Tag: kortala shiva

  • ‘Devara’ ಚಿತ್ರದ ಅಪ್‌ಡೇಟ್- ಜ್ಯೂ.ಎನ್‌ಟಿಆರ್‌ಗೆ ತಾಯಿಯಾಗಿ ನಟಿಸುತ್ತಾರಾ ಪ್ರಿಯಾಮಣಿ?

    ‘Devara’ ಚಿತ್ರದ ಅಪ್‌ಡೇಟ್- ಜ್ಯೂ.ಎನ್‌ಟಿಆರ್‌ಗೆ ತಾಯಿಯಾಗಿ ನಟಿಸುತ್ತಾರಾ ಪ್ರಿಯಾಮಣಿ?

    ಟಾಲಿವುಡ್ ಬಹುನಿರೀಕ್ಷಿತ ‘ದೇವರ’ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಆರ್‌ಆರ್‌ಆರ್ ಸಕ್ಸಸ್ ನಂತರ ಜ್ಯೂ.ಎನ್‌ಟಿಆರ್ (Jr.ntr) ದೇವರ ಚಿತ್ರದ ಮೂಲಕ ಸೌಂಡ್ ಮಾಡ್ತಿದ್ದಾರೆ. ಈ ಚಿತ್ರದ ಬಗ್ಗೆ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಅಂದು ತಾರಕ್‌ಗೆ ನಾಯಕಿಯಾಗಿದ್ದ ಪ್ರಿಯಾಮಣಿ (Priyamani) ಈಗ ತಾಯಿ ಪಾತ್ರದಲ್ಲಿ ನಟಿಸಲು ಓಕೆ ಎಂದಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.

    ಬಹುಭಾಷಾ ನಟಿಯಾಗಿ ಪ್ರಿಯಾಮಣಿಗೆ (Priyamani) ಇಂದಿಗೂ ಡಿಮ್ಯಾಂಡ್ ಇದೆ. ಸ್ಟಾರ್ ನಟರ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹೀಗಿರುವಾಗ ‘ದೇವರ’ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್-ಪ್ರಿಯಾಮಣಿ ತಾಯಿ ಮತ್ತು ಮಗನಾಗಿ ಕಾಣಿಸಿಕೊಳ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಸಮಂತಾ ಔಟ್‌, ರಶ್ಮಿಕಾ ಮಂದಣ್ಣಗೆ ಸಿಕ್ತು ಬಿಗ್‌ ಚಾನ್ಸ್

    ಕೊರಟಾಲ ಶಿವ-ಜ್ಯೂ.ಎನ್‌ಟಿಆರ್ ಕಾಂಬೋದಲ್ಲಿ ‘ದೇವರ’ (Devara) ಸಿನಿಮಾ ಮೂಡಿ ಬರುತ್ತಿದೆ. ಜ್ಯೂ.ಎನ್‌ಟಿಆರ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಯಂಗ್ ಹೀರೋಗೆ ಜಾನ್ವಿ ಕಪೂರ್ (Janhavi Kapoor) ನಾಯಕಿಯಾಗಿದ್ದಾರೆ. ಪ್ರಿಯಾಮಣಿ ಪಾತ್ರಕ್ಕೆ ಪ್ರಾಮುಖ್ಯತೆ ಇದ್ದು, ಜ್ಯೂ.ಎನ್‌ಟಿಆರ್ ತಾಯಿಯ ಪಾತ್ರ ಎಂದೇ ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ? ಎಂಬುದನ್ನ ಚಿತ್ರತಂಡವೇ ಅಧಿಕೃತವಾಗಿ ತಿಳಿಸಬೇಕಿದೆ.

