Tag: koragajja

  • ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ವರನಿಂದ ಅವಮಾನ!

    ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ವರನಿಂದ ಅವಮಾನ!

    ಮಂಗಳೂರು: ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ಅವಮಾನ ಮಾಡಿದ ಘಟನೆ ನಡೆದಿದೆ.

    ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದಲ್ಲಿ ಮದುವೆಯ ದಿನ ಕೊರಗಜ್ಜನ ವೇಷಭೂಷಣ ಧರಿಸಿ ಮದುಮಗ ಕುಣಿದಿದ್ದು, ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಕೂಡ ಆಗುತ್ತಿದೆ.

    ಉಪ್ಪಳದ ಯುವಕನ ಜೊತೆ ಕೊಳ್ನಾಡು ಗ್ರಾಮದ ಅಝೀಝ್ ಎಂಬವರ ಮಗಳ ಮದುವೆ ನಿಶ್ಚಯವಾಗಿತ್ತು. ವಧುವಿನ ಮನೆಗೆ ರಾತ್ರಿ ವರನ ಸ್ನೇಹಿತರ ಬಳಗ ಆಗಮಿಸಿತ್ತು. ಈ ವೇಳೆ ವರ ಕೊರಗಜ್ಜನ ವೇಷ-ಭೂಷಣ ಧರಿಸಿ ಬಂದಿದ್ದ. ತಲೆಗೆ ಅಡಿಕೆ ಹಾಳೆ ಟೋಪಿ, ಮುಖಕ್ಕೆ ಕಪ್ಪು ಬಣ್ಣ ಹಚ್ಚಿಕೊಂಡು ಬಂದಿದ್ದ.

    ವರ ಹಾಗೂ ತಂಡ ವಧುವಿನ ಮನೆ ಮುಂದಿನ ರಸ್ತೆಯಲ್ಲಿ ಹಾಡು ಹೇಳಿ ಕುಣಿಯುತ್ತಾ ಬಂದಿತ್ತು. ಈ ಕೃತ್ಯದಿಂದ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಿದೆ ಎಂದು ಆಕ್ರೋಶ ಹೊರಬಿದ್ದಿದೆ. ಅಲ್ಲದೆ ಕೃತ್ಯವನ್ನು ಖಂಡಿಸಿರುವ ಆಡಿಯೋ ಸಹ ವೈರಲ್ ಆಗಿದೆ. ಇದನ್ನೂ ಓದಿ: ಸಚಿವ ಆರ್. ಅಶೋಕ್‍ಗೆ ಕೊರೊನಾ ಪಾಸಿಟಿವ್

    ಮುಸ್ಲಿಂ ಸಮುದಾಯದ ವ್ಯಕ್ತಿ ಎನ್ನಲಾದವರ ಆಡಿಯೋ ವೈರಲ್ ಆಗಿದ್ದು, ಹುಚ್ಚಾಟ ಪ್ರದರ್ಶಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯ ಮಾಡಲಾಗಿದೆ. ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಅಧಿಕಾರದಲ್ಲಿದ್ದಾಗ ನಿಮ್ಮ ಗಂಡಸ್ತನ ಎಲ್ಲಿ ಹೋಗಿತ್ತು: ರೇಣುಕಾಚಾರ್ಯ

  • ಕೊರಗಜ್ಜನಿಗೆ ನೈವೇದ್ಯ ರೂಪದಲ್ಲಿಟ್ಟ ಮದ್ಯ ಎಗರಿಸಿದ ಭೂಪ

    ಕೊರಗಜ್ಜನಿಗೆ ನೈವೇದ್ಯ ರೂಪದಲ್ಲಿಟ್ಟ ಮದ್ಯ ಎಗರಿಸಿದ ಭೂಪ

    ಮಡಿಕೇರಿ: ಕಳ್ಳರು ಕದಿಯೋದಾದ್ರೆ ಚಿನ್ನಾಭರಣವನ್ನೋ, ನಗದನ್ನೋ ಇಲ್ಲ ಬೆಲೆ ಬಾಳುವ ವಸ್ತುಗಳ ಕದಿಯೋದು ಸರ್ವೆಸಾಮಾನ್ಯ. ಆದರೆ ಇಲ್ಲೊಬ್ಬ ಕೊರಗಜ್ಜ ದೇವರಿಗೆ ಇಟ್ಟ ನೈವೇದ್ಯ ಎರಡು ಪ್ಯಾಕೇಟ್ ಮದ್ಯವನ್ನು ಎಗರಿಸಿದ್ದಾನೆ.

    ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪದ ಕೆದಕಲ್‍ನಲ್ಲಿ ಕೊರಗಜ್ಜನ ದೇವಾಲಯವಿದೆ. ಅಲ್ಲಿಗೆ ಬಂದ ಕಳ್ಳನೊಬ್ಬ ದೇವಾಲಯದ ಹೊರಗೆ ನಿಂತು ದೇವಾಲಯದ ಒಳಗೆ ಎಣ್ಣೆ ಇದೆಯೋ ಇಲ್ಲವೋ ಎಂಬುದನ್ನು ಗಮನಿಸಿದ್ದಾನೆ. ಯಾರು ಇಲ್ಲದಿರುವುದನ್ನು ಮನಗಂಡಿದ್ದೇ ತಡ ದೇವಾಲಯದ ಒಳಗೆ ಬಂದವನೇ ಎರಡು ಪ್ಯಾಕೇಟ್ ಎಣ್ಣೆಯನ್ನು ಎಗರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇದೆಲ್ಲವೂ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಕೊರಗಜ್ಜನ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್ ಫೋಟೋ ವೈರಲ್

