Tag: Kota Srinivas Poojari

  • ಉಡುಪಿಗೆ ಆಗಮಿಸಿದ ಯೋಧ ಅನೂಪ್ ಪಾರ್ಥಿವ ಶರೀರ – ಅಂತಿಮ ನಮನ ಸಲ್ಲಿಸಿದ ಚೌಟ, ಕೋಟ

    ಉಡುಪಿಗೆ ಆಗಮಿಸಿದ ಯೋಧ ಅನೂಪ್ ಪಾರ್ಥಿವ ಶರೀರ – ಅಂತಿಮ ನಮನ ಸಲ್ಲಿಸಿದ ಚೌಟ, ಕೋಟ

    ಉಡುಪಿ: ಜಮ್ಮು ಕಾಶ್ಮೀರದ (Jammu Kashmir) ಪೂಂಚ್‌ನಲ್ಲಿ (Poonch) ನಡೆದ ಸೇನಾ ವಾಹನ ಅಪಘಾತದಲ್ಲಿ ಮೃತಪಟ್ಟ ಐವರ ಪೈಕಿ ಕರ್ನಾಟಕದ ಕುಂದಾಪುರ (Kundapura) ತಾಲೂಕಿನ ಬೀಜಾಡಿಯವರಾದ ಯೋಧ ಅನೂಪ್ (Hawaldar Anoop Poojari) ಪಾರ್ಥಿವ ಶರೀರ ಉಡುಪಿಗೆ ಆಗಮಿಸಿದೆ.

    ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ (Captain Brijesh Chowta) ಹಾಗೂ ಉಡುಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ (Kota Srinivas Poojari) ಸೇನಾಧಿಕಾರಿಗಳಿಂದ ಅನೂಪ್ ಪಾರ್ಥಿವ ಶರೀರ ಪಡೆದು ಅಂತಿಮ ನಮನ ಸಲ್ಲಿಸಿದರು. ಕೆಲವೇ ಕ್ಷಣಗಳಲ್ಲಿ ಉಡುಪಿ ನಗರದಿಂದ ಕುಂದಾಪುರಕ್ಕೆ ಮೃತದೇಹ ರವಾನೆಯಾಗಲಿದೆ. ಬೀಜಾಡಿ ಪಡು ಸರ್ಕಾರಿ ಶಾಲಾ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಸಿದ್ಧತೆ ನಡೆದಿದೆ. ಬೀಜಾಡಿ ಕಡಲ ಕಿನಾರೆಯಲ್ಲಿ ಇಂದು ಸಂಜೆ ವೇಳೆಗೆ ಅಂತ್ಯಕ್ರಿಯೆ ನಡೆಯಲಿದ್ದು, ಸಕಲ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಬೆಂಗಳೂರು| ರೈಲಿಗೆ ಸಿಲುಕಿ ಇಬ್ಬರು ಯುವಕರು ದಾರುಣ ಸಾವು

    ಕಳೆದ 13 ವರ್ಷಗಳಿಂದ ಸೈನ್ಯದಲ್ಲಿರುವ ಅನೂಪ್ 33ನೇ ವಯಸ್ಸಿಗೆ ಹವಾಲ್ದಾರ್ ಆಗಿ ಭಡ್ತಿ ಹೊಂದಿದ ವೀರ ಯೋಧ. ಅನೂಪ್ ಸಾವಿನಿಂದ ಇಡೀ ಕುಟುಂಬ ದಿಗ್ಬ್ರಾಂತಗೊಂಡಿದೆ. ಬಡತನದ ನಡುವೆ ಭಾರತಾಂಬೆಯ ಸೇವೆ ಮಾಡಬೇಕೆಂದು ಹಠದಿಂದ ಸೈನ್ಯ ಸೇರಿದ್ದ ಅನೂಪ್ 14 ವರ್ಷ ಸೇವೆ ಸಲ್ಲಿಸಿದ್ದಾರೆ. 2022ರಲ್ಲಿ ಅನೂಪ್‌ಗೆ ವಿವಾಹವಾಗಿತ್ತು. ಎರಡು ವರ್ಷದ ಪುಟ್ಟ ಮಗುವಿದ್ದು, ಇಬ್ಬರು ಸಹೋದರಿಯರು, ಅಪಾರ ಬಂಧು ಮಿತ್ರರು, ಗ್ರಾಮಸ್ಥರು, ಗೆಳೆಯರನ್ನು ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಮೂರು ವರ್ಷ ಮತ್ತೆ ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾಗುವ ಆಲೋಚನೆಯನ್ನು ಅನೂಪ್ ಹೊಂದಿದ್ದರು. ಈ ನಡುವೆ ಕಾಶ್ಮೀರದ ಪೂಂಚ್‌ನಲ್ಲಿ ದುರ್ಘಟನೆಯಾಗಿದೆ. 20 ದಿನದ ರಜೆಗೆ ಬಂದಿದ್ದ ಅನೂಪ್, ಶನಿವಾರವಷ್ಟೇ ಕಾಶ್ಮೀರಕ್ಕೆ ವಾಪಸ್ ಆಗಿದ್ದರು. ಘಟನೆಯಿಂದ ಕುಟುಂಬ ಕಣ್ಣೀರಾಗಿದೆ. ಮಗನನ್ನು ಕಳೆದುಕೊಂಡ ತಾಯಿ, ಸೋದರಿಯ ನೋವಿಗೆ ಕಣ್ಣೀರ ಮಾತೇ ಸಾಕ್ಷಿಯಾಗಿದೆ. ಇದನ್ನೂ ಓದಿ: ಕಾರವಾರ| 10 ಸಾವಿರ ಪಿಗ್ಮಿ ಹಣಕ್ಕಾಗಿ ವೃದ್ದೆ ಕತ್ತು ಹಿಸುಕಿ ಹತ್ಯೆ

