ಬೆಂಗಳೂರು: ರಾಜ್ಯದಲ್ಲಿ ಹನಿಟ್ರ್ಯಾಪ್ (Honey Trap) ಕಹಾನಿಗಳು ಒಂದೊಂದಾಗಿಯೇ ಬಯಲಾಗುತ್ತಿದ್ದು, ಇದೀಗ 68ರ ವೃದ್ಧನಿಗೆ 25ರ ಚೆಲುವೆ ಹನಿಟ್ರ್ಯಾಪ್ ಮಾಡಿದ್ದು, 2 ಕೋಟಿ ರೂ.ಗೆ ಬೇಡಿಕೆಯಿಟ್ಟಿರುವುದಾಗಿ ಬೆಳಕಿಗೆ ಬಂದಿದೆ.
ಇಬ್ಬರು ಯುವಕರಿಂದ 25ರ ಯುವತಿ 2 ಕೋಟಿ ರೂ.ಗೆ ಡಿಮ್ಯಾಂಡ್ ಮಾಡಿಸಿದ್ದಾಳೆ. 2 ಕೋಟಿ ರೂ. ನೀಡದಿದ್ದರೇ ಖಾಸಗಿ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಅಜಯ್, ಅಭಿ ಎಂಬುವವರ ವಿರುದ್ಧ 68ರ ವೃದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ (Koramangala Police Station) ದೂರು ದಾಖಲಿಸಿದ್ದಾರೆ.ಇದನ್ನೂ ಓದಿ:ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಚಲುವರಾಯಸ್ವಾಮಿ ಪುತ್ರ ಮಂಡ್ಯ ಲೋಕಲ್ ಪಾಲಿಟಿಕ್ಸ್‌ಗೆ ಎಂಟ್ರಿ!
ಕೋರಮಂಗಲದ ಕಾಫಿ ಬಾರ್ ಒಂದರಲ್ಲಿ ಖಾಸಗಿ ವಿಡಿಯೋಗಳನ್ನು ತೋರಿಸಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಖಾಸಗಿ ವಿಡಿಯೋಗಳನ್ನು ಚಿತ್ರೀಕರಣ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬಳಿಕ ಆರೋಪಿಗಳಿಬ್ಬರು 2 ಕೋಟಿ ರೂ.ಗೆ ಡಿಮ್ಯಾಂಡ್ ಮಾಡಿ, 40 ಲಕ್ಷಕ್ಕೆ ಡೀಲ್ ಕುದುರಿಸಿದ್ದರು. 2-3 ದಿನಗಳ ಒಳಗೆ ಹಣ ನೀಡದಿದ್ದರೇ ವಿಡಿಯೋ ಹರಿಬಿಡುವುದಾಗಿ ಹೆದರಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಬೆಂಗಳೂರು: ಪ್ರಿಯತಮೆ (Lover) ಮೀಟ್ ಮಾಡೋಕೆ ಬಂದಿದ್ದವನನ್ನ ಕಿಡ್ನ್ಯಾಪ್ ಮಾಡಿ ಸುಲಿಗೆ ಮಾಡಿ ಸಿನಿಮೀಯ ರೀತಿಯಲ್ಲಿ ತಗಲಾಕ್ಕೊಂಡ ಘಟನೆ ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ (Koramangala Police Station) ವ್ಯಾಪ್ತಿಯಲ್ಲಿ ನಡೆದಿದೆ. ಪ್ರಿಯತಮೆಯೇ ಸುಲಿಗೆ ಹಿಂದಿನ ಕಿಂಗ್‌ಪಿನ್ ಎಂದು ತಿಳಿದು ಪ್ರಿಯಕರ ಬೆಚ್ಚಿಬಿದ್ದಿದ್ದಾನೆ.
ಪ್ರಿಯತಮೆ ಸ್ಕೆಚ್ ಹಾಕಿದ್ದು ಹೇಗೆ?
ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಶಿವ ಮತ್ತು ಮೋನಿಕಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಹೀಗಿರುವಾಗ ಶಿವನಿಗೆ ಕರೆ ಮಾಡಿ ನನ್ನ ಸ್ನೇಹಿತರು ನಿನ್ನ ನೋಡಬೇಕಂತೆ, ನಿನ್ನ ಹತ್ರ ಇರುವ ಚಿನ್ನಾಭರಣ ಹಾಕ್ಕೊಂಡು, ಇನ್ನೋವಾ ಕಾರಿನಲ್ಲಿ ಬಾ ಅಂತಾ ಫೋನ್ ಮಾಡಿದ್ಲು. ಮೋನಿಕಾ ಮಾತು ನಂಬಿದ ಪ್ರಿಯಕರ 60 ಗ್ರಾಂ ಚಿನ್ನಾಭರಣದ ಜೊತೆಗೆ ಇನ್ನೋವಾ ಕಾರಿನಲ್ಲಿ ಬಂದಿದ್ದಾನೆ.
ಈ ವೇಳೆ ಮೋನಿಕಾ ಅಂಡ್ ಗ್ಯಾಂಗ್ ಶಿವನನ್ನ ಕಿಡ್ನ್ಯಾಪ್ ಮಾಡಿ ಮೈಮೇಲಿದ್ದ ಚಿನ್ನಾಭರಣ ದೋಚಿ 10 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದ್ರೆ ಪ್ರಿಯತಮೆ ಶಿವನಿಗೆ 5 ಲಕ್ಷ ರೂ. ಕೊಡೋಕೆ ಒಪ್ಪಿಸಿದ್ದಳು. ಎಟಿಎಂ ಕಾರ್ಡ್ ಬೆಂಗಳೂರಿನ ಮೆಜೆಸ್ಟಿಕ್ ಅಡ್ರೆಸ್‌ಗೆ ಕೋರಿಯರ್ ಮಾಡಿಸಿಕೊಡು ಕೋರಮಂಗಲಕ್ಕೆ ಹಣ ಡ್ರಾ ಮಾಡಿಕೊಳ್ಳೋಕೆ ಬಂದಿದ್ದರು. ಆದ್ರೆ ಕೋರಮಂಗಲದ ಎಟಿಎಂನಲ್ಲಿ ಹಣ ಡ್ರಾ ಮಾಡುವ ವೇಳೆ ಆರೋಪಿಗಳ ಮಧ್ಯೆ ಗಲಾಟೆ ನಡೆದಿದೆ. ಇದೇ ವೇಳೆ ರೌಂಡ್ಸ್‌ನಲ್ಲಿದ್ದ ಪಿಎಸ್‌ಐ ಮಾದೇಶ್ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಕಿಡ್ನ್ಯಾಪ್ ಮತ್ತು ಸುಲಿಗೆ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಿಯತಮೆ ಮೋನಿಕಾಳೇ ಕಿಂಗ್ ಪಿನ್ ಅನ್ನೋದನ್ನು ಕೇಳಿ ಪ್ರಿಯಕರ ಶಿವ ಶಾಕ್ ಆಗಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಆರೋಪಿಗಳಾದ ಮೋನಿಕಾ, ಹರೀಶ್, ಹರಿಕೃಷ್ಣ, ನರೇಶ್, ರಾಜ್ ಕುಮಾರ್, ನರಸಿಂಹ, ಅಂಜನೀಲ್‌ನನ್ನ ಬಂಧಿಸಿದ್ದಾರೆ. ಬಂಧಿತ ಏಳು ಮಂದಿಯೂ ಆಂಧ್ರದ ನೆಲ್ಲೂರು ಮೂಲದವರು ಎಂದು ತಿಳಿಸಿದ್ದಾರೆ.
ಸೌತ್ ಈಸ್ಟ್ ಡಿಸಿಪಿ ಹೇಳಿದ್ದೇನು?
