Tag: Konareddy

  • ಬಿಜೆಪಿಯವರಿಗೆ ಸಣ್ಣ ವಿಷಯಕ್ಕೂ ರಾಜೀನಾಮೆ ಕೇಳೋದು ಚಾಳಿ: ಕೋನರೆಡ್ಡಿ

    ಬಿಜೆಪಿಯವರಿಗೆ ಸಣ್ಣ ವಿಷಯಕ್ಕೂ ರಾಜೀನಾಮೆ ಕೇಳೋದು ಚಾಳಿ: ಕೋನರೆಡ್ಡಿ

    – ಹೊಸ ವರ್ಷಕ್ಕಾದ್ರೂ ಬಿಜೆಪಿಯವ್ರಿಗೆ ಒಳ್ಳೆಯ ಬುದ್ಧಿ ಬರಲಿ

    ಬೆಂಗಳೂರು: ಬಿಜೆಪಿಯವರಿಗೆ (BJP) ಸಣ್ಣ ವಿಷಯಕ್ಕೂ ರಾಜೀನಾಮೆ ಕೇಳೋದು ಚಾಳಿಯಾಗಿದೆ ಎಂದು ಕಾಂಗ್ರೆಸ್ ಶಾಸಕ ಕೋನರೆಡ್ಡಿ (Konareddy) ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

    ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ರಾಜೀನಾಮೆಗೆ ಬಿಜೆಪಿ ಒತ್ತಾಯದ ವಿಚಾರಕ್ಕೆ ಅವರು ಪ್ರತಿಕ್ರಿಯೆ ನೀಡಿದರು. ಡೆತ್ ನೋಟ್‌ನಲ್ಲಿ ಕಾರ್ಪೊರೇಟರ್ ಹೆಸರು ಬರೆದಿದ್ದಾರೆ. ಅನೇಕ ಜನರು ನಮ್ಮ ಜೊತೆಗೂ ಫೋಟೋ ತೆಗೆಸಿಕೊಳ್ತಾರೆ. ಹಾಗಾಂತ ಪ್ರಿಯಾಂಕ್ ಖರ್ಗೆ ಮೇಲೆ ಆರೋಪ ಮಾಡೋದು ಸರಿಯಲ್ಲ. ಸಣ್ಣ ವಿಷಯಕ್ಕೂ ರಾಜೀನಾಮೆ ಕೊಡಬೇಕು ಅನ್ನೋದು ಬಿಜೆಪಿಯ ಚಾಳಿ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದಿದ್ದಾರೆ.

    ರಾಜಕಾರಣಿಗಳು ಬೇರೆ ಬೇರೆಯವರ ಜೊತೆ ಇರುತ್ತಾರೆ. ಬಿಜೆಪಿಯವರಿಗೆ ಬೇರೆ ಉದ್ಯೋಗ ಇಲ್ಲ. ಪೊಲೀಸ್ ಠಾಣೆ ಮುಂದೆ ಹೋಗೋದು ಪ್ರತಿಭಟನೆ ಮಾಡೋದು, ಸುಮ್ಮನೆ ಆರೋಪ ಮಾಡೋದು ಅಷ್ಟೇ ಕೆಲಸ. ಪ್ರಿಯಾಂಕ್ ಖರ್ಗೆ ಮೇಲೆ ಏನಾದ್ರೂ ಆರೋಪ ಇದೆಯಾ ಹೇಳಿ? ಎಲ್ಲೋ ನಡೆದಿದ್ದಕ್ಕೆ ಅವರ ಮೇಲೆ ಆರೋಪ ಮಾಡೋದು ಸರಿಯಲ್ಲ. ಬಿಜೆಪಿಯವರಿಗೆ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