    ಯೋಧ ಅನೂಪ್ ಪಾರ್ಥಿವ ಶರೀರ ಸ್ವಗ್ರಾಮ ತಲುಪಲಿದ್ದು, ಕುಂದಾಪುರದ ಬೀಜಾಡಿವರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅನೂಪ್ ಅಂತಿಮ ಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ. 5,000ಕ್ಕೂ ಹೆಚ್ಚು ಮಂದಿ ಭಾಗಿ ಆಗುವ ನಿರೀಕ್ಷೆ ಇದ್ದು, ಅಂತಿಮ ಯಾತ್ರೆ ಬಳಿಕ ಪಾರ್ಥಿವ ಶರೀರವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗುತ್ತದೆ. ಇದನ್ನೂ ಓದಿ: ನನಗೇನಾದ್ರೂ ಆದ್ರೆ ಸಿಎಂ ಹೊಣೆ: ಸ್ನೇಹಮಯಿ ಕೃಷ್ಣ

    ಸ್ವಗ್ರಾಮದ ಬೀಜಾಡಿ ಪಡು ಸರಕಾರಿ ಶಾಲೆಯಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು.. ಸಕಲ ಸೇನೆ ಮತ್ತು ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ. ಇದನ್ನೂ ಓದಿ: ನಾನು ಧರ್ಮಸ್ಥಳಕ್ಕೂ ಹೋಗ್ತೀನಿ, ಸವದತ್ತಿ ಯಲ್ಲಮ್ಮನ ಬಳಿಯೂ ಹೋಗ್ತೀನಿ: ಸಿ.ಟಿ ರವಿ

  • ಅರ್ಜುನ ಆನೆಗೆ 64 ವರ್ಷ.. ಕಾಡಾನೆ ಸೆರೆಗೆ ಯಾಕೆ ಬಳಸಿದ್ರು: ಸರ್ಕಾರಕ್ಕೆ ಕೋಟಾ ಪ್ರಶ್ನೆ

    ಅರ್ಜುನ ಆನೆಗೆ 64 ವರ್ಷ.. ಕಾಡಾನೆ ಸೆರೆಗೆ ಯಾಕೆ ಬಳಸಿದ್ರು: ಸರ್ಕಾರಕ್ಕೆ ಕೋಟಾ ಪ್ರಶ್ನೆ

    ಬೆಳಗಾವಿ: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮೈಸೂರು ದಸರಾ ಖ್ಯಾತಿಯ ಅರ್ಜುನ (Arjuna Elephant) ಆನೆ ಬಲಿಯಾಗಿರುವುದಕ್ಕೆ ಅರಣ್ಯ ಇಲಾಖೆ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojari) ಗರಂ ಆಗಿದ್ದಾರೆ.

    ಪರಿಷತ್‌ ಕಲಾಪದ ವೇಳೆ ಮಾತನಾಡಿದ ಅವರು, 60 ವರ್ಷ ಮೀರಿದ ಅನೆಯನ್ನ ಕಾರ್ಯಾಚರಣೆಗೆ ಬಳಕೆ ಮಾಡಬಾರದು ಅಂತ ನಿಯಮ ಇತ್ತು. ಈಗ ಅರ್ಜುನ ಆನೆಗೆ 64 ವರ್ಷ. ಕಾಡಾನೆ ಸೆರೆ ಹಿಡಿಯಲು ಯಾಕೆ ಉಪಯೋಗ ಮಾಡಿದ್ರು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕಾಡಾನೆ ದಾಳಿಗೆ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಬಲಿ

    ಇದೊಂದು ಆತಂಕದ ವಿಚಾರ. ಸರ್ಕಾರ ಅರ್ಜುನ ಸಾವಿನ ಬಗ್ಗೆ ತನಿಖೆ ಮಾಡಬೇಕು. ಅರವಳಿಕೆ ಪುಂಡಾನೆಗೆ ಬದಲು ಅರ್ಜುನಿಗೆ ಬಿತ್ತು ಅಂತ ಆರೋಪ ಇದೆ. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

    ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಬಳಿ ಕಾಡಾನೆ ಸೆರೆಗೆ ಸೋಮವಾರ ನಡೆದ ಕಾರ್ಯಾಚರಣೆಯಲ್ಲಿ ಕಾಡಾನೆ ದಾಳಿಯಿಂದ ಅರ್ಜುನ ಆನೆ ಮೃತಪಟ್ಟಿತು. ಇದನ್ನೂ ಓದಿ: ತನ್ನ ಪ್ರಾಣ ತ್ಯಾಗ ಮಾಡಿ ಹಲವರ ಜೀವ ಉಳಿಸಿದ ಅರ್ಜುನ – ನಡೆದಿದ್ದೇನು?