ಇನ್ನೂ ಪ್ರಕರಣದ ಕುರಿತು ಮಾತನಾಡಿದ ಸೌತ್ ಈಸ್ಟ್ ಡಿಸಿಪಿ ಸಾರಾ ಫಾತಿಮಾ, ಪ್ರಕರಣದಲ್ಲಿ ಯುವತಿ ಸೇರಿ 7 ಆರೋಪಿಗಳ ಬಂಧನವಾಗಿದೆ. 7 ಜನ ಆರೋಪಿಗಳಲ್ಲಿ ಇಬ್ಬರ ಮೇಲೆ 5ಕ್ಕೂ ಹೆಚ್ಚು ಪ್ರಕರಣಗಳಿವೆ. ದೂರುದಾರ, ಆರೋಪಿ ಯುವತಿಗೆ 3-4 ವರ್ಷದಿಂದ ಪರಿಚಯದಲ್ಲಿದ್ದ, ನೆಲ್ಲೂರಿನಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದ. ಕೋರಮಂಗಲ ಎಸ್‌ಐ ರಾತ್ರಿ ರೌಂಡ್ಸ್‌ನಲ್ಲಿದ್ದಾ ಗ ಎಟಿಎಂ ಬಳಿ ಆರೋಪಿಗಳ ನಡುವೆ ಗಲಾಟೆ ನಡೆದಿದೆ. 3 ಜನ ಕಿತ್ತಾಡಿಕೊಳ್ಳೋದು ಕಂಡು ಬಂದಾಗ ಅದನ್ನ ಗಮನಿಸಿದ್ದಾರೆ. ಅವರ ಮೇಲೆ ಸಂದೇಹ ಬಂದು ಸ್ಟೇಷನ್‌ಗೆ ಕರೆದುಕೊಂಡು ಬಂದಿದ್ದಾರೆ. ವಿಚಾರಣೆ ಮಾಡಿದಾಗ ಕಿಡ್ನಾಪ್ ಆಗಿರೋದು ಬೆಳಕಿಗೆ ಬಂದಿದೆ. ಹಣ ಡ್ರಾ ಮಾಡ್ತಾ ಇರೋದು ಸುಲಿಗೆ ಹಣ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.
ಆರೋಪಿ ಮೋನಿಕಾ ಅವಳೇ ಶಿವನನ್ನ ಆಂಧ್ರದಿಂದ ಹಿಂದೂಪುರದ ಬಳಿಯ ಪೆನುಕೊಂಡ ಪಾವಗಡ ಹತ್ರ ಕರೆಸಿದ್ದಾಳೆ. ಬಳಿಕ 4 ಆರೋಪಿಗಳು ಕಿಡ್ನ್ಯಾಪ್ ಮಾಡಿ ಪಾವಗಡದ ಒಂದು ಖಾಸಗಿ ಹೋಟೇಲ್‌ನಲ್ಲಿ 3 ದಿನ ಕೂಡಿ ಹಾಕಿದ್ದಾರೆ. ಅವನ ಬಳಿ ಇರುವ ಚಿನ್ನಾಭರಣ ಪಡೆದು ಅಡವಿಟ್ಟಿದ್ದಾರೆ. ಮತ್ತೆ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ದೂರುದಾರ ತನ್ನ ಸ್ನೇಹಿತರಿಂದ ಬ್ಯಾಂಕ್‌ಗೆ 5 ಲಕ್ಷ ಹಾಕಿಸಿಕೊಂಡಿದ್ದಾನೆ. ನಂತರ ಡೆಬಿಟ್ ಕಾರ್ಡ್ ಮನೆಯಲ್ಲಿ ಬಿಟ್ಟು ಬಂದಿದ್ದೇನೆ ಅದನ್ನ ಬೆಂಗಳೂರು ಅಡ್ರೆಸ್‌ಗೆ ಕೋರಿಯರ್ ಮಾಡಿ ಎಂದು ಹೇಳಿದ್ದಾನೆ. ಹಣವನ್ನ ವಿತ್‌ಡ್ರಾ ಮಾಡುವ ವೇಳೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. 5 ಲಕ್ಷ ರೂ. ನೀಡಿರುವುದಾಗಿ ದೂರುದಾರ ಹೇಳಿದ್ದಾನೆ, ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ತಿಳಿದಿದ್ದಾರೆ.
ಬೆಂಗಳೂರು: ಕೋರಮಂಗಲದ ಮಹಿಳೆಯರ ಪಿಜಿಯಲ್ಲಿ (Koramangala Ladies PG) ಯುವತಿ ಕೃತಿ ಕುಮಾರಿ ಹತ್ಯೆ ಪ್ರಕರಣದ ಆರೋಪಿಯನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.
