Tag: Koragajja Movie

  • ʻಕೊರಗಜ್ಜʼ ಫಸ್ಟ್ ಲುಕ್ ಟೀಸರ್ ಔಟ್ – 6 ಭಾಷೆಗಳಲ್ಲಿ ತಯಾರಾದ ಸಿನಿಮಾ

    ʻಕೊರಗಜ್ಜʼ ಫಸ್ಟ್ ಲುಕ್ ಟೀಸರ್ ಔಟ್ – 6 ಭಾಷೆಗಳಲ್ಲಿ ತಯಾರಾದ ಸಿನಿಮಾ

    ಸುಧೀರ್ ಅತ್ತಾವರ್ ನಿರ್ದೇಶನದ ಹಾಗೂ ತ್ರಿವಿಕ್ರಮ ಸಪಲ್ಯ ನಿರ್ಮಾಣದ ಬಹು ನಿರೀಕ್ಷಿತ, ಸಕ್ಸಸ್ ಫಿಲ್ಮ್ಸ್‌ ಮತ್ತು ತ್ರಿವಿಕ್ರಮ ಸಿನಿಮಾಸ್ ಬ್ಯಾನರ್ ಅಡಿಯ ಕೊರಗಜ್ಜ ಚಿತ್ರದ (Koragajja Movie) ಫಸ್ಟ್ ಲುಕ್ ಟೀಸರ್ ಹಾಗೂ 3D ಮೋಷನ್ ಪೋಸ್ಟರ್ ಇತ್ತೀಚೆಗೆ ಅದ್ದೂರಿಯಾಗಿ ಬಿಡುಗಡೆಯಾಯಿತು. ದಕ್ಷಿಣ ಕನ್ನಡದ ವಾದ್ಯ ಹಿಮ್ಮೇಳ ಹಾಗೂ ಉಡುಪಿಯ ಮಹಿಳಾ ತಂಡದವರ ಹುಲಿ ನೃತ್ಯದ ಮೆರವಣಿಗೆಯಲ್ಲಿ ಸಾಗಿಬಂದ ಕೊರಗಜ್ಜನ ಎರಡು ಕಟೌಟ್‌ಗಳು ಡೊಳ್ಳು, ಕೊಂಬು-ಕಹಳೆ, ಕೊಳಲು, ತಾಸೆ, ತಾಳಗಳ ವಾದ್ಯಮೇಳದ ಹಿನ್ನೆಯಲ್ಲಿ ಹುಲಿವೇಷದ ಅಬ್ಬರದ ನೃತ್ಯದ ನಡುವೆ ಫಸ್ಟ್ ಲುಕ್ ಅನಾವರಣಗೊಂಡಿರುವುದು ಅತ್ಯಂತ ವಿಶೇಷವಾಗಿತ್ತು.

    ಸಮಾರಂಭದಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವೆ ಮೋಟಮ್ಮ, ನಿರ್ಮಾಪಕಿ – ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್, ನಿರ್ದೇಶಕ, ನಿರ್ಮಾಪಕ, ಸಿನಿಮಾದ ನಟ ನಟಿಯರೆಲ್ಲ ಕಟೌಟ್‌ಗೆ ಪುಷ್ಪಾರ್ಚನೆಗೊಳಿಸಿರುವುದು ಕಾರ್ಯಕ್ರಮಕ್ಕೆ ವಿಶೇಷವಾದ ಮೆರುಗು ನೀಡಿತು.