    ನಾಲ್ಕು ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು ಕಾರ್ಯಾಚರಣೆ ಆರಂಭಿಸಿದ್ದರು. ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಅರ್ಜುನನ ಮೇಲೆ ಒಂಟಿಸಲಗ ಅಟ್ಯಾಕ್ ಮಾಡಿತ್ತು. ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಅರ್ಜುನ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ.

    ಅರ್ಜುನ ಆನೆ ಸಾವಿನ ಬಗ್ಗೆ ಸ್ಥಳದಲ್ಲೇ ಇದ್ದ ಮಾವುತರು ಮತ್ತು ಕಾವಾಡಿಗರು ನೀಡಿರುವ ಹೇಳಿಕೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅರವಳಿಕೆ ಕಾಡಾನೆಗೆ ತಾಗುವ ಬದಲು ಅರ್ಜುನನಿಗೆ ತುಗಲಿತ್ತು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ನಡೆದು ಹೋಯ್ತಾ ಮಹಾ ಪ್ರಮಾದ – ಗುರಿ ತಪ್ಪಿ ಬಿದ್ದ ಗುಂಡೇಟಿನಿಂದ ಅರ್ಜುನ ಸಾವು?

  • ಪರಿಶಿಷ್ಟ ಜಾತಿ, ಪಂಗಡ ಬಿಜೆಪಿ ಕೈ ಹಿಡಿಯಲಿವೆ – ಕೋಟ ಶ್ರೀನಿವಾಸ ಪೂಜಾರಿ

    ಪರಿಶಿಷ್ಟ ಜಾತಿ, ಪಂಗಡ ಬಿಜೆಪಿ ಕೈ ಹಿಡಿಯಲಿವೆ – ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ: ಕರಾವಳಿಯ ಮೂರು ಜಿಲ್ಲೆಗಳು ಸೇರಿದಂತೆ ಇಡೀ ಕರ್ನಾಟಕದಲ್ಲಿ ಬಿಜೆಪಿ (BJP) ಪರವಾದ ಅಲೆ ನಿರ್ಮಾಣವಾಗಿದೆ. ಪ.ಜಾತಿ (SC), ಪ.ಪಂ (ST) ಮತ್ತು ಹಿಂದುಳಿದ ವರ್ಗದವರು (Backward Class) ಒಟ್ಟಾಗಿ ಬಿಜೆಪಿಯನ್ನು ಸ್ಪಷ್ಟವಾಗಿ ಗೆಲ್ಲಿಸುತ್ತಾರೆ. ಈ ಬಾರಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಏರುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ (Kota Srinivas Poojari) ವಿಶ್ವಾಸ ವ್ಯಕ್ತಪಡಿಸಿದರು.

    ಉಡುಪಿಯಲ್ಲಿ (Udupi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಎಲ್ಲಾ ಯೋಜನೆ ಮತ್ತು ಯೋಚನೆಗಳನ್ನು ಮಾಡಿ ವಿಜಯ ಸಂಕಲ್ಪ ಯಾತ್ರೆ, ಬೂತ್ ಮಟ್ಟದ ಕಾರ್ಯಕ್ರಮ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಶಕ್ತಿ ಕೇಂದ್ರದ ಮಟ್ಟದಲ್ಲಿ ಕಾರ್ಯಕರ್ತರ ಜೋಡಣೆ ಕಾರ್ಯಕ್ರಮಗಳನ್ನು ಮುಗಿಸಿರುವುದರಿಂದ ನಿಶ್ಚಯವಾಗಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ಜೆಡಿಎಸ್‌ನ ಶಿವಲಿಂಗೇಗೌಡ ರಾಜೀನಾಮೆ 