    ‘ದೇವರ’ ಚಿತ್ರದ ಬಳಿಕ ಪ್ರಶಾಂತ್ ನೀಲ್ (Prashanth Neel) ಜೊತೆ ಜ್ಯೂ.ಎನ್‌ಟಿಆರ್ ಕೈಜೋಡಿಸಿದ್ದಾರೆ. ದೇವರ ಸಿನಿಮಾ ರಿಲೀಸ್ ಬಳಿಕ ಕೆಜಿಎಫ್ ನಿರ್ದೇಶಕನ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • NTR 30: ಜ್ಯೂ.ಎನ್‌ಟಿಆರ್ ಜೊತೆ ಚಿತ್ರೀಕರಣಕ್ಕೆ ಭಾಗಿಯಾದ ಸೈಫ್ ಅಲಿ ಖಾನ್

    NTR 30: ಜ್ಯೂ.ಎನ್‌ಟಿಆರ್ ಜೊತೆ ಚಿತ್ರೀಕರಣಕ್ಕೆ ಭಾಗಿಯಾದ ಸೈಫ್ ಅಲಿ ಖಾನ್

    ‘ಆರ್‌ಆರ್‌ಆರ್’ (RRR) ಸೂಪರ್ ಸ್ಟಾರ್ ಜ್ಯೂ.ಎನ್‌ಟಿಆರ್ ಅವರ ಮುಂದಿನ ಸಿನಿಮಾ ‘ಎನ್‌ಟಿಆರ್ 30’ (NTR 30) ಸೆಟ್‌ಗೆ ಬಾಲಿವುಡ್‌ನ ಸ್ಟಾರ್ ನಟನ ಎಂಟ್ರಿಯಾಗಿದೆ. ತಾರಕ್ ಮುಂದೆ ಅಬ್ಬರಿಸಲು ಸೈಫ್ ಅಲಿ ಖಾನ್ (Saif Ali Khan) ಶೂಟಿಂಗ್‌ಗೆ ಭಾಗಿಯಾಗಿದ್ದಾರೆ.

    ತಾರಕ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಎನ್‌ಟಿಆರ್ 30’ಗೆ ನಾಯಕಿಯಾಗಿ ಜಾನ್ವಿ ಕಪೂರ್ (Janhvi Kapoor)  ನಟಿಸುತ್ತಿದ್ದಾರೆ. ಮೊದಲ ಬಾರಿಗೆ ತೆಲುಗಿನ ಸಿನಿಮಾದಲ್ಲಿ ನಟಿಸಲು ಶ್ರೀದೇವಿ (Sridevi) ಪುತ್ರಿ ಜಾನ್ವಿ ಬಣ್ಣ ಹಚ್ಚುತ್ತಿದ್ದಾರೆ. ಇದನ್ನೂ ಓದಿ:ನಟಿ ಸಮಂತಾ ಭಗವದ್ಗೀತೆ ಪಾಠ ಮಾಡಿದ್ದು ಯಾರಿಗೆ?

    ಜಾನ್ವಿ ಕಪೂರ್ ದಕ್ಷಿಣದತ್ತ ಮುಖ ಮಾಡಿದ ಬೆನ್ನಲ್ಲೇ ಬಾಲಿವುಡ್ ನಟ ಸೈಫ್ ಅಲಿ ಖಾನ್ ಕೂಡ ಎನ್‌ಟಿಆರ್ ಸಿನಿಮಾಗೆ ಎಂಟ್ರಿಯಾಗಿದ್ದಾರೆ. ಚಿತ್ರೀಕರಣಕ್ಕೆ ಭಾಗಿಯಾಗಿದ್ದಾರೆ. ತಾರಕ್- ಸೈಫ್ ಒಟ್ಟಿಗೆ ಕುಳಿತು ಮಾತುಕತೆ ಮಾಡ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್‌ಗೆ ವಿಲನ್ ಆಗಿ ಸೈಫ್ ಅಲಿ ಖಾನ್ (Saif Ali Khan) ನಟಿಸಲಿದ್ದಾರೆ. ಈ ಮೂಲಕ ಸೈಫ್ ಚಿತ್ರದಲ್ಲಿ ಅಬ್ಬರಿಸಲಿದ್ದಾರೆ. ಕೊರಟಾಲ ಶಿವ (Kortala Shiva) ನಿರ್ದೇಶನದ ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್‌ಗೆ ತೆರೆಗೆ ಅಪ್ಪಳಿಸಲಿದೆ.

