವಣಾ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಾಪು ಫ್ಲೈಯಿಂಗ್ ಸ್ಕಾಡ್‍ಗೆ ಮಾಹಿತಿ ಬಂದಿತ್ತು. ಧಾರ್ಮಿಕ ಸ್ಥಳದಲ್ಲಿ ಚುನಾವಣಾ ಕಾರ್ಯಕ್ರಮ ನಡೆಸಿ ಸಾರ್ವಜನಿಕರ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಇದನ್ನೂ ಓದಿ: ದೋಸ್ತಿಗಳ ಮೊದಲ ಸಮ್ಮಿಲನ ಸಭೆ – ದೇಶದಲ್ಲಿ ಮೋದಿಯಂತ ನಾಯಕರು ಮತ್ತೊಬ್ಬರಿಲ್ಲ ಎಂದ ಹೆಚ್‌ಡಿಡಿ

    ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ನೀತಿ ಸಂಹಿತೆ (Model code of conduct) ಉಲ್ಲಂಘನೆ ಪ್ರಕರಣ ದಾಖಲಾಗಿದೆ.

    ಬಿಜೆಪಿ ಭದ್ರಕೋಟೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ. 2002ರಲ್ಲಿ ಡಿಲಿಮಿಟೇಶನ್ ಕಮಿಷನ್ ಆಫ್ ಇಂಡಿಯಾದ ಶಿಫಾರಸಿನ ಆಧಾರದ ಮೇಲೆ 2008 ರಲ್ಲಿ ಈ ಕ್ಷೇತ್ರ ರಚನೆಯಾಯಿತು. 2009ರಲ್ಲಿ ಕ್ಷೇತ್ರದಲ್ಲಿ ಮೊದಲ ಚುನಾವಣೆ ನಡೆಯಿತು. ಅದರ ಮೊದಲ ಸದಸ್ಯರಾಗಿ ಬಿಜೆಪಿಯ ಡಿ.ವಿ.ಸದಾನಂದ ಗೌಡ ಆಯ್ಕೆಯಾಗಿ ಸಂಸತ್ ಪ್ರವೇಶಿಸಿದರು. ಬಳಿಕ 2014 ಮತ್ತು 2019ರಲ್ಲಿ ಅಖಾಡಕ್ಕಿಳಿದಿದ್ದ ಶೋಭಾ ಕರಂದ್ಲಾಜೆ ಮೋದಿ ಹೆಸರಲ್ಲಿ ಪ್ರಚಂಡ ಬಹುಮತದಿಂದ ಗೆದ್ದು ಬೀಗಿದ್ದರು.

    ಈ ಬಾರಿ ಬಿಜೆಪಿಯಿಂದ ಕೋಟಾ ಶ್ರೀನಿವಾಸ್ ಪೂಜಾರಿ (Kota Srinivas Poojary) ಕಣಕ್ಕಿಳಿದಿದ್ದು, ಕಾಂಗ್ರೆಸ್‍ನಿಂದ ಜಯಪ್ರಕಾಶ್ ಹೆಗ್ಡೆಯವರಿಗೆ ಟಿಕೆಟ್ ನೀಡಲಾಗಿದೆ. ಇದನ್ನೂ ಓದಿ: ಪಕ್ಷ ಸೇರುವಂತೆ ಬಿವೈವಿ ಆಹ್ವಾನ – ಬೆಂಬಲಿಗರ ಜೊತೆ ಚರ್ಚಿಸಿ ನಿರ್ಧಾರ ಎಂದ ಸುಮಲತಾ