Tag: Kopa

  • ‘ಆದಿಪುರುಷ್’ ಸಿನಿಮಾದ ನಿರ್ದೇಶಕನನ್ನು ರೂಮ್ ಗೆ ಕರೆದ ಪ್ರಭಾಸ್: ವಿಡಿಯೋ ವೈರಲ್

    ‘ಆದಿಪುರುಷ್’ ಸಿನಿಮಾದ ನಿರ್ದೇಶಕನನ್ನು ರೂಮ್ ಗೆ ಕರೆದ ಪ್ರಭಾಸ್: ವಿಡಿಯೋ ವೈರಲ್

    ವಿವಾರವಷ್ಟೇ ‘ಆದಿಪುರುಷ್’ (Adipurush) ಸಿನಿಮಾದ ಟೀಸರ್ (Teaser) ಬಿಡುಗಡೆಯಾಗಿದೆ. ಟೀಸರ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, 100 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಅಯೋಧ್ಯೆಯಲ್ಲಿ ನಡೆದ ಟೀಸರ್ ಬಿಡುಗಡೆ ಸಮಾರಂಭದ ನಂತರ ಪ್ರಭಾಸ್ ಗರಂ ಆಗಿದ್ದು, ಚಿತ್ರದ ನಿರ್ದೇಶಕ ಓಂ ರಾವುತ್ (Om Raut) ಮೇಲೆ ಕೋಪ ಮಾಡಿಕೊಂಡ ವಿಡಿಯೋವೊಂದು ಸಖತ್ ವೈರಲ್ ಆಗಿದೆ.

    ಅಯೋಧ್ಯೆಯಲ್ಲಿ(Ayodhya) ನಡೆದ ವರ್ಣ ರಂಜಿತ ಸಮಾರಂಭದಲ್ಲಿ ಪ್ರಭಾಸ್, ಸೈಫ್ ಅಲಿಖಾನ್, ಕೃತಿ ಸನೂನ್, ಸನ್ನಿ ಸಿಂಗ್ ಸೇರಿದಂತೆ ಸಾಕಷ್ಟು ಕಲಾವಿದರು ಭಾಗಿಯಾಗಿದ್ದರು. ಈ ಸಮಾರಂಭದ ನಂತರ ತಾವು ತಂಗಿದ್ದ ಹೋಟೆಲ್ ಗೆ ತೆರಳಿರುವ ಪ್ರಭಾಸ್, ಕಾರಿಡಾರ್ ನಲ್ಲೇ ‘ಏ ಓಂ.. ನನ್ನ ರೂಮ್ ಗೆ ಬಾರೋ, ಬಾರೋ ನನ್ ರೂಮ್ ಗೆ’ ಎಂದು ಕೋಪದಲ್ಲಿಯೇ ಹೇಳುತ್ತಾರೆ. ಅವರನ್ನು ಸಮಾಧಾನಿಸಲು ಹಲವರು ಪ್ರಯತ್ನಿಸ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ:ರಚಿತಾ ರಾಮ್ @30: ಹ್ಯಾಪಿ ಬರ್ತ್‌ಡೇ ರಚ್ಚು ಅಂದ್ರು ಫ್ಯಾನ್ಸ್

    ಟೀಸರ್ ಬಗ್ಗೆ ಪ್ರಭಾಸ್ (Prabhas) ಅಭಿಮಾನಿಗಳು ಬೇಸರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅತ್ಯಂತ ಕಳಪೆ ಮಟ್ಟದ ಗ್ರಾಫಿಕ್ಸ್ ಬಳಸಿದ್ದಾರೆ ಎನ್ನುವ ಆರೋಪ ಕೂಡ ಇದೆ. ಅತೀ ನಿರೀಕ್ಷೆ ಮಾಡಿದ್ದ ಸಿನಿಮಾಗೆ ಕಳಪೆ ಮಟ್ಟದ ಕೆಲಸ ಮಾಡಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಈ ಕಾರಣಕ್ಕಾಗಿಯೇ ನಿರ್ದೇಶಕರ ಮೇಲೆ ಪ್ರಭಾಸ್ ಗರಂ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಆದರೆ ಈ ಕುರಿತು ಪ್ರಭಾಸ್ ಯಾವುದೇ ಪ್ರತಿಕ್ರಿಯೆ ಆಗಲಿ, ವೈರಲ್ ಆಗಿರುವ ವಿಡಿಯೋ ಕುರಿತಾದ ಸ್ಪಷ್ಟನೆ ಆಗಲಿ ನೀಡಿಲ್ಲ. ಆದರೆ, ವಿಡಿಯೋ ಮಾತ್ರ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಭಾಸ್ ಅವರನ್ನು ನಾವು ಈ ರೀತಿಯಾಗಿ ಯಾವತ್ತೂ ನೋಡಿಲ್ಲ, ನಿರ್ದೇಶಕರಿಗೆ ಇದೆ ಮಾರಿಹಬ್ಬ ಅಂತೆಲ್ಲ ಅಭಿಮಾನಿಗಳು ಕಾಮೆಂಟ್ ಹಾಕುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿಎಂ ಸಿದ್ದರಾಮಯ್ಯನವರಿಗೆ ಯಾಕೆ ಕೋಪ ಗೊತ್ತಿಲ್ಲ: ಪೇಜಾವರ ಶ್ರೀ