    ನಿರ್ದೇಶಕ ಸುಧೀರ್ ಅತ್ತಾವರ್ ಮಾತನಾಡಿ, ಮೂರು ವರ್ಷಗಳ ಹಿಂದೆ ಆರಂಭವಾದ ಸಿನಿಮಾ ಈಗ ಅನೇಕ ಅಡೆತಡೆಗಳನ್ನ ದಾಟಿ ಬಿಡುಗಡೆಯ ಹಂತ ತಲುಪಿದೆ. ಇದರ ಪೂರ್ವಭಾವಿಯಾಗಿ ಇಂದು ಫಸ್ಟ್ ಲುಕ್ ಟೀಸರ್ ಹಾಗೂ 3D ಪೋಸ್ಟರ್ ಬಿಡುಗಡೆ ಮಾಡಿದ್ದೇವೆ. ನನಗೆ ತಿಳಿದ ಹಾಗೆ ದಕ್ಷಿಣ ಭಾರತದಲ್ಲೇ ಇದೇ ಮೊದಲ ಬಾರಿಗೆ ಈ ರೀತಿಯ 3D ಪೋಸ್ಟರ್ ಮಾಡಿರುವುದು. ಕೊರಗಜ್ಜನ ಆಶೀರ್ವಾದದಿಂದ ಸಿನಿಮಾ ಅಂದುಕೊಂಡ ಹಾಗೆ ಬಂದಿದೆ. ಚಿತ್ರವನ್ನು ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಮತ್ತು ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ತಮ್ಮ ಕಾರ್ಯ ನಿರ್ವಹಿಸಿರುತ್ತಾರೆ. ಚಿತ್ರತಂಡದ ಸಹಕಾರ ಅಪಾರ ಎಂದು ಶ್ಲಾಘಿಸಿದ್ರು.

    ಒಟ್ಟು ಆರು ಭಾಷೆಗಳಲ್ಲಿ ಮೂಡಿಬಂದಿರುವ ನಮ್ಮ ಚಿತ್ರದಲ್ಲಿ 31 ಹಾಡುಗಳಿವೆ (ಆರು ಭಾಷೆಗಳಿಂದ). ಗೋಪಿ ಸುಂದರ್ ಅವರ ಸಂಗೀತ ಸಂಯೋಜನೆಯಲ್ಲಿ ಭಾರತದ ಪ್ರಸಿದ್ದ ಗಾಯಕ – ಗಾಯಕಿಯರು ಈ ಹಾಡನ್ನು ಹಾಡಿದ್ದಾರೆ. ಸುಮಾರು 24 ವರ್ಷದ ತನಿಯ ದೈವತ್ವಕ್ಕೇರಿ ಕೊರಗಜ್ಜನಾದ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ ಎಂದು ತಿಳಿಸಿದರು.

    ವಿಜಯಲಕ್ಷ್ಮಿ ಮಾತನಾಡಿ, ಇದು ನಾನು ಜೈ ಜಗದೀಶ್ ಆರಂಭಿಸಿದ ಸಿನಿಮಾ. ಸುಮಾರು 25 ಸಿನಿಮಾ ನಿರ್ಮಾಣ ಮಾಡಿರುವ ನಮಗೆ ಈ ಸಿನಿಮಾ ನಿರ್ಮಾಣ ಮಾಡಲು ಸಾಧ್ಯವಾಗದೆ, ಈ ಪ್ರೋಜೆಕ್ಟ್ ನಿಂದ ಹಿಂದೆ ಸರಿದೆವು. ಆದರೆ ಈಗ ಅದು ಸುಧೀರ್ ಅತ್ತಾವರ್‌ಗೆ ಇದು ಒಲಿದಿದೆ. ವಿಭಿನ್ನವಾಗಿ ಫಸ್ಟ್ ಲುಕ್ ರಿಲೀಸ್ ನೋಡಿ, ಈ ಸಿನಿಮಾ ಯಾವ ಮಟ್ಟದಲ್ಲಿ ಮೂಡಿಬಂದಿರಬಹುದೆನ್ಬುವುದನ್ನು ಊಹಿಸಬಹುದು ಎಂದು ತಿಳಿಸಿದರು.

    ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಮಾತನಾಡಿ, ನಿರ್ದೇಶಕರು ನನಗೆ ಬಹಳ ವರ್ಷಗಳ ಸ್ನೇಹಿತರು. ಅವರು ಹೇಳಿದ ಕಥೆ ಕೇಳಿದ ತಕ್ಷಣ ನಿರ್ಮಾಣಕ್ಕೆ ಮುಂದಾದೆ. ನಾವು ಸಹ ಕೊರಗಜ್ಜನನ್ನು ಆರಾಧಿಸುವ ಕುಟುಂಬದವರು. ಅನುಭವಿ ಕಲಾವಿದರು ಹಾಗೂ ನುರಿತ ತಂತ್ರಜ್ಞರು ನಮ್ಮ ಚಿತ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ನವೆಂಬರ್ ಕೊನೆಗೆ ಚಿತ್ರವನ್ನು ತೆರೆಗೆ ತರುವ ಪ್ರಯತ್ನದಲ್ಲಿದ್ದೇವೆ ಎಂದರು.

    ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಈ ಸಿನಿಮಾದ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಸತತ 3 ವರ್ಷಗಳಿಂದ ಸಿನಿಮಾದ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸದ ಬಗೆಗಿನ ಸಾವಿಸ್ತಾರ ವಿಚಾರ ಹಂಚಿಕೊಂಡರು. ನಿರ್ದೇಶಕರ ಹಾಗೂ ಸಹ ಕಲಾವಿದರ ಕಾರ್ಯವೈಖರಿ ಶ್ಲಾಘಿಸುತ್ತಾ, ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡ ಹಿರಿಯ ನಟಿ ಭವ್ಯ ಅವರು, ರಾಣಿ ʻಪಂಜಂದಾಯಿʼ ಪಾತ್ರದಲ್ಲಿ ಖ್ಯಾತ ನಟ ಕಬೀರ್ ಬೇಡಿಯೊಂದಿಗೆ ನಟಿಸಿಸ ಅನುಭವ ಹೇಳಿದರು. ಹಾಡಿನ ಬಿಟಿಎಸ್ ಮತ್ತು ಮೇಕಿಂಗ್ ವೀಡಿಯೋ ನೆರೆದವರನ್ನು ಮಂತ್ರಮುಗ್ಧಗೊಳಿಸಿತು.

    ನನ್ನ ವೃತ್ತಿಜೀವನದಲ್ಲೇ ಇದು ವಿಭಿನ್ನವಾದ ಸಿನಿಮಾ ಎಂದು ಮಾತನಾಡಿದ ನಟಿ ಶೃತಿ, ನಾನು ಈ ಚಿತ್ರದಲ್ಲಿ ಕೊರಗಜ್ಜನ ಸಾಕು ತಾಯಿಯ ಪಾತ್ರ ನಿರ್ವಹಿಸಿದ್ದೇನೆ. ಈ ಚಿತ್ರಕ್ಕಾಗಿ ಸತತ ಇಪ್ಪತ್ತೆಂಟು ಗಂಟೆಗಳ ಚಿತ್ರೀಕರಣ ಮಾಡಿದ್ದೇನೆ. ಇದು ಮರೆಯಲಾರದ ಅನುಭವ. ಅಷ್ಟು ಹೊತ್ತು ಕೆಲಸ ಮಾಡಿದರೂ ನಿರ್ದೇಶಕರಲ್ಲಿದ್ದ ಉತ್ಸಾಹ ಒಂದು ಚೂರು ಕಡಿಮೆ ಆಗಿರಲಿಲ್ಲ. ಕೊರಗಜ್ಜನ ಆಶೀರ್ವಾದದಿಂದ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.