    ಪ್ರಿಯಾಂಕ್ ಖರ್ಗೆ ಒಬ್ಬ ಮುತ್ಸದ್ದಿ ರಾಜಕಾರಣಿ. ವಿಪಕ್ಷಗಳನ್ನು ಟೀಕೆ ಮಾಡ್ತಾರೆ ಎಂದು ಅವರ ರಾಜೀನಾಮೆ ಕೇಳೋದು ಸರಿಯಲ್ಲ. ನನ್ನ‌ ರಾಜಕೀಯ ಜೀವನದಲ್ಲಿ ಇಂತಹ ವಿಪಕ್ಷ ನಾನು ನೋಡೇ ಇಲ್ಲ. ಬಿಜೆಪಿ ಒಳಗೆ ಯತ್ನಾಳ್, ರಮೇಶ್ ಜಾರಕಿಹೋಳಿ, ಅಶೋಕ್ ಎಲ್ಲರ ಮಧ್ಯೆ ಕಿತ್ತಾಟ ಶುರುವಾಗಿದೆ. ಮೊದಲು ನಿಮ್ಮ ಮನೆ ನೋಡಿಕೊಳ್ಳಿ. ಹೊಸ ವರ್ಷಕ್ಕಾದ್ರೂ ಬಿಜೆಪಿಯವರಿಗೆ ಒಳ್ಳೆಯ ಬುದ್ಧಿ ಬರಲಿ ಎಂದು ಲೇವಡಿ ಮಾಡಿದ್ದಾರೆ.

  • ಮಾಜಿ ಶಾಸಕ, ಜೆಡಿಎಸ್ ನಾಯಕ ಕೋನರೆಡ್ಡಿ ಕಾಂಗ್ರೆಸ್ ಸೇರ್ಪಡೆ

    ಮಾಜಿ ಶಾಸಕ, ಜೆಡಿಎಸ್ ನಾಯಕ ಕೋನರೆಡ್ಡಿ ಕಾಂಗ್ರೆಸ್ ಸೇರ್ಪಡೆ

    ಬೆಳಗಾವಿ: ನವಲಗುಂದ ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ ಹಿರಿಯ ನಾಯಕ ಕೋನರೆಡ್ಡಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.

    ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಕೋನರೆಡ್ಡಿ ಅವರಿಗೆ ಪಕ್ಷದ ಧ್ವಜವನ್ನು ನೀಡಿ ಸ್ವಾಗತಿಸಲಾಯಿತು.

    ಮಾಧ್ಯಮಗಳೊಂದಿಗೆ ಮಾತನಾಡಿದ ಕೋನರೆಡ್ಡಿ, ನಾನು ಜೆಡಿಎಸ್‍ಗೆ ಇಂದು ರಾಜೀನಾಮೆ ಕಳುಹಿಸಿದ್ದೇನೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ, ನಾನು ಸಿದ್ದರಾಮಣ್ಣ ಅಂದಿದ್ದೆ. ಆಗ ನಾನು ಸಿದ್ದರಾಮಣ್ಣ ಅಂತಾ ಏಕವಚನದಲ್ಲಿ ಅಂದಿದ್ದೆ. ಆ ರೀತಿ ಅಂದಿದ್ದನ್ನ ನಾನು ಅಂದು ಕಡತದಿಂದ ತಗೆಯುವಂತೆ ಮಾಡಿದ್ದೆ. ಆಗ ಸಿದ್ದರಾಮಯ್ಯ ಅವರು, ನೀನೂ ನನಗೆ ಸಿದ್ದರಾಮಣ್ಣ ಇನ್ಯಾರು ಅಂತಾ ಹೇಳಿದ್ರು ಎಂದು ತಿಳಿಸಿದರು. ಇದನ್ನೂ ಓದಿ: ಕರೆನ್ಸಿ ನೋಟುಗಳ ಮೇಲೆ ನೇತಾಜಿ ಫೋಟೋ ಮುದ್ರಿಸಿ: ಹರೇನ್ ಬಿಸ್ವಾಸ್ ಮನವಿ

    ಡಿಕೆ ಶಿವಕುಮಾರ್ ಒಂದು ತರಹ ಕುದುರೆ ಇದ್ದ ಹಾಗೆ. ನಾನು ಎಲ್ಲೆ ಇದ್ರು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ನಾನು ಜೆಡಿಎಸ್ ಬಿಡಬೇಕು ಅಂತಾ ಇರಲಿಲ್ಲ. ಕ್ಷೇತ್ರದ ಜನರು ಒತ್ತಾಯ ಮಾಡಿದ್ರು. ಹೀಗಾಗಿ ನಾನು ಕಾಂಗ್ರೆಸ್ ಸೇರ್ಪಡೆಯಾಗಬೇಕಾಯ್ತು ಎಂದರು.

    ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರಯ ನನ್ನನ್ನು ಹೋಗಬೇಡ ಅಂದ್ರು. ಆಗ ನಾನು ಕ್ಷೇತ್ರದ ಜನರ ಒತ್ತಾಯ ಮೇರೆಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದ್ದೇನೆ. ಪಕ್ಷವನ್ನ ನಾನು ತಾಯಿ ಎಂದು ತಿಳಿದುಕೊಂಡು ಕೆಲಸ ಮಾಡಿದ್ದೇನೆ. ನಾನು ನಾಲ್ಕು ಬಾರಿ ಸ್ಪರ್ಧೆ ಮಾಡಿ ಗೆಲುವು ಕಂಡವನು. ಪ್ರಧಾನಿ ಮೋದಿ ಅಲೆಯಿಂದ ಕಳೆದ ಬಾರಿ ಸೋಲು ಕಂಡೆ. ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲು ಕೃಷಿ ಕಾಯ್ದೆ ವಿರುದ್ಧ ಕಾಂಗ್ರೆಸ್ ಹೋರಾಟ ಸ್ಪೂರ್ತಿ ಆಯ್ತು. ರಾಹುಲ್ ಗಾಂಧಿ, ಸೋನಿಯಾಗಾಂಧಿ ಅವರ ರೈತ ಪರ ನಿಲುವು ಕಂಡು ಕಾಂಗ್ರೆಸ್ ಸೇರ್ಪಡೆಯಾದೆ. ಪಕ್ಷ ಕೊಟ್ಟ ಜವಾಬ್ದಾರಿ ನಿರ್ವಹಿಸುವೆ ಎಂದು ಭರವಸೆಯ ಮಾತುಗಳನ್ನು ನುಡಿದರು.

    ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಕೋನರೆಡ್ಡಿ ಅವರಿಗೆ ಇವತ್ತು ದೊಡ್ಡ ಭಾಗ್ಯ ಸಿಕ್ಕಿದೆ. ಬೆಳಗಾವಿಯ ಕಚೇರಿಯಲ್ಲಿ ನಾನು ಕೋನರೆಡ್ಡಿ ಅವರ ವಿಚಾರವಾಗಿ ಎಐಸಿಸಿಗೂ ತಿಳಿಸಿ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಕಡೆ ದಳ ಕಟ್ಟುವುದು ಸರಳ. ಆದ್ರೆ ಕೋನರೆಡ್ಡಿ ಅವರ ಶಕ್ತಿಯಿಂದ ದಳ ಕಟ್ಟಿದ್ರು. ನಾವೂ ಎನೂ ಆಪರೇಷನ್ ಹಸ್ತ ಆರಂಭಿಸಿಲ್ಲ. ಪಕ್ಷದ ಸಿದ್ಧಾಂತಗಳನ್ನ ಒಪ್ಪಿಕೊಂಡು ಸೇರ್ಪಡೆ ಆಗುತ್ತಿದ್ದಾರೆ ಎಂದು ತಿಳಿಸಿದರು.

    DK SHIVAKUMAR

    ಧಾರವಾಡ, ಬೆಳಗಾವಿ, ಮೈಸೂರು ಸೇರಿದಂತೆ ವಿವಿಧೆಡೆ ಕಾಂಗ್ರೆಸ್ ಸದಸ್ಯರು ಹೆಚ್ಚಿರುವ ಕಡೆ ಕಾಂಗ್ರೆಸ್ ಗೆಲುವು ಸಾಧಿಸಿದೆ. ನಾವು ಸೋಲು ಕಂಡಿರುವ ಕಡೆಗೂ ಉತ್ತಮ ಬೆಂಬಲ ದೊರೆತಿದೆ. ರಾಜ್ಯದ ಜನರ ಅಭಿಪ್ರಾಯ ಮುಂದಿನ ದಿನಗಳಲ್ಲಿ ಬದಲಾವಣೆ ಬಳಸುತ್ತಿದ್ದಾರೆ. ವಿರೋಧ ಪಕ್ಷದಲ್ಲಿ ಇದ್ದುಕೊಂಡು ನಾವು ಉತ್ತಮ ಸಾಧನೆ ಮಾಡಿದ್ದೇವೆ ಎಂದು ತಮ್ಮ ಕಾರ್ಯದ ಬಗ್ಗೆ ತಿಳಿಸಿದರು. ಇದನ್ನೂ ಓದಿ: 263 ಪಾಸಿಟಿವ್, 7 ಸಾವು – ಇಂದು 2,25,152 ಜನರಿಗೆ ಲಸಿಕೆ