ಜು.23 ರಂದು ನಡೆದಿದ್ದ ಕೃತಿ ಕುಮಾರಿಯ ಹತ್ಯೆ ಕೇಸ್ ಆರೋಪಿ ಅಭಿಷೇಕ್‌ನನ್ನು ಶನಿವಾರ ಮಧ್ಯಪ್ರದೇಶದಲ್ಲಿ (Madhya Pradesh) ಪೊಲೀಸರು ಬಂಧಿಸಿ, ವಿಮಾನದ ಮೂಲಕ ಬೆಂಗಳೂರಿಗೆ ಕರೆತಂದಿದ್ದರು. ಬಳಿಕ ಕೋರ್ಟ್ ಮುಂದೆ ಹಾಜರು ಪಡಿಸಿದ್ದರು. ಈ ವೇಳೆ ವಿಚಾರಣೆ ನಡೆಸಲು ಅವಕಾಶ ಕೋರಿದ್ದರಿಂದ ಕೋರ್ಟ್ 10 ದಿನಗಳ ಕಾಲ ಕಸ್ಟಡಿಗೆ ನೀಡಿ ಆದೇಶಿಸಿತು. ಇದನ್ನೂ ಓದಿ: ಬೆಂಗಳೂರಿನ ಹೋಟೆಲ್, ಪಬ್, ಬಾರ್ & ರೆಸ್ಟೋರೆಂಟ್‌ಗಳಿಗೆ ಹೊಸ ರೂಲ್ಸ್ – ಇಲ್ಲಿದೆ ಡೀಟೆಲ್ಸ್
ಈ ಕುರಿತು ಪ್ರತಿಕ್ರಿಯೆ ನೀಡಿದ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತೀಮಾ, ಕೃತಿ ಕುಮಾರಿ ಕೊಲೆ ಪ್ರಕರಣದಲ್ಲಿ ಮಧ್ಯಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದ್ದೇವೆ. ಈಗಷ್ಟೇ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಯಾವ ಕಾರಣಕ್ಕೆ ಕೊಲೆಯಾಗಿದೆ ಅನ್ನೋದು ತಿಳಿಯಬೇಕಿದೆ. ಆರೋಪಿ ಅಭಿಷೇಕ್ ಎಂಬಿಎ ಓದಿಕೊಂಡು ಬೆಂಗಳೂರಿಗೆ ಬಂದಿದ್ದಾನೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ. ಆರೋಪಿ ತನ್ನ ಸಹೋದರನ ಜೊತೆಗೆ ವಾಸವಿದ್ದ ಅನ್ನೋದು ಗೊತ್ತಾಗಿದೆ. ಆರೋಪಿಯ ವಿಚಾರಣೆಯ ನಂತರವಷ್ಟೇ ಎಲ್ಲಾ ವಿಚಾರಗಳು ತಿಳಿಯಬೇಕಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯದ ಜನರಿಗೆ ಮತ್ತೊಂದು ಶಾಕ್ – ಬಸ್ ಪ್ರಯಾಣ ದರ ಹೆಚ್ಚಿಸಲು KSRTCಯಿಂದ ಪ್ರಸ್ತಾವನೆ ಸಲ್ಲಿಕೆ
ಜುಲೈ 23ರ ರಾತ್ರಿ 11ರ ವೇಳೆಗೆ ಪಿಜಿಗೆ ನುಗ್ಗಿದ್ದ ಅಭಿಷೇಕ್, 3ನೇ ಮಹಡಿಯಲ್ಲಿದ್ದ ಕೃತಿ ಕುಮಾರಿಯ ಕೊಠಡಿ ಬಾಗಿಲು ತೆಗೆಯುತ್ತಿದ್ದಂತೆ ಏಕಾಏಕಿ ಮನಸೋ ಇಚ್ಛೆ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಗುರುತಿಸಿದ್ದರು. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಾಲ ಮಾಡ್ಕೊಂಡು ರಾಜಕಾರಣ ಮಾಡಿದ್ದೇನೆ, ನನ್ನಂಥ ರಾಜಕಾರಣಿ ದೇಶದಲ್ಲೇ ಇಲ್ಲ: ಜಿಟಿಡಿ
ಭೋಪಾಲ್: ಕೋರಮಂಗಲದ ಪಿಜಿಯಲ್ಲಿ (Koramangala) ಜು.23 ರಂದು ನಡೆದಿದ್ದ ಕೃತಿ ಕುಮಾರಿಯ ಹತ್ಯೆ ಆರೋಪಿ ಅಭಿಷೇಕ್‌ನನ್ನು ಮಧ್ಯಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಯುವತಿಯ ಹತ್ಯೆ ಬಳಿಕ ಆರೋಪಿ ಅಭಿಷೇಕ್, ಮಧ್ಯಪ್ರದೇಶಕ್ಕೆ (Madhya Pradesh) ಹೋಗಿ ತಲೆಮರೆಸಿಕೊಂಡಿದ್ದ.
