Tag: Kookaburra

  • ಕ್ರಿಕೆಟ್‍ಗೆ ತಂತ್ರಜ್ಞಾನದ ಮೆರುಗು – ಕೊನೆಗೂ ಸ್ಮಾರ್ಟ್ ಬಾಲ್ ಕಣಕ್ಕೆ

    ಕ್ರಿಕೆಟ್‍ಗೆ ತಂತ್ರಜ್ಞಾನದ ಮೆರುಗು – ಕೊನೆಗೂ ಸ್ಮಾರ್ಟ್ ಬಾಲ್ ಕಣಕ್ಕೆ

    ಲಂಡನ್: ತಂತ್ರಜ್ಞಾನದ ನೆರವಿನಿಂದ ಕ್ರಿಕೆಟ್ ಮತ್ತಷ್ಟು ಹೊಸ ಹೊಸ ವೈಶಿಷ್ಟ್ಯಗಳನ್ನು ಅಳವಡಿಸಿಕೊಳ್ಳುತ್ತಿದೆ. ಪಂದ್ಯದ ನೇರ ಪ್ರಸಾರದಿಂದ ಡಿಆರ್ ಎಸ್ ಪರಿಶೀಲನೆವರೆಗೂ ಈಗಾಗಲೇ ಕ್ರಿಕೆಟ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಸದ್ಯ ಈ ಸಾಲಿಗೆ ಸ್ಮಾರ್ಟ್ ಚೆಂಡು ಕೂಡ ಸೇರ್ಪಡೆಯಾಗುತ್ತಿದೆ.

    ಅಲ್ಟ್ರಾ ಎಡ್ಜ್, ಹಾಟ್ ಸ್ಪಾಟ್, ಸ್ಟಂಪ್ ಮೈಕ್, ಬಾಲ್ ಟ್ರ್ಯಾಕಿಂಗ್ ತಂತ್ರಜ್ಞಾನಗಳು ಈಗಾಗಲೇ ಕ್ರಿಕೆಟ್‍ನಲ್ಲಿ ಸಾಧಾರಣವಾಗಿದೆ. ಕ್ರಿಕೆಟ್ ಚೆಂಡುಗಳನ್ನು ಉತ್ಪಾದನೆ ಮಾಡುವ ಕೂಕಬೂರ್ರಾ ಸಂಸ್ಥೆ ಹೊಸ ಹೆಜ್ಜೆಯನ್ನು ಹಿಡಲು ಸಿದ್ಧತೆ ಹಲವು ವರ್ಷಗಳಿಂದ ಸಿದ್ಧತೆ ನಡೆಸಿತ್ತು. ಸಂಸ್ಥೆ ತಯಾರಿಸುವ ಚೆಂಡುಗಳನ್ನು ಸ್ಮಾರ್ಟ್ ಆಗುವಂತೆ ಮಾಡುವ ಪ್ರಾಯೋಗಿಕ ಕಾರ್ಯದ ಸಿದ್ಧತೆ ಸದ್ಯ ಅಂತಿಮ ಹಂತ ತಲುಪಿದೆ. ಈ ಚೆಂಡುಗಳನ್ನು ಬಿಗ್‍ಬಾಷ್ ಟಿ20 ಟೂರ್ನಿ ವೇಳೆ ಬಳಕೆ ಮಾಡಲು ತೀರ್ಮಾನಿಸಲಾಗಿದೆ.

    ಸಾಧಾರಣ ಚೆಂಡನ್ನು ಸ್ಮಾರ್ಟ್ ಆಗಿಸುವ ಕಾರ್ಯದ ಕೊನೆ ಹಂತದ ಪರೀಕ್ಷೆಯಲ್ಲಿರುವ ಕೂಕಬೂರ್ರಾ ಸಂಸ್ಥೆ ಚೆಂಡಿನಲ್ಲಿ ಸ್ಮಾರ್ಟ್ ಮೈಕ್ರೋ ಚಿಪ್ ಅಳವಡಿಸಲು ಪರೀಕ್ಷೆ ನಡೆಸಿದೆ. ಈ ಚೆಂಡುಗಳನ್ನು ಬಳಕೆ ಮಾಡುವುದರಿಂದ ಬೌಲರ್ ಚೆಂಡನ್ನು ಬಿಡುಗಡೆ ಮಾಡಿದ ವೇಗ, ದಿಕ್ಕು, ಸ್ವಿಂಗ್, ಚೆಂಡಿನ ಬೌನ್ಸ್ ಸೇರಿದಂತೆ ಮತ್ತಷ್ಟು ಅಂಶಗಳ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಲಿದೆ.