    ಕಾಂಗ್ರೆಸ್ ಸದಸ್ಯರು ಸದಸ್ಯತ್ವ ನೊಂದಣಿ ಮಾಡಿಸಬೇಕು. ನಮ್ಮ ಪಕ್ಷದ ಮೇಲೆ ಭರವಸೆ ಇಟ್ಟು ಕೋನರೆಡ್ಡಿ ಅವರು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಪಕ್ಷದಿಂದ ಕೋನರೆಡ್ಡಿಗೆ, ಕೋನರೆಡ್ಡಿಯಿಂದ ಪಕ್ಷಕ್ಕೆ ಬಲ ಬಂದಿದೆ. ನಮ್ಮ ಹುಡುಗರನ್ನ ಜೊತೆಗೆ ಇಟ್ಟುಕೊಂಡು ಕೆಲಸ ಮಾಡಬೇಕು. ನೀವು ನಮ್ಮ ಹುಡುಗರನ್ನ ಕೈಬಿಟ್ಟರು ನಾನು ಅವರನ್ನ ಕೈಬಿಡಲ್ಲ ಎಂದು ವಿಶ್ವಾಸದ ಮಾತುಗಳನ್ನು ಆಡಿದರು.

  • ಬಿಜೆಪಿ ಸರ್ಕಾರದಲ್ಲಿ ಶೇ.60ಕ್ಕೂ ಹೆಚ್ಚು ಸಚಿವರು ಜೆಡಿಎಸ್ ಮೂಲದವರೆ: ಕೋನರೆಡ್ಡಿ

    ಬಿಜೆಪಿ ಸರ್ಕಾರದಲ್ಲಿ ಶೇ.60ಕ್ಕೂ ಹೆಚ್ಚು ಸಚಿವರು ಜೆಡಿಎಸ್ ಮೂಲದವರೆ: ಕೋನರೆಡ್ಡಿ

    ಧಾರವಾಡ: ನಮ್ಮ ಪಕ್ಷದಲ್ಲಿ ಬೆಳೆದು ಹೋದವರೆಲ್ಲ ನಮ್ಮ ಪಕ್ಷವನ್ನೇ ಬೈಯುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಶೇ. 60ಕ್ಕೂ ಹೆಚ್ಚು ಜನ ಜೆಡಿಎಸ್ ಮೂಲದವರೇ ಸಚಿವರಿದ್ದಾರೆ ಎಂದು ಜೆಡಿಎಸ್ ಮಾಜಿ ಶಾಸಕ ಎನ್.ಎಚ್.ಕೊನರಡ್ಡಿ ತಿಳಿಸಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿಯೂ ನಮ್ಮವರೇ ಇದ್ದಾರೆ. ಜೆಡಿಎಸ್ ಒಂದು ರೀತಿ ಪ್ರೊಡಕ್ಷನ್ ಫ್ಯಾಕ್ಟರಿ ಆಗಿದೆ. ಎಲ್ಲ ಪಕ್ಷಗಳಲ್ಲೂ ನಮ್ಮ ಪಕ್ಷದಿಂದ ಹೋದವರೇ ಹೆಚ್ಚಿದ್ದಾರೆ ಎಂದು ಹೇಳಿದರು.

