Tag: koragajja

  • ದೈವ ನುಡಿದಂತೆ 3 ದಿನದಲ್ಲಿ ಸಿಕ್ಕಿಬಿದ್ದ ಕಳ್ಳ – ಉಡುಪಿಯಲ್ಲಿ ಕೊರಗಜ್ಜನ ಪವಾಡ

    ದೈವ ನುಡಿದಂತೆ 3 ದಿನದಲ್ಲಿ ಸಿಕ್ಕಿಬಿದ್ದ ಕಳ್ಳ – ಉಡುಪಿಯಲ್ಲಿ ಕೊರಗಜ್ಜನ ಪವಾಡ

    – ದಾವಣಗೆರೆ ಮೂಲದ ಸಲ್ಮಾನ್‌ ಬಂಧಿತ ಆರೋಪಿ

    ಉಡುಪಿ: ಕೊರಗಜ್ಜನ (Koragajja) ಪವಾಡ ಮತ್ತೊಮ್ಮೆ ಕರಾವಳಿಯಲ್ಲಿ ನಡೆದಿದೆ. ಎರಡನೇ ಬಾರಿ ಹುಂಡಿ ಕದಿಯುವಾಗ ಕಳ್ಳ ಸಿಕ್ಕಿಬಿದ್ದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಹೆಬ್ರಿ ತಾಲೂಕು ಮುದ್ರಾಡಿಯ (Mudradi) ಆದಿಶಕ್ತಿ ದೇಗುಲದ ಕಲ್ಲುರ್ಟಿ, ಕೊರಗಜ್ಜ ಸನ್ನಿದಾನದಲ್ಲಿ ಮೇ 25 ರಂದು ಕಳ್ಳತನ ನಡೆದಿತ್ತು. ಬೇಸರದಿಂದ ಧರ್ಮದರ್ಶಿ ಸುಕುಮಾರ್ ಮೋಹನ್ ದೈವದ ಮೊರೆ ಹೋಗಿದ್ದರು. ಇದನ್ನೂ ಓದಿ: ಹಾಸನ | ಹೊಳೆನರಸೀಪುರದಲ್ಲಿ ನಾಲ್ವರು ಖತರ್ನಾಕ್ ಕಳ್ಳಿಯರ ಬಂಧನ

     

    ಹುಂಡಿ ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗುತ್ತಿರುವುದು

    ಈ ವೇಳೆ ಕಳ್ಳ ಮತ್ತೆ ಬಂದು ಸಿಕ್ಕಿ ಬೀಳುತ್ತಾನೆ. ಹತ್ತು ದಿನಗಳಲ್ಲಿ ಕಳ್ಳನನನ್ನು ಪತ್ತೆ ಮಾಡಿಕೊಡುವುದಾಗಿ ದೈವ ಅಭಯ ನೀಡಿತ್ತು.

    ಜೂನ್‌ 3 ರ ಮಧ್ಯರಾತ್ರಿ 12:30 ರ ವೇಳೆಗೆ ಕಳ್ಳ ಎರಡನೇ ಬಾರಿ ಹುಂಡಿ ಕದಿಯಲು ಬಂದಿದ್ದಾನೆ. ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಕಳ್ಳತನ ಎಸಗಿ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದವನನ್ನು ಆಗುಂಬೆ ಚೆಕ್ ಪೋಸ್ಟ್ ಬಳಿ ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ.

    ದಾವಣಗೆರೆ ಮೂಲದ ಸಲ್ಮಾನ್ ಬಂಧಿತ ಕಳ್ಳನಾಗಿದ್ದಾನೆ. ಈಗ ದೈವದ ಅಭಯ ನಿಜವಾಯ್ತು ಎಂದ ಆಡಳಿತ ವರ್ಗ, ಗ್ರಾಮಸ್ಥರು ಸಂತಸ ಪಟ್ಟಿದ್ದಾರೆ.

  • ಕೊರಗಜ್ಜನಿಗೆ ನಮಿಸಿ ಕಾಣಿಕೆ ಹುಂಡಿ ಕದ್ದೊಯ್ದ ಕಳ್ಳ

    ಕೊರಗಜ್ಜನಿಗೆ ನಮಿಸಿ ಕಾಣಿಕೆ ಹುಂಡಿ ಕದ್ದೊಯ್ದ ಕಳ್ಳ

    ಮಂಗಳೂರು: ಕರಾವಳಿಯ ಕಾರಣಿಕ ದೈವ ಕೊರಗಜ್ಜನ (Koragajja Temple) ಕಾಣಿಕೆ ಹುಂಡಿಯನ್ನು (Hundi) ಕಳ್ಳನೊಬ್ಬ ಕದ್ದು ಪರಾರಿಯಾಗಿದ್ದಾನೆ.

    ಮಂಗಳೂರು (Mangaluru) ನಗರದ ಮೇರಿಹಿಲ್‍ನ ಕೊರಗಜ್ಜನ ಕಟ್ಟೆಯಲ್ಲಿ ಈ ಕಳ್ಳತನ ನಡೆದಿದೆ. ಕಳ್ಳತನಕ್ಕೂ ಮುನ್ನ ಕೊರಗಜ್ಜನಿಗೆ ಭಕ್ತಿಯಿಂದ ನಮಸ್ಕರಿಸಿದ್ದಾನೆ. ಅಲ್ಲದೇ ಕಟ್ಟೆಗೆ ಮೂರು ಸುತ್ತು ಸುತ್ತಿದ್ದಾನೆ. ಬಳಿಕ ಕಾಣಿಕೆ ಹುಂಡಿಯನ್ನು ಹೊತ್ತೊಯ್ದಿದ್ದಾನೆ. ಇದನ್ನೂ ಓದಿ: ಪಾಕ್‌ ಸೈನಿಕರಿಂದ 24*7 ಭದ್ರತೆ – ಲಾಹೋರ್‌ನಲ್ಲಿ ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್‌ ಸಯೀದ್‌ ಐಷಾರಾಮಿ ಜೀವನ