    kota srinivas poojary

    ಸಾಮಾನ್ಯವಾಗಿ ಮತದಾನದ ಪೂರ್ವ ಸಮೀಕ್ಷೆಗಳೇ ಅಂತಿಮವಲ್ಲ. ಮುಂಬರುವ ದಿನಗಳಲ್ಲಿ ಸಮೀಕ್ಷೆಯನ್ನು ಮೀರಿ ಸ್ಪಷ್ಟ ಬಹುಮತ ಪಡೆಯುತ್ತೇವೆ. ಪ.ಜಾತಿ, ಪ.ಪಂಗಡದವರಿಗೆ ಮೀಸಲಾತಿಯನ್ನು ಹೆಚ್ಚು ಮಾಡಿದ್ದೇವೆ. ದೇವರಾಜ್ ಅರಸರ (D.Devaraj Urs) ನಂತರ ಯಾವುದಾದರೂ ಒಂದು ಸರಕಾರ ಮೀಸಲಾತಿಯ (Reservation) ಜೇನುಗೂಡಿಗೆ ಕೈ ಇಟ್ಟು ಎಲ್ಲಾ ಸಮಾಜದವರಿಗೂ ಸಿಹಿಯನ್ನು ಹಂಚಿದ್ದರೇ ಅದು ಬೊಮ್ಮಾಯಿಯವರ (Basavaraj Bommai) ನೇತೃತ್ವದ ಸರ್ಕಾರ ಎಂಬ ಭಾವನೆ ಜನರಿಗೆ ಬಂದಿದೆ ಎಂದರು. ಇದನ್ನೂ ಓದಿ: ತಮ್ಮಯ್ಯ ವಿರುದ್ಧ ತಣ್ಣಗಾಗದ ಆಕ್ರೋಶ – ಕಾಫಿನಾಡಲ್ಲಿ ನಿಂತಿಲ್ಲ ಬಂಡಾಯದ ಕೂಗು

    17% ಮೀಸಲಾತಿಯಲ್ಲಿ ಅಲೆಮಾರಿ, ಸ್ಪರ್ಶ ಪ.ಜಾತಿಯವರಿಗೆ ಮೀಸಲಾತಿಯನ್ನು ಹಂಚಲಾಗಿದೆ. ಅದೇ ರೀತಿ ಪ.ಜಾತಿಯವರಿಗೆ ಶೇ.15ರಿಂದ ಶೇ.17ಕ್ಕೆ ಏರಿಕೆ ಮಾಡಲಾಗಿದೆ. ಅಲ್ಲದೇ ಪ.ಪಂಗಡದವರಿಗೆ ಶೇ.3ರಿಂದ ಶೇ.7ಕ್ಕೆ ಏರಿಕೆ ಮಾಡಿರುವುದು ಮತ್ತು ಗುರುತಿಸದೇ ಇರುವ ಅನೇಕ ಸಣ್ಣ ಸಮುದಾಯವನ್ನು ಹೆಕ್ಕಿ ನ್ಯಾಯ ಕೊಟ್ಟಿರುವುದನ್ನು ಜನರು ಗಮನದಲ್ಲಿಟ್ಟುಕೊಂಡಿದ್ದಾರೆ. ಒಕ್ಕಲಿಗ, ಕುಂಬಾರ, ವೀರಶೈವ ಸೇರಿದಂತೆ ನಿಗಮಗಳಿಗೆ ಬೇಡಿಕೆ ಇಟ್ಟಿದ್ದ 19ರಿಂದ 20 ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ನಿಗಮವನ್ನು ಯಡಿಯೂರಪ್ಪ (B.S.Yediyurappa) ಮತ್ತು ಬೊಮ್ಮಾಯಿ ಸರ್ಕಾರ ನೀಡಿದೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ರೇಣುಕಾಚಾರ್ಯಗೆ ಶಾಕ್ – ನೀತಿ ಸಂಹಿತೆ ಉಲ್ಲಂಘನೆ ಕೇಸ್? 

    ಧರ್ಮದ ಆಧಾರದಲ್ಲಿ ಮೀಸಲಾತಿ ಸ್ಪಷ್ಟತೆ ಇರಲಿಲ್ಲ. ಅನ್ಯಾಯವಾಗಬಾರದೆಂದು ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರ ಸರ್ಕಾರ ಮೀಸಲಿಟ್ಟ ಶೇ.10 ಮೀಸಲಾತಿಯಲ್ಲಿ ಈ ನಾಲ್ಕನ್ನು ಸೇರಿಸಲಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಅವರಿಗೂ ಅನುಕೂಲವಾಗುತ್ತದೆ. ವಿರೋಧಿಸುವವರು ಇದನ್ನು ಅರ್ಥಮಾಡಿಕೊಳ್ಳಬೇಕು. ಅವರಿಗೆ ನ್ಯಾಯ ಹೆಚ್ಚು ದೊರಕುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯನವರನ್ನು ಸೋಲಿಸಲು ಯಾವ ಲೀಡರ್‌ಗಳಿಂದಲೂ ಸಾಧ್ಯವಿಲ್ಲ, ಜನರೇ ಸೋಲಿಸಬೇಕು: ಸತೀಶ್ ಜಾರಕಿಹೊಳಿ 

    ಅನಾಥ ಮಕ್ಕಳಿಗೆ ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆಯವರು ವರದಿ ಸಲ್ಲಿಸಿದ್ದಾರೆ. ಅದು ಸಚಿವ ಸಂಪುಟ ತೀರ್ಮಾನದಲ್ಲಿ ಅಂಗೀಕಾರಕ್ಕೆ ಬಂದಿದೆ. ಅದನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದರು. ಇದನ್ನೂ ಓದಿ: ಸ್ಮಶಾನದಲ್ಲಿ ಪೂಜೆ ಮಾಡಿ ಚುನಾವಣಾ ಪ್ರಚಾರ ವಾಹನಕ್ಕೆ ಚಾಲನೆ: ಸತೀಶ್‌ ಜಾರಕಿಹೊಳಿ‌