    ಇನ್ನೊಂದು ವಿಷಯ ಎಂದರೆ ದೇವರ ಮುಂದೆ ಸಾಕಷ್ಟು ಪ್ಯಾಕೇಟ್ ಮದ್ಯ ಇದ್ದರು ಆತ ಎಲ್ಲವನ್ನು ತೆಗೆದುಕೊಂಡು ಹೋಗಿಲ್ಲ. ಬದಲಾಗಿ ತನಗೆ ಅಗತ್ಯವಿದ್ದಷ್ಟು ಎರಡು ಪ್ಯಾಕೇಟ್ ಗಳನ್ನು ಮಾತ್ರ ಕೊಂಡೊಯ್ದು ತನ್ನ ಅಗತ್ಯವನ್ನು ಪೂರೈಸಿಕೊಂಡಿದ್ದಾನೆ. ಎಣ್ಣೆ ಎಗರಿಸಿರುವುದು ಗಮನಕ್ಕೆ ಬಂದ ಕೊರಗಜ್ಜ ದೇವರ ಅರ್ಚಕ ಎಣ್ಣೆ ಕದ್ದವನಿಗೆ ಶಿಕ್ಷೆ ಕೊಡುವಂತೆ ಹರಕೆ ಕಟ್ಟಿದ್ದಾರೆ. ಇದಾದ ಬಳಿಕ ಎಣ್ಣೆ ಕದ್ದವನ ಆರೋಗ್ಯದಲ್ಲಿ ವ್ಯತ್ಯಯವಾಗಿ ಬಳಿಕ ದೇವರಿಗೆ ತಪ್ಪು ಕಾಣಿಕೆ ನೀಡಿದ ಪ್ರಸಂಗ ಕೂಡ ನಡೆದಿದೆ. ಇದನ್ನೂ ಓದಿ: ಇಷ್ಟಾರ್ಥ ನೆರವೇರಿಸಿದ ಕೊರಗಜ್ಜನಿಗೆ ಹರಕೆ ಸಲ್ಲಿಸಿದ ಕ್ರೇಜಿ ಕ್ವೀನ್ ದಂಪತಿ

    ದಕ್ಷಿಣ ಕನ್ನಡ, ಕೊಡಗು ಭಾಗದಲ್ಲಿ ಕೊರಗಜ್ಜನ ಮಹಿಮೆ ಅಥವಾ ಪವಾಡ ಹೆಚ್ಚಿದ್ದು, ತಮ್ಮ ಇಷ್ಟಾರ್ಥಗಳು ಈಡೇರಬೇಕು ಎಂದರೆ ಮದ್ಯ, ಚಕ್ಕುಲಿ ಮತ್ತು ಒಂದು ಕಟ್ಟು ಬೀಡಿಯನ್ನು ಕೊರಗಜ್ಜನಿಗೆ ಹರಕೆಯಾಗಿ ಸಲ್ಲಿಸುವುದು ವಾಡಿಕೆಯಾಗಿದೆ.

  • ಇಷ್ಟಾರ್ಥ ನೆರವೇರಿಸಿದ ಕೊರಗಜ್ಜನಿಗೆ ಹರಕೆ ಸಲ್ಲಿಸಿದ ಕ್ರೇಜಿ ಕ್ವೀನ್ ದಂಪತಿ

    ಇಷ್ಟಾರ್ಥ ನೆರವೇರಿಸಿದ ಕೊರಗಜ್ಜನಿಗೆ ಹರಕೆ ಸಲ್ಲಿಸಿದ ಕ್ರೇಜಿ ಕ್ವೀನ್ ದಂಪತಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಣಿಕ ದೈವಗಳಲ್ಲಿ ಒಂದಾದ ಕೊರಗಜ್ಜನನ್ನು ಜನಸಾಮಾನ್ಯರು ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ನಂಬುತ್ತಾರೆ. ತಮ್ಮ ಇಷ್ಟಾರ್ಥ ನೆರವೇರಿಸಿದ ಬಳಿಕ ಪುಣ್ಯ ಸ್ಥಳಕ್ಕೆ ಬಂದು ಅಜ್ಜನಿಗೆ ಹರಕೆಗಳನ್ನು ಸಲ್ಲಿಸುತ್ತಾರೆ. ಅಂತೆಯೇ ಇದೀಗ ಸ್ಯಾಂಡಲ್‍ವುಡ್ ನಿರ್ದೇಶಕ ಪ್ರೇಮ್ ಹಾಗೂ ಪತ್ನಿ ರಕ್ಷಿತಾ ಪ್ರೇಮ್ ಕೂಡ ಅಜ್ಜನಿಗೆ ಹರಕೆ ಸಲ್ಲಿಸಿದ್ದಾರೆ.

    ಹೌದು. ತಮ್ಮ ಇಷ್ಟಾರ್ಥ ನೆರವೇರಿಸಿದ ಅಜ್ಜನ ಸನ್ನಿಧಿಗೆ ಬಂದು ದಂಪತಿ ಆಶೀರ್ವಾದ ಪಡೆದಿದ್ದಾರೆ. ಅಲ್ಲದೆ ತಮ್ಮ ಕೋರಿಕೆಯನ್ನು ನೆರವೇರಿಸಿದ ಅಜ್ಜನಿಗೆ ಹರಕೆಯನ್ನು ನೀಡಿದ್ದಾರೆ. ಇದನ್ನೂ ಓದಿ: ದೇವಿ ವೇಷದಲ್ಲಿ ಕಾಣಿಸಿಕೊಂಡ ಸಂಜನಾ

    ಪ್ರೇಮ್, ರಕ್ಷಿತಾ ದಂಪತಿ ಬುಧವಾರ ಮಂಗಳೂರು ಸಮೀಪದ ಕುತ್ತಾರು ಕೊರಗಜ್ಜ ದೈವದ ಆದಿಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ಅಲ್ಲದೆ ತಾವು ಅಂದುಕೊಂಡಿದ್ದನ್ನು ನೆರವೇರಿಸಿದ ಅಜ್ಜನಿಗೆ ಹರಕೆಯ ರೂಪವಾಗಿ ಬೆಳ್ಳಿಯ ದೀಪ ಹಾಗೂ ಗಂಟೆಯನ್ನು ಅರ್ಪಿಸಿದ್ದಾರೆ.