    ಸುತ್ತಮುತ್ತ ಯಾರು ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಕಳ್ಳ ಈ ಕೃತ್ಯ ಎಸಗಿದ್ದಾನೆ. ಕಾಣಿಕೆ ಹುಂಡಿ ಕದ್ದೊಯ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಮೊಬೈಲ್‌ನಲ್ಲಿ ಮಾತಾಡ್ತ ರೈಲ್ವೇ ಟ್ರ್ಯಾಕ್‌ ಮೇಲೆ ಹೋದ ಎಂಬಿಎ ವಿದ್ಯಾರ್ಥಿನಿ ರೈಲಿಗೆ ಬಲಿ

  • ‘ಕೊರಗಜ್ಜ’ ಚಿತ್ರ ನಿರ್ದೇಶಕನಿಗೆ ಭರ್ಜರಿ ಗಿಫ್ಟ್

    ‘ಕೊರಗಜ್ಜ’ ಚಿತ್ರ ನಿರ್ದೇಶಕನಿಗೆ ಭರ್ಜರಿ ಗಿಫ್ಟ್

    ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫ಼ಿಲ್ಮ್ಸ್ ಬ್ಯಾನರ್ ನಡಿ ಬಹುನಿರೀಕ್ಷಿತ, ಬಹುಕೋಟಿ ಬಜೆಟ್ ನ “ಕೊರಗಜ್ಜ” (Koragajja) ಸಿನಿಮಾದ ಮೊದಲ ಪ್ರತಿ ಇನ್ನೇನು ಕೈ ಸೇರಲಿದೆ ಎನ್ನುವ ಸಂದರ್ಭದಲ್ಲಿ , ಸಿನಿಮಾ ನೋಡಿ ನಿರ್ಮಾಪಕ ತ್ರಿವಿಕ್ರಮ ಸಪಲ್ಯ (Trivikrama Sapalya) , ಸಿನಿಮಾದ ಗುಣಮಟ್ಟ, ತಾಂತ್ರಿಕತೆ ಮತ್ತು ಮಾಸ್ ಅಪೀಲ್ ಗೆ ಫಿದಾ ಆಗಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ನಿರ್ದೇಶಕ ಸುಧೀರ್ ಅತ್ತಾವರ್ (Sudhir Attavar) ಗೆ ಟಾಪ್ ಎಂಡ್ ಕಿಯಾ ಕೇರನ್ಸ್ ಕಾರನ್ನೇ ಗಿಫ಼್ಟ್ ಮಾಡಿದ್ದಾರೆ.  ನಿರ್ದೇಶಕರ ಸ್ರಜನಶೀಲ ತಾಂತ್ರಿಕ ನೈಪುಣ್ಯತೆಯೊಂದಿಗೆ ಸುಮಾರು 15ಕೋಟಿ ಬಜೆಟ್ ನ  ಈ ಸಿನೆಮಾ ಯಾವ ಮಟ್ಟದಲ್ಲಿ ಮೂಡಿ ಬಂದಿರಬಹುದೆನ್ನುವುದಕ್ಕೆ ಇದು ಉದಾಹರಣೆ” .- ಎಂದು ಖ್ಯಾತ ಕಲಾವಿದೆ ಭವ್ಯರವರು ಈ ಸಂದರ್ಭದಲ್ಲಿ ಹೇಳಿದರು. ತಾನು ಇಂತಹ ಸಿನಿಮಾದಲ್ಲಿ ಪಾರ್ಟ್ ಮಾಡಿದ್ದು ಇನ್ನಿಲ್ಲದ ಹೆಮ್ಮೆ ಮತ್ತು ಪುನೀತಭಾವ  ಮೂಡಿಸಿದೆ ಎಂದು ಮಾತು ಸೇರಿಸಿದರು.

    ನಿರ್ಮಾಪಕ ತ್ರಿವಿಕ್ರಮ ತಮ್ಮ ಮಾತು ಮುಂದುವರೆಸುತ್ತಾ;  ” ನನ್ನ ತ್ರಿವಿಕ್ರಮ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ  ಈ ಮಟ್ಟದಲ್ಲಿ ಸಿನಿಮಾ ಒಂದು ಮೂಡಿ ಬರುತ್ತದೆ ಎಂದು ನಾನು ಊಹಿಸಿರಲಿಲ್ಲ. “ಕೊರಗಜ್ಜ” ಸಿನಿಮಾ ಎಲ್ಲಾ ಊಹೆಯನ್ನು ಮೀರಿ ಅದ್ಭುತ ರೀತಿಯಲ್ಲಿ ಮೂಡಿಬಂದಿದೆ.  ಭಾರತೀಯ ಚಿತ್ರರಂಗದಲ್ಲೇ ಇದೊಂದು ವಿಶಿಷ್ಟ ಸಿನೆಮಾ ಆಗಿ ಮೂಡಿ ಬಂದಿದೆ . ನಿರ್ದೇಶಕರು ಸುಮಾರು ಒಂದುವರೆ ವರ್ಷ ಗಳ ಕಾಲ   ರೀಸರ್ಚ್ ಮಾಡಿ ಎಂಟು ನೂರು ವರ್ಷದ ಹಿಂದೆ ಬದುಕಿದ್ದ 23-24 ವರ್ಷ ಪ್ರಾಯದ  “ತನಿಯಾ” ಎನ್ನುವ ಆದಿವಾಸಿ ಹುಡುಗ “,  ಮಹಾನ್ ಶಕ್ತಿ “ಕೊರಗಜ್ಜ” ಆಗಿ  ಬೆಳಗುತ್ತಿರುವ ಬಗೆ ಹೇಗೆ ಎನ್ನುವುದನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ವಿಭಿನ್ನ ಜ಼ೋನರ್ ನಲ್ಲಿ ಈ ಸಿನಿಮಾವನ್ನು ಮಾಡಿದ್ದಾರೆ…..! ಈ ಮಹಾನ್ ಶಕ್ತಿಯ ನ್ನು ಮರುಸ್ರಷ್ಟಿ ಮಾಡಿ ಸಸ್ಪೆನ್ಸ್, ಉತ್ಸುಕತೆ, ಥ್ರಿಲ್ಲರ್, ಊಹಿಸಲಾರದ  ತಿರುವುಗಳ ಕಥಾ ಹಂದರ ಮತ್ತು ಬಿಗಿದಿಟ್ಟುಕೊಳ್ಳುವ ಆಕರ್ಷಣೀಯ ಸ್ಕ್ರೀನ್ ಪ್ಲೆ ಸಿನಿಮಾವನ್ನು ಬೇರೆಯೇ ಮಜಲಿಗೆ ಕೊಂಡೊಯ್ದಿದೆ. ಕಬೀರ್ ಬೇಡಿ ಅಭಿನಯಿಸಿದ್ದ, ನೂರಾರು ಕಲಾವಿದರನ್ನು ಬಳಸಿಕೊಂಡು ಮೈನವಿನೇಳಿಸುವಂತೆ ಚಿತ್ರೀಕರಿಸಿದ್ದ ಯುದ್ಧ ಭೂಮಿಯ ಪರಿಕಲ್ಪನೆಯಂತೂ ಜಗತ್ತಿನ ಯಾವುದೇ “ವಾರ್” ಸಿನೆಮಾ ಸ್ರಷ್ಟಿಸುವ ಸಂಚಲನವನ್ನು “ಕೊರಗಜ್ಜ” ಸಿನಿಮಾ ಸ್ರಷ್ಟಿಸಿದೆ ಎಂದು  ಹೆಮ್ಮೆಯಿಂದ ಹೇಳಿಕೊಂಡರು.ಯುದ್ಧ ಸನ್ನಿವೇಷವನ್ನು ಚಿತ್ರೀಕರಿಸುವ ಸಮಯದಲ್ಲಿ  ಕಬೀರ್ ಬೇಡಿಯವರು  ಸುಧೀರ್ ಅತ್ತಾವರ್ ರನ್ನು”ವಾಟರ್ ವರ್ಲ್ಡ್” ಚಿತ್ರದ   ಹಾಲಿವುಡ್ ನಿರ್ದೇಶಕ ಕೆವಿನ್ ಹಾಲ್  ರೆಯ್ನಾಲ್ಡ್ಸ್ ಜೊತೆ ಯಾಕೆ ಕಂಪೇರ್ ಮಾಡಿದ್ದರು ಎನ್ನುವುದು ಈಗ ತಿಳಿದು ಬರುತ್ತಿದೆ ಎಂದು ತ್ರಿವಿಕ್ರಮ ನೆನಪಿಸಿ ಕೊಂಡರು.