ಜುಲೈ 23ರ ರಾತ್ರಿ 11ರ ವೇಳೆಗೆ ಪಿಜಿಗೆ ನುಗ್ಗಿದ್ದ ಅಭಿಷೇಕ್, 3ನೇ ಮಹಡಿಯಲ್ಲಿದ್ದ ಕೃತಿ ಕುಮಾರಿಯ ಕೊಠಡಿ ಬಾಗಿಲು ತೆಗೆಯುತ್ತಿದ್ದಂತೆ ಏಕಾಏಕಿ ಮನಸೋ ಇಚ್ಛೆ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಗುರುತಿಸಿದ್ದರು. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೃತಿ ಹತ್ಯೆಗೆ ಕಾರಣವೇನು?
ಮಧ್ಯಪ್ರದೇಶದ ಭೋಪಾಲ್ ಮೂಲದ ಕೊಲೆ ಆರೋಪಿ ಅಭಿಷೇಕ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೃತಿ ಕುಮಾರಿ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದ. ಇದೇ ಕಾರಣಕ್ಕೆ ಕೃತಿ ಕುಮಾರಿ ಪಿಜಿಗೆ ಆಗಾಗ ಬಂದು ಹೋಗುತ್ತಿದ್ದ. ಇತ್ತೀಚೆಗೆ ಅಭಿಷೇಕ್ ಮತ್ತು ಸ್ನೇಹಿತೆ ಪ್ರೀತಿಯಲ್ಲಿ ಬಿರುಕು ಮೂಡಿತ್ತು.
ಯಾವುದೇ ಕೆಲಸ ಮಾಡದೆ ಓಡಾಡಿಕೊಂಡಿದ್ದ ಅಭಿಷೇಕ್ ಭೋಪಾಲ್‌ನಿಂದ ಬೆಂಗಳೂರಿಗೆ ಬಂದು ಪ್ರಿಯತಮೆ ಜತೆ ಸುತ್ತಾಡುತ್ತಿದ್ದ. ಎಲ್ಲಾದರೂ ಕೆಲಸಕ್ಕೆ ಸೇರುವಂತೆ ಅಭಿಷೇಕ್‌ಗೆ ಆತನ ಪ್ರಿಯತಮೆ ಬುದ್ದಿ ಹೇಳಿದ್ದಳು. ಪ್ರಿಯತಮೆ ಹೇಳಿದಾಗ ಕೆಲಸಕ್ಕೆ ಸೇರಿದ್ದೇನೆಂದು ಅಭಿಷೇಕ್ ಸುಳ್ಳು ಹೇಳಿದ್ದ, ಈ ವಿಚಾರ ಪ್ರಿಯತಮೆಗೆ ಗೊತ್ತಾಗಿತ್ತು. ಹೀಗಾಗಿ ಆತನ ಪ್ರೇಯಸಿ ಅಭಿಷೇಕ್‌ನನ್ನು ದೂರ ಮಾಡಲು ಪ್ರಯತ್ನಿಸಿದ್ದಳು. ಅಲ್ಲದೇ ಬೇರೆ ಪಿಜಿಗೆ ಆಕೆಯನ್ನು ಸ್ಥಳಾಂತರಿಸಿದ್ದಳು ಇದೇ ಕಾರಣಕ್ಕೆ ಆರೋಪಿ ಕೃತಿಯನ್ನು ಹತ್ಯೆಗೈದಿದ್ದ.
ಬೆಂಗಳೂರು: ಕೋರಮಂಗಲ ಲೇಡಿಸ್ ಪಿಜಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ (Koramangala PG Case) ಪೊಲೀಸ್ ತನಿಖೆ ವೇಳೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೃತಿ ಕುಮಾರಿಯನ್ನ ಎಂಬ ಯುವತಿಯನ್ನ ಕೊಲೆ ಮಾಡಿದ ಹಂತಕ ಕೃತಿ ಕುಮಾರಿ ಸ್ನೇಹಿತೆಯ ಪ್ರಿಯಕರ (Lover) ಅನ್ನೋದು ಬೆಳಕಿಗೆ ಬಂದಿದ್ದು, ಯಾವ ಕಾರಣಕ್ಕೆ ಕೊಲೆ ಮಾಡಿದ ಅನ್ನೋದು ಮಾತ್ರ ಇನ್ನು ನಿಗೂಢವಾಗಿದೆ.