    ಜೆಡಿಎಸ್ ಬಗ್ಗೆ ಎಚ್.ವಿಶ್ವನಾಥ್ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜೆಡಿಎಸ್‍ನವರು ವಿಶ್ವನಾಥ್ ಅವರಿಂದ ಕಲಿಯಬೇಕಾಗಿಲ್ಲ. ವಿಶ್ವನಾಥ್ ಈಗ ದೊಡ್ಡ ರಾಷ್ಟ್ರೀಯ ಪಕ್ಷ ಸೇರಿದ್ದಾರೆ. ಸಣ್ಣ ಪಕ್ಷಗಳ ಬಗ್ಗೆ ಮಾತನಾಡಬಾರದು. ಜೆಡಿಎಸ್ ಅಧಿಕಾರಕ್ಕಾಗಿ ಯಾರ ಜೊತೆಯೋ ಹೋಗುತ್ತಿದೆ ಎಂದು ವಿಶ್ವನಾಥ ಹೇಳಿದ್ದಾರೆ. ಹಾಗಾದರೆ ಅವರು ಯಾವ ವಿಚಾರಕ್ಕೆ ಬಿಜೆಪಿ ಸೇರಿದರು? 17 ಜನ ಎಲ್ಲರೂ ಸ್ವಾರ್ಥ ಇಲ್ಲದೆಯೇ ಬಿಜೆಪಿಗೆ ಹೋದರಾ ಎಂದು ಪ್ರಶ್ನಿಸಿದರು.

    ಪಾಪ ವಿಶ್ವನಾಥ್ ಅವರು ಈಗ ಮಂತ್ರಿಯೂ ಆಗದಂತೆ ಆಗಿದೆ, ಇದರ ಬಗ್ಗೆ ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜೆಡಿಎಸ್ ಬಗ್ಗೆ ದಯವಿಟ್ಟು ಅವರು ಮಾತನಾಡಬಾರದು. ಬಿಟ್ಟು ಹೋದ ಪಕ್ಷದ ಬಗ್ಗೆ ಮಾತನಾಡಬೇಡಿ, ವಿಶ್ವನಾಥ್ ಅಧಿಕಾರಕ್ಕಾಗಿ ಆ ಪಕ್ಷಕ್ಕೆ ಬಗ್ಗಿ ಹೋಗಿದ್ದಾರೆ ಎಂದು ಕಿಡಿಕಾರಿದರು.

    ಮಹದಾಯಿ ಈಗ ಮುಗಿದು ಹೋದ ಅಧ್ಯಾಯ, ಮಹದಾಯಿ ಕಾಮಗಾರಿ ಆರಂಭಿಸಬೇಕಿದೆ. ಸಿಎಂ ಮತ್ತು ಸಚಿವ ರಮೇಶ ಜಾರಕಿಹೊಳಿ ಸುಮ್ಮನೆ ಕುಳಿತಿದ್ದಾರೆ, ಇವರು ಸುಮ್ಮನೆ ಕುಳಿತಿದ್ದಕ್ಕೆ ಗೋವಾದವರು ಎದ್ದು ಕುಳಿತಿದ್ದಾರೆ ಎಂದು ಕೊನರಡ್ಡಿ ಹೇಳಿದರು.