     

    ನಿರ್ದೇಶನ ಮಾತ್ರವಲ್ಲದೆ, ಸಿನೆಮಾಗೆ ಕಲಾ ನಿರ್ದೇಶನ, ಕಾಸ್ಟ್ಯೂಮ್ ಹಾಗೂ ಮೇಕಪ್ ಡಿಸೈನ್ ಕೂಡಾ ಸುಧೀರ್ ಅತ್ತಾವರ್ ಅಧ್ಭುತವಾಗಿ ಮಾಡಿದ್ದಾರೆ ಎಂದು ತಮ್ಮ  ನಿರ್ದೇಶಕನ ಮೇಲೆ  ಹೆಮ್ಮೆ ಯ ಮಾತುಗಳನ್ನು ಹೇಳಿದರು. ಸುಧೀರ್ ರವರು ದೇಶಾದ್ಯಂತ ನೂರಾರು ನಾಟಕ ಪ್ರದರ್ಶನಗಳಲ್ಲಿ ಅಭಿನಯ, ಐವತ್ತರಷ್ಟು ನಾಟಕಗಳ ನಿರ್ದೇಶನ, ಮುಂಬಾಯಿಯ “ಇಪ್ಟಾ” ಮೊದಲಾದ ಸಂಸ್ಥೆಗಳ ನಂಟು.ಹೀಗೆ ರಂಗಭೂಮಿಯಲ್ಲಿ ಸಾಕಷ್ಟು ಪಳಗಿದ ಅವರ ಅನುಭವವೇ ಸಿನಿಮಾವನ್ನು ಈ ಮಟ್ಟಕ್ಕೆ ಕೊಂಡೊಯ್ದಿದೆ- ಎಂದು ಸೇರಿಸಿದರು.

  • ಕೊರಗಜ್ಜನ ಕೋಲದಲ್ಲಿ ಕತ್ರಿನಾ ಕೈಫ್‌, ಕೆಎಲ್‌ ರಾಹುಲ್‌ ಭಾಗಿ

    ಕೊರಗಜ್ಜನ ಕೋಲದಲ್ಲಿ ಕತ್ರಿನಾ ಕೈಫ್‌, ಕೆಎಲ್‌ ರಾಹುಲ್‌ ಭಾಗಿ

    ಮಂಗಳೂರು: ಬಾಲಿವುಡ್‌ನ‌ ಖ್ಯಾತ ನಟಿ ಕತ್ರಿನಾ ಕೈಫ್‌(Katrina Kaif), ಕ್ರಿಕೆಟಿಗ ಕೆ.ಎಲ್‌. ರಾಹುಲ್‌ (KL Rahul) ಹಾಗೂ ನಟ ಸುನಿಲ್‌ ಶೆಟ್ಟಿ(Sunil Shetty) ಕುಟುಂಬ ಉಳ್ಳಾಲದ ಕುತ್ತಾರು ಕೊರಗಜ್ಜನ ಕಟ್ಟೆಯಲ್ಲಿ ಭಾನುವಾರ ನಡೆದ ಹರಕೆಯ ಕೋಲದಲ್ಲಿ ಭಾಗಿಯಾಗಿತ್ತು.

    ಕತ್ರಿನಾ ಕೈಫ್‌, ಸುನಿಲ್‌ ಶೆಟ್ಟಿ ಪುತ್ರ ಅಹಾನ್‌ ಶೆಟ್ಟಿ, ಪುತ್ರಿ ಅಥಿಯಾ ಶೆಟ್ಟಿ, ಮ್ಯಾಟ್ರಿಕ್ಸ್‌ ಎಂಟರ್‌ಟೈನ್‌ಮೆಂಟ್‌ನ ರೇಷ್ಮಾ ಶೆಟ್ಟಿ, ಕತ್ರಿನಾ ಪತಿ ವಿಕಿ ಕೌಶಲ್‌ ಹಾಗೂ ವಿ.ಎಂ. ಕಾಮತ್‌ ಸಹಿತ 9 ಮಂದಿಯ ಕೋಲವನ್ನು ಎರಡು ತಿಂಗಳ ಹಿಂದೆ ಬರೆಸಲಾಗಿತ್ತು. ವಿಕಿ ಕೌಶಲ್‌ ಹೊರತುಪಡಿಸಿ ಉಳಿದೆಲ್ಲರೂ ಕೋಲದಲ್ಲಿ ಭಾಗಿಯಾಗಿದ್ದರು.