    ಇದಕ್ಕೂ ಮೊದಲು ಪೊಳಲಿ ರಾಜರಾಜೇಶ್ವರಿ ಮತ್ತು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಗಳಿಗೂ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ನಂತರ ಕೊರಗಜ್ಜನ ಸನ್ನಿಧಿಗೆ ತೆರಳಿ ತಮ್ಮ ಹರಕೆ ಸಲ್ಲಿಸಿದ್ದಾರೆ. ಬಳಿಕ ಬೀಚ್ ಗೆ ತೆರಳಿ ಎಂಜಾಯ್ ಮಾಡಿದ್ದಾರೆ.

    ಸೆಲೆಬ್ರಿಟಿ ದಂಪತಿಗೆ ನಟ ಕಿಶೋರ್ ಡಿ.ಕೆ, ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ಮಿಂಚಿದ್ದ ಕಲಾವಿದರಾದ ಧೀರಜ್ ನೀರುಮಾರ್ಗ, ಸೂರಜ್ ಪಾಂಡೇಶ್ವರ, ಬೆಂಗಳೂರಿನ ಖ್ಯಾತ ಕೊರಿಯೋಗ್ರಾಫರ್ ರಾಹುಲ್ ಸಾಥ್ ನೀಡಿದರು.

  • ಕೊರಗಜ್ಜನ ಆರಾಧನೆಯಲ್ಲೇ ಬದುಕು ಕಟ್ಟಿಕೊಂಡ ಖಾಸಿಂ

    ಕೊರಗಜ್ಜನ ಆರಾಧನೆಯಲ್ಲೇ ಬದುಕು ಕಟ್ಟಿಕೊಂಡ ಖಾಸಿಂ

    – ಹಲವು ಬಿಕ್ಕಟ್ಟಿನಿಂದ ಪಾರು

    ಮಂಗಳೂರು: ಸ್ವಾಮಿ ಕೊರಗಜ್ಜ ತುಳುನಾಡಿನ ಆರಾಧ್ಯ ಹಾಗೂ ಕಾರಣಿಕ ದೈವವೆಂದೇ ಸುಪ್ರಸಿದ್ಧ. ಕೊರಗಜ್ಜ ಎಲ್ಲಾ ಜಾತಿ ಧರ್ಮದವರಿಂದಲೂ ಆರಾಧನೆಗೊಳ್ಳುತ್ತಿದ್ದಾರೆ ಅನ್ನೋದು ಮತ್ತೆ ಸಾಬೀತಾಗಿದೆ. ಮುಸ್ಲಿಂ ಧರ್ಮದ ಹಿರಿಯರೊಬ್ಬರಿಂದ ಆರಾಧನೆಗೊಳ್ಳುತ್ತಿರೋದು ಇದೀಗ ಕೊರಗಜ್ಜ ಎಲ್ಲೆಡೆ ಇದ್ದಾರೆ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.

    ಮಂಗಳೂರಿನ ಹೊರವಲಯದ ಮೂಲ್ಕಿಯ ಬಳ್ಕುಂಜೆ ಗ್ರಾಮದ ಕವತ್ತಾರು ಎಂಬಲ್ಲಿ ಸುಮಾರು 19 ವರ್ಷಗಳಿಂದ 65ರ ಹರೆಯದ ಪಿ.ಖಾಸಿಂ ಸಾಹೇಬ್ ಎಂಬವರು ಕೊರಗಜ್ಜ ಹಾಗೂ ಪರಿವಾರ ದೈವಗಳನ್ನು ಸದ್ದಿಲ್ಲದೆ ಪೂಜಿಸಿಕೊಂಡು ಬರುತ್ತಿದ್ದಾರೆ. ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ಖಾಸಿಂ ತಮ್ಮ 30ರ ಹರೆಯದಲ್ಲಿ ಗರಗಸ ಹಿಡಿದು ಮರಗಳನ್ನು ಸೀಳುವ ಕೆಲಸಕ್ಕೆಂದು ಕರ್ನಾಟಕದ ಸುಳ್ಯ, ಬಳ್ಕುಂಜೆ ಬಳಿಕ ಕುಟುಂಬ ಸಹಿತ ಮುಲ್ಕಿಯ ಕವತ್ತಾರಿಗೆ ಬಂದು ನೆಲೆ ನಿಂತರು.

    35 ವರ್ಷಗಳ ಹಿಂದೆ ಸರಕಾರಿ ಜಾಗದಲ್ಲಿ ಜೋಪಡಿ ಕಟ್ಟಿಕೊಂಡು ಪತ್ನಿ ಹಾಗೂ ಐವರು ಮಕ್ಕಳ ಜೊತೆ ಸಂಸಾರ ಆರಂಭಿಸಿದ್ದರು. ಸ್ವಲ್ಪ ಸಮಯದ ನಂತರ ಇವರ ಕುಟುಂಬದಲ್ಲಿ ಸಮಸ್ಯೆಗಳು ಎದುರಾದವು. ಮಗ ತೀವ್ರ ಅನಾರೋಗ್ಯಕ್ಕೊಳಗಾದ, ಹೆಣ್ಮಕ್ಕಳಿಗೆ ಮದುವೆ ಕೂಡಿ ಬರುತ್ತಿರಲಿಲ್ಲ, ಇವರ ಕಾಲು ಊನವಾಗಿ ನಡೆಯದ ಪರಿಸ್ಥಿತಿ ಬಂತು. ಕೇರಳಕ್ಕೆ ಹೋಗಿ ಸಮಸ್ಯೆ ಹೇಳಿದಾಗ ಜಾಗದಲ್ಲಿ ಸಮಸ್ಯೆ ಇದೆ ಎಂದು ಗೊತ್ತಾಯಿತು. ಇದನ್ನೂ ಓದಿ: ಕಾಮಿಡಿ ಕಿಲಾಡಿ ಗೆಲ್ಲಲು ಕೊರಗಜ್ಜ ದೈವದ ಆಶೀರ್ವಾದ: ರಾಕೇಶ್ ಪೂಜಾರಿ