  • ಬಿಜೆಪಿಯಲ್ಲಿ ಮಂತ್ರಿಯಾಗಬೇಕು ಎನ್ನುವವರು ಬಹಳಷ್ಟು ಜನರಿದ್ದಾರೆ: ಕೋನರೆಡ್ಡಿ

    ಬಿಜೆಪಿಯಲ್ಲಿ ಮಂತ್ರಿಯಾಗಬೇಕು ಎನ್ನುವವರು ಬಹಳಷ್ಟು ಜನರಿದ್ದಾರೆ: ಕೋನರೆಡ್ಡಿ

    – ಯತ್ನಾಳ್, ಉಮೇಶ್ ಕತ್ತಿ, ನಡಹಳ್ಳಿ ಧ್ವನಿ ಬಂದ್ ಆಗಿದೆ

    ಧಾರವಾಡ: ಬಿಜೆಪಿಯಲ್ಲಿ ಬಹಳಷ್ಟು ಜನ ತಮ್ಮ ಧ್ವನಿ ಕಳೆದುಕೊಂಡಿದ್ದಾರೆ, ಈಗ ಧ್ವನಿ ಏಳಲಿದೆ ಎಂದು ಜೆಡಿಎಸ್ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಮಂತ್ರಿಯಾಗಬೇಕು ಎನ್ನುವವರು ಬಹಳಷ್ಟು ಜನ ಇದಾರೆ, ಯತ್ನಾಳ್ ಹಾಗೂ ಉಮೇಶ ಕತ್ತಿ ಅವರ ಧ್ವನಿ ಬಂದ್ ಆಗಿದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎನ್ನುವ ನಡಹಳ್ಳಿ ಅವರ ಧ್ವನಿ ಬಂದ್ ಆಗಿದೆ. ಪಕ್ಷದಲ್ಲಿ ಬಹಳಷ್ಟು ಜನ ತಮ್ಮ ಧ್ವನಿ ಕಳೆದುಕೊಂಡಿದ್ದಾರೆ. ಈಗ ಧ್ವನಿ ಏಳಲಿದೆ ಎಂದು ಕೊನರೆಡ್ಡಿ ಹೇಳಿದರು. ಇದನ್ನೂ ಓದಿ: ರಾಜಕೀಯ ಚರ್ಚಿಸಲು ಕ್ಯಾಸಿನೋಗೆ ಯಾಕೆ ಹೋಗಬಾರದು: ಹೊರಟ್ಟಿ ಪ್ರಶ್ನೆ

    ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಭೇಟಿ ವಿಚಾರದಲ್ಲಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಅದನ್ನು ರಾಜಕೀಯ ಗೊಳಿಸಲು ಸುದ್ದಿ ಹೊರಹಾಕಲಾಗಿದೆ ಅಷ್ಟೇ. ಇತ್ತ ಕುಮಾರಸ್ವಾಮಿ ಅವರು ಕೊಲಂಬೋದಲ್ಲಿ ಪಕ್ಷದ ಸಭೆಗಾಗಿ ಹೋಗಿದ್ದು ಎಂದು ಸ್ಪಷ್ಟ ಪಡಿಸಿದ್ದಾರೆ. ಸಿದ್ದರಾಮಯ್ಯನವರು ಈ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ, ಆದರೆ ತನಿಖೆ ಮುಗಿಯುವವರೆಗೆ ಯಾವ ರಾಜಕಾರಣಿಗಳು ಮಾತನಾಡದೇ ಇರುವದು ಒಳ್ಳೆಯದು. ಪ್ರಕರಣದ ತನಿಖೆ ಮಾಡಲು ಮೊದಲು ಬೀಡೋಣ ನಂತರ ಒಂದು ತೀರ್ಮಾನಕ್ಕೆ ಬರಬಹುದು. ಕೊಲಂಬೋಗೆ ಹೋದರವರೆಲ್ಲ ಕ್ಯಾಸಿನೋಗೆ ಹೋಗುತ್ತಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬಿಎಸ್‍ವೈ ಮನೆಯಲ್ಲಿ ವಾಚ್‍ಮ್ಯಾನ್ ಕೆಲಸ ಖಾಲಿ ಇದೆ: ಸಿಟಿ ರವಿ

  • ಏನಪ್ಪಾ ಕೋನರೆಡ್ಡಿ ಇತ್ತೀಚೆಗೆ ದಪ್ಪ ಆಗ್ತಿದ್ದೀಯಾ: ಜೆಡಿಎಸ್ ಮಾಜಿ ಶಾಸಕನನ್ನು ಕಿಚಾಯಿಸಿದ ಈಶ್ವರಪ್ಪ

    ಏನಪ್ಪಾ ಕೋನರೆಡ್ಡಿ ಇತ್ತೀಚೆಗೆ ದಪ್ಪ ಆಗ್ತಿದ್ದೀಯಾ: ಜೆಡಿಎಸ್ ಮಾಜಿ ಶಾಸಕನನ್ನು ಕಿಚಾಯಿಸಿದ ಈಶ್ವರಪ್ಪ

    ಬೆಂಗಳೂರು: ಏನಪ್ಪಾ.. ಇತ್ತೀಚೆಗೆ ದಪ್ಪ ಆಗ್ತಿದ್ದೀಯಾ ಎಂದು ಪ್ರಶ್ನಿಸುವ ಎನ್ನುವ ಮೂಲಕ ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಅವರು ನವಲಗುಂದದ ಜೆಡಿಎಸ್  ಮಾಜಿ ಶಾಸಕ ಕೋನರೆಡ್ಡಿಯನ್ನು ಕಿಚಾಯಿಸಿದ ಪ್ರಸಂಗ ನಡೆದಿದೆ.