  • ಹುಟ್ಟುಹಬ್ಬದ ದಿನವೇ ಸಿಹಿಸುದ್ದಿ ಹಂಚಿಕೊಂಡ ಜಾನ್ವಿ ಕಪೂರ್

    ಹುಟ್ಟುಹಬ್ಬದ ದಿನವೇ ಸಿಹಿಸುದ್ದಿ ಹಂಚಿಕೊಂಡ ಜಾನ್ವಿ ಕಪೂರ್

    ಬಾಲಿವುಡ್ (Bollywood) ನಟಿ ಜಾನ್ವಿ ಕಪೂರ್ (Janhavi Kapoor) ತಮ್ಮ ಹುಟ್ಟುಹಬ್ಬದ ದಿನವೇ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ತಾಯಿ ಶ್ರೀದೇವಿ ಅವರ ಹಾದಿಯಲ್ಲೇ ಯುವ ನಟಿ ಜಾನ್ವಿ ಹೆಜ್ಜೆ ಇಡ್ತಿದ್ದಾರೆ. ಟಾಲಿವುಡ್‌ನತ್ತ ಜಾನ್ವಿ ಮುಖ ಮಾಡಿದ್ದಾರೆ.

    `ಧಡಕ್’ ಚಿತ್ರದ ಮೂಲಕ ಬಾಲಿವುಡ್‌ಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದ ನಟಿ ಜಾನ್ವಿ ಕಪೂರ್, ಗುಡ್ ಲಕ್ ಜೆರ‍್ರಿ, ಮಿಲಿ, ಸೇರಿದಂತೆ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ತಾಯಿ ಶ್ರೀದೇವಿ ಅವರು ಯಶಸ್ಸು ಗಳಿಸಿದಂತೆ ಜಾನ್ವಿ ಆ ಸಕ್ಸಸ್ ಸಿಗಲಿಲ್ಲ. ಆದರೂ ಛಲ ಬಿಡದೇ ನಟಿ ಹೆಜ್ಜೆ ಇಡುತ್ತಿದ್ದಾರೆ. ಇದನ್ನೂ ಓದಿ: ಮುರುಗದಾಸ್ ನಿರ್ದೇಶನದ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ

    ಸಾಕಷ್ಟು ಸಮಯದಿಂದ ಜಾನ್ವಿ ಟಾಲಿವುಡ್‌ಗೆ ಬರುತ್ತಾರೆ. ಜ್ಯೂ.ಎನ್‌ಟಿಆರ್‌ಗೆ (Jr.ntr) ನಾಯಕಿಯಾಗುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಚಿತ್ರತಂಡದಿಂದ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೀಗ ಜಾನ್ವಿ ತಮ್ಮ ತೆಲುಗಿನ ಮೊದಲ ಸಿನಿಮಾ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಪ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

     

    View this post on Instagram

     

    A post shared by Janhvi Kapoor (@janhvikapoor)

    ತೆಲುಗಿನ ಸೂಪರ್ ಸ್ಟಾರ್ ತಾರಕ್‌ಗೆ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಲಿದ್ದಾರೆ. ಕೊರಟಾಲ ಶಿವ ನಿರ್ದೇಶನದ NTR 30 ಸಿನಿಮಾದಲ್ಲಿ ನಾಯಕಿಯಾಗಿ ಜಾನ್ವಿ ಕಾಣಿಸಿಕೊಳ್ತಿದ್ದಾರೆ. ತನ್ನ ಹುಟ್ಟುಹಬ್ಬದ ದಿನವೇ ಸಿನಿಮಾದ ಸ್ಪೆಷಲ್ ಪೋಸ್ಟರ್‌ನ ನಟಿ ಶೇರ್ ಮಾಡಿದ್ದಾರೆ. ಸೀರೆ ಧರಿಸಿ ಬೋಲ್ಡ್ ಆಗಿ ಪೋಸ್ ಕೊಡುತ್ತಿರುವ ಜಾನ್ವಿ ಲುಕ್ ಇದೀಗ ಅಭಿಮಾನಿಗಳ ಸೆಳೆಯುತ್ತಿದೆ. ತಾರಕ್- ಜಾನ್ವಿ ಜೋಡಿಯನ್ನ ತೆರೆಯ ಮೇಲೆ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಇನ್ನೂ 26ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟಿ ಜಾನ್ವಿಗೆ ಸೆಲೆಬ್ರಿಟಿ ಸ್ನೇಹಿತರಿಂದ, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.