    ಇಲ್ಲಿಗೆ ಬಂದಾಗ ಅದು ಕೊರಗಜ್ಜನ ನೆಲೆ. ಒಂದೋ ಕೊರಗಜ್ಜನನ್ನು ನಂಬಬೇಕು, ಇಲ್ಲವೇ ಜಾಗ ಖಾಲಿ ಮಾಡಬೇಕೆಂದು ದರ್ಶನ ಪಾತ್ರಿ ಹೇಳಿದ್ದರು. ಬೇರೆ ದಾರಿ ಇಲ್ಲದೆ ಕೊರಗಜ್ಜನನ್ನು ನಂಬಲು ಆರಂಭಿಸಿದೆ ಎಂದು ಖಾಸಿಂ ಹೇಳುತ್ತಾರೆ. ದೈವಗಳಿಗೆ ಗುಡಿ ನಿರ್ಮಿಸಿ ಪ್ರತಿದಿನ ಪೂಜೆ ಮಾಡುತ್ತಾರೆ. ಸಮಸ್ಯೆ ಹೇಳಿಕೊಂಡು ಬರುವವರಿಗೆ ಕೊರಗಜ್ಜನ ಮಾರ್ಗದರ್ಶನದಂತೆ ಕರಿಗಂಧ ನೀಡುತ್ತಾರೆ.

    ಬಪ್ಪನಾಡು ಕ್ಷೇತ್ರದ ಉಳ್ಳಾಲ್ತಿ, ಕೊರತಿ, ಗುಳಿಗ ಹಾಗೂ ಕೊರಗಜ್ಜನನ್ನು ಆರಾಧಿಸಲಾಗುತ್ತದೆ. ನಿತ್ಯ ದೀಪ ಸೇವೆ, ಸಂಕ್ರಾಂತಿಯಂದು ಸಲ್ಲಿಸುವ ಪೂಜೆ, 2-3 ವರ್ಷಗಳಿಗೊಮ್ಮೆ ಅನುಕೂಲಕ್ಕೆ ತಕ್ಕ ಹಾಗೆ ಕೋಲ, ಹರಕೆ ರೂಪದ ಪೂಜೆ ಸಲ್ಲಿಸಲಾಗುತ್ತದೆ. ಯಾವುದೇ ಧರ್ಮ ಭೇದವಿಲ್ಲದೆ ಭಕ್ತರು ಆಗಮಿಸಿ ಹರಕೆ ಸಲ್ಲಿಸುತ್ತಾರೆ.

  • ದೈವ ಸ್ಥಳಗಳನ್ನು ಅಪವಿತ್ರಗೊಳಿಸಿದ್ದ ಓರ್ವ ರಕ್ತಕಾರಿ ಸಾವು – ಇನ್ನಿಬ್ಬರು ದೈವಗಳ ಮುಂದೆ ಶರಣು

    ದೈವ ಸ್ಥಳಗಳನ್ನು ಅಪವಿತ್ರಗೊಳಿಸಿದ್ದ ಓರ್ವ ರಕ್ತಕಾರಿ ಸಾವು – ಇನ್ನಿಬ್ಬರು ದೈವಗಳ ಮುಂದೆ ಶರಣು

    ಮಂಗಳೂರು: ತುಳುನಾಡ ದೈವಸ್ಥಾನಗಳು ಕಾರಣಿಕ ಶಕ್ತಿಯನ್ನು ಹೊಂದಿದೆ ಎನ್ನುವುದು ಎಲ್ಲರಿಗೂ ತಿಳಿದಿರೋ ವಿಚಾರ. ಇಂತಹ ದೈವಸ್ಥಾನದ ಮುಂದೆ ಎಂಥವನೂ ಕೇಡು ಬಗೆಯಲು ಮುಂದಾಗೋದಿಲ್ಲ. ಆದರೆ ಮಂಗಳೂರಿನಲ್ಲಿ ದೈವಸ್ಥಾನಗಳಿಗೆ ಅಪಚಾರ ಮಾಡಿದ ವ್ಯಕ್ತಿಯೊಬ್ಬ ರಕ್ತಕಾರಿ ಸಾವನ್ನಪ್ಪಿದ್ದಾನೆ. ಕೃತ್ಯಕ್ಕೆ ಸಹಕರಿಸಿದ ಇನ್ನಿಬ್ಬರು ದೈವಗಳ ಮುಂದೆ ಶರಣಾದ ಘಟನೆ ಇದೀಗ ಎಲ್ಲರನ್ನು ಬೆಚ್ಚಿ ಬೀಳಿಸಿದೆ.

    ಕರಾವಳಿ ಜಿಲ್ಲೆ ಭೂತರಾಧನೆಯ ತವರು ನೆಲ. ಇಲ್ಲಿನ ಜನ ದೈವಗಳ ಆರಾಧನೆಯನ್ನು ಮಾತ್ರ ಭಯ ಭಕ್ತಿಯಿಂದ ಮಾಡುತ್ತಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮಂಗಳೂರು ನಗರ ಭಾಗದಲ್ಲೇ ಕೆಲ ಸಮಯ ಹಿಂದೆ ದುಷ್ಕರ್ಮಿಗಳು ದೈವಸ್ಥಾನಕ್ಕೆ ಅಪಚಾರ ಎಸಗುತ್ತಿದ್ದರು. ದೈವಸ್ಥಾನಗಳ ಕಾಣಿಕೆ ಹುಂಡಿಗೆ ಕಾಂಡೋಮ್, ಅಶ್ಲೀಲ ಬರಹಗಳ ಚೀಟಿ ಹಾಕಿ ಅಪವಿತ್ರಗೊಳಿಸುತ್ತಿದ್ದರು. ಆದರೆ ಈ ರೀತಿ ದುಷ್ಕೃತ್ಯ ಎಸಗಿದ ತಂಡ ಇದೀಗ ಸಂಕಷ್ಟಕ್ಕೆ ಒಳಗಾಗಿ ದೈವಗಳಿಗೆ ಶರಣಾಗಿದ್ದಾರೆ. ತಂಡದ ಓರ್ವ ವ್ಯಕ್ತಿ ರಕ್ತಕಾರಿ ಸಾವನ್ನಪ್ಪಿದ ಬಳಿಕ ದೈವಗಳಿಗೆ ತಪ್ಪು ಕಾಣಿಕೆ ಹಾಕಲು ಬಂದ ಇನ್ನಿಬ್ಬರು ಪೊಲೀಸ್ ಬಲೆಗೆ ಬಿದ್ದಿದ್ದಾರೆ.