    ವಿಧಾನಸೌಧದಲ್ಲಿ ಬಿಜೆಪಿ ನಾಯಕರಾದ ಈಶ್ವರಪ್ಪ, ನಡಹಳ್ಳಿ ಮತ್ತು ರೇಣುಕಾಚಾರ್ಯ ವಾಕ್ ಮಾಡುತ್ತಿದ್ದರು. ಈ ವೇಳೆ ಎದುರಿಗೆ ಬಂದ ಕೋನರೆಡ್ಡಿಯನ್ನು ಬಿಜೆಪಿ ನಾಯಕರು ಕಾಲೆಳೆದಿದ್ದಾರೆ.

    ಏನಪ್ಪಾ ಕೊನರೆಡ್ಡಿ.. ಇತ್ತೀಚೆಗೆ ದಪ್ಪ ಆಗ್ತಿದ್ದೀಯಾ? ಎಂದು ಈಶ್ವರಪ್ಪ ಕಾಲೆಳೆದರೆ, ಏನು ಸಿಎಂ ಆಗೋಕೆ ಭಾರೀ ತಯಾರಿನಾ ಎಂದ ಕೋನರೆಡ್ಡಿ ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಮಧ್ಯ ಪ್ರವೇಶಿಸಿದ ನಡಹಳ್ಳಿ ಬತ್ತಿ ಇಡೋದು ಬೆಂಕಿ ಹಚ್ಚೋದು ನಿಮ್ ಕೆಲಸನಾ ಎಂದು ಟೀಕಿಸಿದ್ದಾರೆ. ಇದಕ್ಕೆ ಮರು ಉತ್ತರ ನೀಡದ ಕೋನರೆಡ್ಡಿ ನಗುತ್ತಲೇ ಹೋಗಿದ್ದಾರೆ.

  • ಸಿಡಿಲಿಗೆ ಮಾಜಿ ಶಾಸಕ ಕೋನರೆಡ್ಡಿ ಸಹೋದರ ಸಾವು

    ಸಿಡಿಲಿಗೆ ಮಾಜಿ ಶಾಸಕ ಕೋನರೆಡ್ಡಿ ಸಹೋದರ ಸಾವು

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಸಿಡಿಲಿನ ಜೊತೆ ಭಾರೀ ಮಳೆಯಾಗುತ್ತಿದೆ. ಶನಿವಾರ ಸಂಜೆ ವೇಳೆ ಸಿಡಿಲು ಬಡಿದು ಜೆಡಿಎಸ್ ನ ಮಾಜಿ ಶಾಸಕ ಎನ್‍ಎಚ್ ಕೋನರೆಡ್ಡಿ ಸಹೋದರ ಮೃತಪಟ್ಟಿದ್ದಾರೆ.

    48 ವರ್ಷದ ಯಂಕರೆಡ್ಡಿ ಅವರು ನವಲಗುಂದದ ಚಿಲಕವಾಡ ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಸಿಡಿಲು ಬಡಿದು ಸಾವನಪ್ಪಿದ್ದಾರೆ.

    ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತಿದ್ದು ಟೋಲ್ ನಾಕಾ ಬಳಿ ಹಳ್ಳದ ಸ್ವರೂಪ ಪಡೆದುಕೊಂಡು ಹುಬ್ಬಳ್ಳಿ-ಧಾರವಾಡ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.

    ಹಾವೇರಿ ಪೇಟೆ ಕಂಠಿಗಲ್ಲಿಯಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ನೀರು ಹೊರಹಾಕಲು ಸ್ಥಳೀಯರ ಪರದಾಡುತ್ತಿದ್ದಾರೆ.