     ಮಹಿಳೆಯರಿಗೆ ರಾತ್ರಿ ಹೊತ್ತು ಕಟ್ಟೆಯ ಒಳಗೆ ಪ್ರವೇಶ ಇಲ್ಲದ ಕಾರಣ ಕತ್ರಿನಾ, ಅಥಿಯಾ ಮತ್ತು ರೇಷ್ಮಾ ದೈವಸ್ಥಾನದ ಹೊರಗಡೆಯಿಂದ ಕೋಲವನ್ನು ವೀಕ್ಷಿಸಿದರು. ರಾಹುಲ್‌ ಮತ್ತು ಅಹಾನ್‌ ಕೋಲದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಬೆಂಗ್ಳೂರಲ್ಲಿ ಕಸ ತೆಗೆಯಲು 30 ವರ್ಷಕ್ಕೆ ಗುತ್ತಿಗೆ – 45 ಸಾವಿರ ಕೋಟಿ ಟೆಂಡರ್‌ನಲ್ಲಿ 15 ಸಾವಿರ ಕಿಕ್‌ ಬ್ಯಾಕ್‌: ಹೆಚ್‌ಡಿಕೆ ಬಾಂಬ್‌

    ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ದೈವಸ್ಥಾನದ ಆಡಳಿತ ಮಂಡಳಿಯಲ್ಲಿ ಬಾಲಿವುಡ್‌ ಕುಟುಂಬ ಸದಸ್ಯರು ಮನವಿ ಮಾಡಿದ್ದರು. ಸಂಜೆ 6 ಗಂಟೆ ವೇಳೆಗೆ ಕುತ್ತಾರಿಗೆ ಆಗಮಿಸಿದ ಇವರು ಕೋಲ ಮುಗಿದ ನಂತರ ತೆರಳಿದರು.

    ಕುತ್ತಾರುನಲ್ಲಿ ಕೊರಗಜ್ಜನ ಕೋಲ ನೀಡುವ ಮೊದಲು ಟೀಂ‌ ಇಂಡಿಯಾ (Team India) ಆಟಗಾರ ಕೆ.ಎಲ್ ರಾಹುಲ್ ಮಂಗಳೂರು ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ(Bappanadu Sri Durga Parameshwari Temple) ಪತ್ನಿ ಸಮೇತರಾಗಿ ಭೇಟಿ ನೀಡಿದರು.

    ದೇವಿಯ ದರ್ಶನ ಪಡೆದ ಕೆ.ಎಲ್ ರಾಹುಲ್, ಪತ್ನಿ ಅಥಿಯಾ ಶೆಟ್ಟಿ‌ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಅರ್ಚಕ ಗೋಪಾಲಕೃಷ್ಣ ಉಪಾಧ್ಯಾಯ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿದರು.

     

  • ‘ಕೊರಗಜ್ಜ’ ಚಿತ್ರಕ್ಕೆ ಅಭಯ ನೀಡಿದ ದೈವ ಕೊರಗಜ್ಜ

    ‘ಕೊರಗಜ್ಜ’ ಚಿತ್ರಕ್ಕೆ ಅಭಯ ನೀಡಿದ ದೈವ ಕೊರಗಜ್ಜ

    ತ್ರಿವಿಕ್ರಮ ಸಪಲ್ಯ ನಿರ್ಮಾಣದ, ಸಕ್ಸಸ್ ಫಿಲಂಸ್ ಮತ್ತು ತ್ರಿವಿಕ್ರಮ ಸಿನಿಮಾಸ್ ಬ್ಯಾನರ್ ನಡಿ, ಸುಧೀರ್ ಅತ್ತಾವರ್ (Sudhir Attavar) ನಿರ್ದೇಶನದ  ಅತೀ ನಿರೀಕ್ಷಿತ  ಕೊರಗಜ್ಜ ಸಿನಿಮಾದ ‘ಮೋಷನ್ ಪೋಸ್ಟರ್‌’ ಜೊತೆ ಫಸ್ಟ್ ಲುಕ್ ಸಿದ್ಧಗೊಂಡಿದ್ದು, ಕೊರಗಜ್ಜ (Koragajja) ದೈವದ ಕಳೆ-ಕಾರ್ಣಿಕ ಮತ್ತು ಪಾವಿತ್ರ್ಯತೆಗೆ ಯಾವುದೇ ಧಕ್ಕೆ ಬಾರದಂತೆ ಅದನ್ನು ವಿನ್ಯಾಸ ಗೊಳಿಸಿ ಮೊದಲಿಗೆ ಕೊರಗಜ್ಜ, ಗುಳಿಗ ಹಾಗೂ ಕಲ್ಲುರ್ಟಿ ದೈವಗಳಿಗೆ ನಿರ್ದೇಶಕ ಸುಧೀರ್ ಅತ್ತಾವರ್ ಮತ್ತೆ ವಿಷೇಶ ಕೋಲಸೇವೆ ನೀಡಿ, ಅದೇ ಸಮಯದಲ್ಲಿ   ಶ್ರೀ ದೈವಗಳ ಸಮಕ್ಷಮದಲ್ಲಿ ದೈವದ (Daiva) ಒಪ್ಪಿಗೆಗಾಗಿ  ಪ್ರದರ್ಶಿಸಿದರು. ಶ್ರೀ ದೈವಗಳಿಂದ ಫಸ್ಟ್ ಲುಕ್ ಅನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲು ಅನುಮತಿಯನ್ನು ಭಯ-ಭಕ್ತಿಯಿಂದ ಬೇಡಿಕೊಂಡು, ಒಪ್ಪಿಗೆ ಪಡೆಯಲಾಯ್ತು.