    ಬಂಧನಕ್ಕೆ ಒಳಗಾಗಿರುವ ಅಬ್ದುಲ್ ರಹೀಂ ಮತ್ತು ಅಬ್ದುಲ್ ತೌಫಿಕ್ ಎಂಬ ಇಬ್ಬರು ಮಂಗಳೂರು ಹೊರ ವಲಯದ ಜೋಕಟ್ಟೆ ನಿವಾಸಿಗಳು. ಇವರಿಬ್ಬರು ಹಾಗೂ ಇವರ ಸ್ನೇಹಿತ ನವಾಝ್ ಸೇರಿ ಮಂಗಳೂರಿನ ದೈವಸ್ಥಾನಗಳ ಕಾಣಿಕೆ ಹುಂಡಿಗೆ ಇದೇ ರೀತಿ ಅಪಚಾರ ಎಸಗುತ್ತಿದ್ದರು. ಈ ಬಗ್ಗೆ ಮಂಗಳೂರಿನ ಉಳ್ಳಾಲ, ಪಾಂಡೇಶ್ವರ್, ಕದ್ರಿ ಠಾಣೆಯಲ್ಲಿ ಒಟ್ಟು ನಾಲ್ಕು ಪ್ರಕರಣ ದಾಖಲಾಗಿತ್ತು. ಆದರೆ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿಗಳ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಇವರು ಮಾಡಿದ ತಪ್ಪಿಗೆ ಇದೀಗ ದೈವಗಳೇ ಶಿಕ್ಷೆಯನ್ನು ನೀಡಿದೆ.

    ನವಾಝ್ ತನ್ನನ್ನು ತಾನೂ ಮಂತ್ರವಾದಿ ಎಂಬಂತೆ ಬಿಂಬಿಸಿಕೊಂಡಿದ್ದ. ಆದರೆ ಈ ಕೃತ್ಯ ಎಸಗಿದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದ. ರಕ್ತವಾಂತಿ, ಭೇದಿಯಿಂದ ಕಂಗೆಟ್ಟಿದ್ದ. ಈ ಸಂದರ್ಭ ತಾನು ಕಾರಣಿಕ ದೈವ ಕೊರಗಜ್ಜನ ಶಾಪಕ್ಕೆ ಗುರಿಯಾಗಿರುವ ಬಗ್ಗೆ ಇವರಲ್ಲಿ ಹೇಳಿಕೊಂಡಿದ್ದ. ಇದಾದ ಕೆಲ ದಿನಗಳ ಹಿಂದಷ್ಟೇ ರಕ್ತ ಕಾರಿ ಸತ್ತಿದ್ದ. ನವಾಝ್ ಸಾವನ್ನಪ್ಪಿದ ಬಳಿಕ ತೌಫಿಕ್‍ಗೂ ಇದೇ ರೀತಿ ಅನಾರೋಗ್ಯ ಕಾಡಿತ್ತು. ಇದರಿಂದ ಕಂಗೆಟ್ಟ ತೌಫಿಕ್ ಮತ್ತು ರಹೀಂ ಚಾಮುಂಡಿ ದೈವದಲ್ಲಿ ಪ್ರಶ್ನೆ ಕೇಳಿದ್ದರು. ಈ ಸಂದರ್ಭ ಎಮ್ಮೆಕೆರೆ ಕೋಟೆದ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಹೋಗುವಂತೆ ತಿಳಿಸಲಾಗಿತ್ತು. ಅದರಂತೆ ತಾವು ಕೃತ್ಯ ಎಸಗಿದ್ದ ಕೋಟೆದ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಬಂದು ಕೊರಗಜ್ಜನ ಮುಂದೆಯೇ ತಪ್ಪು ಕಾಣಿಕೆ ಹಾಕಲು ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

    ಸದ್ಯ ಪಾಂಡೇಶ್ವರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನವಾಝ್ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದ ಎಂಬುದನ್ನು ಇಬ್ಬರು ಒಪ್ಪಿಕೊಂಡಿದ್ದಾರೆ. ಸದ್ಯ ಕಾರಣಿಕ ಮೆರೆದಿರುವ ದೈವಗಳ ಬಗ್ಗೆ ಜನ ಕೊಂಡಾಡುತ್ತಿದ್ದಾರೆ.

  • ಕೊರಗಜ್ಜನ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್ ಫೋಟೋ ವೈರಲ್

    ಕೊರಗಜ್ಜನ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್ ಫೋಟೋ ವೈರಲ್

    ಮಂಗಳೂರು: ತುಳುನಾಡಿನ ಅತ್ಯಂತ ಕಾರ್ಣಿಕ ಹಾಗೂ ಪ್ರಸಿದ್ಧ ದೈವಗಳಲ್ಲಿ ಒಂದಾದ ಕೊರಗಜ್ಜನ ದರ್ಶನವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಡೆದಿದ್ದಾರೆ.

    ಕೆಲ ತಿಂಗಳ ಹಿಂದೆ ಮಂಗಳೂರಿಗೆ ಭೇಟಿ ಮಾಡಿದ್ದ ಡಿ.ಬಾಸ್, ಕೊರಗಜ್ಜನ ಗುಡಿಗೆ ತೆರಳಿ ಆಶೀರ್ವಾದ ಪಡೆದುಕೊಂಡಿದ್ದಾರೆ. ದೇವರ ಮುಂದೆ ಕೈ ಮುಗಿಯುತ್ತಾ ನಿಂತಿರುವ ದರ್ಶನ್ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಮಹಾಮಾರಿ ಕೊರೊನಾ ವೈರಸ್ ದೇಶಕ್ಕೆ ಒಕ್ಕರಿಸಿದ ಬಳಿಕ ಅದರ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಲಾಕ್‍ಡೌನ್ ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್ ಗಳನ್ನು ಕೂಡ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ದರ್ಶನ್ ಅವರು ಸಾಕು ಪ್ರಾಣಿಗಳ ಜೊತೆ ಕಾಲ ಕಳೆದಿದ್ದಾರೆ. ಇದೇ ವೇಳೆ ಸ್ವಲ್ಪ ಬಿಡುವು ಮಾಡಿಕೊಂಡು ಕ್ಷೇತ್ರ ಭೇಟಿ ಮಾಡಿದ್ದರು.

