Tag: koppal ksrtc

  • ಬಸ್‌ನಲ್ಲಿ ಕೋಳಿಗೂ ಅರ್ಧ ಟಿಕೆಟ್ ಹಣ ಕೊಟ್ಟು ಪ್ರಯಾಣಿಸಿದ!

    ಬಸ್‌ನಲ್ಲಿ ಕೋಳಿಗೂ ಅರ್ಧ ಟಿಕೆಟ್ ಹಣ ಕೊಟ್ಟು ಪ್ರಯಾಣಿಸಿದ!

    ಕೊಪ್ಪಳ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕೋಳಿಗೂ ಅರ್ಧ ಟಿಕೆಟ್‌ ಹಣ ಕೊಟ್ಟು ಪ್ರಯಾಣಿಕ ಪ್ರಯಾಣಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಹೈದರಾಬಾದ್‌ನಿಂದ ಗಂಗಾವತಿಗೆ ವ್ಯಕ್ತಿ ಪ್ರಯಾಣ ಬೆಳೆಸಿದ್ದರು. ಸಾಕಿದ ಕೋಳಿಗೂ 463 ರೂಪಾಯಿ ಟಿಕೆಟ್ ನೀಡಿ ಬಸ್‌ನಲ್ಲಿ ಪ್ರಯಾಣಿಸಿದ್ದಾರೆ. ಸರ್ಕಾರಿ ಬಸ್‌ಗಳಲ್ಲಿ ಸಾಕು ಪ್ರಾಣಿಗಳಿಗೆ ಟಿಕೆಟ್ ಖರೀದಿಸಬೇಕಾದ ನಿಯಮವಿದೆ. ಹೀಗಾಗಿ ನವೆಂಬರ್ 28 ರಂದು ಹೈದರಾಬಾದ್‌ನಿಂದ ಪ್ರಯಾಣ ಮಾಡಿದ ವ್ಯಕ್ತಿ ಜೊತೆಯಲ್ಲಿ ಒಯ್ಯುತ್ತಿದ್ದ ಕೋಳಿಗೂ ನಿರ್ವಾಹಕರು ಅರ್ಧ ಟಿಕೆಟ್ ನೀಡಿದ್ದಾರೆ. ಇದನ್ನೂ ಓದಿ: ನಾಳೆಯಿಂದ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ಅನುಮತಿ- ವೀಕ್‍ಡೇಸ್‍ನಲ್ಲಿ ಅವಕಾಶ, ವೀಕೆಂಡ್‍ನಲ್ಲಿ ನಿರ್ಬಂಧ

    ಒಂದು ಕೋಳಿಗೂ ಅರ್ಧ ಟಿಕೆಟ್ ನೀಡಿರುವ ವಿಚಾರ ಈಗ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಏಕೆಂದರೆ ಒಂದು ಕೋಳಿ ಬೆಲೆ 400 ರಿಂದ 500 ರೂ. ಇರುತ್ತದೆ. ಕೋಳಿ ಹೆಸರಿನಲ್ಲೂ ಪ್ರಯಾಣ ವೆಚ್ಚವಾಗಿ 463 ರೂಪಾಯಿ ನೀಡಿ ಟಿಕೆಟ್ ಪಡೆದುಕೊಂಡಿರುವುದು ಚರ್ಚೆ ಹುಟ್ಟುಹಾಕಿದೆ. ಇದನ್ನೂ ಓದಿ: ಮಗು ಮಾರಾಟ ಮಾಡಿದ ಕೆಲವೇ ನಿಮಿಷದಲ್ಲಿ ಹಣ ಕಳೆದುಕೊಂಡ ತಾಯಿ!

    ಈ ಬಗ್ಗೆ ಬಸ್ ನಿರ್ವಾಹಕ ಅನೀಶ್ ಪ್ರತಿಕ್ರಿಯಿಸಿ, ನಾವು ಹೈದರಾಬಾದ್‌ನಿಂದ ಬರುತ್ತಿದ್ದಾಗ ಈ ವ್ಯಕ್ತಿ ಕೋಳಿ ಹಿಡಿದುಕೊಂಡು ಬಸ್‌ ನಿಲ್ಲಿಸಿದ. ಗಂಗಾವತಿಗೆ ಪ್ರಯಾಣ ಬೆಳೆಸಿದ್ದ ಆತ ತನ್ನ ಕೋಳಿಗೂ ಅರ್ಧ ಚಾರ್ಜ್‌ ಕೊಟ್ಟು ಪ್ರಯಾಣ ಬೆಳೆಸಿದ ಎಂದು ತಿಳಿಸಿದ್ದಾರೆ.