  • ಕೊರಗಜ್ಜ ಚಿತ್ರಕ್ಕಾಗಿ ಖ್ಯಾತ ರಂಗಕರ್ಮಿ ಎಂ.ಎಸ್ ಸತ್ಯು ಕೊಟ್ಟ ಟಿಪ್ಸ್

    ಕೊರಗಜ್ಜ ಚಿತ್ರಕ್ಕಾಗಿ ಖ್ಯಾತ ರಂಗಕರ್ಮಿ ಎಂ.ಎಸ್ ಸತ್ಯು ಕೊಟ್ಟ ಟಿಪ್ಸ್

    ದ್ಮಶ್ರೀ ಪ್ರಶಸ್ತಿ ವಿಜೇತ ಎಂ ಎಸ್ ಸತ್ಯು ರವರಿಗೆ ಜುಲೈ 6 ರಂದು 96ನೇ ಹುಟ್ಟುಹಬ್ಬದ ಸಂಭ್ರಮ. ಈ ಸಡಗರವನ್ನು `ಕೊರಗಜ್ಜ’ (Koragajja Movie) ಸಿನಿಮಾದ ನಿರ್ದೇಶಕ ಸುಧೀರ್ ಅತ್ತಾವರ್ ಮತ್ತು ಚಿತ್ರ ತಂಡ ಹೆಚ್ಚು ಸಂಭ್ರಮಿಸುತ್ತಿದೆ. ಇದಕ್ಕೆ ಕಾರಣ ಈ ಚಿತ್ರದಲ್ಲಿ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್ ಗೆ ಸತ್ಯುರವರು ನೀಡಿರುವ ಕೊಡುಗೆ. ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಮ್ಸ್ ಬ್ಯಾನರ್ ಅಡಿಯ ಬಹು ನಿರೀಕ್ಷಿತ ಪಾನ್ ಇಂಡಿಯಾ ಸಿನಿಮಾ `ಕೊರಗಜ್ಜ’ ಇನ್ನೇನು ಬಿಡುಗಡೆಗೆ ಸಿದ್ಧವಾಗುತ್ತಿದೆ. ದೇಶದ ಬಲು ದೊಡ್ದ ಆಡಿಯೋ ಕಂಪೆನಿ ಆಡಿಯೋ ರೈಟ್ ಪಡೆದುಕೊಂಡಿದೆ. ಈ ನಡುವೆ ಸಿನಿಮಾದ ಅತ್ಯಂತ ವಿಶಿಷ್ಟ ಎನಿಸುವ ಕಾಸ್ಟ್ಯೂಮ್ ನ್ನು ದೇಶದ ಖ್ಯಾತ ಕಲಾ ವಿನ್ಯಾಸಗಾರ, ರಂಗ ಕರ್ಮಿ-ನಿರ್ದೇಶಕ ಎಂ ಎಸ್ ಸತ್ಯುರವರ ಬಳಿ ಸಾಕಷ್ಟು ಚರ್ಚಿಸಿ, ವಸ್ತ್ರ ವಿನ್ಯಾಸ ಗೊಳಿಸಿರುವ ವಿಚಾರವನ್ನು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ನಿರ್ದೇಶಕರು, ಸತ್ಯು (M.S.Satyu) ರವರು ತನ್ನ 96ನೇ ಹುಟ್ಟು ಹಬ್ಬವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಬಹಿರಂಗ ಪಡಿಸಿರುತ್ತಾರೆ.

    ಇದು ಸುಮಾರು ಎಂಟುನೂರು ವರ್ಷಗಳ ಹಿಂದಿನ ಕಥೆಯಾದ್ದರಿಂದ ಆ ಕಾಲಘಟ್ಟಕ್ಕೆ ಸರಿ ಹೊಂದುವ ಕಾಸ್ಟ್ಯೂಮ್ ನ್ನು ವಿನ್ಯಾಸಗೊಳಿಸಲು ಆಳವಾದ ಜ್ಞಾನ ಮತ್ತು ಪರಿಕಲ್ಪನೆ ಬೇಕಾಗಿರುತ್ತದೆ. ಸತ್ಯು ರವರು ಮಾಡಿರುವ ಕಲಾ ವಿನ್ಯಾಸ ಗಳು ಲಂಡನಿನ ಷೇಕ್ಸ್ ಪಿಯರ್ ಮ್ಯೂಸಿಯಂ ನಲ್ಲೂ ಸಂಗ್ರಹವಾಗಿದೆ. ಗುರುಗಳಾದ ಸತ್ಯು ರವರ ಹತ್ರ `ಕೊರಗಜ್ಜ ‘ ಮತ್ತು ನನ್ನ ಮುಂಬರುವ ಸಿನಿಮಾದ ವಸ್ತ್ರ ವಿನ್ಯಾಸ ಮತ್ತು ಕಲಾ ವಿಭಾಗದ ಬಗ್ಗೆ ಹಲವಾರು ಬಾರಿ ಫೋನ್ ನಲ್ಲಿ ಚರ್ಚಿಸಿದೆ. ಸಂಪೂರ್ಣ ಮಾಹಿತಿ ಪಡೆದುಕೊಳ್ಳುವಷ್ಟರಲ್ಲಿ ಸತ್ಯು ವಯೋ ಸಹಜ ಖಾಯಿಲೆಯಿಂದ ಸೊರಗಿ ಹೋಗತೊಡಗಿದರು. ನಂತರ ಸ್ವತಃ ಆಳವಾದ ಅಭ್ಯಾಸ ಮಾಡಿ ಉಡುಗೆ- ತೊಡುಗೆ ಮತ್ತು ಕಲಾ ವಿನ್ಯಾಸ ಮಾಡಿದೆ. ಆದರೆ ನನ್ನ “ಪರಿ” ಸಿನಿಮಾದ ಕಲಾ ನಿರ್ದೇಶನವನ್ನು ಸತ್ಯು ರವರೇ ಮಾಡಿದ್ದರು- ಎಂದು ಸುಧೀರ್ ತಿಳಿಸಿದರು. ಇದನ್ನೂ ಓದಿ: ಮದುವೆಯಾಗದೆ ಅಮ್ಮನಾಗಲಿರುವ ಭಾವನಾ ರಾಮಣ್ಣ