  • ಆರ್‌ಎಸ್‌ಎಸ್‌ ರಾಷ್ಟ್ರಪ್ರೇಮಿ ಸಂಘಟನೆ ಎಂದು ನೆಹರೂ ಹೊಗಳಿದ್ದರು: ಕೋಟಾ ಶ್ರೀನಿವಾಸ ಪೂಜಾರಿ

    ಆರ್‌ಎಸ್‌ಎಸ್‌ ರಾಷ್ಟ್ರಪ್ರೇಮಿ ಸಂಘಟನೆ ಎಂದು ನೆಹರೂ ಹೊಗಳಿದ್ದರು: ಕೋಟಾ ಶ್ರೀನಿವಾಸ ಪೂಜಾರಿ

    ಉಡುಪಿ: ಕಾಂಗ್ರೆಸ್ ಅನ್ನೇ ಆರಾಧಿಸಿದ್ದ ಜವಾಹರಲಾಲ್ ನೆಹರೂ ಅವರು ಆರ್‌ಎಸ್‌ಎಸ್‌ ಸಂಘಟನೆಯನ್ನು ಹೊಗಳಿದ್ದರು ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರ್‌ಎಸ್‌ಎಸ್‌ ರಾಷ್ಟ್ರಪ್ರೇಮಿ ಸಂಘಟನೆ ಎಂದು ನೆಹರೂ ಅವರು ಬಣ್ಣಿಸಿದ್ದರು. ಅಲ್ಲದೇ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಆರ್‌ಎಸ್‌ಎಸ್‌ಗೆ ಅವಕಾಶ ಕೊಟ್ಟಿದ್ದರು. ಆರ್‌ಎಸ್‌ಎಸ್‌ ಅನ್ನು ಟೀಕಿಸುವ ಕಾಂಗ್ರೆಸ್ ನಾಯಕರು ನೆಹರೂಗಿಂತ ಮೇಲಿನವರಾ ಎಂದು ಸಚಿವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಹೇಗೆ ಬದುಕ್ಬೇಕು, ಹೇಗೆ ಸಾಮಾಜಿಕ ಕಾರ್ಯಗಳನ್ನು ಮಾಡ್ಬೇಕು ಅನ್ನೋದಕ್ಕೆ ಪುನೀತ್ ಮಾದರಿ: ರಾಜಮೌಳಿ

    ಸಂವಿಧಾನ ದಿನಾಚರಣೆ ಬಹಿಷ್ಕರಿಸಿರುವ ಕಾಂಗ್ರೆಸ್ ನಡೆ ಬಗ್ಗೆ ಟೀಕಿಸಿದ ಸಚಿವರು, ಕಾಂಗ್ರೆಸ್ಸಿನವರು ನಮ್ಮನ್ನು ಹೊಗಳಬೇಕು ಎಂದು ಆಸೆ ಪಡೋದಕ್ಕಾಗುತ್ತಾ? ಬಿಜೆಪಿಯನ್ನು ಬೈಯ್ಯೋದೆ ಕಾಂಗ್ರೆಸ್ ಅಜೆಂಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ನಮಗೆ ಭಾವುಕತೆಯಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕುಟುಂಬದಿಂದಲೇ ಪಕ್ಷ, ಕುಟುಂಬಕ್ಕಾಗಿಯೇ ಪಕ್ಷ: ಕಾಂಗ್ರೆಸ್‌ ವಿರುದ್ಧ ಮೋದಿ ವಾಗ್ದಾಳಿ

    ಪರಿಷತ್ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಪಟ್ಟಿ ಸಿದ್ಧಪಡಿಸಿದೆ. ಅಸ್ಪೃಶ್ಯತೆ ತೊಡೆದು ಹಾಕುವ ಸವಾಲು ನಮ್ಮ ಮುಂದೆ ಇದೆ. ಪ್ರತಿಯೊಬ್ಬರನ್ನೂ ಅಸ್ಪೃಶ್ಯತೆ ನಿವಾರಣೆಗೆ ಸಿದ್ಧಪಡಿಸುತ್ತೇವೆ. ಚುನಾವಣೆಯ ಬಳಿಕ ಈ ಕುರಿತು ಸರ್ಕಾರಿ ಕಾರ್ಯಕ್ರಮ ರೂಪಿಸುತ್ತೇವೆ. ಪೇಜಾವರ ಶ್ರೀಗಳನ್ನು ಕೂಡಿಕೊಂಡು ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