    ಹೀಗೆ ಕ್ಷೇತ್ರ ಭೇಟಿಯಲ್ಲಿದ್ದ ಒಡೆಯ ತನ್ನ ಸ್ನೇಹಿತರೊಂದಿಗೆ ಮಂಗಳೂರಿಗೆ ಕೂಡ ಭೇಟಿ ಕೊಟ್ಟರು. ಮೊದಲೇ ತಮ್ಮ ಸ್ನೇಹಿತರ ಮೂಲಕ ಕೊರಗಜ್ಜನ ಪವಾಡ ಅರಿತಿದ್ದ ಡಿಬಾಸ್, ಇದೇ ಸಂದರ್ಭದಲ್ಲಿ ಕೊರಗಜ್ಜನ ಕ್ಷೇತ್ರಕ್ಕೆ ತೆರಳಿ ಅಜ್ಜನ ಮುಂದೆ ತಮ್ಮ ಕೋರಿಕೆಯನ್ನು ಇರಿಸಿದ್ದರು.

    ಒಟ್ಟಿನಲ್ಲಿ ಸೆಲೆಬ್ರಿಟಿಗಳು ಸೇರಿದಂತೆ ವಿಶ್ವದೆಲ್ಲೆಡೆ ನೆಲೆಸಿರುವ ತುಳುನಾಡಿನ ಮಂದಿಯ ಆರಾಧ್ಯ ದೈವ ಕೊರಗಜ್ಜನ ಆಶೀರ್ವಾದ ಪಡೆದಿರುವುದು ದರ್ಶನ್ ಅಭಿಮಾನಿಗಳಲ್ಲಿ ಸಂತಸ ತಂದಿದೆ.

    https://www.youtube.com/watch?v=cO6q-qCCZQM&ab_channel=PublicMusic

  • ಕಾಮಿಡಿ ಕಿಲಾಡಿ ಗೆಲ್ಲಲು ಕೊರಗಜ್ಜ ದೈವದ ಆಶೀರ್ವಾದ: ರಾಕೇಶ್ ಪೂಜಾರಿ

    ಕಾಮಿಡಿ ಕಿಲಾಡಿ ಗೆಲ್ಲಲು ಕೊರಗಜ್ಜ ದೈವದ ಆಶೀರ್ವಾದ: ರಾಕೇಶ್ ಪೂಜಾರಿ

    -ಹರಕೆ ತೀರಿಸಿದ ರಾಕೇಶ್ ಪೂಜಾರಿ

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯ ಜನ ದೇವರನ್ನು ಪೂಜಿಸುವಷ್ಟೇ ದೈವಗಳನ್ನು ಆರಾಧಿಸುತ್ತಾರೆ. ದೈವ ಕೊರಗಜ್ಜ ಪವಾಡಗಳ ದೈವ ಎಂದೇ ಪ್ರತೀತಿ ಪಡೆದ ಶಕ್ತಿ. ಇತ್ತೀಚೆಗಷ್ಟೇ ಖಾಸಗಿ ವಾಹಿನಿಯಲ್ಲಿ ಕಾಮಿಡಿ ಕಿಲಾಡಿ ಶೋ ಗೆದ್ದ ರಾಕೇಶ್ ಪೂಜಾರಿ ಮೂಲತಃ ಉಡುಪಿ ಜಿಲ್ಲೆಯವರು. ಕಾಮಿಡಿ ಕಿಲಾಡಿ ಪ್ರಶಸ್ತಿ ಗೆದ್ದ ಕೂಡಲೇ ರಾಕೇಶ್ ಹರಕೆ ಒಪ್ಪಿಸಲು ಕೊರಗಜ್ಜನ ಸನ್ನಿಧಾನಕ್ಕೆ ಓಡೋಡಿ ಬಂದಿದ್ದಾರೆ.

    ಉಡುಪಿಯ ಬೈಲೂರಿನಲ್ಲಿರುವ ನೀಲಕಂಠ ಬಬ್ಬುಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ ರಾಕೇಶ್ ಪೂಜಾರಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ರಿಯಾಲಿಟಿ ಶೋ ಆರಂಭಕ್ಕೆ ಮುನ್ನ ಕೊರಗಜ್ಜನಿಗೆ ಹರಕೆ ಹೇಳಿದ್ದ ರಾಕೇಶ್, ತನ್ನ ಹರಕೆಯನ್ನು ತೀರಿಸಿದ್ದಾರೆ. ಎಲ್ಲಾ ಕಡೆ ದೈವ ದೇವರುಗಳಿಗೆ ದುಬಾರಿ ವೆಚ್ಚದ ಹರಕೆಯನ್ನು ತೀರಿಸಲಾಗುತ್ತದೆ. ಆದರೆ ಉಡುಪಿಯ ಕೊರಗಜ್ಜನಿಗೆ ಎಲೆ ಅಡಿಕೆ, ಚಕ್ಕುಲಿ ಮತ್ತು ಮದ್ಯವೇ ಹರಕೆ. ರಿಯಾಲಿಟಿ ಶೋದಲ್ಲಿ ಪ್ರತಿ ಬಾರಿ ವೇದಿಕೆ ಪ್ರವೇಶಕ್ಕೆ ಮುನ್ನ ಬೈಲೂರು ಬಬ್ಬುಸ್ವಾಮಿ ಕೊರಗಜ್ಜ ದೈವವನ್ನು ರಾಕೇಶ್ ಮನಸ್ಸಿನಲ್ಲಿ ನೆನೆಯುತ್ತಿದ್ದರಂತೆ. ತಾನು ಹೇಳಿದ ಹರಕೆಯಂತೆ ರಾಕೇಶ್ ಗೆಳೆಯರ ಜೊತೆ ಬಂದು ದೇವರಿಗೆ ಹರಕೆ ತೀರಿಸಿದ್ದಾರೆ.