    `ಕೊರಗಜ್ಜ' ಸಿನಿಮಾದ ಕಲಾ ನಿರ್ದೇಶನವನ್ನೂ ನಿರ್ದೇಶಕರೇ ಮಾಡಿರುತ್ತಾರೆ. ಸುಧೀರ್ ಅತ್ತಾವರ್ ರವರು ಎಂ ಎಸ್ ಸತ್ಯುರವರ ಜೊತೆ ಸಿನಿಮಾ,ರಂಗಭೂಮಿ ಮತ್ತು ಟಿವಿ ಮಾಧ್ಯಮದಲ್ಲಿ ಸುಮರು _10 ವರ್ಷ ಕೆಲಸ ಮಾಡಿರುತ್ತಾರೆ. `ಇಜ್ಜೋಡು’ ಚಿತ್ರಕ್ಕೆ ಎಲ್ಲಾ ಹಾಡುಗಳನ್ನೂ ಸುಧೀರ್ ರಚಿಸಿರುತ್ತಾರೆ. ಇಂದು ಬಹಳ ದೊಡ್ದ ಹೆಸರು ಮಾಡುತ್ತಿರುವ ವಿನ್ಯಾಸಕಾರರು, ದೇಶದ ಶ್ರೇಷ್ಠ ಕಲಾ ನಿರ್ದೇಶಕ ರಾಗಿರುವ ಸತ್ಯು ರವರ ಮೂಸೆಯಿಂದ ಬಂದಿರುತ್ತಾರೆ. ಅಂತಹ ಶ್ರೇಷ್ಠ ವಿನ್ಯಾಸಗಾರ ಎಂ ಎಸ್ ಸತ್ಯು ಕೊರಗಜ್ಜ' ಸಿನಿಮಾದ ಕಥೆ ಕೇಳಿ ಬಹಳ ಇಷ್ಟ ಪಟ್ಟಿದ್ದರು. ಆದರೆ ಸಿನಿಮಾ ಮಾಡಲು ಅತ್ಯಂತ ಚಾಲೆಂಜಿಂಗ್ ಮತ್ತು ಕಠಿಣ ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದರು. ಸಿನಿಮಾದ ಕಾಸ್ಟ್ಯೂಮನ್ನು ಖ್ಯಾತ ಹಾಲಿವುಡ್-ಬಾಲಿವುಡ್ ಮತ್ತು ಯುರೋಪಿಯನ್ ಸಿನಿಮಾಗಳ ನಟ, `ಕೊರಗಜ್ಜ’ ಸಿನಿಮಾದಲ್ಲಿ ಉದ್ಯಾವರ ಅರಸರ ಪಾತ್ರ ನಿಭಾಯಿಸಿರುವ ಕಬೀರ್ ಬೇಡಿ ಬಹಳವಾಗಿ ಮೆಚ್ಚಿಕೊಂಡು ತನ್ನ ಇನ್ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿದ್ದರು.