  • ಅಸ್ಪೃಶ್ಯತೆ ಆಚರಣೆ ಘಟನೆ ಬೆಳಕಿಗೆ ಬಂದರೆ ನಿರ್ದಾಕ್ಷಿಣ್ಯ ಕ್ರಮ: ಕೋಟಾ ಶ್ರೀನಿವಾಸ ಪೂಜಾರಿ

    ಅಸ್ಪೃಶ್ಯತೆ ಆಚರಣೆ ಘಟನೆ ಬೆಳಕಿಗೆ ಬಂದರೆ ನಿರ್ದಾಕ್ಷಿಣ್ಯ ಕ್ರಮ: ಕೋಟಾ ಶ್ರೀನಿವಾಸ ಪೂಜಾರಿ

    ಮಡಿಕೇರಿ: ರಾಜ್ಯದ ಅಲ್ಲಲ್ಲಿ ಅಸ್ಪೃಶ್ಯತೆ ಆಚರಣೆಯಂತಹ ಘಟನೆಗಳ ಬಗ್ಗೆ ಮಾಹಿತಿ ಇದೆ. ಮುಂದೆ ಇಂತಹ ಪ್ರಕರಣಗಳು ಮತ್ತೆ ಬೆಳಕಿಗೆ ಬಂದರೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಎಚ್ಚರಿಸಿದರು‌.

    ಸೋಮವಾರ ಮಡಿಕೇರಿಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾತಾನಾಡಿದ ಅವರು, ರಾಜ್ಯದ ಹಲವೆಡೆ ಅಸ್ಪೃಶ್ಯತೆ ಆಚರಣೆ ಈ ಹಿಂದಿನಿಂದಲೂ ಅಗುತ್ತಿದೆ. ಅಸ್ಪೃಶ್ಯತೆ ಆಚರಣೆ ಕಂಡು ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ ದೊಡ್ಡ ಆಂದೋಲನ ನಡೆಸಲಾಗುವುದು. ಅದಕ್ಕಾಗಿ ಪೂರ್ವಭಾವಿ ತಯಾರಿ ಮಾಡಲಾಗುತ್ತಿದೆ. ಎಸ್ಸಿ/ಎಸ್ಟಿಗಳ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಮುದಾಯದ ಅಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮೀಸಲಿರುವ ಶೇ. 24ರಷ್ಟು ಅನುದಾನವನ್ನು ಸಂಪೂರ್ಣವಾಗಿ ಬಳಸಲಾಗುವುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: ಕೋಟೆನಾಡಲ್ಲಿ ಅಸ್ಪೃಶ್ಯತೆ, ಕೋಮುವಾದ ವಿರೋಧಿಸಿ 101 ಜನ ಬೌದ್ಧ ಧರ್ಮಕ್ಕೆ ಮತಾಂತರ

    ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಅರ್ಥಿಕ ಮತ್ತು ಸಾಮಾಜಿಕ ಶಕ್ತಿಯನ್ನು ತುಂಬಿಸುವುದು ಸೇರಿದಂತೆ ಅಸ್ಪೃಶ್ಯತೆಯನ್ನು ನಿವಾರಣೆ ಮಾಡುವುದು ಹಾಗೂ ಕಡುಬಡವರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಸಮಾಜ ಕಲ್ಯಾಣ ಇಲಾಖೆಯ ಮೂಲ ಉದ್ದೇಶ. ಕರ್ನಾಟಕ ರಾಜ್ಯದಲ್ಲಿ 1.27 ಕೋಟಿ ಜನ ಪರಿಶಿಷ್ಟ ಜಾತಿ ಸಮುದಾಯದವರಿದ್ದಾರೆ. ಸುಮಾರು 28 ಲಕ್ಷ ಕುಟುಂಬಗಳು ಇವೆ. ಅವುಗಳ ಪೈಕಿ ಕೆಲವರಿಗೆ ಸ್ವಂತ ಮನೆ, ನೆಲೆ ಇಲ್ಲ. ಕೆಲವರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕುಡಿಯುವ ನೀರು, ಶೌಚಾಲಯದ ಸಮಸ್ಯೆ ಕೂಡ ಇದೆ. ಅವುಗಳ ಬಗ್ಗೆ ಸಮೀಕ್ಷೆ ನಡೆಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಕರ್ನಾಟಕವು ಯಶಸ್ಸಿನ ಹೊಸ ಎತ್ತರವನ್ನು ಏರಲಿ: ಮೋದಿ ಶುಭಾಶಯ

    kota srinivas poojary

    ಶೋಷಿತ ಸಮುದಾಯಗಳಿಗೆ ಬೇಕಾಗಿರುವ ಮನೆ, ಕುಡಿಯುವ ನೀರು ಮತ್ತು ವಿದ್ಯಾಭ್ಯಾಸ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಇಲಾಖೆಯಿಂದ ಒದಗಿಸಲಾಗುತ್ತದೆ ಎಂದು ಸಚಿವರು ಹೇಳಿದರು.