ಮಂಗಳವಾರ ತಡರಾತ್ರಿ ಕೋರಮಂಗಲ ಪಿಜಿಯಲ್ಲಿ ನಡೆದ ಯುವತಿ ಕೃತಿ ಕುಮಾರಿ ಕೊಲೆ ಪ್ರಕರಣದಲ್ಲಿ ಸ್ಪೋಟಕ ತಿರುವು ಸಿಕ್ಕಿದೆ. ಕೃತಿ ಕುಮಾರಿಯನ್ನ ಕೊಲೆ ಮಾಡಿದ ಹಂತಕ ಕೃತಿ ಕುಮಾರಿಯ ರೂಮ್‌ಮೇಟ್ ಕಂ ಸಹೋದ್ಯೋಗಿಯ ಪ್ರಿಯಕರ ಅಭಿಷೇಕ್ ಅನ್ನೋದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಭೂಪಾಲ್ ಮೂಲದ ಅಭಿಷೇಕ್ ಹಾಗೂ ಕೃತಿ ಕುಮಾರಿಯ ಸ್ನೇಹಿತೆ ಇಬ್ಬರು ಕೆಲ ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರಂತೆ. ಇತ್ತ ಬೆಂಗಳೂರಿಗೆ ಕೆಲಸ ಅರಿಸಿ ಅಭಿಷೇಕ್ ಪ್ರಿಯತಮೆ ಕೃತಿ ಕುಮಾರಿ ಕೆಲಸ ಮಾಡ್ತಿದ್ದ ಕಂಪನಿಯಲ್ಲೇ ಕೆಲಸಕ್ಕೆ ಸೇರಿಕೊಂಡಿದ್ದು, ಒಂದೇ ಪಿಜಿಯಲ್ಲಿ ವಾಸವಾಗಿದ್ದರು. ಇದನ್ನೂ ಓದಿ: ವಿಧಾನಸಭೆಯಲ್ಲಿ ಮುಂದುವರಿದ ಬಿಜೆಪಿ, ಜೆಡಿಎಸ್ ಧರಣಿ – ತುಳು ಸಂಭಾಷಣೆ ಸೊಗಡು, ವಿಧೇಯಕಗಳ ಅಂಗೀಕಾರ
ಭೂಪಾಲ್ ನಲ್ಲಿ ಯಾವುದೇ ಕೆಲಸ ಕಾರ್ಯವಿಲ್ಲದೇ ಇದ್ದ ಅಭಿಷೇಕ್ ಆಗಾಗ್ಗೆ ಬೆಂಗಳೂರಿಗೆ ಬರೋದು, ಪ್ರೇಯಸಿಯೊಂದಿಗೆ ಕೆಲ ಸಮಯ ಸುತ್ತಾಡಿಕೊಂಡು ಹೋಗ್ತಿದ್ದನಂತೆ. ಆದ್ರೆ ಕೆಲಸ ಇಲ್ಲದೇ ಓಡಾಡ್ತಿದ್ದರಿಂದ ಅಭಿಷೇಕ್ ಹಾಗೂ ಆತನ ಪ್ರೇಯಸಿ ನಡುವೆ ಜಗಳ ನಡೆಯುತ್ತಿದ್ದು, ಪ್ರೀತಿಯಲ್ಲಿ ಬಿರುಕು ಮೂಡಿತ್ತಂತೆ. ಇದರ ಮಧ್ಯೆ ಕೆಲಸಕ್ಕೆ ಸೇರಿಕೊ ಅಂತ ಅಭಿಷೇಕ್ ಪ್ರೇಯಸಿ ಹೇಳಿದ್ದು, ಕೆಲಸಕ್ಕೆ ಸೇರಿಕೊಂಡಿರುವುದಾಗಿ ಸುಳ್ಳು ಹೇಳಿದ್ದನಂತೆ. ಅಭಿಷೇಕ್ ಸುಳ್ಳು ಹೇಳ್ತಿದ್ದಾನೆ ಅನ್ನೋದು ತಿಳಿದ ನಂತರ ಪ್ರೇಯಸಿ ಜೋರಾಗಿಯೇ ಗಲಾಟೆ ಮಾಡಿದ್ದಾಳೆ. ನಂತರ ಅಭಿಷೇಕ್‌ನನ್ನ ಅವಾಯ್ಡ್ ಮಾಡೋದಕ್ಕೆ ಶುರು ಮಾಡಿದ್ದಾಳೆ. ಇದನ್ನೂ ಓದಿ: Paris Olympics 2024 | ಕ್ರೀಡೆಗಳ ಮಹಾಸಂಗಮ; ಒಲಿಂಪಿಯಾ ಬೆಟ್ಟದಲ್ಲಿ ಹುಟ್ಟಿದ ಕ್ರೀಡೆ ವಿಶ್ವವಿಖ್ಯಾತಿಯಾಗಿದ್ದು ಹೇಗೆ?
