Tag: Konda Reddy

  • ಭ್ರಷ್ಟಾಚಾರ ಕೇಸ್‌ – ಸಿಎಂ ಜಗನ್ ಸಂಬಂಧಿ YS ಕೊಂಡ ರೆಡ್ಡಿ ಅರೆಸ್ಟ್

    ಭ್ರಷ್ಟಾಚಾರ ಕೇಸ್‌ – ಸಿಎಂ ಜಗನ್ ಸಂಬಂಧಿ YS ಕೊಂಡ ರೆಡ್ಡಿ ಅರೆಸ್ಟ್

    ಹೈದರಾಬಾದ್: ವೈಎಸ್‌ಆರ್‌ಸಿಪಿ ನಾಯಕ ಮತ್ತು ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸೋದರ ಸಂಬಂಧಿ ವೈಎಸ್ ಕೊಂಡ ರೆಡ್ಡಿಯನ್ನು ಭ್ರಷ್ಟಾಚಾರ ಆರೋಪದಡಿ ಆಂಧ್ರಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

    ವೈಎಸ್ ಕೊಂಡ ರೆಡ್ಡಿ ಅವರು ಮುಖ್ಯಮಂತ್ರಿಗಳ ತವರು ಜಿಲ್ಲೆಯಾದ ವೈಎಸ್‍ಆರ್ ಕಡಪದ ಚಕ್ರಾಯಪೇಟೆ ಮಂಡಲದಲ್ಲಿ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿದ್ದರು. ಇದನ್ನೂ ಓದಿ: ಕಾಲ್ಗೆಜ್ಜೆ ಕದ್ದಿದ್ದಕ್ಕೆ ಅಪ್ರಾಪ್ತ ಬಾಲಕಿ ತಲೆಗೆ ಕಲ್ಲಿನಿಂದ ಹೊಡೆದು ಹತ್ಯೆಗೈದ ಮಹಿಳೆ

    cm jagan mohan reddy

    ರಾಯಚೋಟಿ ನಡುವೆ ರಸ್ತೆ ನಿರ್ಮಿಸಲು ನಿರ್ಮಾಣ ಸಂಸ್ಥೆಗೆ ಟೆಂಡರ್ ನೀಡಲಾಗಿದ್ದು, ಈ ಕಾಮಗಾರಿ ಮುಂದುವರಿಬೇಕಾದರೆ ಲಂಚ ನೀಡುವಂತೆ ವೈ.ಎಸ್.ಕೊಂಡಾ ರೆಡ್ಡಿ ಒತ್ತಾಯಿಸಿದ್ದಾರೆ ಮತ್ತು ಒಂದು ವೇಳೆ ಲಂಚ ನೀಡದಿದ್ದರೆ, ಸರ್ಕಾರದ ಮೇಲೆ ಪ್ರಭಾವ ಬೀರಿ ನಡೆಯುತ್ತಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಚಕ್ರಯಾಪೇಟ್ ಮಂಡಲ್‍ನ ಕಟ್ಟಡ ನಿರ್ಮಾಣ ಸಂಸ್ಥೆಯ ಮಾಲೀಕರಿಗೆ ಬೆದರಿಕೆಯೊಡ್ಡಿದ್ದಾರೆ ಅಂತ ಆರೋಪಿಸಲಾಗಿದೆ ಎಂದು ಕಡಪಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಕೆ.ಎನ್.ಅನ್ಬುರಾಜನ್ ತಿಳಿಸಿದ್ದಾರೆ. ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಗಳನ್ನು ಹಂಚಲು ಹೋಗಿದ್ದ ಯುವತಿಯ ಮೇಲೆ ಗ್ಯಾಂಗ್‍ರೇಪ್

    ಈ ಸಂಬಂಧ ಕಟ್ಟಡ ನಿರ್ಮಾಣ ಸಂಸ್ಥೆ ಮಾಲೀಕರು, ಮೇ 5ರಂದು ಚಕ್ರಾಯಪೇಟೆ ಮಂಡಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇದೀಗ ಪೊಲೀಸರು ವೈಎಸ್ ಕೊಂಡ ರೆಡ್ಡಿಯನ್ನು ಬಂಧಿಸಿದ್ದಾರೆ.