  • ಜಿಲ್ಲೆಗೊಂದು ಹೋಟೆಲ್ ತೆರೆದು ಕಡಿಮೆ ದರದಲ್ಲಿ ಮೀನೂಟಕ್ಕೆ ಚಿಂತನೆ

    ಜಿಲ್ಲೆಗೊಂದು ಹೋಟೆಲ್ ತೆರೆದು ಕಡಿಮೆ ದರದಲ್ಲಿ ಮೀನೂಟಕ್ಕೆ ಚಿಂತನೆ

    – 100 ರೂ. ಗೆ ಎಲ್ಲಾ ರೀತಿಯ ಮೀನಿನ ಊಟ

    ಬೆಂಗಳೂರು: ಮೀನುಗಾರಿಕಾ ಸಚಿವರು ಹೊಸ ಯೋಜನೆಯೊಂದನ್ನು ಜಾರಿಗೆ ತರಲು ನಿರ್ಧರಿಸಿದ್ದು, ಜಿಲ್ಲೆಗೊಂದು ಮತ್ಸ್ಯದರ್ಶಿನಿ ಹೋಟೆಲ್ ಆರಂಭಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಿಂತನೆ ನಡೆಸಿದ್ದಾರೆ.

    ಜಿಲ್ಲೆ ಹಾಗೂ ತಾಲೂಕಿಗೊಂದು ಹೋಟೆಲ್ ತೆರೆದು ಕಡಿಮೆ ದರದಲ್ಲಿ ಉತ್ತಮ ಮೀನೂಟ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಮೂಲಕ ಬಡವರಿಗೆ, ಮಧ್ಯಮ ವರ್ಗಕ್ಕೆ ಉತ್ತಮ ಊಟ ನೀಡುವ ಯೋಜನೆ ಜಾರಿಗೆ ತರಲು ತೀರ್ಮಾನ ಮಾಡಲಾಗಿದೆ.

    ಕನಿಷ್ಠ 100 ರೂಪಾಯಿಗೆ ಎಲ್ಲಾ ರೀತಿಯ ಮೀನಿನ ಊಟ ನೀಡುವ ಯೋಜನೆ ಇದಾಗಿದ್ದು, ಸಾಮಾನ್ಯ ಹೋಟೆಲ್ ಗಿಂತ ಕಡಿಮೆ ದರದಲ್ಲಿ ಮೀನಿನ ಊಟ ಯೋಜನೆ ಜಾರಿಗೆ ತರಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಯಾರಿ ನಡೆಸಿದ್ದಾರೆ. ಈ ಬಗ್ಗೆ ಸಚಿವರು ಈಗಾಗಲೇ ಅಧಿಕಾರಿಗಳ ಜೊತೆ ಸಭೆ ಮಾಡಿದ್ದಾರೆ. ಅಲ್ಲದೆ ಸದ್ಯದಲ್ಲೇ ಸರ್ಕಾರದ ಗಮನಕ್ಕೂ ತಂದು ಯೋಜನೆ ಜಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಿರ್ಧರಿಸಿದ್ದಾರೆ.

    ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದಿಂದ ಮತ್ಸ್ಯದರ್ಶಿನಿ ಹೋಟೆಲ್ ಆರಂಭಿಸಲಾಗುತ್ತಿದ್ದು, ಸದ್ಯ ಆರಂಭಿಕವಾಗಿ ಪ್ರತಿ ಜಿಲ್ಲೆಗೊಂದು ಮತ್ಸ್ಯದರ್ಶಿನಿ ಹೋಟೆಲ್ ತೆರೆಯಲಾಗುತ್ತಿದೆ. ಇದರ ಪ್ರಸ್ತಾವನೆಯನ್ನು ತಯಾರಿಸಿ ಮೀನುಗಾರಿಕೆ ಇಲಾಖೆ ಈಗಾಗಲೇ ಆರ್ಥಿಕ ಇಲಾಖೆಗೂ ಕಳುಹಿಸಿದೆ. ಆರ್ಥಿಕ ಇಲಾಖೆ ಒಪ್ಪಿಗೆ ಸಿಕ್ಕ ಕೂಡಲೇ ಮತ್ಸ್ಯದರ್ಶಿನಿ ಹೋಟೆಲ್ ಆರಂಭವಾಗುತ್ತದೆ.

    ಸದ್ಯ 100 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಗೊಂದು ಮತ್ಸ್ಯದರ್ಶಿನಿ ಹೋಟೆಲ್ ಆರಂಭಿಸಲಾಗುತ್ತಿದೆ. ಕೆಎಫ್ ಡಿಸಿ ಮಳಿಗೆಗಳ ಮೂಲಕವೇ ಮತ್ಸ್ಯದರ್ಶಿನಿ ಹೋಟೆಲ್ ಆರಂಭಕ್ಕೆ ನಿರ್ಧಾರ ಮಾಡಲಾಗಿದೆ. ಆ ಮೂಲಕ ಇಡೀ ರಾಜ್ಯದಲ್ಲಿ ಕೆಎಫ್‍ಡಿಸಿ ಮತ್ಸ್ಯದರ್ಶಿನಿಗಳನ್ನು ಒಂದು ಬ್ರಾಂಡ್ ಮಾಡಲು ಮೀನುಗಾರಿಕಾ ಇಲಾಖೆ ನಿರ್ಧಾರ ಮಾಡಿದೆ.