    76 ಬಡಗಬೆಟ್ಟು ಬೈಲೂರು ನೀಲಕಂಠ ಮಹಾಸ್ವಾಮಿ ದೈವಸ್ಥಾನಕ್ಕೆ ಸೆಲೆಬ್ರಿಟಿಗಳ ದಂಡೇ ಹರಿದು ಬರುತ್ತದೆ. ಈ ಹಿಂದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರ ಯಶಸ್ವಿಯಾದಾಗ ನಿರ್ದೇಶಕ ರಿಷಬ್ ಶೆಟ್ಟಿ ಕ್ಷೇತ್ರಕ್ಕೆ ಬಂದು ಹರಕೆ ಸಲ್ಲಿಸಿದ್ದರು. ಉಳಿದವರು ಕಂಡಂತೆ ಚಿತ್ರದ ಸಂದರ್ಭದಿಂದ ಅವನೇ ಶ್ರೀಮನ್ನಾರಾಯಣ ಚಿತ್ರದವರೆಗೂ ನಟ ರಕ್ಷಿತ್ ಶೆಟ್ಟಿ ಕ್ಷೇತ್ರದ ಭಕ್ತ. ಇದೀಗ ರಾಕೇಶ್ ಗೆಲುವು ಕ್ಷೇತ್ರದಲ್ಲಿ ಹೇಳಿಕೊಂಡ ಹರಕೆಯಿಂದ ಸಿದ್ಧಿ ಪಡೆಯುತ್ತದೆ, ದೈವಕ್ಕೆ ಕಾರಣಿಕ ಇದೆ ಎಂಬೂದಕ್ಕೆ ಸಾಕ್ಷಿಯಿದು. ಇದನ್ನೂ ಓದಿ: ರಕ್ಷಿತ್, ರಿಷಬ್‌ಗೆ ಬೈಲೂರು ಕೊರಗಜ್ಜನ ಅಭಯ

    ಸ್ಥಳೀಯ ಚೇತನ್ ಮಾತನಾಡಿ, ಕೊರಗಜ್ಜ ದೈವ ತುಳುನಾಡಿನಲ್ಲಿ ಅದರಲ್ಲೂ ಕಲಿಯುಗದಲ್ಲಿ ಬಹಳ ಶಕ್ತಿ ಇರುವ ದೈವ. ಯಾವುದೇ ಕಷ್ಟ ಬಂದ್ರೆ ಕೊರಗಜ್ಜ ದೈವದ ಬಳಿ ತನ್ನ ಕಷ್ಟವನ್ನು ಹೇಳಿಕೊಂಡರೆ ಹಲವಾರು ಜನರಿಗೆ ಇದರಲ್ಲಿ ಉಪಯೋಗವಾಗಿದೆ. ದೈವ ಅವರ ಕಷ್ಟವನ್ನೆಲ್ಲಾ ನಿವಾರಿಸಿ ಕೊಟ್ಟಿದ್ದಾರೆ. ಹಲವಾರು ಮಂದಿ ಚಲನ ಚಿತ್ರ ನಟರು ಬಂದಿದ್ದಾರೆ. ನಂಬಿದವರಿಗೆ ಇಂಬು ಕೊಡುವ ದೈವ ಅಂದ್ರೆ ಅದು ಕೊರಗಜ್ಜ.

    ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ರಾಕೇಶ್ ಮೊದಲು ಹರಕೆ ತೀರಿಸಲು ಆಗಮಿಸಿದರು. ಈ ಸಂದರ್ಭದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದರು. ನಾನು ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿ. ಈ ಕ್ಷೇತ್ರದ ಬಗ್ಗೆ ಆರು ತಿಂಗಳ ಹಿಂದೆ ನನಗೆ ತಿಳಿದು ಬಂತು. ಕಾಮಿಡಿ ಕಿಲಾಡಿಗೆ ಸೆಲೆಕ್ಟ್ ಆಗಬೇಕು ಎಂದು ಈ ಕ್ಷೇತ್ರಕ್ಕೆ ಹರಕೆ ಹೇಳಿದ್ದೆ. ಆದರೆ ಈ ದೈವ ನನ್ನನ್ನು ಸ್ಪರ್ಧೆಯಲ್ಲಿ ಗೆಲ್ಲಿಸಿ ಕೊಟ್ಟಿದೆ ಎಂದು ಖುಷಿ ಹಂಚಿಕೊಂಡರು.

    ನನ್ನ ಜೀವನದಲ್ಲಿ ಈ ದೇವರನ್ನು ಆರಾಧನೆ ಮಾಡಿದ ಮೇಲೆ ಹಿಂತಿರುಗಿ ನೋಡಿದ್ದೇ ಇಲ್ಲ ಎಂದು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಅನುಭವ ಹೇಳಿಕೊಂಡರು. ಪ್ರತಿ ಬಾರಿ ಒಂದೊಂದೇ ಮೆಟ್ಟಿಲು ಮೇಲಕ್ಕೆ ಈ ದೈವ ನನ್ನನ್ನು ತೆಗೆದುಕೊಂಡು ಹೋಗಿದೆ. ಪ್ರತಿ ಬಾರಿ ವೇದಿಕೆ ಹತ್ತುವ ಮೊದಲು ಸ್ವಾಮಿ ಕೊರಗಜ್ಜ ಎಂದು ಮನಸ್ಸಿನಲ್ಲಿ ಒಂದು ಬಾರಿ ನೆನಪು ಮಾಡಿಕೊಳ್ಳುತ್ತಿದ್ದೆ. ಈ ಕ್ಷೇತ್ರದ ಪ್ರಸಾದವನ್ನು ಹಣೆಗೆ ಇಟ್ಟುಕೊಂಡರೆ ಏನೋ ಒಂದು ವಿಶೇಷ ಶಕ್ತಿ ಬರುತ್ತಿತ್ತು. ವೇದಿಕೆ ಹತ್ತಲು ಯಾವುದೇ ಅಳುಕು ಆತಂಕ ಇಲ್ಲದಂತಾಗುತ್ತಿತ್ತು. ಮುಂದೆಯೂ ನಾನು ಊರಿಗೆ ಬಂದಾಗ ವಿಶೇಷ ದಿನಗಳಲ್ಲಿ ಕೊರಗಜ್ಜ ದೈವದ ಆರಾಧನೆ ಮಾಡುತ್ತೇನೆ ಹರಕೆ ತೀರಿಸುತ್ತೇನೆ ಎಂದು ಹೇಳಿದರು.