    ತ್ರಿವಿಕ್ರಮ ಸಪಲ್ಯ ನಿರ್ಮಿಸುತ್ತಿರುವ `ಕೊರಗಜ್ಜ’ ಸಿನಿಮಾವನ್ನು ದೇಶಾದ್ಯಂತ ತೆರೆ ಕಾಣಲು ಕಾರ್ಯ ತಂತ್ರ ರೂಪುಗೊಳ್ಳುತ್ತಿದೆ. ಈ ನಡುವೆ ಆಡಿಯೋ, ಮತ್ತು ಟ್ರಯಲರನ್ನು ಲಂಡನ್ ನ ಒಂದು ವಿಶೇಷ ಸ್ಥಳದಲ್ಲಿ ಬಿಡುಗಡೆ ಗೊಳಿಸಲು ತಂಡ ಸಜ್ಜಾಗುತ್ತಿದೆ. ಖ್ಯಾತ ಸಂಗೀತಗಾರ ಗೋಪಿ ಸುಂದರ್ ರವರ ಹೊಸ `ಝೋನರ’ನ ಮ್ಯೂಸಿಕ್, ಈಗಾಗಲೇ ದೇಶದ ಹಲವಾರು ಖ್ಯಾತ ಆಡಿಯೋ ಕಂಪೆನಿಗಳ ಗಮನ ಸೆಳೆಯುವಲ್ಲಿ ಸಫಲವಾಗಿದೆ.ಅದಕ್ಕೆ ಪೂರಕವಾಗಿ ಶ್ರೇಯಾ ಘೋಷಾಲ್, ಸುನಿಧಿ ಚೌಹಾನ್, ಶಂಕರ್ ಮಹದೇವನ್, ಜಾವೆದ್ ಆಲಿ, ಶರೋನ್ ಪ್ರಭಾಕರ್, ಸ್ವರೂಪ್ ಖಾನ್, ಅರ್ಮನ್ ಮಲಿಕ್ ಜೊತೆಗೆ ದಕ್ಷಿಣ ಭಾರತದ ಪ್ರತಿಭೆಗಳಾದ ರಮೇಶ್ ಚಂದ್ರ, ಅನಿಲ ರಾಜಿವ್, ಸನ್ನಿದಾನಂದನಮ್, ವಿಜೇಶ್ ಗೋಪಾಲ್, ಪ್ರತಿಮ ಭಟ್, ಕಾಂಜನ ಮೊದಲಾದವರ ಕಂಠ ಸಿರಿಯಲ್ಲಿ ವಿನೂತನ ಗೀತೆಗಳು ಮೂಡಿಬಂದಿದೆ.ಚಿತ್ರಕ್ಕೆ ಮನೋಜ್ ಪಿಳ್ಳೈ ಮತ್ತು ಪವನ್ ಕ್ಯಾಮರಾ, ವಿದ್ಯಾಧರ್ ಶೆಟ್ಟಿ ಮತ್ತು ಜಿತ್ ಜೋಶ್ ಸಂಕಲನ, ಬಿಬಿನ್ ದೇವ್ ಸೌಂಡ್ ಡಿಸೈನ್, ಲಿಜು ಪ್ರಭಾಕರ್ ಡಿ ಐ ಕಲರಿಂಗ್, ಲವನ್-ಕುಶನ್ ವಿ ಎಫ಼್ ಎಕ್ಸ್ ಮತ್ತು ಗ್ರಾಫಿಕ್ಸ್ ಕೆಲಸ ಈ ಚಿತ್ರಕ್ಕಿದೆ. ಇದನ್ನೂ ಓದಿ: ಪ್ರಜ್ವಲ್ ಹುಟ್ಟುಹಬ್ಬಕ್ಕೆ `ಮಾಫಿಯಾ’ ಟೀಮ್ ಗಿಫ್ಟ್