ಯಾವಾಗ ಆಭಿಷೇಕ್‌ನನ್ನ ಅವಾಯ್ಡ್ ಮಾಡೋದಕ್ಕೆ ಪ್ರೇಯಸಿ ಆರಂಭಿಸಿದ್ಲೋ ಅಭಿಷೇಕ್ ಆಗಾಗ್ಗೆ ಪಿಜಿ ಬಳಿ ಬಂದ ಗಲಾಟೆ ಮಾಡಿದ್ದ. ಹೀಗಾಗಿ ಕೆಲವು ದಿನಗಳಿಂದೆ ಕೃತಿ ಕುಮಾರಿ ತನ್ನ ಸ್ನೇಹಿತೆಯನ್ನ ಬೇರೊಂದು ಪಿಜಿಗೆ ಶಿಫ್ಟ್ ಮಾಡಿಸಿದ್ದಳಂತೆ. ಪಿಜಿ ಬದಲಾಯಿಸಿದ್ದೆ ಅಭಿಷೇಕ್ ಫೋನ್ ಮಾಡಿದ್ರೆ ಆತನ ಪ್ರೇಯಸಿ ಫೋನ್ ಕಟ್ಮಾಡೋದು ಮಾಡ್ತಿದ್ದು, ಮಂಗಳವಾರ ರಾತ್ರಿ 8 ಗಂಟೆ ಸಮಯದಲ್ಲಿ ಅಭಿಷೇಕ್ ನೇರವಾಗಿ ಪಿಜಿ ಬಳಿ ಬಂದಿದ್ದಾನೆ. ಆ ವೇಳೆ ಸೆಕ್ಯುರಿಟಿ ತಡೆದಿದ್ದಾರೆ. ಬಳಿಕ ಮದ್ಯರಾತ್ರಿ ಮತ್ತೆ ಬಂದ ಅಭಿಷೇಕ್ ನೇರವಾಗಿ 3ನೇ ಪ್ಲೋರ್‌ಗೆ ತೆರಳಿ ರೂಮ್‌ನ ಬಾಗಿಲು ತೆರೆಯುತ್ತಿದಂತೆ ಕೃತಿ ಕುಮಾರಿಯ ಕತ್ತು ಕೊಯ್ತು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.
ಕೃತಿ ಕುಮಾರಿ ಬಾಗಿಲು ತೆರೆಯುತ್ತಿದ್ದಂತೆ ಕತ್ತು ಕೊಯ್ದಿರೋದನ್ನ ಗಮನಿಸಿದಾಗ ಆತನ ಪ್ರೇಯಸಿಯನ್ನೇ ಕೊಲೆ ಮಾಡಲು ಬಂದಿದ್ದ ಅನ್ನೋ ಅನುಮಾನಗಳು ಬರುತ್ತಿವೆ ಎಂದು ಹೇಳಲಾಗಿದೆ. ಸದ್ಯ ಆರೋಪಿಯ ಸುಳಿವು ಪತ್ತೆ ಹಚ್ಚಿರುವ ಕೋರಮಂಗಲ ಪೊಲೀಸರು ಅಭಿಷೇಕ್‌ಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ನೀಟ್ ವ್ಯವಸ್ಥೆ ಬದಲು ಸಿಇಟಿ ಪ್ರವೇಶಾತಿಗೆ ನಿರ್ಣಯ; ಉಭಯ ಸದನಗಳಲ್ಲಿ ತೀರ್ಮಾನ