    ಆದರೆ ಎಲ್ಲೆಂದರಲ್ಲಿ ಈ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರನ್ನು ದೈವಕ್ಕೆ ಅಪಚಾರ ಆಗುವ ರೀತಿಯಲ್ಲಿ ಸಾರ್ವಜನಿಕರು ದುರುಪಯೋಗ ಪಡಿಸಬಾರದು ಎಂದು ದೈವಗಳು ಅಪ್ಪಣೆ ನೀಡಿದವು.ಮೋಷನ್ ಪೋಸ್ಟರನ್ನು ವಿಶೇಷವಾಗಿ ವಿನ್ಯಸಗೊಳಿಸಿದ್ಧರೂ ದೈವಗಳು ಒಪ್ಪಿಗೆ ನೀಡದಿದ್ದರೆ ಅದನ್ನು ಬಿಡುಗಡೆಗೊಳಿಸುವುದು ಅಸಾದ್ಯವಾಗಬಹುದಿತ್ತು.ಈ ರಿಸ್ಕನ್ನು ನಿರ್ದೇಶಕ ಮತ್ತು  ನಿರ್ಮಾಪಕರು ತೆಗೆದುಕೊಂಡಿದ್ದರು. ಚಿತ್ರತಂಡವು ಪ್ರತೀ ಹಂತದಲ್ಲೂ ಕೊರಗಜ್ಜ ಹಾಗೂ ಶ್ರೀ ದೈವಗಳ ಆಶಿರ್ವಾದ ಪಡೆದೇ ಮುಂದಡಿ ಇಡುತ್ತಿರುವುದು ವಿಶೇಷ.

     

    ಈ ಅಪರೂಪದ  ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಮೋಟಮ್ಮ, ಖ್ಯಾತ ಕಲಾವಿದೆ ಭವ್ಯ ಮತ್ತು ಸುಪುತ್ರಿ ಅದಿತಿ, ಎಡಿಟರ್ ಈಪಿ ವಿದ್ಯಾಧರ್ ಶೆಟ್ಟಿ, ಖ್ಯಾತ ಗಾಯಕ ರಮೇಶ್ಚಂದ್ರ, ನಾಯಕ ನಟ ಭರತ್ ಸೂರ್ಯ, ಶ್ಲಾಘ್ಯ ಕಮಲಿನಿ  ಹಾಗೂ ಚಿತ್ರತಂಡದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಪಾಲ್ಗೊಂಡಿದ್ದರು.

  • ‘ಕೊರಗಜ್ಜ’ ಸಿನಿಮಾ ಶೂಟಿಂಗ್ ವೇಳೆ ಕಾಣಿಸಿಕೊಂಡ ಅಗೋಚರ ಶಕ್ತಿ

    ‘ಕೊರಗಜ್ಜ’ ಸಿನಿಮಾ ಶೂಟಿಂಗ್ ವೇಳೆ ಕಾಣಿಸಿಕೊಂಡ ಅಗೋಚರ ಶಕ್ತಿ

    ತ್ರಿವಿಕ್ರಮ ಸಪಲ್ಯ ನಿರ್ಮಾಣದ ಬಹುಕೋಟಿ ಬಜೆಟ್ ನ, ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂ ಸ್ ಬ್ಯಾನರ್ ನಡಿಯ   ‘ಕೊರಗಜ್ಜ’ ಸಿನಿಮಾ ಆರಂಭದಿಂದಲೂ ಹಲವಾರು ಪವಾಡ ಮತ್ತು ಸವಾಲುಗಳ ಜೊತೆ ತೊಂದರೆ ಗಳನ್ನು ಎದುರಿಸುತ್ತಾ ಬಂದಿರುವ ವಿಚಾರ ಗೊತ್ತೇ ಇದೆ. ಕೊಚ್ಚಿ ಮತ್ತು ಮುಂಬೈ ನಲ್ಲಿ ಕೊನೆಹಂತದ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದ್ದು, ದೈವ ನರ್ತನದ  ಪ್ರಮುಖ ದ್ರಶ್ಯವೊಂದನ್ನು ನಿನ್ನೆ ಮಧ್ಯರಾತ್ರಿಯ ವೇಳೆ  ನೂರಾರು ಉರಿವ ಪಂಜುಗಳನ್ನು ಧರಿಸಿಕೊಂಡ ಕೇರಳದ ತೆಯ್ಯಂ ಕಲಾವಿದರ ಮತ್ತು ಮಾಸ್ ಮಾದ ಅವರ  ಮೈ ನವಿರೇಳಿಸುವ ಸಾಹಸ ಸನ್ನಿವೇಶವೊಂದನ್ನು ನಿರ್ದೇಶಕ ಸುಧೀರ್ ಅತ್ತಾವರ್ ಮೂರನೇ ಬಾರಿ ಮರು ಚಿತ್ರೀಕರಿಸುತ್ತಿದ್ದರು.

    ಖ್ಯಾತ ಕಲಾವಿದೆ ಶ್ರುತಿ ಯೊಂದಿಗೆ ನೂರಾರು ಸಹ ಕಲಾವಿದರು ಭಾಗವಹಿಸಿದ್ದ ಸನ್ನಿವೇಶವನ್ನು ಬೆಂಗಳೂರಿನ ಹೊರವಲಯದ ಕನಕಪುರ ರಸ್ತೆಯ ಕಗ್ಗಲಿ ಹಳ್ಳಿಯಲ್ಲಿ ಹಾಕಿದ್ದ ಆದ್ದೂರಿ ಸೆಟ್ ನಲ್ಲಿ ಮಲಯಾಳಂ ಚಿತ್ರರಂಗದ ಖ್ಯಾತ   ಡಿ ಒ ಪಿ ಮನೋಜ್ ಪಿಳ್ಳೈ ಚಿತ್ರೀಕರಿಸುತ್ತಿದ್ದಾಗ,ನಿರ್ದೇಶಕ ಸುಧೀರ್ ಅತ್ತಾವರ್ ರನ್ನು ಅಗೋಚರ ಶಕ್ತಿಯೊಂದು ಬಲವಾಗಿ ತಳ್ಳಿ  ಏಳೆಂಟು  ಗಜ ದೂರಕ್ಕೆಸೆಯಲ್ಪಟ್ಟ ಘಟನೆ ಚಿತ್ರ ತಂಡವನ್ನು ಬೆಚ್ಚಿಬೀಳಿಸಿದೆ. ಎಲ್ಲೂ ಎಡವಿ ಬೀಳದೆ, ಜಾರದೆ ಇದ್ದರೂ, ಏಕಾಏಕಿ ಬಲವಾಗಿ ತಳ್ಳಿದಂತೆ ವೇಗ ಪಡೆದುಕೊಂಡು ನಿರ್ದೇಶಕರು ಎಸೆಯಲ್ಪಟ್ಟ ವಿಲಕ್ಷಣ ಘಟನೆ, ಸುಮಾರು ಮುನ್ನೂರ ಕ್ಕಿಂತಲೂ ಹೆಚ್ಚಿದ್ದ ಚಿತ್ರತಂಡದ  ಸಮಕ್ಷಮದಲ್ಲೇ ಘಟನೆ ನಡೆದಿದೆ.