    ಪ್ರಮುಖವಾಗಿ ಈ ಚೆಂಡನ್ನು ಬಳಕೆ ಮಾಡುವುದರಿಂದ ಡಿಆರ್ ಎಸ್ ವೇಳೆ ಅಂಪೈರ್ ನೆರವಿಗೆ ಬರಲಿದೆ ಎಂಬುವುದು ಆಸ್ಟ್ರೇಲಿಯಾ ಮೂಲಕ ಕೂಕಬುರ್ರಾ ಸಂಸ್ಥೆಯ ಅಭಿಪ್ರಾಯವಾಗಿದೆ. ಒಂದೊಮ್ಮೆ ಈ ಚೆಂಡುಗಳು ಬಳಕೆ ಬಿಗ್‍ಬ್ಯಾಷ್ ಲೀಗ್‍ನಲ್ಲಿ ಯಶಸ್ವಿಯಾದರೆ ವಿಶ್ವ ಕ್ರಿಕೆಟ್‍ನಲ್ಲೂ ಇವುಗಳಿಗೆ ಮಹತ್ವ ಲಭಿಸಲಿದೆ. ಈಗಾಗಲೇ ಅಳವಡಿಸಿರುವ ತಂತ್ರಜ್ಞಾನದಲ್ಲಿ ಚೆಂಡಿನ ಪ್ರಮುಖ ಕೆಲ ಮಾಹಿತಿಗಳು ಲಭ್ಯವಾಗುತ್ತದೆ. ಆದರೆ ಸ್ಮಾರ್ಟ್ ಚೆಂಡಿನ ಬಳಿಕೆಯಿಂದ ಮತ್ತಷ್ಟು ಖಚಿತ ಮಾಹಿತಿ ಲಭ್ಯವಾಗಲಿದೆ. ಅದರಲ್ಲೂ ಸೌಂಡ್ ಮೂಲಕ ಬ್ಯಾಟ್‍ಗೆ ಚೆಂಡು ಬಡಿದಿರುವ ಹಾಗೂ ಕ್ಯಾಚ್ ಹಿಡಿಯುವ ಸಂದರ್ಭದಲ್ಲಿ ಈ ಚೆಂಡು ನೆಲಕ್ಕೆ ತಗುಲಿರುವ ಬಗ್ಗೆ ಖಚಿತ ತೀರ್ಪು ನೀಡಲು ನೆರವಿಗೆ ಬರಲಿದೆ.

    ಆಸ್ಟ್ರೇಲಿಯಾ ಮಾಜಿ ಆಟಗಾರ ಮೈಕಲ್ ಕಾಸ್ಪ್ರೊವಿಕ್ ಕೂಕಬೂರ ಸಂಸ್ಥೆಯ ಅಧ್ಯಕ್ಷರಾಗಿದ್ದು, ಸಂಸ್ಥೆ ಈ ಚೆಂಡುಗಳನ್ನು ಅಭಿವೃದ್ಧಿ ಪಡಿಸಲು ಸ್ಪೋರ್ಟ್ ಕೋರ್ ಎಂಬ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ವಿಶ್ವ ಕ್ರಿಕೆಟ್‍ನಲ್ಲಿ ನಡೆಯುವ ಟಿ20 ಟೂರ್ನಿಗಳಲ್ಲಿ ಈ ಚೆಂಡುಗಳನ್ನು ಬಳಕೆ ಮಾಡಿ ಪರೀಕ್ಷೆ ನಡೆಸಬೇಕು ಎಂಬುವುದು ಸಂಸ್ಥೆಯ ಮನವಿಯಾಗಿದೆ.