    ಸದ್ಯ ಈ ಇಲಾಖೆಯಡಿ ಬೆರಳೆಣಿಕೆಯಷ್ಟು ಮಾತ್ರ ಮತ್ಸ್ಯದರ್ಶಿನಿ ಹೋಟೆಲ್ ಗಳು ನಡೆಯುತ್ತಿವೆ. ಹೊರಗಿನ ಹೋಟೆಲ್ ಗಳಲ್ಲಿ ಒಂದು ಮೀನೂಟಕ್ಕೆ 400 ರೂ ಯಿಂದ 600 ರೂ ಕೊಡಬೇಕು. ಕೆಲವು ವಿಶೇಷ ಮೀನುಗಳು ಸೇರಿದರೆ ಊಟದ ದರ 1000 ರೂ. ಆಗಲಿದೆ. ಹೀಗಾಗಿ ಸರ್ಕಾರ ರಿಯಾಯ್ತಿ ದರದಲ್ಲಿ ರಾಜ್ಯದ ಜನರಿಗೆ ಮೀನೂಟ ಬಡಿಸಲು ನಿರ್ಧಾರ ಮಾಡಿದೆ.

  • ಸಿದ್ದರಾಮಯ್ಯ ಕನಸು ಕಾಣುವುದನ್ನು ಬಿಡಲಿ- ಕೋಟ ಸಲಹೆ

    ಸಿದ್ದರಾಮಯ್ಯ ಕನಸು ಕಾಣುವುದನ್ನು ಬಿಡಲಿ- ಕೋಟ ಸಲಹೆ

    ಉಡುಪಿ: ರಾಜ್ಯ ಬಿಜೆಪಿ ಸರ್ಕಾರ ಬೀಳುತ್ತದೆ. ತಾವು ಮತ್ತೆ ಸಿಎಂ ಆಗಬಹುದು ಎಂದು ಕನಸು ಕಾಣುವುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಡಬೇಕು. ಇಷ್ಟು ಹೇಳಿದ್ದೇನೆ, ಇನ್ನು ಅವರ ವಿವೇಚನೆ ಬಿಡುತ್ತೇನೆ ಎಂದು ಮೀನುಗಾರಿಕೆ, ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ತರುಗೇಟು ನೀಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಬಿಜೆಪಿ ಮೂರುವರೆ ವರ್ಷಗಳ ಸಮೃದ್ಧವಾದ ಆಡಳಿತ ಕೊಡುತ್ತೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲುತ್ತೆ. ಅದರ ನೇತ್ರತ್ವವನ್ನು ನಳಿನ್ ಕುಮಾರ್ ಕಟೀಲ್ ಅವರೇ ವಹಿಸುತ್ತಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾಂಗ್ರೆಸ್, ಎಚ್.ಡಿ.ದೇವೇಗೌಡರ ಜೆಡಿಎಸ್ ಪಕ್ಷಗಳು ಸಂಪೂರ್ಣ ಸೋಲುತ್ತೆ ಎಂದು ಸಚಿವರು ಭವಿಷ್ಯ ಹೇಳಿದರು.

    ಶಾಸಕ ಜಿ.ಟಿ ದೇವೆಗೌಡ ಅವರಿಗೆ ಬಿಜೆಪಿಯ ಒಲವಿನ ಕುರಿತು ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಯಿಂದ ಸಮೃದ್ಧ, ವ್ಯವಸ್ಥಿತ ಆಡಳಿತ ಸಿಗುತ್ತೆ ಎಂಬುದಾಗಿ ಜಿ.ಟಿ.ದೇವೆಗೌಡ ಮಾತ್ರವಲ್ಲದೆ ಅನೇಕರಿಗೆ ಈ ಭಾವನೆ ಬಂದಿದೆ. ಹಲವು ಹಿರಿಯರು ಬಿಜೆಪಿ ಕಡೆ ವಾಲುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಶುಭದಿನ ಆಗುವ ವಾತಾವರಣ ಹೆಚ್ಚಾಗಲಿದೆ ಎಂದರು.

    ಬೆಳಗಾವಿ ಪ್ರವಾಹ ಸಭೆಯಲ್ಲಿ ದುಂದುವೆಚ್ಚ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಟೀ,ತಿಂಡಿ ಕೊಟ್ಟರೆ ಅದು ಬಾರಿ ದೊಡ್ಡ ಅಪರಾಧ ಅಲ್ಲ ಯಾವುದೇ ದುಂದುವೆಚ್ಚ ಆಗಿಲ್ಲ. ಕೇಂದ್ರ ಸಮೀಕ್ಷೆ ಮಾಡಿ ಹೋಗಿದೆ, ಹಣಕ್ಕೆ ತೊಂದರೆ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಅಚ್ಚರಿಯಾಗುವ, ಖುಷಿಯಾಗುವ ಮೊತ್ತ ಮುಂದಿನ ದಿನದಲ್ಲಿ ಹರಿದುಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.