     

    ಸನ್ನಿವೇಷವನ್ನು  ವಿವರಿಸುತ್ತಿದ್ದ ಸಮಯದಲ್ಲಿ ನಿರ್ದೇಶಕರನ್ನು ಒಂದೇ ಸಮನೆ ಅಗೋಚರ ಶಕ್ತಿ ಬಲವಾಗಿ ದೂಡಿದಂತಾಗಿ, ತನ್ನನ್ನು ನಿಭಾಯಿಸಿಕೊಳ್ಳದೆ ನಿರ್ದೇಶಕರು ಸುಮಾರು ದೂರಕ್ಕೆ ಎಸೆಯಲ್ಪಟ್ಟದ್ದನ್ನು ಕಂಡು ಖ್ಯಾತ ನಟಿ ಶ್ರತಿ,  ನಿರ್ದೇಶಕರು ದೊಡ್ಡ ಮಟ್ಟದ ಗಾಯಗಳಿಂದ ಪಾರಾಗಿರುವುದನ್ನು ಕೊರಗಜ್ಹ ದೈವವೇ ನಿರ್ದೇಶಕರನ್ನು ಕಾಪಾಡಿದೆ ಎಂದು ವ್ಯಾಖ್ಯಾನಿಸಿದ್ದಾರೆ.

  • ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ದರ್ಶನ್ ಭೇಟಿ

    ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ದರ್ಶನ್ ಭೇಟಿ

    ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಇದೀಗ ಶೂಟಿಂಗ್‌ಗೆ ಬ್ರೇಕ್ ಹಾಕಿ ಮಂಗಳೂರಿನ ಕೊರಗಜ್ಜ ಕ್ಷೇತ್ರಕ್ಕೆ (Koragajja) ಭೇಟಿ ನೀಡಿದ್ದಾರೆ. ಕೊರಗಜ್ಜ ದೈವ ದೇವರಿಗೆ ಡಿಬಾಸ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ದರ್ಶನ್ ಜೊತೆ ನಟ ಚಿಕ್ಕಣ್ಣ (Chikkanna), ನಟ ಯಶಸ್ ಸೂರ್ಯ (Yashas Surya) ಕೂಡ ಭಾಗಿಯಾಗಿದ್ದಾರೆ.

    ದರ್ಶನ್‌ ಭೇಟಿ ನೀಡಿದ್ದ ವೇಳೆ, ಕೊರಗಜ್ಜ ಕ್ಷೇತ್ರದ ವತಿಯಿಂದ ದರ್ಶನ್‌ಗೆ ಗೌರವ ಸಲ್ಲಿಸಿದ್ದಾರೆ. ಪೂಜೆಯ ಬಳಿಕ ದರ್ಶನ್ ಮಾಧ್ಯಮಕ್ಕೆ ಪ್ರತಿಕ್ರಿಸಿ, ಮೊದಲ ಬಾರಿಗೆ ಕುತ್ತಾರು ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ್ದೇನೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ದುಡ್ಡು ಕೊಟ್ರೆ ಮಾತ್ರ ಬರುತ್ತಾರೆ- ಬಿಟೌನ್ ಬಗ್ಗೆ ಪ್ರಿಯಾಮಣಿ ಶಾಕಿಂಗ್ ಹೇಳಿಕೆ

    ಈ ಹಿಂದೆ ಮಂಗಳೂರಿಗೆ ಸುಮಾರು ಬಾರಿ ಬಂದಿದ್ದೇನೆ. ಆದರೆ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿರಲಿಲ್ಲ. ಹಾಗೆ ನೋಡಿಕೊಂಡು ಹೋಗೋಣ ಅಂತ ಬಂದಿದ್ದೀನಿ. ಇಲ್ಲಿಗೆ ಇಂದು ಬಂದಿರುವುದಕ್ಕೆ ಬೇರೆ ಯಾವುದೇ ನಿರ್ದಿಷ್ಟ ಕಾರಣ ಇಲ್ಲ ಎಂದು ದರ್ಶನ್ ಮಾಹಿತಿ ನೀಡಿದ್ದಾರೆ.

    ಈ ವರ್ಷ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಡೆವಿಲ್’ (Devil) ಸಿನಿಮಾ ಸೇರಿದಂತೆ 9ಕ್ಕೂ ಹೆಚ್ಚು ಚಿತ್ರಗಳನ್ನು ದರ್ಶನ್ ಅನೌನ್ಸ್ ಮಾಡಿದ್ದಾರೆ. ದರ್ಶನ್ ನಟನೆಯ ಸಾಲು ಸಾಲು ಸಿನಿಮಾ ನೋಡುವ ಮೂಲಕ ಕಣ್ಣಿಗೆ ಹಬ್ಬ ಎಂದೇ ಹೇಳಬಹುದು. ಡಿಬಾಸ್ ಚಿತ್ರಕ್ಕಾಗಿ ಫ್ಯಾನ್ಸ್ ಕೂಡ ಎದುರು ನೋಡ್ತಿದ್ದಾರೆ.