  • ಕೊರಗಜ್ಜನ ಪ್ರಸಾದ ಸ್ವೀಕರಿಸಿದ ಸಚಿವ ಖಾದರ್ ವಿರುದ್ಧ ಮುಸ್ಲಿಮರಿಂದ ಟೀಕೆ

    ಕೊರಗಜ್ಜನ ಪ್ರಸಾದ ಸ್ವೀಕರಿಸಿದ ಸಚಿವ ಖಾದರ್ ವಿರುದ್ಧ ಮುಸ್ಲಿಮರಿಂದ ಟೀಕೆ

    ಮಂಗಳೂರು: ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ದೇವಸ್ಥಾನಕ್ಕೆ ಆಹಾರ ಸಚಿವ ಯುಟಿಖಾದರ್ ಭೇಟಿ ನೀಡಿ ಪ್ರಸಾದ ಸ್ವೀಕರಿಸಿರೋದು ಇದೀಗ ಮುಸ್ಲಿಂ ಮೂಲಭೂತವಾದಿಗಳ ವಿರೋಧಕ್ಕೆ ಕಾರಣವಾಗಿದೆ.

    ಕಳೆದ ಕೆಲ ದಿನಗಳ ಹಿಂದೆ ಮಂಗಳೂರಿನ ಪ್ರಸಿದ್ಧ ಕೊರಗಜ್ಜನ ಕ್ಷೇತ್ರದಲ್ಲಿ ಕೊರಗಜ್ಜನಿಗೆ ನರ್ತನ ಸೇವೆ ನಡೆದಿತ್ತು. ಈ ಸಂದರ್ಭದಲ್ಲಿ ಸಚಿವ ಯುಟಿ ಖಾದರ್ ಕೂಡಾ ಭೇಟಿ ನೀಡಿದ್ದರು. ಅಲ್ಲದೇ ಸ್ವತಃ ದೈವ ಪಾತ್ರಿಯಿಂದ ಕೊರಗಜ್ಜನ ಪ್ರಸಾದವನ್ನೂ ಸ್ವೀಕರಿಸಿದ್ರು. ಆದರೆ ಇದೀಗ ಖಾದರ್ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿರೋದು ಮುಸ್ಲಿಂ ಮೂಲಭೂತವಾದಿಗಳ ಕಣ್ಣು ಕೆಂಪಾಗಿಸಿದೆ.

    ಖಾದರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿಂದನಾತ್ಮಕವಾಗಿ ಟೀಕಿಸಿದ್ದು, ಮುಸ್ಲಿಂನಾಗಿ ಖಾದರ್ ಹಿಂದೂ ಕ್ಷೇತ್ರಕ್ಕೆ ಭೇಟಿ ನೀಡಿದ್ದು ತಪ್ಪು ಎಂದು ಟೀಕಿಸಿದ್ದಾರೆ. ಹಿಂದೂಗಳ ಕ್ಷೇತ್ರಕ್ಕೆ ಭೇಟಿ ನೀಡಿರೋದ್ರಿಂದ ಹಿಂದೂಗಳು ಮತವನ್ನು ನೀಡೋದಿಲ್ಲ. ಸುಮ್ಮನೆ ನಾಟಕವಾಡೋದು ಬಿಟ್ಟು ಮುಸ್ಲಿಂ ಧರ್ಮದ ಅನುಯಾಯಿಯಾಗಿ ಮುಂದುವರಿಯಿರಿ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ದೈವಕ್ಕೆ ಬೈಯ್ದಿದ್ದಕ್ಕೆ ಇಡೀ ಕುಟುಂಬಕ್ಕೆ ಅನಾರೋಗ್ಯ – ಕೊರಗಜ್ಜನಲ್ಲಿ ಯುವಕನಿಂದ ಕ್ಷಮೆಯಾಚನೆ

    ಈ ಹಿಂದೆ ಕೇವಲ ಹಿಂದೂ ಸಂಘಟನೆಗಳ ಮುಖಂಡರು ಸೇರಿದಂತೆ ಬಿಜೆಪಿ ನಾಯಕರನ್ನು ಮಾತ್ರ ಗುರಿಯಾಗಿಸಿಕೊಂಡಿದ್ದ ಮುಸ್ಲಿಂ ಮೂಲಭೂತವಾದಿಗಳು, ಇದೀಗ ಸಚಿವರನ್ನೇ ಟಾರ್ಗೆಟ್ ಮಾಡಿರೋದು ಧರ್ಮ ಧರ್ಮಗಳ ನಡುವೆ ದ್ವೇಷ ಬಿತ್ತೋ ಹುನ್ನಾರ ನಡೀತಿರೋದು ಜನಸಾಮಾನ್ಯರ ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಉಡುಪಿಯ ಕೊರಗಜ್ಜನ ಮಹಿಮೆ ಮತ್ತೊಮ್ಮೆ ಸಾಬೀತು- ಕದ್ದ ಬೆಳ್ಳಿ ಆಭರಣಗಳನ್ನು ಹಿಂದುರಿಗಿಸಿದ ಖದೀಮರು