    ಸಿಎಂ ಸಿದ್ದರಾಮಯ್ಯನವರಿಗೆ ಯಾಕೆ ಕೋಪ ಗೊತ್ತಿಲ್ಲ: ಪೇಜಾವರ ಶ್ರೀ

    ಉಡುಪಿ: ನಾವು ಯಾರಿಗೂ ಕೋಪ ಬರುವ ಕೆಲಸ ಮಾಡಿಲ್ಲ. ಮುಖ್ಯಮಂತ್ರಿ ಅವರಿಗೆ ಯಾಕೆ ಕೋಪ ಇದೆ ಎನ್ನುವುದು ಗೊತ್ತಿಲ್ಲ. ಅವರು ಕೃಷ್ಣ ಮಠಕ್ಕೆ ಬರುತ್ತಾರೋ ಇಲ್ಲವೋ ಎನ್ನುವುದು ಭಾನುವಾರ ತಿಳಿಯಲಿದೆ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹೇಳಿದ್ದಾರೆ.

    ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾನುವಾರ ಕೃಷ್ಣ ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಗೈರಾಗುತ್ತಿದ್ದಾರೆ ಎನ್ನುವ ವರದಿಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಅವರಿಗೆ ಕೃಷ್ಣಮಠದ ಪ್ರತಿನಿಧಿಗಳ ಮೂಲಕ ಆಹ್ವಾನ ನೀಡಿದ್ದೇವೆ. ಆದರೆ ಕಾರ್ಯದರ್ಶಿಗಳು ಉಡುಪಿ ಕಾರ್ಯಕ್ರಮಕ್ಕೆ ಸಿಎಂ ಬರುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಮಠಕ್ಕೆ ಬರುತ್ತಾರೋ ಇಲ್ಲವೋ ಭಾನುವಾರ ತಿಳಿಯಲಿದೆ ಎಂದರು.

    ನನ್ನ ಪರ್ಯಾಯದ ಸಂದರ್ಭದಲ್ಲಿ ಅವರಿಗೆ ಆಹ್ವಾನ ಮಾಡಿದ್ದೆ. ಹಲವು ಬಾರೀ ಮಠಕ್ಕೆ ಆಹ್ವಾನ ನೀಡಲಾಗಿದೆ. ನಾನು ಬರುವುದಿಲ್ಲ ಎಂದು ಸಿಎಂ ಅವರು ಹೇಳಿಲ್ಲ. ಆದರೆ ಒಂದು ಬಾರಿಯೂ ಮಠಕ್ಕೆ ಬಂದಿಲ್ಲ. ಮೊನ್ನೆ ಪರ್ಯಾಯದ ನಂತರ ಕೃಷ್ಣನಿಗೆ ಕಾಣಿಕೆ ಕಳುಹಿಸಿದ್ದರು. ಸಿಎಂ ಅವರ ಶ್ರೀಮತಿ ಫೋನ್‍ನಲ್ಲಿ ಮಾತನಾಡಿದ್ದರು ಎಂದು ಪೇಜಾವರ ಶ್ರೀ ತಿಳಿಸಿದರು.

    ನಾನು ಸಿಎಂ ಅವರನ್ನು ಮಂಗಳೂರು, ಬೆಂಗಳೂರು, ಮೈಸೂರಲ್ಲಿ ಹಲವು ಬಾರಿ ಭೇಟಿಯಾಗಿದ್ದೇನೆ. ವರುಣಾ ಉಪಚುನಾವಣೆ ಸಂದರ್ಭ ಪ್ರಸಾದ ತೆಗೆದುಕೊಂಡು ಹೋಗಿದ್ದಾರೆ. ಸುತ್ತೂರು ಶ್ರೀಗಳು ಕೃಷ್ಣಮಠಕ್ಕೆ ಬರುವುದಾಗಿ ಹೇಳಿದ್ದರು. ಸಿಎಂ ಅವರನ್ನೂ ಜೊತೆ ಕರೆತರುವುದಾಗಿ ಹೇಳಿದ್ದಾರೆ ಎಂದು ಶ್ರೀಗಳು ಹೇಳಿದರು.

    ಇದನ್ನೂ ಓದಿ:  ಧರ್ಮಸಂಕಟದಲ್ಲಿ ಸಿಎಂ ಸಿದ್ದರಾಮಯ್ಯ: ಕೃಷ್ಣ ಮಠಕ್ಕೆ ಹೋಗಲು ಹಿಂದೇಟು, 3 ಸಚಿವರಿಗೆ ರಾಷ್ಟ್ರಪತಿ ಕಾರ್ಯಕ್ರಮದ ಜವಾಬ್ದಾರಿ