  • ಕೊರಗಜ್ಜನ ಆಶೀರ್ವಾದ ಪಡೆದ ‘ಕಾಟೇರ’ ಡೈರೆಕ್ಟರ್ ತರುಣ್

    ಕೊರಗಜ್ಜನ ಆಶೀರ್ವಾದ ಪಡೆದ ‘ಕಾಟೇರ’ ಡೈರೆಕ್ಟರ್ ತರುಣ್

    ರ್ಶನ್ ನಟನೆಯ ಕಾಟೇರ ಅದ್ಭುತವಾಗಿ ಯಶಸ್ಸು ಕಂಡ ಬೆನ್ನಲ್ಲೇ ನಿರ್ದೇಶಕ ತರುಣ್ ಸುಧೀರ್ ಆದಿಸ್ಥಳ ಸ್ವಾಮಿ ಕೊರಗಜ್ಜ ಸನ್ನಿಧಾನಕ್ಕೆ ತೆರಳಿ ದರ್ಶನ ಪಡೆದಿದ್ದಾರೆ. ಚಿತ್ರ ಯಶಸ್ಸುಗಳಿಸಿದ್ದಕ್ಕಾಗಿ ಅವರು ಪೂಜೆ ಸಲ್ಲಿಸಿದ್ದಾರೆ.

    ಕೇವಲ ಮಂಗಳೂರಿನಲ್ಲಿರುವ ಕೊರಗಜ್ಜನ ದೇವಸ್ಥಾನಕ್ಕೆ ಮಾತ್ರವಲ್ಲ, ಧರ್ಮಸ್ಥಳದ ಮಂಜುನಾಥ ದೇವಸ್ಥಾನಕ್ಕೂ ತೆರಳಿ ಪೂಜೆ ಸಲ್ಲಿಸಿದ್ದಾರೆ. ಮುಂದಿನ ತಮ್ಮ ಕಾರ್ಯಗಳಿಗೆ ಯಶಸ್ಸು ನೀಡಲಿ ಎಂದು ಪ್ರಾರ್ಥನೆ ಮಾಡಿದ್ದಾರೆ.

     

    ಕಾಟೇರ ಸಿನಿಮಾ ವರ್ಷದ ಹಿಟ್ ಚಿತ್ರಗಳ ಸಾಲಿನಲ್ಲಿದೆ. ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡುವ ಕೆಲಸವನ್ನೂ ಮಾಡಲಾಗುತ್ತಿದೆ. ಈ ಮಧ್ಯೆ ತರುಣ್ ಮತ್ತ್ಯಾವ ಚಿತ್ರ ಮಾಡಲಿದ್ದಾರೆ ಎನ್ನುವ ಕುತೂಹಲ ಕೂಡ ಮೂಡಿದೆ. ಅವರು ಮಾಡಿದ್ದೇ ಮೂರು ಸಿನಿಮಾಗಳು. ಮೂರು ಹಿಟ್ ಆಗಿವೆ. ಹಾಗಾಗಿ ಇವರ ಚಿತ್ರಗಳ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

  • ಕನ್ನಡಕ್ಕೆ ಬಂದ ದಕ್ಷಿಣದ ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್

    ಕನ್ನಡಕ್ಕೆ ಬಂದ ದಕ್ಷಿಣದ ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್

    ಲವಾರು ಬಾರಿ ಮರು ಚಿತ್ರೀಕರಣ, ಮತ್ತೆ ಮತ್ತೆ ತಿದ್ದುಪಡಿಗಳು, ಹಲವಾರು ಬದಲಾವಣೆಗಳೊಂದಿಗೆ ಕ್ರೇಜ್ ಹುಟ್ಟುಹಾಕುತ್ತಿರುವ ಸುಧೀರ್ ಅತ್ತಾವರ (Sudhir Attavar) ನಿರ್ದೇಶನದ ಕೊರಗಜ್ಜ (Koragajja) ಸಿನಿಮಾದ ಸಂಗೀತವನ್ನೇ ಸಂಪೂರ್ಣವಾಗಿ ಬದಲಾಯಿಸಿ, ದಕ್ಷಿಣ ಭಾರತದ ಪ್ರಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ (Gopi Sundar) ಈಗ ಸಿನಿಮಾಗೆ ಬ್ಯಾಗ್ರೌಂಡ್ ಸ್ಕೋರ್ ಜೊತೆ ಎಲ್ಲಾ ಹಾಡುಗಳನ್ನು ಮತ್ತೆ ಹೊಸದಾಗಿ ಕಂಪೋಜ್ ಮಾಡುತ್ತಿದ್ದಾರೆ.

    ಬಹುಕೋಟಿ ವೆಚ್ಚದಲ್ಲಿ ತ್ರಿವಿಕ್ರಮ ಸಪಲ್ಯ ರವರು ತ್ರಿವಿಕ್ರಮ ಸಿನೆಮಾಸ್  ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ನ ಅಡಿ ನಿರ್ಮಿಸುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ಕೊರಗಜ್ಜ ಚಿತ್ರಕ್ಕೆ  RRR, ಪುಷ್ಪ ಮೊದಲಾದ ಹಿಟ್ ಸಿನಿಮಾಗಳ ತಂತ್ರಜ್ಞರ ದಂಡು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದೆ.

    ಸುಮಾರು ಎಂಟು ನೂರು ವರ್ಷಗಳ ಹಿಂದಿನ ಕಥೆಯುಳ್ಳ ಈ ಸಿನಿಮಾದಲ್ಲಿ ಹಾಲಿವುಡ್- ಬಾಲಿವುಡ್ ಕಲಾವಿದರಾದ ಕಬೀರ್ ಬೇಡಿ, ಸಂದೀಪ್ ಸೋಪರ್ಕರ್, ಗಣೇಶ್ ಆಚಾರ್ಯ ಜೊತೆ ಶ್ರುತಿ, ಭವ್ಯ ಮೊದಲಾದವರು ಅಭಿನಯಿಸುತ್ತಿದ್ದಾರೆ. ಋತಿಕ ಎನ್ನುವ ಹೊಸ ಮುಖ ಕೊರಗಜ್ಜನ ತಾಯಿ ಕೊರೊಪೊಳು ಪಾತ್ರದ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಪರಿಚಯ ವಾಗುತ್ತಿದ್ದಾರೆ.

     

    ಉಳಿದಂತೆ  ಜೀತ್ ಜೊಸ್ಸಿ ಮತ್ತು ವಿದ್ಯಾಧರ್ ಶೆಟ್ಟಿ ಸಂಕಲನ, ಮನೋಜ್ ಪಿಳ್ಳೈ ಮತ್ತು ಪವನ್ ವಿ ಛಾಯಾಗ್ರಹಣ, ಸುಧೀರ್ ಅತ್ತಾವರ್ ಕಲಾ ನಿರ್ದೇಶನ, ಬಿಬಿನ್ ದೇವ್ ಸೌಂಡ್ ಡಿಸೈನಿಂಗ್  ಚಿತ್ರಕ್ಕಿದೆ. ಮಾರ್ಚ್ ಕೊನೆಗೆ ಸಿನಿಮಾ ಬಿಡುಗಡೆಗಾಗಿ ತಯಾರಿ ನಡೆದಿದೆ.

  • ಪೊಲೀಸ್ ಕಸ್ಟಡಿಯಲ್ಲಿ ದೈವ ನರ್ತಕರು: ಕೊರಗಜ್ಜ ಡೈರೆಕ್ಟರ್ ಹೇಳಿದ್ದೇನು?

    ಪೊಲೀಸ್ ಕಸ್ಟಡಿಯಲ್ಲಿ ದೈವ ನರ್ತಕರು: ಕೊರಗಜ್ಜ ಡೈರೆಕ್ಟರ್ ಹೇಳಿದ್ದೇನು?

    ದೈವ ನರ್ತಕರು (Daiva Narthaka)ತಮ್ಮ ಶೂಟಿಂಗ್ ಸೆಟ್ ಗೆ ತಲ್ವಾರ್ ಹಿಡಿದುಕೊಂಡು ಬಂದು ಬೆದರಿಸಿದ್ದಾರೆ ಎಂದು ಮೊನ್ನೆಯಷ್ಟೇ ‘ಕೊರಗಜ್ಜ’ (Koragajja) ಸಿನಿಮಾ ಟೀಮ್ ಪ್ರೆಸ್ ಮೀಟ್ ಮಾಡಿ ಆರೋಪ ಮಾಡಿತ್ತು. ‘ಕೊರಗಜ್ಜ’ ಹೆಸರಿನಲ್ಲಿ ಸಿನಿಮಾ ಮಾಡಬಾರದು ಎಂದು ದೈವ ನರ್ತಕರು ಬೆದರಿಸಿದ್ದಾರೆ. ಶೂಟಿಂಗ್ ಸೆಟ್ ಹಾಳು ಮಾಡಿದ್ದಾರೆ. ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಬೆದರಿಕೆ ಹಾಕಿದ್ದಾರೆ ಎಂದು ನಿರ್ದೇಶಕರು ಆರೋಪ ಮಾಡಿದ್ದರು.

    ಕಳಸದಲ್ಲಿ (Kalasa) ಕೊರಗಜ್ಜ ಸಿನಿಮಾದ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ನಲ್ಕೆ ಸಂಘದವರೆಂದು ಹೇಳಿಕೊಂಡ ವ್ಯಕ್ತಿಗಳು ಆಯುಧ ಹಿಡಿದುಕೊಂಡು ಬಂದು ಚಿತ್ರತಂಡದವರನ್ನು ಬೆದರಿಸಿದ್ದರು ಎನ್ನುವ ಆರೋಪವಿತ್ತು. ಈ ವಿಷಯ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿತ್ತು. ದೈವ ನರ್ತಕರನ್ನು ಕಳಸದ ಪೊಲೀಸ್ ಸ್ಟೇಷನ್ ಗೆ ಕರೆಯಿಸಿ ವಿಚಾರಣೆಗೆ ಒಳಪಡಿಸಲಾಗಿದೆಯಂತೆ. ಮುಂದಿನ ಪ್ರಕ್ರಿಯೆಗಾಗಿ ನಿನ್ನೆ ರಾತ್ರಿ ಕೇಸು ದಾಖಲಿಸುವ ಕುರಿತು ತಮಗೆ ಪೊಲೀಸ್ ಅಧಿಕಾರಿಗಳು ಕರೆ ಮಾಡಿದ್ದರು ಎಂದು ಸುಧೀರ್ ಅತ್ತಾವರ್ ತಿಳಿಸಿದ್ದಾರೆ.

    ಚಿತ್ರದ ನಿರ್ದೇಶಕರಾದ ಸುಧೀರ್ ಅತ್ತಾವರ್ (Sudhir Attavar) ಅವರಿಗೆ ಸರ್ಕಲ್ ಇನ್ಸ್ ಪೆಕ್ಟರ್ ರಾತ್ರಿ 9.30ಕ್ಕೆ ಕರೆ ಮುಂದಿನ ಕ್ರಮಕ್ಕಾಗಿ ದೂರು ನೀಡುವಂತೆ ತಿಳಿಸಿದ್ದಾರಂತೆ. ದೈವ ನರ್ತಕರೆನ್ನುವವರನ್ನು ಬಂಧಿಸದೆ ಅವರಿಗೆ ಬುದ್ದಿಹೇಳಿ ಬಿಟ್ಟುಬಿಡುವಂತೆ ನಿರ್ದೇಶಕ ಸುಧೀರ್ ಅತ್ತಾವರ್ ಮನವಿ ಮಾಡಿದ್ದಾರಂತೆ. ಆದರೆ ಮಂಗಳೂರು ಮತ್ತು ಕಳಸದಲ್ಲಿ ಇಂತಹ ಗೂಂಡಾಗಿರಿಗೆ ಪ್ರಚೋದಿಸಿ, ದೈವ ನರ್ತಕರನ್ನು ಗೂಂಡಾಯಿಸಂಗೆ ಪ್ರಚೋದಿಸಿ ಚಿತ್ರೀಕರಣಕ್ಕೆ ಅಪಾರಹಾನಿ ಮಾಡಲು ಕುಮ್ಮಕ್ಕು ನೀಡುತ್ತಿರುವ ‘ಕತ್ತಲೆ’ ಎನ್ನುವ ವ್ಯಕ್ತಿಯಾರು ಎನ್ನುವುದನ್ನು ಪತ್ತೆಹಚ್ಚಲು ನಿರ್ದೇಶಕರು ಮನವಿ ಮಾಡಿದ್ದಾರಂತೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]